20th October-Daily Current Affairs and EDITORIAL

20TH OCTOBER

 

1.SOURCE- INDIAN EXPRESS EDITORIAL  

http://indianexpress.com/article/explained/drafting-change-what-the-new-progressive-intervention-in-uniform-civil-code-debate-entails/

 

 

‘ಏಕರೂಪ ನಾಗರಿಕ ಸಂಹಿತೆ ಯಲ್ಲಿ ಪ್ರಗತಿಪರ ಮಧ್ಯಸ್ಥೀಕೆ’

(What the new ‘progressive’ intervention in Uniform Civil Code debate entails)

 

ಈ ಆರ್ಟಿಕಲ್ ನಿಂದ UPSC-KAS  ಪರೀಕ್ಷೆಗಾಗಿ ಪ್ರಮುಖವಾಗಿ ತಿಳಿದುಕೊಳ್ಳಬೇಕಾದ ಅಂಶಗಳೆಂದರೆ  

  • ಏಕರೂಪ ನಾಗರಿಕ ಸಂಹಿತೆಎಂದರೇನು ?
  • ಏಕರೂಪ ನಾಗರಿಕ ಸಂಹಿತೆ ಬೇಡಿಕೆ ಶುರುವಾದ್ದೆಲ್ಲಿಂದ?
  • ಭಾರತಕ್ಕೆ ಏಕರೂಪದ ನಾಗರಿಕ ಸಂಹಿತೆ ಏಕೆ ಬೇಕು?
  • ಧರ್ಮಕ್ಕೆ ಸಂಬಂಧಿಸಿದ ಸಂವಿಧಾನದ ವಿವಿಧ ನಿಬಂಧನೆಗಳು ಯಾವುವು?
  • ಏಕ ನಾಗರಿಕ ಸಂಹಿತೆ ಜಾರಿಗೆ  ಬಂದರೆ ಬಂದರೆ  ಆಗುವ ಪ್ರಯೋಜನಗಳೇನು ?
  • ಇದರ ಅನುಷ್ಠಾನಕ್ಕೆ ಇರುವ ಅಡಚಣೆಗಳು ಯಾವುವು?
  • ಸಂವಿಧಾನದೊಂದಿಗೆ ಸಂಘರ್ಷ ದಲ್ಲಿರುವ ಧರ್ಮಕ್ಕೆ ಸಂಬಂಧಿಸಿದ ವೈಯಕ್ತಿಕ ಕಾನೂನುಗಳು ಯಾವುವು?

            1. ಕ್ರಿಶ್ಚಿಯನ್ ಪರಂಪರೆ ಕಾನೂನು

            2. ಸಂತಾರಾ (ಸಲ್ಲೇಖನ ವ್ರತ)

             3. ಶಬರಿಮಲ ದೇಗುಲ ಪ್ರವೇಶ

  • ಪ್ರಸ್ತುತ ಸನ್ನಿವೇಶವೇನು ?
  • ಆಯೋಗದ ಪ್ರಶ್ನೆಗಳೇನು?
  • ಉಪಸಂಹಾರ

 

ಪ್ರಮುಖ ಸುದ್ದಿ

  • ಕೇಂದ್ರ ಕಾನೂನು ಆಯೋಗದ ಅಧ್ಯಕ್ಷರಿಗೆ ವೈವಿಧ್ಯಮಯ  ಗುಂಪಿನ   ಎಂಟು ಭಾರತೀಯ ನಾಗರಿಕರು   ಏಕರೂಪ ನಾಗರಿಕ ಸಂಹಿತೆಯ  ಪ್ರಗತಿಪರದ ಬಗ್ಗೆ ಡ್ರಾಫ್ಟ್ ವರದಿಯನ್ನು  ಸಲ್ಲಿಸಿದ್ದಾರೆ .

 

ಏಕರೂಪ ನಾಗರಿಕ ಸಂಹಿತೆಎಂದರೇನು ?

