13th JUNE.-DAILY CURRENT AFFAIRS BRIEF

 

 

13th JUNE

 

1.ಸ್ವಚ್ಛ ಸಾಂಪ್ರದಾಯಿಕ ಸ್ಥಳಗಳು(Swachh Iconic Places)

ಪ್ರಮುಖ ಅಂಶಗಳು

  • ಸಾಂಪ್ರದಾಯಿಕ ಸ್ಥಳಗಳಲ್ಲಿ ಶುಚಿತ್ವ ಮತ್ತು ನೈರ್ಮಲ್ಯ ಸೌಲಭ್ಯಗಳನ್ನು ಒದಗಿಸುವ ದೃಷ್ಟಿಯಿಂದ ಸ್ವಚ್ಛ ಸಾಂಪ್ರದಾಯಿಕ ಸ್ಥಳಗಳು( ಸಿಪ್) ಯೋಜನೆಯನ್ನು ಕೇಂದ್ರ ಸರ್ಕಾರ ರೂಪಿಸಿದೆ.
  • ಸಿಪ್ ಸ್ವಚ್ಛ ಭಾರತ ಅಭಿಯಾನದ ಭಾಗವಾಗಿದೆ. ಯೋಜನೆಯ ಮೂರನೇ ಹಂತದಲ್ಲಿ ಆಯ್ಕೆಯಾಗಿರುವ 10 ಸ್ಥಳಗಳಲ್ಲಿ ಶಬರಿಮಲೆ, ಮಂತ್ರಾಲಯ ಸ್ಥಾನವನ್ನು ಪಡೆದಿದೆ.

 

ಮುಖ್ಯ ಸಂಗತಿಗಳು

 

  • 2016ರಲ್ಲಿ ಯೋಜನೆ ಶುರುವಾಗಿದ್ದು ಮೊದಲ ಹಂತದಲ್ಲಿ ರಾಜಸ್ಥಾನದ ಅಜ್ಮೀರ್ ದರ್ಗಾ, ಮುಂಬೈನ ಛತ್ರಪತಿ ಶಿವಾಜಿ ಟರ್ಮಿನಸ್, ಪಂಜಾಬ್ ನ ಗೋಲ್ಡನ್ ಟೆಂಪಲ್ ಗಳಲ್ಲಿ ಯೋಜನೆಯನ್ನು ಅನುಷ್ಠಾನ ಮಾಡಲಾಗಿದೆ.
  • ಎರಡನೇ ಹಂತದಲ್ಲಿ ಮಧ್ಯಪ್ರದೇಶದ ಮಹಾಕಾಲೇಶ್ವರ್, ತೆಲಂಗಾಣದ ಚಾರ್ ಮಿನಾರ್ ಗಳಲ್ಲಿ ಯೋಜನೆ ಪೂರೈಸಿದ್ದು ಮೂರನೇ ಹಂತವನ್ನು ಉತ್ತರಾಖಂಡ್ ನ ಬದರೀನಾಥದಲ್ಲಿ ಶುರು ಮಾಡಲಾಗಿದೆ.
  • ಮೂರನೇ ಹಂತದಲ್ಲಿ ಪಶ್ಚಿಮ ಬಂಗಾಳ ಹಜಾಡ್ರ್ವಾರಿ ಅರಮನೆ, ಹರಿಯಾಣದ ಬ್ರಹ್ಮ ಸರೋವರ್, ಉತ್ತರ ಪ್ರದೇಶದ ವಿದುರ್ ಕುಟಿ, ಉತ್ತರಾಖಂಡ್‍ದ ಮನ ಗ್ರಾಮ, ಜಮ್ಮು ಮತ್ತು ಕಾಶ್ಮೀರದ ಪಾಂಗೊಂಗ್ ಸರೋವರ, ಉತ್ತರ ಪ್ರದೇಶದ ನಾಗವಾಸುಕಿ ದೇವಸ್ಥಾನ, ಮಣಿಪುರದ ಇಮಾಕೀಥಲ್ ಮಾರುಕಟ್ಟೆ ಹಾಗೂ ಉತ್ತರಾಖಂಡ್ ನ ಕನ್ವಾಶ್ರಮ್‍ವು ಸೇರಿಕೊಂಡಿದೆ.

