10th OCTOBER-MLP MODEL ANSWERS

10th OCTOBER  MLP 

 
 

NOTE:: ದಯವಿಟ್ಟು  ಗಮನಿಸಿ ಕೆಳಗಿನ ‘ಉತ್ತರಗಳು’  ‘ಮಾದರಿ ಉತ್ತರಗಳು’ ಎಂಬುದನ್ನು ನೆನಪಿಡಿ. ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ PROPER SOURCE ಎಲ್ಲದೇ ಇರುವುದರಿಂದ  ನಾವು ಮುಖ್ಯ ಪರೀಕ್ಷೆಯಲ್ಲಿ ನೀವು ಯಾವ ರೀತಿ ಬರೆಯಬೇಕು ಮತ್ತು ನಿಮ್ಮ ಸಮಯವನ್ನು ಉಳಿಸಲು ಕೊಡುತ್ತಿರುವ  ವಿಸ್ತಾರವಾದ ಸಾರಾಂಶ, ನಾವುಗಳು ಇಲ್ಲಿ ಪದಗಳ ಮಿತಿ ಗಣನೆಗೆ ತೆಗೆದುಕೊಂಡಿಲ್ಲ ಏಕೆಂದರೆ ಒಂದು ಪ್ರಶ್ನೆಗೆ ಎಷ್ಟು ಸಾದ್ಯೋವೊ ಅಷ್ಟು ಇನ್ಫಾರ್ಮಶನ್ ಕೊಟ್ಟಿರುತ್ತೆವೆ. ನಾವು ಒದಗಿಸುತ್ತಿರುವ ವಿಷಯವು ಪ್ರಶ್ನೆಯ ಬೇಡಿಕೆಯನ್ನು ಪೂರೈಸುತ್ತದೆ ಮತ್ತು ಅದೇ ಸಮಯದಲ್ಲಿ ನಿಮಗೆ ಹಿನ್ನೆಲೆ ಮಾಹಿತಿ ರೂಪದಲ್ಲಿ ಹೆಚ್ಚುವರಿ ಅಂಕಗಳನ್ನು ಗಳಿಸಲು ಅನುಕೂಲಕರವಾಗುತ್ತದೆ. 

 
 

 
 GENERAL STUDIES PAPER-1(ಸಾಮಾನ್ಯ ಅಧ್ಯಾಯ -೧) 

1.Discuss Gandhiji’s views on modernity, religiosity, science and spirituality. Also comment if his views on these aspects are relevant today. 

(ಆಧುನಿಕತೆ, ಧರ್ಮ, ವಿಜ್ಞಾನ ಮತ್ತು ಆಧ್ಯಾತ್ಮದ ಬಗ್ಗೆ ಗಾಂಧೀಜಿಯವರ ಅಭಿಪ್ರಾಯಗಳನ್ನು ಕುರಿತು ಚರ್ಚಿಸಿ.ಈ ಅಂಶಗಳ ಕುರಿತು ಅವರ ಅಭಿಪ್ರಾಯಗಳು ಪ್ರಸ್ತುತ ಸಮಾಜದಲ್ಲಿ  ಸೂಕ್ತವೆನಿಸಿದರೆ  ವ್ಯಾಖ್ಯೆಸಿಸಿ )                                                                                                        (200 ಪದಗಳು) 

 
 

ಆಧುನಿಕ ಭಾರತದ ಇತಿಹಾಸವನ್ನು ಕೆದಕಿದಾಗ ಕಣ್ಣೆದುರು ನಿಲ್ಲುವುದು ಬರೇ ದ್ವಂದ್ವಗಳೇ. ಒಂದೆಡೆ ವಸಾಹತುಶಾಹಿಯನ್ನು ಸ್ವೀಕರಿಸಿ ತಮ್ಮ ಪಾಳಯಗಳನ್ನು ರಕ್ಷಿಸಿಕೊಳ್ಳಲು ಹೆಣಗಾಡಿದ ರಾಜಮಹಾರಾಜರುಗಳ ಕಥೆಯಾದರೆ ಮತ್ತೊಂದೆಡೆ ಸ್ವದೇಶದ ವಿಮೋಚನೆಗಾಗಿ ಬಲಿದಾನ ಮಾಡಿದ ವೀರ ಯೋಧರ ಕಥನಗಳು ರಾರಾಜಿಸುತ್ತವೆ. ಮತ್ತೊಂದೆಡೆ ರಾಷ್ಟ್ರ ವಿಮೋಚನೆಯೊಂದಿಗೇ ದೇಶದ ಆಂತರ್ಯವನ್ನು ದಹಿಸುತ್ತಿದ್ದ ಸಾಮಾಜಿಕ ಅನಿಷ್ಟಗಳನ್ನು ಹೋಗಲಾಡಿಸಲು ಪಣ ತೊಟ್ಟ ನಿದರ್ಶನಗಳು ಅನಾವರಣಗೊಳ್ಳುತ್ತವೆ. ಫುಲೆ, ಅಂಬೇಡ್ಕರ್, ಮಹಾತ್ಮ ಗಾಂಧೀಜಿಯವರ ಸಂಕಥನಗಳು ನವ ಭಾರತದ ಇತಿಹಾಸವನ್ನು ಅಲಂಕರಿಸುತ್ತವೆ. ಗಾಂಧೀಜಿಯವರ ಶಾಂತಿ ಅಹಿಂಸೆಯ ಮಂತ್ರದೊಂದಿಗೇ ಭಗತ್ ಸಿಂಗ್ ಮತ್ತು ಸಂಗಡಿಗರ ಕ್ರಾಂತಿಕಾರಿ ಚಿಂತನೆಗಳೂ ಕಂಗೊಳಿಸುತ್ತವೆ. ಭಾರತದ ಚರಿತ್ರೆಯ ಈ ವೈರುಧ್ಯಗಳ ಹಿನ್ನೆಲೆಯಲ್ಲೇ ಪ್ರಸ್ತುತ ಸಂಧಿಗ್ದಮಯ ಸನ್ನಿವೇಶದಲ್ಲಿ ಗಾಂಧಿಜಿಯವರ ತತ್ವಗಳನ್ನು ವಿಶ್ಲೇಸುವುದು ತುಂಬ ಅಗತ್ಯವಿದೆ . ತನ್ನ ನೆಚ್ಚಿನ ರಾಷ್ಟ್ರವನ್ನು ವೀಕ್ಷಿಸಲು ರಾಜಘಾಟದ ಸಮಾಧಿಯೊಳಗಿಂದ ಎದ್ದು ಬರುವ ಗಾಂಧೀಜಿಯವರ ಕನ್ನಡಕದೊಳಗಿಂದಲೇ ಪ್ರಸಕ್ತ ಭಾರತವನ್ನು ನೋಡಬೇಕಾಗಿದೆ.

