16th NOVEMBER-DAILY CURRENT AFFAIRS BRIEF

16th NOVEMBER

 

1.ನಾಗರಿಕ ವಿಮಾನ ಯಾನ ಸಹಕಾರ ಉತ್ತೇಜನಕ್ಕಾಗಿ ಭಾರತ ಮತ್ತು ಪೋಲ್ಯಾಂಡ್ ನಡುವೆ ಎಂ.ಓ.ಯು.ಗೆ ಸಂಪುಟ ಅನುಮೋದನೆ

ಪ್ರಮುಖ ಸುದ್ದಿ

  • ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತ ಮತ್ತು ಪೋಲ್ಯಾಂಡ್ ನಡುವೆ ನಾಗರಿಕ ವಿಮಾನಯಾನ ಸಹಕಾರ ಉತ್ತೇಜನಕ್ಕಾಗಿ ತಿಳಿವಳಿಕೆ ಒಪ್ಪಂದ (ಎಂ.ಓ.ಯು.) ಗೆ ಅಂಕಿತ ಹಾಕಲು ತನ್ನ ಅನುಮೋದನೆ ನೀಡಿದೆ.
  • ಈ ತಿಳಿವಳಿಕೆ ಒಪ್ಪಂದಕ್ಕೆ ಎರಡೂ ಸರ್ಕಾರಗಳ ಅನುಮೋದನೆಯ ಬಳಿಕ ಎರಡೂ ದೇಶಗಳ ಪರಿವಾಗಿ ಅಂಕಿತ ಹಾಕಲಾಗುತ್ತದೆ. ಈ ತಿಳಿವಳಿಕೆ ಒಪ್ಪಂದವು ಐದು ವರ್ಷಗಳ ಅವಧಿಯದಾಗಿರುತ್ತದೆ.

ಮುಖ್ಯ ಅಂಶಗಳು

  • ಈ ತಿಳಿವಳಿಕೆ ಒಪ್ಪಂದದ ಉದ್ದೇಶವು, ನಾಗರಿಕ ವಿಮಾನಯಾನ ಅದರಲ್ಲೂ ಭಾರತದಲ್ಲಿ ಪ್ರಾದೇಶಿಕ ವಾಯು ಸಂಪರ್ಕ ಸುಧಾರಣೆ ಮತ್ತು ಸ್ಥಾಪನೆಯ ಮಹತ್ವ ಕುರಿತಂತೆ ಪರಸ್ಪರರ ಲಾಭವನ್ನು ಗುರುತಿಸುವುದಾಗಿದೆ.
  • ಜೊತೆಗೆ ಎರಡೂ ಕಡೆಯವರು ಪರಿಸರ ಪರೀಕ್ಷೆ ಅಥವಾ ಅನುಮೋದನೆಗಳು, ವಿಮಾನಗಳ ಸಿಮ್ಯುಲೇಟರ್ಗಳ ಮೇಲ್ವಿಚಾರಣೆ ಮತ್ತು ಅನುಮೋದನೆ, ವಿಮಾನ ನಿರ್ವಹಣೆಯ ಸೌಲಭ್ಯಗಳ ಅನುಮೋದನೆ, ನಿರ್ವಹಣಾ ಸಿಬ್ಬಂದಿಯ ಅನುಮೋದನೆ ಮತ್ತು ವಿಮಾನ ಸಿಬ್ಬಂದಿ ಸದಸ್ಯರ ಅನುಮೋದನೆಯನ್ನು ಮಾನ್ಯಗೊಳಿಸುತ್ತವೆ.

ಈ ತಿಳಿವಳಿಕೆ ಒಪ್ಪಂದದ ಮುಖ್ಯ ಕ್ಷೇತ್ರವು ಈ ಕೆಳಗಿನ ಪರಸ್ಪರ ಸಹಕಾರವನ್ನು ಉತ್ತೇಜಿಸುವ ಮತ್ತು ಒದಗಿಸುವುದಾಗಿದೆ:

  • ಭಾರತ ಮತ್ತು ಪೋಲ್ಯಾಂಡ್ ನಡುವಿನ ಸಹಕಾರಕ್ಕೆ ಪ್ರತೀಕೂಲ ಪರಿಣಾಮ ಬೀರದ ರೀತಿಯಲ್ಲಿ ಕಾನೂನಾತ್ಮಕ ಮತ್ತು ಪ್ರಕ್ರಿಯಾತ್ಮಕ ವಿಚಾರಗಳನ್ನು ಪರಾಮರ್ಶಿಸಿ ನಾಗರಿಕ ವಿಮಾನಯಾನ ಮಾರುಕಟ್ಟೆಗೆ ಬೆಂಬಲ ನೀಡುವುದು.
  • ವಾಯು ಸಾರಿಗೆಯಲ್ಲಿ ಸುರಕ್ಷತೆ ಮತ್ತು ಭದ್ರತೆಯನ್ನು ಹೆಚ್ಚಿಸಲು ವಾಯು ಯಾನ ನಿಯಂತ್ರಣಗಳು, ಪ್ರಾದೇಶಿಕ ವಾಯುಯಾನ ಕಾರ್ಯಾಚರಣೆ, ವಾಯುಗುಣ ಅಗತ್ಯತೆಗಳು ಮತ್ತು ಸುರಕ್ಷತಾ ಮಾನದಂಡಗಳ ಕುರಿತ ಮಾಹಿತಿ ಮತ್ತು ತಜ್ಞತೆಯನ್ನು ಸಚಿವಾಲಯಗಳ ನಡುವೆ ಮತ್ತು ಸಂಬಂಧಿತ ನಾಗರಿಕ ವಿಮಾನಯಾನ ಪ್ರಾಧಿಕಾರಗಳ ನಡುವೆ ವಿನಿಮಯ ಮಾಡಿಕೊಳ್ಳುವುದು; ಅಥವಾ/ಮತ್ತು
  • ಸುರಕ್ಷತೆಯ ಮೇಲ್ವಿಚಾರಣೆ, ವಾಯುಯಾನ, ಹಾರಾಟ ಕಾರ್ಯಾಚರಣೆಗಳು, ಪರವಾನಗಿ, ಶಾಸನ ಮತ್ತು ಜಾರಿಗೊಳಿಸುವಂತಹ ವಿಷಯಗಳ ಮೇಲೆ, ವಾಯುಯಾನ ಸುರಕ್ಷತೆ ಕುರಿತ ತರಬೇತಿ ಕಾರ್ಯಕ್ರಮಗಳ ಸಂಘಟನೆ ಮತ್ತು/ ಅಥವಾ ಸಹಯೋಗ ಅಥವಾ ಜಂಟಿ ಅಭಿವೃದ್ಧಿ.; ಮತ್ತು / ಅಥವಾ
  • ವಿಮಾನಯಾನ ಸಂಬಂಧಿತ ಸಮಾಲೋಚನೆಗಳು, ಜಂಟಿ ಸಂಘಟನೆ ಮತ್ತು / ಅಥವಾ ಸಮ್ಮೇಳನಗಳ ನಿರ್ವಹಣೆ ಮತ್ತು ವೃತ್ತಿಪರ ವಿಚಾರಸಂಕಿರಣಗಳು, ಕಾರ್ಯಾಗಾರಗಳು, ಮಾತುಕತೆಗಳು ಮತ್ತು ನಾಗರಿಕ ವಿಮಾನಯಾನ ಕ್ಷೇತ್ರಕ್ಕೆ ಸಂಬಂಧಿಸಿದ ಪಕ್ಷಕಾರರ ಪ್ರತಿನಿಧಿಗಳ ಭಾಗವಹಿಸುವಿಕೆಯೊಂದಿಗೆ ವಾಯುಯಾನ ಸುರಕ್ಷತೆಯ ಇತರ ಚಟುವಟಿಕೆಗಳು; ಮತ್ತು / ಅಥವಾ
  • ಸಚಿವಾಲಯಗಳ ನಡುವೆ ಮಾಹಿತಿ, ಜ್ಞಾನ, ತಜ್ಞತೆ ಮತ್ತು ಅನುಭವಗಳ ವಿನಿಮಯಕ್ಕಾಗಿ ನಿಯಮಿತ ಮಾತುಕತೆ ಅಥವಾ ಸಭೆ; ಮತ್ತು ಎರಡೂ ಪಕ್ಷಕಾರರ ಪರಸ್ಪರ ಹಿತದೃಷ್ಟಿಯಿಂದ ಸಂಬಂಧಿತ ನಾಗರಿಕ ವಿಮಾನಯಾನ ಸುರಕ್ಷತೆ ಸಂಬಂಧಿತ ಅಭಿವೃದ್ಧಿ.
  • ವಾಯುಯಾನ ಸುರಕ್ಷತೆ ಹಿತದ ವಿಚಾರಗಳು ಮತ್ತು ವಿಷಯಗಳ ಕುರಿತಂತೆ ಸಂಶೋಧನೆಗಳು ಮತ್ತು ಅಧ್ಯಯನಕ್ಕೆ ಸಹಯೋಗ.
  • ಮೇಲೆ ಪ್ರಸ್ತಾಪಿಸಲಾದ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಇತರ ಯಾವುದೇ ವಿಷಯದ ಸಹಕಾರ.