 

 

BACK TO BASICS

 

ಸ್ವಚ್ಛ ಸಾಂಪ್ರದಾಯಿಕ ಸ್ಥಳಗಳ ಬಗ್ಗೆ

 

  • ಈ ಯೋಜನೆಗೆ 2016ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಚಾಲನೆ ನೀಡಿದ್ದರು. ಕೇಂದ್ರದ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯವು ಸಂಸ್ಕøತಿ ಹಾಗೂ ಪ್ರವಾಸೋದ್ಯಮ ಇಲಾಖೆಗಳ ಜೊತೆ ಸೇರಿ ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ಯೋಜನೆಯನ್ನು ಅನುಷ್ಟಾನಗೊಳಿಸುತ್ತಿದೆ.
  • ಪ್ರವಾಸಿ ಸ್ಥಳಗಳು ಆಗಿರುವುದರಿಂದ ಎಷ್ಟು ಸಾಧ್ಯವೋ ಅಷ್ಟು ಸ್ಥಳಗಳನ್ನು ಯೋಜನೆಯಲ್ಲಿ ಸೇರಿಸುವ ಪ್ರಯತ್ನ ಮಾಡುತ್ತಿದ್ದೇವೆ. ಸ್ವಚ್ಛವಾಗಿದ್ದಷ್ಟು ಹೆಚ್ಚು ಪ್ರವಾಸಿಗರನ್ನು ಸ್ಥಳಗಳು ಸೆಳೆಯುತ್ತವೆ.

 

  • ಮೊದಲ ಹಂತದಲ್ಲಿ ಆಯ್ಕೆಗೊಂಡ ಸ್ಥಳಗಳಲ್ಲಿ ಗುಣಾತ್ಮಕ ಕ್ರಮಗಳನ್ನು ತೆಗೆದುಕೊಂಡು ಒಳಚರಂಡಿ ಮೂಲಸೌಕರ್ಯ, ತ್ಯಾಜ್ಯ ನಿರ್ವಹಣೆ, ಶುದ್ಧ ನೀರು ಘಟಕಗಳು, ಸಾರಿಗೆ ವ್ಯವಸ್ಥೆಯಲ್ಲಿ ಸಾಕಷ್ಟು ಸುಧಾರಣೆಯಾಗಿರುವುದನ್ನು ಪರಿಶೀಲಿಸುತ್ತದೆ.

 

2.ಭಾರತ ಮತ್ತು ನೆದರ್ಲ್ಯಾಂಡ್ ನಡುವೆ ಪ್ರಾದೇಶಿಕ ಯೋಜನೆ

 

ಪ್ರಮುಖ ಸುದ್ದಿ

  • ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು ಭಾರತ ಮತ್ತು ನೆದರ್ಲ್ಯಾಂಡ್ ನಡುವೆ 2018 ರ ಏಪ್ರಿಲ್ ತಿಂಗಳಲ್ಲಿ ಅಂಕಿತ ಹಾಕಲಾದ ಪ್ರಾದೇಶಿಕ ಯೋಜನೆ, ಜಲ ನಿರ್ವಹಣೆ, ಮತ್ತು ಚಲನೆ ನಿರ್ವಹಣೆ ಕ್ಷೇತ್ರದಲ್ಲಿ ತಾಂತ್ರಿಕ ಸಹಕಾರ ಕುರಿತ ತಿಳುವಳಿಕಾ ಒಡಂಬಡಿಕೆಯನ್ನು ಪರಾಮರ್ಶಿಸಿತು

 

ಮುಖ್ಯ ಅಂಶಗಳು

 

  • ಅಂಕಿತ ಹಾಕಿದ ರಾಷ್ಟ್ರಗಳ ನಡುವೆ ಪ್ರಾದೇಶಿಕ ಯೋಜನೆ, ಜಲ ನಿರ್ವಹಣೆ ಮತ್ತು ಚಲನೆ ನಿರ್ವಹಣೆ ಕ್ಷೇತ್ರದಲ್ಲಿ ಸಹಕಾರ ವರ್ಧನೆ ಈ ತಿಳುವಳಿಕಾ ಒಡಂಬಡಿಕೆಯ ಉದ್ದೇಶಗಳಾಗಿವೆ.
  • ಕೈಗೆಟಕುವ ದರದಲ್ಲಿ ಮನೆ, ಸ್ಮಾರ್ಟ್ ನಗರಗಳ ಅಭಿವೃದ್ದಿ, ಜಲ ಸರಬರಾಜು ಮತ್ತು ತ್ಯಾಜ್ಯ ವ್ಯವಸ್ಥೆ , ತ್ಯಾಜ್ಯ ನೀರು ಸಂಸ್ಕರಣೆ ಮತ್ತು ಪುನರ್ಬಳಕೆ, ಭೌಗೋಳಿಕ ಮಾಹಿತಿ ವ್ಯವಸ್ಥೆ (ಜಿ.ಐ.ಎಸ್.),ಕೃತಕವಾಗಿ ಅಂತರ್ಜಲ ಮರುಪೂರಣ, ಸಮಗ್ರ ಘನ ತ್ಯಾಜ್ಯ ನಿರ್ವಹಣೆ ಮತ್ತು ಪರಂಪರೆ ಸಂರಕ್ಷಣೆ ಮತ್ತು ಉಭಯ ದೇಶಗಳ ಆವಶ್ಯಕತೆಗಳನ್ನು ಗಮನಿಸಿ ಪರಸ್ಪರ ಲಾಭದಾಯಕವಾಗುವ ವಿಷಯಗಳು ಇದರಲ್ಲಿ ಅಡಕವಾಗಿವೆ.

 

ಅನುಷ್ಟಾನ ತಂತ್ರಗಳು

 

  • ಈ ತಿಳುವಳಿಕಾ ಒಡಂಬಡಿಕೆಯಡಿ ಜಂಟಿ ಕಾರ್ಯ ಗುಂಪು (ಜೆ.ಡಬ್ಲ್ಯು.ಜಿ.) ಸ್ಥಾಪಿಸಿ ಒಡಂಬಡಿಕೆಯ ಚೌಕಟ್ಟಿನಡಿ ಸಹಕಾರಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಟಾನಿಸಲಾಗುತ್ತದೆ. ಜಂಟಿ ಕಾರ್ಯ ಗುಂಪು ವರ್ಷಕ್ಕೊಂದು ಬಾರಿ ಸಭೆ ಸೇರುತ್ತದೆ. ಸಭೆಗಳು ಪರ್ಯಾಯ ಮಾದರಿಯಲ್ಲಿ  ಒಂದು ವರ್ಷ ನೆದರ್ಲ್ಯಾಂಡಿನಲ್ಲಿ ಏರ್ಪಟ್ಟರೆ ಇನ್ನೊಂದು ವರ್ಷ ಭಾರತದಲ್ಲಿ ನಡೆಯುತ್ತವೆ

ಪ್ರಮುಖ ಪರಿಣಾಮ

 

  • ಈ ತಿಳುವಳಿಕಾ ಒಡಂಬಡಿಕೆಯು ಉಭಯ ದೇಶಗಳ ನಡುವೆ ಪ್ರಾದೇಶಿಕ ಯೋಜನೆ, ಜಲ ನಿರ್ವಹಣೆ ಮತ್ತು ಚಲನೆ ಆಡಳಿತ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರವನ್ನು ಉತ್ತೇಜಿಸಲಿದೆ.

ಪ್ರಯೋಜನಗಳು

 

  • ಈ ತಿಳುವಳಿಕಾ ಒಡಂಬಡಿಕೆ ಪ್ರಾದೇಶಿಕ ಯೋಜನೆ, ಜಲ ನಿರ್ವಹಣೆ ಮತ್ತು ಚಲನೆ  ನಿರ್ವಹಣೆ, ಸ್ಮಾರ್ಟ್ ನಗರಗಳ ಅಭಿವೃದ್ದಿ, ಕೈಗೆಟಕುವ ದರದಲ್ಲಿ ವಸತಿ, ತ್ಯಾಜ್ಯ ನಿರ್ವಹಣೆ, ನಗರ ಪರಿಸರ ಮತ್ತು ಪರಂಪರೆಯ ಸಂರಕ್ಷಣೆ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶ ಸೃಷ್ಟಿಯನ್ನು ಮಾಡುವ ನಿರೀಕ್ಷೆ ಇದೆ.