ಧಾರ್ಮಿಕ ಭಾರತ :


ಹಿಂದೂ ಧರ್ಮವನ್ನು ಒಪ್ಪಿಕೊಂಡರೂ ಗಾಂಧೀಜಿಯ ದೃಷ್ಟಿಯಲ್ಲಿ ಧರ್ಮ ಎನ್ನುವುದು ಮಾನವೀಯ ನೆಲೆಗಟ್ಟಿನಲ್ಲಿ ವ್ಯಕ್ತವಾಗುವ ಮನೋಧರ್ಮವಾಗಿತ್ತು. ಅನ್ಯ ಧರ್ಮಗಳನ್ನು ದ್ವೇಷಿಸದೆಯೇ ತನ್ನ ಧರ್ಮವನ್ನು ಆರಾಧಿಸುವ ಉದಾತ್ತತೆ ಅವರಲ್ಲಿ ಅಡಕಗೊಂಡಿತ್ತು. ಆದರೆ ಪ್ರಸಕ್ತ ಭಾರತದಲ್ಲಿ ಧರ್ಮ ಎಂದರೆ ಮಾನವೀಯ ಮೌಲ್ಯಗಳಿಂದ ಹೊರತಾದ ಒಂದು ಸಾಮಾಜಿಕ-ರಾಜಕೀಯ, ಕೆಲವೊಮ್ಮೆ ಸಾಂಸ್ಕತಿಕ ಅಸ್ತ್ರ. ಅಸ್ಮಿತೆಗಳ ಮೂಲಕ ಅಸ್ತಿತ್ವಗಳನ್ನು ಸ್ಥಾಪಿಸಿ, ಜನಸಮುದಾಯಗಳನ್ನು ನಿರ್ದಿಷ್ಟ ಚೌಕಟ್ಟಿನಲ್ಲಿ ಬಂಧಿಸುವ ಸಾಂಸ್ಥಿಕ ಸ್ವರೂಪ. ತಮ್ಮ ಸಾಮುದಾಯಿಕ, ವೈಯ್ಯಕ್ತಿಕ ಮತ್ತು ಜಾತೀಯ ಹಿತಾಸಕ್ತಿಗಳಿಗೆ ಪೂರಕವಾಗಿ ಬಳಸಿಕೊಳ್ಳಬಹುದಾದ ಒಂದು ಆಧ್ಯಾತ್ಮಿಕ ಮಾರ್ಗ. ಸ್ವಧರ್ಮ ಆರಾಧನೆ ಎಂದರೆ ಪರಧರ್ಮ ದ್ವೇಷ ಎಂಬ ನೆಲೆಗಟ್ಟಿನಲ್ಲಿ, ಶ್ರೇಷ್ಠತೆಯ ಅಹಂಕಾರದ ಬುನಾದಿಯ ಮೇಲೆ ಇಡೀ ಮಾನವ ಸಮಾಜವನ್ನು ಛಿದ್ರಗೊಳಿಸಿ ಸ್ಥಾಪಿಸುವ ಹುನ್ನಾರ. ಧರ್ಮದ ಅಡಿಪಾಯವಾದ ಆಧ್ಯಾತ್ಮ, ಭಕ್ತಿ, ನಿಷ್ಠೆ, ಬದ್ಧತೆ ಮತ್ತು ಶ್ರದ್ಧೆ ಮಾರುಕಟ್ಟೆಯ ಸರಕುಗಳಂತಾಗಿವೆ …….
CLICK HERE TO READ MORE

 

Share