22nd TO 25th DECEMBER-DAILY CURRENT AFFAIRS BRIEF

22nd TO 25th DECEMBER

 

 

1.ರಾಷ್ಟ್ರೀಯ ಹೆದ್ದಾರಿ ಹೂಡಿಕೆ ಉತ್ತೇಜನ ಘಟಕ  (National Highways Investment Promotion Cell -NHIPC)

 

ಪ್ರಮುಖ ಸುದ್ದಿ

  • ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಹೆದ್ದಾರಿ ಯೋಜನೆಗಳಿಗೆ ದೇಶೀಯ ಮತ್ತು ವಿದೇಶಿ ಹೂಡಿಕೆಯನ್ನು ಆಕರ್ಷಿಸಲು ರಾಷ್ಟ್ರೀಯ ಹೆದ್ದಾರಿ ಹೂಡಿಕೆ ಉತ್ತೇಜನ ಘಟಕ ಯನ್ನು ರಚಿಸಿದೆ.

ರಾಷ್ಟ್ರೀಯ ಹೆದ್ದಾರಿ ಹೂಡಿಕೆ ಉತ್ತೇಜನ ಘಟಕದ ಬಗ್ಗೆ

 

  • ರಸ್ತೆ ಮೂಲಸೌಕರ್ಯ ಯೋಜನೆಗಳಲ್ಲಿ ಜಾಗತಿಕ ಸಂಸ್ಥೆ ಹೂಡಿಕೆದಾರರು, ನಿರ್ಮಾಣ ಕಂಪನಿಗಳು, ಅಭಿವರ್ಧಕರು ಮತ್ತು ನಿಧಿಯ ವ್ಯವಸ್ಥಾಪಕರು ಪಾಲ್ಗೊಳ್ಳುವಿಕೆಯ  ಮೇಲೆ  ಈ ಘಟಕವು  ಕೇಂದ್ರೀಕರಿಸುತ್ತದೆ.

 

  • ಬಂಡವಾಳವನ್ನು ಆಕರ್ಷಿಸಲು ಎನ್ಐಐಪಿಸಿ ಯು ಕೇಂದ್ರ  ರಾಜ್ಯ ಸರ್ಕಾರಗಳ ವಿವಿಧ ಸಂಪರ್ಕ ಸಚಿವಾಲಯಗಳು ಮತ್ತು ಇಲಾಖೆಗಳೊಂದಿಗೆ ಸಹಕಾರ ಪಡೆದು ಕೊಳ್ಳಲಿದೆ .    ಸಿಐಐ, ಫಿಕಿ , ಅಸ್ಸೋಚ್ಮ್   ಮತ್ತು ಇನ್ವೆಸ್ಟ್ ಇಂಡಿಯಾ ಮುಂತಾದ    ವಾಣಿಜ್ಯೋದ್ಯಮ ಸಂಘಟನೆಯೊಂದಿಗೆ ಜೊತೆಗೂಡಿ   ಕಾರ್ಯನಿರ್ವಹಿಸುತ್ತಿದೆ.

 

ಇದರ ಉದ್ದೇಶವೇನು ?

  • ಭಾರತ್ ಮಾಲಾ ಯೋಜನೆಯಡಿಯಲ್ಲಿ ಸರ್ಕಾರವು 35,000 ಕಿ.ಮೀ. ಹೆದ್ದಾರಿ ನಿರ್ಮಾಣದ ಮಹತ್ವಾಕಾಂಕ್ಷೆಯ ಗುರಿಯನ್ನು ಹೊಂದಿದೆ.

 

  • ಈ ಯೋಜನೆಗೆ ಮುಂದಿನ ಐದು ವರ್ಷಗಳಲ್ಲಿ 35 ಲಕ್ಷ ಕೋಟಿ. ಅನದಾನದ ಅಗತ್ಯವಿದ್ದು   , ಸಾರ್ವಜನಿಕ ಮತ್ತು ಖಾಸಗಿ ವಲಯದಿಂದ, ವಿದೇಶಿ ಮತ್ತು ದೇಶೀಯ ಹೂಡಿಕೆಯ ವಲ ಯದಿಂದ ಬಂಡವಾಳವನ್ನು ಆಕರ್ಷಿಸಲು ಇದನ್ನು ರಚಿಸಲಾಗಿದೆ.
  • ವಿದೇಶಿ ರಾಯಭಾರ ಕಚೇರಿಗಳು ಮತ್ತು ಭಾರತೀಯ ರಾಯಭಾರ ಕಚೇರಿಗಳು ವಿದೇಶಗಳಲ್ಲಿ ನೆಲೆಗೊಂಡ ಮಿಷನ್ಗಳೊಂದಿಗೆ ಸಹ ನಿಕಟವಾಗಿ ಸಹಕರಿಸುತ್ತದೆ.

 

ರಾಷ್ಟ್ರೀಯ  ಯ ಹೆದ್ದಾರಿ ಪ್ರಾಧಿಕಾರದ  ಬಗ್ಗೆ

  • ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಾಯಿದೆ-1988 ರಡಿಯಲ್ಲಿ ಪ್ರಾಧಿಕಾರವನ್ನು ಸ್ಥಾಪಿಸಲಾಗಿದೆ. 1995 ರಲ್ಲಿ ಸ್ವಾಯತ್ತ ಸಂಸ್ಥೆಯಾಗಿ ಅಂಗೀಕರಿಸಲಾಯಿತು.

 

  • ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೇಂದ್ರ ಸರ್ಕಾರದ ಸ್ವಾಯತ್ತ ಸಂಸ್ಥೆ ಆಗಿದೆ. ಸುಮಾರು 70,000 ಕಿ.ಮೀ ಉದ್ದದ ರಾಷ್ಟ್ರೀಯ ಹೆದ್ದಾರಿ ನಿರ್ವಹಣೆ ಮಾಡುವುದು ಪ್ರಾಧಿಕಾರದ ಕರ್ತವ್ಯ.
  • ರಾಷ್ಟ್ರೀಯ ಹೆದ್ದಾರಿ ನಿರ್ಮಾಣ, ಅಭಿವೃದ್ದಿ ಮತ್ತು ನಿರ್ವಹಣೆ ಮಾಡುವುದು ಇದರ ಹೊಣೆಗಾರಿಕೆ ಆಗಿದೆ.

 

 

2.ಸಮೀಪ್ ಯೋಜನೆ

 

ಪ್ರಮುಖ ಸುದ್ದಿ

  • ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ದೇಶಾದ್ಯಂತ ವಿದ್ಯಾರ್ಥಿಗಳನ್ನು ಆಕರ್ಷಿಸುವ ಸಲುವಾಗಿ ಸಮೀಪ್ (ಸ್ಟೂಡೆಂಟ್ಸ್ ಅಂಡ್ ಎಂಇಎ ಎಂಗೇಜ್‍ಮೆಂಟ್ ಪ್ರೋಗ್‍ರಾಂ) ಎಂಬ ಯೋಜನೆಯನ್ನು ಜಾರಿಗೆ ತಂದಿದೆ.

 

ಸಮೀಪ್ ಯೋಜನೆ ಬಗ್ಗೆ

 

  • ಇದು ಭಾರತದ ವಿದೆಶಾಂಗ ನೀತಿಯ ವಿಸ್ತರಣಾ ಯೋಜನೆಯಾಗಿದ್ದು, ವಿದ್ಯಾರ್ಥಿ ಸ್ನೇಹಿ ವಿದೇಶಾಂಗ ನೀತಿಯನ್ನು ಜಾರಿಗೊಳಿಸುವ ಉದ್ದೇಶ ಹೊಂದಿದೆ.

 

  • ಭಾರತದ ವಿದೇಶಾಂಗ ನೀತಿ ಹಗೂ ಜಾಗತಿಕ ಕ್ರಿಯಾಶೀಲತೆಯನ್ನು ವಿದ್ಯಾರ್ಥಿಗಳ ಬಳಿಗೆ ಒಯ್ಯುವ ಜತೆಗೆ ರಾಜತಾಂತ್ರಿಕತೆಯನ್ನು ವಿದ್ಯಾರ್ಥಿಗಳು ವೃತ್ತಿಯಾಗಿ ಆಯ್ಕೆ ಮಾಡಿಕೊಳ್ಳಲು ಇರುವ ಅವಕಾಶಗಳನ್ನು ತೋರಿಸಿಕೊಡಲಿದೆ.
  • ಈ ಹೆಸರನ್ನು ಜನಸಮುದಾಯದ ಮೂಲದಿಂದ ಪಡೆಯಲಾಗಿದ್ದು, ಮೈ ಗೋವ್ ಪೋರ್ಟೆಲ್ ಮತ್ತು 550 ಸಲಹಾ ಎಂಟ್ರಿಗಳಿಂದ ಇದನ್ನು ಪಡೆಯಲಾಗಿದೆ.

 

  • ಈ ವಿಸ್ತರಣಾ ಯೋಜನೆಯ ಮುಖ್ಯ ಉದ್ದೇಶವೆಂದರೆ, ಭಾರತದ ಮೂಲೆ ಮೂಲೆಗಳ ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ನಿಡುವುದು ಮತ್ತು ಅದನ್ನು ವಿಸ್ತøತವಾಗಿ ಪರಿಚಯಿಸುವುದು.
  • ಇದು ಭಾರತದ ವಿದೇಶಾಂಗ ನೀತಿಯ ಪ್ರಮುಖ ಅಂಶಗಳ ಬಗ್ಗೆ ಕೂಡಾ ಜಾಗೃತಿ ಮೂಡಿಸುವಲ್ಲಿ ಇದು ನೆರವಾಗಲಿದೆ. ಜತೆಗೆ ಇಂಥ ನೀತಿಗಳ ಯಶೋಗಾಥೆಯ ಬಗ್ಗೆಯೂ ವಿವರಿಸಲಾಗುತ್ತದೆ.

 

  • ಇದು ವಿದೇಶಾಂಗ ವ್ಯವಹಾರಗಳ ಖಾತೆ ಕಚೇರಿಗಳ ಅಧಿಕಾರಿಗಳು ಮತ್ತು ಅಧೀನ ಕಾರ್ಯದರ್ಶಿಗಿಂತ ಮೇಲಿನ ಅಧಿಕಾರಿಗಳು ತಮ್ಮ ಹುಟ್ಟೂರಿನ ಶಾಲೆ- ಕಾಲೇಜುಗಳಿಗೆ ತೆರಳಿ ಅಗತ್ಯ ಮಾಹಿತಿ ಹಾಗೂ ಮಾರ್ಗದರ್ಶನ ನೀಡುವ ಉದ್ದೇಶ ಹೊಂದಿದೆ.

 

  • ವಿದೇಶಾಂಗ ವ್ಯವಹಾರಗಳ ಖಾತೆ ಕಚೇರಿಗಳ ಅಧಿಕಾರಿಗಳು ಮತ್ತು ಅಧೀನ ಕಾರ್ಯದರ್ಶಿಗಿಂತ ಮೇಲಿನ ಅಧಿಕಾರಿಗಳು ರಜಾಕಾಲದಲ್ಲಿ ಹಾಗೂ ಇತರ ಅವಧಿಯಲ್ಲಿ ತಮ್ಮ ಹುಟ್ಟೂರಿನ ಶಾಲೆ- ಕಾಲೇಜುಗಳಿಗೆ ತೆರಳಿ ವಿದ್ಯಾರ್ಥಿಗಳ ಜತೆ ವಿದೇಶಾಂಗ ವ್ಯವಹಾರಗಳ ಬಗ್ಗೆ ಸಂವಾದ ನಡೆಸುವರು.

 

  • ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಗೆ ಕಾರ್ಯನಿರ್ವಹಿಸುತ್ತದೆ, ಹೇಗೆ ರಾಜತಾಂತ್ರಿಕ ನೀತಿ ಅನುಸರಿಸಲಾಗುತ್ತದೆ ಹಾಗೂ ಇದನ್ನು ವೃತ್ತಿ ಅವಕಾಶವಾಗಿ ವಿದ್ಯಾರ್ಥಿಗಳು ಹೇಗೆ ಕೈಗೊಳ್ಳಬಹುದು ಎಂಬ ಬಗ್ಗೆ ಅಗತ್ಯ ಮಾಹಿತಿ ಹಾಗೂ ಮಾಗರ್ದಶನ ನೀಡಲಿದ್ದಾರೆ.

 

  • ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಇಂಥ ಅಧಿಕಾರಿಗಳಿಗಾಗಿ ಗುಣಮಟ್ಟದ ಪ್ರಸ್ತುತಿಯನ್ನು ಕೂಡಾ ಈ ಉದ್ದೇಶಕ್ಕೆ ಸಿದ್ಧಪಡಿಸಿದೆ. ಇದನ್ನು ಸುಧಾರಿಸುವ ನಿಟ್ಟಿನಲ್ಲಿ ಹಾಗೂ ತಮ್ಮ ವೈಯಕ್ತಿಕ ಅನುಭವವನ್ನು ಸೇರಿಸುವ ನಿಟ್ಟಿಲ್ಲಿ ಬದಲಾವಣೆ ಮಾಡಿಕೊಳ್ಳಬಹುದಾಗಿದೆ.