 

SOURCE-PIB

 

  1. ಭಗವಾನ್ ಬಿರ್ಸಾ ಮುಂಡಾ ಜಯಂತಿ

 ಪ್ರಮುಖ ಸುದ್ದಿ

  • ನವೆಂಬರ್ 15 ರಂದು ಭಗವಾನ್ ಬಿರ್ಸಾ ಮುಂಡಾ ಅವರ ಜಯಂತಿಯನ್ನು ಆಚರಿಸಲಾಗುತ್ತದೆ . ರಾಷ್ಟ್ರೀಯ ಚಳುವಳಿಯಲ್ಲಿ   ಅವರ  ಪ್ರಭಾವವನ್ನು ಗುರುತಿಸಿ ಜಾರ್ಖಂಡ್ ರಾಜ್ಯ ವು  2000 ರಿಂದ   ಅವರ ಜನ್ಮದಿನೋತ್ಸವದಲ್ಲಿ  ಆಚರಿಸಲು ಪ್ರಾರಂಭಿಸಿತು .

 

ಬಿರ್ಸಾ ಮುಂಡಾ ರವರ  ಬಗ್ಗೆ(IMPORTANT FOR MAINS)

 

  • ಆದಿವಾಸಿ ಜನಾಂಗದ ಬಿರ್ಸಾ ಮುಂಡಾ ಸ್ವಾತಂತ್ರ್ಯ ಚಳುವಳಿಯಲ್ಲಿ ಮಹತ್ವದ ಪಾತ್ರವಹಿಸಿ ಬ್ರಿಟಿಷ್ ಸಾಮ್ರಾಜ್ಯಕ್ಕೆ ದೊಡ್ಡ ಸ್ವಪ್ನದಂತಿದ್ದರು. ಬಿರ್ಸಾ ಮುಂಡಾ ಅವರು ಜನಿಸಿದ ದಿನ ನವೆಂಬರ್ 15 – 1875. ಆತನ ಊರು ರಾಂಚಿಯ ಬಳಿಯ ಲಳಿಹಾಟು.
  • ಆತ ಬದುಕಿದ್ದು ಕೇವಲ 25 ವರ್ಷ. ತನ್ನ ಜನಾಂಗಕ್ಕಾಗಿನ ಹೋರಾಟದಲ್ಲಿ ಆತ ಸೆರೆಮನೆಯಲ್ಲಿ ತನ್ನ ಜೀವವನ್ನು ಕಳೆದುಕೊಂಡ ದಿನ ಜೂನ್ 9 – 1900ರಂದು ಮರಣವನ್ನಪ್ಪುತ್ತಾನೆ. ಭಾರತದ ಪಾರ್ಲಿಮೆಂಟ್ ಭವನದಲ್ಲಿ ರಾರಾಜಿಸುತ್ತಿರುವ ಏಕೈಕ ಆದಿವಾಸಿ ಜನಾಂಗೀಯನ ಭಾವ ಚಿತ್ರ ಬಿರ್ಸಾಮುಂಡಾ ಅವರದು.

 

  • ಬಿರ್ಸಾ ಎಂಬುವುದು ಆತನ ಹುಟ್ಟಿದ ಮುಂಡಾ ಆದಿವಾಸಿ ಗುಂಪಿನ ಪದ್ಧತಿಗಳಂತೆ ಆತ ಹುಟ್ಟಿದ ದಿನವಾದ ಗುರುವಾರದ ಸೂಚಕವಂತೆ.
  • ಬ್ರಿಟಿಷರು ಅಪಾರ ಸಂಪತ್ತಿನ ಬೀಡಾಗಿದ್ದ ಭಾರತದ ಮಧ್ಯ ಭಾಗದಲ್ಲಿರುವ ಕಾಡುಗಳ ಮೇಲೆ ತಮ್ಮ ಅಧಿಕಾರ ಸ್ಥಾಪಿಸಲು ಹೊರಟು , ಆ ಕಾಡುಗಳಲ್ಲಿ ವಾಸಿಸುತ್ತಿದ್ದ ಆದಿ ವಾಸಿಗಳು ಇನ್ನು ಮುಂದೆ ಕಾಡಿನ ಉತ್ಪನ್ನಗಳನ್ನು ಸಂಗ್ರಹಿಸುವಂತಿಲ್ಲ ಎಂದು ಆಜ್ಞೆ ಹೊರಡಿಸಿದ್ದರು. ಅದೇ ಸಮಯದಲ್ಲಿ ಈ ಆದಿವಾಸಿಗಳನ್ನು ವ್ಯಾಪಾರಸ್ಥರು ಮತ್ತು ಲೇವಾದೇವಿಗಾರರು ಸುಲಿಯಲಾರಂಭಿಸಿದರು.
  • ಇವೆರಡರ ಮಧ್ಯೆ ಮತಾಂತರಿಗಳು ಮತ್ತು ಧಾರ್ಮಿಕ ಮೂಲಭೂತವಾದಿಗಳು ಆದಿವಾಸಿಗಳನ್ನು ತಮ್ಮ ಧರ್ಮಕ್ಕೆ ಮತಾಂತರಿಸಲು ಹೊಂಚುಹಾಕುತ್ತಿದ್ದರು. ಭೇದಭಾವ ಗೊತ್ತಿಲ್ಲದೇ ಇದ್ದ ಈ ಜನರು ತಮ್ಮ ಮೇಲೆ ಮೂರೂ ದಿಕ್ಕುಗಳಿಂದ ದಾಳಿಗಳು ಪ್ರಾರಂಭವಾದಾಗ ವಿವಿಧ ಪ್ರದೇಶಗಳಲ್ಲಿ ವಿವಿಧ ನಾಯಕರ ನೇತೃತ್ವದಲ್ಲಿ ಪ್ರತಿಭಟಿಸಲಾರಂಭಿಸಿದರು. ಇಂತಹ ಸಂದರ್ಭದಲ್ಲಿ ಓರ್ವ ರೈತ ಗುತ್ತಿಗೆದಾರನ ಕುಟುಂಬದಲ್ಲಿ ಸುಗನ ಮುಂಡು ಮತ್ತು ಕರ್ಮಿ ಹಾತು ಅವರ ಮಗನಾಗಿ ಬಿರ್ಸಾ ಮುಂಡಾ ಜನಿಸಿದ.
  • ಬಿರ್ಸಾನಿಗೆ ಹನ್ನೆರಡು ವರ್ಷ ವಯಸ್ಸಾಗುತ್ತಲೇ ಧರ್ಮ ಪ್ರಚಾರಕರು ತಮ್ಮ ಧರ್ಮದ ಶ್ರೇಷ್ಠತೆಯನ್ನು ಕೊಂಡಾಡುತ್ತಲೇ ಆದಿವಾಸಿಗಳ ಸಂಸ್ಕøತಿಯನ್ನು ಹೀಗಳೆಯುದರ ವಿರುದ್ಧ ಆಗಲೇ ಆತ ಆಕ್ರೋಶಗೊಂಡಿದ್ದ. ಮತ್ತೊಂದೆಡೆ ಬಿಳಿಯರ ಕಾನೂನುಗಳು ಮತ್ತು ವ್ಯಾಪಾರಸ್ಥರ ಕಪಟತನಗಳ ನಡುವೆ ಜನ ತಮ್ಮ ಭೂಮಿಯನ್ನು ಕಳೆದುಕೊಂಡು ದಿನಗೂಲಿಗಳಾಗುತ್ತಿರುವುದನ್ನು ನೋಡಿ ಆತ ಆತಂಕಗೊಂಡಿದ್ದ. ಇಂತಹ ದಿನಗಳಲ್ಲೇ ಬ್ರಿಟಿಷರ ವಿರುದ್ಧ ಆದಿವಾಸಿಗಳು ದಂಗೆ ಏಳಲಾರಂಭಿಸಿದ್ದರು.