 

3.ಸಮುದ್ರ ತ್ಯಾಜ್ಯ ಮೂಲ ಪತ್ತೆಗೆ ಯೋಜನೆ

 

ಪ್ರಮುಖ ಸುದ್ದಿ

  • ದೇಶದ ಕರಾವಳಿಯುದ್ದಕ್ಕೂ ಇರುವ ಸಮುದ್ರ ತ್ಯಾಜ್ಯದ ಪ್ರಮಾಣ ಹಾಗೂ ಅದರ ಮೂಲ ಪತ್ತೆ ಮಾಡುವ ಚಟುವಟಿಕೆಯನ್ನು ಕೇಂದ್ರ ಭೂವಿಜ್ಞಾನ ಸಚಿವಾಲಯ ಆರಂಭಿಸಲಿದೆ

 

ಮುಖ್ಯ ಅಂಶಗಳು 

 

  • ಸಚಿವಾಲಯದ ‘ಸಮುದ್ರ ಮಾಹಿತಿ ಸೇವೆಗಳ ರಾಷ್ಟ್ರೀಯ ಕೇಂದ್ರ’ ಹಾಗೂ ಚೆನ್ನೈ ಮೂಲದ ಸಂಸ್ಥೆ ಜಂಟಿಯಾಗಿ ಈ ಕಾರ್ಯ ಕೈಗೆತ್ತಿಕೊಳ್ಳಲಿವೆ
  • ‘ಸಮುದ್ರ ತ್ಯಾಜ್ಯ ಪ್ರಸ್ತುತ ಭಾರಿ ಚರ್ಚೆ ಆಗುತ್ತಿರುವ ವಿಷಯ. ಸಮುದ್ರಗಳಲ್ಲಿನ ಪ್ಲಾಸ್ಟಿಕ್, ಮೈಕ್ರೊ ಪ್ಲಾಸ್ಟಿಕ್ ಕುರಿತು ಜನ ಮಾತನಾಡುತ್ತಾರೆ. ಭಾರತ ಈಗಾಗಲೇ ‘ಸಮುದ್ರಗಳನ್ನು ಸ್ವಚ್ಛಗೊಳಿಸಿ’ ಎನ್ನುವ ವಿಶ್ವಸಂಸ್ಥೆ ಯೋಜನೆಯ ಭಾಗವಾಗಿದೆ’
  • ‘ವಾಯುಮಾಲಿನ್ಯ ಅಂದಾಜಿಸಲು ತುರ್ತು ಎಚ್ಚರಿಕೆ ವ್ಯವಸ್ಥೆ ಅಭಿವೃದ್ಧಿಪಡಿಸುವ ಸಲುವಾಗಿ ಅಮೆರಿಕದೊಂದಿಗೆ ಸೇರಿ ಸಚಿವಾಲಯ ಕಾರ್ಯ ನಿರ್ವಹಿಸುತ್ತಿದೆ’

 

4.ಬಾಲಕಾರ್ಮಿಕ ವಿರೋಧಿ ದಿನ (World Day Against Child Labour)

ಪ್ರಮುಖ ಸುದ್ದಿ

  • ಜಗತ್ತಿನಾದ್ಯಂತ ಜೂನ್ 12 ಅನ್ನು ವಿಶ್ವ ಬಾಲಕಾರ್ಮಿಕ ವಿರೋಧಿ ದಿನವಾಗಿ ಆಚರಿಸಲಾಗುತ್ತಿದೆ.  ಈ ವರ್ಷ ಜನರೇಷನ್ ಸೇಫ್ ಆ್ಯಂಡ್ ಹೆಲ್ದಿ  ಎಂಬ ಥೀಮ್‌ನಡಿ ಈ ದಿನವನ್ನು ಆಚರಿಸಲಾಗುತ್ತಿದೆ.