 

3.ರಾಷ್ಟ್ರೀಯ ಸೇವಾ ಯೋಜನ ಪ್ರಶಸ್ತಿ

 

ಪ್ರಮುಖ ಸುದ್ದಿ

 

  • ಇತ್ತೀಚೆಗೆ ರಾಷ್ಟ್ರಪತಿ ಶ್ರೀ ರಾಮ್ ನಾಥ್ ಕೋವಿಂದ್ ರವರು  2016-17ರ ರಾಷ್ಟ್ರೀಯ ಸೇವಾ ಯೋಜನೆ ಪ್ರಶಸ್ತಿಗಳನ್ನು ಪ್ರಧಾನ ಮಾಡಿದರು.

 

ಎನ್ಎಸ್ಎಸ್ ಪ್ರಶಸ್ತಿ ಉದ್ದೇಶ

  • ಎನ್ಎಸ್ಎಸ್ ಅನ್ನು ಮತ್ತಷ್ಟು ಉತ್ತೇಜಿಸುವ ದೃಷ್ಟಿಯಿಂದ ವಿಶ್ವವಿದ್ಯಾನಿಲಯಗಳು / ಸೀನಿಯರ್ ಸೆಕೆಂಡರಿ ಗಳು (+2) ಎನ್ಎಸ್ಎಸ್ ಘಟಕಗಳು / ಪ್ರೋಗ್ರಾಮ್ ಅಧಿಕಾರಿಗಳು ಮಾಡುವ ಸ್ವಯಂಪ್ರೇರಿತ ಸಮುದಾಯ ಸೇವೆಗೆ ಅತ್ಯುತ್ತಮವಾದ ಕೊಡುಗೆಗಳನ್ನು ಗುರುತಿಸಿ    ಗೌರವಿಸುವುದು.

 

ರಾಷ್ಟ್ರೀಯ ಸೇವಾ ಯೋಜನೆ ಬಗ್ಗೆ

  • ರಾಷ್ಟ್ರೀಯ ಸೇವಾ ಯೋಜನೆ ಎನ್ನುವುದು ಭಾರತ ಸರ್ಕಾರದಿಂದ ಪ್ರಾಯೋಜಿತವಾದ ಸಾರ್ವಜನಿಕ ಸೇವಾ ಸಂಸ್ಥೆ. ಇದನ್ನು ನಡೆಸುವವರು ಭಾರತ ಸರ್ಕಾರದ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ (Department of Youth Affairs and Sports).
  • ಗಾಂಧೀಜಿಯವರ ಶತವರ್ಷವಾದ ೧೯೬೯ರಲ್ಲಿ ಈ ಯೋಜನೆಗೆ ಚಾಲನೆ ನೀಡಲಾಯಿತು.

 

  • ಈ ಸಂಸ್ಥೆಯ ಮುಖ್ಯ ಉದ್ದೇಶವು ಭಾರತೀಯ ವಿದ್ಯಾರ್ಥಿಗಳ ವ್ಯಕ್ತಿತ್ವ್ಸವನ್ನು ಸಾರ್ವಜನಿಕ ಸೇವೆಯ ಮೂಲಕ ಅಭಿವೃದ್ಧಿಗೊಳಿಸುವುದಾಗಿದೆ. ಈ ಸ್ವಯಂಪ್ರೇರಿತ ಸಂಸ್ಥೆಯ ಮೂಲ ತತ್ವವು ವಿದ್ಯಾರ್ಥಿಗಳಿಗೆ ಲೋಕಸೇವೆಯ ಮೂಲಕ ರಾಷ್ತ್ರನಿರ್ಮಾಣದ ಕಾರ್ಯಗಳಲ್ಲಿ ಒಳಗೊಂದಂತಹ ಅನುಭವವನ್ನು ನೀಡುವುದು, ಹಾಗೂ ಇದರೊಂದಿಗೆ ರಾಷ್ಟ್ರಪ್ರೇಮ ಮತ್ತು ಸೇವಾ ಭಾವನೆಗಳನ್ನು ಬೆಳೆಸುವುದಾಗಿದೆ.

 

  • ರಾಷ್ಟ್ರೀಯ ಸೇವಾ ಯೋಜನೆ ಈ ಸಂಘಟನೆಯನ್ನು ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ ಸಮಾಜ ಸೇವೆಯ ಬಗೆಯಲ್ಲಿ ತಿಳಿಯಲು ಇರುವು ಒಂದು ಸರಕಾರದ ಯೋಜನೆ. ಗಾಂಧೀಜಿ ಯವರ ಸರ್ವೋದಯ ತತ್ವದ ನೆಲೆಯಲ್ಲಿ ಯೋಚನೆ ಮಾಡುವಾಗ, ಇಂತಹ ಒಂದು ವಿಚಾವರನ್ನು ಅನುಷ್ಠಾನಕ್ಕೆ ತಂದರು. ಹೀಗೆ ಎನ್.ಎಸ್.ಎಸ್. ಎಂಬ ಪರಿಕಲ್ಪನೆ ಬಂತು. ಮೊದಲು ಪದವಿ ಕಾಲೇಜುಗಳಲ್ಲಿ ಮತ್ತು ಸ್ನಾತಕೋತ್ತರ ಕೇಂದ್ರಗಳಲ್ಲಿ ಇದ್ದ ಎನ್.ಎಸ್.ಎಸ್.ನಂತರ ಪಿ.ಯು.ಸಿ ವಿಭಾಗದ ವಿದ್ಯಾರ್ಥಿಗಳಿಗೂ ವಿಸ್ತರಣೆಯಾಯಿತು.

 

ಎನ್.ಎಸ್.ಎಸ್. ಧ್ಯೇಯ ವಾಕ್ಯ

  • ಎನ್.ಎಸ್.ಎಸ್. ಒಂದು ಅನುಭವ. ಎನ್. ಎಸ್. ಎಸ್. ಧ್ಯೇಯವಾಕ್ಯ – ನನಗಲ್ಲ, ನಿನಗೆ – Not me, but you ಆಗಿದೆ. ಪ್ರಜಾಪ್ರಭುತ್ವ ದೇಶದಲ್ಲಿ ಬದುಕುನ ಹಾಗೇನೆ ನಿಸ್ವಾರ್ಥ ಸೇವೆಯಲ್ಲಿ ಮತ್ತು ಬೇರೆ ವ್ಯಕ್ತಿಗಳೊಂದಿಗೆ ಮೆಚ್ಚಿಕೆಯಾಗಿ ಗುರುತಿಸಿಕೊಂಡು ಮಾನವೀಯತೆಯನ್ನು ಎತ್ತಿ ತೋರಿಸುವ ಅಗತ್ಯವನ್ನು ಎನ್.ಎಸ್.ಎಸ್. ದ್ಯೇಯ ವಾಕ್ಯ ಪ್ರತಿಬಿಂಬಿಸುತ್ತದೆ.

 

ರಾಷ್ಟ್ರೀಯ ಸೇವಾ ಯೋಜನೆಯ ಉದ್ದೇಶ

  • ಪರಿಸರ ಸಂರಕ್ಷಣೆ , ಆರೋಗ್ಯ ಜಾಗೃತಿ,ಶ್ರಮದಾನ, ಪ್ರಗತಿಪರ ಚಿಂತನೆ,ಪ್ರಾಕೃತಿಕ ವಿಕೋಪ ಮತ್ತು ಪ್ರಕೃತಿ ಸಂರಕ್ಷಣೆ,ಶೈಕ್ಷಣಿಕಮತ್ತು ಸಾಂಸ್ಕೃತಿಕ ಚಟುವಟಿಕೆಗಳು,ಮಕ್ಕಳು ಮತ್ತು ಮಹಿಳಾ ಜಾಗೃತಿ,ಪ್ರಾಚ್ಯವಸ್ತುಗಳ ಸಂರಕ್ಷಣೆ ರಾಷ್ಟ್ರೀಯ ಜಾಗೃತಿ ಮೂಡಿಸುವುದು.

 

4.ದರ್ಪಣ್ ಯೋಜನೆ

 ಪ್ರಮುಖ ಸುದ್ದಿ

 

  • ಕೇಂದ್ರ ಸಂವಹನ ಸಚಿವಾಲಯವು ಡಿಜಿಟಲ್ ಅಡ್ವಾನ್ಸ್‍ಮೆಂಟ್ ಆಫ್ ರೂರಲ್ ಪೋಸ್ಟ್ ಆಫೀಸ್ ಫಾರ್ ಎ ನ್ಯೂ ಇಂಡಿಯಾ (ದರ್ಪಣ್) ಯೋಜನೆಗೆ ಚಾಲನೆ ನೀಡಿದೆ. ಇದು ಗ್ರಾಮೀಣ ಪ್ರದೇಶದಲ್ಲಿ, ಬ್ಯಾಂಕಿಂಗ್ ಸೌಲಭ್ಯ ಇಲ್ಲದ ಭಾಗಗಳ ಜನರ ವಿತ್ತೀಯ ಸೇರ್ಪಡೆಗೆ ಪೂರಕವಾಗಲಿದ್ದು, ಗ್ರಾಮೀಣ ಭಾಗಕ್ಕೆ ಗುಣಮಟ್ಟದ ಸೇವೆ ಒದಗಿಸಲು ಮತ್ತು ಸೇವೆಗಳ ಮೌಲ್ಯವರ್ಧನೆಗೆ ಅನುಕೂಲಕರವಾಗಲಿದೆ.

 

  • ದರ್ಪಣ್ ಯೋಜನೆಯು ಮಾಹಿತಿ ತಂತ್ರಜ್ಞಾನ ಆಧುನೀಕರಣ ಯೋಜನೆಯಾಗಿದ್ದು, ವಿತ್ತೀಯ ಸೇರ್ಪಡೆಯನ್ನು ಕಾರ್ಯರೂಪಕ್ಕೆ ತರುವ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಅದರಲ್ಲೂ ಮುಖ್ಯವಾಗಿ ಬ್ಯಾಂಕ್‍ಗಳಿಲ್ಲದ ಗ್ರಾಮೀಣ ಜನರಿಗೆ ಗುಣಮಟ್ಟದ ಸೇವೆ ಒದಗಿಸುವುದು ಇದರ ಉದ್ದೇಶ. ಇದು ಎಲ್ಲ ಖಾತೆದಾರರಿಗೆ ಕೋರ್ ಬ್ಯಾಂಕಿಂಗ್ ಸೌಲಭ್ಯ ಒದಗಿಸುವ ಗುರಿ ಹೊಂದಿದೆ.

 

ದರ್ಪಣ್ ಯೋಜನೆ ಬಗ್ಗೆ

 

  • ಈ ಯೋಜನೆಯ ಮುಖ್ಯ ಉದ್ದೇಶವೆಂದರೆ ಕಡಿಮೆ ವಿದ್ಯುತ್ ತಂತ್ರಜ್ಞಾನ ಪರಿಹಾರವನ್ನು ಎಲ್ಲ ಅಂಚೆ ಕಚೇರಿ ಶಾಖೆಗಳಿಗೆ ಒದಗಿಸುವುದು. ಇದು ದೇಶದಲ್ಲಿ ಸುಮಾರು 29 ಲಕ್ಷ ಅಂಚೆ ಕಚೇರಿ ಶಾಖೆಗಳು ಸೇವಾ ವಿತರಣೆಯನ್ನು ಸುಧಾರಿಸಿಕೊಳ್ಳುವಲ್ಲಿ ಮಹತ್ವದ ಪಾತ್ರ ವಹಿಸಲಿದೆ.

 

  • ಇದರ ಮುಖ್ಯ ಉದ್ದೇಶವೆಂದರೆ ಅಂಚೆ ಇಲಾಖೆಯ ಗ್ರಾಮೀಣ ಹರವನ್ನು ವಿಸ್ತರಿಸುವುದು ಹಾಗೂ ಬ್ಯಾಂಕಿಂಗ್ ಕಾರ್ಯಾಚರಣೆಗೆ ಪೂರಕವಾಗಿ ಕೆಲಸ ನಿರ್ವಹಿಸುವುದು. ಇದು ಎಲ್ಲ ಹಣಕಾಸು ಸ್ವೀಕೃತಿ, ಉಳಿತಾಯ ಖಾತೆ, ಗ್ರಾಮೀಣ ಅಂಚೆ ಜೀವ ವಿಮಾ ಸೇವೆ ಮತ್ತು ಕ್ಯಾಶ್ ಸರ್ಟಿಫಿಕೇಟ್ ಸೇವೆಗಳನ್ನು ಗ್ರಾಮೀಣ ಜನರಿಗೆ ಒದಗಿಸುವಲ್ಲಿ ಇದು ಮಹತ್ವದ ಪಾತ್ರ ವಹಿಸಲಿದೆ. ಇದು ಅಂಚೆ ಕಾರ್ಯಾಚರಣೆ ಪ್ರಕ್ರಿಯೆಯನ್ನು ಸುಧಾರಿಸುವಲ್ಲಿ ಕೂಡಾ ನೆರವಾಗಲಿದ್ದು, ವಿಶ್ವಾಸಾರ್ಹ ಅಂಶಗಳ ಸ್ವಯಂಚಾಲಿತ ಬುಕ್ಕಿಂಗ್ ಮತ್ತು ವಿತರಣೆಗೆ ಕೂಡ ಇದು ನೆರವಾಗುತ್ತದೆ.

