21st September MLP- MODEL ANSWERS

21st SEPTEMBER  MLP

 

NOTE:: ದಯವಿಟ್ಟು  ಗಮನಿಸಿ ಕೆಳಗಿನ ಉತ್ತರಗಳು‘  ‘ಮಾದರಿ ಉತ್ತರಗಳುಎಂಬುದನ್ನು ನೆನಪಿಡಿ. ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ PROPER SOURCE ಎಲ್ಲದೇ ಇರುವುದರಿಂದ  ನಾವು ಮುಖ್ಯ ಪರೀಕ್ಷೆಯಲ್ಲಿ ನೀವು ಯಾವ ರೀತಿ ರೆಯಬೇಕು ಮತ್ತು ನಿಮ್ಮ ಸಮಯವನ್ನು ಉಳಿಸಲು ಕೊಡುತ್ತಿರುವ  ವಿಸ್ತಾರವಾದ ಸಾರಾಂಶ, ನಾವುಗಳು ಇಲ್ಲಿ ಪದಗಳ ಮಿತಿ ಗಣನೆಗೆ ತೆಗೆದುಕೊಂಡಿಲ್ಲ ಏಕೆಂದರೆ ಒಂದು ಪ್ರಶ್ನೆಗೆ ಎಷ್ಟು ಸಾದ್ಯೋವೊ ಅಷ್ಟು ಇನ್ಫಾರ್ಮಶನ್ ಕೊಟ್ಟಿರುತ್ತೆವೆ. ನಾವು ಒದಗಿಸುತ್ತಿರುವ ವಿಷಯವು ಪ್ರಶ್ನೆಯ ಬೇಡಿಕೆಯನ್ನು ಪೂರೈಸುತ್ತದೆ ಮತ್ತು ಅದೇ ಸಮಯದಲ್ಲಿ ನಿಮಗೆ ಹಿನ್ನೆಲೆ ಮಾಹಿತಿ ರೂಪದಲ್ಲಿ ಹೆಚ್ಚುವರಿ ಅಂಕಗಳನ್ನು ಗಳಿಸಲು ಅನುಕೂಲಕರವಾಗುತ್ತದೆ.

                                                                           

 

GENERAL STUDIES PAPER-1(ಸಾಮಾನ್ಯ ಅಧ್ಯಾಯ೧)

 

1.What are denotified tribes (DNTs)? A study on the socio-economic and educational status of denotified tribes (DNTs) reveals that these tribes are plagued by problems such as chronic poverty and illiteracy. Discuss why.

(ಡಿನೋಟಿಫೈಡ್ ಟ್ರೈಬ್ಸ್ (DNTs–ನಿರಾಕರಿಸಿದ ಬುಡಕಟ್ಟು ಜನಾಂಗ ) ಗಳೆಂದರೇನು ? ಡಿನೋಟಿಫೈಡ್ ಟ್ರೈಬ್ಸ್ (ಡಿ.ಎನ್.ಟಿ) ಗಳ ಸಾಮಾಜಿಕಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಯ  ಅಧ್ಯಯನವು ಅವರು   ದೀರ್ಘಕಾಲದ ಬಡತನ ಮತ್ತು ಅನಕ್ಷರತೆ ಮುಂತಾದ ಸಮಸ್ಯೆಗಳಿಂದ ನರಳಲ್ಪಟ್ಟಿವೆ ಎಂದು ತಿಳಿಸುತ್ತದೆ. ಏಕೆ೦ಬುದನ್ನು ಕುರಿತು  ಚರ್ಚಿಸಿ. )                                                                                                                                  (200 ಪದಗಳು)

 

ಡಿನೋಟಿಫೈಡ್ ಟ್ರೈಬ್ಸ್ (ಡಿಎನ್ಟಿ)

 

ಡೆನೋಟಿಫೈಡ್ ಟ್ರೈಬ್ಸ್ ಎಂದು ಕರೆಯಲ್ಪಡುವ  ಅಥವಾ ‘ಕ್ರಿಮಿನಲ್ ಬುಡಕಟ್ಟುಗಳೆಂದು’ ಕೆಲವು ಸಮುದಾಯಗಳನ್ನು ಪಟ್ಟಿ ಮಾಡಿದ್ದು ವಸಾಹತು ಆಡಳಿತ. ವಸಾಹತು ಆಡಳಿತ ಈ ಕುರಿತು 1871ರಲ್ಲಿ ಕ್ರಿಮಿನಲ್ ಬುಡಕಟ್ಟು ಕಾಯ್ದೆ ರಚಿಸಿ ಜಾರಿಗೆ ತಂದಿತು. ವಸಾಹತು ಆಡಳಿತದ ಸಂದರ್ಭದಲ್ಲಿ ರೂಪುಗೊಂಡ ಒಂದು ಅಮಾನವೀಯ ಮತ್ತು ಶುದ್ಧ ಸಾಮ್ರಾಜ್ಯಶಾಹಿ ಮನೋಭಾವದ ಕಾಯ್ದೆ ಇದು. ಈ ಕಾಯ್ದೆಯು ಮುಖ್ಯವಾಗಿ ಭಾರತದ ವ್ಯವಸಾಯಿ ಸಂಬಂಧಗಳನ್ನು ಬೆಸೆಯುತ್ತಿದ್ದ, ಕುಶಲಕರ್ಮಿ, ಅಲೆಮಾರಿ ಮತ್ತು ಆದಿವಾಸಿ ಸಮುದಾಯಗಳನ್ನು ನಿಯಂತ್ರಿಸುವ ಸಲುವಾಗಿ ರೂಪುಗೊಂಡಿತು.

