10th SEPTEMBER- DAILY CURRENT AFFAIRS BRIEF

10th SEPTEMBER

 

 

  1.  8 ನಗರಗಳಲ್ಲಿ ಮಹಿಳಾ ಸುರಕ್ಷತೆಗೆ ವಿಶೇಷ ಯೋಜನೆ (Special plan for womens safety in 8 cities)

 ವಿದ್ಯಾರ್ಥಿಗಳ ಗಮನಕ್ಕೆ

ಪ್ರಿಲಿಮ್ಸ್  ಮತ್ತು  ಮುಖ್ಯ ಪರೀಕ್ಷೆಗಾಗಿಮಹಿಳೆಯರ ಮೇಲೆ ದೌರ್ಜನ್ಯ ವನ್ನು ತಡೆಯಲು ಕೇಂದ್ರ ಸರಕಾರದ ಕ್ರಮಗಳನ್ನು ವಿಶ್ಲೇಷಿಸಿ

ಪ್ರಮುಖ ಸುದ್ದಿ 

  • ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ದೇಶದ 8 ಪ್ರಮುಖ ನಗರಗಳಲ್ಲಿ ನಾರಿಯರ ಸುರಕ್ಷತೆಗಾಗಿ ಕೇಂದ್ರ ಸರಕಾರ ವಿಶೇಷ ಯೋಜನೆ ಘೋಷಿಸಿದ್ದು, ಇದಕ್ಕಾಗಿ 3,000 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿದೆ.

 

ಮುಖ್ಯ ಅಂಶಗಳು

 

  • ಬೆಂಗಳೂರು, ದಿಲ್ಲಿ, ಹೈದರಾಬಾದ್‌ ಒಳಗೊಂಡಂತೆ ಪ್ರಮುಖ ಎಂಟು ನಗರಗಳಲ್ಲಿ ಅಪಾಯದ ಕರೆಗಂಟೆ ಮತ್ತು ಸಂಪೂರ್ಣ ಮಹಿಳಾ ಗಸ್ತು ತಂಡಗಳ ರಚನೆಗೆ ಶೀಘ್ರವೇ ಚಾಲನೆ ದೊರೆಯಲಿದೆ. ಈ ಯೋಜನೆಗಾಗಿ ಅನುದಾನ ಬಿಡುಗಡೆಗೆ ಕೇಂದ್ರ ಗೃಹ ಸಚಿವಾಲಯ ಅನುಮೋದನೆ ನೀಡಿದೆ.

 

ಏನೆಲ್ಲಾ ಕ್ರಮಗಳು ?

 

  • ಮಹಿಳಾ ಸುರಕ್ಷ ತೆಗಾಗಿ ಸಾಧ್ಯವಿರುವ ಎಲ್ಲ ರೀತಿಯ ಕಾರ್ಯಕ್ರಮಗಳನ್ನು ಜಾರಿಗೆ ತರುವುದು ಯೋಜನೆಯ ಉದ್ದೇಶ.
  • ಅತಿ ಹೆಚ್ಚು ಅಪರಾಧ ಕೃತ್ಯಗಳು ನಡೆಯುವ ಪ್ರದೇಶಗಳಲ್ಲಿ ಸುರಕ್ಷಾ ವಲಯಗಳ ಸ್ಥಾಪನೆ, ಅತ್ಯಾಧುನಿಕ ನಿಯಂತ್ರಣ ಕೇಂದ್ರಗಳ ಜತೆ ಸಂಪರ್ಕ ಹೊಂದಿರುವ ಸಿ.ಸಿ.ಟಿ.ವಿ. ಕ್ಯಾಮೆರಾಗಳ ಅಳವಡಿಕೆ, ಭದ್ರತಾ ವ್ಯವಸ್ಥೆ ಇರುವ ಸಾರ್ವಜನಿಕ ಸಾರಿಗೆ, ಸಾರ್ವಜನಿಕ ಸ್ಥಳಗಳಲ್ಲಿ ಅಪಾಯ ಕರೆಗಂಟೆಗಳ ಅವಳಡಿಕೆ ಯೋಜನೆಯ ಭಾಗಗಳಾಗಿವೆ.
  • ಪೊಲೀಸ್‌ ಠಾಣೆಗಳಲ್ಲಿ ಮಹಿಳಾ ಸಹಾಯ ಕೇಂದ್ರಗಳು ಆರಂಭಗೊಳ್ಳಲಿವೆ. ಅಲ್ಲಿ ಆಪ್ತಸಮಾಲೋಚಕರ ಸೇವೆಯೂ ದೊರಕಲಿದೆ. ಹೀಗಾಗಿ ಮಹಿಳೆಯರು ದೂರು ದಾಖಲಿಸುವುದು ಸುಲಭವಾಗಲಿದೆ ಮತ್ತು ಸಂಕಷ್ಟದ ಸಂದರ್ಭಗಳಲ್ಲಿ ಅವರಿಗೆ ವಿಶೇಷ ನೆರವು ದೊರೆಯಲಿದೆ.
  • ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ, ನಗರಾಭಿವೃದ್ಧಿ ಸಚಿವಾಲಯ ಮತ್ತು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ಹಾಗೂ ಆಯಾ ನಗರಗಳ ಮಹಾನಗರಪಾಲಿಕೆ ಮತ್ತು ಪೊಲೀಸ್‌ ಆಯುಕ್ತರ ಸಹಭಾಗಿತ್ವದಲ್ಲಿ ಯೋಜನೆ ಜಾರಿಯಾಗಲಿದೆ. ಯೋಜನೆ ವೆಚ್ಚವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 60:40 ಅನುಪಾತದಲ್ಲಿ ಭರಿಸಲಿವೆ.
  • ಯೋಜನೆಯು 2018-19 ರಿಂದ 2020-21ರ ಅವಧಿಯಲ್ಲಿ ಅನುಷ್ಠಾನಗೊಳ್ಳಲಿದೆ. 2013ರಲ್ಲಿ ಸ್ಥಾಪಿಸಲಾದ ನಿರ್ಭಯಾ ನಿಧಿಯ ಅಡಿಯಲ್ಲಿ ಯೋಜನೆಯನ್ನು ಮಂಜೂರು ಮಾಡಲಾಗಿದೆ.

 

ಇತರ ಉಪಕ್ರಮಗಳು

  • ಮಹಿಳೆಯರು ಮತ್ತು ಮಕ್ಕಳಿಗೆ ವಿಶ್ರಾಂತಿ ತಾಣಗಳು
  • ಸ್ಮಾರ್ಟ್‌ ಎಲ್‌ಇಡಿ ಬೀದಿ ದೀಪಗಳು
  • ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಬಿಕ್ಕಟ್ಟು ನಿರ್ವಹಣಾ ಕೇಂದ್ರಗಳು
  • ವಿಧಿವಿಜ್ಞಾನ ಮತ್ತು ಸೈಬರ್‌ ಅಪರಾಧ ಘಟಕಗಳು..CLICK HERE TO READ MORE
Share