 

  • ಚಿಲ್ಲರೆ ಅಂಚೆ ವಹಿವಾಟನ್ನು ಹೆಚ್ಚಿಸುವ ಮೂಲಕ ಆದಾಯ ಹೆಚ್ಚಳಕ್ಕೂ ಇದು ಸಹಕಾರಿಯಾಗಲಿದ್ದು, ಇದು ಎಂನರೇಗಾದಂಥ ಸಾಮಾಜಿಕ ಭದ್ರತಾ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಮತ್ತು ಮೂರನೇ ಪಕ್ಷದ ಅನ್ವಯಿಕೆಯ ನಿಟ್ಟಿನಲ್ಲಿ ಕೂಡಾ ನೆರವಾಗಲಿದೆ. ಈ ಯೋಜನೆಗೆ 1400 ಕೋಟಿ ರೂಪಾಯಿ ಅನುದಾನ ನಿಗದಿಪಡಿಸಿದ್ದು, 2018ರ ಮಾರ್ಚ್ ವೇಳೆಗೆ ಇದು ಪೂರ್ಣಗೊಳ್ಳುವ ನಿರೀಕ್ಷೆ ಇದೆ.

 

ಇದರ ಮಹತ್ವ

 

  • ಅಂಚೆ ಇಲಾಖೆಯು ತುದಿಯಿಂದ ತುದಿಗೆಎ ಮಾಹಿತಿ ತಂತ್ರಜ್ಞಾನ ಆಧುನೀಕರಣ ಯೋಜನೆಯನ್ನು ಕೂಡಾ ಕೈಗೆತ್ತಿಕೊಂಡಿದ್ದು, ಇದಕ್ಕೆ ಅಗತ್ಯವಾದ ಆಧುನಿಕ ಸಾಧನಗಳು ಮತ್ತು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ನಿರ್ಧರಿಸಿದೆ. ಈ ಆಧುನೀಕರಣ ಯೋಜನೆ ಮುಖ್ಯ ಉದ್ದೇಶವೆಂದರೆ, ಹೆಚ್ಚಿನ ಗ್ರಾಹಕ ಸಂವಾದ ಮಾರ್ಗಗಳ ಮೂಲಕ ದೇಶದ ಜನರನ್ನು ವಿಸ್ತøತವಾಗಿ ತಲುಪುವ ಜತೆಗೆ ಗ್ರಾಹಕ ಸೇವೆಯನ್ನು ಸುಧಾರಿಸುವಲ್ಲಿ ಕೂಡಾ ಇದು ನೆರವಾಗಲಿದೆ.

 

  • ಇದರ ಅಂಗವಾಗಿ ಅಂಚೆ ಇಲಾಖೆಯ ತನ್ನ ಕಾರ್ಯಕ್ಷೇತ್ರವನ್ನು ಆಧುನೀಕರಿಸುವ ವಿಶ್ವಾಸ ಹೊಂದಿದ್ದು, ಈ ಗುರಿಗಳನ್ನು ಸಾಧಿಸುವ ನಿಟ್ಟಿನಲ್ಲಿ ಇದು ನೆರವಾಗಲಿದೆ. ಇದುವರೆಗೆ ಅಂಚೆ ಇಲಾಖೆಯು 991 ಎಟಿಎಂಗಳನ್ನು ದೇಶಾದ್ಯಂತ ಸ್ಥಾಪಿಸಿದೆ. ಇವುಗಳು ಪರಸ್ಪರ ಸಂಬಂಧದಿಂದ ಕಾರ್ಯನಿರ್ವಹಿಸಲು ಸಮರ್ಥವಾಗಿದ್ದು, ಇತರ ಬ್ಯಾಂಕ್‍ಗಳು ಹಾಗೂ ಜನಸಾಮಾನ್ಯರು ಇದರ ವಿಸ್ತøತವಾದ ಜಾಲದಿಂದ ಅದರಲ್ಲೂ ಮುಖ್ಯವಾಗಿ ಗ್ರಾಮೀಣ ಪ್ರದೇಶಗಳ ಜನರು ಪ್ರಯೋಜನ ಪಡೆಯಲಿದ್ದಾರೆ.

 

5.ಕಾಳಧನಿಕರ ಬೇಟೆಗೆ ಭಾರತ-ಸ್ವಿಸ್​ ಒಪ್ಪಂದ: ಹೊಸ ವರ್ಷದಿಂದಲೇ ಮಾಹಿತಿ ವಿನಿಮಯ

 

ಪ್ರಮುಖ ಸುದ್ದಿ

 

  • ಕಪ್ಪು ಹಣದ ವಿರುದ್ಧದ ಪ್ರಧಾನಿ ನರೇಂದ್ರ ಮೋದಿ ಅವರ ಹೋರಾಟಕ್ಕೆ ಫಲ ದೊರೆತಿದ್ದು, ಕಾಳಧನಿಕರ ಮಾಹಿತಿ ವಿನಿಮಯ ಸಂಬಂಧ ಭಾರತ ಮತ್ತು ಸ್ವಿಜರ್​ಲೆಂಡ್​ ಒಪ್ಪಂದಕ್ಕೆ ಸಹಿ ಹಾಕಿವೆ.

 

  • ತೆರಿಗೆ ವಂಚಕರ ಸ್ವರ್ಗವೆಂದೇ ಕರೆಸಿಕೊಳ್ಳುವ ಸ್ವಿಜರ್​ಲೆಂಡ್​ನ ಬ್ಯಾಂಕುಗಳಲ್ಲಿ ಕಾಳಧನಿಕರು ಇಟ್ಟಿರುವ ಹಣದ ಮಾಹಿತಿಯನ್ನು ಭಾರತಕ್ಕೆ ಹಸ್ತಾಂತರಿಸಲು ಸ್ವಿಜರ್​ಲೆಂಡ್​ ಒಪ್ಪಿಗೆ ಸೂಚಿಸಿದೆ.
  • ಈ ಒಪ್ಪಂದದನ್ವಯ ಸ್ವಿಜರ್​ಲೆಂಡ್​ ಕಾಳಧನಿಕರ ಮಾಹಿತಿಯನ್ನು 2018ರ ಜನವರಿ 1 ರಿಂದ ಭಾರತದೊಂದಿಗೆ ವಿನಿಮಯ ಮಾಡಿಕೊಳ್ಳಲಿದೆ. ಸ್ವಿಜರ್​ಲೆಂಡ್​ ನೀಡುವ ಮಾಹಿತಿಯ ಗೋಪ್ಯತೆಯನ್ನು ಕಾಯ್ದುಕೊಳ್ಳಲು ಭಾರತ ಸರ್ಕಾರ ಬದ್ಧವಿದೆ. ಈ ಮೊದಲು ಉಭಯ ಸರ್ಕಾರಗಳು ಮಾಡಿಕೊಂಡಿದ್ದ ಒಪ್ಪಂದದಂತೆ ಕಾಳಧನಿಕರ ಮಾಹಿತಿ ವಿನಿಮಯ 2019ರಲ್ಲಿ ಪ್ರಾರಂಭವಾಗಬೇಕಿತ್ತು. ಹೊಸ ಒಪ್ಪಂದದಂತೆ ಒಂದು ವರ್ಷ ಮೊದಲೇ ಮಾಹಿತಿ ವಿನಿಮಯ ಪ್ರಾರಂಭವಾಗಲಿದೆ.

 

ಇದರ ಮಹತ್ವ

 

  • ಭಾರತದಲ್ಲಿ ತೆರಿಗೆ ವಂಚಿಸಿ, ಸ್ವಿಜರ್‌ಲೆಂಡ್ ಬ್ಯಾಂಕ್‌ಗಳಲ್ಲಿ ಬೃಹತ್ ಪ್ರಮಾಣದಲ್ಲಿ ಶಂಕಿತ ಕಪ್ಪು ಹಣ ಇಟ್ಟಿರುವ ಭಾರತೀಯರ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಈ ಬಗೆಗಿನ ಸಮಗ್ರ ಮಾಹಿತಿಯನ್ನು ಭಾರತ ಸರಕಾರದ ಜತೆ ವಿನಿಮಯ ಮಾಡಿಕೊಳ್ಳಲಾಗುವುದು ಎಂದು ಅದು ತಿಳಿಸಿದೆ.
  • ಕಪ್ಪು ಹಣವನ್ನು ಮರಳಿ ದೇಶಕ್ಕೆ ತರಬೇಕೆಂಬ ಭಾರತದ ನಿರಂತರ ಪ್ರಯತ್ನಗಳಿಗೆ ಇದರಿಂದ ತುಸು ಬೆಂಬಲ ಸಿಕ್ಕಂತಾಗಿದೆ.

 

  • ಭಾರತ, ಸ್ವಿಸ್ ನಡುವಿನ ದ್ವಿಪಕ್ಷೀಯ ಮಾಹಿತಿ ವಿನಿಮಯ ಒಪ್ಪಂದದ ಪ್ರಕಾರ, ಕಪ್ಪು ಹಣ ಕುರಿತು ಮಾಹಿತಿ ವಿನಿಮಯ ಮಾಡಿಕೊಳ್ಳದಿದ್ದರೆ ಈ ವಿಷಯವನ್ನು ಜಿ-8 ರಾಷ್ಟ್ರಗಳ ಶೃಂಗಸಭೆಯ ವೇದಿಕೆಯಲ್ಲಿ ಪ್ರಸ್ತಾಪಿಸುವುದಾಗಿ ಎಚ್ಚರಿಸಿದ್ದರು.

 

  • ಈ ಎಚ್ಚರಿಕೆಯ ಪತ್ರಕ್ಕೆ ಸ್ವಿಜರ್‌ಲೆಂಡ್ ಇದೀಗ ಸ್ಪಂದಿಸಿದೆ. ಸ್ವಿಸ್ ಬ್ಯಾಂಕ್‌ಗಳಲ್ಲಿ ಶಂಕಿತ ಕಪ್ಪು ಹಣ ಹೊಂದಿರುವ ವ್ಯಕ್ತಿಗಳು ಮತ್ತು ಸಂಘ ಸಂಸ್ಥೆಗಳ ಹೆಸರುಗಳು ಸ್ವಿಜರ್‌ಲೆಂಡ್ ಸರಕಾರದ ಪರಿಶೀಲನೆಗೆ ಒಳಪಟ್ಟಿವೆ. ರೆ.

 

  • ಭಾರತೀಯ ಮೂಲದ ವ್ಯಕ್ತಿಗಳು ಮತ್ತು ಸಂಘ ಸಂಸ್ಥೆಗಳು ಭಾರತ ಹೊರತುಪಡಿಸಿ ಇತರೆ ರಾಷ್ಟ್ರಗಳ ಟ್ರಸ್ಟ್‌ಗಳು, ಕಂಪನಿಗಳು ಮತ್ತು ಇತರೆ ಕಾನೂನುಬದ್ಧ ಸಂಸ್ಥೆಗಳ ಮೂಲಕ ಕಪ್ಪು ಹಣವನ್ನು ಸ್ವಿಸ್ ಬ್ಯಾಂಕ್‌ಗಳಲ್ಲಿ ಇಟ್ಟಿರುವ ಕುರಿತು ಸಂಶಯಗಳಿವೆ

 

  • ಆದರೆ, ಅವರು ವ್ಯಕ್ತಿ ಮತ್ತು ಸಂಘ ಸಂಸ್ಥೆಗಳ ಹೆಸರು, ಕಪ್ಪು ಹಣದ ಪ್ರಮಾಣ ಕುರಿತು ವಿವರ ನೀಡಲು ನಿರಾಕರಿಸಿದ್ದಾರೆ. ಭಾರತ, ಸ್ವಿಸ್ ನಡುವಿನ ದ್ವಿಪಕ್ಷೀಯ ಮಾಹಿತಿ ವಿನಿಮಯ ಒಪ್ಪಂದದಂತೆ ಗೌಪ್ಯತೆ ಕಾಪಾಡಬೇಕಿರುವುದರಿಂದ ಈಗಲೇ ಎಲ್ಲಾ ಮಾಹಿತಿಯನ್ನು ಪ್ರಕಟಿಸುವುದು ತಪ್ಪಾಗುತ್ತದೆ.

 

  • ಸ್ವಿಸ್ ಬ್ಯಾಂಕ್‌ಗಳಲ್ಲಿ ಭಾರತದ ಹಣ ಎಷ್ಟಿದೆ ಎಂಬ ಪ್ರಶ್ನೆಗೆ ಅವರು, ಭಾರತೀಯರು ಎಂದು ಘೋಷಿಸಿಕೊಂಡಿರುವ ಗ್ರಾಹಕರು ಹೊಂದಿರುವ ಹಣದ ಮೊತ್ತ 14 ಸಾವಿರ ಕೋಟಿ ರೂ.(03 ಫ್ರಾಂಕ್)ನಷ್ಟಿದೆ. ಹಾಗಾಗಿ, ಆ ಹಣ ಅಕ್ರಮ ಸಂಪತ್ತಾಗುವ ಸಾಧ್ಯತೆಗಳಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ.

