14th & 15th DECEMBER-DAILY CURRENT AFFAIRS BRIEF

14th AND 15th DECEMBER

 

 

1.ಕೃತಕ ಬುದ್ಧಿಮತ್ತೆ ಬಳಸಿ ಹೊಸ ಸೌರ ಮಂಡಲ ಪತ್ತೆ ಹೇಗೆ ಮಾಡಿದ ನಾಸಾ

 

ಪ್ರಮುಖ ಸುದ್ದಿ

 

  • ನಮ್ಮ ಸೌರ ಮಂಡಲದ ಗ್ರಹಗಳಂತೆಯೇ ಇರುವ ಇನ್ನೊಂದು ಸೌರ ಮಂಡಲವನ್ನು ಅಮೆರಿಕದ ನಾಸಾದ ಕೆಪ್ಲರ್‌ ಬಾಹ್ಯಾಕಾಶ ಟೆಲಿಸ್ಕೋಪ್‌ ಮತ್ತು ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌) ನೆರವಿನೊಂದಿಗೆ ಪತ್ತೆ ಮಾಡಲಾಗಿದೆ ಎಂದು ನಾಸಾ ತಿಳಿಸಿದೆ.

 

ಪ್ರಮುಖ ಸಂಗತಿಗಳು

 

  • ‘ನಮ್ಮ ಸೌರವ್ಯೂಹದಂತೆಯೇ ಇರುವ ಇನ್ನೊಂದು ಗ್ರಹ ಮಂಡಲ ಪತ್ತೆಯಾಗಿದೆ. ಆದರೆ ಯಾವುದರಲ್ಲೂ ಜೀವಿಗಳ ಅಸ್ತಿತ್ವ ಇರುವ ಸಾಧ್ಯತೆ ಇಲ್ಲ’

 

  • 8 ಗ್ರಹಗಳಿರುವ ಹೊಸ ಸೌರ ಮಂಡಲ ಬಹುತೇಕ ನಮ್ಮ ಸೌರ ಮಂಡಲವನ್ನೇ ಹೋಲುತ್ತದೆ. ಕೆಪ್ಲರ್‌ 90 ಎಂದು ಕರೆಯಲಾಗುವ ಸೂರ್ಯನ ಸುತ್ತ ಈ ಗ್ರಹಗಳು ಸುತ್ತುತ್ತಿವೆ. ನಮ್ಮ ಸೌರಮಂಡಲದಿಂದ ಸುಮಾರು 2,545 ಜ್ಯೋತಿರ್ವರ್ಷದಷ್ಟು ದೂರದಲ್ಲಿ ಈ ಹೊಸ ಸೌರ ಮಂಡಲವಿದೆ.

 

  • ‘ಕೆಪ್ಲರ್‌-90 ಸೌರ ಮಂಡಲ ನಮ್ಮ ಸೌರ ಮಂಡಲದ್ದೇ ಪ್ರತಿರೂಪದಂತಿದೆ’ ಎಂದು ಆಸ್ಟಿನ್‌ನಲ್ಲಿರುವ ಯುನಿವರ್ಸಿಟಿ ಆಫ್‌ ಟೆಕ್ಸಾಸ್‌ನವರು ತಿಳಿಸಿದರು.

 

 

  • ‘ಸಣ್ಣ ಗ್ರಹಗಳು ಒಳಗಿನ ಕಕ್ಷೆಯಲ್ಲಿದ್ದು ದೊಡ್ಡ ದೊಡ್ಡ ಗ್ರಹಗಳು ಹೊರಗಿನ ಕಕ್ಷೆಗಳಲ್ಲಿ ಸುತ್ತುತ್ತಿವೆ. ಆದರೆ ಎಲ್ಲವೂ ಪರಸ್ಪರ ಬಹಳ ಹತ್ತಿರದಲ್ಲಿರುವಂತೆ ತೋರುತ್ತಿವೆ’

 

  • ಹೊಸದಾಗಿ ಪತ್ತೆಯಾದ ಗ್ರಹ ‘ಕೆಪ್ಲರ್‌-90ಐ’ ನಮ್ಮ ಭೂಮಿಯಂತೆಯೇ ಬಂಡೆಗಲ್ಲುಗಳಿಂದ ಕೂಡಿದೆ. ಆದರೆ ತನ್ನ ಸೂರ್ಯನ ಸುತ್ತ 4 ದಿನಗಳಿಗೊಮ್ಮೆ ಒಂದು ಸುತ್ತು ಬರುತ್ತದೆ. ಆ ಗ್ರಹದ ಒಂದು ವರ್ಷ ನಮ್ಮ ಭೂಮಿಯ ಎರಡು ವಾರಗಳಿಗೆ ಸಮನಾಗಿದೆ.

 

  • ‘ಕೆಪ್ಲರ್‌-90ಐ’ ಗ್ರಹದ ಮೇಲ್ಮೈ ತುಂಬಾ ಬಿಸಿಯಾಗಿದೆ. ಹೀಗಾಗಿ ಅಲ್ಲಿ ಯಾವುದೇ ಜೀವಿಗಳು ಇರುವ ಸಾಧ್ಯತೆಯಿಲ್ಲ. ಸೂರ್ಯನಿಗೆ ಅತಿ ಸಮೀಪವಿರುವುದರಿಂದ ಅದರ ಮೇಲ್ಮೈ ತಾಪಮಾನ 800 ಡಿಗ್ರಿ ಫ್ಯಾರೆನ್‌ ಹೀಟ್‌ (426 ಡಿಗ್ರಿ ಸೆಲ್ಶಿಯಸ್‌) ನಷ್ಟಿದೆ ಎಂದು ನಾಸಾ ಹೇಳಿದೆ.

 

2.ಭಾರತೀಯ ನೌಕಾಪಡೆ‌ ಸೇರಿದ ಕಲವರಿ

 

ಪ್ರಮುಖ ಸುದ್ದಿ

 

  • ಸ್ವದೇಶಿ ನಿರ್ವಿುತ ಮೊದಲ ಸ್ಕಾರ್ಪೀನ್ ದರ್ಜೆಯ ‘ಕಲ್ವರಿ’ ಜಲಾಂತರ್ಗಾಮಿಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಗುರುವಾರ ನೌಕಾಪಡೆಗೆ ಸೇರ್ಪಡೆಗೊಳಿಸಿದರು. ಸುಸಜ್ಜಿತವಾದ ಕಲ್ವರಿ ಜಲಾಂತರ್ಗಾಮಿಯು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಮೇಕ್ ಇನ್ ಇಂಡಿಯಾ ಅಭಿಯಾನಕ್ಕೆ ಅತ್ಯುತ್ತಮ ಉದಾಹರಣೆಯಾಗಿದ್ದು, ದೇಶದ ರಕ್ಷಣಾ ಸನ್ನದ್ಧತೆಯ ನಿಟ್ಟಿನಲ್ಲಿ ಮಹತ್ವ ನಡೆ. ಶಾಂತಿ ಮತ್ತು ಸ್ಥಿರತೆಯ ನಿಟ್ಟಿನಲ್ಲಿ ಹಲವು ರಾಷ್ಟ್ರಗಳು ಭಾರತದ ಜತೆಗಿರಲು ಬಯಸುತ್ತಿವೆ.
  • ಮಾನವೀಯ ದೃಷ್ಟಿಯಿಂದ ಬಲಿಷ್ಠ ಭಾರತ ಅತ್ಯವಶ್ಯ. ಹೊಸ ಜಲಾಂತರ್ಗಾಮಿಯನ್ನು ಭಾರತದ ಭವಿಷ್ಯವನ್ನು ಬದಲಿಸಲಿದೆ.

 

ಮುಖ್ಯ ಅಂಶಗಳು

 

  • ಭಾರತೀಯ ನೌಕಾಸೇನೆಯ ಪ್ರಾಜೆಕ್ಟ್-75 ಅಡಿ ಆರು ಜಲಾಂತರ್ಗಾಮಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಆ ಯೋಜನೆಯ ಮೊದಲ ಜಲಾಂತರ್ಗಾಮಿ ಕಲ್ವರಿ. ಎರಡನೇ ಐಎನ್​ಎಸ್ ಕಲ್ವರಿ 2018ರ ಮಧ್ಯಭಾಗದಲ್ಲಿ ನೌಕಾಪಡೆ ಸೇರಲಿದ್ದು, 2020-21ರ ಸಂದರ್ಭಕ್ಕೆ ಉಳಿದ ಜಲಾಂತರ್ಗಾಮಿಗಳು ನೌಕಾಪಡೆಗೆ ಸೇರ್ಪಡೆಗೊಳ್ಳಲಿವೆ.

 

  • ಟೈಗರ್ ಶಾರ್ಕ್​ಗೆ ಮಲೆಯಾಳಂನಲ್ಲಿ ಕಲ್ವರಿ ಎನ್ನುತ್ತಾರೆ. ಇದರ ಅರ್ಥ ಚುರುಕುತನ, ಶಕ್ತಿ ಮತ್ತು ಪರಭಕ್ಷಕ ಎಂದರ್ಥ. (ಹಿಂದೂಮಹಾಸಗರದ ಆಳ ಸಮುದ್ರದಲ್ಲಿ ಸಿಗುವ ನರಭಕ್ಷಕ ಮೀನು).

