19th JULY MLP-MODEL ANSWERS

19th  JULY  MLP

 

NOTE:: ದಯವಿಟ್ಟು  ಗಮನಿಸಿ ಕೆಳಗಿನ ಉತ್ತರಗಳು‘  ‘ಮಾದರಿ ಉತ್ತರಗಳುಎಂಬುದನ್ನು ನೆನಪಿಡಿ. ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ PROPER SOURCE ಎಲ್ಲದೇ ಇರುವುದರಿಂದ  ನಾವು ಮುಖ್ಯ ಪರೀಕ್ಷೆಯಲ್ಲಿ ನೀವು ಯಾವ ರೀತಿರೆಯಬೇಕು ಮತ್ತು ನಿಮ್ಮ ಸಮಯವನ್ನು ಉಳಿಸಲು ಕೊಡುತ್ತಿರುವ  ವಿಸ್ತಾರವಾದ ಸಾರಾಂಶ, ನಾವುಗಳು ಇಲ್ಲಿ ಪದಗಳ ಮಿತಿ ಗಣನೆಗೆ ತೆಗೆದುಕೊಂಡಿಲ್ಲ ಏಕೆಂದರೆ ಒಂದು ಪ್ರಶ್ನೆಗೆ ಎಷ್ಟು ಸಾದ್ಯೋವೊ ಅಷ್ಟು ಇನ್ಫಾರ್ಮಶನ್ ಕೊಟ್ಟಿರುತ್ತೆವೆ. ನಾವು ಒದಗಿಸುತ್ತಿರುವ ವಿಷಯವು ಪ್ರಶ್ನೆಯ ಬೇಡಿಕೆಯನ್ನು ಪೂರೈಸುತ್ತದೆ ಮತ್ತು ಅದೇ ಸಮಯದಲ್ಲಿ ನಿಮಗೆ ಹಿನ್ನೆಲೆ ಮಾಹಿತಿ ರೂಪದಲ್ಲಿ ಹೆಚ್ಚುವರಿ ಅಂಕಗಳನ್ನು ಗಳಿಸಲು ಅನುಕೂಲಕರವಾಗುತ್ತದೆ.

 

GENERAL STUDIES PAPER-1(ಸಾಮಾನ್ಯ ಅಧ್ಯಾಯ)

1.Many of the languages ​​of India are literature distinct but diverse, but they are subject to many similarities and some formulas that have little effect on the same. comment

(ಭಾರತದ ಭಾಷೆಗಳು ಹಲವಾದರೂ ಸಾಹಿತ್ಯಗಳು ವೈವಿಧ್ಯಮಯವಾದರೂ ಅನೇಕ ವೈಶಿಷ್ಟಗಳಿಂದ ಕೂಡಿದವಾದರೂ ಇವೆಲ್ಲವೂ ಸಮಾನವಾದ ಹಲವು ಗುಣಧರ್ಮಗಳಿಗೆ ಮತ್ತು ಕೆಲವು ಸೂತ್ರಗಳಿಗೆ ಒಳಪಟ್ಟು ಹೆಚ್ಚು ಕಡಿಮೆ ಒಂದೇ ಬಗೆಯ ಪ್ರಭಾವಗಳಿಗೆ ಒಳಗಾಗಿವೆ.ವ್ಯಾಖ್ಯೆಸಿಸಿ)

 

150 ಪದಗಳು

 

 

ಭಾರತದ ಭಾಷೆಗಳು   ಸಾಮಾಜಿಕ, ಸಾಂಸ್ಕøತಿಕ ಹಾಗೂ ರಾಜಕೀಯ ಪ್ರಭಾವಗಳಿಂದಾಗಿ ಇವುಗಳಲ್ಲಿ ಕೆಲವು ಸಮಾನ ಗುಣಧರ್ಮಗಳಿವೆ. ಈ ನಾನಾ ಭಾಷೆಗಳ ಹಾಗೂ ಸಾಹಿತ್ಯಗಳ ಹುಟ್ಟು, ಬೆಳೆವಣಿಗೆ, ಮನೋಧರ್ಮಗಳು ಬೇರೆಬೇರೆಯಾದರೂ ಇವುಗಳಲ್ಲಿ ಮೂಲಭೂತವಾಗಿ ಏಕತೆ ಕಂಡು ಬರುತ್ತದೆ. ರಾಧಾಕೃಷ್ಣನ್ ಅವರು ಹೇಳಿರುವಂತೆ ಭಾರತದ ಭಾಷೆಗಳು ಹಲವಾದರೂ ಭಾರತೀಯರ ಸಾಹಿತ್ಯ ಒಂದೇ.

