13th JULY-THE HINDU EDITORIAL

 

ನಮ್ಮ ಐಎಎಸ್ ಅಕಾಡೆಮಿ ಸಂಪಾದಕೀಯ ಒಳನೋಟ

 

ಎತ್ತ ಸಾಗುತ್ತಿದೆ ಭಾರತ ಮತ್ತು ರಷ್ಯಾ ದೇಶಗಳ ನಡುವಿನ ಸಂಬಂಧ  ?

 

 

ಸನ್ನಿವೇಶ :

  • ಭಾರತ ಮತ್ತು ರಷ್ಯಾ ದೇಶಗಳು ಜಂಟಿಯಾಗಿ ಯುದ್ಧ ವಿಮಾನ ನಿರ್ಮಾಣ ಮಾಡಬೇಕು ಎಂಬ ಬಹು ಮಹತ್ವಾಕಾಂಕ್ಷಿ ಯೋಜನೆಗೆ ಭಾರಿ ಹಿನ್ನಡೆಯಾಗಿದ್ದು, ಯೋಜನೆಯನ್ನು ಮರುಪರಿಶೀಲಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ತಿಳಿದುಬಂದಿದೆ.

 

ಹಿನ್ನಲೆ 

  • ಭಾರತ ಮತ್ತು ರಷ್ಯಾ ಜಂಟಿಯಾಗಿ 5ನೇ ತಲೆಮಾರಿನ ಯುದ್ಧವಿಮಾನಗಳನ್ನು ಅಭಿವೃದ್ಧಿಪಡಿಸುವ ಯೋಜನೆಯನ್ನು ಮರುಪರಿಶೀಲಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ. ಯೋಜನೆಯಲ್ಲಿ ಮುಂದುವರೆಯುವ ಬಗ್ಗೆ ಭಾರತೀಯ ವಾಯುಪಡೆ ಮತ್ತು ಹಿಂದೂಸ್ಥಾನ್ ಏರೋನಾಟಿಕಲ್ ಲಿಮಿಟೆಡ್ (ಎಚ್‌ಎಎಲ್‌) ಭಿನ್ನ ನಿಲುವು ಹೊಂದಿದೆ. ಒಮ್ಮತ ನಿಲುಲು ಇಲ್ಲದ ಕಾರಣ ಈ ಯೋಜನೆಯನ್ನು ಭಾರತ ಮರು ಪರಿಶೀಲಿಸುವುದಾಗಿ ಹೇಳಿದೆ.
  • 2007ರಲ್ಲಿ ಈ ಬಹು ಉದ್ದೇಶಿತ ಯೋಜನೆಗೆ ಭಾರತ ಮತ್ತು ರಷ್ಯಾಗಳು ಒಮ್ಮತ ಸೂಚಿಸಿದ್ದವು. ಸುಮಾರು 2 ಲಕ್ಷ ಕೋಟಿ (3,000 ಕೋಟಿ ಅಮೆರಿಕನ್ ಡಾಲರ್) ವೆಚ್ಚದಲ್ಲಿ ಯೋಜನೆ ರೂಪಿಸಲಾಗಿತ್ತು. ಆದರೆ 11 ವರ್ಷಗಳಿಂದ ಈ ಯೋಜನೆ ನನೆಗುದಿಗೆ ಬಿದ್ದಿದ್ದು, ಭವಿಷ್ಯ ಅತಂತ್ರವಾಗಿದೆ. ಒಪ್ಪಂದದ ಅಂತಿಮ ರೂಪ ಇನ್ನೂ ಸಿದ್ಧವಾಗಿಲ್ಲ ಅಲ್ಲದೆ ಯೋಜನೆಯ ವೆಚ್ಚ ಹಂಚಿಕೆಯ ಬಗ್ಗೆ ಎರಡೂ ದೇಶಗಳು ಒಮ್ಮತಕ್ಕೆ ಬಂದಿಲ್ಲ.
  • ಇದಲ್ಲದೆ ವಿಮಾನದ ಸ್ವರೂಪ ಸಾಮರ್ಥ್ಯದ ಬಗ್ಗೆ ಕರಡನ್ನೂ ಸಿದ್ಧಪಡಿಸಿಲ್ಲ. ಅಲ್ಲದೆ ಎಷ್ಟು ವಿಮಾನಗಳನ್ನು ತಯಾರಿಸಬೇಕು ಎಂಬುದೂ ನಿರ್ಧಾರವಾಗಿಲ್ಲ. ಇದರ ಜೊತೆಗೆ ತಂತ್ರಜ್ಞಾನ ವರ್ಗಾವಣೆ ಸಂಬಂಧವೂ ಒಮ್ಮತಕ್ಕೆ ಬರಲು ಸಾಧ್ಯವಾಗಿಲ್ಲ.

 

  ಭಾರತದಲ್ಲಿ ಬ್ರಿಟಿಷರ ಆಡಳಿತದ ಸಮಯ ದಲ್ಲಿ ರಷ್ಯಾದ ಪಾತ್ರ

 

  • ಭಾರತ ಬ್ರಿಟಿಷ್ ಆಡಳಿತಕ್ಕೊಳಪಟ್ಟಿದ್ದಾಗಲೇ ರಷ್ಯಾದೊಂದಿಗೆ ನಂಟು ಬೆಸೆದಿತ್ತು. ಝಾರ್ ಆಡಳಿತದಲ್ಲಿದ್ದ ರಷ್ಯಾದಲ್ಲಿ 1905ರಲ್ಲಿ ನಡೆದ ಕ್ರಾಂತಿ ಭಾರತದ ಸ್ವಾತಂತ್ರ್ಯ ಹೋರಾಟಗಾರರಿಗೆ ಪ್ರೇರಣೆ ನೀಡಿತ್ತು. 1917ರಲ್ಲಿ ರಷ್ಯಾದಲ್ಲಿ ನಡೆದ ಬೋಲ್ಶೆವಿಕ್ ಕ್ರಾಂತಿಯ ಯಶಸ್ಸನ್ನು ಆಧರಿಸಿ ಭಾರತದಲ್ಲೂ ಇಂತಹದ್ದೇ ಕ್ರಾಂತಿ ನಡೆಯಬೇಕೆಂದು ಸೋವಿಯತ್​ನ ಹಲವು ನಾಯಕರು ಪ್ರೇರೇಪಿಸಿದ್ದರು.
  • ಬೋಲ್ಶೆವಿಕ್ ಕ್ರಾಂತಿಯ 10ನೇ ವರ್ಷಾಚರಣೆ ಅಂಗವಾಗಿ 1927ರಲ್ಲಿ ಹಮ್ಮಿಕೊಂಡಿದ್ದ ಸೋವಿಯತ್ ಒಕ್ಕೂಟದ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಜವಾಹರಲಾಲ್ ನೆಹರು ಸೋವಿಯತ್ ನಾಯಕರಿಂದ ಪ್ರಭಾವಕ್ಕೊಳಗಾಗಿದ್ದರು. ಭಾರತದಲ್ಲಿ ಸ್ವಾತಂತ್ರ್ಯ ಘೊಷಣೆಗೂ ಮೊದಲೆ ಅಂದರೆ 1947ರ ಏಪ್ರಿಲ್ 13ರಂದು ಭಾರತ ಮತ್ತು ಸೋವಿಯತ್ ಒಕ್ಕೂಟದ ನಡುವೆ ರಾಜತಾಂತ್ರಿಕ ಸಂಬಂಧವನ್ನು ಅಧಿಕೃತವಾಗಿ ಘೊಷಣೆ ಮಾಡಲಾಯಿತು.
  • ಸೋವಿಯತ್ ಒಕ್ಕೂಟ ಭಾರತಕ್ಕೆ ನಿರಂತರವಾಗಿ ರಾಜಕೀಯ, ರಾಜತಾಂತ್ರಿಕ ಸಹಕಾರವನ್ನು ನೀಡುತ್ತಾ ಬಂತು. ಕಾಶ್ಮೀರ ಮತ್ತಿತರ ವಿಚಾರಗಳಿಗೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ವೇದಿಕೆಗಳಲ್ಲೂ ಭಾರತದ ಪರವಾಗಿ ನಿಂತಿತ್ತು. 1971ರಲ್ಲಿ ಇಂಡೋ- ಸೋವಿಯತ್ ನಡುವೆ ಸ್ನೇಹ, ಶಾಂತಿ ಮತ್ತು ಸಹಕಾರ ಒಪ್ಪಂದಕ್ಕೆ ಸಹಿಹಾಕಲಾಗಿತ್ತು. ಇದು ಬಾಂಗ್ಲಾದೇಶದ ಹುಟ್ಟಿಗೆ ಕಾರಣವಾದ 1971ರ ಇಂಡೋ-ಪಾಕ್ ಯುದ್ಧದಲ್ಲಿ ಭಾರತ ಜಯಗಳಿಸಲು ಕಾರಣವಾಗಿತ್ತು.
  • 1950ರ ದಶಕದಿಂದ ಸೋವಿಯತ್ ಒಕ್ಕೂಟ ಭಾರತದಲ್ಲಿ ಕೈಗಾರೀಕರಣ, ರಕ್ಷಣೆ, ಬಾಹ್ಯಾಕಾಶ ಮತ್ತು ಅಣುಶಕ್ತಿ ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ನೀಡುತ್ತಿದೆ. ಇದರ ಜತೆಗೆ ತೈಲ, ತೈಲ ಉತ್ಪನ್ನಗಳು, ರಸಗೊಬ್ಬರ ಮತ್ತು ಲೋಹಗಳ ಪೂರೈಕೆ ಮಾಡುತ್ತಿದೆ. ಅಷ್ಟೇ ಅಲ್ಲದೆ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಾದ ಬಿಎಚ್​ಇಎಲ್, ತೈಲ ಮತ್ತು ನೈಸರ್ಗಿಕ ಅನಿಲ ಸಂಸ್ಥೆ(ಒಎನ್​ಜಿಸಿ), ಹಿಂದೂಸ್ಥಾನ್ ಏರೊನಾಟಿಕಲ್ ಲಿಮಿಟೆಡ್(ಎಚ್​ಎಎಲ್) ಮತ್ತು ಸ್ಟೀಲ್ ಇಂಡಸ್ಟ್ರಿಯ ಸ್ಥಾಪನೆಗೂ ಸೋವಿಯತ್ ಒಕ್ಕೂಟ ನೆರವು ನೀಡಿತ್ತು. ವಿದೇಶಿ ನೆರವಿನೊಂದಿಗೆ ಮುಂಬೈನಲ್ಲಿ ಆರಂಭವಾದ ಭಾರತದ ಪ್ರಥಮ ಐಐಟಿಗೂ ಸೋವಿಯತ್ ಒಕ್ಕೂಟದ ನೆರವಿತ್ತು.

 

ಭಾರತ-ರಷ್ಯಾ ನಡುವಣ ದೀರ್ಘಕಾಲದ ಸಂಬಂಧದ ಬಗ್ಗೆ ಸಂಕ್ಷಿಪ್ತ ವಿವರ

 

  • ಭಾರತ-ರಷ್ಯಾ ನಡುವಣ ದೀರ್ಘಕಾಲದ ಸಂಬಂಧವನ್ನು ಮತ್ತೊಂದು ಮಜಲಿಗೆ ಕೊಂಡೊಯ್ಯುವ ನಿಟ್ಟಿನಲ್ಲಿ ತಮಿಳುನಾಡಿನ ಕೂಡಂಕೂಳಂ ಅಣುಸ್ಥಾವರದ 5ಮತ್ತು 6ನೇ ಘಟಕ ನಿರ್ಮಾಣ ಸೇರಿದಂತೆ ಒಟ್ಟು 12 ಒಪ್ಪಂದಕ್ಕೆ ಉಭಯ ರಾಷ್ಟ್ರಗಳ ನಾಯಕರು ಸಹಿ ಹಾಕಿದ್ದರು .
  • ಚೀನಾ ಹಾಗೂ ರಷ್ಯಾ ನಡುವೆ ಮಿತ್ರತ್ವ ಇರುವ ಹಿನ್ನೆಲೆಯಲ್ಲಿ, ತಾನು ಪರಮಾಣು ಪೂರೈಕೆದಾರರ ಸಮೂಹ (ಎನ್​ಎಸ್​ಜಿ) ಸೇರುವಂತಾಗಲು ಚೀನಾ ಮನವೊಲಿಸಬೇಕೆಂದು ಭಾರತ ರಷ್ಯಾವನ್ನು ಕೆಲ ದಿನಗಳ ಹಿಂದೆ ಆಗ್ರಹಿಸಿತ್ತು. ಅದಿಲ್ಲವಾದಲ್ಲಿ, ಕೂಡಂಕೂಳಂ ಒಪ್ಪಂದದ ಬಗ್ಗೆ ಮರುಪರಿಶೀಲನೆ ಮಾಡುವ ಅಗತ್ಯ ಎದುರಾಗಲಿದೆ ಎಂದೂ ಎಚ್ಚರಿಸಿತ್ತು. ಈ ಹಿನ್ನೆಲೆಯಲ್ಲಿ ಕೂಡಂಕೂಳಂನ 5 ಮತ್ತು 6ನೇ ಘಟಕ ನಿರ್ಮಾಣ ಕಾರ್ಯಕ್ಕೆ ಅಂಕಿತ ಬೀಳುವುದೋ ಇಲ್ಲವೋ ಎಂಬ ಅನುಮಾನ ಹುಟ್ಟಿ ಕೊಂಡಿತ್ತು. ಆದರೆ ಇತ್ತೀಚಿಗೆ ನಡೆದ ಮಾತುಕತೆಯಲ್ಲಿ ಒಪ್ಪಂದಕ್ಕೆ ಸಹಿ ಹಾಕಿರುವುದರಿಂದ ಗೊಂದಲಗಳಿಗೆ ತೆರೆಬಿದ್ದಂತಾಗಿದೆ.

 

ರಕ್ಷಣಾ ಕ್ಷೇತ್ರದಲ್ಲಿ  

  • ಭಾರತ ಈಗ ಅಮೆರಿಕ, ಫ್ರಾನ್ಸ್, ಇಸ್ರೇಲ್​ನಿಂದ ಸಾವಿರಾರು ಕೋಟಿ ಮೌಲ್ಯದ ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಹೀಗಿದ್ದರೂ, ಹಿಂದಿನಂತೆ ಈಗಲೂ ರಕ್ಷಣಾ ಕ್ಷೇತ್ರದಲ್ಲಿ ರಷ್ಯಾದ ಪಾಲು ದೊಡ್ಡದಿದೆ. ಭಾರತದ ಸೇನೆಯಲ್ಲಿ ಬಳಕೆಯಾಗುವ ಶಸ್ತ್ರಾಸ್ತ್ರಗಳಲ್ಲಿ ಶೇ.50ರಷ್ಟು ರಷ್ಯಾದಲ್ಲಿಯೇ ತಯಾರಾಗಿರುವಂತಹವು. ಪರಮಾಣು ಜಲಾಂತರ್ಗಾಮಿ ಅರಿಹಂತ್ ನಿರ್ವಣಕ್ಕೆ ರಷ್ಯಾದ ಬೆಂಬಲವಿದೆ.
  • ಫಿಫ್ತ್ ಜನರೇಷನ್ ಫೈಟರ್ ಏರ್​ಕ್ರಾಫ್ಟ್(ಎಫ್​ಜಿಎಫ್​ಎ) ನಿರ್ವಣಕ್ಕೂ ರಷ್ಯಾ ನೆರವಾಗಿದೆ. ಭಾರತೀಯ ವಾಯುಪಡೆಗೆ ಸುಧಾರಿತ ಮಿಗ್-35 ಯುದ್ಧವಿಮಾನಗಳ ಮಾರಾಟ ಪ್ರಸ್ತಾವನೆಗೆ ಹಸಿರುನಿಶಾನೆ ತೋರಿಸಿದೆ. 40 ಎಸ್​ಯುು-30ಎಂಕೆಐ ಯುದ್ಧ ವಿಮಾನಗಳ ಮಾರಾಟಕ್ಕೆ 77 ಬಿಲಿಯನ್ ಡಾಲರ್ ಒಪ್ಪಂದಕ್ಕೆ ಸಹಿ ಹಾಕಿದೆ. ಇದರಲ್ಲಿ 10,000 ಇನ್ವಾರ್ ಕ್ಷಿಪಣಿ, ಟಿ-90 ಟ್ಯಾಂಕ್, 200 ಬ್ರಹ್ಮೋಸ್ ಕ್ಷಿಪಣಿ ಮುಂತಾದವುಗಳ ಒದಗಿಸುವಿಕೆ ಸೇರಿದೆ. ಜತೆಗೆ ಭಾರತದಲ್ಲಿ ತಯಾರಾಗುವ ಮಿಲಿಟರಿ ಶಸ್ತ್ರಾಸ್ತ್ರಗಳ ಬಿಡಿಭಾಗಗಳ ಬಹುದೊಡ್ಡ ಪೂರೈಕೆದಾರ ರಾಷ್ಟ್ರವೂ ಆಗಿದೆ.
  • ಎಸ್-400 ವಾಯು ರಕ್ಷಣಾ ವ್ಯವಸ್ಥೆ ಸರಬರಾಜು, 11 ಬಿಲಿಯನ್ ಡಾಲರ್ ಗುತ್ತಿಗೆಗೆ ಸಹಿ, 2008ರಲ್ಲಿ ಪರಮಾಣು ಸರಬರಾಜು ಸಮೂಹ(ಎನ್​ಎಸ್​ಜಿ) ಭಾರತದೊಂದಿಗೆ ನಾಗರಿಕ ಅಣುಶಕ್ತಿ ಸಹಕಾರಕ್ಕೆ ಅನುವೋದಿಸಿತು ಇವು ರಕ್ಷಣಾ ಕ್ಷೇತ್ರದ ಸಹಕಾರದಲ್ಲಿ ಪ್ರಮುಖವಾದವು.

 

ವಿದ್ಯುತ್ ಉತ್ಪಾದನೆ ಕ್ಷೇತ್ರದಲ್ಲೂ ಸಹಕಾರ

  • ಭಾರತದ ವಿದ್ಯುತ್ ಉತ್ಪಾದನಾ ಕ್ಷೇತ್ರದಲ್ಲಿ ರಷ್ಯಾ ಕೈಜೋಡಿಸಿದೆ. ಪವನವಿದ್ಯುತ್ ಕೇಂದ್ರಗಳ ಅಭಿವೃದ್ಧಿ, ಕಲ್ಲಿದ್ದಲ್ಲು ಕೈಗಾರಿಕೆ ಬೆಳವಣಿಗೆಗೆ ಒಪ್ಪಂದ ಮಾಡಿಕೊಂಡಿದೆ. ಭಾರತವು ರಷ್ಯಾದ ಸಖಾಲಿನ್ ಎನರ್ಜಿ ಪ್ರಾಜೆಕ್ಟ್​ನಲ್ಲಿ 8 ಬಿಲಿಯನ್ ಡಾಲರ್ ಹೂಡಿಕೆ ಮಾಡಿದ್ದು, ಶೇ.20ರಷ್ಟು ಷೇರುಗಳನ್ನು ಹೊಂದಿದೆ. ವಿದ್ಯುತ್ ಕ್ಷೇತ್ರದಲ್ಲಿ ವಿದೇಶದಲ್ಲಿ ಭಾರತ ಮಾಡಿರುವ ಅತಿದೊಡ್ಡ ಹೂಡಿಕೆ ಇದಾಗಿದೆ.

 

ಅಣುಶಕ್ತಿ ಮತ್ತು ಬಾಹ್ಯಾಕಾಶ ಕ್ಷೇತ್ರ

  • ಭಾರತದ ಅಣುಶಕ್ತಿ ಸ್ಥಾವರ ಕ್ಷೇತ್ರದಲ್ಲೂ ರಷ್ಯಾದ ಪಾಲು ದೊಡ್ಡದಿದೆ. ತಮಿಳುನಾಡಿದ ಕೂಡಂಕುಳಂನಲ್ಲಿ ಇಂಡೋ-ರಷ್ಯನ್ ನ್ಯೂಕ್ಲಿಯರ್ ಕಾಪೋರೇಷನ್ ಪ್ರೋಗ್ರಾಂ ಅಡಿಯಲ್ಲಿ ಎರಡು ಅಣುಸ್ಥಾವರಗಳನ್ನು ರಷ್ಯಾ ನಿರ್ವಿುಸಿದೆ. ಇನ್ನೆರಡು ಅಣುಸ್ಥಾವರ ನಿರ್ವಣಕ್ಕೆ ಮಾತುಕತೆಗಳು ನಡೆಯುತ್ತಿವೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಗ್ಲೋನಸ್ ಬಗೆಗೆ ಭಾರತ ಮತ್ತು ರಷ್ಯಾ ನಡುವೆ ಸಹಕಾರ ಮೂಡಿದೆ.
  • ಸೆಟಲೈಟ್ ಟ್ರ್ಯಾಕಿಂಗ್​ಗೆ ಬಳಸಲಾಗುತ್ತಿರುವ ರಷ್ಯಾದ ತಂತ್ರಜ್ಞಾನವಿದೆ ಮತ್ತು ಚಂದ್ರಯಾನ-11ಗೆ ರಷ್ಯಾದ ಸಹಕಾರವಿದೆ. ಭೂಮಿಯ ದೂರದ ಬಗೆಗಿನ ಅಧ್ಯಯನಕ್ಕೆ ಭಾರತ ಉಡಾವಣೆ ಮಾಡಿದ್ದ ಆರಂಭಿಕ ಸೆಟಲೈಟ್​ಗಳ ನಿರ್ವಣದಲ್ಲಿ ರಷ್ಯಾ ಸಹಕಾರವಿತ್ತು. ವಾಸ್ಟೋಕ್ ರಾಕೆಟ್​ಗಳ ಮೂಲಕ ಐಆರ್​ಎಸ್ ಸಿರೀಸ್ ಸೆಟಲೈಟ್ ಲಾಂಚ್​ಗೂ ಸಹಕರಿಸಿತ್ತು. ಮೇಕ್ ಇನ್ ಇಂಡಿಯಾ ಯೋಜನೆಯಡಿ ಭಾರತದಲ್ಲಿ ಅಣುಸ್ಥಾವರ ಸ್ಥಾಪನೆಗೆ ರಷ್ಯಾ ಅಸ್ತು ಎಂದಿದೆ.
  • ರಾಜಸ್ಥಾನ, ಗುಜರಾತ್, ಆಂಧ್ರಪ್ರದೇಶದಲ್ಲಿ ಇದಕ್ಕಾಗಿ ಭೂಮಿಯನ್ನೂ ಗುರುತಿಸಲಾಗಿದೆ. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ರಷ್ಯಾ ಸರ್ಕಾರಿ ಸ್ವಾಮ್ಯದ ರೋಸಾಟಾಮ್ ಸಂಸ್ಥೆಯಿಂದ 25 ಪರಮಾಣು ರಿಯಾಕ್ಟರ್​ಗಳನ್ನು ಭಾರತಕ್ಕೆ ಮಾರಾಟ ಮಾಡುವುದಕ್ಕೆ ಸಮ್ಮತಿ ಸೂಚಿಸಿದ್ದಾರೆ.

 

ವ್ಯಾಪಾರ ವಹಿವಾಟು

  • ರಷ್ಯಾ ಮತ್ತು ಭಾರತದ ನಡುವೆ ಕೋಟ್ಯಂತರ ರೂಪಾಯಿ ಮೌಲ್ಯದ ವ್ಯಾಪಾರ ವಹಿವಾಟುಗಳು ನಡೆಯುತ್ತದೆಯಾದರೂ ಇನ್ನಷ್ಟು ಹೂಡಿಕೆ ಅಗತ್ಯವಿದೆಯೆಂಬುದು ಉಭಯ ರಾಷ್ಟ್ರಗಳ ಅಭಿಪ್ರಾಯವಾಗಿದೆ.
  • ಈ ಬಗ್ಗೆ ಕಳೆದ   ಬ್ರಿಕ್ಸ್ ಸಮಾವೇಶದಲ್ಲೂ ಮಾತುಕತೆ ನಡೆಸಲಾಗಿದ್ದು, 2020ರ ವೇಳೆಗೆ ಉಭಯ ರಾಷ್ಟ್ರಗಳ ನಡುವೆ 93 ಲಕ್ಷ ಕೋಟಿ ರೂಪಾಯಿ ಮೌಲ್ಯದ ವ್ಯಾಪಾರ ವಹಿವಾಟು ಮತ್ತು 2025ರ ವೇಳೆಗೆ ಉಭಯ ರಾಷ್ಟ್ರಗಳಲ್ಲಿ 96,000 ಕೋಟಿ ರೂಪಾಯಿಯಷ್ಟು ಹೂಡಿಕೆ ಮಾಡಲು ನಿರ್ಧರಿಸಲಾಗಿದೆ. ಸದ್ಯ ರಷ್ಯಾ ಭಾರತದಲ್ಲಿ 25,769 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದರೆ, ಭಾರತ ರಷ್ಯಾದಲ್ಲಿ 51,000 ಕೋಟಿ ರೂಪಾಯಿ ಹೂಡಿಕೆ ಮಾಡಿದೆ.

 

ಭಾರತ ಮತ್ತು ರಷ್ಯಾ ನಡುವಿನ ಪ್ರಮುಖ ಪರಮಾಣು ಒಪ್ಪಂದಗಳು

 

  • ನ್ಯೂಕ್ಲಿಯರ್ ಪವರ್ ರಿಯಾಕ್ಟರ್ ವರ್ಗಾವಣೆ
  • ಭಾರತದ ಅಣುಸ್ಥಾವರಗಳಿಗೆ ತೈಲ ಪೂರೈಕೆ
  • ತಂತ್ರಜ್ಞಾನ ಹಂಚಿಕೆ ಒಪ್ಪಂದ

 

 

 

ವಿಶ್ವದ ದಿಗ್ಗಜ ರಾಷ್ಟ್ರಗಳಿಗೆ ಹೋಲಿಸಿದರೂ ರಷ್ಯಾ ಮಿಲಿಟರಿ ತಂತ್ರಜ್ಞಾನದಲ್ಲಿ ಯಾವತ್ತೂ ಮುಂಚೂಣಿಯಲ್ಲೇ ಗುರುತಿಸಿಕೊಂಡ ರಾಷ್ಟ್ರ. ಇದು ಇತ್ತೀಚೆಗಷ್ಟೇ ಆಬ್ಜೆಕ್ಟ್ 4202 ಖಂಡಾಂತರ ಕ್ಷಿಪಣಿ ವಾಹಕವನ್ನು ಪರೀಕ್ಷಾರ್ಥ ಉಡಾವಣೆ ಮಾಡಿತ್ತು. ಅಮೆರಿಕದ ಕ್ಷಿಪಣಿ ಪ್ರತಿರೋಧಕ ರಾಡಾರ್​ಗೂ ಪತ್ತೆಯಾಗದಂತೆ ಹಾರಬಲ್ಲ ಹೈಪರ್​ಸಾನಿಕ್ ಯುದ್ಧಶಸ್ತ್ರವು ಶಬ್ದದ ವೇಗಕ್ಕಿಂತ 15 ಪಟ್ಟು ವೇಗವಾಗಿ ಚಲಿಸಿ ಟೆಕ್ಸಾಸ್​ನಷ್ಟು ವಿಸ್ತೀರ್ಣ ಹೊಂದಿರುವ ಭೂಭಾಗವನ್ನು ಸಂಪೂರ್ಣ ನಾಶ ಮಾಡಬಲ್ಲುದಾಗಿದೆ. ರಷ್ಯಾ ಅಭಿವೃದ್ಧಿಪಡಿಸಿರುವ ಐಸಿಬಿಎಂ ಆರ್​ಎಸ್ 28 ಇಂತಹ 15 ಯುದ್ಧಶಸ್ತ್ರಗಳನ್ನು ಹೊತ್ತು ಶಬ್ದಕ್ಕಿಂತ 5 ಪಟ್ಟು ವೇಗವಾಗಿ ಹಾರಬಲ್ಲದಲ್ಲದೆ ತನ್ನ ಪಥವನ್ನು ಪಲ್ಲಟಿಸಿ ಕ್ಷಿಪಣಿ ಪ್ರತಿರೋಧಕ ರಾಡಾರ್​ಗಳ ದಿಕ್ಕು ತಪ್ಪಿಸಬಲ್ಲದು.

 

 

ಮುಂದಿನ ಹಾದಿ

 

ಶ್ರೀ ಮನೋಹರ್ ಪರಿಕ್ಕರ್ ರಕ್ಷಣಾ ಸಚಿವರಾಗಿದ್ದಾಗ 2016ರಲ್ಲಿ  ಯುದ್ಧವಿಮಾನಗಳನ್ನು ಅಭಿವೃದ್ಧಿಪಡಿಸುವ ಯೋಜನೆಯು ಮತ್ತೆ ಮಾತುಕತೆ ಆರಂಭವಾಗಿತ್ತಾದರೂ, ಒಮ್ಮತಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಯೋಜನೆಯ ವೆಚ್ಚ ತೀರಾ ದೊಡ್ಡದು. ಹೀಗಾಗಿ ಪ್ರತಿ ವಿಮಾನಕ್ಕೆ ವಿನಿಯೋಗವಾಗುವ ಮೊತ್ತವೂ ವಿಪರೀತವಾಗಲಿದೆ. ವೆಚ್ಚ ಮತ್ತು ವಿಮಾನದಿಂದ ಆಗುವ ಅನುಕೂಲಗಳು ಪರಸ್ಪರ ತಾಳೆಯಾಗುವುದಿಲ್ಲ. ಹೀಗಾಗಿ ಯೋಜನೆಯನ್ನು ಕೈಬಿಡುವುದೇ ಒಳ್ಳೆಯದು ಎಂದು ಭಾರತೀಯ ವಾಯುಪಡೆ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.

ಆದರೆ ಇದಕ್ಕೆ ಭಿನ್ನ ಅಭಿಪ್ರಾಯವೆಂಬಂತೆ, ಯಾವ ದೇಶವೂ ವಿಮಾನದ ತಂತ್ರಜ್ಞಾನವನ್ನು ಈವರೆಗೆ ಭಾರತಕ್ಕೆ ನೀಡಿಲ್ಲ. ಈ ಯೋಜನೆಯಲ್ಲಿ ಅಂತಹ ತಂತ್ರಜ್ಞಾನವೂ ನಮ್ಮ ಕೈವಶವಾಗುವ ಸಾಧ್ಯತೆ ಇದೆ. ಇದರಿಂದ ರಕ್ಷಣಾ ಕ್ಷೇತ್ರದಲ್ಲಿ ನಮ್ಮ ಸ್ಥಾನ–ಸಾಮರ್ಥ್ಯ ಬದಲಾಗಲಿದೆ. ಹೀಗಾಗಿ ಯೋಜನೆಯನ್ನು ಅಂತಿಮಗೊಳಿಸುವುದು ಅತ್ಯಗತ್ಯ.

Share