 

  • ಭಾರತೀಯ ನೌಕಾಪಡೆಯ 17ನೇ ಜಲಾಂತರ್ಗಾಮಿ

 

  • 2006ರ ಡಿಸೆಂಬರ್ 14ರಂದು ನಿರ್ಮಾಣ ಆರಂಭ

 

  • ಉದ್ದ 5 ಮೀಟರ್, ಎತ್ತರ 12.3 ಮೀಟರ್

 

  • 750 ಕೆ.ಜಿ. ತೂಕದ 360ಬ್ಯಾಟರಿ ಸೆಲ್​ಗಳಿವೆ.
  • ಪರಮಾಣೇತರ ಕಲ್ವರಿಯನ್ನು ನೀರಿನೊಳಗೆ ಪತ್ತೆಹಚ್ಚಲಾಗದು

 

  • 50 ವರ್ಷಗಳಿಂದ ನೌಕಾಪಡೆ ಜಲಾಂತರ್ಗಾಮಿ ಬಳಸುತ್ತಿದೆ.

 

ಕಲ್ವರಿ ಹಿನ್ನೆಲೆ

 

  • 1967ರಲ್ಲಿ ನೌಕಾಪಡೆಗೆ ಸೇರಿಸಲ್ಪಟ್ಟ ಮೊದಲ ಜಲಾಂತರ್ಗಾಮಿಯ ಹೆಸರನ್ನು ಐಎನ್​ಎಸ್ ಕಲ್ವರಿಗೆ ಇಡಲಾಗಿದೆ

 

  • ಫ್ರಾನ್ಸ್​ನ ರಕ್ಷಣಾ ಮತ್ತು ವಿದ್ಯುತ್ ಕಂಪನಿ ಡಿಸಿಎನ್​ಎಸ್ ಡೀಸೆಲ್-ಇಲೆಕ್ಟ್ರಿಕ್ ಕಲ್ವರಿಯನ್ನು ವಿನ್ಯಾಸಗೊಳಿಸಿದೆ

 

  • ಕಲ್ವರಿಯಲ್ಲಿ ಅಳವಡಿಸಲಾಗಿರುವ ಉಪಕರಣಗಳ ಸಾಮರ್ಥ್ಯ ಅಳೆಯುವ ಸಲುವಾಗಿ ಅದನ್ನು ಸತತ 120 ದಿನಗಳ ಕಾಲ ಸಮುದ್ರದಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದೆ.

 

 

  • ಭಾರತವು 1999ರಲ್ಲಿ ಜಲಾಂತರ್ಗಾಮಿಗಳನ್ನು ನಿರ್ಮಾಣ ಮಾಡುವ ಮಹತ್ವಾಕಾಂಕ್ಷಿ ಯೋಜನೆಗೆ ಒಪ್ಪಿಗೆ ನೀಡಿತ್ತು. ಈ ಯೋಜನೆ ಪ್ರಕಾರ 2030ರ ವೇಳೆಗೆ 24 ನೂತನ ಸಾಂಪ್ರದಾಯಿಕ ಜಲಾಂತರ್ಗಾಮಿಗಳನ್ನು ನೌಕಾಪಡೆಗೆ ಸೇರಿಸುವ ಗುರಿ ಹೊಂದಲಾಗಿದೆ. 18 ವರ್ಷಗಳ ನಂತರ ಯೋಜನೆ ಭಾಗವಾಗಿ ಕಲ್ವರಿಯನ್ನು ನೌಕಾಪಡೆಗೆ ಸೇರ್ಪಡೆಗೊಳಿಸಲಾಗಿದೆ.

 

  • ಫ್ರಾನ್ಸ್​ನ ನೌಕಾ ಸಮೂಹದಿಂದ ಪರವಾನಗಿ ಪಡೆದು ಮುಂಬೈನ ಮಜಗೋನ್ ಡಾಕ್ ಶಿಪ್​ಬಿಲ್ಡರ್ ಆರು ಸ್ಕಾರ್ಪೀನ್ ಜಲಾಂತರ್ಗಾಮಿಗಳನ್ನು ನಿರ್ಮಾಣ ಮಾಡುತ್ತಿದೆ. ಇದರಲ್ಲಿ ಐಎನ್​ಎಸ್ ಕಲ್ವರಿ ಒಂದು.

 

  • ಐದು ವರ್ಷಗಳ ಹಿಂದೆಯೇ ಕಲ್ವರಿಯು ನೌಕಾಪಡೆಗೆ ಸೇರ್ಪಡೆಗೊಳ್ಳಬೇಕಾಗಿತ್ತು. ಆದರೆ ಜಲಾಂತರ್ಗಾಮಿಗೆ ಸಂಬಂಧಿಸಿದ ತಂತ್ರಜ್ಞಾನವನ್ನು ಸೂಕ್ತ ಸಮಯದಲ್ಲಿ ಹಸ್ತಾಂತರ ಮಾಡದೇ ಇರುವ ಕಾರಣ 23,562 ಕೋಟಿ ರೂ. ಮೌಲ್ಯದ ಪ್ರಾಜೆಕ್ಟ್ -75 ಯೋಜನೆ ಗಡುವಿನಲ್ಲಿ ಪೂರ್ಣಗೊಳ್ಳಲಿಲ್ಲ. ಉಳಿದಂತೆ ಮೂರು ದಶಕಗಳಿಗೂ ಹಳೆಯದಾದ ಜರ್ಮನ್ ಮತ್ತು ರಷ್ಯಾ ಜಲಾಂತರ್ಗಾಮಿಗಳು ಸದ್ಯದ ಸ್ಥಿತಿ ಪೂರಕವಾಗಿಲ್ಲ ಎನ್ನಲಾಗಿದೆ. ಮುಂದಿನ ದಿನಗಳಲ್ಲಿ ಸ್ಕಾರ್ಪೀನ್ ಜಲಾಂತರ್ಗಾಮಿಗಳು ನೌಕಾಪಡೆಯ ಆಧಾರಸ್ತಂಭಗಳಾಗಲಿವೆ.

 

  • ಕಿಲೊ ಕ್ಲಾಸ್ ಜಲಾಂತರ್ಗಾಮಿಯಾದ ಐಎನ್​ಎಸ್ ಸಿಂಧೂಶಾಸ್ತ್ರ ಜಲಾಂತರ್ಗಾಮಿಯನ್ನು 2000ನೇ ಇಸ್ವಿಯ ಜುಲೈನಲ್ಲಿ ನೌಕಾಪಡೆಗೆ ಸೇರ್ಪಡೆಗೊಳಿಸಲಾಗಿತ್ತು. ಇದನ್ನು ರಷ್ಯಾದಿಂದ ಆಮದು ಮಾಡಿಕೊಳ್ಳಲಾಗಿತ್ತು. ಸಿಂಧೂಶಾಸ್ತ್ರ ಜಲಾಂತರ್ಗಾಮಿಯು 1999ರ ಯೋಜನೆಯ ಭಾಗವಾಗಿರಲಿಲ್ಲ.

 

  • ಪ್ರಬಲ ನೌಕಾಪಡೆ ಹೊಂದಿರುವ ಚೀನಾವು, ಅಷ್ಟೇ ಪ್ರಬಲ ಯುದ್ಧಾಸ್ತ್ರಗಳನ್ನು ಒಳಗೊಂಡಿದ್ದು, 60ಕ್ಕೂ ಹೆಚ್ಚು ಡೀಸೆಲ್-ಇಲೆಕ್ಟ್ರಿಕ್ ದಾಳಿ ನಡೆಸಬಲ್ಲ ಜಲಾಂತರ್ಗಾಮಿಗಳನ್ನು ಹೊಂದಿದೆ. ಅಣು ದಾಳಿ ಮತ್ತು ಅಣ್ವಸ್ತ್ರ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ನಡೆಸಬಲ್ಲ 10 ಜಲಾಂತರ್ಗಾಮಿಗಳನ್ನು ಒಳಗೊಂಡಿದೆ. ಡ್ರಾ್ಯಗನ್ ರಾಷ್ಟ್ರಕ್ಕೆ ಹೋಲಿಕೆ ಮಾಡಿದರೆ ಭಾರತ ಸಾಕಷ್ಟು ಹಿಂದೆ ಬಿದ್ದಿದೆ..

 

 

3.ಅಂತಾರಾಷ್ಟ್ರೀಯ ನ್ಯಾಯಾಲಯ

 

ಪ್ರಮುಖ ಸುದ್ದಿ

  • ಕುಲ್‌ಭೂಷಣ್ ಜಾಧವ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ತನ್ನ ಉತ್ತರವನ್ನು ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಸಲ್ಲಿಸಲಿದೆ ಎಂದು ಪಾಕಿಸ್ತಾನದ ಜಿಯೋ ನ್ಯೂಸ್‌ ವರದಿ ಮಾಡಿದೆ.
  • ಭಾರತೀಯ ಪ್ರಜೆ ಜಾಧವ್‌ ಅವರನ್ನು ಬೇಹುಗಾರಿಕೆ ಆರೋಪದಲ್ಲಿ ಪಾಕಿಸ್ತಾನದ ಮಿಲಿಟರಿ ಕೋರ್ಟ್‌ ಮರಣದಂಡನೆ ಶಿಕ್ಷೆಗೆ ಗುರಿಪಡಿಸಿದೆ. ಇದನ್ನು ಪ್ರಶ್ನಿಸಿ ಭಾರತ ಅಂತಾರಾಷ್ಟ್ರೀಯ ನ್ಯಾಯಾಲಯದ ಮೆಟ್ಟಿಲೇರಿತ್ತು. ಈ ಹಿನ್ನೆಲೆಯಲ್ಲಿ ಕಳೆದ ಮೇ 18ರಂದು ಐಸಿಜೆ ಜಾಧವ್‌ ಶಿಕ್ಷೆಗೆ ತಡೆಯೊಡ್ಡಿತ್ತು.
  • ಜಾಧವ್‌ ಅವರು ಭಾರತದ ಗುಪ್ತಚರ ಸಂಸ್ಥೆ ‘ರಾ’ ಪರವಾಗಿ ಬೇಹುಗಾರಿಕೆ ನಡೆಸುತ್ತಿದ್ದರು ಎಂಬ ಪಾಕ್ ಆರೋಪವನ್ನು ಭಾರತ ಬಲವಾಗಿ ನಿರಾಕರಿಸಿದೆ.