 

ಬ್ರಿಟಿಷರ ವಿರುದ್ಧ ಸೆಣಸಾಟ

 

  • ಬ್ರಿಟಿಷ್ ಸರಕಾರ ಎಲ್ಲ ಕಾಡುಗಳನ್ನೂ ಮತ್ತು ಅವುಗಳಲ್ಲಿದ್ದ ಹಳ್ಳಿಗಳನ್ನೂ ರಕ್ಷಿತ ಅರಣ್ಯ ಪ್ರದೇಶಗಳೆಂದು ಘೋಷಿಸಿತು. ಆ ಮೂಲಕ ಆದಿವಾಸಿಗಳ ಎಲ್ಲಾ ಹಕ್ಕುಗಳನ್ನೂ ಕಿತ್ತುಕೊಂಡಿತು. ಬ್ರಿಟಿಷರ ಈ ನೀತಿಯ ವಿರುದ್ಧ ಬಿರ್ಸಾ ತನ್ನ ಜನಪ್ರಿಯತೆಯನ್ನೇ ಸ್ವಾತಂತ್ರ್ಯ ಸಂಗ್ರಾಮವಾಗಿ ರೂಪಿಸುವಲ್ಲಿ ಯಶಸ್ವಿಯಾದ.
  • ಬ್ರಿಟಿಷರಿಂದ ಭೂಮಾಲೀಕರಿಂದ ಮತ್ತು ವ್ಯಾಪಾರಸ್ಥರಿಂದ ಬಿಡುಗಡೆಯ ಹೋರಾಟಕ್ಕೆ ತನ್ನ ಜನರನ್ನು ಸಜ್ಜುಗೊಳಿಸಿದ. 1894ರ ಅಕ್ಟೋಬರ್ 1 ರಂದು ಚೋಟಾ ನಾಗ್ಪುರ್ ಎಂಬಲ್ಲಿಗೆ ಬೃಹತ್ ಮೆರವಣಿಗೆ ಕರೆ ನೀಡಿದ. ಉಳುವವನೇ ಭೂಮಿಯ ಒಡೆಯನಾಗಬೇಕು. ಮಹಾರಾಣಿಯ ಆಡಳಿತವನ್ನು ಸ್ಥಾಪಿಸಬೇಕು ಎಂಬ ಎರಡು ಉದ್ಧೇಶಗಳು ಈ ಮೆರವಣಿಗೆಯ ಪ್ರಮುಖ ಅಂಶಗಳಾಗಿತ್ತು.
  • ಬಿರ್ಸಾನ ಕರೆಗೆ ಆದಿವಾಸಿಗಳು ಸ್ಪಂದಿಸಿದ್ದರಿಂದ ಮೆರವಣಿಗೆ ಯಶಸ್ಪಿಯಾಯಿತು. ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದ ಬಿರ್ಸಾನ ಜನಪ್ರಿಯತೆಯನ್ನು ಕಂಡು ಬ್ರಿಟಿಷರು ಕಂಗಾಲಾದರು. ಕೂಡಲೇ ಆತನನ್ನು ಬಂಧಿಸಿ ಹಜಿರಾಬಾದ್ ಜೈಲಿಗೆ ಹಾಕಿದರು. ಎರಡು ವರ್ಷಗಳನ್ನು ಸೆರೆಮನೆಯಲ್ಲಿ ಕಳೆದು ಹೊರಬರುತ್ತಿದ್ದಂತೆಯೇ ಬಿರ್ಸಾ ತನ್ನ ಚಳುವಳಿಯ ರೂಪವನ್ನೇ ಬದಲಾಯಿಸಿದ. ಬಿಡುಗಡೆಯ ನಂತರ ಭೂಗತನಾದ ಬಿರ್ಸಾ ಬ್ರಿಟಿಷರ ವಿರುದ್ಧ ಸಶಸ್ತ್ರ ಹೋರಾಟವನ್ನು ಪ್ರಾರಂಭಿಸಿದ.
  • ಬ್ರಿಟಿಷರ ಕಚೇರಿ ಕಟ್ಟಡಗಳ ಮೇಲೆ, ಅವರನ್ನು ಬೆಂಬಲಿಸುತ್ತಿದ್ದ ಜನರ ಮನೆಗಳ ಮೇಲೆ ಮತ್ತು ಪೊಲೀಸರ ತಂಡಗಳ ಮೇಲೆ ಬಿರ್ಸಾನ ಆದಿವಾಸಿಗಳ ಗೆರಿಲ್ಲಾ ಸೈನ್ಯ ದಾಳಿ ಮಾಡಿತು. ನೂರಾರು ಪೊಲೀಸರನ್ನು ಕೊಂದು ಹಾಕಿತು. ಒಮ್ಮೆ ರಾಂಚಿ ಮತ್ತು ಕುಂತಿ ಎಂಬಲ್ಲಿ ಸುಮಾರು ನೂರಾರು ಕಟ್ಟಡಗಳನ್ನು ಭಸ್ಮ ಮಾಡಿತು.
  • ಬಿರ್ಸಾನನ್ನು ಹಿಡಿದು ಕೊಟ್ಟವರಿಗೆ 500 ರೂಪಾಯಿಗಳ ಬಹುಮಾನವನ್ನು ಬ್ರಿಟಿಷ್ ಸರಕಾರ ಘೋಷಿಸಿತು. ಛೋಟಾ ನಾಗ್ಪುರ್ 550 ಚದರ ಮಿಲಿ ಪ್ರದೇಶದಲ್ಲಿ ಆತನ ಹೋರಾಟ ವ್ಯಾಪಿಸಿತ್ತು.
  • 1899ರಲ್ಲಿ ಆತ ತನ್ನ ಬಂಡಾಯವನ್ನು ಮತ್ತಷ್ಟು ತೀವ್ರಗೊಳಿಸಿದ. ಕುಂತಿ, ಒಮರ್, ಬಸಿಯಾ ಮುಂತಾದ ಕಡೆಗಳಲ್ಲಿ ಪೊಲೀಸ್ ಠಾಣೆಗಳ ಮೇಲೆ ದಾಳಿಗಳು ನಡೆದವು. 8 ಪೊಲೀಸರು ಕೊಲ್ಲಲ್ಪಟ್ಟು 32 ಜನ ಪರಾರಿಯಾದರು. ಸುತ್ತಮುತ್ತಲಿನಲ್ಲಿ ವಾಸಿಸುತ್ತಿದ್ದ ಬಿಳಿಯರು ತಮ್ಮ ಪ್ರಾಣಕ್ಕೆ ಹೆದರಿ ಅಲ್ಲಿಂದ ಓಡಿ ಹೋದರು. 89 ಭೂಮಾಲಿಕರ ಮನೆಗಳು ಬೂದಿಯಾದವು. ಚರ್ಚ್ ಮತ್ತು ಬ್ರಿಟಿಷರ ಆಸ್ತಿಗಳಿಗೆ ಬೆಂಕಿಬಿದ್ದವು. ಆದಿವಾಸಿಗಳ ದಂಗೆ ಎಷ್ಟು ತೀವ್ರವಾಗಿತ್ತೆಂದರೆ ರಾಂಚಿಯ ಜಿಲ್ಲಾಧಿಕಾರಿಗೆ ಅದನ್ನು ತಡೆಯಲಾಗದೆ ಕೊನೆಗೆ ಸೈನ್ಯಕ್ಕೇ ಬರ ಹೇಳಿದ.
  • ಬಿರ್ಸಾ ತನ್ನ ದಂಗೆಯ ಎರಡನೇ ಅಧ್ಯಾಯಕ್ಕೆ ಚಾಲನೆ ನೀಡಿದ. ಈ ಅಧ್ಯಾಯದಲ್ಲಿ ಬ್ರಿಟಿಷರು ಮಾತ್ರವಲ್ಲ ಅವರೊಂದಿಗೆ ಕೈಜೋಡಿಸಿದ್ದ ಲೇವಾದೇವಿಗಾರರು, ಭೂಮಾಲೀಕರು, ಗುತ್ತಿಗೆದಾರರು ಬಿರ್ಸಾನ ಸೈನ್ಯದ ದಾಳಿಗೆ ಗುರಿಯಾದರು. ಬಹಳಷ್ಟು ಜನ ಸಾವೀಗೀಡಾದರು.. ಲೆಕ್ಕವಿಲ್ಲದಷ್ಟು ಕಟ್ಟಡಗಳು ದ್ವಂಸಗೊಂಡವು.
  • ಈ ವೇಳೆ ಬ್ರಿಟಿಷರ ಸೈನ್ಯ ರಾಂಚಿಗೆ ಆಗಮಿಸಿತು. ಅವರ ಬಂದೂಕುಗಳ ಮುಂದೆ ಬಿರ್ಸಾನ ಆದಿವಾಸಿಗಳ ಸೈನ್ಯದ ಬಿಲ್ಲು ಬಾಣಗಳು ಯಾವ ಲೆಕ್ಕಕ್ಕೂ ಇರಲಿಲ್ಲ. ದುಂಬಾರಿ ಬೆಟ್ಟದ ಹತ್ತಿರ ಬಿರ್ಸಾ ಮತ್ತು ಬ್ರಿಟಿರ ಸೈನ್ಯವು ಮುಖಾಮುಖಿಯಾಯಿತು. ಈ ಹತ್ಯಕಾಂಡದ ನಂತರ ಜನ ಈ ಬೆಟ್ಟವನ್ನು ಹೆಣಗಳ ಬೆಟ್ಟ ಎಂದು ಕರೆಯಲಾರಂಭಿಸಿತು.
  • 1899 ಮಾರ್ಚ್ ತಿಂಗಳಲ್ಲಿ ಚಕ್ರ ದುರ್ಪುರ್ ಎಂಬ ಕಾಡಿನಲ್ಲಿ ಬಿರ್ಸಾ ನಿದ್ರಿಸುತ್ತಿದ್ದಾಗ ಆತನನ್ನು ಬ್ರಿಟಿಷರು ಬಂದಿಸಿದರು. ಬಿರ್ಸಾ ಮತ್ತು ಆತನ 482 ಸಂಗಡಿಗರ ವಿರುದ್ಧ ಹಲವಾರು ಆರೋಪಗಳನ್ನು ದಾಖಲಿಸಿ ವಿಚಾರಣೆಗಳನ್ನು ಪ್ರಾರಂಭಿಸಲಾಯಿತು. ಈ ಪ್ರಕರಣಗಳ ವಿಚಾರಣೆ ನಡೆಯುತ್ತಿದ್ದಾಗಲೇ ಬಿರ್ಸಾ ಜೈಲಿನಲ್ಲಿ ರಕ್ತವನ್ನು ವಾಂತಿ ಮಾಡಿಕೊಳ್ಳಲು ಆರಂಭಿಸಿದ.
  • 1900 ಜೂನ್ 9 ರಂದು ಬಿರ್ಸಾ ಜೈಲಿನಲ್ಲೇ ಕೊನೆಯುಸಿರೆಳೆದ. ಆಗ ಆತನಿಗೆ ಕೇವಲ 25 ವರ್ಷ. ತನ್ನ ಜನಗಳಿಗೆ ಹೋರಾಡಿದ ಬಿರ್ಸಾ ಮುಂಡಾ ಆದಿವಾಸಿಗಳಲ್ಲಿ ಇನ್ನೂ ಜೀವಂತವಾಗಿದ್ದಾನೆ. ಇಂದು ಬಿರ್ಸಾ ಮುಂಡಾ ಹೆಸರಿನಲ್ಲಿ ರಾಂಚಿಯ ವಿಮಾನ ನಿಲ್ದಾಣವಿದೆ. ಬಿರ್ಸಾ ತಂತ್ರಜ್ಞಾನ ಕಾಲೇಜು , ಬಿರ್ಸಾ ಕೃಷಿ ಕಾಲೇಜು, ಪ್ರಸಿದ್ಧ ಆಟದ ಮೈದಾನ ಇವೆಲ್ಲ ಬಿರ್ಸಾ ನೆನಪಿಗಾಗಿವೆ. ಕೇವಲ 25 ವರ್ಷದಲ್ಲಿ ಬಿರ್ಸಾ ಮಾಡಿದ ಸಾಧನೆಯನ್ನು ಹೇಳಿ ಕೊಂಡಾಡಲು ಸಾಧ್ಯವಿಲ್ಲ..