 

  • ಭಾರತ ಸರಕಾರದ ಜತೆ ಶಂಕಿತ ಕಪ್ಪು ಹಣದ ಮಾಹಿತಿಯನ್ನು ಸಹಜ ಆಧಾರದಲ್ಲಿ ವಿನಿಮಯ ಮಾಡಿಕೊಳ್ಳಲಾಗುವುದು. ಆದರೆ ಭಾರತ ಸರಕಾರ ಈ ಮೊದಲು ಮಾಡಿಕೊಂಡ ಆಧಾರದಲ್ಲಲ್ಲ. ಅಂದರೆ, ಎಚ್‌ಎಸ್‌ಬಿಸಿ ಸೇರಿದಂತೆ ಕೆಲವು ನಿರ್ದಿಷ್ಟ ಬ್ಯಾಂಕ್‌ಗಳು ಸೋರಿಕೆ ಮಾಡಿದ ಪಟ್ಟಿಯ ಆಧಾರದಲ್ಲಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

 

  • ಬ್ಯಾಂಕ್ ಅಧಿಕಾರಿಯೊಬ್ಬರು ಕಳವು ಮಾಡಿದ್ದ ‘ಎಚ್‌ಎಸ್‌ಬಿಸಿ ಪಟ್ಟಿ’ಯಲ್ಲಿ ಸೇರ್ಪಡೆಯಾಗಿದ್ದ ಭಾರತೀಯರ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಳ್ಳಲು ಸ್ವಿಸ್ ಸರಕಾರ ನಿರಾಕರಿಸುತ್ತಾ ಬಂದಿತ್ತು.

 

  • ಕಳವು ಮಾಡಿದ ಅಥವಾ ಅಕ್ರಮವಾಗಿ ಪಡೆದ ಭಾರತೀಯರ ಪಟ್ಟಿ ಕುರಿತು ಮಾಹಿತಿ ವಿನಿಮಯ ಮಾಡಿಕೊಳ್ಳಲು ಅಥವಾ ಆಡಳಿತಾತ್ಮಕ ನೆರವು ಒದಗಿಸಲು ಸ್ಥಳೀಯ ಕಾನೂನಿನಲ್ಲಿ ಅವಕಾಶಗಳಿಲ್ಲ ಎಂದು ಸ್ವಿಸ್, ಭಾರತಕ್ಕೆ ತಿಳಿಸಿತ್ತು.

 

  • ವಾಸ್ತವವೆಂದರೆ, ತೆರಿಗೆ ವಿಚಾರಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದ ಆಡಳಿತಾತ್ಮಕ ನೆರವು ಒದಗಿಸುವ ಕುರಿತು ಸ್ವಿಸ್ ಸರಕಾರವು ಭಾರತ ಸೇರಿದಂತೆ 36 ರಾಷ್ಟ್ರಗಳ ಜತೆ ಒಪ್ಪಂದ ಮಾಡಿಕೊಂಡಿದೆ. ಜತೆಗೆ, ಇತ್ತೀಚೆಗೆ ಹೊಸ ಮಾರ್ಗಸೂಚಿಗಳನ್ನು ಅಳವಡಿಸಿಕೊಂಡಿದೆ.

 

6.ರಖೀನ್ ಅಭಿವೃದ್ಧಿಗೆ ಭಾರತದ ನೆರವು

 ಪ್ರಮುಖ ಸುದ್ದಿ

 

  • ಮ್ಯಾನ್ಮಾರ್ ನ ರಖೀನ್ ಪ್ರಾಂತ್ಯದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗಾಗಿ ಭಾರತ ಮತ್ತು ಮ್ಯಾನ್ಮಾರ್ ಒಪ್ಪಂದವೊಂದಕ್ಕೆ ಸಹಿ ಹಾಕಿವೆ. ಇದೇ ಪ್ರಾಂತ್ಯದಿಂದ ಸಾವಿರಾರು ರೋಹಿಂಗ್ಯಾಗಳು ಸನಿಹದ ಬಾಂಗ್ಲಾದೇಶಕ್ಕೆ ವಲಸೆ ಹೋಗಿದ್ದರು ಎಂಬುದು ಗಮನಾರ್ಹ.
  • ಭಾರತ ಮತ್ತು ಮ್ಯಾನ್ಮಾರ್ ಈ ವಿಷಯದಕ್ಕೆ ಸಂಬಂಧಿಸಿದಂತೆ ತುರ್ತು ಕ್ರಮಗಳ ಅಗತ್ಯತೆ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದು, ಬೇರೆ ದೇಶಗಳು ಕೂಡ ಈ ಕಾರ್ಯಕ್ಕೆ ಸಹಕಾರ ನೀಡಬೇಕು ಎಂಬ ಸಂದೇಶ ರವಾನಿಸಿವೆ.

 

ಮುಖ್ಯ ಅಂಶಗಳು

  • ಈ ಒಪ್ಪಂದಕ್ಕೆ ಭಾರತದ ಪರವಾಗಿ ವಿದೇಶಾಂಗ ಕಾರ್ಯದರ್ಶಿ ಡಾ.ಎಸ್. ಜೈಶಂಕರ್ ಸಹಿ ಹಾಕಿದ್ದರೆ, ಮ್ಯಾನ್ಮಾರ್ ಕಡೆಯಿಂದ ಅಲ್ಲಿನ ಸಮಾಜ ಕಲ್ಯಾಣ ಇಲಾಖೆ ಸಹ ಸಚಿವ ಯು ಸೋ ಆಂಗ್ ಅವರು ಸಹಿ ಹಾಕಿದ್ದಾರೆ. ರೋಹಿಂಗ್ಯಾ ವಲಸೆಗಾರರಿಗೆ ರಖೀನ್ ನಲ್ಲಿ ವಾಸ್ತವ್ಯಕ್ಕಾಗಿ ಕಟ್ಟಡಗಳನ್ನು ನಿರ್ಮಾಣ ಮಾಡುವುದಾಗಿ ಭಾರತ ಒಪ್ಪಿಕೊಂಡಿದೆ.
  • ಬಾಂಗ್ಲಾದೇಶದ ಕಾಕ್ಸ್ ಬಜಾರ್ ಪ್ರದೇಶದಿಂದ ರೋಹಿಂಗ್ಯಾಗಳನ್ನು ಮ್ಯಾನ್ಮಾರ್ ಗೆ ವಾಪಸ್ ಕರೆ ತರುವ ಸಂಬಂಧ ಜಂಟಿ ಕಾರ್ಯಪಡೆ ಕುರಿತ ನಿಯಮಗಳನ್ನು ಅಂತಿಮಗೊಳಿಸುತ್ತಿದ್ದ ಸಮಯದಲ್ಲೇ ಭಾರತ ಮತ್ತು ಮ್ಯಾನ್ಮಾರ್ ನಡುವೆ ಒಪ್ಪಂದ ಏರ್ಪಟ್ಟಿದೆ. ಸುಮಾರು 600000 ರೋಹಿಂಗ್ಯಾಗಳು ಆಗಸ್ಟ್ ತಿಂಗಳಿಂದ ಇಲ್ಲಿಯವರೆಗೆ ಬಾಂಗ್ಲಾದೇಶಕ್ಕೆ ವಲಸೆ ಹೋಗಿದ್ದಾರೆ.
  • ಪ್ರಧಾನಿ ನರೇಂದ್ರ ಮೋದಿಯವರು ಕಳೆದ ಸೆಪ್ಟೆಂಬರ್ ನಲ್ಲಿ ಮ್ಯಾನ್ಮಾರ್ ಗೆ ಭೇಟಿ ನೀಡಿದ್ದ ವೇಳೆ ಎರಡೂ ದೇಶಗಳು ಈ ಒಪ್ಪಂದ ಮಾಡಿಕೊಳ್ಳುವ ಬಗ್ಗೆ ನಿರ್ಧಾರ ಮಾಡಿದ್ದವು. ಆ ಸಮಯದಲ್ಲಿ ರಾಖೈನ್ ಪ್ರಾಂತ್ಯದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗಾಗಿ ಅವರು ಹಣಕಾಸಿನ ನೆರವನ್ನು ಕೂಡ ನೀಡಿದ್ದರು.
  • ಈ ಒಪ್ಪಂದದ ಬಗ್ಗೆ ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ನೀಡಿರುವ ಹೇಳಿಕೆ ಪ್ರಕಾರ, “ಮ್ಯಾನ್ಮಾರ್ ಸರಕಾರವು ರಖೀನ್ ಪ್ರಾಂತ್ಯದಲ್ಲಿ ಸಹಜ ಸ್ಥಿತಿಯನ್ನು ಮರು ಸ್ಥಾಪಿಸುವ ಉದ್ದೇಶಕ್ಕಾಗಿ ಮತ್ತು ವಲಸೆ ಹೋದ ಜನರ ಹಿಂದಿರುಗುವಿಕೆಗೆ ಸಹಾಯ ಮಾಡಲು ಭಾರತ ಮುಂದಾಗಿದೆ”. ಮ್ಯಾನ್ಮಾರ್ ನಲ್ಲಿ ರಖೀನ್ ಆರ್ಥಿಕವಾಗಿ ಅತ್ಯಂತ ಬಡ ಪ್ರಾಂತ್ಯವಾಗಿದ್ದು, ಸಾಮಾಜಿಕ-ಆರ್ಥಿಕವಾಗಿ ಹಿಂದುಳಿದಿದೆ. ಅಭಿವೃದ್ಧಿ ಮತ್ತು ಜೀವನೋಪಾಯದ ಉಪಕ್ರಮಗಳ ಮೇಲೆ ಗಮನಹರಿಸುವ ಅಗತ್ಯದ ಬಗ್ಗೆ ಈ ಒಪ್ಪಂದದಲ್ಲಿ ದಾಖಲಿಸಲಾಗಿದೆ.
  • ರೋಹಿಂಗ್ಯಾ ಸಮಸ್ಯೆಗೆ ಪರಿಹಾರ ಕಂಡು ಹುಡುಕುವುದು ಭಾರತದ ಆದ್ಯತೆಯಾಗಿದೆ. ಇದನ್ನು ಮೋದಿ ತಮ್ಮ ಮ್ಯಾನ್ಮಾರ್ ಭೇಟಿ ವೇಳೆಯಲ್ಲೂ ಪ್ರಕಟಿಸಿದ್ದರು. ದಕ್ಷಿಣ ಏಷ್ಯಾದಲ್ಲಿನ ಭದ್ರತೆ ಕೂಡ ಕಾಳಜಿಯ ವಿಷಯವಾಗಿದ್ದರೂ, ಈ ಸಮಸ್ಯೆಯನ್ನು ಕೇವಲ ಭದ್ರತೆಯ ದೃಷ್ಟಿಯಿಂದ ನೋಡಬಾರದು ಎಂಬ ನಿಲುವನ್ನು ಭಾರತ ಮುಂದಿಡುತ್ತಲೇ ಇದೆ.
  • ಅಭಿವೃದ್ಧಿ ಮತ್ತು ಮಾನವೀಯತೆಯ ಆಯಾಮದಿಂದಲೂ ಈ ಸಮಸ್ಯೆಯನ್ನು ಕಾಣಬೇಕಿದೆ. ಭಾರತದ ಪ್ರಧಾನಿ ಭೇಟಿ ವೇಳೆ ಎರಡೂ ದೇಶಗಳು ಸೇರಿ ಬಿಡುಗಡೆ ಮಾಡಿದ್ದ ಜಂಟಿ ಹೇಳಿಕೆಯಲ್ಲೂ ಕೂಡ ರಖೀನ್ ಪ್ರಾಂತ್ಯದಲ್ಲಿ ಸಾಮಾಜಿಕ ಆರ್ಥಿಕ ಅಭಿವೃದ್ಧಿಗೆ ಕೈಗೊಳ್ಳಲಾಗುವ ಕ್ರಮಗಳ ಬಗ್ಗೆ ವಿವರಣೆ ನೀಡಲಾಗಿತ್ತು.
  • ಶಿಕ್ಷಣ, ಆರೋಗ್ಯ, ಕೃಷಿ ಸೇರಿದಂತೆ ಕೃಷಿ ಸಂಸ್ಕರಣೆ, ಸಾಮುದಾಯಿಕ ಅಭಿವೃದ್ಧಿ, ಆಣೆಕಟ್ಟುಗಳ ನಿರ್ಮಾಣ, ರಸ್ತೆ ಮೇಲ್ದರ್ಜೆ, ಸಣ್ಣ ವಿದ್ಯುತ್ ಯೋಜನೆಗಳು, ತರಬೇತಿ ಕೇಂದ್ರಗಳ ನಿರ್ಮಾಣ, ಗುಡಿ ಕೈಗಾರಿಕೆಗಳಿಗೆ ಉತ್ತೇಜನ, ಪರಿಸರ ಸಂರಕ್ಷಣೆಯಂತಹ ಯೋಜನೆಗಳನ್ನು ಜಾರಿ ಮಾಡಲು ಚಿಂತನೆ ನಡೆಸಲಾಗಿದೆ.
  • ರಖೀನ್ ನಲ್ಲಿ ಸಾಮಾಜಿಕ ಆರ್ಥಿಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ರೋಹಿಂಗ್ಯಾಗಳಲ್ಲಿರುವ ಶೋಷಿತ ಮತ್ತು ಅನಾಥ ಮನಸ್ಥಿತಿಯನ್ನು ತೊಡೆದು ಹಾಕಬಹುದು ಎಂದು ಭಾರತ ನಂಬಿದೆ.
  • ಹಿಂದೆ ಭಾರತ ದೇಶವು ಮ್ಯಾನ್ಮಾರ್ ಗೆ ಒಂದು ಮಿಲಿಯನ್ ಡಾಲರ್ ನೆರವನ್ನು ನೀಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಕಲದನ್ ನದಿಯಲ್ಲಿ ಭಾರತ ಕೈಗೊಂಡಿರುವ ಸಂಪರ್ಕ ಯೋಜನೆ ಗಮನಸೆಳೆದಿದೆ. ಇದು ರಖೀನ್ ನಿಂದಲೇ ಪ್ರಾರಂಭಗೊಳ್ಳುತ್ತದೆ. ರಖೀನ್ ನಲ್ಲಿರುವ ಸಮಸ್ಯೆಗಳು ಈ ಆಗಸ್ಟ್ ನಲ್ಲಿ ಕೋಫಿ ಅನ್ನಾನ್ ಸಮಿತಿ ಸಲ್ಲಿಸಿದ್ದ ವರದಿಯಲ್ಲಿರುವ ಅಂಶಗಳನ್ನೇ ಪ್ರತಿಫಲಿಸುತ್ತವೆ.
  • ಈ ಒಪ್ಪಂದ ಬಾಂಗ್ಲಾದೇಶ ಮತ್ತು ವಿಶ್ವದ ಇತರೆ ರಾಷ್ಟ್ರಗಳಿಗೆ ಸ್ಪಷ್ಟ ಸಂದೇಶ ರವಾನಿಸುತ್ತಿದೆ. ರಖೀನ್ ನಲ್ಲಿ ರೋಹಿಂಗ್ಯಾ ಪರಿಸ್ಥಿತಿಯನ್ನು ಕಂಡು ವಿಶ್ವದ ಇತರೆ ರಾಷ್ಟ್ರಗಳು ಟೀಕೆ ಮಾಡುತ್ತಿದ್ದರೂ, ಭಾರತ ಮಾತ್ರ ಸುಮ್ಮನಿತ್ತು. ಮ್ಯಾನ್ಮಾರ್ ಮೇಲೆ ನಿರ್ಬಂಧ ಹೇರುವ ಕ್ರಮದ ವಿರುದ್ಧ ಭಾರತ ವಾದಿಸಿತು. ಇದರಿಂದ ಸಾಮಾನ್ಯ ಜನರಿಗಷ್ಟೇ ತೊಂದರೆ ಎಂಬುದು ಭಾರತದ ನಿಲುವಾಗಿತ್ತು. ರಖೀನ್ ನಲ್ಲಿ ಸಾಮಾಜಿಕ ಆರ್ಥಿಕ ಅಭಿವೃದ್ಧಿಗಾಗಿ ಭಾರತ ಮ್ಯಾನ್ಮಾರ್ ಜತೆ ಸೇರಿ ಹಲವು ಯೋಜನೆಗಳಿಗೆ ಒಪ್ಪಿಕೊಂಡಿರುವುದು ಸ್ವಾಗತಾರ್ಹ ಕ್ರಮ.
  • ಟೀಕೆಗಳ ಸರಮಾಲೆಯಿಂದಾಗಿ ಮ್ಯಾನ್ಮಾರ್ ಚೀನಾ ಕಡೆ ಮತ್ತಷ್ಟು ವಾಲುವ ಸಾಧ್ಯತೆಯಿತ್ತು. ವಿಶ್ವಸಂಸ್ಥೆ ಭದ್ರತಾ ಸಮಿತಿ ಮತ್ತು ವಿಶ್ವಸಂಸ್ಥೆ ಮಾನವ ಹಕ್ಕುಗಳ ಸಮಿತಿ ಮ್ಯಾನ್ಮಾರ್ ವಿರುದ್ಧ ತೆಗೆದುಕೊಂಡ ನಿರ್ಣಯವನ್ನು ಚೀನಾ ವಿರೋಧೀಸಿತ್ತು. ಇದಕ್ಕೆ ಪ್ರತಿಯಾಗಿ ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶದ ಜತೆ ಸೇರಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದಕ್ಕೆ ಮಧ್ಯಸ್ಥಿಕೆ ವಹಿಸಿಕೊಳ್ಳುವುದಾಗಿ ಕೂಡ ಚೀನಾ ಹೇಳಿತ್ತು.