ವಸಾಹತು ಆಡಳಿತ ತನ್ನ ‘ಕಾನೂನು ಸುವ್ಯವಸ್ಥೆಯ’ ಕಾರಣಕ್ಕಾಗಿ ಈ ಕಾಯ್ದೆಯನ್ನು ಜಾರಿಗೆ ತಂದಿತು ಎಂದು ಹೇಳಲಾಗುತ್ತಿದೆಯಾದರೂ ಈ ಕಾಯ್ದೆಯನ್ನು ರೂಪಿಸುವ ಹಿಂದೆ ವಸಾಹತು ಆಡಳಿತಕ್ಕೆ ತನ್ನದೇ ಆದ ರಾಜಕೀಯ ಆರ್ಥಿಕ ಕಾರಣಗಳೂ ಇದ್ದವು. ವಸಾಹತು ಆಡಳಿತ ‘ಕ್ರಿಮಿನಲ್ ಗಳು’ ಎಂದು ಬೇಟೆಯಾಡಿದ್ದು, ವಾಸ್ತವದಲ್ಲಿ ತಮ್ಮ ಕರಾಳ ಆಡಳಿತ ಮತ್ತು ಕಾನೂನುಗಳಿಗೆ ಪ್ರತಿರೋಧ ಒಡ್ಡಿದ್ದ ಆದಿವಾಸಿ, ಅಲೆಮಾರಿ ಸಮುದಾಯಗಳನ್ನು.

1774 ಮತ್ತು 1871ರ ನಡುವಿನ ಭಾರತದ ಇತಿಹಾಸ ಅತ್ಯಂತ ರಕ್ತಪಾತದಿಂದ ಕೂಡಿದ ಇತಿಹಾಸವಾಗಿದೆ. ಭಾರತದ ಸ್ಥಳೀಯ ರಾಜ್ಯಗಳ ವಿರುದ್ಧ ಈ ಅವದಿಯಲ್ಲಿ ಕಂಪನಿ ಮತ್ತು ವಸಾಹತು ಆಡಳಿತವು ಅತ್ಯಂತ ಕ್ರೂರ ಯುದ್ಧಗಳನ್ನು ಮಾಡಿತು. ಆಂಗ್ಲೋ ಮರಾಠ ಯುದ್ಧ, ಮೈಸೂರು ಯುದ್ಧ, ಹೋಳ್ಕರ ಶರಣಾಗತಿ, ಪೇಶ್ವೇಗಳ ಸೋಲು, ವೆಲ್ಲೂರಿನ ಸಿಪಾಯಿದಂಗೆ, ಮೈಸೂರು ಮತ್ತು ಕೂರ್ಗ್ ಗಳನ್ನು ವಶಪಡಿಸಿಕೊಂಡದ್ದು, ಸಿಂಧ್, ಸಿಖ್, ಔಧ್ ಪ್ರದೇಶಗಳನ್ನು ಯುದ್ಧಗಳ ಮೂಲಕ ವಶಪಡಿಸಿಕೊಂಡದ್ದು ಮತ್ತು 1857ರಲ್ಲಿ ನಡೆದ ಸಿಪಾಯಿ ದಂಗೆಗಳು ಹಲವು ಸ್ಥಳೀಯ ಸಮುದಾಯಗಳನ್ನು ನೆಲೆ ಇಲ್ಲದಂತೆ ಮಾಡಿದವು.

ಈ ಸಮುದಾಯಗಳೇ ಮುಂದೆ ಅಲೆಮಾರಿಗಳಾಗಿ ಪರಿವರ್ತಿತವಾದವು. ಮುಖ್ಯವಾಗಿ ಆಧುನಿಕಪೂರ್ವ ಭಾರತದ ಅನೇಕ ಪಾಳೆಪಟ್ಟುಗಳು ಮತ್ತು ಸ್ಥಳೀಯ ರಾಜರು ಅನಿವಾರ್ಯವಾಗಿ ಕಂಪನಿ ಆಡಳಿತದ ಜೊತೆ ಕೈಜೋಡಿಸಬೇಕಿತ್ತು. ಇಲ್ಲವೆ ಅವರೊಡನೆ ಕಾದಾಡಬೇಕಿತ್ತು. ಈ ಎರಡೂ ಸಂದರ್ಭದಲ್ಲಿ ದೇಶೀಯ ಶ್ರಮಜೀವಿಗಳು ಆರ್ಥಿಕವಾಗಿ ಕುಸಿದು ಹೋದರು.

 

  ಬುಡಕಟ್ಟುಗಳ ಸಾಮಾಜಿಕಆರ್ಥಿಕ ವಾಗಿ ಹೊರಗಿಡುವ ಕಾರಣಗಳು:

 

  • ಸಾರ್ವಜನಿಕ ಮತ್ತು ಖಾಸಗಿ ಏಜೆನ್ಸಿಗಳು ಅನುಮಾನಾಸ್ಪದ ವರ್ತನೆಯೊಂದಿಗೆ ಸಾಮಾಜಿಕ ಹೊರಗಿಡುವಿಕೆ   ಬುಡಕಟ್ಟು ಜನಾಂಗದವರ ಸಂಕಟದ ಮುಖ್ಯ ಕಾರಣವಾಗಿದೆ.
  • ಇಂದು ಅವರು ದೇಶದ ಅತ್ಯಂತ ದುರ್ಬಲ ಗುಂಪುಗಳಲ್ಲಿ ಒಂದಾಗಿದೆ.ದೇಶದಲ್ಲಿ ಸುಮಾರು 801 ಡಿನೋಟಿಫೈಡ್, ಅಲೆಮಾರಿ ಮತ್ತು ಅರೆ ಅಲೆಮಾರಿ ಬುಡಕಟ್ಟು……CLICK HERE TO READ MORE
Share