 

 ಅಂತಾರಾಷ್ಟ್ರೀಯ ನ್ಯಾಯಾಲಯದ  ಬಗ್ಗೆ

 

  • ಇದು 1945 ರಲ್ಲಿ UN ಚಾರ್ಟರ್ ನಿಂದ ಸ್ಥಾಪಿಸಲ್ಪಟ್ಟಿತು.ಈ ನ್ಯಾಯಾಲಯವು 1946 ರಲ್ಲಿ ಪರ್ಮನಂಟ್ ಕೋರ್ಟ್ ಆಫ್ ಇಂಟರ್ ನ್ಯಾಶನಲ್ ಜಸ್ಟಿಸ್ (ಅಂತಾರಾಷ್ಟ್ರೀಯ ಶಾಶ್ವತ ನ್ಯಾಯಿಕ ನ್ಯಾಯಾಲಯದ ಉತ್ತರಾಧಿಕಾರಿಯಾಗಿ ತನ್ನ ಅಸ್ತಿತ್ವ ಕಂಡುಕೊಂಡಿತು.

 

  • ದಿ ಸ್ಟಾಚುಟ್ ಆಫ್ ಇಂಟರ್ ನ್ಯಾಶನಲ್ ಕೋರ್ಟ್ ಆಫ್ ಜಸ್ಟಿಸ್ ,(ಅಂತಾರಾಷ್ಟ್ರೀಯ ನ್ಯಾಯಾಲಯದ ವಿಧಿ ನಿಯಮಗಳು)ಇದು ತನ್ನ ಹಿಂದಿನ ನ್ಯಾಯಾಂಗ ಅಂಗ ಸಂಸ್ಠೆಗೆ ಪೂರಕವಾಗಿದ್ದು ಇದು ಪ್ರಮುಖ ಸಂವಿಧಾನ ಮತ್ತು ನ್ಯಾಯಾಲಯದ ನಿಯಂತ್ರಣದ ಕುರಿತ ನಿಯಮಗಳನ್ನು ಹೊಂದಿರುತ್ತದೆ.

 

  • ಈ ನ್ಯಾಯಾಲಯದ ಕಾರ್ಯಭಾರವು ವಿಶಾಲ ನ್ಯಾಯಾಧಿಕಾರಣದ ವ್ಯಾಪ್ತಿ ಹೊಂದಿದೆ. ಇದುವರೆಗೂ ICJ ತನ್ನ ಇತಿಹಾಸದಲ್ಲಿ ಕಡಿಮೆ ಪ್ರಮಾಣದ ಪ್ರಕರಣಗಳ ಜೊತೆಗೆ ವ್ಯವಹರಿಸಿದೆ.ಆದರೆ 1980 ರ ನಂತರ ಈ ನ್ಯಾಯಾಲಯದ ಸದುಪಯೋಗಪಡಿಸಿಕೊಳ್ಳಲು ಎಲ್ಲಾ ದೇಶಗಳು ತಮ್ಮ ಇಚ್ಛೆ ವ್ಯಕ್ತಪಡಿಸಿ ಸಮಯಾನುಸಾರ ಅನುಕೂಲ ಹೊಂದಲು ಉತ್ಸುಕವಾಗಿವೆ.ಅದರಲ್ಲೂ ಮುಖ್ಯವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶಗಳು ತಮ್ಮ ಉತ್ಸಾಹವನ್ನು ಪ್ರಕಟಿಸಿವೆ. ಆದರೆ ಯುನೈಟೆಡ್ ಸ್ಟೇಟ್ಸ್ ಕಡ್ಡಾಯ ಅಧಿಕಾರ ವ್ಯಾಪ್ತಿಯ ಬಗ್ಗೆ ತನ್ನ ಅಸಮ್ಮತಿ ಸೂಚಿಸಿ 1986 ರಲ್ಲಿ ನ್ಯಾಯಾಲಯ ಪ್ರಕರಣಗಳ ಆಧಾರದ ಮೇಲೆ ಅದರ ಕಾರ್ಯವ್ಯಾಪ್ತಿ ನಿಗದಿಗೆ ಅದು ಒಪ್ಪಿಗೆ ನೀಡಿದೆ.

 

ನ್ಯಾಯಾಲಯದ ಸದಸ್ಯರು:

  • ICJ ಗಾಗಿ ಒಟ್ಟು ಒಂಬತ್ತು ವರ್ಷ ಅಧಿಕಾರಾವಧಿ ಹೊಂದಿರುವ ಹದಿನೈದು ನ್ಯಾಯಾಧೀಶರನ್ನು UN ಸಾಮಾನ್ಯ ಮಂಡಳಿಯು ಚುನಾಯಿಸುತ್ತದೆ.

 

  • ಇದರಲ್ಲಿ UN ನ ಭದ್ರತಾ ಮಂಡಳಿಯು ಪರ್ಮನೆಂಟ್ ಕೋರ್ಟ್ ಆಫ್ ಆರ್ಬಿಟ್ರೇಶನ್ (ಕಾಯಂ ವಾದ-ವಿವಾದ ವಿಷಯದ ಶಾಶ್ವತ ನ್ಯಾಯಾಲಯ)ನಲ್ಲಿರುವ ಗುಂಪು ಈ ಸದಸ್ಯರನ್ನು ನಾಮನಿರ್ದೇಶನ ಮಾಡುತ್ತದೆ.

 

  • ನ್ಯಾಯಾಧೀಶರು ಒಂಬತ್ತು ವರ್ಷಗಳ ಕಾಲಾವಧಿಗೆ ಆಯ್ಕೆಯಾಗುತ್ತಾರೆ,ಅವರು ಮತ್ತೆ ಎರಡು ಅವಧಿಗಳ ವರೆಗೆ ಮರು ಚುನಾಯಿಸಿಕೊಳ್ಳುವ ಅವಕಾಶ ಹೊಂದಿರುತ್ತಾರೆ. ಪ್ರತಿ ಮೂರುವರ್ಷಕ್ಕೊಮ್ಮೆ ಚುನಾವಣೆ ನಡೆಯುತ್ತದೆ,ಈ ಸಂದರ್ಭದಲ್ಲಿ ಬಹುತೇಕ ಒಂದು-ಮೂರಾಂಶದಷ್ಟು ನ್ಯಾಯಾಧೀಶರು ನಿವೃತ್ತಿ ಪಡೆಯುತ್ತಾರೆ.(ಸಾಮಾನ್ಯವಾಗಿ ಮರು ಚುನಾವಣೆಗಾಗಿ ಸ್ಪರ್ಧಿಸುವವರಾಗಿರುತ್ತಾರೆ) ಒಂದು ವೇಳೆ ನ್ಯಾಯಾಧೀಶರೊಬ್ಬರು ಅಧಿಕಾರವಧಿ ಇರುವಾಗಲೇ ಮೃತಪಟ್ಟರೆ ಅವರ ಅಧಿಕಾರವಧಿ ಪೂರ್ಣಗೊಳಿಸಲು ಅವರದೇ ರಾಷ್ಟ್ರೀಯತೆ ಹೊಂದಿರುವ ನ್ಯಾಯಾಧೀಶರ ಆಯ್ಕೆ ಮಾಡಲಾಗುತ್ತದೆ. ಆದರೆ ಒಂದೇ ದೇಶದ ಇಬ್ಬರನ್ನು ಈ ಹುದ್ದೆಗೆ ಆಯ್ಕೆ ಮಾಡಲಾಗದು

ನ್ಯಾಯಾಲಯದ 15 ನ್ಯಾಯಾಧೀಶರು ಪ್ರದೇಶಗಳ ಪ್ರಕಾರ  ಆಯ್ಕೆ ಮಾಡಲಾಗಿದೆ

 

  • ಆಫ್ರಿಕಾದಿಂದ ಮೂರು.
  • ಲ್ಯಾಟಿನ್ ಅಮೆರಿಕಾ ಮತ್ತು ಕ್ಯಾರಿಬೀನ್ನಿಂದ ಎರಡು.
  • ಏಷ್ಯಾದಿಂದ ಮೂರು.
  • ಪಶ್ಚಿಮ ಯುರೋಪ್ ಮತ್ತು ಇತರ ರಾಷ್ಟ್ರ ಗಳಿಂದ ಐದು.
  • ಪೂರ್ವ ಯೂರೋಪ್ನಿಂದ ಎರಡು

 

4.ಇತ್ಯಾಜ್ಯ(E-WASTE) ನಿರ್ವಹಣೆ

 

ಪ್ರಮುಖ ಸುದ್ದಿ

  • ಇ–ತ್ಯಾಜ್ಯ ನಿರ್ವಹಣೆ ಲೋಪದಿಂದಾಗಿ ಭಾರತದಾದ್ಯಂತ ತೀವ್ರ ಆರೋಗ್ಯ ಸಮಸ್ಯೆ ಹಾಗೂ ಪರಿಸರ ಹಾನಿ ಉಂಟಾಗುತ್ತಿದೆ ಎಂದು ವಿಶ್ವಸಂಸ್ಥೆಯ ‘ಜಾಗತಿಕ ಇ–ತ್ಯಾಜ್ಯ ನಿಗಾ–2017’ ವರದಿ ಹೇಳಿದೆ. ಬಳಸಿ ಎಸೆದ ಫೋನ್, ಲ್ಯಾಪ್‌ಟಾಪ್, ಫ್ರಿಡ್ಜ್‌, ಟಿ.ವಿ ಮೊದಲಾದ ಎಲೆಕ್ಟ್ರಾನಿಕ್ ಉಪಕರಣಗಳನ್ನು ಸೂಕ್ತವಾಗಿ ನಿರ್ವಹಣೆ ಮಾಡದಿದ್ದಲ್ಲಿ ಅಪಾಯ ಖಚಿತ ಎಂದು ವರದಿ ಎಚ್ಚರಿಸಿದೆ.