SOURCE-THE HINDU

 

3.ಪ್ರಧಾನಮಂತ್ರಿ ವಸತಿ ಯೋಜನೆಯಡಿಯಲ್ಲಿ ಬಡ್ಡಿ ಸಬ್ಸಿಡಿಗೆ ಅರ್ಹವಾದ ಮನೆಗಳ ಕಾರ್ಪೆಟ್ ಪ್ರದೇಶವನ್ನು ಹೆಚ್ಚಿಸಲು ಸಂಪುಟದ ಅನುಮೋದನೆ

ಪ್ರಮುಖ ಸುದ್ದಿ

  • ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಪ್ರಧಾನಮಂತ್ರಿ ವಸತಿ ಯೋಜನೆ (ನಗರ) ಅಡಿಯಲ್ಲಿ ಮಧ್ಯಮ ಆದಾಯದ ಗುಂಪು (ಎಂ.ಐ.ಜಿ.)ಗಳಿಗೆ ಸಬ್ಸಿಡಿ ಸಂಪರ್ಕಿತ ಸಾಲ ಯೋಜನೆ (ಸಿ.ಎಲ್.ಎಸ್.ಎಸ್.)ಯಡಿಯಲ್ಲಿ ಬಡ್ಡಿ ಸಬ್ಸಿಡಿಗೆ ಅರ್ಹವಾದ ಮನೆಗಳ ಕಾರ್ಪೆಟ್ ಪ್ರದೇಶವನ್ನು ಹೆಚ್ಚಿಸಲು ತನ್ನ ಅನುಮೋದನೆ ನೀಡಿದೆ.
  • ಯೋಜನೆಯ ಉದ್ದೇಶ, ವ್ಯಾಪ್ತಿ ಮತ್ತು ಅದರ ತಲುಪಿಸುವಿಕೆಯನ್ನು ಹೆಚ್ಚಿಸಲು ಸಂಪುಟವು ಈ ಕೆಳಗಿನ ಅಂಶಗಳಿಗೆ ಅನುಮೋದನೆ ನೀಡಿದೆ:
  1. ಎಂ.ಐ.ಜಿ. I ವರ್ಗದಲ್ಲಿ ಸಿಎಲ್.ಎಸ್.ಎಸ್.ನ ಕಾರ್ಪೆಟ್ ಪ್ರದೇಶವನ್ನು ಹಾಲಿ ಇರುವ 90 ಚದರ ಮೀಟರ್ಗಳಿಂದ “120 ಚದರ ಮೀಟರ್ ವರೆಗೆ’’ ಮತ್ತು ಎಂ.ಐ.ಜಿ.
  2. I I ವರ್ಗದಲ್ಲಿ ಸಿಎಲ್.ಎಸ್.ಎಸ್. ಅನ್ನು ಹಾಲಿ ಇರುವ 110 ಚದರ ಮೀಟರ್ ಗಳಿಂದ ‘150 ಚದರ ಮೀಟರ್’ವರೆಗೆ ಹೆಚ್ಚಿಸಲಾಗಿದೆ..
  • ಎಂ.ಐ.ಜಿ.ಗಾಗಿ ಸಿ.ಎಲ್.ಎಸ್.ಎಸ್. ನಗರ ಪ್ರದೇಶದ ವಸತಿ ಕೊರತೆಯನ್ನು ನಿವಾರಿಸುವಲ್ಲಿ ಒಂದು ಸಕಾರಾತ್ಮಕ ಹೆಜ್ಜೆಯಾಗಿದೆ. ಜೊತೆಗೆ ಮಧ್ಯಮ ಆದಾಯ ವರ್ಗದವರಿಗೆ ಬಡ್ಡಿ ಸಬ್ಸಿಡಿ ಯೋಜನೆಯ ಲಾಭ ದೊರಕುವಂತೆ ಮಾಡಲು ಕೈಗೊಂಡ ಅಗ್ರ ಹೆಜ್ಜೆಯಾಗಿದೆ.
  • ಎಂ.ಐ.ಜಿ.ಗಾಗಿ ಸಿಎಲ್.ಎಸ್.ಎಸ್. ಎಂ.ಐ.ಜಿ.ಯಲ್ಲಿ ಎರಡು ಆದಾಯದವರಿಗೆ ಅನ್ವಯಿಸುತ್ತದೆ. ವಾರ್ಷಿಕ ರೂ. 6,00,001 ರಿಂದ 12,00,000 (ಎಂ.ಐ.ಜಿ.-I) ಮತ್ತುರೂ.12,00,001 ರಿಂದ ರೂ.18,00,000 (ಎಂ.ಐ.ಜಿ-II)

 

  • ಎಂ.ಐ.ಜಿ.-1ರಲ್ಲಿ, 9 ಲಕ್ಷ ರೂಪಾಯಿಗಳವರೆಗಿನ ಸಾಲಕ್ಕೆ ಶೇ.4ರಷ್ಟು ಬಡ್ಡಿ ಸಬ್ಸಿಡಿಯನ್ನು ಒದಗಿಸಿದರೆ, ಎಂಐಜಿ -2ರಲ್ಲಿ 12 ಲಕ್ಷ ರೂಪಾಯಿಗಳ ಸಾಲಕ್ಕೆ ಶೇ.3ರಷ್ಟು ಬಡ್ಡಿ ದರ ಸಬ್ಸಿಡಿ ನೀಡಲಾಗುತ್ತದೆ.

