19th September ನಮ್ಮ ಐಎಎಸ್ ಅಕಾಡೆಮಿಯ ಸಂಪಾದಕೀಯ ಒಳನೋಟ

ನಮ್ಮ ಐಎಎಸ್ ಅಕಾಡೆಮಿಯ ಸಂಪಾದಕೀಯ ಒಳನೋಟ

ಬುಲೆಟ್ ವೇಗ ಪಡೆದು ಸಂಚರಿಸಿದ   ಭಾರತಜಪಾನ್ ದ್ವಿಪಕ್ಷೀಯ ಸಂಬಂಧ

 

ಸಂದರ್ಭ:

ಜಪಾನ್ ಪ್ರಧಾನಿ ಶಿಂಜೋ ಅಬೆ ಅವರ ಎರಡು ದಿನಗಳ ಭಾರತ ಪ್ರವಾಸ . ಭಾರತ ಮತ್ತು ಜಪಾನ್ನ ದ್ವಿಪಕ್ಷೀಯ ಬಾಂಧವ್ಯ ದೃಷ್ಟಿಯಿಂದ ಈ ಭೇಟಿ ಮಹತ್ವದ್ದಾಗಿದ್ದು, ಜಾಗತಿಕ ಮಟ್ಟದಲ್ಲೂ ಹಲವು ಪರಿಣಾಮಗಳನ್ನು ಬೀರುವಂಥದ್ದಾಗಿದೆ. ದೇಶದ ಮೊದಲ ಬುಲೆಟ್ ರೈಲು ಯೋಜನೆ ಕಾಮಗಾರಿಗೆ ಚಾಲನೆ, ರಕ್ಷಣಾ ಕ್ಷೇತ್ರದ ಪಾಲುದಾರಿಕೆ, ಏಷ್ಯಾ-ಆಫ್ರಿಕಾ ಗ್ರೋತ್ ಕಾರಿಡಾರ್ ಮುಂತಾದ ವಿಷಯಗಳಲ್ಲಿ ಪರಸ್ಪರ ಸಹಕಾರದ ನಿಟ್ಟಿನಲ್ಲಿ ಈ ಭೇಟಿ  ಬುಲೆಟ್ ರೈಲ್ ನಷ್ಟೆ ವೇಗ ಪಡೆದಿದೆ . ಇದಕ್ಕೆ  ಭಾರತ ಮತ್ತು ಜಪಾನ್ ಪ್ರಧಾನ ಮಂತ್ರಿಗಳು ಪ್ರಾರಂಭಿಸಿದ 508-ಕಿಮೀ ಅಹಮದಾಬಾದ್-ಮುಂಬೈ ಬುಲೆಟ್ ರೈಲು ಯೋಜನೆಯಿಂದ ಅತ್ಯುತ್ತಮವಾಗಿ ಸಂಕೇತಿಸಲ್ಪಟ್ಟಿದೆ.

ಜಪಾನ್‌ ಪ್ರಧಾನಿ ಶಿಂಜೊ ಅಬೆ ಅವರ ಭಾರತ ಭೇಟಿ ಎರಡೂ ದೇಶಗಳ ಬಾಂಧವ್ಯವನ್ನು ಮತ್ತಷ್ಟು ಎತ್ತರಕ್ಕೆ ಒಯ್ದಿದೆ. ವಿವಿಧ ಕ್ಷೇತ್ರಗಳಲ್ಲಿ ಸುಮಾರು 15 ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಬಂಡವಾಳ ಹೂಡಿಕೆ ಮಾತ್ರವಲ್ಲದೆ ರಾಜತಾಂತ್ರಿಕ ದೃಷ್ಟಿಯಿಂದಲೂ ಈ ಭೇಟಿ ಮಹತ್ವ ಪಡೆದುಕೊಂಡಿದೆ. ನಮ್ಮ ವಿರುದ್ಧ ಸದಾ ಕತ್ತಿ ಮಸೆಯುತ್ತಿರುವ, ಹಗೆ ಸಾಧಿಸುತ್ತಿರುವ ಪಾಕಿಸ್ತಾನ ಮತ್ತು ಚೀನಾಕ್ಕೆ ತಿರುಗೇಟು ನೀಡುವ ಉದ್ದೇಶದ ಕೆಲ ಘೋಷಣೆ, ಹೆಜ್ಜೆಗಳನ್ನೂ ಇಲ್ಲಿ ಗುರುತಿಸಬಹುದು.

ಚೀನಾದ ಮಹತ್ವಾಕಾಂಕ್ಷಿ ‘ಒಂದು ವಲಯ ಒಂದು ರಸ್ತೆ’ ಯೋಜನೆಗೆ ಪ್ರತಿಯಾಗಿ ಭಾರತ– ಆಫ್ರಿಕಾ– ಪೆಸಿಫಿಕ್‌ ವಲಯದಲ್ಲಿ ಸಂಪರ್ಕ ಜಾಲ ರಚಿಸುವ ಪ್ರಧಾನಿ ಮೋದಿ ಮತ್ತು ಶಿಂಜೊ ಅವರ ನಿರ್ಧಾರ ಅಂತರ ರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಪ್ರಭಾವ ಹೆಚ್ಚಿಸಲು ನೆರವಾಗಲಿದೆ. ಎರಡನೇ ವಿಶ್ವ ಯುದ್ಧದಲ್ಲಿ ಸೋತು ಸುಣ್ಣವಾದರೂ ಫೀನಿಕ್ಸ್‌ ಹಕ್ಕಿಯಂತೆ ಮೇಲೆದ್ದು ವಿಶ್ವದ ಬಲಾಢ್ಯ ಆರ್ಥಿಕ ಶಕ್ತಿ ಎನಿಸಿಕೊಂಡಿರುವ ಜಪಾನ್‌ನ ಅನುಭವದ ಲಾಭ ನಮಗೂ ದೊರೆಯಲಿದೆ.