 

ಮುಖ್ಯ ಅಂಶಗಳು

  • 2 ಟನ್ – 2016ರಲ್ಲಿ ಭಾರತದಲ್ಲಿ ಉತ್ಪಾದನೆಯಾದ ಇ–ತ್ಯಾಜ್ಯ.
  • 10 ಲಕ್ಷ ಜನ- ಇ–ತ್ಯಾಜ್ಯ ಮರುಬಳಕೆ ಕೆಲಸವನ್ನು ಅಸಾಂಪ್ರದಾಯಿಕವಾಗಿ ಮಾಡುತ್ತಿರುವವರು(ಈ ಪೈಕಿ ಬಹುತೇಕರು ಅನಕ್ಷರಸ್ಥರು ಹಾಗೂ ಈ ಕೆಲಸ ಅಪಾಯಕಾರಿ ಎಂಬ ತಿಳಿವಳಿಕೆ ಇಲ್ಲದವರು)

 

ವರದಿ ಪ್ರಸ್ತಾಪಿಸಿದ ಅಂಶಗಳು:

 

  • ಜಗತ್ತಿನಲ್ಲಿ ವೇಗವಾಗಿ ಬೆಳೆಯುತ್ತಿರುವ ಉದ್ಯಮಗಳ ಪೈಕಿ ಭಾರತದ ಎಲೆಕ್ಟ್ರಾನಿಕ್ ಉದ್ಯಮವೂ ಒಂದು.
  • ಆದರೆ ಪ್ರಮುಖ ನಗರಗಳಲ್ಲಿ ತ್ಯಾಜ್ಯ ಮರುಬಳಕೆ ಘಟಕಗಳು ಇನ್ನೂ ಅಭಿವೃದ್ಧಿ ಹಂತದಲ್ಲಿವೆ.
  • ಇ–ತ್ಯಾಜ್ಯ ಉತ್ಪಾದನೆ ಪ್ರಮಾಣದಲ್ಲಿ ಕ್ರಮೇಣ ಹೆಚ್ಚಳ; ಮರುಬಳಕೆ ಪ್ರಮಾಣ ಅತ್ಯಲ್ಪ.
  • 47 ಕೋಟಿ ಟನ್- ಜಗತ್ತಿನಲ್ಲಿ 2016ರಲ್ಲಿ ಉತ್ಪಾದನೆಯಾದ ಇ–ತ್ಯಾಜ್ಯ.
  • ಶೇ 20 -ಪುನರ್ಬಳಕೆಯಾದ ಇ–ತ್ಯಾಜ್ಯದ ಪ್ರಮಾಣ.
  • 4 ಟನ್- ಜಾಗತಿಕವಾಗಿ ಅತಿಹೆಚ್ಚು ಇ–ತ್ಯಾಜ್ಯ ಉತ್ಪಾದಿಸುವ ಮೊದಲ ದೇಶ ಚೀನಾ

 

ಭಾರತದ ಸ್ಥಿತಿ:

  • ಭಾರತದಲ್ಲಿ ಇ–ತ್ಯಾಜ್ಯ ನಿರ್ವಹಣೆ ಸಂಬಂದ 3 ನಿಯಮಗಳು ಜಾರಿಯಲ್ಲಿವೆ.
  • ಕೈಗಾರಿಕೀಕರಣ, ನಗರೀಕರಣದಿಂದ ಎಲೆಕ್ಟ್ರಾನಿಕ್ ಉಪಕರಣಗಳ ಬಳಕೆ ಹೆಚ್ಚಳ.
  • ಇದರಿಂದ ಸಹಜವಾಗಿ ಇ–ತ್ಯಾಜ್ಯ ಉತ್ಪಾದನೆ ಪ್ರಮಾಣದಲ್ಲಿ ಏರಿಕೆ.
  • ಸೆಲ್‌ಫೋನ್‌, ಇತರ ಉಪಕರಣಗಳು ಕಡಿಮೆ ಬೆಲೆಗೆ ದೊರೆಯುತ್ತಿರುವುದೂ ಸಮಸ್ಯೆ ಸೃಷ್ಟಿಸಿದೆ.
  • ಹೊಸದನ್ನು ಖರೀದಿಸುವ ಉಮೇದಿನಿಂದಾಗಿ ಹಳೆಯ ಉಪಕರಣಗಳು ತ್ಯಾಜ್ಯವಾಗಿ ಮಾರ್ಪಾಡಾಗುತ್ತಿವೆ.

 

 

5.ಸಖಿ ಒನ್ ಸ್ಟಾಪ್ ಸೆಂಟರ್

 

ಪ್ರಮುಖ ಸುದ್ದಿ

 

  • ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟಲು ಸಖಿ ಒನ್ ಸ್ಟಾಪ್ ಕೇಂದ್ರಗಳ ಪಾತ್ರದ ಬಗ್ಗೆ ರಾಷ್ಟ್ರೀಯ ಕಾರ್ಯಾಗಾರವನ್ನು ನವದೆಹಲಿಯಲ್ಲಿ ನಡೆಸಲಾಗುತ್ತಿದೆ.
  • ಇದನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಕಾರ್ಯಾಗಾರವನ್ನು ಆಯೋಜಿಸಿದೆ. ಸುಮಾರು 400 ಸಖಿ-ಒನ್ ಸ್ಟಾಪ್ ಸೆಂಟರ್ ಕಾರ್ಯಕರ್ತರು ಮತ್ತು ದೇಶಾದ್ಯಂತ 33 ರಾಜ್ಯಗಳ / ಯು.ಟಿ.ಗಳಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ರಾಜ್ಯ ಇಲಾಖೆಯ ಅಧಿಕಾರಿಗಳು ಕಾರ್ಯಾಗಾರದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

 

 

ಸಖಿ ಯೋಜನೆ ಬಗ್ಗೆ

 

  • ಸಖಿ ಎಂದು ಜನಪ್ರಿಯವಾಗಿ ಪರಿಚಿತವಾಗಿರುವ ಈ ಯೋಜನೆಯು ಏಪ್ರಿಲ್ 1, 2015 ರಿಂದ ಜಾರಿಗೊಳಿಸಲಾಗಿದೆ . ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟಲು ಈ ಯೋಜನೆಯನ್ನು ರಚಿಸಲಾಗಿದೆ
  • ವೈದ್ಯಕೀಯ ನೆರವು, ಪೊಲೀಸ್ ನೆರವು, ಕಾನೂನು ನೆರವು / ದೂರು ನಿರ್ವಹಣೆ, ಮಾನಸಿಕ ಸಮಾಲೋಚನೆ ಮತ್ತು ಬಾಧಿತ ಮಹಿಳೆಯರಿಗೆ ತಾತ್ಕಾಲಿಕ ಬೆಂಬಲ ಸೇವೆಗಳು ಸೇರಿದಂತೆ ಸಮಗ್ರ ಶ್ರೇಣಿಯ ಸೇವೆಗಳನ್ನು ಪ್ರವೇಶಿಸಲು ಈ ಯೋಜನೆಯ  ಉದ್ದೇಶಿವಾಗಿದೆ
  • ಈ ಯೋಜನೆಯಡಿಯಲ್ಲಿ, ಒನ್ ಸ್ಟಾಪ್ ಸೆಂಟರ್ ಅನ್ನು ರಾಷ್ಟ್ರವ್ಯಾಪಿ ಹಂತ ಹಂತವಾಗಿ ಸ್ಥಾಪಿಸಲಾಗುವುದು ಎಂದು ನಿರೀಕ್ಷಿಸಲಾಗಿದೆ.