 

  • ಬಡ್ಡಿ ಸಬ್ಸಿಡಿಯನ್ನು ಸಾಲದ ಗರಿಷ್ಠ ಅವಧಿಯಾದ 20 ವರ್ಷಗಳು ಅಥವಾ ವಾಸ್ತವ ಅವಧಿ ಈ ಎರಡರಲ್ಲಿ ಯಾವುದು ಕಡಿಮೆಯೋ ಅದಕ್ಕೆ ಲೆಕ್ಕ ಹಾಕಲಾಗುತ್ತದೆ. 9 ಲಕ್ಷ ಮತ್ತು 12 ಲಕ್ಷ ಮೇಲ್ಪಟ್ಟ ಗೃಹ ಸಾಲಗಳು ಸಬ್ಸಿಡಿಯೇತರ ದರದಲ್ಲಿರುತ್ತವೆ.
  • ಎಂ.ಐ.ಜಿ.ಗಾರಿ ಸಿಎಲ್.ಎಸ್.ಎಸ್. ಪ್ರಸ್ತುತ 03.2019ರವರೆಗೆ ಮಾತ್ರ ಜಾರಿಯಲ್ಲಿರುತ್ತದೆ.

ಪರಿಣಾಮ

 

  • 120 ಚದರ ಮೀಟರ್ ಮತ್ತು 150 ಚದರ ಮೀಟರ್ ಗಮನಾರ್ಹ ಹೆಚ್ಚಳವಾಗಿದೆ ಮತ್ತು ಯೋಜನೆಯಲ್ಲಿ ನಿರ್ದಿಷ್ಟಪಡಿಸಿರುವ ಎರಡು ಆದಾಯ ವರ್ಗಗಳಿಗೆ ಸೇರಿದ ಎಂ.ಐ.ಜಿ.ಯ ಮಾರುಕಟ್ಟೆಯ ಹುಡುಕಾಟದ ಅಗತ್ಯ ಪೂರೈಸುತ್ತದೆ.
  • ಕಾರ್ಪೆಟ್ ಪ್ರದೇಶದ ಏರಿಕೆಯು ಎಂ.1 ವರ್ಗದ ವ್ಯಕ್ತಿಗಳಿಗೆ ಅಭಿವೃದ್ಧಿ ಪಡಿಸಿದ ವಸತಿ ಯೋಜನಗಳ ವಿಸ್ತೃತ ಆಯ್ಕೆಗೆ ಅವಕಾಶ ನೀಡುತ್ತದೆ.
  • ಕಾರ್ಪೆಟ್ ಪ್ರದೇಶದ ಹೆಚ್ಚಳವು ಕೈಗೆಟಕುವ ದರದ ವಸತಿ ವಲಯದಲ್ಲಿ ಈಗಾಗಲೇ ನಿರ್ಮಾಣ ಮಾಡಲಾಗಿರುವ ಫ್ಲಾಟ್ ಗಳ ಮಾರಾಟಕ್ಕೂ ಉತ್ತೇಜನ ನೀಡುತ್ತದೆ.

ಹಿನ್ನೆಲೆ :

  • ವಸತಿ ಹಾಗೂ ನಗರ ವ್ಯವಹಾರಗಳ ಸಚಿವಾಲಯವು 12.2016ರಂದು ಮಾನ್ಯ ಪ್ರಧಾನಮಂತ್ರಿಯವರು ದೇಶವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಬಡವರಿಗೆ ಗೃಹ ಸಾಲ ಪಡೆಯಲು ಉಪಯುಕ್ತವಾಗುವಂತೆ ಪ್ರಕಟಿಸಿದ ರೀತ್ಯ, ಸಬ್ಸಿಡಿ ಸಂಪರ್ಕಿತ ಸಾಲ ಯೋಜನೆಯನ್ನು ಮಧ್ಯಮ ಆದಾಯ ಗುಂಪುಗಳಿಗೆ (ಎಂ.ಐ.ಜಿಗೆ ಸಿ.ಎಲ್.ಎಸ್.ಎಸ್.) ಅನ್ನು ಪ್ರಧಾನಮಂತ್ರಿಯವರ ವಸತಿ ಯೋಜನೆ (ನಗರ) ಅಡಿಯಲ್ಲಿ 01.01.2017ರಿಂದ ಜಾರಿಗೊಳಿಸಿದೆ.

 

SOURCE-PIB

 

4.ಯೂತ್ ಡೆವಲಪ್ಮೆಂಟ್ ಇಂಡೆಕ್ಸ್ ಅಂಡ್ ರಿಪೋರ್ಟ್ 2017 

ಪ್ರಮುಖ ಸುದ್ದಿ   

  • ರಾಜ್ಯಗಳಲ್ಲಿ ನ ಯುವ ಅಭಿವೃದ್ಧಿಯ ಪ್ರವೃತ್ತಿಗಳನ್ನು ಅಳೆಯುವ ಪ್ರಮುಖ ಸಾಧನವಾಗಿರುವ ಯುವ ಅಭಿವೃದ್ಧಿ ಸೂಚ್ಯಂಕ ವರದಿಯನ್ನು ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ   ಬಿಡುಗಡೆ ಮಾಡಿದೆ.

 

ಯುವ ಅಭಿವೃದ್ಧಿ ಸೂಚ್ಯಂಕ  ಬಗ್ಗೆ

 

