21st AUGUST.-DAILY CURRENT AFFAIRS BRIEF

21st AUGUST

 

 

1.ರಾಜ್ಯಸಭಾ ಚುನಾವಣೆಯಲ್ಲಿ ಇನ್ಮುಂದೆ ನೋಟಾಆಯ್ಕೆ ಇಲ್ಲ-ಸುಪ್ರೀಂ ಕೋರ್ಟ್

 

SOURCE-INDIAN EXPRESS https://indianexpress.com/article/india/no-nota-in-rajya-sabha-elections-says-supreme-court-5316979/

 

 ವಿದ್ಯಾರ್ಥಿಗಳ ಗಮನಕ್ಕೆ

ಪ್ರಿಲಿಮ್ಸ್ ಪರೀಕ್ಷೆಗಾಗಿ –  ನೋಟಾ ದ ಬಗ್ಗೆ

 ಮುಖ್ಯ ಪರೀಕ್ಷೆಗಾಗಿ— ವಿಧಾನಸಭೆ/ಲೋಕಸಭೆ ಚುನಾವಣೆಯಲ್ಲಿ   ನೋಟದ ಅನುಕೂಲ ಮತ್ತು ಅನಾನುಕೂಲವನ್ನು   ಚರ್ಚಿಸಿ. ಹಾಗು ರಾಜ್ಯಸಭಾ ಚುನಾವಣೆಯಲ್ಲಿ ನೋಟದ ನಿಷೇಧದ ಮಹತ್ವವೇನು ?

 

ಪ್ರಮುಖ ಸುದ್ದಿ

 

  • ರಾಜ್ಯಸಭೆ ಚುನಾವಣೆಗಳಲ್ಲಿ ‘ನೋಟಾ’ ಮತಗಳಿಗೆ ಅವಕಾಶ ನೀಡಲಾಗದು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಇದಕ್ಕೆ ಅವಕಾಶ ನೀಡಿದ್ದ ಚುನಾವಣೆ ಆಯೋಗದ ಅಧಿಸೂಚನೆಯನ್ನು ಕೋರ್ಟ್‌ ವಜಾಗೊಳಿಸಿದೆ.

 

ಮುಖ್ಯ ಅಂಶಗಳು

 

  • ‘ರಾಜ್ಯಸಭೆ ಚುನಾವಣೆಗಳಲ್ಲಿ ‘ನೋಟಾ’ಗೆ ಅವಕಾಶ ನೀಡುವ ಚುನಾವಣೆ ಆಯೋಗದ ಸೂಚನೆಗೆ ಅನುಮತಿ ನೀಡಲಾಗದು. ಹಾಗೆ ಮಾಡಿದಲ್ಲಿ ರಾಜ್ಯಸಭೆಯಲ್ಲಿ ರಾಜ್ಯಗಳಿಗೆ ಪ್ರಾತಿನಿಧ್ಯದ ಅನುಪಾತವನ್ನೇ ನಿರಾಕರಿಸಿದಂತಾಗುತ್ತದೆ’ ಎಂದು ಕೋರ್ಟ್‌ ಹೇಳಿದೆ.

 

  • ಕಳೆದ ಬಾರಿಯ ರಾಜ್ಯಸಭಾ ಚುನಾವಣೆ ಸಂದರ್ಭ ಮತಪತ್ರಗಳಲ್ಲಿ ನೋಟಾ ಮತದಾನಕ್ಕೆ ಅವಕಾಶ ನೀಡಿದ್ದ ಆಯೋಗದ ತೀರ್ಮಾನವನ್ನು ಗುಜರಾತ್‌ ಕಾಂಗ್ರೆಸ್‌ ಮುಖ್ಯ ಸಚೇತಕ ಶೈಲೇಶ್‌ ಪರ್ಮಾರ್‌ ಪ್ರಶ್ನಿಸಿ ಕೋರ್ಟ್ ಮೊರೆ ಹೋಗಿದ್ದರು. ಈ ಅರ್ಜಿಯ ವಿಚಾರಣೆ ಮುಗಿಸಿದ ಬಳಿಕ ಕೋರ್ಟ್ ಈ ತೀರ್ಪು ನೀಡಿದೆ.