 

6.ಐಸಿಜಿಎಸ್ ಸುಜಯ್

ಪ್ರಮುಖ ಸುದ್ದಿ

 

  • ಕಡಲ ಕಿನಾರೆಯ ಗಸ್ತು ನೌಕೆ ಐಸಿಜಿಎಸ್ ಸುಜಯ್ ಅನ್ನು ಇತ್ತೀಚೆಗೆ ಭಾರತೀಯ ಕರಾವಳಿ ಕಾವಲು ಪಡೆಗೆ ನಿಯೋಜಿಸಲಾಗಿದೆ. ಇದು 105 ಮೀಟರ್ ಓಪಿವಿ ನಿರ್ಮಿತ ದೇಶೀಯ ಗಸ್ತುನೌಕೆ ಸರಣಿಯ ಆರನೇ ಹಾಗೂ ಕೊನೆಯ ನೌಕೆಯಾಗಿದ್ದು, ಇದನ್ನು ಭಾರತೀಯ ಕರಾವಳಿ ಕಾವಲು ಪಡೆಗಾಗಿ ಗೋವಾ ಶಿಪ್‍ಯಾರ್ಡ್ ನಿರ್ಮಿಸಿಕೊಟ್ಟಿದೆ.

 

  • ಪ್ರಸ್ತುತ ಭಾರತೀಯ ಕರಾವಳಿ ಕಾವಲು ಪಡೆ 135 ಹಡಗುಗಳು ಮತ್ತು ನೌಕೆಗಳನ್ನು ಹೊಂದಿದ್ದು, ಇದಲ್ಲದೇ 66 ಕಾವಲು ನೌಕೆಗಳು ಮತ್ತು ಹಡಗುಗಳು ದೇಶದ ವಿವಿಧ ಶಿಪ್‍ಯಾರ್ಡ್‍ಗಳಲ್ಲಿ ನಿರ್ಮಾಣದ ವಿವಿಧ ಹಂತಗಳಲ್ಲಿವೆ.

 

ಐಸಿಜಿಎಸ್ ಸುಜಯ್ ಗ್ಗೆ

 

  • ಐಸಿಜಿಎಸ್ ಸುಜಯ್ (ಅರ್ಥ ಸರ್ವಶ್ರೇಷ್ಠ ವಿಜಯ) ಒಡಿಶಾದ ಪರದೀಪ್‍ನಲ್ಲಿ ನೆಲೆ ಹೊಂದಿರುತ್ತದೆ. ಇದರ ಕಾರ್ಯಾಚರಣೆ ಮತ್ತು ಆಡಳಿತಾತ್ಮಕ ನಿಯಂತ್ರಣ ಈಶಾನ್ಯ ವಲಯದ ಕಮಾಂಡ್ ಕೋಸ್ಟ್‍ಗಾರ್ಡ್‍ನ ಕೈಯಲ್ಲಿರುತ್ತದೆ. ಇದನ್ನು ವಿಸ್ತøತವಾಗಿ ಇಇಝೆಡ್ ಸರ್ವೇಕ್ಷಣೆ ಮತ್ತು ಇತರ ಕರ್ತವ್ಯಗಳಿಗೆ ಭಾರತೀಯ ಕರಾವಳಿ ಕಾವಲು ಪಡೆಯಲ್ಲಿ ನಿಯೋಜಿಸಲಾಗುತ್ತದೆ. ಇದು ಭಾರತದ ಸಾಗರ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತದೆ.

 

  • ಇದು 105 ಮೀಟರ್ ಓಪಿವಿ ಅಳವಡಿಸಿದ ಅತ್ಯಾಧುನಿಕ ಪಥದರ್ಶಕ ಮತ್ತು ಸಂವಹನ ಸಾಧನವನ್ನು ಹೊಂದಿದ್ದು, ಇದರ ಜತೆಗೆ ಸೆನ್ಸಾರ್‍ಗಳು ಮತ್ತು ಅತ್ಯಧುನಿಕ ಯಂತ್ರೋಪಕರಣಗಳನ್ನು ಅಳವಡಿಸಲಾಗಿದೆ. ಇದರ ಪ್ರಮುಖ ಗುಣಲಕ್ಷಣಗಳಲ್ಲಿ ಸಮಗ್ರ ಬ್ರಿಗೇಡ್ ಸಿಸ್ಟಮ್ (ಐಬಿಎಸ್), ಸಮಗ್ರ ಯಂತ್ರ ನಿಯಂತ್ರಣ ವ್ಯವಸ್ಥೆ (ಐಎಂಸಿಎಸ್), 30 ಎಂಎಮ ಸಿಆರ್‍ಎನ್ ನೌಕಾ ಬಂದೂಕು, ವಿದ್ಯುತ್ ನಿರ್ವಹಣಾ ವ್ಯವಸ್ಥೆ (ಪಿಎಂಎಸ್) ಮತ್ತು ಅಧಿಕ ವಿದ್ಯುತ್ ಬಾಹ್ಯ ಅಗ್ನಿಶಾಮಕ ವ್ಯವಸ್ಥೆಯನ್ನು ಒಳಗೊಂಡಿರುತ್ತದೆ.

 

  • ಇದು ಮಾಲಿನ್ಯ ಸ್ಪಂದನೆ ಸಾಧನವನ್ನೂ ಒಯ್ಯಲಿದ್ದು, ಸಮುದ್ರಕ್ಕೆ ತೈಲ ಸೋರಿಕೆಯನ್ನು ತಡೆಯಲು ಇದು ಸಹಕಾರಿಯಾಗಿದೆ. ಇದು ಅತ್ಯಾಧುನಿಕ ಮತ್ತು ತೀರಾ ಇತ್ತೀಚಿನ ಸಾಧನಗಳು ಮತ್ತು ವ್ಯವಸ್ಥೆಗಳನ್ನು ಹೊಂದಿದ್ದು, ಈ ಹಡಗನ್ನು ಕಮಾಂಡ್ ಪ್ಲಾಟ್‍ಫಾರಂ ಆಗಿ ಐಸಿಜಿಯ ಎಲ್ಲ ಕರ್ತವ್ಯಗಳನ್ನು ನಿರ್ದೇಶಿಸಲು ಬಳಸಬಹುದಾಗಿದೆ.

 

7.ಇಂಟರ್ನೆಟ್ ಬಳಕೆದಾರರಲ್ಲಿ ಭಾರತೀಯ ಮಹಿಳೆಯರ ಪ್ರಮಾಣ ಕಡಿಮೆ-ಯುನಿಸೇಫ್

 

ಪ್ರಮುಖ ಸುದ್ದಿ 

 

  • ಅಂತರ್ಜಾಲ ಬಳಸುವ ಭಾರತೀಯ ಮಹಿಳೆಯರ ಪ್ರಮಾಣ ಪುರುಷರಿಗಿಂತ ಅತಿ ಕಡಿಮೆ ಇದೆ ಎಂಬ ಸಂಶೋಧನಾ ವರದಿಯನ್ನು ಅಂತರಾಷ್ಟ್ರಿಯ ಮಕ್ಕಳ ತುರ್ತು ನಿಧಿ (ಯುನಿಸೆಫ್)ಯ ‘ದಿ ಸ್ಟೇಟ್ ಆಫ್ ದಿ ವರ್ಲ್ಡ್ಸ್ ಚಿಲ್ಡ್ರನ್ 2017: ಚಿಲ್ಡ್ರನ್ ಇನ್ ಎ ಡಿಜಿಟಲ್ ವರ್ಲ್ಡ್’ ಎಂಬ ಶೀರ್ಷಿಕೆಯಡಿ ಹೊರಬಂದ ವರದಿ ಪ್ರಕಟಿಸಿದೆ.
  • ಇದಕ್ಕೆ ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರಣಗಳನ್ನೂ ನೀಡಿದೆ.

 

ವರದಿಯ ಮುಖ್ಯ ಅಂಶಗಳು

 

  • ಅಂತರ್ಜಾಲ ಕ್ರಾಂತಿಯಿಂದ ಜಗತ್ತೇ ಒಂದು ಗ್ರಾಮವಾಗಿ ಪರಿವರ್ತನೆಗೊಂಡಿದೆ. ದೇಶ-ವಿದೇಶಗಳ ನಡುವಿನ ಸಂವಹನ ಕೊಂಡಿಯಾಗಿ ಅಂತರ್ಜಾಲ ಕೆಲಸ ಮಾಡುತ್ತಿದೆ. ಜ್ಞಾನ ಸಂಪಾದನೆ, ಮಾಹಿತಿ ಕ್ರೋಢೀಕರಣ, ಮನರಂಜನೆ, ಉದ್ಯೋಗ, ಶಿಕ್ಷಣ, ವ್ಯಾಪಾರ ಮತ್ತು ವಹಿವಾಟುಗಳಲ್ಲಿ ಅಂತರ್ಜಾಲ ಪ್ರಮುಖ ಪಾತ್ರ ವಹಿಸಿದೆ.
  • ಮಕ್ಕಳು, ವಿದ್ಯಾರ್ಥಿಗಳು, ಗೃಹಿಣಿಯರು ಸೇರಿದಂತೆ ಎಲ್ಲ ವರ್ಗ ಹಾಗೂ ವಯೋಮಿತಿಯ ಜನರಿಗೆ ಅಂತರ್ಜಾಲ ಆಸರೆಯಾಗಿ ನಿಂತಿದೆ. ಅಂತರ್ಜಾಲದ ತ್ವರಿತ ಪ್ರಗತಿಯು ಜನಜೀವನದ ಮೇಲೆ ತೀವ್ರಸ್ವರೂಪದ ಪ್ರಭಾವ ಬೀರಿದ್ದು, ಸಮಾಜ ಹಾಗೂ ಸಮುದಾಯದ ವಿಕಸನಕ್ಕೆ ಹೆಚ್ಚು ಕೊಡುಗೆ ನೀಡಿದೆ.