  • ಇದನ್ನು ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿರುವ ರಾಜೀವ್‍ಗಾಂಧಿ ರಾಷ್ಟ್ರೀಯ ಯುವ ಅಭಿವೃದ್ಧಿ ಸಂಸ್ಥೆ ಅಭಿವೃದ್ಧಿಪಡಿಸಿದೆ.
  • ಭಾರತ ಯುವ ಅಭಿವೃದ್ಧಿ ಸೂಚ್ಯಂಕವು ಅತ್ಯಧಿಕ ಹಾಗೂ ಕನಿಷ್ಠ ಕ್ಷಮತೆಯ ರಾಜ್ಯವನ್ನು ಗುರುತಿಸುವಲ್ಲಿ ನೆರವಾಗುತ್ತದೆ.
  • ಆಯಾ ರಾಜ್ಯದಲ್ಲಿ ಯುವ ಅಭಿವೃದ್ಧಿಯ ನಿಟ್ಟಿನಲ್ಲಿ ದುರ್ಬಲವಾದ ಅಂಶಗಳನ್ನು ಪತ್ತೆ ಮಾಡಿ, ನೀತಿ ನಿರ್ಧಾರಗಳನ್ನು ಕೈಗೊಳ್ಳುವವರಿಗೆ ಆದ್ಯತಾ ವಲಯಗಳ ಬಗ್ಗೆ ತಿಳಿಸಲು ಇದು ನೆರವಾಗುತ್ತದೆ.
  • 2014ರ ರಾಷ್ಟ್ರೀಯ ಯುವ ನೀತಿಯಡಿ ವ್ಯಾಖ್ಯಾನಿಸಿರುವ ಯುವ ಪದದ ಅಂಶಗಳನ್ನು ಬಳಸಿಕೊಂಡು ಇದನ್ನು ಅಭಿವೃದ್ಧಿಪಡಿಸಲಾಗಿದೆ.
  • ಇದರ ಜತೆಗೆ ಕಾಮನ್‍ವೆಲ್ತ್ ದೇಶಗಳಿಗಾಗಿ ಸಿದ್ಧಪಡಿಸಿದ ವಿಶ್ವ ಜಾಗತಿಕ ಅಭಿವೃದ್ಧಿ ವರದಿಯ (15- 29 ವರ್ಷ) ಹಾಗೂ ಕಾಮನ್‍ವೆಲ್ತ್ ಸೂಚ್ಯಂಕವನ್ನು ಬಳಸಿಕೊಂಡು ಜಾಗತಿಕ ಹೋಲಿಕೆ ಮಾಡುವ ಮೂಲಕ ಸೂಚ್ಯಂಕ ಅಭಿವೃದ್ಧಿಪಡಿಸಲಾಗುತ್ತದೆ.
  • ಭಾರತಕ್ಕೆ ಯುಡಿಐ ಹೊಸ ಪರಿಕಲ್ಪನೆಯಾಗಿದುದ, ಇದು ಸಾಮಾಜಿಕ ಸೇರ್ಪಡೆ, ಸಾಮಾಜಿಕ ಪ್ರಗತಿಯಲ್ಲಿ ಸಾಮಾಜಿಕ ಸೇರ್ಪಡೆಯ ಲಭ್ಯತೆ, ಭಾರತ ಸಮಾಜದಲ್ಲಿರುವ ಅಸಮಾನತೆ ಮತ್ತಿತರ ಅಂಶಗಳನ್ನು ಇದು ಪರಿಗಣಿಸುತ್ತದೆ. ಈ ಸೂಚ್ಯಂಕವನ್ನು ಅಬಿವೃದ್ಧಿಪಡಿಸುವುದರಿಂದ ನೀತಿ ಹಸ್ತಕ್ಷೇಪಕ್ಕೆ ಅಗತ್ಯವಾದ ಅಂಶಗಳ ನಡುವಿನ ಅಂತರವನ್ನು ಕಡಿಮೆ ಮಾಡಲು ಸಹಾಯಕವಾಗುತ್ತದೆ.
  • ಈ ಸೂಚ್ಯಂಕವು ಯುವ ಅಭಿವೃದ್ಧಿಯ ಪ್ರತಿಪಾದನೆಯ ಜತೆಗೆ ಸಾಧಿಸಿರುವ ಅಂಶಗಳ ಬಗ್ಗೆ ಕೂಡಾ ಗಮನ ಹರಿಸುತ್ತದೆ. ಇದು ನೀತಿಗಳ ಹಸ್ತಕ್ಷೇಪಕ್ಕೆ ಆದ್ಯತಾ ವಲಯವನ್ನು ಗುರುತಿಸುವಲ್ಲಿ ಕೂಡಾ ಮಹತ್ವದ್ದಾಗಿದೆ.
  • ಇದರ ಜತೆಗೆ ಭೌಗೋಳಿಕ ಪ್ರದೇಶಗಳ ನಡುವೆ ಹೋಲಿಸಲು ಮತ್ತು ಮಾನವ ಅಭಿವೃದ್ಧಿ ಸೂಚ್ಯಂಕವನ್ನು ಸಿದ್ಧಪಡಿಸಲು ಪ್ರಾದೇಶಿಕ ಮಟ್ಟದಲ್ಲಿ, ಸ್ಥಳೀಯ ಮಟ್ಟದಲ್ಲಿ ಮತ್ತು ರಾಷ್ಟ್ರಮಟ್ಟದಲ್ಲಿ ಇದು ನೆರವಾಗುತ್ತದೆ.
  • ಒಂದು ಪರಿಣಾಮಕಾರಿ ನಿರ್ಧಾರ ಕೈಗೊಳ್ಳುವಲ್ಲಿ ಬೆಂಬಲ ಸಾಧನವಾಗಿ ಕಾರ್ಯನಿರ್ವಹಿಸುವ ವೈಡಿಐ-2017, ರಾಷ್ಟ್ರಮಟ್ಟದ ಮತ್ತು ಪ್ರಾದೇಶಿಕ ಮಟ್ಟದ ಪ್ರಗತಿಯನ್ನು ಹಾಗೂ ಲೋಪಗಳನ್ನು ತಿಳಿದುಕೊಳ್ಳುವಲ್ಲಿ, ಯುವ ಅಭಿವೃದ್ಧಿ ನೀತಿ, ಯೋಜನೆ, ಆದ್ಯತೆ ಗುರುತಿಸುವಿಕೆ ಮತ್ತು ಅನುಷ್ಠಾನ ತಂತ್ರಗಳನ್ನು ನಿರ್ಧರಿಸುವಲ್ಲಿ ಸಹಕಾರಿಯಾಗುತ್ತದೆ. ಇದು ಪರ್ಯಾಯಗಳ ಬಗ್ಗೆ ಸೂಚಿಸಲು ಮತ್ತು ಆಯ್ಕೆಗಳ ಬಗ್ಗೆ ಸೂಚಿಸಲು ನೆರವಾಗಲಿದೆ.
  • ಎಲ್ಲಕ್ಕಿಂತ ಹೆಚ್ಚಾಗಿ ಯುವ ಅಭಿವೃದ್ಧಿಗೆ ನೀಡುವ ನೆರವನ್ನು ಹೆಚ್ಚು ನ್ಯಾಯಸಮ್ಮತವಾಗಿ ಹಂಚಿಕೆ ಮಾಡಲು ಸಹಕಾರಿಯಾಗಿದೆ.
  • 2016 ಗ್ಲೋಬಲ್ ಯೂತ್ ಡೆವಲಪ್ಮೆಂಟ್ ಇಂಡೆಕ್ಸ್ (YDI) ನ ಲ್ಲಿ ಭಾರತವು 183 ದೇಶಗಳಲ್ಲಿ 133 ನೇ ಸ್ಥಾನ ಪಡೆದಿದೆ.

 

SOURCE-THE HINDU

 

5.ಭಾರತೀಯರಿಗೆ ವೀಸಾ ನಿಯಮ ಸಡಿಲಿಕೆ ಮಾಡಿದ ಜಪಾನ್

ಪ್ರಮುಖ ಸುದ್ದಿ

 

  • ಭಾರತ-ಜಪಾನ್ ನಡುವಣ ಸಂಬಂಧ ಉತ್ತಮಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜಪಾನ್ ಮಹತ್ವದ ನಿರ್ಧಾರ ಕೈಗೊಂಡಿದೆ. ಜನವರಿ 1ರಿಂದ ಭಾರತೀಯರಿಗೆ ವೀಸಾ ನಿಯಮ ಸಡಿಲಿಕೆ ಮಾಡುವುದಾಗಿ ತಿಳಿಸಿದೆ.

ಮುಖ್ಯ ಸಂಗತಿಗಳು

 

  • ದೇಶದಲ್ಲಿ ಅಲ್ಪಾವಧಿ ವಾಸಮಾಡುವ ಭಾರತೀಯರಿಗೆ ಬಹು ಪ್ರವೇಶ ವೀಸಾ ನೀಡುವುದಾಗಿ ಜಪಾನ್ ತಿಳಿಸಿದೆ. ಈ ಕ್ರಮದಿಂದ ಪ್ರವಾಸಿಗರು, ಉದ್ಯಮಿಗಳು ಹಾಗೂ ನಿರಂತರವಾಗಿ ಭೇಟಿ ನೀಡುವವರಿಗೆ ಅನುಕೂಲವಾಗಲಿದೆ.

 

  • ಕಳೆದ ಒಂದು ವರ್ಷದಲ್ಲಿ ಜಪಾನ್​ಗೆ ಎರಡಕ್ಕಿಂತ ಹೆಚ್ಚು ಭಾರಿ ಭೇಟಿ ನೀಡಿದವರಿಗೆ ಬಹು ಪ್ರವೇಶ ವೀಸಾ ನೀಡಲಾಗುತ್ತದೆ. ಇದಕ್ಕೆ 5 ವರ್ಷ ಸಿಂಧುತ್ವ ಇರಲಿದ್ದು, ಗರಿಷ್ಠ 90 ದಿನಗಳು ಉಳಿದುಕೊಳ್ಳಲು ಅವಕಾಶ ಇರಲಿದೆ.

 

  • ಸರಳೀಕೃತ ನಿಯಮದಡಿಯಲ್ಲಿ ಬಹು ಪ್ರವೇಶ ವೀಸಾ ಬಯಸುವವರು ಪಾಸ್​ಪೋರ್ಟ್ ಜತೆಗೆ ವೀಸಾ ಅರ್ಜಿಗಳನ್ನು ಸಲ್ಲಿಸಿದರೆ ಸಾಕು. ಭಾರತೀಯ ಯುವಕರನ್ನು ಸೆಳೆಯುವ ನಿಟ್ಟಿನಲ್ಲಿ ಫೆಬ್ರವರಿ ತಿಂಗಳಲ್ಲಿ ವಿದ್ಯಾರ್ಥಿಗಳ ಸಿಂಗಲ್ ಎಂಟ್ರಿ ವೀಸಾ ಪ್ರಕ್ರಿಯೆಯನ್ನು ಜಪಾನ್ ಸರಳೀಕೃತಗೊಳಿಸಿತ್ತು.

ಜಪಾನ್ ಆಪ್ತರಾಷ್ಟ್ರ

 

  • ನರೇಂದ್ರ ಮೋದಿ ಪ್ರಧಾನಿಯಾದ ನಂತರ ಜಪಾನ್ ಭಾರತಕ್ಕೆ ಮತ್ತಷ್ಟು ಆಪ್ತರಾಷ್ಟ್ರವಾಗಿದೆ. 2014ರ ನಂತರದಲ್ಲಿ ಜಪಾನ್ ಪ್ರಧಾನಿ ಶಿಂಜೋ ಅಬೆ ಎರಡು ಬಾರಿ ಭಾರತಕ್ಕೆ ಭೇಟಿ ನೀಡಿದ್ದರು.
  • ಭಾರತದ ಚೊಚ್ಚಲ ಬುಲೆಟ್ ಟ್ರೇನ್ ಯೋಜನೆಗೆ ಜಪಾನ್ ದೊಡ್ಡ ಪ್ರಮಾಣದಲ್ಲಿ ಆರ್ಥಿಕ ಹಾಗೂ ತಾಂತ್ರಿಕ ಸಹಕಾರ ನೀಡುತ್ತಿದೆ. ಎರಡು ದಿನಗಳ ಹಿಂದೆ ಮನಿಲಾದಲ್ಲಿ ನಡೆದ ಆಸಿಯಾನ್ ರಾಷ್ಟ್ರಗಳ ಶೃಂಗದಲ್ಲಿ ಜಪಾನ್ ಅತ್ಯಂತ ವಿಶ್ವಾಸಾರ್ಹ ಗೆಳೆಯ ಎಂದು ಪ್ರಧಾನಿ ಹೇಳಿದ್ದರು.