 

6.ತ್ರಿವಳಿ ತಲಾಖ್ ಮಸೂದೆಗೆ ಕೇಂದ್ರ ಸಚಿವ ಸಂಪುಟ ಅಸ್ತು

 

ಪ್ರಮಖ ಸುದ್ದಿ

 

  • ಸುಪ್ರೀಂ ಕೋರ್ಟ್ ತ್ರಿವಳಿ ತಲಾಖ್ ಅನ್ನು ತಾತ್ಕಾಲಿಕವಾಗಿ ನಿಷೇಧಿಸಿದ್ದು, ಇದೀಗ ಅದನ್ನು ಕಾನೂನಾತ್ಮಕವಾಗಿ ಸಂಪೂರ್ಣ ತೆಗೆದು ಹಾಕಲು ಮುಂದಾಗಿರುವ ಕೇಂದ್ರ ಸರ್ಕಾರ ತ್ರಿವಳಿ ತಲಾಖ್ ತಿದ್ದುಪಡಿ ಮಸೂದೆಯನ್ನು ಸಿದ್ಧಪಡಿಸಿದ್ದು, ಅದಕ್ಕೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

 

ಹಿನ್ನಲೆ

 

  • ಕಳೆದ ಆಗಸ್ಟ್ 22ರಂದು ಸುಪ್ರೀಂ ಕೋರ್ಟ್‌ ಮುಸ್ಲಿಮರಲ್ಲಿ ಜಾರಿ ಇರುವ ವಿವಾಹ ವಿಚ್ಛೇದನ ಪದ್ದತಿಯಾದ ತ್ರಿವಳಿ ತಲಾಖ್ ಅನ್ನು ಆರು ತಿಂಗಳ ಕಾಲ ನಿಷೇಧಿಸಿತ್ತು. ಅಲ್ಲದೆ ಈ ಸಂಬಂಧ ಶಾಸನ ಜಾರಿಗೆ ತರುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿತ್ತು.
  • ಈ ಹಿನ್ನೆಲೆಯಲ್ಲಿ ಕೇಂದ್ರ ಕಾನೂನು ಇಲಾಖೆ ಸಿದ್ಧಪಡಿಸಿದ್ದ ತ್ರಿವಳಿ ತಲಾಖ್ ತಿದ್ದುಪಡಿ ಮಸೂದೆಗೆ ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವ ಕೇಂದ್ರ ಸಂಪುಟ ಒಪ್ಪಗೆ ನೀಡಿದ್ದು, ಅದನ್ನು ಇಂದಿನಿಂದ ಆರಂಭವಾಗಿರುವ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲಾಗುತ್ತಿದೆ.
  • ಮಸೂದೆಯಲ್ಲಿ ತ್ರಿವಳಿ ತಲಾಖ್ ಅಪರಾಧ ಎಂದು ಘೋಷಿಸಲಾಗಿದ್ದು, ತಲಾಖ್ ನೀಡುವ ಪುರುಷರಿಗೆ ದಂಡ, ಮೂರು ವರ್ಷ ಜೈಲು ಶಿಕ್ಷೆ ಹಾಗೂ ಮಹಿಳೆಯರಿಗೆ ಪರಿಹಾರ ನೀಡಲು ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗಿದೆ.
  • ಸುಪ್ರೀಂ ಆದೇಶ ಜಾರಿಗೆ ಬಂದ ನಂತರವೂ ಕೆಲವು ಕಡೆ ತ್ರಿವಳಿ ತಲಾಖ್‌ ಸಂಪ್ರದಾಯದಂತೆ ಮುಸ್ಲಿಂ ಮಹಿಳೆಯರಿಗೆ ವಿಚ್ಛೇದನ ನೀಡಿರುವ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಈ ನಿಟ್ಟಿನಲ್ಲಿ ಇದಕ್ಕೆ ಕಾನೂನು ರೂಪಿಸಲು ನಿರ್ಧರಿಸಿರುವ ಕೇಂದ್ರ ಸರ್ಕಾರ ಮಸೂದೆ ಸಿದ್ಧಪಡಿಸಲು ಸಚಿವರ ಸಮಿತಿ ರಚಿಸಿತ್ತು.

 

 

7.ಎಕುವೆರಿನ್(Ekuverin’)

ಪ್ರಮುಖ ಸುದ್ದಿ

 

  • ಭಾರತ ಮತ್ತು ಮಾಲ್ಡೀವ್ಸ್ ಸೇನೆಯ ಜಂಟಿ ಸಮರಾಭ್ಯಾಸ ನಮ್ಮದೇ ಕರ್ನಾಟಕದಲ್ಲಿ ನಡೆಯಲಿದೆ ಎಂದು ತಿಳಿದಿದೆ .

 

ಪ್ರಮುಖ ಸಂಗತಿಗಳು

  • ಇದೇ ಡಿಸೆಂಬರ್ 15ರಿಂದ 28ರವರೆಗೆ ನಡೆಯಲಿರುವ ಭಾರತೀಯ ಸೇನೆ ಮತ್ತು ಮಾಲ್ಡೀವ್ಸ್ ಸೇನೆಯ 8ನೇ ಆವೃತ್ತಿಯ ‘ಎಕುವೆರಿನ್’ ಜಂಟಿ ತಾಲಿಮು ಕರ್ನಾಟಕದ ಬೆಳಗಾವಿ ಜಿಲ್ಲೆಯಲ್ಲಿ ನಡೆಯಲಿದೆ.
  • ಈ ಬಗ್ಗೆ ಕೇಂದ್ರ ರಕ್ಷಣಾ ಸಚಿವಾಲಯ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಭಾರತ ಮತ್ತು ಮಾಲ್ಡೀವ್ಸ್ ದೇಶಗಳ 14 ದಿನಗಳ ದ್ವಿಪಕ್ಷೀಯ ಜಂಟಿ ಸಮರಾಭ್ಯಾಸ ಇದೇ ಡಿಸೆಂಬರ್ 15ರಿಂದ ಆರಂಭವಾಗಲಿದ್ದು, ಡಿಸೆಂಬರ್ 28ರಂದು ಅಂತ್ಯವಾಗಲಿದೆ ಎಂದು ಮಾಹಿತಿ ನೀಡಿದೆ.

 

  • 2009ರಿಂದ ಭಾರತೀಯ ಸೇನೆ ಹಾಗೂ ಮಾಲ್ಡೀವ್ಸ್ ಸೇನೆ ‘ಎಕುವೆರಿನ್’ ಜಂಟಿ ಸಮರಾಭ್ಯಾಸವನ್ನು ಆಯೋಜಿಸುತ್ತಾ ಬಂದಿದ್ದು, 2016ರ ಡಿಸೆಂಬರ್ ನಲ್ಲಿ 7ನೇ ಆವೃತ್ತಿಯ ‘ಎಕುವೆರಿನ್’ ಸಮರಾಭ್ಯಾಸ ಮಾಲ್ಡೀವ್ಸ್ ನ ಕಧ್ಧೂ, ಲಾಮು ಅಟಾಲ್ ನಲ್ಲಿ ನೆರವೇರಿತ್ತು.
  • ಇದೀಗ 8ನೇ ಆವೃತ್ತಿಯ ಸಮರಾಭ್ಯಾಸ ಭಾರತದಲ್ಲಿ ಆಯೋಜನೆಯಾಗಿದ್ದು, ಪ್ರಮುಖವಾಗಿ ಕರ್ನಾಟಕದ ಬೆಳಗಾವಿ ಜಿಲ್ಲೆಯಲೇ ಜಂಟಿ ಸಮರಾಭ್ಯಾಸ ನಡೆಯಲಿದೆ.
  • ಮಾಲ್ಡೀವ್ಸ್ ನ ಧಿವೆಹಿ ಭಾಷೆಯಲ್ಲಿ ಎಕುವೆರಿನ್ ಎಂದರೆ ಸ್ನೇಹ ಎಂದರ್ಥ. ಹೀಗಾಗಿ ಭಾರತ-ಮಾಲ್ಡೀವ್ಸ್ ಸೇನಾ ಸಮರಾಭ್ಯಾಸಕ್ಕಾಗಿ ಎಕುವೆರಿನ್ ಎಂದೇ ನಾಮಕರಣ ಮಾಡಲಾಗಿತ್ತು.

 

8.ಅಮರನಾಥ ಗುಹೆಯನ್ನು ಶಬ್ದರಹಿತ ಪ್ರದೇಶ ಎಂದು ಘೋಷಣೆ ಮಾಡಿಲ್ಲ: ಎನ್ ಜಿಟಿ ಸ್ಪಷ್ಟನೆ

 