 

  • ರಾಜ್ಯಸಭಾ ಚುನಾವಣೆಗಳಲ್ಲಿ ನೋಟಾಗೆ ಅವಕಾಶ ನೀಡಿದರೆ ‘ಭ್ರಷ್ಟಾಚಾರ ಮತ್ತು ಕುದುರೆ ವ್ಯಾಪಾರ’ಕ್ಕೆ ಪ್ರೋತ್ಸಾಹಿಸಿದಂತೆ ಎಂದು ಗುಜರಾತ್ ಕಾಂಗ್ರೆಸ್‌ ನಾಯಕರು ಆರೋಪಿಸಿದ್ದರು.

 

  • ಒಬ್ಬ ವ್ಯಕ್ತಿ ಮತದಾನ ಮಾಡದಿದ್ದರೆ ಆತನ ಪಕ್ಷ ಅವನನ್ನು ಉಚ್ಚಾಟಿಸುತ್ತದೆ. ಹಾಗಿದ್ದರೂ ನೋಟಾಗೆ ಅವಕಾಶ ನೀಡುವ ಮೂಲಕ ನೀವು (ಚುನಾವಣೆ ಆಯೋಗ) ಮತ ಹಾಕದಿರುವ ಪ್ರವೃತ್ತಿಗೆ ಅಧಿಕೃತ ಮುದ್ರೆ ನೀಡುತ್ತಿದ್ದೀರಿ’ ಎಂದು ಸುಪ್ರೀಂ ಕೋರ್ಟ್ ಆಕ್ಷೇಪಿಸಿದೆ.

 

ಏನಿದು ನೋಟಾ?:

 

  • ನೋಟಾ ಎಂಬುವುದಷ್ಟು ಮತದಾರರಿಗೆ ನೀಡುವ ಹಕ್ಕು. ಈ ಮೂಲಕ ಮತದಾರರು ಬ್ಯಾಲೆಟ್​ ಪೇಪರ್​ನಲ್ಲಿ ನೀಡಲಾದ ಅಭ್ಯರ್ಥಿಗಳಲ್ಲಿ ಯಾರನ್ನೂ ಆಯ್ಕೆ ಮಾಡಲು ಬಯಸುವುದಿಲ್ಲ ಎಂಬುವುದನ್ನು ಆಯ್ಕೆ ಮಾಡಬಹುದು.
  • 2009ರ ಮೊದಲು ಮತದಾರರು ತಾವು ನೀಡಿರುವ ಆಯ್ಕೆಯಲ್ಲಿ ಯಾರಿಗೂ ಮತ ನೀಡಲು ಬಯಸುವುದಿಲ್ಲ ಎಂದು ಆ ಬೂತ್​ಗೆ ನಿಗಧಿಪಡಿಸಿದ ಚುನಾವಣಾ ಅಧಿಕಾರಿಗೆ ಹೇಳಬೇಕಾಗಿತ್ತು. ಇದನ್ನು ತಡೆಗಟ್ಟುವ ಸಲುವಾಗಿ 2009ರಲ್ಲಿ ಚುನಾವಣಾ ಆಯೋಗವು ನೋಟಾ ಎಂಬ ಆಯ್ಕೆಯನ್ನು ಅಧಿಕೃತವಾಗಿ ಬ್ಯಾಲೆಟ್​ ಪೇಪರ್​ನಲ್ಲಿ ಬಳಕೆಗೆ ತಂದಿತ್ತು.
  • 2013ರಲ್ಲಿ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ ತೀರ್ಪಿನ ನಂತರ ಭಾರತದಲ್ಲಿ ನೋಟಾ ಜಾರಿಗೆ ಬಂದಿತ್ತು.
  • ಈ ನೋಟಾ ಆಯ್ಕೆಯು ಮತದಾರರಿಗೆ ವಿಶೇಷ ಹಕ್ಕು …CLICK HERE TO READ MORE

 

 

Share