ಪರಸ್ಪರ ಅಭಿವೃದ್ಧಿ ಸಹಕಾರ ವಿಸ್ತರಣೆ(Expanded Partnership for Quality Infrastructure (EPQI) ) – ಮೇಕ್ ಇನ್ ಇಂಡಿಯಾ, ಸ್ಕಿಲ್ ಇಂಡಿಯಾ, ಕ್ಲೀನ್ ಗಂಗಾ ಮಿಷನ್ ಸೇರಿ ಭಾರತ ಸರ್ಕಾರದ ಹಲವು ಅಭಿವೃದ್ಧಿ ಯೋಜನೆಗಳಲ್ಲಿ ಕೈಜೋಡಿಸಲು ಜಪಾನ್ ಆಸಕ್ತಿ ತೋರಿದೆ. 2015ರ ಮಾತುಕತೆ ಸಂದರ್ಭದಲ್ಲೆ ಜಪಾನ್ ಪ್ರಧಾನಿ ಅಬೆ ಈ ಬಗ್ಗೆ ಹೇಳಿಕೆಯನ್ನೂ ನೀಡಿದ್ದರು. ಈಶಾನ್ಯ ರಾಜ್ಯದ ಅಭಿವೃದ್ಧಿಯಲ್ಲೂ ಜಪಾನ್ ಕೈಜೋಡಿಸಲಿದೆ.

ಕಳೆದ ನವೆಂಬರ್ ನಲ್ಲಿ  ಪ್ರಧಾನಿ ಮೋದಿಯವರು  ಜಪಾನ್ ಪ್ರವಾಸ ಕೈಗೊಂಡು ಟೋಕಿಯೋದಲ್ಲಿ ಜಪಾನ್ ಜತೆಗೆ ಐತಿಹಾಸಿಕ ನಾಗರಿಕ ಪರಮಾಣು ಒಪ್ಪಂದಕ್ಕೆ ಸಹಿಹಾಕಿದರು. ಇಂಧನಕ್ಕಾಗಿ ಪರಮಾಣು ತಂತ್ರಜ್ಞಾನವನ್ನು ಭಾರತಕ್ಕೆ ಆಮದು ಮಾಡಿಕೊಳ್ಳುವ ನಿಟ್ಟಿನಲ್ಲಿ ಮಹತ್ವದ ಒಪ್ಪಂದ ಇದು. ಈ ಭೇಟಿ ಸಂದರ್ಭದಲ್ಲಿ ಮೋದಿ ಮತ್ತು ಅಬೆ ಶಿನ್ಕನ್ಸೆನ್ ಬುಲೆಟ್ರೈಲಿನಲ್ಲಿ ಪ್ರಯಾಣಿಸಿದ್ದರು. ಇದೇ ರೈಲು ತಂತ್ರಜ್ಞಾನ ಈಗ ಭಾರತಕ್ಕೆ ಆಮದಾಗುತ್ತಿದೆ.ಹೈ ಸ್ಪೀಡ್ ರೈಲ್ 

ಯೋಜನೆ ಮತ್ತು ಮೆಗಾ-ಇಂಡಸ್ಟ್ರಿಯಲ್  ಕಾರಿಡಾರ್ ಬಲವಾದ ಅಡಿಪಾಯವನ್ನು ಹಾಕಿ ದ್ವಿಪಕ್ಷೀಯ ಸಂಬಂಧಗಳ ಆಳ ಮತ್ತು ವ್ಯಾಪ್ತಿಯಿಂದ  ‘ಭಾರತ-ಜಪಾನ್ ವಿಷನ್ 2025’ ಅನ್ನು ಪುನರ್ನಿರ್ಮಾಣ ಮಾಡಲಾಗಿದೆ. ಹಿತಾಸಕ್ತಿಗಳ ಪರಸ್ಪರತ್ವ, ಇಂಡೋ-ಪೆಸಿಫಿಕ್ನಲ್ಲಿ ಸಾರ್ವತ್ರಿಕ ಮೌಲ್ಯಗಳು ಮತ್ತು ದೃಷ್ಟಿಗೋಚರ ಸಮಾನತೆಯನ್ನು ಹಂಚಿಕೊಂಡಿದೆ.

 

ವಿಶ್ವವ್ಯಾಪಿ ಮೌಲ್ಯ  ಮತ್ತು ದರ್ಶನವನ್ನು  ಪರಸ್ಪರ ಹಂಚಿಕೊಂಡ ಬಗ್ಗೆ

….CLICK HERE TO READ MORE

Share