ಪ್ರಮುಖ ಸುದ್ದಿ

  • ಪವಿತ್ರ ಯಾತ್ರಾ ಸ್ಥಳವಾದ ಅಮರನಾಥ್ ಗುಹೆಯನ್ನು ಶಬ್ದರಹಿತ ಪ್ರದೇಶ ಎಂದು ಘೋಷಣೆ ಮಾಡಿಲ್ಲ ಎಂದು ಹಸಿರು ನ್ಯಾಯಾಧಿಕರಣ ಸ್ಪಷ್ಟನೆ ನೀಡಿದೆ.
  • ಅಮರನಾಥ್ ಗುಹೆಯನ್ನು ಶಬ್ದರಹಿತ ಪ್ರದೇಶವಾಗಿ ಘೋಷಣೆ ಮಾಡುವ ಸಂಬಂಧ ಇಂದು ಮುಂದುವರಿದ ವಿಚಾರಣೆಯಲ್ಲಿ ಅಮರನಾಥ್ ಗುಹೆಯನ್ನು ಶಬ್ದರಹಿತ ಪ್ರದೇಶ ಎಂದು ಎನ್ ಜಿಟಿ ಇನ್ನೂ ಘೋಷಣೆ ಮಾಡಿಲ್ಲ ಎಂದು ನ್ಯಾಯಮೂರ್ತಿ ಸ್ವತಂತ್ರ ಕುಮಾರ್ ಹೇಳಿದ್ದಾರೆ.
  • ಈ ಹಿಂದೆ ನಡೆದ ವಿಚಾರಣೆಯಲ್ಲಿ ಅಮರನಾಥ್ ಗುಹೆಯೂ ಸೇರಿದಂತೆ ಸುತ್ತಮುತ್ತಲ ಪ್ರದೇಶವನ್ನು ಶಬ್ದ ರಹಿತ ಪ್ರದೇಶ ಎಂದು ಘೋಷಣೆ ಮಾಡುವ ಸಂಬಂಧ ನಿರ್ಧಾರ ಕೈಗೊಳ್ಳುವುದಾಗಿ ಎನ್ ಜಿಟಿ ಹೇಳಿತ್ತು. ಕಾಶ್ಮೀರದಲ್ಲಿ ಚಳಿಗಾಲ ಆರಂಭವಾಗಿದ್ದು, ಈಗಾಗಲೇ ಮೊದಲ ಹಂತದ ಹಿಮಮಳೆ ಕೂಡ ಆರಂಭವಾಗಿದೆ. ಹೀಗಾಗಿ ಅಮರನಾಥ್ ಗುಹೆಯ ಸುತ್ತಮುತ್ತ ಭಾರಿ ಪ್ರಮಾಣದ ಹಿಮ ಶೇಖರಣೆಯಾಗಿದೆ. ಶಬ್ದ ಮಾಡುವುದರಿಂದ ಅಲ್ಲಿನ ಮಂಜುಗೆಡ್ಡೆಗಳ ಮೇಲೆ ಪರಿಣಾಮವಾಗಿ ಅವು ಜಾರುವ ಅಥವಾ ಹಿಮಪಾತವಾಗುವ ಸಾಧ್ಯತೆ ಇದೆ ಎಂದು ಎನ್ ಜಿಟಿ ಅಭಿಪ್ರಾಯಪಟ್ಟಿತ್ತು. ಅಲ್ಲದೆ ಪವಿತ್ರ ಗುಹೆಯನ್ನು ಶಬ್ದರಹಿತ ಪ್ರದೇಶವಾಗಿ ಘೋಷಣೆ ಮಾಡುವ ಇಂಗಿತ  ವ್ಯಕ್ತಪಡಿಸಿತ್ತು.
  • ಎನ್ ಜಿಟಿ ಹೇಳಿಕೆ ಸಂಬಂಧ ಅಮರನಾಥ್ ಯಾತ್ರಾರ್ಥಿಗಳು ವ್ಯಾಪಕ ಅಸಮಾಧಾನ ವ್ಯಕ್ತಪಡಿಸಿದ್ದರು.

 

ಅಮರನಾಥ ಗುಹೆ ಬಗ್ಗೆ

 

  • ಅಮರನಾಥ್ ಹಿಂದೂ ಧರ್ಮದ ದೇವ ಶಿವನಿಗೆ ಸಮರ್ಪಿತವಾಗಿರುವ, ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿರುವ ಒಂದು ಗುಹೆ ದೇವಾಲಯ.
  • ಸುಮಾರು ೫೦೦೦ ವರ್ಷಗಳಷ್ಟು ಹಳೆಯದಿರಬಹುದೆಂದು ನಂಬಲಾಗಿರುವ ಈ ದೇವಾಲಯವು ಹಿಂದೂ ಪುರಾಣದಲ್ಲಿ ಮಹತ್ವವನ್ನು ಹೊಂದಿದೆ. ಗುಹೆಯೊಳಗೆ ಮಂಜಿನ ಗೆಡ್ಡೆಯೊಂದು (stalagmite) ಲಿಂಗದ ಆಕಾರವನ್ನು ಹೊಂದಿದ್ದು ಇದನ್ನು ಇಲ್ಲಿ ಪೂಜಿಸಲಾಗುತ್ತದೆ. ೩,೮೮೮ ಮೀಟರ್ ಎತ್ತರದಲ್ಲಿ ಇರುವ ಈ ದೇವಾಲಯವು ಶ್ರೀನಗರದಿಂದ ಸುಮಾರು ೧೪೧ ಕಿ.ಮಿ. ದೂರದಲ್ಲಿದೆ.
  • ಅಮರನಾಥ ಪದದ ಅರ್ಥ ಅಮರ ಅಂದರೆ ಚಿರಂಜೀವಿ ಹಾಗು ನಾಥ ಅಂದರೆ ದೇವರು ಎಂಬ ಎರಡು ಪದಗಳಿಂದ ಈ ಸ್ಥಳವು ಅಮರನಾಥ ಎಂಬ ಹೆಸರನ್ನು ಪಡೆದಿದೆ.

 

  • ಗುಹೆಯ ಹೊರಭಾಗದ ಒಂದು ಪಕ್ಕದಲ್ಲಿ ಹರಿಯುತ್ತಿರುವ ಅಮರಗಂಗೆ ಎಂಬ ಸಣ್ಣ ಹಿಮಝರಿಯಾತ್ರಾರ್ಥಿಗಳ ಸ್ನಾನಪಾನಾದಿಗಳಿಗೆ ಪವಿತ್ರವೆನಿಸಿದೆ. ಗುಹೆಯ ಒಂದು ಮೂಲೆಯಲ್ಲಿ ದೊಡ್ಡ ಹಿಮರಾಶಿ ಶಿವಲಿಂಗಾಕಾರದಲ್ಲಿ ಕಾಣಿಸುವುದು. ಇದನ್ನು ಅಮರನಾಥಶಿವ ಎಂದು ಕರೆಯುತ್ತಾರೆ.
  • ಈ ದೇವಾಲಯ ಅಲ್ಲಿನ ದೇವನಂತೆ ಕೇವಲ ಪ್ರಾಕೃತಿಕ, ಮಾನವನಿರ್ಮಿತವಲ್ಲ. ಪ್ರಕೃತಿಯ ನಗ್ನೀಕರಣಕಾರಕಗಳಾದ ಮಳೆಗಾಳಿ ಬಿಸಿಲುಗಳು ಈ ಪವಾಡವನ್ನೆಸಗಿವೆ. ಇಲ್ಲಿ ಪ್ರಕೃತಿಯೇ ದೇವ, ದೇಗುಲ. ಯಾತ್ರಾರ್ಥಿಗಳೇ ಪೂಜಾರಿಗಳು. ಈ ವಿಶೇಷಗುಣದಿಂದಾಗಿ ಅಮರನಾಥ ಗುಹೆ ಬಹುಮುಖ್ಯ ಯಾತ್ರಾಸ್ಥಳಗಳಲ್ಲೊಂದಾಗಿದೆ.

 

 9.ಎಕೊ ನಿವಾಸ್

ಪ್ರಮುಖ ಸುದ್ದಿ

 

  • ಪ್ರತಿವರ್ಷ ಡಿಸೆಂಬರ್ 14 ರಂದು ರಾಷ್ಟ್ರೀಯ ಶಕ್ತಿ ಸಂರಕ್ಷಣಾ ದಿನವನ್ನಾಗಿ ಆಚರಿಸಲಾಗುತ್ತದೆ.   ಇದೆ ಸಂದರ್ಭದಲ್ಲಿ ದೇಶದಲ್ಲಿ ಸಮರ್ಥ ಮತ್ತು ಶಕ್ತಿಯ ಪರಿಣಾಮಕಾರಿ ಬಳಕೆಯ   ಬಗ್ಗೆ    ಜಾಗೃತಿಯನ್ನು  ಮೂಡಿಸಲು ಸಂವಾದಾತ್ಮಕ ಆನ್ಲೈನ್ ​​ಪೋರ್ಟಲ್, ECO-NIWAS  ನ್ನು (Energy Conservation – New Indian Way for Affordable & Sustainable homes) ಸರ್ಕಾರ  ಅನಾವರಣಗೊಳಿಸಿದೆ.

 

ರಾಷ್ಟ್ರೀಯ ಶಕ್ತಿ ಸಂರಕ್ಷಣಾ ದಿನದ ಬಗ್ಗೆ

 

  • ಇಂಧನ ಸಂರಕ್ಷಣೆ ದಿನವನ್ನು ಪ್ರತಿವರ್ಷ ಡಿಸೆಂಬರ್ 14 ರಂದು ಕೇಂದ್ರ ಶಕ್ತಿ ಸಚಿವಾಲಯದ ಅಡಿಯಲ್ಲಿ ಇಂಧನ ದಕ್ಷತೆಯ ಬ್ಯೂರೋ (ಬಿಇಇ) ಆಯೋಜಿಸಿದೆ.  ಇದರ ಮುಖ್ಯ ಉದ್ದೇಶವೆಂದರೆ ಶಕ್ತಿ ಸಾಮರ್ಥ್ಯ ಮತ್ತು ಸಂರಕ್ಷಣೆಯಲ್ಲಿ ಭಾರತದ ಸಾಧನೆಗಳನ್ನು ಪ್ರದರ್ಶಿಸುವ ಉದ್ದೇಶದಿಂದ, ಮತ್ತು  ಸಮಗ್ರ ಅಭಿವೃದ್ಧಿಯ ಮಹತ್ವಾಕಾಂಕ್ಷೆಗಾಗಿ ಕೆಲಸ ಮಾಡುವಾಗ, ಹವಾಮಾನ ಬದಲಾವಣೆ ತಗ್ಗಿಸುವಿಕೆಯನ್ನು ಕಡೆಗೆ ರಾಷ್ಟ್ರದ ಒಟ್ಟಾರೆ ಪ್ರಯತ್ನ.