 

SOURCE-THE HINDU

 

6.ದೆಹಲಿಯ ಸರ್ಕಾರಿ, ಖಾಸಗಿ ಶಾಲೆಕಾಲೇಜುಗಳಲ್ಲಿ ಮಳೆನೀರು ಸಂಗ್ರಹ ವ್ಯವಸ್ಥೆಗೆ ಎನ್‌ಜಿಟಿ ನಿರ್ದೇಶನ

 ಪ್ರಮುಖ ಸುದ್ದಿ

  • ದೆಲಿಯ ಸರ್ಕಾರಿ, ಖಾಸಗಿ ಶಾಲೆ, ಕಾಲೇಜುಗಳಲ್ಲಿ ಮಳೆನೀರು ಸಂಗ್ರಹ ವ್ಯವಸ್ಥೆಯನ್ನು ನಿಗದಿತ ಅವಧಿಯೊಳಗೆ ಸ್ಥಾಪಿಸಲು ವಿಫಲವಾದ ಯಾವುದೆ ಸಂಸ್ಥೆಯು 5 ಲಕ್ಷ ಪರಿಸರ ಪರಿಹಾರ ಪಾವತಿಸಲು ಜವಾಬ್ದಾರರಾಗಿರಬೇಕು ಎಂದು ಎನ್‌ಜಿಟಿಯ ಅಧ್ಯಕ್ಷರಾದ ಸ್ವತಂತ್ರ ಕುಮಾರ್‌ ಅವರ ನೇತೃತ್ವದ ಪೀಠ ಹೇಳಿದೆ.

ಮುಖ್ಯ ಅಂಶಗಳು

  • ಶಾಲಾ ಕಾಲೇಜುಗಳು ತಮ್ಮದೇ ವೆಚ್ಚದಲ್ಲಿ ಮಳೆ ನೀರು ಸಂಗ್ರಹ ವ್ಯವಸ್ಥೆ ಮಾಡಬೇಕು ಮಂಡಳಿ ಹೇಳಿದೆ.
  • ಮಳೆನೀರು ಸಂಗ್ರಹ ವ್ಯವಸ್ಥೆಯನ್ನು ನಿಗದಿತ ಅವಧಿಯೊಳಗೆ ಸ್ಥಾಪಿಸಲು ವಿಫಲವಾದ ಯಾವುದೆ ಸಂಸ್ಥೆಯು 5 ಲಕ್ಷ ಪರಿಸರ ಪರಿಹಾರವನ್ನು ಪಾವತಿಸಲು ಜವಾಬ್ದಾರರಾಗಿರಬೇಕು ಎಂದು ಎನ್‌ಜಿಟಿಯ ಅಧ್ಯಕ್ಷರಾದ ಸ್ವತಂತ್ರ ಕುಮಾರ್‌ ಅವರ ನೇತೃತ್ವದ ಪೀಠ ಹೇಳಿದೆ.
  • ಶಾಲೆಗಳು ಮತ್ತು ಕಾಲೇಜುಗಳು ನಿರ್ದೇಶನ ಸಮಿತಿಯ ಆದೇಶಗಳನ್ನು ಪಾಲಿಸಬೇಕು. ಸಮಿತಿಯು ಶಾಲಾ ಆವರಣವನ್ನು ಪರಿಶೀಲಿಸುತ್ತದೆ ಮತ್ತು ವ್ಯವಸ್ಥೆಯನ್ನು ನಿರ್ವಹಿಸಲು ಸಂಸ್ಥೆಗಳಿಗೆ ಅನುಮತಿ ನೀಡುತ್ತದೆ ಎಂದು ಹೇಳಿದೆ.

 

  • ದೆಹಲಿ ಸರ್ಕಾರದ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಒಳಗೊಂಡ ಸಮಿತಿಯಲ್ಲಿ, ದೆಹಲಿ ಜಲ ಮಂಡಳಿ, ಪಿಡಬ್ಲ್ಯುಡಿ, ಕೇಂದ್ರ ಅಂತರ್ಜಲ ಪ್ರಾಧಿಕಾರ ಮತ್ತು ಇತರ ಅಧಿಕಾರಿಗಳು ಇರಲಿದ್ದಾರೆ ಎಂದು ತಿಳಿಸಿದೆ.
  • ಸಮಿತಿಯು ತಿಂಗಳಿಗೆ ಎರಡು ಬಾರಿ ಭೇಟಿ ನೀಡಬೇಕು ಮತ್ತು ಶಾಲೆಗಳು ಹಾಗೂ ಕಾಲೇಜುಗಳು ತ್ವರಿತವಾಗಿ ನೀರು ಸಂಗ್ರಹ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕು ಎಂದು ಪೀಠ ತಿಳಿಸಿದೆ.
  • ‘ಒಂದು ವೇಳೆ ಮಳೆನೀರು ಸಂಗ್ರಹ ವ್ಯವಸ್ಥೆಯನ್ನು ಸ್ಥಾಪಿಸಲು ಸಾಧ್ಯವಿಲ್ಲದಿದ್ದರೆ, ಆ ಸಂಸ್ಥೆಯು ಗುರುವಾರದಿಂದ ಒಂದು ವಾರದೊಳಗೆ ಸಮಿತಿಯನ್ನು ಸಂಪರ್ಕಿಸಬೇಕು. ಆ ಸಮಿತಿಯು ಸ್ಥಳ ಪರಿಶೀಲಿಸುತ್ತದೆ. ‘ಸ್ಥಳ ಪರಿಶೀಲನೆಯ ನಂತರ, ಅಂತಹ ವ್ಯವಸ್ಥೆಯನ್ನು ಸ್ಥಾಪಿಸುವ ಸಾಧ್ಯತೆ ಇಲ್ಲ ಎಂದು ಕಂಡುಬಂದರೆ, ಸಮಿತಿಯು ವಿನಾಯಿತಿ ಪ್ರಮಾಣಪತ್ರವನ್ನು ನೀಡಬಹುದು’ ಎಂದು ಪೀಠ ಹೇಳಿದೆ.
  • ಸರ್ಕಾರಿ ಇಲಾಖೆಗಳು, ಶೈಕ್ಷಣಿಕ ಸಂಸ್ಥೆಗಳು ಮತ್ತು ವಸತಿ ಸಮುಚ್ಚಯಗಳು ಮಳೆ ನೀರು ಸಂಗ್ರಹ ವ್ಯವಸ್ಥೆಗಳನ್ನು ಅಳವಡಿಸಿಕೊಂಡಿಲ್ಲ ಅಥವಾ ಇದರ ಕಾರ್ಯಚಟುವಟಿಕೆಗಳಿಲ್ಲದ ವ್ಯವಸ್ಥೆಗಳನ್ನು ಹೊಂದಿವೆ ಎಂದು ದೂರಿ ಅಂತರ್ಜಲ ಸಂರಕ್ಷಣೆ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಯ ಮಹೇಶ್‌ ಚಂದ್ರ ಸಕ್ಸೇನಾ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಎನ್‌ಜಿಟಿ ಈ ನಿರ್ದೇಶ ನೀಡಿದೆ.

 

 SOURCE-IE

 

7.ಚೀನಾದ 14 ಶತಕೋಟಿ ಡಾಲರ್ ಸಾಲ ತಿರಸ್ಕರಿಸಿದ ಪಾಕಿಸ್ತಾನ

ಪ್ರಮುಖ ಸುದ್ದಿ

  • ಚೀನಾದ ಮಿತ್ರ ದೇಶವಾದ ಪಾಕಿಸ್ತಾನ ಆ ದೇಶಕ್ಕೆ ತಲೆಸುತ್ತುವಂತಹ ಶಾಕ್ ನೀಡಿದೆ. ಚೀನಾದ ಪ್ರತಿಷ್ಠಿತ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ) ವಿಚಾರದಲ್ಲಿ ಆ ದೇಶದ ಆಫರನ್ನು ಪಾಕ್ ತಿರಸ್ಕರಿಸಿದೆ.
  • ಸಿಪಿಇಸಿ ಭಾಗವಾಗಿ ಪಾಕ್ ಆಕ್ರಮಿತ ಕಾಶ್ಮೀರ (ಪಿಓಕೆ)ಯಲ್ಲಿ ಡೈಮರ್-ಭಾಷಾ ಅಣೆಕಟ್ಟು ನಿರ್ಮಾಣಕ್ಕೆ 14 ಶತಕೋಟಿ ಡಾಲರ್ ಸಾಲವನ್ನು ನೀಡಲು ಚೀನಾ ಮುಂದೆ ಬಂದಿದ್ದು, ಪಾಕ್ ಅದನ್ನು ನಿರಾಕರಿಸಿದೆ.