 

  • ಪ್ರಯಾಣದ ಮಾಹಿತಿ ತಿಳಿಯಲು, ವಿಳಾಸ ಹುಡುಕಲು, ಆನ್‌ಲೈನ್ ಬ್ಯಾಂಕಿಂಗ್‌ ಹಾಗೂ ಶಾಪಿಂಗ್ ಸೇರಿದಂತೆ ವಿವಿಧ ರೀತಿಯ ಕೆಲಸಗಳಿಗಾಗಿ ಪುರುಷರು ಹಾಗೂ ಮಹಿಳೆಯರು ಅಂತರ್ಜಾಲಕ್ಕೆ ಪ್ರತಿದಿನ ಭೇಟಿ ನೀಡುತ್ತಾರೆ. ಜಾಗತಿಕವಾಗಿ ಮಹಿಳೆಯರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಪುರುಷರು ಅಂತರ್ಜಾಲದ ಮೊರೆಹೋಗುತ್ತಾರೆ. ಆದರೆ, ಆರೋಗ್ಯ, ಔಷಧ, ಅಡುಗೆ ಮತ್ತು ಧರ್ಮದಂತಹ ನಿರ್ದಿಷ್ಟ ವಿಷಯಗಳ ಮಾಹಿತಿ ಪಡೆಯಲು ಮಹಿಳೆಯರೇ ಹೆಚ್ಚು ಸಂಖ್ಯೆಯಲ್ಲಿ ಅಂತರ್ಜಾಲದ ಸಹಾಯ ಪಡೆಯುತ್ತಾರೆ.

 

  • ಇಂತಹ ಸನ್ನಿವೇಶದಲ್ಲಿ ಅಂತರ್ಜಾಲ ಬಳಸುವ ಭಾರತೀಯ ಮಹಿಳೆಯರ ಪ್ರಮಾಣ ಪುರುಷರಿಗಿಂತ ಅತೀ ಕಡಿಮೆ ಇದೆ ಎಂಬ ಸಂಶೋಧನಾ ವರದಿಯನ್ನುಅಂಕಿ-ಸಂಖ್ಯೆಗಳ ಮೂಲಕ ಯುನಿಸೆಫ್ ಬಿಡುಗಡೆ ಮಾಡಿದೆ.

 

  • ಯುನಿಸೆಫ್ ಪ್ರಕಾರ, ಭಾರತದ ಒಟ್ಟು ಅಂತರ್ಜಾಲ ಬಳಕೆದಾರರ ಪೈಕಿ 29 ಪ್ರತಿಶತ ಮಹಿಳೆಯರಿದ್ದಾರೆ. ಇದನ್ನು ಜಾಗತಿಕವಾಗಿ ನೋಡುವುದಾದರೆ, ಮಹಿಳಾ ಬಳಕೆದಾರರಿಗಿಂತ ಪುರುಷ ಬಳಕೆದಾರರ ಪ್ರಮಾಣ ಕೇವಲ ಶೇ.12ರಷ್ಟು ಹೆಚ್ಚಿದೆ. ಅದರಲ್ಲೂ, ಮುಂದುವರಿದ ಅಮೆರಿಕದಂತಹ ದೇಶಗಳಲ್ಲಿ ಪುರುಷ ಹಾಗೂ ಮಹಿಳಾ ಬಳಕೆದಾರರ ಪ್ರಮಾಣದ ಅಂತರ ಶೇ.2ರಷ್ಟಿದೆ. ಆದರೆ, ಭಾರತದ ಮಟ್ಟಿಗೆ ಪುರುಷ ಹಾಗೂ ಮಹಿಳಾ ಬಳಕೆದಾರರ ನಡುವಿನ ಅಂತರ 42 ಪ್ರತಿಶತ ಇದ್ದು, ಲಿಂಗ ಅಂತರದಲ್ಲಿ ಡಿಜಿಟಲ್ ಇಂಡಿಯಾ ಇನ್ನೂ ಹಿಂದೆ ಉಳಿದಿದೆ ಎಂಬುದು ವರದಿಯಿಂದ ತಿಳಿದುಬರುತ್ತದೆ.

 

  • ‘ದಿ ಸ್ಟೇಟ್ ಆಫ್ ದಿ ವರ್ಲ್ಡ್ಸ್ ಚಿಲ್ಡ್ರನ್ 2017: ಚಿಲ್ಡ್ರನ್ ಇನ್ ಎ ಡಿಜಿಟಲ್ ವರ್ಲ್ಡ್’ ಎಂಬ ಶೀರ್ಷಿಕೆಯಡಿ ಹೊರಬಂದ ವರದಿ ಪ್ರಕಾರ, ಈ ದೊಡ್ಡ ಪ್ರಮಾಣದ ಲಿಂಗ ಅಂತರವು ದೇಶದ ಸಾಂಸ್ಕೃತಿಕ ಹಾಗೂ ಸಾಮಾಜಿಕ ಅಡೆತಡೆಗಳ ಪರಿಣಾಮವಾಗಿದ್ದು, ಬಹುಪಾಲು ಅಂತರ ಗ್ರಾಮೀಣ ಭಾಗದಲ್ಲಿ ಕಂಡುಬರುತ್ತಿದೆ ಎಂದು ದಾಖಲಿಸಲಾಗಿದೆ. ರಾಜಸ್ಥಾನದ
  • ಗ್ರಾಮವೊಂದರಲ್ಲಿ ಮದುವೆಯಾಗದ ಹುಡುಗಿಯರು ಮೊಬೈಲ್ ಫೋನ್ ಬಳಸಬಾರದೆಂದು ಸ್ಥಳೀಯ ಆಡಳಿತ ಹೊರಡಿಸಿರುವ ಪರ್ಮಾನು ಬಗ್ಗೆಯೂ ಯುನಿಸೆಫ್ ಉಲ್ಲೇಖಿಸಿದೆ.

 

  • ಹಿಂದುಳಿದ ಹಾಗೂ ಸಂಪರ್ಕ ಕೊರತೆ ಹೊಂದಿರುವ ಭಾರತದ ಹಳ್ಳಿಗಳಲ್ಲಿ ಅಂತರ್ಜಾಲ ಸೌಲಭ್ಯ ಒದಗಿಸುವುದು ಸವಾಲಿನ ಕೆಲಸ. ಇದಲ್ಲದೆ, ಕುಗ್ರಾಮಗಳಲ್ಲಿ ವಾಸಿಸುವ ಬಹುತೇಕ ಸಮುದಾಯಗಳ ಆದಾಯ ಬಡತನ ರೇಖೆಗಿಂತ ಕಡಿಮೆ. ಇದರಿಂದಾಗಿ ಅಂತರ್ಜಾಲ ಸಂಪರ್ಕ ಸೌಲಭ್ಯವಿರುವ ಸ್ಮಾರ್ಟ್‌ಪೋನ್ ಹೊಂದಲು ಜನರಿಗೆ ಕಷ್ಟವಾಗುತ್ತದೆ. ಹಳ್ಳಿಗಳಲ್ಲಿ ವಾಸಿಸುವ ಮಹಿಳೆಯರಿಗೆ ಸ್ಮಾರ್ಟ್‌ಫೋನ್ ವೆಚ್ಚ ಭರಿಸಲು ಸಾಧ್ಯವಾಗದಿರುವುದು ಅಂತರ್ಜಾಲದಲ್ಲಿ ಮಹಿಳೆಯರ ಪ್ರಮಾಣ ಇಳಿಕೆಗೆ ಕಾರಣವೆಂದು ಯುನಿಸೆಫ್ ತಿಳಿಸಿದೆ.

 

8.ಗಂಗಾ ಗ್ರಾಮ ಯೋಜನೆ

 

ಪ್ರಮುಖ ಸುದ್ದಿ

 

  • ಕೇಂದ್ರ ’ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯವು ಸ್ವಚ್ಛಗಂಗಾ ಮಿಷನ್’ ಅಡಿಯಲ್ಲಿ ಗಂಗಾ ಗ್ರಾಮ  ಯೋಜನೆಯನ್ನು ಜಾರಿಗೆ ಗೊಳಿಸಿದೆ .
  • ಗಂಗಾ ನದಿಯ ತೀರದಲ್ಲಿ ಹಳ್ಳಿಗಳಲ್ಲಿ ಸಮಗ್ರ ನೈರ್ಮಲ್ಯ ಅಭಿವೃದ್ಧಿ ಇದರ ಮುಖ್ಯ ಉದ್ದೇಶವಾಗಿದೆ.

 

ಗಂಗಾ ಗ್ರಾಮ ಯೋಜನೆ ಬಗ್ಗೆ

 

 

  • ಗಂಗಾ ಗ್ರಾಮ ಯೋಜನೆಯ ಗ್ರಾಮಗಳ ನಿವಾಸಿಗಳನ್ನೂ ಪಾಲ್ಗೊಳ್ಳುವಂತೆ ಮಾಡಿ ಈ ಗ್ರಾಮಗಳ ಸಮಗ್ರ ಅಭಿವೃದ್ಧಿಪಡಿಸುವುದು ಯೋಜನೆಯ ಪ್ರಮುಖ ಅಂಶವಾಗಿದೆ. .
  • ಗಂಗಾ ಗ್ರಾಮ ಯೋಜನೆಯ ಉದ್ದೇಶಗಳು ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ, ಕೊಳಗಳು ಮತ್ತು ನೀರಿನ ಸಂಪನ್ಮೂಲಗಳ ನವೀಕರಣ, ನೀರಿನ ಸಂರಕ್ಷಣೆ ಯೋಜನೆಗಳು, ಸಾವಯವ ಕೃಷಿ, ತೋಟಗಾರಿಕೆ ಮತ್ತು ಔಷಧೀಯ ಸಸ್ಯಗಳ ಪ್ರಚಾರವನ್ನು ಒಳಗೊಂಡಿವೆ.

 

ನಮಾಮಿ ಗಂಗೆ ಯೋಜನೆ ಬಗ್ಗೆ

  • ಗಂಗಾ ನದಿಯನ್ನು ಶುದ್ಧೀಕರಿಸುವ ಸಲುವಾಗಿ ಕೇಂದ್ರ ಸರ್ಕಾರ ನವಾಮಿ ಗಂಗೆ ಯೋಜನೆಯನ್ನು ಜಾರಿಗೊಳಿಸಿದೆ.
  • ನದಿ ಶುದ್ಧೀಕರಣಕ್ಕಾಗಿ ಕೊಳಚೆ ನೀರು ಸಂಸ್ಕರಣಾ ಘಟಕ ಸ್ಥಾಪನೆ ಹಾಗೂ ಅನಿಯಂತ್ರಿತ ನೀರಿನ ಹರಿವು ನಿಯಂತ್ರಣ ಸೇರಿದಂತೆ 300 ಯೋಜನೆಗಳು ‘ನಮಾಮಿ ಗಂಗೆ’ಯಲ್ಲಿ ಸೇರಿವೆ. ಯೋಜನೆಯ ಮೊದಲ ಭಾಗವಾಗಿ ಗಂಗಾ ನದಿ ಹರಿಯುವ ಐದು ರಾಜ್ಯಗಳ 104 ಸ್ಥಳಗಳಲ್ಲಿ ಏಕಕಾಲದಲ್ಲಿ ಸ್ಮಶಾನ ಹಾಗೂ ಚಿತಾಗಾರ ನಿರ್ಮಾಣ, ದುರಸ್ತಿ, ಸುಂದರ ನದಿ ತೀರ ನಿರ್ಮಾಣ ಹಾಗೂ ಕೊಳಚೆ ನೀರು ಸಂಸ್ಕರಣ ಘಟಕಗಳ ನಿರ್ಮಾಣ, ದುರಸ್ತಿ ಸೇರಿದಂತೆ ಇತರ ಅಭಿವೃದ್ಧಿ ಕೆಲಸ ಗಳನ್ನು ಆರಂಭಿಸಲಾಗುತ್ತದೆ.
  • ಗಂಗಾ ನದಿ ಹರಿದು ಸಾಗುವ ಐದು ರಾಜ್ಯ(ಉತ್ತರಾಖಂಡ, ಉತ್ತರಪ್ರದೇಶ, ಬಿಹಾರ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳ)ಗಳ ಸರ್ಕಾರಗಳು ಈ ಬೃಹತ್ ಯೋಜನೆಯಲ್ಲಿ ಭಾಗಿಯಾಗುತ್ತಿವೆ.