 

  • ಅದರ ಜಾಗೃತಿ ಪ್ರಭಾವದ ಭಾಗವಾಗಿ, ರಾಷ್ಟ್ರೀಯ ಇಂಧನ ಸಂರಕ್ಷಣೆ ಪ್ರಶಸ್ತಿಗಳೊಂದಿಗೆ ಅವರನ್ನು ಸನ್ಮಾನಿಸುವ ಮೂಲಕ ಕೈಗಾರಿಕೆಗಳ ಪ್ರಯತ್ನಗಳನ್ನು ಬಿಇಇ ಗುರುತಿಸುತ್ತದೆ ಮತ್ತು ಪ್ರೋತ್ಸಾಹಿಸುತ್ತದೆ. ಇಂಧನ ಸಂರಕ್ಷಣೆಯ ವಾರ್ಷಿಕ ರಾಷ್ಟ್ರೀಯ ಚಿತ್ರಕಲೆ ಸ್ಪರ್ಧೆಯನ್ನು ಆಯೋಜಿಸಿ ರಾಷ್ಟ್ರೀಯ ವಿಜೇತರಿಗೆ ಬಿಇಇ ಪ್ರಶಸ್ತಿಗಳನ್ನು ಕೂಡಾ ನೀಡಿದೆ.

 

10.100 ಕೋಟಿಗೂ ಅಧಿಕ ಭಾರತೀಯರಿಗೆ ಆರೋಗ್ಯ ವಿಮೆ ಇಲ್ಲ:ಜಾಗತಿಕ ವರದಿ

 

ಪ್ರಮುಖ ಸುದ್ದಿ

   

  • 135 ಕೋಟಿ ಜನಸಂಖ್ಯೆ –ಇರುವ ಭಾರತದಲ್ಲಿ 100 ಕೋಟಿಗೂ ಅಧಿಕ ಜನರಿಗೆ ಆರೋಗ್ಯ ವಿಮೆ ಇಲ್ಲ. ದ ಲ್ಯಾನ್‌ಸೆಟ್‌ ಪ್ರಕಟಿಸಿರುವ ಜಾಗತಿಕ ಅಧ್ಯಯನ ವರದಿಯಲ್ಲಿ ಆರೋಗ್ಯ ವಿಮೆ ವಿಷಯದಲ್ಲಿ ಪಟ್ಟಿ ಮಾಡಲ್ಪಟ್ಟಿರುವ 100 ದೇಶಗಳ ಪೈಕಿ ಭಾರತ 56ನೇ ಸ್ಥಾನದಲ್ಲಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

 

ಪ್ರಮುಖ ಸಂಗತಿಗಳು

 

  • “ದಿ ಗ್ಲೋಬಲ್‌ ಮಾನಿಟರಿಂಗ್‌ ರಿಪೋರ್ಟ್‌ 2017 (ಜಿಎಂಆರ್‌ 2017) ನ ವರದಿಯನ್ನು ಟೋಕಿಯೋದ ಯುನಿವರ್ಸಲ್‌ ಹೆಲ್ತ್‌ ಕವರೇಜ್‌ ಫೋರಮ್‌ ನಲ್ಲಿ ಅನಾವರಣಗೊಳಿಸಲಾಯಿತು.

 

  • ಈ ವರದಿಯ ಪ್ರಕಾರ ವಿಶ್ವ ಜನಂಖ್ಯೆಯ ಅರ್ಧಾಂಶದಷ್ಟು ಜನರಿಗೆ, ಎಂದರೆ 3 ಶತಕೋಟಿ ಜನರಿಗೆ ಆರೋಗ್ಯ ವಿಮೆ ಇಲ್ಲದಿರುವುದು ಕಂಡು ಬಂದಿದೆ. ಇದೇ ರೀತಿ ಈ 7.3 ಶತಕೋಟಿ ಜನರಿಗೆ ಆವಶ್ಯಕ ಆರೋಗ್ಯ ಸೇವೆಗಳು ಕೂಡ ಲಭಿಸದಿರುವುದು ಬಹಿರಂಗವಾಗಿದೆ.

 

  • ವರದಿಯ ಪ್ರಕಾರ ವಿಶ್ವ ಜನಸಂಖ್ಯೆಯ ಕೇವಲ ಶೇ.27 ಮಂದಿಗೆ ಮಾತ್ರವೇ ಆರೋಗ್ಯ ರಕ್ಷಣೆ ಸೇವೆಗಳು ಸಿಗುತ್ತಿವೆ; ಅಥವಾ ಅದನ್ನು ಪಡೆಯುವ ಆರ್ಥಿಕ ತಾಕತ್ತು ಅವರಿಗಿದೆ.

 

  • ಈ ವರದಿಯು ಬಹಿರಂಗಪಡಿಸಿರುವ ಜನಾರೋಗ್ಯಕ್ಕೆ ಸಂಬಂಧಿಸಿದ ಕೆಲವು ಗಂಭೀರ ಕಳವಳಕಾರಿ ವಿಷಯಗಳು ಇಂತಿವೆ

 

  • ವಿಶ್ವದ ನೂರು ಕೋಟಿ ಜನರು ಅನಿಯಂತ್ರಿತ ಹೈಪರ್‌ಟೆನ್‌ಶನ್‌ ಜತೆಗೆ ಬದುಕುತ್ತಿದ್ದಾರೆ. 20 ಕೋಟಿ ಮಹಿಳೆಯರು ಪರ್ಯಾಪ್ತ ಕುಟುಂಬ ಕಲ್ಯಾಣ ಯೋಜನೆಗಳಿಗೆ ಒಳಪಡುತ್ತಿಲ್ಲ

 

  • ಸುಮಾರು 2 ಕೋಟಿ ಮಕ್ಕಳಿಗೆ ಡಿಪ್‌ತೀರಿಯಾ, ಟಿಟಾನಸ್‌ ಮತ್ತು ಪೆರ್ಟುಸಿಸ್‌ ಕಾಯಿಲೆಯಿಂದ ಯಾವುದೇ ವೈದ್ಯಕೀಯ ರಕ್ಷಣೆ ಸಿಗುತ್ತಿಲ್ಲ.

 

 

 

ONLY FOR PRELIMS

 

 

11.ಹಿಂದಿ ಭಾಷೆಯಲ್ಲಿ ಇ-ಮೇಲ್ ಐಡಿ ನೀಡಿದ ದೇಶದ ಮೊದಲ ರಾಜ್ಯ ರಾಜಸ್ಥಾನ್

 

  • ಉಚಿತ ಇ-ಮೇಲ್ ವಿಳಾಸವನ್ನು ಹಿಂದಿಯಲ್ಲಿ ತನ್ನ ರಾಜ್ಯದ ನಿವಾಸಿಗಳಿಗೆ ನೀಡಿರುವ ದೇಶದಲ್ಲೆ ಮೊದಲ ರಾಜ್ಯವೆಂದು ರಾಜಸ್ಥಾನ ಎನಿಸಿಕೊಂಡಿದೆ .
  • ಮೇಲ್ ಐಡಿ ಗಳನ್ನೂ ದೇವನಾಗರಿ ಲಿಪಿಯಲ್ಲಿ ನೀಡಿ – ಇಂಗ್ಲಿಷ್ ಇ-ಮೇಲ್ ಐಡಿಗಳೊಂದಿಗೆ ಅನುಕೂಲವಿಲ್ಲದ ಲಕ್ಷಾಂತರ ಹೊಸ ಬಳಕೆದಾರರಿಗೆ ಉಪಯೋಜನಗೊಳಿಸಿದೆ .
  • ಈ ಉಪಕ್ರಮವು ಇ-ಆಡಳಿತಕ್ಕೆ ಗರಿಷ್ಠ ಜನರ ಪಾಲ್ಗೊಳ್ಳುವಿಕೆಯನ್ನು ಖಚಿತಪಡಿಸುತ್ತದೆ ಮತ್ತು ಸ್ಥಳೀಯ ಭಾಷೆಗಳಲ್ಲಿ   ಸೌಲಭ್ಯಗಳನ್ನು ಒದಗಿಸುವಂತಾಗಿದೆ.

 

12.ಭಾರತದ ಲಕ್ಷ್ಮೀ ಪುರಿ ಸೇರಿ 6 ರಾಜತಾಂತ್ರಿಕರಿಗೆ ವಿಶ್ವಸಂಸ್ಥೆ ಪವರ್ ಆಫ್ ಒನ್ಪ್ರಶಸ್ತಿ

 

  • ನ್ಯೂಯಾರ್ಕ್: ಬಾರತದ ಲಕ್ಷ್ಮೀ ಪುರಿ ಸೇರಿದಂತೆ ಆರು ಉನ್ನತ ರಾಜತಾಂತ್ರಿಕರಿಗೆ ವಿಶ್ವಸಂಸ್ಥೆ ದಿವಾಳಿ ಪವರ್ ಆಫ್ ಒನ್ (ದೀಪಾವಳಿ ಏಕ ಶಕ್ತಿ) ಪ್ರಶಸ್ತಿ ನೀಡಿ ಗೌರವಿಸಿದೆ. ವಿಶ್ವದಲ್ಲಿ ಶಾಂತಿ ಮತ್ತು ಭದ್ರತೆ ನೆಲೆಗೊಳ್ಳಲು ನೀಡಿದ ಸೇವೆಯನ್ನು ಪರಿಗಣಿಸಿ ಇದೇ ಪ್ರಪ್ರಥಮ ಬಾರಿಗೆ ಈ ಪುರಸ್ಕಾರ ನೀಡಲಾಗಿದೆ.
  • ನ್ಯೂಯಾರ್ಕ್‍ನ ವಿಶ್ವಸಂಸ್ಥೆ ಕೇಂದ್ರ ಕಛೇರಿಯಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.
  • ವಿಶ್ವಸಂಸ್ಥೆಯ ಮಹಿಳಾ ವಿಭಾಗದ ಮುಖ್ಯಸ್ಥೆ ಲಕ್ಷ್ಮೀ ಪುರಿ, ಲೆಬನಾನ್ ರಾಯಭಾರಿ ನವಾಜ್ ಸಲಾಂ, ಉಕ್ರೇನ್‍ನ ಯುರಿ ಸೆರ್‍ಗೆವೆವ್, ವಿಶ್ವಸಂಸ್ಥೆಗೆ ಬ್ರಿಟಿಷ್ ರಾಯಭಾರಿ ಮ್ಯಾಥ್ಯೂ ರೇಕ್ರೋಫ್ಟ್, ಹಿರಿಯ ರಾಜತಾಂತ್ರಿಕರಾದ ಈಜಿಪ್ಟ್‍ನ ಮಗೆಡ್ ಅಬ್ದುಲ್ ಅಜಿಜ್, ಮೋಲ್ಡಾವಾದ ಇಯಾನ್ ಬೊಟ್‍ನರು ಅವರುಗಳಿಗೆ ಈ ಪ್ರಶಸ್ತಿ ಸಂದಿದೆ.