 

ಭಾರತ ಹಲವು ಭಾಷೆಗಳ ದೇಶ. ಭಾರತದ ಸಂವಿಧಾನದ ಎಂಟನೆಯ ಅನುಸೂಚಿಯಲ್ಲಿ ಉಲ್ಲೇಖಗೊಂಡಿರುವ ಭಾಷೆಗಳು ಹದಿನೈದು ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಒಪ್ಪಿರುವ ಭಾಷೆಗಳು ಏಳು. ಇವಲ್ಲದೆ 1600ಕ್ಕೂ ಹೆಚ್ಚು ತಾಯಿ ನುಡಿಗಳು ಭಾರತದಲ್ಲಿವೆ. ಇವುಗಳ ಪೈಕಿ ಹಲವಕ್ಕೆ ಲಿಪಿಗಳಾಗಲಿ, ವಿಪುಲ ಶಬ್ದ ಸಂಪತ್ತಿಯಗಲಿ, ದೀರ್ಘ ಸಾಹಿತ್ಯದ ಇತಿಹಾಸಗಳಾಗಲೀ ಇಲ್ಲ. ಆದರೆ ಇವೆಲ್ಲವನ್ನೂ ಹೊಂದಿ ಪರಿಪುಷ್ಪವಾಗಿ ಬೆಳೆದಿರುವ ಭಾಷಾ ಸಾಹಿತ್ಯಗಳು ಕಡಿಮೆಯೇನಲ್ಲ. ಉತ್ತರ ಮತ್ತು ವಾಯುವ್ಯ ಭಾಗಳಲ್ಲಿ ಪ್ರಚಾರದಲ್ಲಿರುವ ಹಿಂದಿ, ಕಾಶ್ಮೀರಿ, ಪಂಜಾಬಿ, ಉರ್ದು ಪೂರ್ವದ ರಾಜ್ಯಗಳ ಒರಿಯ, ಬಂಗಾಳೀ, ಅಸ್ಸಾಮಿ; ಪಶ್ಚಿಮ ಭಾರತದ ಗುಜರಾತಿ, ಮರಾಠೀ, ಸಿಂಧಿ; ದಕ್ಷಿಣದ ತಮಿಳು, ಕನ್ನಡ, ತೆಲುಗು, ಮತ್ತು ಮಲಯಾಳಮ್; ಇವಲ್ಲದೆ ಡೋಗ್ರೀ, ಕೊಂಕಣಿ, ತುಳು, ಮೈಥಿಲಿ-ಇವೆಲ್ಲ ಭಾಷೆ ಹಾಗೂ ಸಾಹಿತ್ಯ ದೃಷ್ಟಿಯಿಂದ ಬಹಳ ಮಹತ್ತ್ವವಾದವು. ಅನೇಕ ಆಧುನಿಕ ಭಾರತೀಯ ಭಾಷೆಗಳ ತಾಯಿ ಬೇರೆನಿಸಿದ, ಇಂದಿಗೂ ಅವುಗಳ ಮೇಲೆ ಪ್ರಭಾವ ಬೀರುತ್ತಿರುವ ಪ್ರಾಚೀನವೂ ಸಮೃದ್ಧವೂ ವೈವಿಧ್ಯಮಯವೂ ಅದ ಸಾಹಿತ್ಯದಿಂದ ಕೂಡಿದ. ಒಂದು ಕಾಲದಲ್ಲಿ ಇಡೀ ಭಾರತದ ಜ್ಞಾನವಿಜ್ಞಾನ ಮಿದ್ವತ್ ಭಾಷೆ ಎನಿಸಿದ್ದ, ಇಂದಿಗೂ ಭಾರತೀಯ ಭಾಷೆಗಳಿಗೆಲ್ಲ ಅವುಗಳ ಬೆಳೆಯುತ್ತಿರುವ ಅವಶ್ಯಕತೆಗಳನ್ನು ಪೂರೈಸುವ ಶಬ್ದ ಸಂಪತ್ತಿಯನ್ನೊದಗಿಸುತ್ತಿರುವ ಸಂಸ್ಕ೦ತದ ಮಹತ್ತ್ವವೂ ಮರೆಯಲಾಗದಂಥದು.

 

ಭಾರತೀಯ ಸಾಹಿತ್ಯ ಕನಿಷ್ಕ ಮೂರು ಸಾವಿರ ವರ್ಷಗಳಷ್ಟು ಹಳೆಯದು. ಹರಪ್ಪ, ಮೊಹೆಂಜೊದಾರೋಗಳಲ್ಲಿ ದೊರಕಿರುವ ಮುದ್ರೆಗಳ ಲಿಪಿಗಳನ್ನು ಸಮರ್ಪಕವಾಗಿ ಓದುವುದು ಸಾಧ್ಯವಾದರೆ ಭಾರತದ ಭಾಷೆ ಸಾಹಿತ್ಯಗಳ ಇತಿಹಾಸವನ್ನು ಇನ್ನೂ ಒಂದೆರಡು ಸಾವಿರ ವರ್ಷಗಳಷ್ಟು ಹಿಂದಕ್ಕೆ ಕೊಂಡೊಯ್ಯ ಬಹುದು. ಈ ದೀರ್ಘಕಾಲದಲ್ಲಿ ಇವು ಅನೇಕ…CLICK HERE TO READ MORE

Share