  • ಭಾರತ ಹಲವು ಧರ್ಮ-ಜಾತಿಗಳ ದೇಶ. ವಿವಿಧ ರೀತಿ ಆಚರಣೆಗಳು ಅಸ್ತಿತ್ವದಲ್ಲಿದೆ. ಸದ್ಯದ ಕಾನೂನುಗಳೂ ಆಯಾ ಧರ್ಮದ ವಿವಿಧ ಅಭ್ಯಾಸಗಳಿಗೆ ಅನುಗುಣವಾಗಿದೆ. ಇದರಿಂದಾಗಿ ವೈಯಕ್ತಿಕ ಕಾನೂನುಗಳೂ ವಿವಿಧ ಧರ್ಮಗಳಿಗೆ ಬೇರೆ ಬೇರೆಯ ರೀತಿಯಲ್ಲಿವೆ.
  • ಇದಕ್ಕೆ ಹೊರತಾಗಿ ವೈಯಕ್ತಿಕ ಕಾನೂನುಗಳಾದ, ವಿಶೇಷವಾಗಿ ವಿವಾಹ, ವಿಚ್ಛೇದನ, ಆಸ್ತಿ ಹಂಚಿಕೆ, ಉತ್ತರಾಧಿಕಾರ ವಿಚಾರಗಳಿಗೆ ಏಕರೂಪದ ಕಾನೂನು ತರುವುದು ಇದರ ಉದ್ದೇಶ. ಇದನ್ನೇ ಏಕರೂಪ ನಾಗರಿಕ ಸಂಹಿತೆ ಎನ್ನುತ್ತಾರೆ.
  • ಸದ್ಯ ವಿಚ್ಛೇದನವನ್ನು ತೆಗೆದುಕೊಂಡರೆ, ಹಿಂದೂಗಳಲ್ಲೊಂದು, ಮುಸಲ್ಮಾನರಲ್ಲೊಂದು, ಕ್ರೈಸ್ತರಲ್ಲೊಂದು ಎಂಬಂತೆ ಕಾನೂನು ಜಾರಿಯಲ್ಲಿದೆ.

 

 ಏಕರೂಪ ನಾಗರಿಕ ಸಂಹಿತೆ ಬೇಡಿಕೆ ಶುರುವಾದ್ದೆಲ್ಲಿಂದ?

  • ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಕುರಿತ ಚರ್ಚೆ ಇಂದು ನಿನ್ನೆಯದಲ್ಲ. ಬ್ರಿಟಿಷರ ಕಾಲದಿಂದ ಅದು ಹುಟ್ಟಿದೆ. ಬ್ರಿಟಿಷ್‌ ಆಡಳಿತದ ವೇಳೆ ಭಾರತದಲ್ಲಿ ಏಕರೂಪದ ಕಾನೂನು ಬೇಕು ಎಂಬ ಬಗ್ಗೆ ದಿ ಲೆಕ್ಸ್‌ ಲೊಸಿ ವರದಿ 1840ರಲ್ಲಿ ಸಲ್ಲಿಕೆಯಾಗಿತ್ತು.
  • ಸ್ವಾತಂತ್ರ್ಯನಂತರವೂ ಸಂವಿಧಾನ ರಚನೆ ಸಂದರ್ಭ ಇದು ಚರ್ಚೆಯಾಗಿತ್ತು. ಬಳಿಕ ಸಂವಿಧಾನ ರಚನೆ ಸಂದರ್ಭ ಏಕರೂಪ ನಾಗರಿಕ ಸಂಹಿತೆ ಅಳವಡಿಸುವುದು ಸರ್ಕಾರದ ಕರ್ತವ್ಯ ಎಂದು ಹೇಳಲಾಗಿತ್ತು. ಸಂವಿಧಾನದ 44ನೇ ಕಲಂನಲ್ಲಿ ಈ ಬಗ್ಗೆ ಹೇಳಲಾಗಿದೆ. 1985ರ ಶಾ ಬಾನು ಪ್ರಕರಣದ ಬಳಿಕ ಏಕರೂಪನಾಗರಿಕ ಸಂಹಿತೆ ಕುರಿತ ಚರ್ಚೆಗಳು ತೀವ್ರಗೊಂಡಿತು .

 

ಭಾರತಕ್ಕೆ ಏಕರೂಪದ ನಾಗರಿಕ ಸಂಹಿತೆ ಏಕೆ ಬೇಕು?

  • ಭಾರತ ಸಂವಿಧಾನದ ೪೪ನೆಯ ಅನುಚ್ಛೇದ ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರಬೇಕು ಎಂದು ಹೇಳಿದೆ. ಆದರೆ, ರಾಜ್ಯನೀತಿ ನಿರ್ದೇಶಕ ತತ್ವದ ಅಂಶಗಳ ಅಡಿಯಲ್ಲಿ….CLICK HERE TO READ MORE TOPICS
Share