 

ಮುಖ್ಯ ಅಂಶಗಳು 

 

  • ವಿಶ್ವಸಂಸ್ಥೆಯ ಅಂಗ ಸಂಸ್ಥೆಯಾಗಿರುವ ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ಐಎಲ್‌ಒ) 2002 ಜೂನ್ 12ರಂದು ಈ ದಿನಾಚರಣೆಗೆ ಚಾಲನೆ ನೀಡಿತು. ಇದಾದ ನಂತರ ಜಗತ್ತಿನ ಎಲ್ಲ ರಾಷ್ಟ್ರಗಳು ಈ ಪದ್ಧತಿಯನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಈ ದಿನವನ್ನು ಆಚರಿಸುತ್ತಿವೆ.

 

ಬಾಲ ಕಾರ್ಮಿಕರು ಎಂದರೆ ಯಾರು ?

 

  • 5 ರಿಂದ 14 ವರ್ಷದೊಳಗಿನ ದುಡಿಯುವ ಮಕ್ಕಳನ್ನು ಬಾಲಕಾರ್ಮಿಕರ ಎಂದು ಪರಿಗಣಿಸಲಾಗುತ್ತದೆ. ಬಾಲ ಕಾರ್ಮಿಕ ಪದ್ಧತಿಗೆ ಮುಖ್ಯ ಕಾರಣ ಬಡತನ. ಮತ್ತೊಂದು ಕಾರಣ ಶಿಕ್ಷಣದ ಅರಿವು.

 

ಎಲ್ಲೆಲ್ಲಿ ಕಂಡು ಬರುತ್ತಾರೆ ?

 

  • ಬಾಲ ಕಾರ್ಮಿಕರು ಹೆಚ್ಚಾಗಿ ಕೃಷಿ ಕ್ಷೇತ್ರದಲ್ಲಿ ಕಂಡು ಬರುತ್ತಾರೆ. ಅದನ್ನು ಹೊರತುಪಡಿಸಿದರೆ ಬೀಡಿ ತಯಾರಿಕೆ, ಇಟ್ಟಿಗೆ ತಯಾರಿಕೆ , ಕಾರ್ಖಾನೆ, ಗ್ಯಾರೇಜ್‌ಗಳು, ಚಿಂದಿ ಆಯುವುದು, ಸಣ್ಣಪುಟ್ಟ ಕೈಗಾರಿಕೆಗಳು, ಹೋಟೆಲ್, ಅಂಗಡಿ ಮುಂಗಟ್ಟುಗಳು , ಕಟ್ಟಡಗಳ ನಿರ್ಮಾಣಗಳಲ್ಲಿ ಮಕ್ಕಳನ್ನು ದುಡಿಸಿಕೊಳ್ಳಲಾಗುತ್ತದೆ.

 

  • ವಿಶ್ವಾದ್ಯಂತ ಅಂದಾಜು 15 ಕೋಟಿ ಮಕ್ಕಳು ಬಾಲ ಕಾರ್ಮಿಕರಿದ್ದಾರೆ. ಈ ಪೈಕಿ 5 ಕೋಟಿ ಮಕ್ಕಳು ತುಂಬಾ ಕಠಿಣವಾದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಭಾರತದಲ್ಲಿ ಸುಮಾರು 3.3 ಕೋಟಿ ಬಾಲಕಾರ್ಮಿಕ ಸಂಖ್ಯೆ ಇದೆ.

ವಿಧಿಸಲಾಗುವ ಶಿಕ್ಷೆ

 