 

  • ಕಲೇದ ವರ್ಷ ಅಮೆರಿಕ ಅಂಚೆ ಸೇವೆಗಳ ಇಲಾಖೆ ದೀಪಾವಳಿ ಅಂಚೆ ಚೀಟಿಯನ್ನು ಬಿಡುಗಡೆಗೊಳಿಸಿದ್ದು ಈ ಸಂಭ್ರಮಾಚರಣೆಯ ವರ್ಷಾಚರಣೆಯ ಸಮಯ ಈ ಪ್ರಶಸ್ತಿ ಪ್ರಧಾನ ಸಮಾರಂಭ ಆಯೋಜನೆಯಾಗಿತ್ತು.

 

13.ಭಾರತೀಯ ಒಲಿಂಪಿಕ್‌ ಸಂಸ್ಥೆಯ ಅಧ್ಯಕ್ಷರಾಗಿ ನರೀಂದರ್‌ ಬಾತ್ರಾ

 

  • ಅಂತರರಾಷ್ಟ್ರೀಯ ಹಾಕಿ ಫೆಡರೇಷನ್‌ ಮುಖ್ಯಸ್ಥ ನರೀಂದರ್ ಬಾತ್ರಾ ಅವರು ಭಾರತೀಯ ಒಲಿಂಪಿಕ್‌ ಸಂಸ್ಥೆಯ (ಐಒಎ) ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

 

  • ಈ ಮೂಲಕ ಅಂತರರಾಷ್ಟ್ರೀಯ ಹಾಕಿ ಫೆಡರೇಷನ್‌ ಮುಖ್ಯಸ್ಥರಾಗಿದ್ದುಕೊಂಡು ಐಒಎ ಅಧ್ಯಕ್ಷರಾದ ಕೆಲವೇ ಕೆಲವು ಕ್ರೀಡಾ ಆಡಳಿತಗಾರರ ಸಾಲಿಗೆ ಬಾತ್ರಾ(59) ಸೇರ್ಪಡೆಯಾದರು.
  • ಚುನಾವಣೆ ಕಣದಲ್ಲಿದ್ದ ಏಷಿಯನ್‌ ಟೆನಿಸ್‌ ಫೆಡರೇಷನ್‌ ಅಧ್ಯಕ್ಷ ಅನಿಲ್ ಖನ್ನಾ ಬಳಿಕ ಸ್ಪರ್ಧೆಯಿಂದ ಹಿಂದೆ ಸರಿದಿದ್ದರು. ಹೀಗಾಗಿ ಬಾತ್ರಾ ಆಯ್ಕೆಯಾಗುವುದು ಚುನಾವಣೆಗು ಮೊದಲೇ ಖಚಿತವಾಗಿತ್ತು.

 

  • ಐಒಎ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದ ಖನ್ನಾ, ‘ತಾವು ಚುನಾವಣೆಯಿಂದ ಹಿಂದೆ ಸರಿಯುವುದಾಗಿ ಮತ್ತು ಬಾತ್ರಾ ಅವರನ್ನು ಬೆಂಬಲಿಸುವುದಾಗಿ’ ತಿಳಿಸಿದ್ದರು. ಭಾರತ ವೇಟ್‌ಲಿಫ್ಟಿಂಗ್‌ ಫೆಡರೇಷನ್ ಅಧ್ಯಕ್ಷ ಬೀರೇಂದ್ರ ಬೈಶ್ಯ ಅವರೂ ಆರಂಭದಲ್ಲಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದರು. ನಂತರ ಸ್ಪರ್ಧಿಸದಿರಲು ನಿರ್ಧರಿಸಿದ್ದರು.

 

  • ಪ್ರಧಾನ ಕಾರ್ಯದರ್ಶಿಯಾಗಿ ರಾಜೀವ್‌ ಮೆಹ್ತಾ ಅವರು ಮರು ಆಯ್ಕೆಯಾಗಿದ್ದು ನಾಲ್ಕು ವರ್ಷ ಅವಧಿಗೆ ಮುಂದುವರಿಯಲಿದ್ದಾರೆ.

 

 

14.ಇಸ್ಲಾಮಿಕ್ ಸಹಕಾರ ಸಂಘಟನೆ(ಒಐಸಿ)

 

  • ಒಐಸಿ ಯು 1969 ರಲ್ಲಿ ಸಂಸ್ಥಾಪಿಸಲ್ಪಟ್ಟ ಅಂತಾರಾಷ್ಟ್ರೀಯ ಸಂಘಟನೆಯಾಗಿದೆ, ಇದರಲ್ಲಿ 57 ಸದಸ್ಯ ರಾಷ್ಟ್ರಗಳು ಸೇರಿವೆ.
  • ಇದರ ಆಡಳಿತ ಕೇಂದ್ರವು ಸೌದಿ ಅರೇಬಿಯಾದ ಜೆಡ್ಡಾದಲ್ಲಿದೆ.
  • ಟರ್ಕಿ ಪ್ರಸ್ತುತ ಸಂಸ್ಥೆಯ ಅಧ್ಯಕ್ಷತೆ ಹೊಂದಿದೆ.
  • ಭಾರತವು ಈ ಸಂಸ್ಥೆಯ ಸದಸ್ಯ ರಾಷ್ಟ್ರವಲ್ಲ
  • ಅಂತರಾಷ್ಟ್ರೀಯ ಶಾಂತಿ ಮತ್ತು ಸಾಮರಸ್ಯವನ್ನು ಉತ್ತೇಜಿಸುವ ಆತ್ಮವಿಶ್ವಾಸದಲ್ಲಿ ಹಾಗು ಮುಸಲ್ಮಾನರ ಹಿತಾಸಕ್ತಿಗಳನ್ನು ಕಾಪಾಡುವ ಮತ್ತು ರಕ್ಷಿಸಲು ಸಂಸ್ಥೆಯು ಕಾರ್ಯನಿರ್ವಹಿಸುತ್ತದೆ.
  • ಇತ್ತೀಚೆಗೆ ಟರ್ಕಿಯಳ್ಳಿ ನಡೆದ ಶೃಂಗಸಭೆಯಲ್ಲಿ, “ಪೂರ್ವ ಜೆರುಸಲೆಮ್” ಯು ಪ್ಯಾಲೆಸ್ಟೈನ್ ರಾಜಧಾನಿಯಾಗಿ ಘೋಷಿಸಿತು, ಯುಎಸ್ ನ ಈ ನಿಲುವು “ಅಪಾಯಕಾರಿ” ಎಂದು ತಿರಸ್ಕರಿಸಿತು.

 

15.ವೇದಗಳ ಕುರಿತು ವಿಶ್ವ ಸಮ್ಮೇಳನ

 

  • ಈ ಸಮ್ಮೇಳನವನ್ನು ನವ ದೆಹಲಿಯಲ್ಲಿ ಆಯೋಜಿಸಲಾಗಿತ್ತು . ಇದನ್ನು ಉಪರಾಷ್ಟ್ರಪತಿ ಉದ್ಘಾಟಿಸಿದರು
  • ವೇದಗಳ ಮತ್ತು ಮನು ಸ್ಮೃತಿಯ ಸುತ್ತಮುತ್ತಲಿನ ವಿವಿಧ ಪುರಾಣಗಳ ಹಾಗು ಪರಾಕಾಷ್ಠೆಗಳ ಬಗ್ಗೆ ಇದು ಆಳವಾದ ಚರ್ಚೆಗಳನ್ನು ಹೊಂದಿರುತ್ತದೆ.
  • ವಿಶ್ವ ಸಂಸತ್ತು ಮತ್ತು ಯುಎನ್ ನ ಸಮರ್ಥನೀಯ ಅಭಿವೃದ್ಧಿ ಗುರಿಗಳು (SDGs) ಮತ್ತು ಮಾನವ ಹಕ್ಕುಗಳ ಘೋಷಣೆಯ ವಿಶೇಷ ಅಧಿವೇಶನವು ಸಮ್ಮೇಳನದ ಇತರ ಪ್ರಮುಖ ಲಕ್ಷಣಗಳಾಗಿವೆ.
Share