ಮುಖ್ಯ ಅಂಶಗಳು

  • ಸುಮಾರು 60 ಶತಕೋಟಿ ಡಾಲರ್ ವೆಚ್ಚದಲ್ಲಿ ನಿರ್ಮಿಸುತ್ತಿರುವ ಸಿಪಿಇಸಿಯಿಂದ ಈ ಯೋಜನೆಯನ್ನು ತಪ್ಪಿಸಲು, ಈ ಅಣೆಕಟ್ಟೆಯನ್ನು ನಾವೇ ನಿರ್ಮಿಸಿಕೊಳ್ಳೂತ್ತೇವೆಂದು ಪಾಕ್ ನೇರವಾಗಿ ಚೀನಾಗೆ ಹೇಳಿದೆ.
  • ಭಾರತ ತನ್ನ ಭಾಗವಾಗಿ ಭಾವಿಸಿರುವ ಪಿಓಕೆಯಲ್ಲಿ ಈ ಅಣೆಕಟ್ಟು ನಿರ್ಮಾಣಕ್ಕೆ ಈಗಾಗಲೆ ಏಷ್ಯಾ ಅಭಿವೃದ್ದಿ ಬ್ಯಾಂಕ್ ಸಾಲ ಕೊಡಲು ನಿರಾಕರಿಸಿರುವುದು ಗೊತ್ತೇ ಇದೆ. ಈ ವಿವಾದಾತ್ಮಕ ಪ್ರದೇಶದಲ್ಲಿ ಬಂಡವಾಳ ಹೂಡಲು ಹಲವು ಅಂತಾರಾಷ್ಟ್ರೀಯ ಆರ್ಥಿಕ ಸಂಸ್ಥೆಗಳು ನಿರಾಕರಿಸುತ್ತಿವೆ.

 

  • ಈ ಹಿನ್ನೆಲೆಯಲ್ಲಿ ಸಿಪಿಇಸಿಯಲ್ಲಿ ಮುಖ್ಯವಾಗಿರುವ ಈ ಅಣೆಕಟ್ಟೆಗೆ ಸಾಲ ನೀಡಲು ಚೀನಾ ಕಂಪೆನಿಗಳು ಮುಂದೆ ಬಂದಿವೆ. ಆದರೆ ಈ ಪ್ರಾಜೆಕ್ಟ್ ಅಂದಾಜು ಖರ್ಚಿನಲ್ಲಿ 5 ಶತಕೋಟಿ ಡಾಲರ್‌ಗಳಿಂದ ಸುಮಾರು 14 ಶತಕೋಟಿ ಡಾಲರ್‌ಗೆ ಏರಿಸಿದೆ.

 

  • ಈ ಹಿನ್ನೆಲೆಯಲ್ಲಿ ಸಾಲ ಕೊಡಲು ಚೀನಾ ಕಂಪೆನಿಗಳು ಕಠಿಣ ಷರತ್ತುಗಳನ್ನು ಇಟ್ಟಕಾರಣ ಪಾಕ್ ಕಂಗಾಲಾಗಿತ್ತು. ಹಾಗಾಗಿ ಚೀನಾದ ಷರತ್ತುಗಳನ್ನು ಅಂಗೀಕರಿಸಲು ಸಾಧ್ಯವಿಲ್ಲವೆಂದು, ಹಾಗಾಗಿಯೇ ಸ್ವತಃ ತಾವೇ ಪ್ರಾಜೆಕ್ಟ್ ಕೈಗೊಳ್ಳುತ್ತೇವೆಂದು ಪಾಕಿಸ್ತಾನ ಸರಕಾರ ಸ್ಪಷ್ಟಪಡಿಸಿರುವುದಾಗಿ ಅಲ್ಲಿನ ದೈನಿಕ ‘ಎಕ್ಸ್‌ಪ್ರೆಸ್ ಟ್ರೈಬ್ಯೂನ್’ ಪ್ರಕಟಿಸಿದೆ.

 

  • ಡೈಮರ್-ಭಾಷಾ ಅಣೆಕಟ್ಟು ವಿಚಾರದಲ್ಲಿ ಚೀನಾ ಹಾಕಿರುವ ಷರತ್ತುಗಳನ್ನು ಅಂಗೀಕರಿಸಲು ಸಾಧ್ಯವಿಲ್ಲ. ಅವು ದೇಶದ ಅಭಿವೃದ್ಧಿಗೆ ಮಾರಕವಾಗಿವೆ ಎಂದು ಪಾಕಿಸ್ತಾನದ ಜಲ ಮತ್ತು ವಿದ್ಯುತ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಜಾಮಿಲ್ ಹುಸ್ಸೇನ್ ಸ್ಪಷ್ಟಪಡಿಸಿದ್ದಾರೆ.
  • ಈ ಪ್ರಾಜೆಕ್ಟ್ ಮೇಲಿನ ಪಾಕಿಸ್ತಾನದ ವೈಖರಿಗೆ ಚೀನಾ ಪರಿಸ್ಥಿತಿ ತಡಬಡಾಯಿಸುವಂತಾಗಿದೆ. ತಮ್ಮನ್ನು ಸಂಪರ್ಕಿಸದೆ ಪಾಕ್ ಈ ರೀತಿ ಶಾಕ್ ನೀಡುತ್ತದೆಂದು ಆ ದೇಶ ಕನಸು ಮನಸ್ಸಿನಲ್ಲೂ ಊಹಿಸಿರಲಿಲ್ಲ ಎನ್ನುತ್ತಿವೆ ಆ ದೇಶದ ಮೂಲಗಳು.
  • ಒಟ್ಟಾರೆ ಸಿಪಿಇಸಿ ಪ್ರಾಜೆಕ್ಟ್‌ಗೆ ಅಪಾಯವಾಗುವ ರೀತಿಯಲ್ಲಿ ಚೀನಾ ಆಫರನ್ನು ಪಾಕಿಸ್ತಾನ ತಿರಸ್ಕರಿಸಿಲ್ಲ ಎಂದು ಚೀನಾದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಪ್ರಾಜೆಕ್ಟ್ ಮಾಲೀಕತ್ವ, ನಿರ್ವಹಣೆ, ನಿರ್ವಹಣಾ ಖರ್ಚು, ಭದ್ರತೆಯನ್ನು ನಾವೇ ನೋಡಿಕೊಳ್ಳುತ್ತೇವೆಂದು ಚೀನಾ ಕಂಪೆನಿಗಳು ಇಟ್ಟಿರುವ ಷರತ್ತುಗಳು ತಮ್ಮ ದೇಶದ ಭದ್ರತೆಗೆ ಧಕ್ಕೆ ತರುವಂತಿವೆ ಎಂದು ಪಾಕ್ ಹೇಳುತ್ತಿದೆ.

 

SOURCE-THE HINDU

 

8.ಮೀನು ಪ್ರವಾಸೋದ್ಯಮ ಪರಿಧಿ (ONLY FOR PRELIMS)

ಪ್ರಮುಖ ಸುದ್ದಿ

  • ದೇಶದಲ್ಲಿನ ಮೀನು ಪ್ರಿಯ ರನ್ನು ಆಕರ್ಷಿಸಲು ಮೀನು ಪ್ರವಾಸೋದ್ಯಮ ಪರಿಧಿ (ಸರ್ಕ್ಯೂಟ್) ಸ್ಥಾಪಿಸಲು ಪಶ್ಚಿಮ ಬಂಗಾಳ ಸರ್ಕಾರವು ಯೋಜನೆಯನ್ನು ರೂಪಿಸುತ್ತಿದೆ.
  • ರಾಜ್ಯ ಮೀನುಗಾರಿಕಾ ಅಭಿವೃದ್ಧಿ ನಿಗಮವು (SFDC) ಪ್ರವಾಸೋದ್ಯಮ ಪರಿಧಿಗಾಗಿ ನೀಲನಕ್ಷೆಯನ್ನು ಸಿದ್ಧಪಡಿಸುತ್ತಿದೆ.

 

SOURCE-THE HINDU

Share