  • ಹೊಸ ನಿಯಮದ ಪ್ರಕಾರ ತಂದೆ – ತಾಯಿ ಅಥವಾ ಪೋಷಕರು ಮಕ್ಕಳನ್ನು ಕಾರ್ಮಿಕರನ್ನಾಗಿಸುವ ಕೆಲಸವನ್ನು ಮುಂದುವರಿಸಿದರೆ ಅಂಥವರಿಗೆ 10 ಸಾವಿರ ರೂ. ದಂಡ ವಿಧಿಸಬಹುದಾಗಿದೆ. ಮೊದಲನೆಯ ಬಾರಿಗೆ ತಪ್ಪಿಗೂ ದಂಡ ಹಾಕಬಹುದು. ಅದರ ಮೊತ್ತ 10 ಸಾವಿರ ರೂ. ವರೆಗೆ ಇರುತ್ತದೆ. ಈ ಮೊತ್ತದ ಪ್ರಮಾಣವನ್ನು 2ರಿಂದ 3ಪಟ್ಟು ಹೆಚ್ಚಿಸಬಹುದು.
  • ಶಿಕ್ಷೆಯ ಪ್ರಮಾಣ ಕನಿಷ್ಠ 6 ತಿಂಗಳಿಂದ ಗರಿಷ್ಠ 2 ವರ್ಷದವರೆಗೆ ಇದೆ. ಬಾಲಕಾರ್ಮಿಕರನ್ನಾಗಿಸುವ ತಪ್ಪನ್ನು 2ನೇ ಬಾರಿ ಅಥವಾ ಅದಕ್ಕಿಂತ ಹೆಚ್ಚು ಬಾರಿ ಮಾಡಿದರೆ ಕನಿಷ್ಠ ಜೈಲು ಶಿಕ್ಷೆ 1 ವರ್ಷ ಮತ್ತು ಅದನ್ನು 3 ವರ್ಷದವರೆಗೂ ವಿಸ್ತರಿಸಬಹುದು.

 

5.ಉತ್ತರಾಖಂಡದಲ್ಲಿ ಬಲೂನ್ ವೈ-ಫೈ

 

ಪ್ರಮುಖ ಸುದ್ದಿ

 

  • ಭಾರತದ ಕೆಲ ಭಾಗಗಳ ಕುಗ್ರಾಮಗಳಿಗೆ ಮೊಬೈಲ್ ನೆಟ್​ವರ್ಕ್ ಅಥವಾ ಅಂತರ್ಜಾಲ ಸಂಪರ್ಕ ಕಲ್ಪಿಸುವುದು ಅಸಾಧ್ಯ ಎನ್ನುವ ಪರಿಸ್ಥಿತಿಯಿದೆ. ಇಂತಹ ಹಳ್ಳಿಗಳಲ್ಲಿನ ಮುಗ್ಧ ಜನರನ್ನು ಬೆದರಿಸಿ ಕೆಂಪು ಉಗ್ರರು ತಮ್ಮ ಕೆಲಸಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ಹೀಗಾಗಿ ತಂತ್ರಜ್ಞಾನದ ಮೂಲಕ ಜನರನ್ನು ಸೆಳೆಯಲು ಹಾಗೂ ನಾಗರಿಕ ಜಗತ್ತಿನ ಸೌಕರ್ಯ ನೀಡಲು ಉತ್ತರಾಖಂಡ ಸರ್ಕಾರ ಹೊಸ ಪ್ರಯೋಗಕ್ಕೆ ಮುಂದಾಗಿದೆ. ಏರೋಸ್ಟಾಟ್ ಬಲೂನ್ ಮೂಲಕ ವೈ-ಫೈ ಸಂಪರ್ಕ ನೀಡುವ ಯೋಜನೆಗೆ ಮುಖ್ಯಮಂತ್ರಿ ಟಿ.ಎಸ್.ರಾವತ್ ಚಾಲನೆ ನೀಡಿದ್ದಾರೆ.

 

ಮುಖ್ಯ ಅಂಶಗಳು 

ಅನಿವಾರ್ಯವೇನು?

 

  • ಉತ್ತರಾಖಂಡದ 16,780 ಹಳ್ಳಿಗಳಲ್ಲಿ 680 ಹಳ್ಳಿಗಳಿಗೆ ಮೊಬೈಲ್ ಸಂಪರ್ಕವಿಲ್ಲ ಥಿ ಇಂತಹ ಕುಗ್ರಾಮಗಳಲ್ಲಿ ನೆಟ್​ವರ್ಕ್ ಟವರ್ ನಿರ್ಮಾಣ ಕಷ್ಟಸಾಧ್ಯ ಹಾಗೂ ದುಬಾರಿ
  • ಕೆಲವೆಡೆ ಸೋಲಾರ್ ಆಧಾರಿತ ವೈ-ಫೈ ನೆಟ್​ವರ್ಕ್ ನೀಡಿದ್ದರೂ ಸರ್ವ ಋತು ಆಗಿರಲು ಅಸಾಧ್ಯ ಥಿ ನಕ್ಸಲ್ ಪೀಡಿತ ಪರದೇಶಗಳಲ್ಲಿ ಭದ್ರತಾ ಚಟುವಟಿಕೆಗೂ ಈ ತಂತ್ರಜ್ಞಾನ ನೆರವಾಗಲಿದೆ.
  • ಉತ್ತರಾಖಂಡ 2013ರಲ್ಲಿ ಪ್ರಳಯಾಂತಕ ಮಳೆಗೆ ನಡುಗಿಹೋಗಿತ್ತು. ಕೇದಾರನಾಥ ಸೇರಿ ಸಾಕಷ್ಟು ಪುಣ್ಯ ಕ್ಷೇತ್ರಗಳು ಅಕ್ಷರಶಃ ನರಕದಂತಾಗಿದ್ದವು. ಸಂತ್ರಸ್ತರನ್ನು ಸಂರ್ಪಸಲು ರಾಜ್ಯ ಸರ್ಕಾರಕ್ಕೆ ವಾರಗಟ್ಟಲೇ ಸಮಯ ಹಿಡಿದರೂ ಸಾಧ್ಯವಾಗಿರಲಿಲ್ಲ. ಭೀಕರ ಮಳೆಗೆ ಎಲ್ಲ ಸಂಪರ್ಕಗಳ ನಾಶವಾಗಿದ್ದವು. ಹೀಗಾಗಿ ಏರೋಸ್ಟಾಟ್ ಬಲೂನ್ ತಂತ್ರಜ್ಞಾನದಿಂದ ತುರ್ತು ಪರಿಸ್ಥಿತಿಯಲ್ಲೂ ಸಂಪರ್ಕಕ್ಕೆ ಸಾಧ್ಯ ಎನ್ನುವುದು ಸರ್ಕಾರ ಆಲೋಚನೆಯಾಗಿದೆ.

ಏನಿದು?

 

  • ಸೈನ್ಯದಲ್ಲಿ ಹೆಚ್ಚಾಗಿ ಏರೋಸ್ಟಾಟ್ ಬಲೂನ್ ತಂತ್ರಜ್ಞಾನ ಬಳಕೆಯಾಗುತ್ತದೆ. ಆದರೆ ಇದೇ ತಂತ್ರಜ್ಞಾನವನ್ನು ಭಾರತದ ಕುಗ್ರಾಮಗಳಿಗೆ ಅಂತರ್ಜಾಲ ಸಂಪರ್ಕ ಕಲ್ಪಿಸಲು ಮಾಹಿತಿ ತಂತ್ರಜ್ಞಾನ ಅಭಿವೃದ್ಧಿ ಸಂಸ್ಥೆ(ಐಟಿಡಿಎ) ಮುಂದಾಗಿದೆ.
  • ಏರೋಸ್ಟಾಟ್ ಬಲೂನಿನಲ್ಲಿ ವೈ-ಫೈ ಮೋಡೆಮ್ ಟ್ರಾನ್ಸ್​ರಿಸೀವರ್ ಎಂಟೆನಾ, ಸರ್ವೆಲೆನ್ಸ್ ಕ್ಯಾಮೆರಾಗಳನ್ನು ಈ ಬಲೂನಿನಲ್ಲಿ ಅಳವಡಿಸಲಾಗಿರುತ್ತದೆ. ಸುಮಾರು 14 ದಿನಗಳವರೆಗೆ ಭೂಮಿಯ ಮೇಲೆ ಇದು ಹಾರಾಡುವ ಸಾಮರ್ಥ್ಯ ಹೊಂದಿದೆ.
  • ಬಲೂನಿನೊಳಗೆ ಹೈಡ್ರೋಜನ್​ನ್ನು ತುಂಬಿ ಹಾರಿ ಬಿಡಲಾಗುತ್ತದೆ. ಐಐಟಿ ಮುಂಬೈ ನೆರವಿನಿಂದ ಈ ತಂತ್ರಜ್ಞಾನವನ್ನು ಐಟಿಡಿಎ ರೂಪಿಸಿದೆ.

 

6.ಅಣ್ವಸ್ತ್ರ ತ್ಯಾಗಕ್ಕೆ ಕಿಮ್ ಜಾಂಗ್ ಸಮ್ಮತಿ

 ಪ್ರಮುಖ ಸುದ್ದಿ

 

  • ಅಣ್ವಸ್ತ್ರಗಳ ವಿಚಾರದಲ್ಲಿ ಪರಸ್ಪರ ಕತ್ತಿಮಸೆಯುತ್ತಿದ್ದ ಅಮೆರಿಕ ಹಾಗೂ ಉತ್ತರ ಕೊರಿಯಾ 7 ದಶಕಗಳ ವೈಷಮ್ಯಗಳನ್ನು ಬದಿಗೊತ್ತಿ ಪರಸ್ಪರ ಕೈಜೋಡಿಸಿವೆ. ಸಿಂಗಾಪುರದಲ್ಲಿ ಮಂಗಳವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಮಾತುಕತೆ ನಡೆಸಿದ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಕೊನೆಗೂ ಅಣ್ವಸ್ತ್ರ ನಿಶ್ಶಸ್ತ್ರೀಕರಣಕ್ಕೆ ಸಮ್ಮತಿ ಸೂಚಿಸಿದ್ದಾರೆ. ಇದೂ ಸೇರಿದಂತೆ ಹಲವು ಮಹತ್ವದ ದಾಖಲೆಗಳಿಗೆ ಉಭಯ ನಾಯಕರು ಅಂಕಿತ ಹಾಕಿದ್ದಾರೆ.

ಒಪ್ಪಂದದ ಅಂಶಗಳು

 

  • 2018ರ ಪನ್​ವುುನ್​ಜೋಮ್ ಘೋಷಣೆಯಂತೆ ಸಂಪೂರ್ಣ ನಿಶ್ಶಸ್ತ್ರೀಕರಣದ ಭರವಸೆಯಿಂದ ಹಿಂದೆ ಸರಿಯುವುದಿಲ್ಲ-ಕಿಮ್ ವಾಗ್ದಾನ
  • ಇದಕ್ಕೆ ಪ್ರತಿಯಾಗಿ ಕೊರಿಯಾ ಪರ್ಯಾಯ ದ್ವೀಪದಲ್ಲಿ ಮಿಲಿಟರಿ ಕಾರ್ಯಾಚರಣೆ ಸ್ಥಗಿತ, ಅಮೆರಿಕ ಸೇನೆ ಹಿಂದಕ್ಕೆ ಕರೆಯಿಸಿಕೊಳ್ಳುವ ಭರವಸೆ ನೀಡಿದ ಟ್ರಂಪ್
  • ಯುದ್ಧ ಕೈದಿಗಳು, ಕಣ್ಮರೆಯಾದವರಲ್ಲಿ ಪತ್ತೆಯಾದವರ ವಿನಿಮಯಕ್ಕೆ ಸಹಮತ

 

ಪರಿಣಾಮ

 

  • ಜಗತ್ತಿನಲ್ಲಿ ತೃತೀಯ ಮಹಾಯುದ್ಧದ ಭೀತಿ ಹರಡಿದ್ದ ಉತ್ತರ ಕೊರಿಯಾ ಮತ್ತು ಅಮೆರಿಕ ನಡುವಿನ ಸಂಘರ್ಷ ಮಂಗಳವಾರ ರ್ತಾಕ ಅಂತ್ಯ ಕಂಡಿದೆ. ಸಿಂಗಾಪುರದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉ.ಕೊರಿಯಾ ನಾಯಕ ಕಿಮ್ ಜಾಂಗ್ ಉನ್ ನಡುವಿನ ಐತಿಹಾಸಿಕ ಭೇಟಿ ಮಹತ್ವದ ಒಪ್ಪಂದದೊಂದಿಗೆ ಯಶಸ್ವಿಯಾಗಿ ಸಂಪನ್ನಗೊಂಡಿದೆ. ಈ ವಿದ್ಯಮಾನ ವಿಶ್ವ ‘ಶಾಂತಿ’ಯ ಭರವಸೆಯನ್ನು ತೋರಿ, ನೆಮ್ಮದಿ ಹರಡುವಂತೆ ಮಾಡಿದೆ.

 

 

Share