23rd AUGUST-DAILY CURRENT AFFAIRS BRIEF

23rd AUGUST

 

 

 1.ಏಳು ರಾಜ್ಯಗಳ ರಾಜ್ಯಪಾಲರ ನೇಮಕ

SOURCE-THE HINDU https://www.thehindu.com/news/national/lalji-tandon-sworn-in-as-bihar-governor/article24758631.ece

 

ವಿದ್ಯಾರ್ಥಿಗಳ ಗಮನಕ್ಕೆ

ಪ್ರಿಲಿಮ್ಸ್ ಪರೀಕ್ಷೆ ಗಾಗಿ-ರಾಜ್ಯಪಾಲರ ಕಚೇರಿಗೆ ಸಂಬಂಧಿಸಿದ ಸಾಂವಿಧಾನಿಕ ನಿಬಂಧನೆಗಳ ಬಗ್ಗೆ

ಮುಖ್ಯ ಪರೀಕ್ಷೆಗಾಗಿ– ರಾಜ್ಯಪಾಲರ  ಕಚೇರಿಯೊಂದಿಗೆ ಸಂಬಂಧಿಸಿದ ಮಹತ್ವ ಮತ್ತು ಸಮಸ್ಯೆಗಳನ್ನು ವಿಶ್ಲೇಷಿಸಿ.

 

ಪ್ರಮುಖ ಸುದ್ದಿ

  • ಸಂವಿಧಾನದ 156 ನೇ ಅಧಿನಿಯಮದ ಅಡಿಯಲ್ಲಿ ಅಧಿಕಾರವನ್ನು ನಿರ್ವಹಿಸುವ ಮೂಲಕ ರಾಷ್ಟ್ರಪತಿ  ರಾಮ್ ನಾಥ್ ಕೋವಿಂದ್ ರವರು  ಬಿಹಾರ, ಹರಿಯಾಣ, ಉತ್ತರಾಖಂಡ್, ಜಮ್ಮು ಮತ್ತು ಕಾಶ್ಮೀರ, ಸಿಕ್ಕಿಂ, ಮೇಘಾಲಯ ಮತ್ತು ತ್ರಿಪುರ ಸೇರಿದಂತೆ ಏಳು ರಾಜ್ಯಗಳ  ರಾಜ್ಯ ಪಾಲರನ್ನು  ನೇಮಕ ಮಾಡಿದ್ದಾರೆ.

 

ಮುಖ್ಯ ಅಂಶಗಳು

ಭಾರತದ ರಾಜ್ಯಗಳ ರಾಜ್ಯಪಾಲರು

 

  • ದೇಶದ ಮುಖ್ಯಸ್ಥರಾಗಿ ರಾಷ್ಟ್ರಪತಿ ಇರುವಂತೆಯೇ, ಭಾರತದಲ್ಲಿ ರಾಜ್ಯಗಳ ಮುಖ್ಯಸ್ಥರನ್ನು ರಾಜ್ಯಪಾಲ ಎಂದು ಕರೆಯುತ್ತಾರೆ. ಕಾರ್ಯಾಂಗದ ನಿಜವಾದ ಮುಖ್ಯಸ್ಥರು ಮುಖ್ಯಮಂತ್ರಿಗಳಾಗಿದ್ದರೂ ರಾಜ್ಯಪಾಲರು ರಾಜ್ಯಗಳ ಮುಖ್ಯಸ್ಥರಾಗಿರುತ್ತಾರೆ. ರಾಜ್ಯಪಾಲರನ್ನು ರಾಷ್ಟ್ರಪತಿಗಳು ನೇಮಿಸುತ್ತಾರೆ.

 

  • ಕೇಂದ್ರದಲ್ಲಿ ರಾಷ್ಟ್ರಪತಿ ಇದ್ದಂತೆ ರಾಜ್ಯದಲ್ಲಿ ರಾಜ್ಯಪಾಲ ಇರಬೇಕಾಗುತ್ತದೆ. ಭಾರತದ ಸಂವಿಧಾನದಲ್ಲಿ ರಾಜ್ಯದ ಶಾಸನ ರಚನಾ ಅಧಿಕಾರ ಹಾಗೂ ನ್ಯಾಯಾಂಗದ ಅಧಿಕಾರ ಹೊರತುಪಡಿಸಿ ಇರುವ ಉಳಿದೆಲ್ಲ ಅಧಿಕಾರವನ್ನು ರಾಜ್ಯಪಾಲರು ಇಲ್ಲವೆ ಅವರ ಹೆಸರಿನಲ್ಲಿಯೇ ನಿರ್ವಹಣೆ ಮಾಡಬೇಕಾಗುತ್ತದೆ.
  • ಇದು ಸಂವಿಧಾನ ಒಪ್ಪಿಕೊಂಡ ಕ್ರಮವಾಗಿದೆ.ರಾಜ್ಯಪಾಲರು ಸ್ವಂತ ವಿವೇಚನೆಯಂತೆ ಕಾರ್ಯ ನಿರ್ವಹಿಸಲು ಇರುವ ಅವಕಾಶ ಕಡಿಮೆ. ಸಾಧಾರಣವಾಗಿ ಅವರು ಸಚಿವ ಸಂಪುಟದ ಸಲಹೆ–ಸೂಚನೆ ಮೇರೆಗೆ ಕೆಲಸ ಮಾಡಬೇಕಾಗುತ್ತದೆ (ಕಲಂ 163).
  • ಕೆಲ ವಿಷಯಗಳಲ್ಲಿ ಅವರು ಸ್ವಂತ ವಿವೇಚನೆ ಬಳಸುವ ಅಧಿಕಾರ ಇದೆ (ಉದಾಹರಣೆಗೆ ಮುಖ್ಯಮಂತ್ರಿಯನ್ನಾಗಿ ಯಾರನ್ನು ಮಾಡಬೇಕು ಹಾಗೂ ಸಚಿವ ಸಂಪುಟ ವಿಶ್ವಾಸ ಕಳೆದುಕೊಂಡಿದೆಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಲು ಅನುಸರಿಸುವ ಮಾರ್ಗ ಮತ್ತು ವಿಧಾನ). ಉಳಿದಂತೆ ಸ್ವಂತ ವಿವೇಚನೆ ಬಳಸುವಂತಿಲ್ಲ. ಆಡಳಿತದಲ್ಲಿ ಸಚಿವ ಸಂಪುಟದ ಸಲಹೆಗಳ ಮೇಲೆ ಮೇಲ್ಮನವಿ ಪ್ರಾಧಿಕಾರವಾಗಿ ನಡೆದುಕೊಳ್ಳುವಂತಿಲ್ಲ.

 

  • ರಾಜ್ಯಪಾಲರನ್ನು ರಾಷ್ಟ್ರಪತಿಗಳು ನೇಮಿಸುತ್ತಾರೆ.
  • ರಾಜ್ಯಪಾಲರ ಅಧಿಕಾರವಧಿ 5 ವರ್ಷಗಳು.
  • ರಾಜ್ಯಪಾಲರು ಸ್ವಂತ ವಿವೇಚನೆಯಂತೆ ಕಾರ್ಯ ನಿರ್ವಹಿಸುವ ಅವಕಾಶ ತುಂಬಾ ಕಡಿಮೆ. ಅವರು ಸಚಿವ ಸಂಪುಟದ ಸಲಹೆ ಸೂಚನೆ ಮೇರೆಗೆ ಕೆಲಸ ಮಾಡಬೇಕಾಗುತ್ತದೆ.
  • ರಾಜ್ಯಪಾಲರನ್ನು ಪ್ರತಿ ರಾಜ್ಯಕ್ಕೆ ನೇಮಕ ಮಾಡಲಾಗುತ್ತದೆ. ಆದರೆ ಸಂವಿಧಾನದ 7 ನೇ ತಿದ್ದುಪಡಿಯ ನಂತರ 1956 ರಲ್ಲಿ ಒಂದಕ್ಕಿಂತ ಹೆಚ್ಚು ರಾಜ್ಯಗಳಿಗೆ ರಾಜ್ಯಪಾಲರನ್ನು ನೇಮಕ ಮಾಡಬಹುದು…..CLICK HERE TO READ MORE
Share