27th AUGUST MLP-MODEL ANSWERS

27th   AUGUST  MLP

 

NOTE:: ದಯವಿಟ್ಟು  ಗಮನಿಸಿ ಕೆಳಗಿನ ಉತ್ತರಗಳು‘  ‘ಮಾದರಿ ಉತ್ತರಗಳುಎಂಬುದನ್ನು ನೆನಪಿಡಿ. ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ PROPER SOURCE ಎಲ್ಲದೇ ಇರುವುದರಿಂದ  ನಾವು ಮುಖ್ಯ ಪರೀಕ್ಷೆಯಲ್ಲಿ ನೀವು ಯಾವ ರೀತಿರೆಯಬೇಕು ಮತ್ತು ನಿಮ್ಮ ಸಮಯವನ್ನು ಉಳಿಸಲು ಕೊಡುತ್ತಿರುವ  ವಿಸ್ತಾರವಾದ ಸಾರಾಂಶ, ನಾವುಗಳು ಇಲ್ಲಿ ಪದಗಳ ಮಿತಿ ಗಣನೆಗೆ ತೆಗೆದುಕೊಂಡಿಲ್ಲ ಏಕೆಂದರೆ ಒಂದು ಪ್ರಶ್ನೆಗೆ ಎಷ್ಟು ಸಾದ್ಯೋವೊ ಅಷ್ಟು ಇನ್ಫಾರ್ಮಶನ್ ಕೊಟ್ಟಿರುತ್ತೆವೆ. ನಾವು ಒದಗಿಸುತ್ತಿರುವ ವಿಷಯವು ಪ್ರಶ್ನೆಯ ಬೇಡಿಕೆಯನ್ನು ಪೂರೈಸುತ್ತದೆ ಮತ್ತು ಅದೇ ಸಮಯದಲ್ಲಿ ನಿಮಗೆ ಹಿನ್ನೆಲೆ ಮಾಹಿತಿ ರೂಪದಲ್ಲಿ ಹೆಚ್ಚುವರಿ ಅಂಕಗಳನ್ನು ಗಳಿಸಲು ಅನುಕೂಲಕರವಾಗುತ್ತದೆ.

 

GENERAL STUDIES PAPER-1(ಸಾಮಾನ್ಯ ಅಧ್ಯಾಯ1)

 

1.Discuss the reasons why India is lagging behind in promotion of sports culture? Highlight the significance of progress in these fields for a country.

(ಕ್ರೀಡ  ಸಂಸ್ಕೃತಿಯನ್ನು ಉತ್ತೇಜಿಸಲು ಭಾರತ ಏಕೆ ಹಿಂದೆ  ಉಳಿಯುತ್ತಿದೆ  ಎಂಬ ಕಾರಣಗಳನ್ನು ಚರ್ಚಿಸಿ. ದೇಶಕ್ಕಾಗಿ ಈ ಕ್ಷೇತ್ರಗಳಲ್ಲಿನ ಪ್ರಗತಿಯ ಮಹತ್ವವನ್ನು  ಉಲ್ಲೇಖಿಸಿ.)

150 ಪದಗಳು

 

ಪುರಾತನ ಇತಿಹಾಸ, ಅನನ್ಯ ಭೌಗೋಳಿಕ ರಚನೆ, ವೈವಿಧ್ಯಮಯ ಜನ ಸಮುದಾಯ, ವಿಭಿನ್ನ ಸಂಪ್ರದಾಯಗಳು ಮತ್ತು ಆಚರಣೆಗಳು, ಪ್ರಾಚೀನ ಪರಂಪರೆ ಹಾಗೂ ನೆರೆಹೊರೆ ರಾಷ್ಟ್ರಗಳ ಪ್ರಭಾವಗಳು ಭಾರತೀಯ ಸಂಸ್ಕೃತಿ ಯನ್ನು ರೂಪಿಸಿವೆ. ಸಿಂಧೂ ಕಣಿವೆ ನಾಗರಿಕತೆ ಯಿಂದ ಆರಂಭಗೊಂಡ ಭಾರತೀಯ ಸಂಸ್ಕೃತಿ ವೇದಗಳ ಕಾಲದಲ್ಲಿ ಅಸಾಧಾರಣ ವಿಕಸನ ಕಂಡಿತು. ಇದಾದ ನಂತರ ಬೌದ್ಧ ಧರ್ಮದ ಉನ್ನತಿ ಮತ್ತು ಅವನತಿ, ಸುವರ್ಣ ಯುಗ, ಮುಸ್ಲಿಂ ಆಳ್ವಿಕೆಗೆ ಭಾರತ ಅಧೀನವಾದದ್ದು ಹಾಗೂ ಯುರೋಪಿಯನ್ನರ ವಸಾಹತು ಆಳ್ವಿಕೆ ಸಂದರ್ಭದಲ್ಲಿ ಈ ವಿಕಸನ ಮತ್ತಷ್ಟು ವೈವಿಧ್ಯಮಯವಾಯಿತು. ಭಾರತದ ಶ್ರೇಷ್ಠ ಧಾರ್ಮಿಕ ಆಚರಣೆಗಳು, ಭಾಷೆಗಳು, ಪದ್ಧತಿ ಮತ್ತು ಸಂಪ್ರದಾಯಗಳು ಕಳೆದ ಐದು ಸಾವಿರ ವರ್ಷಗಳಿಂದ ಇದರ ಅನನ್ಯತೆಗೆ ಸಾಕ್ಷಿಯಾಗಿವೆ. ವಿವಿಧ ಧರ್ಮಗಳು ಮತ್ತು ಸಂಪ್ರದಾಯಗಳ ಸಂಯೋಜನೆಯಾಗಿರುವ ಭಾರತೀಯ ಸಂಸ್ಕೃತಿ ವಿಶ್ವದ ಇನ್ನಿತರ ಸಂಸ್ಕೃತಿಗಳ ಮೇಲೂ ತನ್ನ ಪ್ರಭಾವ ಬೀರಿದೆ.

ಕ್ರೀಡಾ ಕ್ಷೇತ್ರದಲ್ಲಿ ಭಾರತದ ಹಲವಾರು ಕ್ರೀಡೆಗಳು ವಿಕಾಸ ಹೊಂದಿವೆ. ಎಂದು ಕರೆಯುವ ಪೌರಸ್ತ್ಯ ಆಧುನಿಕ ಮಾರ್ಷಲ್‌ ಆರ್ಟ್ಸ್ ಎಂಬುದು ಭಾರತದ ಪ್ರಾಚೀನ ಕ್ರೀಡೆ ಎಂದೂ, ಸಮರ ಕಲೆಗಳು ವಿದೇಶಗಳಿಗೆ ಪ್ರಸಾರವಾಗಿ ಅಲ್ಲಿ ವಿವಿಧ ಮಾರ್ಪಾಡುಗಳಿಗೆ ಒಳಗಾಗಿ ಅಲ್ಲಿ ಬಳಕೆಯಾಗುತ್ತಿದೆ ಎಂಬುದು ಕೆಲವರ ನಂಬಿಕೆ. ದೇಶದ ಬಹುತೇಕ ಭಾಗಗಳಲ್ಲಿ ವಿಶೇಷವಾಗಿ ಗ್ರಾಮೀಣ ಭಾಗಗಳಲ್ಲಿ ಆಡುವ ಕಬಡ್ಡಿ ಮತ್ತು ಗಿಲ್ಲಿ-ದಂಡಗಳು ಸಾಂಪ್ರದಾಯಿಕ ದೇಶೀಯ ಕ್ರೀಡೆಗಳು. ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಭಾರತಕ್ಕೆ ಪರಿಚಯಿಸಲಾದ ಫೀಲ್ಡ್‌ ಹಾಕಿ, ಫುಟ್‌ಬಾಲ್‌ (ಸಾಕರ್‌) ಹಾಗೂ ವಿಶೇಷವಾಗಿ ಕ್ರಿಕೆಟ್‌ ಮುಂತಾದ ಕೆಲವು ಕ್ರೀಡೆಗಳು ಈಗ ಸಾಕಷ್ಟು ಜನಪ್ರಿಯವಾಗಿವೆ. ಫೀಲ್ಡ್‌ ಹಾಕಿ ಭಾರತದ ರಾಷ್ಟ್ರೀಯ ಕ್ರೀಡೆಯಾಗಿದ್ದರೂ, ಕ್ರಿಕೆಟ್‌ ಭಾರತದಲ್ಲಿ ಮಾತ್ರವಲ್ಲಿ ಇಡೀ ಉಪಖಂಡದಲ್ಲೇ ಅತ್ಯಂತ ಜನಪ್ರಿಯ ಕ್ರೀಡೆ. ಇದು ಮನರಂಜನೆಯ ಬಹುಮುಖ್ಯ ಮಾಧ್ಯಮವಾಗಿಯೂ ವೃತ್ತಿಪರವಾಗಿಯೂ ಅಭಿವೃದ್ಧಿಗೊಂಡಿದೆ.  ವಿಶ್ವ ಪ್ರಸಿದ್ಧ ಚೆಸ್‌ ಕ್ರೀಡೆ ಹುಟ್ಟಿದ್ದು ಭಾರತದಲ್ಲಿ. ಶಕ್ತಿಯುತವೂ ಮತ್ತು ವೇಗೋತ್ಕರ್ಷವಾದ ಕ್ರೀಡೆಗಳೂ ಕೂಡ ಭಾರತದಲ್ಲಿ ಪ್ರವರ್ಧಮಾನಕ್ಕೆ ಬಂದಿವೆ. ವ್ಯಾಯಾಮಕ್ಕಾಗಿ ಬಳಸುತ್ತಿದ್ದ ತೂಕ, ಆಟದ ಗೋಲಿ ಮತ್ತು ಪಗಡೆಯಾಟದಲ್ಲಿ ಉಪಯೋಗಿಸುತ್ತಿದ್ದ ದಾಳ-ಇವೆಲ್ಲಕ್ಕೂ ಪ್ರಾಚೀನ ಭಾರತದಲ್ಲಿ ಕಲ್ಲುಗಳನ್ನು ಬಳಸಲಾಗುತ್ತಿತ್ತು. ಪ್ರಾಚೀನ ಭಾರತದಲ್ಲಿ ಜನರು ದ್ವಿಚಕ್ರ ರಥದ ಓಟ, ಬಿಲ್ಲು, ಕುದುರೆ ಸವಾರಿ, ಯುದ್ಧ ತಂತ್ರಗಳು, ಕುಸ್ತಿ, ಭಾರ ಎತ್ತುವ ಸ್ಪರ್ಧೆ, ಬೇಟೆ, ಈಜು ಮತ್ತು ಓಟದ ಸ್ಪರ್ಧೆ ಮುಂತಾದ ಕ್ರೀಡೆಗಳಲ್ಲಿ ಸ್ಪರ್ಧಿಸುತ್ತಿದ್ದರು.

ವಿಶ್ವದ 2 ನೇ ಅತಿ ದೊಡ್ಡ ಜನಸಂಖ್ಯೆಯನ್ನು ಹೊಂದಿರುವ ರಾಷ್ಟ್ರ ಭಾರತ. ವಿವಿಧ ಕ್ರೀಡೆಗಳಲ್ಲಿ ಭಾರತ ಸಾಧನೆಯನ್ನು ತೋರಿದೆ.

 

ಭಾರತದ ಕ್ರೀಡಾ ