13th JULY MLP-MODEL ANSWERS

13th  JULY  MLP

 

 

NOTE:: ದಯವಿಟ್ಟು  ಗಮನಿಸಿ ಕೆಳಗಿನ ಉತ್ತರಗಳು‘  ‘ಮಾದರಿ ಉತ್ತರಗಳುಎಂಬುದನ್ನು ನೆನಪಿಡಿ. ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ PROPER SOURCE ಎಲ್ಲದೇ ಇರುವುದರಿಂದ  ನಾವು ಮುಖ್ಯ ಪರೀಕ್ಷೆಯಲ್ಲಿ ನೀವು ಯಾವ ರೀತಿರೆಯಬೇಕು ಮತ್ತು ನಿಮ್ಮ ಸಮಯವನ್ನು ಉಳಿಸಲು ಕೊಡುತ್ತಿರುವ  ವಿಸ್ತಾರವಾದ ಸಾರಾಂಶ, ನಾವುಗಳು ಇಲ್ಲಿ ಪದಗಳ ಮಿತಿ ಗಣನೆಗೆ ತೆಗೆದುಕೊಂಡಿಲ್ಲ ಏಕೆಂದರೆ ಒಂದು ಪ್ರಶ್ನೆಗೆ ಎಷ್ಟು ಸಾದ್ಯೋವೊ ಅಷ್ಟು ಇನ್ಫಾರ್ಮಶನ್ ಕೊಟ್ಟಿರುತ್ತೆವೆ. ನಾವು ಒದಗಿಸುತ್ತಿರುವ ವಿಷಯವು ಪ್ರಶ್ನೆಯ ಬೇಡಿಕೆಯನ್ನು ಪೂರೈಸುತ್ತದೆ ಮತ್ತು ಅದೇ ಸಮಯದಲ್ಲಿ ನಿಮಗೆ ಹಿನ್ನೆಲೆ ಮಾಹಿತಿ ರೂಪದಲ್ಲಿ ಹೆಚ್ಚುವರಿ ಅಂಕಗಳನ್ನು ಗಳಿಸಲು ಅನುಕೂಲಕರವಾಗುತ್ತದೆ.

 

CLICK HERE TO JOIN NIALP FOUNDATION COURSE-2019

 

 

GENERAL STUDIES PAPER-1(ಸಾಮಾನ್ಯ ಅಧ್ಯಾಯ)

 

1.Describe the differences between nationalism and patriotism. Do you think freedom fighters were more of patriots than nationalists? Critically comment.

(ರಾಷ್ಟ್ರೀಯತೆ ಮತ್ತು ದೇಶಭಕ್ತಿಯ ನಡುವಿನ ವ್ಯತ್ಯಾಸವನ್ನು ವಿವರಿಸಿ. ಸ್ವಾತಂತ್ರ್ಯ ಹೋರಾಟಗಾರರು ರಾಷ್ಟ್ರೀಯತಾವಾದಿಗಳಿಗಿಂತ ಹೆಚ್ಚಿನ ದೇಶಭಕ್ತರಾಗಿದ್ದಾರೆ ಎಂದು ನೀವು ಭಾವಿಸುತ್ತೀರಾ? ವಿಮರ್ಶಾತ್ಮಕವಾಗಿ ಪರೀಕ್ಷಿಸಿ.)

(250 ಪದಗಳು)

 

 

ರಾಷ್ಟ್ರೀಯತೆ ಮತ್ತು ದೇಶಭಕ್ತಿ

 ರಾಷ್ಟ್ರ ಎಂದರೆ, ಒಂದು ಪ್ರದೇಶದಲ್ಲಿ, ಒಂದೇ ರೀತಿಯ ಸಂಸ್ಕೃತಿ, ಭಾಷೆ / ಇತಿಹಾಸವನ್ನು ಹೊಂದಿದ ಜನರ ಗುಂಪು; ರಾಷ್ಟ್ರೀಯತೆ – ತಮ್ಮ ದೇಶದ ಸತ್ತ್ವದ ಕುರಿತಾಗಿ ಇರುವ ಅಭಿಮಾನ; ದೇಶಭಕ್ತಿ – ತನ್ನ ದೇಶದ ಬಗೆಗೆ ಇರುವ ಭಕ್ತಿ ಮತ್ತು ತೀವ್ರವಾದ ಬೆಂಬಲ.

 

ನಮ್ಮ ಮೂಲವನ್ನು ನೋಡಿದಾಗ, ಭಾರತ ರೇಷ್ಮೆ ಮತ್ತು ಮಸಾಲೆ ಪದಾರ್ಥಗಳ ಮೂಲಕ ಜಾಗತಿಕವಾಗಿ ಬೆಸೆಯಲ್ಪಟ್ಟ ಸಮಾಜವಾಗಿತ್ತು. ವಾಣಿಜ್ಯ ಉದ್ಯಮವು ಸಂಸ್ಕೃತಿಯ ವಿನಿಮಯ, ನಂಬಿಕೆ ಮತ್ತು ವ್ಯಾಪಾರಿಗಳ ಹುಟ್ಟು, ವಿದ್ವಾಂಸರು ಮತ್ತು ಋಷಿಗಳು ಪರ್ವತಗಳಲ್ಲಿ ಸಂಚರಿಸುವುದನ್ನು, ಸಾಗರದಲ್ಲಿ ಸಾಗುವುದನ್ನು ಸಾಕ್ಷಿಯಾಗಿ ನಿಂತಿತು. ಹಿಂದೂಧರ್ಮದ ಪ್ರಭಾವದೊಂದಿಗೆ ಬೌದ್ಧಧರ್ಮವು ಮಧ್ಯ ಏಷ್ಯಾ, ಚೀನಾ ಮತ್ತು ಆಗ್ನೇಯ ಏಷ್ಯಾವನ್ನು ತಲಪಿತು. ಮೆಗಸ್ತನೀಸ್ (ಕ್ರಿ.ಪೂ. 4ನೇ ಶತಮಾನ), ಫಾಹಿಯಾನ್ (ಕ್ರಿ.ಶ. 5ನೇ ಶತಮಾನ), ಹ್ಯುಯೆನ್ ತ್ಸಾಂಗ್(ಕ್ರಿ.ಶ. 7ನೇ ಶತಮಾನ) ಇವರೆಲ್ಲ ಭಾರತಕ್ಕೆ ಬಂದು ಸುಸಜ್ಜಿತ ಮೂಲಕ ಸೌಕರ್ಯಗಳಿಂದ ಕೂಡಿದ ಸಮರ್ಥ ಆಡಳಿತ ವ್ಯವಸ್ಥೆಯುಳ್ಳ ಭಾರತದ ಬಗ್ಗೆ ಬರೆದರು.

ತಕ್ಷಶಿಲಾ, ನಳಂದಾ, ವಿಕ್ರಮಶಿಲಾ, ವಾಲಭಿ, ಸೋಮಪುರ ಮತ್ತು ಓದಂತಪುರಿ ನಮ್ಮ ಪುರಾತನ ವಿಶ್ವವಿದ್ಯಾನಿಲಯಗಳಾಗಿದ್ದವು. ಪ್ರಪಂಚದ ಬುದ್ಧಿವಂತರ ಆಕರ್ಷಣಾ ಕೇಂದ್ರಗಳಂತಿದ್ದ ಈ ವಿಶ್ವವಿದ್ಯಾನಿಲಯಗಳು ಕ್ರಿ.ಪೂ. 6 ನೇ ಶತಮಾನದ ಮೊದಲಿಗೆ ಸುಮಾರು 1800 ವರ್ಷಗಳ ಕಾಲ ಪ್ರಪಂಚವನ್ನೇ ಆಳಿದವು. ಈ ವಿಶ್ವವಿದ್ಯಾನಿಲಯಗಳ ವಾತಾವರಣದಲ್ಲಿ ಸಾಹಿತ್ಯ–ಕಲೆ–ವಿದ್ವತ್ಗಳು ಪ್ರವರ್ಧಮಾನಕ್ಕೆ ಬಂದವು. ರಾಜ್ಯ ನಿರ್ಮಿಸುವ, ನಡೆಸುವ ನೈಪುಣ್ಯತೆಯ ಕುರಿತಾಗಿ ತಿಳಿಸುವ ಅಧಿಕೃತ ಪುಸ್ತಕವೆಂದೇ ಹೇಳಬಹುದಾದ ಚಾಣಕ್ಯನ ‘ಅರ್ಥಶಾಸ್ತ್ರ’ ಪುಸ್ತಕವು ಇದೇ ಸಮಯದಲ್ಲಿ ಬರೆಯಲ್ಪಟ್ಟಿತು.

 

1648ರ ವೆಸ್ಟ್ಫಾಲಲಿಯಾ ಒಪ್ಪಂದದ ಪ್ರಕಾರ ಯುರೋಪಿಯನ್ ನೇಷನ್-ಸ್ಟೇಟ್ ಅಸ್ತಿತ್ವಕ್ಕೆ ಬರುವ ಎಷ್ಟೋ ವರ್ಷಗಳ ಮೊದಲೇ ಭಾರತದಲ್ಲಿ ರಾಷ್ಟ್ರದ ಅಸ್ತಿತ್ವವಿತ್ತು. ನಿರ್ದಿಷ್ಟ ಪ್ರದೇಶ, ಏಕಭಾಷೆ, ಧರ್ಮೀಯತೆ, ಸಮಾನ ಶತ್ರು-ಮಿತ್ರ ಎನ್ನುವ ನಮ್ಮ ಈ ಪರಿಕಲ್ಪನೆಯೇ ಯೂರೋಪಿನ ಹಲವು ರಾಜ್ಯಗಳ ರಚನೆಗೆ ನಾಂದಿಯಾಯಿತು. ವಸುಧೈವ ಕುಟುಂಬಕಮ್’, ಸರ್ವೇ ಭವಂತು ಸುಖಿನಃ, ಸರ್ವೇ ಂತು ನಿರಾಮಯಾ ಇತ್ಯಾದಿ ಆಧಾರದಲ್ಲಿ ಭಾರತದ ರಾಷ್ಟ್ರೀಯತೆ ಬೆಳೆದಿದೆ. ಪ್ರಪಂಚವನ್ನು ನಮ್ಮ ಕುಟುಂಬ ಎಂದು ಪರಿಗಣಿಸುವ ನಾವು ಎಲ್ಲರ ಉತ್ತಮ ಆರೋಗ್ಯ ಮತ್ತು ಆನಂದಕ್ಕಾಗಿ ಪ್ರಾರ್ಥಿಸುತ್ತೇವೆ. ಸಂಘರ್ಷ, ಸಮೀಕರಣ ಮತ್ತು ಸಹ-ಅಸ್ತಿತ್ವದ ದೀರ್ಘಕಾಲದ ಪ್ರಕ್ರಿಯೆಯ ಮೂಲಕ ನಮ್ಮ ರಾಷ್ಟ್ರೀಯತೆಯ ಗುರುತು ಹೊರಹೊಮ್ಮಿದೆ.

ವೈವಿಧ್ಯವಾದ ಸಂಸ್ಕೃತಿ, ನಂಬಿಕೆ ಮತ್ತು ಭಾಷೆಯ ವಿವಿಧತೆ ಭಾರತವನ್ನು ವಿಶೇಷವಾಗಿಸುತ್ತದೆ. ತಾಳ್ಮೆಯೇ ನಮ್ಮ ಶಕ್ತಿ, ಬಹುಸಾಂಸ್ಕೃತಿಕತೆಯನ್ನು ಸ್ವೀಕರಿಸುವುದು ಮತ್ತು ಗೌರವಿಸುವುದು ನಮ್ಮ ಗುಣ. ವೈವಿಧ್ಯತೆಯನ್ನು ಆಚರಿಸುತ್ತೇವೆ. ಇವೆಲ್ಲವೂ ಶತಶತಮಾನಗಳಿಂದ ನಮ್ಮ ಸಾಮೂಹಿಕ ಪ್ರಜ್ಞೆಯ ಭಾಗವಾಗಿದೆ. ಧರ್ಮ, ಪ್ರದೇಶ, ದ್ವೇಷ ಮತ್ತು ಅಸಹಿಷ್ಣುತೆಯ ಮೂಲಕ ರಾಷ್ಟ್ರೀಯತೆಯನ್ನು ಗುರುತಿಸುವುದು ನಮ್ಮ ರಾಷ್ಟ್ರೀಯತೆಯ ಗುರುತನ್ನೇ ದುರ್ಬಲವಾಗಿಸುತ್ತದೆ.

ನಮ್ಮಲ್ಲಿ ವ್ಯತ್ಯಾಸಗಳು ಕಾಣಿಸುವುದು ಸಹಜ ಮತ್ತು ಅದು ತೋರಿಕೆಯಷ್ಟೆ; ಆದರೆ ನಮ್ಮ ಅಂತರಂಗದಲ್ಲಿ ನಾವು ವಿಶಿಷ್ಟ ಸಂಸ್ಕೃತಿಯ ಹಿನ್ನೆಲೆಯಿಂದ ಒಂದೇ ಇತಿಹಾಸ, ಸಾಹಿತ್ಯ, ಾಗರಿಕತೆಯನ್ನು ಹೊಂದಿದ್ದೇವೆ. ಶ್ರೇಷ್ಠ ಇತಿಹಾಸಕಾರ ವಿನ್ಸೆಂಟ್ ಸ್ಮಿತ್‌ನ ಮಾತುಗಳಲ್ಲಿ ಹೇಳುವುದಾದರೆ – ಭಾರತವು ಎಲ್ಲಾ ಅನುಮಾನಗಳಿಗೂ ಮೀರಿದ ಭೌಗೋಳಿ ಪ್ರತ್ಯೇಕತೆ ಅಥವಾ ರಾಜಕೀಯ ಶ್ರೇಷ್ಠತೆಯಿಂದ ಉತ್ಪತ್ತಿಯಾಗುವಂತೆಯೇ ಹೆಚ್ಚು ಗಾಢವಾದ ಆಧಾರವಾಗಿರುವ ಮೂಲಭೂತ ಏಕತ್ವವನ್ನು ಹೊಂದಿದೆ. ಈ ಐಕ್ಯತೆಯು ಅಸಂಖ್ಯಾತ ವೈವಿಧ್ಯತೆಯು ರಕ್ತ, ಬಣ್ಣ, ಭಾಷೆ, ಉಡುಗೆ, ಸ್ವಭಾವ, ನಡವಳಿಕೆ, ಪಂಥಗಳಿಂದ ಬಂದುದಾಗಿದೆ.

 

ನಾವು ಇತಿಹಾಸವನ್ನು ತ್ವರಿತವಾಗಿ ನೋಡುವುದಾದರೆ,  ಹದಿನಾರು ಮಹಾಜನಪದಗಳು ಉತ್ತರ ಭಾರತದಾದ್ಯಂತ ಪೂರ್ವ ಸಾಮಾನ್ಯ ಶಕೆ (ಬಿಸಿಇ)  6 ನೇ ಶತಮಾನದಲ್ಲಿ ಹರಡಿತ್ತು. 4 ನೇ ಶತಮಾನದಲ್ಲಿ (ಬಿಸಿಇ), ಚಂದ್ರಗುಪ್ತ ಮೌರ್ಯನು ಉತ್ತರ-ಪಶ್ಚಿಮ ಮತ್ತು ಉತ್ತರ ಭಾರತವನ್ನು ಒಳಗೊಂಡ ಶಕ್ತಿಶಾಲಿ ಸಾಮ್ರಾಜ್ಯವನ್ನು ನಿರ್ಮಿಸಲು ಗ್ರೀಕರನ್ನು ಸೋಲಿಸಿದನು. ಚಕ್ರವರ್ತಿ ಅಶೋಕ ಈ ರಾಜವಂಶದ ಅತ್ಯಂತ ಶ್ರೇಷ್ಠ ಆಡಳಿತಗಾರನಾಗಿದ್ದ. ಮೌರ್ಯ ಸಾಮ್ರಾಜ್ಯದ ಕುಸಿತದ ನಂತರ, ಸಾಮ್ರಾಜ್ಯವು ಸುಮಾರು ಬಿಸಿಇ  185 ರಲ್ಲಿ ಸಣ್ಣ ಸಾಮ್ರಾಜ್ಯಗಳಾಗಿ ಮುರಿದು ಹೋಯಿತು; ಗುಪ್ತ ರಾಜವಂಶವು ಮತ್ತೆ ಸುಮಾರು ಸಾಮಾನ್ಯ ಶಕೆ (ಬಿಇ) 550 ರಲ್ಲಿ ಕುಸಿದ ದೊಡ್ಡ ಸಾಮ್ರಾಜ್ಯವನ್ನು ಸೃಷ್ಟಿಸಿತು; 12 ನೇ ಶತಮಾನದಲ್ಲಿ ಮುಸ್ಲಿಂ ದಾಳಿಕೋರರು ದೆಹಲಿಯನ್ನು ವಶಪಡಿಸಿಕೊಳ್ಳುವವರೆಗೆ ಅನೇಕ ರಾಜವಂಶಗಳು ಆಳಿದವು ಮತ್ತು ಹಲವು ರಾಜಮನೆತನಗಳು ಮುಂದಿನ 300 ವರ್ಷಗಳ ಕಾಲ ಸತತ ಆಳ್ವಿಕೆ ನಡೆಸಿದವು. ಬಾರ್ಬ 1526 ರಲ್ಲಿ ಮೊದಲ ಪಾಣಿಪತ್ ಕದನದಲ್ಲಿ ಕೊನೆಯ ಲೋಧಿ ರಾಜನನ್ನು ಸೋಲಿಸುವ ಮೂಲಕ ದೃಢವಾದ ಮೊಘಲ್ ಆಳ್ವಿಕೆಯನ್ನು 300 ವರ್ಷಗಳವರೆಗೆ ಮುಂದುವರೆಸಿದರು. 1757 ರಲ್ಲಿ ಪ್ಲಾಸಿ್ಸ ಯುದ್ಧವನ್ನು ಗೆದ್ದ ನಂತರ ಈಸ್ಟ್ ಇಂಡಿಯಾ ಕಂಪೆನಿ, ಮತ್ತು ಮೂರು ಬ್ಯಾಟಲ್ಸ್ ಆಫ್ ಆರ್ಕೊಟ್ (1746-63) ಮೂಲಕ ಭಾರತದ ಪೂರ್ವ ಮತ್ತು ದಕ್ಷಿಣ ಭಾಗದಲ್ಲಿ ವ್ಯಾಪಕ ಪ್ರದೇಶವನ್ನು ತನ್ನ ನಿಯಂತ್ರಣಕ್ಕೆ ಪಡೆಯಿತು. ಪಾಶ್ಚಾತ್ಯ ಪ್ರದೇಶದ ಬಹುಪಾಲು ಭಾಗವು ಕಂಪೆನಿಯ ಪ್ರಾಂತ್ಯಕ್ಕೆ ಸೇರ್ಪಡೆಗೊಂಡಿತ್ತು ಮತ್ತು ಈ ಪ್ರಾಂತ್ಯಗಳನ್ನು ಆಡಳಿತ ನಡೆಸಲು ಪ್ರಾರಂಭಿಸಿತು, 1774 ರಲ್ಲಿ ಒಂದು ಆಧುನಿಕ ರೂಪದ ಸರ್ಕಾರವನ್ನು ಸ್ಥಾಪಿಸಲಾಯಿತು. ಈ ಪ್ರದೇಶಗಳನ್ನು ನಿರ್ವಹಿಸಲು, ಕೋಟೆು ವಿಲಿಯಂ, ಕಲ್ಕತ್ತಾದಲ್ಲಿನ ಗವರ್ನರ್ ಜನರಲ್  ಕಚೇರಿ ಮತ್ತು ಎರಡು ಉಪ-ಆಡಳಿತದ ಗವನರ್ರ ಕಚೇರಿಗಳನ್ನು ಮದ್ರಾಸ್ ಮತ್ತು ಬಾಂಬೆಯಲ್ಲಿ ರಚಿಸಲಾಯಿತು. ಸುಮಾರು 140 ವರ್ಷಗಳ ಕಾಲ, ಕೊಲ್ಕತ್ತವು ಭಾರತದಲ್ಲಿನ ಬ್ರಿಟಿಷ್ ಪ್ರಾಧಿಕಾರದ ಕೇಂದ್ರವಾಗಿತ್ತು. ಆದಾಗ್ಯೂ, ಆಡಳಿತದ ಜವಾಬ್ದಾರಿಯನ್ನು 1858 ರಲ್ಲಿ ಈಸ್ಟ್ ಇಂಡಿಯಾ ಕಂಪನಿಯಿಂದ ದೂರವಿರಿಸಲಾಯಿತು ಮತ್ತು ಭಾರತದ ಆಡಳಿತ ನಿಭಾಯಿಸಲು ಬ್ರಿಟಿಷ್ ಕ್ಯಾಬಿನೆಟ್ ನಲ್ಲಿ ಭಾರತದ ಆಡಳಿತ ಕಾರ್ಯದರ್ಶಿಯನ್ನು ನೇಮಿಸಲಾಯಿತು.

 

2500 ವರ್ಷಗಳ ರಾಜಕೀಯ ಅದೃಷ್ಟ ಮತ್ತು ವಿಜಯದ ಈ ಅವಧಿಯ ಉದ್ದಕ್ಕೂ, 5000 ವರ್ಷ ಹಳೆಯ ನಾಗರಿಕತೆಯು ನಾಶವಾಗದೆ ನಿರಂತರವಾಗಿ  ಉಳಿಯಿತು. ವಾಸ್ತವವಾಗಿ, ಪ್ರತಿ ಆಕ್ರಮಣಕಾರರೂ ಮತ್ತು ಪ್ರತಿ ವಿದೇಶಿ ಅಂಶವೂ ಹೊಸ ಸಂಶ್ಲೇಷಣೆ ಮತ್ತು ಏಕತೆಯನ್ನು ರೂಪಿಸಲು ಹೀರಿಕೊಳ್ಳಲ್ಪಟ್ಟವು. ಟಾಗೋರ್ ಅವರ ಕವಿತೆ ‘ಭಾರತ್ ತೀರ್ಥ’ ದಲ್ಲಿ ಹೇಳಿರುವಂತೆ … ‘ಯಾರ ಕರೆಯ ಮೇರೆಗೆ ಸಹಸ್ರಮಾನಗಳವರೆಗೆ ಪ್ರಪಂಚದ ಮೂಲೆಗಳಿಂದ ಮಾನವೀಯತೆಯ ಎಷ್ಟೋ ಧಾರೆಗಳು ಅಸಂಖ್ಯಾತ ಅಲೆಗಳ ರೂಪದಲ್ಲಿ ಬಂದವು ಮತ್ತು ನದಿಗಳಂತೆ ಬೆರೆತವು. ಈ ಮೂಲಕ ಒಂದು ಆತ್ಮವನ್ನು ಸೃಷ್ಟಿಸಿದೆ, ಇದನ್ನು ಭಾರತ ಎಂದು ಕರೆಯಲಾಗುತ್ತದೆ.’

 

ಸ್ವಾತಂತ್ರ್ಯ ಹೋರಾಟಗಾರರು ರಾಷ್ಟ್ರೀಯತಾವಾದಿಗಳು  ಮತ್ತು  ದೇಶಭಕ್ತರು

 

ಹತ್ತೊಂಬತ್ತನೆಯ ಶತಮಾನದ ಅಂತ್ಯದ ವೇಳೆಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸೇರಿದಂತೆ ಅನೇಕ ಭಾರತೀಯ ಸಂಘಟನೆಗಳ ಆಧುನಿಕ ಭಾರತೀಯ ರಾಜ್ಯ ಎಂಬ ಪರಿಕಲ್ಪನೆಯು ಕಂಡುಬಂದಿದೆ.  1895 ರಲ್ಲಿ ಪುಣೆಯಲ್ಲಿ ಶ್ರೀ ಸುರೇಂದ್ರನಾಥ್ ಬ್ಯಾನರ್ಜಿ ಅವರೊಂದಿಗೆ ಆರಂಭಗೊಂಡು ಎಲ್ಲಾ ಕಾಂಗ್ರೆಸ್ ಅಧ್ಯಕ್ಷರು ಬ್ರಿಟಿಷ್ ಇಂಡಿಯಾ ಮತ್ತು 565 ರಾಜಪ್ರಭುತ್ವದ ರಾಜ್ಯಗಳ ಪ್ರದೇಶಗಳನ್ನು ಒಳಗೊಂಡ ಭಾರತೀಯ ರಾಷ್ಟ್ರಕ್ಕೆ ಕರೆ ನೀಡಿದರು. ಬ್ಯಾರಿರ್ಸ್ಟ ಜೋಸೆಫ್ ಬ್ಯಾಪ್ಟಿಸ್ಟಾ ಅವರು ಹುಟ್ಟುಹಾಕಿದ್ದ ಸ್ವರಾಜ್ ವಿಚಾರಕ್ಕೆ ‘ಸ್ವರಾಜ್ ನನ್ನ ಜನ್ಮಸಿದ್ಧ ಹಕ್ಕು, ನಾನು ಅದನ್ನು ಪಡೆದೇ ಪಡೆಯುತ್ತೇನೆ’ ಎಂದು ಬಾಲಗಂಗಾಧರ ತಿಲಕರು ಘೋಷಿಸಿ, ಬ್ರಿಟಿಷ್ ಇಂಡಿಯಾದಾದ್ಯಂತ ವ್ಯಾಪಿಸಿರುವ ವಿವಿಧ ಜಾತಿಗಳು, ಮತಗಳು ಮತ್ತು ಧರ್ಮಗಳನ್ನು ಒಳಗೊಂಡ ಭಾರತೀಯ ಜನರಿಗೆ ಸ್ವರಾಜ್ ಎಂದು ಅವರು ಉಲ್ಲೇಖಿಸಿದ್ದರು.

ಈ ರಾಷ್ಟ್ರ ಮತ್ತು ರಾಷ್ಟ್ರೀಯತೆಯು ಭೌಗೋಳಿಕ, ಭಾಷೆ, ಧರ್ಮ, ಅಥವಾ ಜನಾಂಗದವರಿಂದ ಆದದ್ದಲ್ಲ. ಗಾಂಧೀಜಿಯವರು ವಿವರಿಸಿದಂತೆ, ಭಾರತೀಯ ರಾಷ್ಟ್ರೀಯತೆಯು ಹೊರಗಿಡುವ, ಅಥವಾ ಆಕ್ರಮಣಕಾರಿ, ಅಥವಾ ವಿನಾಶಕಾರಿ ಅಲ್ಲ.

ಪಂಡಿತ್ ಜವಾಹರಲಾಲ್ ನೆಹರು ಅವರ ‘ಡಿಸ್ಕವರಿ ಆಫ್ ಇಂಡಿಯಾ’ ನಲ್ಲಿ ಸ್ಪಷ್ಟವಾಗಿ ವ್ಯಕ್ತಪಡಿಸಿದಂತೆ ನಾನು ಭಾರತದಲ್ಲಿ ಹಿಂದೂ, ಮುಸ್ಲಿಂ, ಸಿಖ್ ಮತ್ತು ಇತರ ಗುಂಪುಗಳ ಸೈದ್ಧಾಂತಿಕ ಸಮ್ಮಿಳನದಿಂದ ರಾಷ್ಟ್ರೀಯತಾವಾದವು ಮಾತ್ರ ಬರಬಹುದೆಂದು ನನಗೆ ಮನವರಿಕೆಯಾಗಿದೆ. ಬ್ರಿಟಿಷ್ ಆಳ್ವಿಕೆಯ ವಿರುದ್ಧದ ನಮ್ಮ ಚಳವಳಿಯ ಪ್ರಕ್ರಿಯೆಯಲ್ಲಿ, ದೇಶಾದ್ಯಂತದ  ವಸಾಹತುಶಾಹಿ ವಿರೋಧಿ, ಮತ್ತು ಬ್ರಿಟಿಷ್ ವಿರೋಧಿ ಪ್ರಗತಿಶೀಲ ಚಳುವಳಿಗಳು ಹೆಚ್ಚಾಗಿ, ತಮ್ಮ ವೈಯಕ್ತಿಕಕ್ಕಿಂತ ದೇಶಭಕ್ತಿಯ ಭಾವನೆ, ಸೈದ್ಧಾಂತಿಕ ಮತ್ತು ರಾಜಕೀಯ ಒಲವು ಹೆಚ್ಚಿ ರಾಷ್ಟ್ರೀಯತೆ ಜಾಗೃತವಾಯಿತು.

 

ನಾವು 1947 ರಲ್ಲಿ ಸ್ವಾತಂತ್ರ್ಯವನ್ನು ಪಡೆದೆವು. ರಾಜಾಡಳಿತವಿದ್ದ ಭಾರತದ ರಾಜ್ಯಗಳು ಭಾರತದ ಏಕೀಕರಣದಲ್ಲಿ ಒಂದಾದವು. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರಯತ್ನಗಳಿಗೆ ಧನ್ಯವಾದಗಳು. ರಾಜ್ಯಗಳ ಪುನರ್ ರಚನೆಯ ಆಯೋಗದ ಶಿಫಾರಸಿನ ಮೇರೆಗೆ ರಾಜ್ಯಗಳ ರಚನೆಯ ನಂತರ ಪ್ರಾಂತೀಯ ಮತ್ತು ರಾಜಾಡಳಿತ ರಾಜ್ಯಗಳ ಸಂಪೂರ್ಣ ಏಕೀಕರಣವು ನಡೆಯಿತು.

 

26 ಜನವರಿ 1950 ರಂದು, ಭಾರತದ ಸಂವಿಧಾನ ಜಾರಿಗೆ ಬಂದಿತು. ಆದರ್ಶವಾದ ಮತ್ತು ಧೈರ್ಯದ ಗಮನಾರ್ಹ ಪ್ರದರ್ಶನದಲ್ಲಿ, ನಾವು ಭಾರತದ ಜನರು ನಮ್ಮ ಎಲ್ಲಾ ನಾಗರಿಕರಿಗೆ ನ್ಯಾಯ, ಸ್ವಾತಂತ್ರ್ಯ ಮತ್ತು ಸಮಾನತೆಯ ರಕ್ಷಣೆ ನೀಡಲು ಸಾರ್ವಭೌಮ ಪ್ರಜಾಪ್ರಭುತ್ವ ಗಣರಾಜ್ಯವನ್ನು ಒಪ್ಪಿಕೊಂಡೆವು. ಶತಮಾನಗಳ ಕಾಲ ವಸಾಹತು ಆಳ್ವಿಕೆಯಿಂದ ಸೃಷ್ಟಿಯಾದ ಬಡತನದಿಂದ ಪುನರುತ್ಪಾದನೆಯ ಕಡೆಗೆ ಬರಲು  ಪ್ರಜಾಪ್ರಭುತ್ವವು ನಮಗೆ ಅತ್ಯಂತ ಅಮೂಲ್ಯ ಮಾರ್ಗದರ್ಶಿಯಾಯಿತು. 395 ಆರ್ಟಿಕಲ್ಸ್ ಮತ್ತು 12 ಶೆಡ್ಯೂಲ್ಗಳನ್ನು ಒಳಗೊಂಡಿರುವ ಭಾರತೀಯ ಸಂವಿಧಾನವು ಕೇವಲ ಕಾನೂನು ದಾಖಲೆಯಾಗಿಲ್ಲ; ದೇಶದ ಸಾಮಾಜಿಕ–ಆರ್ಥಿಕ ರೂಪಾಂತರದ ಮ್ಯಾಗ್ನಾ ಕಾರ್ಟಾ. ಇದು ಕೋಟ್ಯಂತರ ಭಾರತೀಯರ ಭರವಸೆಯನ್ನು ಮತ್ತು ಆಕಾಂಕ್ಷೆಗಳನ್ನು ಪ್ರತಿನಿಧಿಸುತ್ತದೆ.

ನಮ್ಮ ಸಂವಿಧಾನ ಮೂಲಕ ನಮ್ಮ ರಾಷ್ಟ್ರೀಯತೆ ಹರಿಯುತ್ತದೆ. ಭಾರತೀಯ ರಾಷ್ಟ್ರೀಯತೆಯ ನಿರ್ಮಾಣವು ‘ಸಾಂವಿಧಾನಿಕ ದೇಶಭಕ್ತಿ’ ಆಗಿದೆ.

 

ಭಾರತದ ಆತ್ಮವು ಬಹುತ್ವ ಮತ್ತು ಸಹಿಷ್ಣುತೆಗಳಲ್ಲಿ ನೆಲೆಸಿದೆ. ನಮ್ಮ ಸಮಾಜದ ಈ ವಿವಿಧತೆಯು ಶತಮಾನಗಳ ಚಿಂತನೆಗಳ ಸಮೀಕರಣದ ಮೂಲಕ ಬಂದಿದೆ. ಸೆಕ್ಯುಲರಿಸಂ ಮತ್ತು ಒಳಗೊಳ್ಳುವಿಕೆ ನಮಗೆ ನಂಬಿಕೆಯ ವಿಷಯವಾಗಿದೆ. ಇದು ನಮ್ಮ ಸಂಯುಕ್ತ ಸಂಸ್ಕೃತಿಯಾಗಿದ್ದು, ಅದು ನಮ್ಮನ್ನು ಒಂದು ರಾಷ್ಟ್ರವನ್ನಾಗಿ ಮಾಡುತ್ತದೆ.

ಭಾರತದ ರಾಷ್ಟ್ರೀಯತೆ ನಿಂತಿರುವುದು ಒಂದು ಭಾಷೆಯಿಂದಲ್ಲ, ಒಂದು ರಿಲಿಜನ್ ನಿಂದಲ್ಲ, ಒಂದು ಶತ್ರುವಿನಿಂದಲ್ಲ. 122ಕ್ಕೂ ಹೆಚ್ಚಿನ ಭಾಷೆಗಳು ಮತ್ತು ತಮ್ಮ ದೈನಂದಿನ ಜೀವನದಲ್ಲಿ 1600 ಉಪಭಾಷೆಗಳನ್ನು ಬಳಸಿಕೊಳ್ಳುವ 1.3 ಶತಕೋಟಿ ಜನರ ‘ಪೆರೆನಿಯಲ್ ಯೂನಿವರ್ಸಲಿಸಂ’ ಇದು. 7 ಪ್ರಮುಖ ಮತಗಳನ್ನು ಅನುಸರಿಸುತ್ತ ಭಾರತದಲ್ಲಿ ಮೂರು ಪ್ರಮುಖ ಜನಾಂಗೀಯ ಗುಂಪುಗಳಾದ ಆರ್ಯನ್ನರು, ಮಂಗೋಲಿಯನ್ ಮತ್ತು ದ್ರಾವಿಡರು ಒಂದೇ ವ್ಯವಸ್ಥೆಯಲ್ಲಿ ವಾಸಿಸುತ್ತಾರೆ. ಒಂದು ಧ್ವಜ ಮತ್ತು ‘ಭಾರತಿ’ಯ ಎಂಬ ಒಂದು ಗುರುತಿನಡಿ ನಾವೆಲ್ಲ ಬದುಕುತ್ತೇವೆ; ಮತ್ತು ನಮಗೆ ಶತ್ರುಗಳು ಇಲ್ಲ. ಇವುಗಳೇ ಭಾರತವನ್ನು ವೈವಿಧ್ಯಮಯ ಮತ್ತು ಏಕೀಕೃತ ರಾಷ್ಟ್ರವನ್ನಾಗಿಸಿದೆ.

 

 

ಪ್ರಜಾಪ್ರಭುತ್ವದಲ್ಲಿ, ರಾಷ್ಟ್ರೀಯ ಪ್ರಾಮುಖ್ಯತೆಯ ಎಲ್ಲ ವಿಚಾರಗಳನ್ನು ಸಾರ್ವಜನಿಕರಿಗೆ ತಲುಪಿಸುವುದು ಮತ್ತು ಚರ್ಚೆಗಿಡುವುದು ಅತಿ ಮುಖ್ಯವಾಗಿದೆ. ಸ್ಪರ್ಧಾತ್ಮಕ ಆಸಕ್ತಿಗಳನ್ನು ಸಮತೋಲನಗೊಳಿಸುವುದಷ್ಟೇ ಅಲ್ಲದೆ ಅವುಗಳನ್ನು ಸಮನ್ವಯಗೊಳಿಸಲು ಸಹ ಒಂದು ಸಂವಾದ ಅವಶ್ಯಕ. ಸಾರ್ವಜನಿಕ ಚರ್ಚೆಗಳಲ್ಲಿ ವಿಭಿನ್ನವಾದ ಎಳೆಗಳನ್ನು ಗುರುತಿಸಬೇಕು. ನಾವು ವಾದಿಸಬಹುದು, ನಾವು ಒಪ್ಪಿಕೊಳ್ಳಬಹುದು ಅಥವಾ ನಾವು ಒಪ್ಪಿಕೊಳ್ಳದಿರಬಹುದು. ಆದರೆ ಬಹುಮತದ ಅಭಿಪ್ರಾಯದ ಅವಶ್ಯಕತೆಯನ್ನು ನಾವು ನಿರಾಕರಿಸಲಾಗುವುದಿಲ್ಲ.

 

 

GENERAL STUDIES PAPER-2(ಸಾಮಾನ್ಯ ಅಧ್ಯಾಯ2)

 

2.Discuss the organizational structure, vision and functioning of the Organisation for the Prohibition of Chemical Weapons (OPCW).

(ರಾಸಾಯನಿಕ ಶಸ್ತ್ರಾಸ್ತ್ರಗಳ ನಿಷೇಧ ಸಂಸ್ಥೆ  (ಒಪಿಸಿಡಬ್ಲ್ಯೂ)   ಸಂಘಟನೆಯ ರಚನೆ, ದೃಷ್ಟಿ ಮತ್ತು ಕಾರ್ಯಚಟುವಟಿಕೆಗಳನ್ನು ಚರ್ಚಿಸಿ. )

(150 ಪದಗಳು)

 

ಸಂಘಟನೆಯ ರಚನೆ

ರಾಸಾಯನಿಕ ಶಸ್ತ್ರಾಸ್ತ್ರಗಳ ನಿಷೇಧ ಸಂಸ್ಥೆ  1997  ರಲ್ಲಿ ಸ್ಥಾಪನೆಯಾದ ಒಪಿಸಿಡಬ್ಲ್ಯೂ ನೆದರಲ್ಯಾಂಡ ಹೇಗ್ ನಗರದಲ್ಲಿ ಕೇಂದ್ರ ಕಚೇರಿ ಹೊಂದಿದೆ. ರಸಾಯನಿಕ ಅಸ್ತ್ರಗಳ ಒಡಬಂಡಿಕೆಯನ್ನು ಅಂತಾರಾಷ್ಟ್ರೀಯ ಕಾನೂನು ವ್ಯಾಪ್ತಿಯಲ್ಲಿ ಅನುಷ್ಟಾನಕ್ಕೆ ತರುವಲ್ಲಿ ಈ ಸಂಘಟನೆ ಪ್ರಯತ್ನ ನಡೆಸುತ್ತಿದೆ. ರಾಸಾಯನಿಕ ಅಸ್ತ್ರಗಳ ಬಳಕೆ,ಉತ್ಪಾದನೆ ಮೇಲೆ ನಿಗಾ ಇಡುವದಷ್ಟೆ ಅಲ್ಲದೆ ಅವುಗಳನ್ನು ನಾಶಪಡಿಸುವಲ್ಲಿ ಈ ಸಂಘಟನೆ ಮಹತ್ವ ಪಾತ್ರವಹಿಸುತ್ತದೆ. ವಿಶ್ವಾದ್ಯಂತ ಒಟ್ಟು 193 ರಾಷ್ಟ್ರಗಳು ಒಪಿಸಿಡಬ್ಲ್ಯೂ ಸದಸ್ಯತ್ವ ಪಡದಿವೆ.

ಈ ಸಂಘಟನೆಯ ಮುಖ್ಯ ದೃಷ್ಟಿಯೆಂದರೆ

 

ಒಪಿಸಿಡಬ್ಲ್ಯೂ ಸದಸ್ಯ ರಾಷ್ಟ್ರಗಳು ರಸಾಯನ ಶಾಸ್ತ್ರವನ್ನು ತಡೆಗಟ್ಟುವ ಸಾಮೂಹಿಕ ಉದ್ದೇಶವನ್ನು ಹೊಂದಿದೆ . ಇದರಿಂದ ಅಂತರಾಷ್ಟ್ರೀಯ ಭದ್ರತೆಯನ್ನು ಬಲಪಡಿಸುತ್ತದೆ. ಈ ನಿಟ್ಟಿನಲ್ಲಿ,  ಆ ಸಂಘಟನೆಯಲ್ಲಿ ನಾಲ್ಕು ಪ್ರಮುಖ ಅವಕಾಶಗಳಿವೆ ಅವುಗಳೆಂದರೆ

 

  • ಅಂತರಾಷ್ಟ್ರೀಯ ಪರಿಶೀಲನೆಯ ಅಡಿಯಲ್ಲಿ ಅಸ್ತಿತ್ವದಲ್ಲಿರುವ ಎಲ್ಲಾ ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ಒಪಿಸಿಡಬ್ಲ್ಯೂ ನಾಶಪಡಿಸುತ್ತದೆ
  • ಹೊಸ ಶಸ್ತ್ರಾಸ್ತ್ರಗಳನ್ನು ಹೊರಹೊಮ್ಮುವಿಕೆಯನ್ನು ತಡೆಗಟ್ಟಲು ರಾಸಾಯನಿಕ ಉದ್ಯಮವನ್ನು ಉಸ್ತುವಾರಿ ಮಾಡಲಾಗುತ್ತದೆ .
  • ರಾಸಾಯನಿಕ ಬೆದರಿಕೆಗಳ ವಿರುದ್ಧ ಸಂಬಂದಿಸಿದ  ರಾಷ್ಟ್ರಕ್ಕೆ  ನೆರವು ಮತ್ತು ರಕ್ಷಣೆ ಒದಗಿಸುವುದು.
  • ರಸಾಯನ ಶಾಸ್ತ್ರದ ಶಾಂತಿಯುತ ಬಳಕೆಯನ್ನು ಉತ್ತೇಜಿಸಲು ಅಂತರರಾಷ್ಟ್ರೀಯ ಸಹಕಾರವನ್ನು ಬೆಳೆಸುವುದು.

 

ಇದರ ಮುಖ್ಯ ಕಾರ್ಯ ಚಟುವಟಿಕೆಗಳು

 

  • ಆಕ್ರಮಣದಲ್ಲಿ ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ಬಳಸಲಾಗಿದೆಯೆ ಎಂದು ತನಿಖೆ ನಡೆಸಿ  ಪತ್ತೆಹಚ್ಚುವ ಅಧಿಕಾರವನ್ನು  ಒಪಿಸಿಡಬ್ಲ್ಯೂ  ಹೊಂದಿದೆ.
  • ರಾಸಾಯನಿಕ ಶಸ್ತ್ರಾಸ್ತ್ರಗಳ ಸಮಾವೇಶ (ಸಿಡಬ್ಲ್ಯೂಸಿ) ಯಲ್ಲಿನ    ನಿಬಂಧನೆಗಳ ಅನುಷ್ಠಾನವನ್ನು ಖಚಿತಪಡಿಸುವುದು ಸಂಘಟನೆಯ ಮುಖ್ಯ ಕಾರ್ಯವಾಗಿದೆ.
  • ಒಪಿಸಿಡಬ್ಲ್ಯೂ ನ ಅಂತರರಾಷ್ಟ್ರೀಯ ಸಹಕಾರ ಕಾರ್ಯಕ್ರಮಗಳು ರಸಾಯನಶಾಸ್ತ್ರದ ಶಾಂತಿಯುತ ಅನ್ವಯಗಳ ಸಾಮರ್ಥ್ಯದ   ಮೇಲೆ ಕೇಂದ್ರೀಕರಿಸುತ್ತವೆ.
  • ಯಾವುದೇ ರಾಷ್ಟ್ರ ದ ಮೇಲೆ ರಾಸಾಯನಿಕ ದಾಳಿನಡೆಸಿದರೆ ಸಂಬಂದಿಸಿದ ರಾಷ್ಟ್ರವು ಕೋರಿಕೆಯ ಮೇರೆಗೆ ಪ್ರಸ್ತುತಪಡಿಸಿದ ಪುರಾವೆಗಳ ಪರಿಶೀಲನೆಯ ನಂತರ ಮಾತ್ರ
  • ಒಪಿಸಿಡಬ್ಲ್ಯೂ ತನಿಖೆಯನ್ನು  ಪ್ರಾರಂಭಿಸುತ್ತದೆ . ಇದಲ್ಲದೆ, ದ್ವಿಪಕ್ಷೀಯ ರಾಜತಾಂತ್ರಿಕ ಪರಿಹಾರಗಳು ವಿಫಲವಾದ ನಂತರ ಮಾತ್ರ  ಒಪಿಸಿಡಬ್ಲ್ಯೂ ತನಿಖೆಯಲ್ಲಿ  ತೊಡಗಿಸಿಕೊಳ್ಳುತ್ತದೆ.

 

 

GENERAL STUDIES PAPER-3(ಸಾಮಾನ್ಯ ಅಧ್ಯಾಯ3)

3.Every year we see that Indian farmers suffer both during surplus production and deficit production. Examine the reasons why and evaluate whether increasing MSP for crops would address the issue?

(ಭಾರತದಲ್ಲಿ  ಪ್ರತಿವರ್ಷ  ರೈತರು ಹೆಚ್ಚುವರಿ ಬೆಳೆಗಳ  ಉತ್ಪಾದನೆ ಮತ್ತು ಬೆಳೆಗಳ  ಉತ್ಪಾದನೆಯ ಕೊರತೆಯಲ್ಲಿ  ಬಳಲುತ್ತಿದ್ದಾರೆ ಎಂದು ನೋಡುತ್ತೇವೆ. ಬೆಳೆಗಳಿಗೆ  ಕನಿಷ್ಠ ಬೆಲೆಯನ್ನು  ಹೆಚ್ಚುಸುವುದರಿಂದ ಈ ಸಮಸ್ಯೆಯನ್ನು ಪರಿಹರಿಸುತ್ತದೆಯೇ  ಎನ್ನುವ  ಮೌಲ್ಯಮಾಪನ ಮಾಡುವ ಕಾರಣಗಳನ್ನು ಪರೀಕ್ಷಿಸಿ?)

 

(250 ಪದಗಳು)

ಕಳೆದ ವರ್ಷ ಸುಮಾರು 184 ರೈತರ ಗುಂಪುಗಳು ತಮಿಳುನಾಡು, ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರ ಪ್ರದೇಶ, ಪಂಜಾಬ್ ಮತ್ತು ತೆಲಂಗಾಣ  ಪ್ರದೇಶಗಳಿಂದ  ಪಾದಯಾತ್ರೆಯನ್ನು ನಡೆಸಿ ಕೃಷಿ ಉತ್ಪನ್ನಗಳಿಗೆ ಹೆಚ್ಚಿನ ಬೆಲೆ ಬೇಡಿಕೆಗೆ ಒತ್ತಾಯಿಸಿದರು  . ಈ ಪ್ರತಿಭಟನೆಯು ಮತ್ತೊಮ್ಮೆ ರೈತರ ಅವಸ್ಥೆಯನ್ನು ಮತ್ತು ಕೃಷಿಯ ದುಃಖದ ವ್ಯಾಪ್ತಿಯನ್ನು ಎತ್ತಿ ತೋರಿಸಿದೆ.

ರೈತರು ಪ್ರತಿಭಟನೆ ಸಾಮಾನ್ಯ ವಿದ್ಯಮಾನವಾಗಿ ಮಾರ್ಪಟ್ಟಿವೆ ಆದ್ದರಿಂದ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ.

 

ರೈತರ ಅನುಭವಿಸುವ ಸಮಸ್ಯೆಗಳು ಮತ್ತು   ಶಾಶ್ವತ ಪರಿಹಾರಕ್ಕೆ ಕೆಲ ಮಾರ್ಗಗಳು

 

ನಿರಂತರ ನೀರಾವರಿಯ ಆಶ್ರಯದಲ್ಲಿ ನಿರಾಯಾಸವಾಗಿ ಲಾಭದಾಯಕ ವಾಣಿಜ್ಯ ಬೆಳೆಯ  ಕೃಷಿಯಲ್ಲಿ ತೊಡಗಿಸಿಕೊಂಡಿರುವ ರೈತರು, ಕೆಲವೊಮ್ಮೆ ಎದುರಾಗುವ ಮಾರುಕಟ್ಟೆಯಂತಹ ಸಮಸ್ಯೆಗಳನ್ನು ನಿಭಾಯಿಸಲಾಗದೆ ಆತ್ಮಹತ್ಯೆಗೆ ಶರಣಾಗುತ್ತಿರುವಾಗ ಮಳೆಯಾಧಾರಿತ ಬೆಳೆಯನ್ನೇ ಅವಲಂಭಿಸಿರುವ ರೈತರ ಪಾಡು ಊಹಿಸಲಸಾಧ್ಯ.

 

ಪ್ರಾಕೃತಿಕ ವಿಕೋಪ, ಅನಿಶ್ಚಿತ ಮಾರುಕಟ್ಟೆ, ಸಾಲ ಸೌಲಭ್ಯಗಳ ಅಲಭ್ಯತೆ ಮುಂತಾದ ಪರಿಸ್ಥಿತಿ ಆಗಿಂದಾಗ ಉದ್ಭವಿಸುತ್ತಿರುವುದು ಸಾಮಾನ್ಯ. ಆದರೆ ಪ್ರಸ್ತುತ ವರ್ಷ     ಅತೀ ಹೆಚ್ಚು ಸಂಖ್ಯೆಯ ಅನ್ನದಾತರು, ಅದರಲ್ಲೂ ಹೆಚ್ಚಾಗಿ ಅಣೆಕಟ್ಟು ಪ್ರದೇಶದ ವ್ಯಾಪ್ತಿಗೆ ಬರುವ ಹಾಗೂ ಸಕ್ಕರೆ ಕಾರ್ಖಾನೆಗಳು ಕಾರ್ಯ ನಿರ್ವಹಿಸುತ್ತಿರುವ ಜಿಲ್ಲೆಗಳಲ್ಲಿ ನೇಣಿಗೆ ಕೊರಳೊಡ್ಡುತ್ತಿರುವುದು ನಿವಾರಣೆಯಾಗದೆ ಆಳವಾಗಿ ಕಾಡುತ್ತಿರುವ ಸಮಸ್ಯೆಗಳ ಇರುವಿಕೆಯ ಸ್ಪಷ್ಟ ಸಂದೇಶ.

 

ಕೃಷಿಕರು ಆರ್ಥಿಕವಾಗಿ ಹಾಗೂ ಮಾನಸಿಕವಾಗಿ ಸಬಲರಾಗಬೇಕಾದಲ್ಲಿ ಈ ಕೆಳಗೆ ವಿವರಿಸಿದ ಅಂಶಗಳ ಬಗ್ಗೆ  ತುರ್ತಾಗಿ ಪ್ರಾಮಾಣಿಕತೆಯಿಂದ ಕಾರ್ಯ ಪ್ರವೃತ್ತವಾಗದ ಹೊರತು ಪರಿಸ್ಥಿತಿ ನಿಯಂತ್ರಣ ಕಳೆದುಕೊಳ್ಳುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.

 

  • ನೈಸರ್ಗಿಕ ಏರುಪೇರು, ಸರಕಾರಗಳ ಆರ್ಥಿಕ ನೀತಿ, ತಾಂತ್ರಿಕ ತೊಂದರೆಗಳು, ಹಣಕಾಸಿನ ಅಡಚಣೆ ಇತ್ಯಾದಿ ಆಪತ್ತುಗಳನ್ನು ಎದುರಿಸಲು ಪೂರ್ವ ಸಿದ್ಧತೆ ಹಾಗೂ ಅಗತ್ಯವಿರುವ “ತುರ್ತು ನಿಧಿಯ’ ವ್ಯವಸ್ಥೆಗಳನ್ನು ಮುಂಜಾಗ್ರತ ಕ್ರಮವಾಗಿ ಸದಾ ಸಿದ್ಧವಾಗಿಡಬೇಕು.

 

  • ಅನುಕೂಲತೆಗಳನ್ನು ಗುರುತಿಸಿ ಮುಖ್ಯ ಬೆಳೆಯೊಂದಿಗೆ ಪರ್ಯಾಯ ಬೆಳೆಗಳನ್ನು ಬೆಳೆಯುವ ಬಗ್ಗೆ ರೈತರನ್ನು ಪ್ರರೇಪಿಸಿ ಅಗತ್ಯ ಸಲಹೆ, ಸಹಕಾರ ನೀಡಬೇಕು.

 

  • ಬಿತ್ತನೆ ಬೀಜ, ರಸಗೊಬ್ಬರ, ಕ್ರಿಮಿನಾಶಕ ಕೃಷಿ ಸಲಕರಣೆಗಳ ತಯಾರಕರು ಹಾಗೂ ವಿತರಕರ ಶೋಷಣೆಗೆ ಒಳಗಾಗದಂತೆ ನಿಗಾ ವಹಿಸುವ ವ್ಯವಸ್ಥೆ ಅನುಷ್ಠಾನವಾಗಬೇಕು.

 

  • ನೀರಾವರಿ, ವಿದ್ಯುತ್‌, ರಸ್ತೆ, ಸಂಸ್ಕರಣ ವ್ಯವಸ್ಥೆ, ಮೌಲ್ಯವರ್ಧನೆಗೆ ಪ್ರೋತ್ಸಾಹ, ಬೆಂಬಲ ಬೆಲೆ, ಶೀತಲಿಕರಣ, ಮಾರುಕಟ್ಟೆ ಮುಂತಾದ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಸರಕಾರಗಳು ಶೀಘ್ರ ಕ್ರಮ ಕೈಗೊಳ್ಳಬೇಕು.
  • ಕೇಂದ್ರ ಮತ್ತು ರಾಜ್ಯ ಸರಕಾರಗಳು ಹಲವಾರು ರೈತ ಪರ ಯೋಜನೆಗಳನ್ನು ಹಮ್ಮಿಕೊಂಡಿದ್ದು, ತಳಮಟ್ಟದಲ್ಲಿ ಇದರ ಪ್ರಯೋಜನವನ್ನು ತಲುಪಿಸುವಲ್ಲಿ ಸಂಬಂಧಿತ ಇಲಾಖಾ ಅಧಿಕಾರಿಗಳಿಂದ ಹೆಚ್ಚಿನ ಪರಿಣಾಮಕಾರಿ ಪ್ರಯತ್ನ ನಿರೀಕ್ಷಿಸಲಾಗುತ್ತಿದೆ.

 

  • ಕೃಷಿ ಸಂಶೋಧನೆಗಳ ಫ‌ಲ ಇನ್ನೂ ರೈತರ ಹೊಲಗಳನ್ನು ತಲುಪಿಸುವಲ್ಲಿ ವಿಸ್ತರಣಾ ವಿಭಾಗ ಹೆಚ್ಚಿನ ಕೆಲಸ ಮಾಡಬೇಕಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತದೆ.

 

  • ಕೃಷಿ ಮೂಲದ ಸಂಪಾದನೆಗೆ ಪೂರಕವಾಗಿ ಉಪ ಕಸುಬುಗಳಾದ ಹೈನುಗಾರಿಕೆ, ಕೋಳಿಸಾಗಾಣಿಕೆ, ಒಳನಾಡು, ಮೀನುಗಾರಿಕೆ, ರೇಷ್ಮೆ ಮುಂತಾದ ವೃತ್ತಿಗಳಿಗೆ ಮೂಲ ಸೌಕರ್ಯ ಮತ್ತು ಪ್ರೋತ್ಸಾಹ ನೀಡುವಲ್ಲಿ ಸರಕಾರ ಹಾಗೂ ಹಣಕಾಸು ಸಂಸ್ಥೆಗಳಿಂದ ಸಹಕಾರ ದೊರೆಯಬೇಕಾಗಿದೆ.

 

  • ಭೂ ದಾಖಲೆಗಳ ಅಲಭ್ಯತೆ ಹೆಚ್ಚಿನ ಸಂಖ್ಯೆಯ ರೈತರನ್ನು ಸಹಕಾರಿ ಹಾಗೂ ಬ್ಯಾಂಕುಗಳ ಸಾಲ ಸೌಲಭ್ಯಗಳಿಂದ ವಂಚಿತರನ್ನಾಗಿಸಿದೆ. ಅದರಿಂದಾಗಿಯೇ ರೈತರು ಸುಲಭಕ್ಕೆ ಸಾಲ ನೀಡುವ ಖಾಸಗಿ ಲೇವಾದೇವಿಗಾರರ ಬಳಿ ಹೋಗುತ್ತಾರೆ. ಈ ನಿಟ್ಟಿನಲ್ಲಿ ವಸ್ತು ನಿಷ್ಠವಾದ ಕ್ರಮಗಳನ್ನು ಕಂದಾಯ ಇಲಾಖೆ ಕೈಗೊಳ್ಳಬೇಕಾಗಿದೆ.

 

  • ವಿಮಾ ಸಂಸ್ಥೆಗಳು ವಾಸ್ತವಿಕ ದೃಷ್ಟಿಕೋನದಿಂದ ರೈತರ ಸಂಕಷ್ಟಗಳಿಗೆ ಸ್ಪಂದಿಸುವ ವ್ಯವಸ್ಥೆ ಜಾರಿಯಲ್ಲಿರಬೇಕು.

 

  • ಸಾಲ ಮಂಜೂರಾತಿ ಹಾಗೂ ವಿತರಣ ಕ್ರಮಗಳನ್ನು ಸರಳೀಕರಣಗೊಳಿಸುವುದರೊಂದಿಗೆ ಸಕಾಲಿಕವಾಗಿ ಅಗತ್ಯಕ್ಕೆ ಅನುಗುಣವಾದ ಬಂಡವಾಳ ಪೂರೈಕೆಗೆ ಹಣಕಾಸು ಸಂಸ್ಥೆಗಳು ಒತ್ತು ನೀಡಬೇಕು. ಸಾಲದ ನಿರ್ವಹಣೆಯಲ್ಲಿ ರೈತರಿಗೆ ಮಾರ್ಗದರ್ಶನ ನೀಡಲು ಕೃಷಿ ಪದವೀಧರರಿಂದ ತಾಂತ್ರಿಕ ಅಧಿಕಾರಿಗಳ ಸೇವೆಯನ್ನು ಬ್ಯಾಂಕುಗಳು ಸಮರ್ಪಕವಾಗಿ ಬಳಸಿಕೊಳ್ಳಬೇಕು.

 

  • ಉತ್ತಮ ಪಸಲು, ಧಾರಣೆ ಲಭ್ಯವಾದ ಸಂದರ್ಭದಲ್ಲಿ ಗಳಿಸಿದ ಸಂಪಾದನೆಯಲ್ಲಿ ಮುಂದಿನ ದಿನಗಳ ನಿರ್ವಹಣೆಗೆ ಉಳಿತಾಯ ಮಾಡುವ ಹವ್ಯಾಸವನ್ನು ಪ್ರೋತ್ಸಾಹಿಸುವ ಆಕರ್ಷಕ ಯೋಜನೆಗಳೊಂದಿಗೆ ಸರಕಾರ, ಸ್ವಯಂ ಸೇವಾ ಸಂಸ್ಥೆಗಳು, ಸ್ವಸಹಾಯ ಸಂಘಗಳು ಹಾಗೂ ಬ್ಯಾಂಕುಗಳು ಶ್ರಮಿಸಬೇಕು.

 

  • ಸಾಮಾಜಿಕ ಪಿಡುಗುಗಳಾದ ಜೂಜು, ಮದ್ಯಸೇವನೆ, ದುಂದುವೆಚ್ಚ ಮುಂತಾದ ಚಟುವಟಿಕೆಗಳಿಂದ ದೂರವಿರುವಂತೆ ಪೇರೇಪಿಸಿ ರೈತರಲ್ಲಿ ಆರ್ಥಿಕ ಶಿಸ್ತು ಬೆಳೆಯುವಂತೆ ಸ್ವಸಹಾಯ ಸಂಘಗಳು ಸ್ವಯಂ ಸೇವಾ ಸಂಸ್ಥೆಗಳು ಪ್ರಾಮಾಣಿಕ ಯತ್ನವನ್ನು ಮುಂದುವರಿಸಬೇಕು.