 

 

9.ಕ್ಷೀಪ್ರ ಸರಿಪಡಿಸುವ ಕ್ರಮ( Prompt correction action -PCA)

 

ಪ್ರಮುಖ ಸುದ್ದಿ

 

 

  • ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ತಮ್ಮ ಹಣಕಾಸಿನ ಆರೋಗ್ಯವನ್ನು ಸುಧಾರಿಸಲು ಬ್ಯಾಂಕುಗಳಿಗೆ ಉತ್ತೇಜನ ನೀಡಬೇಕೆಂದು ಕ್ಷೀಪ್ರ ಸರಿಪಡಿಸುವ ಕ್ರಮವನ್ನು (ಪಿಸಿಎ) ಮತ್ತೊಮ್ಮೆ ಸ್ಪಷ್ಟಪಡಿಸಿದೆ. ಪಿಸಿಎ ಅಡಿಯಲ್ಲಿರುವ ಕೆಲವು ಬ್ಯಾಂಕುಗಳು ಮುಚ್ಚಲ್ಪಡುತ್ತವೆ ಎಂದು ಸಾಮಾಜಿಕ ಮಾಧ್ಯಮದ ವದಂತಿಗಳ ಹಿನ್ನೆಲೆಯಲ್ಲಿ ಈ ರೀತಿ  ಪುನರುಚ್ಚರಿಸಿದೆ.

 

ಕ್ಷೀಪ್ರ ಸರಿಪಡಿಸುವ ಕ್ರಮ ಎಂದರೇನು ?

  • ಪಿಸಿಎ ನಿಯಮ 2002ರಿಂದಲೂ ಜಾರಿಯಲ್ಲಿದೆ.
  • ವಸೂಲಾಗದ ಸಾಲ ಹೆಚ್ಚಿರುವುದರಿಂದ ಹಾಗೂ ಬಂಡವಾಳ ಕಡಿಮೆ ಇರುವ ಕಾರಣ ಈ ಬ್ಯಾಂಕ್‌ಗಳು ಅಸ್ಥಿರವಾಗಿವೆ. ಆದ್ದರಿಂದ ಇವನ್ನು ‘ತಕ್ಷಣ ಸುಧಾರಣಾ ಪ್ರಕ್ರಿಯೆ’ (ಪಿಸಿಎ)ಗೆ ಒಳಪಡಿಸಲಾಗಿದೆ.
  • ಬ್ಯಾಂಕ್‌ಗಳು ಸಕಾಲಿಕವಾಗಿ ತಮ್ಮ ಸಾಧನೆಗಳನ್ನು ಸುಧಾರಿ ಸಬೇಕು ಎಂದು ಸೂಚಿಸಲು ಇವನ್ನು ಪಿಸಿಎ ಅಡಿ ಸೇರಿಸಲಾಗುತ್ತದೆ. ಗಾಯಗೊಂಡ ಕ್ರೀಡಾಪಟುವನ್ನು ವಿಶ್ರಾಂತಿ ಪಡೆಯಲು ಸೂಚಿಸುವುದಕ್ಕೆ ಇದನ್ನು ಹೋಲಿಸಬಹುದು.
  • ಪಿಸಿಎ ಅಡಿ ಸೇರಿಸಲಾದ ಬ್ಯಾಂಕ್‌ಗಳು ತಮ್ಮ ದೈನಂದಿನ ವ್ಯವಹಾರ(ಸಾಲ ನೀಡುವುದೂ ಸೇರಿದಂತೆ)ವನ್ನು ಎಂದಿನಂತೆಯೇ ಮುಂದುವರಿಸಲಿದೆ.

 

 

10.ಜಲ ಫಿರಂಗಿ ಮೂಲಕ ಸ್ಮಾಗ್‌ ನಿವಾರಣೆ ಯತ್ನಕ್ಕೆ ಮುಂದಾದ ದೆಹಲಿ ಸರ್ಕಾರ

 

ಪ್ರಮುಖ ಸುದ್ದಿ

  • ದೆಹಲಿಯನ್ನು ಕಾಡುತ್ತಿರುವ ಹೊಂಜಿನ (ಸ್ಮಾಗ್‌) ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಯತ್ನವಾಗಿ ಅಲ್ಲಿನ ಸರ್ಕಾರ ಹೊಸ ತಂತ್ರಜ್ಞಾನವೊಂದರ ಪ್ರಯೋಗ ನಡೆಸುತ್ತಿದೆ.
  • ಚಳಿಗಾಲದ ಹೊಗೆಯನ್ನು ಎದುರಿಸಲು ಹೊಂಜು ನಿಗ್ರಹ ಫಿರಂಗಿ’ ತಂತ್ರಜ್ಞಾನ ವನ್ನು ರಾಜಧಾನಿಯಲ್ಲಿ ದೆಹಲಿ ಸರ್ಕಾರವು ಪ್ರಯೋಗಿಸಿದೆ

 

ಏನಿದು ಹೊಂಜು ನಿಗ್ರಹ ಫಿರಂಗಿ’(Anti-smog gun) ?

 

  • ವಾತಾವರಣದಲ್ಲಿರುವ ಮಾಲಿನ್ಯಕಾರಕ ಹೊಂಜನ್ನು ಕಡಿಮೆ ಮಾಡುವುದಕ್ಕಾಗಿ ಅದು ‘ಹೊಂಜು ನಿಗ್ರಹ ಫಿರಂಗಿ’ಯ (ಗನ್‌) ಬಳಕೆ ಆರಂಭಿಸಿದೆ. ಈ ಫಿರಂಗಿಯು ಭಾರಿ ಪ್ರಮಾಣದ ನೀರನ್ನು ಆಗದೆತ್ತರಕ್ಕೆ ಚಿಮ್ಮಿಸಿ ದೂಳಿನ ಕಣಗಳು ಭೂಮಿಗೆ ತಗ್ಗುವಂತೆ ಮಾಡುತ್ತದೆ.

 

  • ದೆಹಲಿಯಲ್ಲಿ ಅತ್ಯಂತ ಹೆಚ್ಚು ಮಾಲಿನ್ಯಗೊಂಡಿರುವ ಪ್ರದೇಶದಲ್ಲೊಂದಾದ ನಂದ ವಿಹಾರದಲ್ಲಿ ಈ ಜಲಫಿರಂಗಿಯ ಪ್ರಯೋಗ ನಡೆಸಲಾಗಿದೆ.

 

  • ಇದನ್ನು ಬಳಸುವುದಕ್ಕೂ ಮೊದಲಿನ ಮತ್ತು ನಂತರದ ಮಾಲಿನ್ಯ ಮಟ್ಟವನ್ನು ಪರಸ್ಪರ ಹೋಲಿಕೆ ಮಾಡುವುದರಿಂದ ಈ ತಂತ್ರಜ್ಞಾನದ ಪರಿಣಾಮ ಗೊತ್ತಾಗಲಿದೆ.

 

  • ಕ್ಲೌಡ್‌ ಟೆಕ್‌ ಎಂಬ ಕಂಪೆನಿ ಈ ತಂತ್ರಜ್ಞಾನವನ್ನು ದೆಹಲಿಗೆ ಪರಿಚಯಿಸಿದೆ. ಶೇ 95ರಷ್ಟು ವಾಯುಮಾಲಿನ್ಯ ಕಾರಕಗಳನ್ನು ಇದು ನಿವಾರಿಸಬಲ್ಲುದು ಎಂದು ಕಂಪೆನಿ ಹೇಳಿದೆ.

 

12.ಒಡರ್ರನಾ ಅರುಣಾಚಲೆನಸಿಸ್ (Odorrana arunachalensis)

ಪ್ರಮುಖ ಸುದ್ದಿ

  • ಝೂಲಾಜಿಕಲ್ ಸರ್ವೆ ಆಫ್ ಇಂಡಿಯಾದ ವಿಜ್ಞಾನಿಗಳು ಹೊಸ ಕಪ್ಪೆ ಪ್ರಬೇಧವನ್ನು ಅರುಣಾಚಲ ಪ್ರದೇಶದ ಸುಬಾನ್‍ಸಿರಿ ಜಿಲ್ಲೆಯ ತಲ್ಲೆ ಕಣಿವೆ ವನ್ಯಜೀವಿ ಧಾಮದಲ್ಲಿ ಪತ್ತೆ ಮಾಡಿದ್ದಾರೆ.

 

ಪ್ರಮುಖ ಸಂಗತಿಗಳು

  • ಹೊಸ ಕಪ್ಪೆ ಪ್ರಬೇವನ್ನು ಒಡರ್ರನಾ ಅರುಣಾಚಲೆನಸಿಸ್ ಎಂದು ಹೆಸರಿಸಲಾಗಿದೆ. ಸಾಮನ್ಯವಾಗಿ ಇದನ್ನು ಒಡೊರಸ್ ಕಪ್ಪೆ ಎಂದು ಕರೆಯಲಾಗುತ್ತದೆ. ಒಡೊರ್ರನಾ ಎನ್ನುವುದು ನೈಜ ಕಪ್ಪೆಯ ತಳಿಯಾಗಿದ್ದು, ಇದು ಮೂಲತಃ ಪೂರ್ವ ಏಷ್ಯಾ ಪ್ರದೇಶದ್ದು. ಜತೆಗೆ ಭಾರತದ ಸುತ್ತಮುತ್ತಲ ಪ್ರದೇಶಗಳಲ್ಲೂ ಇದು ಕಂಡುಬರುತ್ತದೆ.
  • ಒಡೊರ್ರೆನಾ ಪ್ರದೇಶದಲ್ಲಿ ಸುಮಾರು 50 ಪ್ರಬೇಧದ ಕಪ್ಪೆಗಳನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ಇದು ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಪತ್ತೆಯಾದ ಐದು ಪ್ರಭೇಧಗಳ ಪೈಕಿಒಂದಾಗಿದ್ದು. ವಿಶ್ವದಲ್ಲಿ ಇದು 59ನೇ ಕಪ್ಪೆ ಪ್ರಭೇಧವಾಗಿದೆ.

 

  • ಒಡರ್ರನಾ ಅರುಣಾಚಲೆನಸಿಸ್ ಎನ್ನುವುದು ಮಧ್ಯಮ ಗಾತ್ರದ ಹಸಿರು ಕಪ್ಪೆಯಾಗಿದ್ದು, ಅರುಣಾಚಲ ಪ್ರದೇಶದ ಕಡಿದಾದ ಕಣಿವೆ ಪ್ರದೇಶದ ನೀರಿನಲ್ಲಿ ಹೆಚ್ಚಾಗಿ ಬೆಳೆಯುತ್ತದೆ. ಇದು ಸಾಮಾನ್ಯವಾಗಿ, ಕಲ್ಲುಬಂಡೆಗಳಿಂದ ಕೂಡಿದ ಸ್ಥಳದಲ್ಲಿ ವಾಸ ಮಾಡುತ್ತದೆ ಹಾಗೂ ಉಷ್ಣ ವಲಯದ ಅರಣ್ಯದಲ್ಲಿ ಹಾದುಹೋಗುವ ನೀರಿನ ತೊರೆಗಳಲ್ಲೂ ಇದು ವಾಸ ಮಾಡುತ್ತದೆ.

 

  • ಇದು ಕಪ್ಪು ಬನ್ಣದ ಬ್ಯಾಂಡ್ ಹೋಲುವ ರಚನೆ ಹೊಂದಿದ್ದು, ಇದು ಎರಡು ಕಣ್ಣುಗಳ ಮಧ್ಯೆ ಇರುತ್ತದೆ. ಇದರ ಪ್ರಮುಖ ಗುಣಲಕ್ಷಣವೆಂದರೆ, ಇದು ಇದೇ ಜಾತಿಯ ಎಲ್ಲ ಕಪ್ಪೆಗಳ ಪ್ರಭೇಧಗಳಿಗಿಂತ ಭಿನ್ನವಾಗಿರುತ್ತದೆ. ಇದು ಸಾಮಾನ್ಯವಾಗಿ ಏಪ್ರಿಲ್‍ನಿಂದ ಸೆಪ್ಟೆಂಬರ್ ಒಳಗಿನ ಅವಧಿಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಆದರೆ ಒಣ ಋತುಗಳಲ್ಲಿ ಇದು ಸಾಮಾನ್ಯವಾಗಿ ಕಂಡು ಬರುವುದಿಲ್ಲ.

 

ಟೆಲ್ಲಿ ವೆಲ್ಲಿ ವನ್ಯಧಾಮದ ಬಗ್ಗೆ

 

  • ಇದು ಅರುಣಾಚಲಪ್ರದೇಶದಲ್ಲಿರುವ ವನ್ಯಜೀವಿ ಧಾಮ ಹಾಗೂ ಜೀವವೈವಿಧ್ಯ ಕೇಂದ್ರವಾಗಿದೆ. ಇದು ಸಮುದ್ರ ಮಟ್ಟದಿಂದ 2400 ಮೀಟರ್ ಎತ್ತರದಲ್ಲಿದ್ದು, ಪಂಗೆ, ಸಿಪು, ಕರ್ನಿಂಗ್ ಮತ್ತು ಸುಬಾನ್‍ಸಿಯಂಥ ನದಿಗಳು ಇಲ್ಲಿ ಹರಿಯುತ್ತಿವೆ. ಈ ಎಲ್ಲ ನದಿಗಳು ಮೀಸಲು ಅರಣ್ಯ ಮತ್ತು ವನ್ಯಧಾಮದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹರಡುತ್ತವೆ.

 

  • ಇದು ಮುಖ್ಯವಾಗಿ ಸಮಶೀತೋಷ್ಣ ವಲಯದ ಮತ್ತು ಅಲ್ಪೈನ್ ಅರಣ್ಯವನ್ನು ಒಳಗೊಂಡಿದ್ದು, ಇದು ವಿಸ್ತøತವಾದ ಗಿಡ ಹಾಗೂ ಪ್ರಾಣಿ ಪ್ರಭೇಧಗಳನ್ನು ಒಳಗೊಂಡಿದೆ. ಬಹುತೇಕ ಈ ಎಲ್ಲವೂ ಅಪಾಯದ ಅಂಚಿನಲ್ಲಿರುವ ಪ್ರಭೇಧಗಳು.

 

  • ಟೆಲ್ಲಿ ಎನ್ನುವುದು ಪ್ರಸ್ಥಭೂಮಿಯಾಗಿದ್ದು, ಇದು ಸಿಲ್ವರ್ ಫಿರ್ ಮರದ ದಟ್ಟ ಅರಣ್ಯವನ್ನು ಹೊಂದಿದೆ. ಇದರ ಜತೆಗೆ ಪೈನ್ ಕ್ಲಾಡ್ ಪ್ರಸ್ಥಭೂಮಿಯು ಆಕರ್ಷಕವಾಗಿದ್ದು, ವಿಸ್ತøತ ಬಂಜರು ಭೂಮಿಯನ್ನು ಹೊಂದಿದೆ.

 

  • ಇದು ತೀರಾ ಅಪಾಯದ ಅಂಚಿನಲ್ಲಿರುವ ಕ್ಲೌಡೆಡ್ ಚಿರತೆಯಂಥ ಪ್ರಭೇಧಗಳಿಗೂ ನೆಲೆಯಾಗಿದೆ. ಈ ಟೆಲ್ಲಿ ವೆಲ್ಲಿ ಪ್ರದೇಶದಲ್ಲಿ ಪ್ಲುಯೊಬ್ಲೂಟೆಸ್ ಸಿಮೋನ್ ಎನ್ನುವುದು ಇಲ್ಲಿ ಕಂಡುಬರುವ ಬಿದಿರಿನ ಪ್ರಬೇಧವಾಗಿದೆ.

 

12.ನಗರದ ಬಡವರಿಗೆ ಮನೆ ನಿರ್ಮಾಣ ಎರಡನೇ ಸ್ಥಾನದಲ್ಲಿ ಕರ್ನಾಟಕ

ಪ್ರಮುಖ ಸುದ್ದಿ

 

 

  • ‘ಪ್ರಧಾನಮಂತ್ರಿ ಆವಾಸ್‌ ಯೋಜನೆ’ (ನಗರ) ಅಡಿಯಲ್ಲಿ ನಗರಪ್ರದೇಶದ ಬಡವರಿಗೆ ಅತಿ ಹೆಚ್ಚು ಮನೆಗಳನ್ನು ನಿರ್ಮಿಸಿದ ಎರಡನೇ ರಾಜ್ಯ ಎಂಬ ಹೆಗ್ಗಳಿಕೆಯನ್ನು ಕರ್ನಾಟಕ ಪಡೆದುಕೊಂಡಿದೆ.

ಮುಖ್ಯ ಅಂಶಗಳು

 

  • ಯೋಜನೆ ಆರಂಭವಾದ 2014-15ನೇ ಸಾಲಿನಿಂದ ಈಚೆಗೆ 54,474 ಮನೆಗಳನ್ನು ನಿರ್ಮಿಸಿ ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯ ಗುಜರಾತ್‌ ಮೊದಲ ಸ್ಥಾನದಲ್ಲಿದೆ. ಕರ್ನಾಟಕವು 2014ರಿಂದ ಈವರೆಗೆ ರಾಜ್ಯದಲ್ಲಿ ಒಟ್ಟು 33,450 ಮನೆಗಳನ್ನು ನಿರ್ಮಿಸಲಾಗಿದೆ ಎಂದು ವಸತಿ ಮತ್ತು ನಗರ ಕಲ್ಯಾಣ ಸಚಿವಾಲಯ ತಿಳಿಸಿದೆ.

 

 

  • ದೇಶದ 36 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಂದ ಸೇರಿ ಒಟ್ಟು 91 ಲಕ್ಷ ಮನೆಗಳು ಇದುವರೆಗೆ ನಿರ್ಮಿಸಲಾಗಿದೆ. ಯೋಜನೆಯಡಿ, 2022ರೊಳಗೆ ದೇಶಾದ್ಯಂತ 1.2 ಕೋಟಿ ಮನೆಗಳನ್ನು ನಗರಪ್ರದೇಶದ ಬಡವರಿಗಾಗಿ ನಿರ್ಮಿಸುವ ಗುರಿಯನ್ನು ಕೇಂದ್ರ ಹೊಂದಿದೆ.

 

13.ಎಫ್‍ಎಂ 2ನೇ ಹಂತದಲ್ಲಿ 680 ಚಾನೆಲ್ ಹರಾಜಿಗೆ ಸಂಪುಟ ಅನುಮೋದನೆ

 

ಪ್ರಮುಖ ಸುದ್ದಿ

 

  • ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, 236 ನಗರಗಳಲ್ಲಿ ನಂತರದ ಬ್ಯಾಚ್ ಗಳಲ್ಲಿ 683 ವಾಹಿನಿಗಳ ಹರಾಜನ್ನು ನಡೆಸುವುದಕ್ಕೆ ತನ್ನ ಅನುಮೋದನೆ ನೀಡಿದೆ. ಇದು ಅಧಿಕ ನಗರಗಳಲ್ಲಿ ಎಫ್.ಎಂ. ರೇಡಿಯೋದ ಹೊಸ/ಹೆಚ್ಚಿನ ಅನುಭವ ನೀಡುತ್ತದೆ.

 

 

  • 2ನೇ ಹಂತದಲ್ಲಿ ಈ ಚಾನಲ್‍ಗಳ ಮಾರಾಟದಿಂದ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸುಮಾರು 10 ಸಾವಿರ ಮಂದಿಗೆ ಉದ್ಯೋಗಾವಕಾಶ ಸೃಷ್ಟಿಯಾಗಲಿದ್ದು, ದೇಶಾದ್ಯಂತ ಇದು ಪ್ರಯೋಜನವಾಗಲಿದೆ. ಈ ಮಾರಾಟವು ಸರ್ಕಾರಿ ಬೊಕ್ಕಸಕ್ಕೆ ಸುಮಾರು 1100 ಕೋಟಿ ರೂಪಾಯಿ ಹೆಚ್ಚುವರಿ ಆದಾಯವನ್ನು ತಂದುಕೊಡುವ ನಿರೀಕ್ಷೆ ಇರುತ್ತದೆ.

 

ಪ್ರಮುಖ ಅಂಶಗಳು

 

  • ಮೂರನೇ ಹಂತದ ಎಫ್‍ಎಂ ಹಂಚಿಕೆಯು ಹಲವು ನಗರಗಳನ್ನು ವ್ಯಾಪಿಸಲಿದ್ದು, ಎಫ್‍ಎಂ ರೇಡಿಯೊ ಅಸ್ತಿತ್ವವೇ ಇಲ್ಲದ ಕಡೆಗಳಲ್ಲಿ ಕೂಡಾ ಇದು ಎಫ್‍ಎಂ ಸೌಲಭ್ಯ ಆರಂಭಕ್ಕೆ ಪೂರಕವಾಗಲಿದೆ. ಅದರಲ್ಲೂ ಮುಖ್ಯವಾಗಿ ಜಮ್ಮು ಮತ್ತು ಕಾಶ್ಮೀರ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಇದು ಜಾರಿಗೆ ಬರಲಿದ್ದು, ಒಂದು ಲಕ್ಷಕ್ಕಿಂತ ಅಧಿಕ ಜನಸಂಖ್ಯೆ ಇರುವ ಎಲ್ಲ ಕಡೆಗಳಲ್ಲಿ ಈ ಸೌಲಭ್ಯ ಒದಗಿಸಲಾಗುತ್ತದೆ.
  • ಮೂರನೇ ಹಂತದ ಹಂಚಿಕೆಯಿಂದಾಗಿ ಕೇಂದ್ರ ಸರ್ಕಾರ 29 ರಾಜ್ಯಗಳು ಮತ್ತು ಏಳು ಕೇಂದ್ರಾಡಳಿತ ಪ್ರದೇಶಗಳಲ್ಲಿ ಖಾಸಗಿ ಎಫ್‍ಎಂ ರೇಡಿಯೊ ಪ್ರಸಾರಕ್ಕೆ ಅನುಕೂಲ ಕಲ್ಪಿಸಲಿದೆ. ದಾದ್ರ ಮತ್ತು ನಗರ ಹವೇಲಿ ಹೊರತುಪಡಿಸಿ ಉಳಿದೆಲ್ಲ ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳಲ್ಲೂ ಇದು ಜಾರಿಗೆ ಬರಲಿದೆ.

 

ಹಿನ್ನೆಲೆ

 

  • ಇದಕ್ಕೂ ಮುನ್ನ ಎರಡು ಬ್ಯಾಚ್‍ಗಳಲ್ಲಿ ಎಲೆಕ್ಟ್ರಾನಿಕ್ ಹರಾಜನ್ನು ನಡೆಸಲಾಗಿದ್ದು, ಮೂರನೇ ಹಂತದಲ್ಲಿ 2015ರಲ್ಲಿ ಮತ್ತು 2016ರಲ್ಲಿ ಈ ಹರಾಜು ನಡೆದಿತ್ತು. ಮೊದಲ ಬ್ಯಾಚ್‍ನಲ್ಲಿ 56 ನಗರಗಳ ಹಕ್ಕು ಹಂಚಿಕೆಯಾಗಿತ್ತು.
  • ಅಂತೆಯೇ ಎರಡನೇ ಹಂತದಲ್ಲಿ 48 ನಗರಗಳಲ್ಲಿ 66 ಚಾನಲ್‍ಗಳಿಗೆ ಹಂಚಿಕೆ ಮಾಡಲಾಗಿದ್ದು, ಇದರಿಂದ ಒಂದ ಒಟ್ಟು ಆದಾಯ 1187 ಕೋಟಿ ರೂಪಾಯಿ. 245 ಕೇಂದ್ರಗಳಿಂದ ವಲಸೆ ಶುಲ್ಕವಾಗಿ ಕೇಂದ್ರ ಸರ್ಕಾರ ಸುಮಾರು 3000 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ.

 

ONLY FOR PRELIMS

 

 

 

14.ಮೊದಲ ಎಸಿ ನಗರ ರೈಲಿಗೆ ಚಾಲನೆ

 

  • ಹಲವು ಹೊಸತುಗಳ ಮೂಲಕ ಪ್ರಯಾಣಿಕರನ್ನು ಸೆಳೆಯಲು ಕಸರತ್ತು ನಡೆಸಿರುವ ರೈಲ್ವೆ ಇಲಾಖೆ ಈ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ಪಶ್ಚಿಮ ರೈಲ್ವೆಯ ಚೊಚ್ಚಲ ಹವಾ ನಿಯಂತ್ರಿತ (ಎ.ಸಿ.) ಲೋಕಲ್‌ ರೈಲಿಗೆ ಮುಂಬಯಿನಲ್ಲಿ ಚಾಲನೆ ನೀಡಲಾಗಿದೆ .
  • ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ ಇದನ್ನು ತಯಾರಿಸಿದ್ದು.

 

15.ಮೆಜೆಂಟಾ ಮಾರ್ಗಕ್ಕೆ ಚಾಲನೆ

 

  • ಚಾಲಕರಹಿತ ದೆಹಲಿ ಮೆಟ್ರೋ ಸಂಚರಿಸುವ ಮೊದಲ ಮೆಜೆಂಟಾ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ.

 

 

  • ಈ ಮಾರ್ಗದಲ್ಲಿ ಹೈಟೆಕ್ ಸಿಗ್ನಲ್ ವ್ಯವಸ್ಥೆ ಜತೆಗೆ ಎಲ್ಲ 9 ನಿಲ್ದಾಣಗಳಲ್ಲಿ ಫ್ಲ್ಯಾಟ್​ಫಾರಂ ಸ್ಕ್ರೀನ್ ಡೋರ್ (ಪಿಎಸ್​ಡಿ)ಗಳಿದ್ದು, ಕಾರ್ಯಾಚರಣೆ ಆರಂಭಿಸಲಿವೆ.

 

  • ಇಲೆಕ್ಟ್ರಾನಿಕ್ ಮಾಹಿತಿ ಫಲಕ, ವಿದ್ಯುತ್ ಚಾರ್ಜಿಂಗ್ ಸಾಮರ್ಥ್ಯ, ವಿವಿಧ ಬಣ್ಣಗಳ ಸೀಟುಗಳನ್ನು ಹೊಂದಿರಲಿದೆ. ಹಳೆಯ ಮೆಟ್ರೋ ಬೋಗಿಗಳಿಗೆ ಹೋಲಿಸಿದರೆ ಇದಕ್ಕೆ ಬೇಕಾಗುವ ವಿದ್ಯುತ್ ಖರ್ಚು ಶೇ.20ರಷ್ಟು ಇಳಿಕೆಯಾಗಲಿದೆ.
  • ಇನ್ನು ಇದರಲ್ಲಿನ ಬೋಗಿಗಳ ಗಾತ್ರವೂ ದೊಡ್ಡದಾಗಿರಲಿದ್ದು, 3.2 ಮೀಟರ್ ಅಗಲವಿರಲಿದೆ. ಬಳಕೆಯಲ್ಲಿರುವ ಬೋಗಿಗಿಂತ 30-40 ಹೆಚ್ಚುವರಿ ಯಾತ್ರಿಕರು ಪ್ರಯಾಣಿಸಬಹುದಾಗಿದೆ.

 

Share