16th AUGUST.-DAILY CURRENT AFFAIRS BRIEF

16th AUGUST

 

1.ಕನ್ಯಾಶ್ರೀ ಯೋಜನೆ

SOURCE-THE HINDU https://www.thehindubusinessline.com/news/national/west-bengal-government-lifts-family-income-ceiling-for-kanyashree/article24688446.ece

 

ವಿದ್ಯಾರ್ಥಿಗಳ ಗಮನಕ್ಕೆ

ಪ್ರಿಲಿಮ್ಸ್ ಪರೀಕ್ಷೆಗಾಗಿ -ಈ ಯೋಜನೆಯ ಮುಖ್ಯ ಲಕ್ಷಣಗಳು,ಹಾಗು ಇದಕ್ಕೆ ದೊರೆತಿರುವ    ಸಾರ್ವಜನಿಕ ಪ್ರಶಸ್ತಿಗಳ ಬಗ್ಗೆ

ಮುಖ್ಯ ಪರೀಕ್ಷೆಗಾಗಿ-ಈ ಯೋಜನೆಯ ಪ್ರಾಮುಖ್ಯತೆ ಮತ್ತು ಕಾರ್ಯಕ್ಷಮತೆ.ಬಗ್ಗೆ ವಿಶ್ಲೇಷಿಸಿ

 

ಪ್ರಮುಖ ಸುದ್ದಿ

  • ವಿಶ್ವಸಂಸ್ಥೆ ಸಾರ್ವಜನಿಕ ಸೇವಾ ಪ್ರಶಸ್ತಿ ವಿಜೇತ ಕನ್ಯಾಶ್ರೀ ಯೋಜನೆಯಡಿಯಲ್ಲಿ ಫಲಾನುಭವಿಯಾಗಿರುವ ಕುಟುಂಬದ ವಾರ್ಷಿಕ ಗಳಿಕೆಗೆ ಯಾವುದೇ ಒಳತಾರಸಿ (ಸೀಲಿಂಗ್) ಇಲ್ಲ ಎಂದು ಪಶ್ಚಿಮ ಬಂಗಾಳ ಸರ್ಕಾರ ಘೋಷಿಸಿದೆ.
  • ಪ್ರಸಕ್ತ, ವಾರ್ಷಿಕ ಕುಟುಂಬ ಆದಾಯ ರೂ. 20 ಲಕ್ಷಕ್ಕಿಂತ ಹೆಚ್ಚಿನವಲ್ಲದವರು ಪ್ರಯೋಜನಗಳನ್ನು ಪಡೆಯಲು ಅರ್ಹರಾಗಿರುತ್ತಾರೆ.
  • ಶೀಘ್ರದಲ್ಲೇ ರಾಜ್ಯ ಸರ್ಕಾರವು ಬಾಲಕಿಯರಿಗಾಗಿ “ಕನ್ಯಾಶ್ರೀ ವಿಶ್ವವಿದ್ಯಾನಿಲಯ”  ವನ್ನು ಪ್ರಾರಂಭಿಸಲಿದೆ .

ಮುಖ್ಯ ಅಂಶಗಳು

ಕನ್ಯಾಶ್ರೀ  ಯೋಜನೆ ಬಗ್ಗೆ

  • ಕನ್ಯಾಶ್ರೀ ಪ್ರಕಲ್ಪಾ ಹದಿಹರೆಯದ ಹುಡುಗಿಯರ ಜೀವನ ಮತ್ತು ಸ್ಥಿತಿಯನ್ನು ಸುಧಾರಿಸಲು ಪಶ್ಚಿಮ ಬಂಗಾಳ ಸರಕಾರದ ಒಂದು ಉಪಕ್ರಮವಾಗಿದೆ.
  • ಈ ಯೋಜನೆಯಡಿ ಅನಾನುಕೂಲಕರ ಕುಟುಂಬಗಳ ಹೆಣ್ಣುಮಕ್ಕಳಿಗೆ ಉನ್ನತ ಶಿಕ್ಷಣವನ್ನು ಪಡೆಯಲು ಹಣಕಾಸಿನ ಸಹಾಯವನ್ನು ಒದಗಿಸಲಾಗುತ್ತದೆ.
  • ಇದು ಬಾಲ್ಯ ವಿವಾಹವನ್ನು ತಡೆಗಟ್ಟುವ ಗುರಿ ಹೊಂದಿದೆ. ಶೈಕ್ಷಣಿಕ ಸಾಧನೆ, ಬಾಲ್ಯ ವಿವಾಹ ತಡೆಗಟ್ಟುವುದು ಮತ್ತು ಆರ್ಥಿಕ ಸೇರ್ಪಡೆ ಯೋಜನೆಯ ಉದ್ದೇಶಗಳು. ಅಕ್ಟೋಬರ್ 2013ರಲ್ಲಿ ಮಮತಾ ಬ್ಯಾನರ್ಜಿ ಈ ಯೋಜನೆಯನ್ನು ಪ್ರಾರಂಭಿಸಿದರು.
  • ಕಳೆದ ವರ್ಷ ಈ ಯೋಜನೆಗೆ ವಿಶ್ವಸಂಸ್ಥೆ ಸಾರ್ವಜನಿಕ ಸೇವಾ ಪ್ರಶಸ್ತಿಯನ್ನು ಪಡೆದುಕೊಂಡಿದೆ.

 

ಯೋಜನೆಯ ಕಾರ್ಯಕ್ಷಮತೆ:

  • ಈ ಯೋಜನೆಯ ಮೂಲಕ, ಒದುತ್ತಿರುವ  ಮತ್ತು ಅವಿವಾಹಿತರಾಗಿರುವ .  ಹೆಣ್ಣುಮಕ್ಕಳ  ಬ್ಯಾಂಕ್ ಖಾತೆಗೆ ಪ್ರತಿ ವರ್ಷವೂ  ನಗದನ್ನು ಠೇವಣಿ ಮಾಡಲಾಗುತ್ತಿದೆ .
  • ಈ ಉಪಕ್ರಮವು “ಬಾಲ್ಯ ವಿವಾಹದಲ್ಲಿ ತೀವ್ರವಾದ ಕಡಿತ, ಸ್ತ್ರೀ ಶಿಕ್ಷಣ ಮತ್ತು ಸ್ತ್ರೀ ಸಬಲತೆ ಹೆಚ್ಚಳ” ಕ್ಕೆ ಕಾರಣವಾಯಿತು.

 

ವಿಶ್ವಸಂಸ್ಥೆ ಸಾರ್ವಜನಿಕ ಸೇವಾ ಪ್ರಶಸ್ತಿ  

  • ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರಕ್ಕೆ ವಿಶ್ವಸಂಸ್ಥೆ ಸಾರ್ವಜನಿಕ ಸೇವಾ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿಯನ್ನು ಮಮತಾ ಬ್ಯಾನರ್ಜಿ ರವರು ಹೇಗ್ ನಲ್ಲಿ ಸ್ವೀಕರಿಸಿದರು. ಪಶ್ಚಿಮ ಬಂಗಾಳದ ರಾಜ್ಯ ಸರ್ಕಾರದ ಕನ್ಯಾಶ್ರೀ ಪ್ರಕಲ್ಪಾ (ಹೆಣ್ಣು ಮಕ್ಕಳ) ಯೋಜನೆಗಾಗಿ …….CLICK HERE TO READ MORE
Share