 

  ಕನಿಷ್ಠ ಬೆಲೆಯನ್ನು  ಹೆಚ್ಚುಸುವುದರಿಂದ ಈ ಸಮಸ್ಯೆಯನ್ನು ಪರಿಹರಿಸುತ್ತದೆಯೇ

 

  • ಪ್ರಸಕ್ತ ರೈತರು ಬೆಳೆಯುವ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯಲ್ಲಿ ಕೇಂದ್ರ ಸರಕಾರ ಭಾರಿ ಹೆಚ್ಚಳ ಮಾಡಿರುವುದು ಸ್ವಾಗತಾರ್ಹ.   ಈ ನಿರ್ಧಾರ ಐತಿಹಾಸಿಕ ಎಂದೇ ಹೇಳಬಹುದಾಗಿದೆ. ಏಕೆಂದರೆ ರೈತರ ಬೆಳೆಗಳಿಗೆ ನ್ಯಾಯಯುತ ಹಾಗೂ ಲಾಭದಾಯಕ ಬೆಲೆ ನೀಡುವಂತಾಗುತ್ತದೆ .  ಇದು ದೇಶದ ಅನ್ನದಾತರಿಗೆ ಸಂಬಂಧಿಸಿದ ವಿಷಯವಾಗಿರುವುದರಿಂದ ಹಾಗೂ ಅಗತ್ಯವಾಗಿರುವುದರಿಂದ ಈ ಕ್ರಮ ರೈತರಲ್ಲಿ ಸಂತಸ ಹಾಗೂ ನೆಮ್ಮದಿ ಮೂಡಿಸಬಹುದು. ಭತ್ತ, ಜೋಳ, ರಾಗಿ ಸಹಿತ ಹಲವು ಧಾನ್ಯಗಳು, ತೊಗರಿ ಸೇರಿದಂತೆ ಕೆಲವು ಬೇಳೆಕಾಳುಗಳು ಹಾಗೆಯೇ ನೆಲಗಡಲೆ, ಹತ್ತಿ ಸೇರಿ ಒಟ್ಟು 24 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಘೋಷಿಸಲಾಗುತ್ತದೆ.
  • ಇದುವರೆಗೆ ಪ್ರಕಟಿಸಲಾದ ಯಾವ ಬೆಂಬಲ ಬೆಲೆ ಸಂದರ್ಭದಲ್ಲೂ ಇಷ್ಟರಮಟ್ಟಿನ ಹೆಚ್ಚಳ ಮಾಡಲಾಗಿರಲಿಲ್ಲ. ಬೆಂಬಲ ಬೆಲೆಯು ಉತ್ಪಾದನಾ ವೆಚ್ಚದ ಒಂದೂವರೆ ಪಟ್ಟಿನಷ್ಟು ಇರಬೇಕೆಂಬುದು ಸ್ವಾಮಿನಾಥನ್‌ ವರದಿಯ ಶಿಫಾರಸು. ಈಗ ಘೋಷಿಸಿರುವ ಬೆಂಬಲ ಬೆಲೆ ಹೆಚ್ಚೂ ಕಡಿಮೆ ಆ ಪ್ರಮಾಣದಲ್ಲಿಯೇ ಇದೆ .
  • ಬೆಂಬಲ ಬೆಲೆಯಲ್ಲಿ ಭಾರಿ ಹೆಚ್ಚಳ ಹಾಗೂ ಉತ್ತಮ ಮುಂಗಾರು ಮಳೆಯ ಮುನ್ಸೂಚನೆ ಇವೆರಡೂ ಕಾರಣಗಳಿಂದ   ದೇಶದಲ್ಲಿ ಬಂಪರ್‌ ಆಹಾರ ಉತ್ಪಾದನೆ ಆಗುವ ಸಾಧ್ಯತೆ ಇದ್ದು ಇದು ದೇಶದ ಆರ್ಥಿಕ ಪ್ರಗತಿಗೆ ಕಾರಣವಾಗಲಿದೆ.

 

ಹಾಗೆಂದು ಬೆಂಬಲ ಬೆಲೆ ಘೋಷಿಸಿದ ಮಾತ್ರಕ್ಕೆ ಎಲ್ಲವೂ ಮುಗಿದುಹೋಯಿತು ಎಂದಲ್ಲ. ಏಕೆಂದರೆ ಅದು ಸಮರ್ಪಕವಾಗಿ ಜಾರಿಗೆ ಬಂದು ಅದರ ಲಾಭ ರೈತರಿಗೆ ತಲುಪಿದಾಗ ಮಾತ್ರ ಅದು ಸಾರ್ಥಕವಾಗಲು ಸಾಧ್ಯ. ಏಕೆಂದರೆ ಭಾರತೀಯ ಆಹಾರ ನಿಗಮವು ಬೆಂಬಲ ಬೆಲೆಗೆ ಆಹಾರಧಾನ್ಯಗಳನ್ನು ಖರೀದಿಸಿ ಅದನ್ನು ಪಡಿತರ ವ್ಯವಸ್ಥೆಗೆ ನೀಡುತ್ತದೆ. ಆದರೆ ಇದಕ್ಕೆ ರಾಜ್ಯ ಸರಕಾರಗಳ ಸಕ್ರಿಯ ಸಹಾಯ, ಸರಕಾರ ಮತ್ತು ಪಾಲ್ಗೊಳ್ಳುವಿಕೆ ಅತಿ ಮುಖ್ಯ. ರೈತರಿಂದ ಆಹಾರಧಾನ್ಯಗಳನ್ನು ಖರೀದಿಸಲು ರಾಜ್ಯ ಸರಕಾರಗಳು ಸೂಕ್ತ ವ್ಯವಸ್ಥೆ ಮಾಡಬೇಕಾಗುತ್ತದೆ. ಖರೀದಿ ಕೇಂದ್ರಗಳ ಆರಂಭ, ರೈತರಿಗೆ ಆ ಕುರಿತು ಸೂಕ್ತ ಮಾಹಿತಿ ನೀಡುವುದು ಇತ್ಯಾದಿ ಕೆಲಸಗಳನ್ನು ಮಾಡುವ ಜವಾಬ್ದಾರಿಯನ್ನು ಸಂಬಂಧಪಟ್ಟ ರಾಜ್ಯ ಸರಕಾರಗಳೇ ವಹಿಸಿಕೊಳ್ಳಬೇಕಾಗುತ್ತದೆ. ಖರೀದಿ ಕೇಂದ್ರಗಳಲ್ಲಿ ಸೂಕ್ತ ಮಾಹಿತಿ, ನೆರವು ನೀಡಬೇಕು. ಅಲ್ಲಿ ಅಗತ್ಯ ಸೌಲಭ್ಯ ಇರುವಂತೆ ನೋಡಿಕೊಳ್ಳಬೇಕು. ನಾನಾ ಕಾರಣ ನೀಡಿ ಖರೀದಿಸದೆ ವಾಪಸು ಕಳಿಸುವ, ಖರೀದಿಸಿದ ಉತ್ಪನ್ನಗಳಿಗೆ ತಿಂಗಳುಗಟ್ಟಲೆ ಹಣ ನೀಡದಿರುವುದೇ ಮೊದಲ ಸಮಸ್ಯೆಗಳನ್ನು ರೈತರು ಎದುರಿಸುತ್ತಾರೆ. ಅಧಿಕಾರಿಗಳು ಆಸಕ್ತಿಯಿಂದ ಕೆಲಸಮಾಡದೆ ಈ ರೀತಿ ಉದಾಸೀನ ತೋರಿದರೆ ರೈತರು ಬೇಸತ್ತು ವಿಮುಖರಾಗುವ ಸಾಧ್ಯತೆ ಇರುತ್ತದೆ. ಹೀಗಾಗದಂತೆ ಎಚ್ಚರ ವಹಿಸಬೇಕು.

 

ಒಟ್ಟಾರೆ ಹೇಳುವುದಾದರೆ ಈಗ ಘೋಷಿಸಿರುವ ಬೆಂಬಲ ಬೆಲೆಯ ಲಾಭ ಕಟ್ಟಕಡೆಯ ರೈತನಿಗೂ ತಲುಪಿ ಅದರ ಉದ್ದೇಶ ಸಾರ್ಥಕವಾಗಬೇಕು. ಆ ನಿಟ್ಟಿನಲ್ಲಿ ಅಗತ್ಯ ಹಾಗೂ ಸೂಕ್ತ ಕ್ರಮಗಳನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೈಗೊಳ್ಳಬೇಕು.

 

 

CLICK HERE TO JOIN NIALP FOUNDATION COURSE-2019

 

 

 

Share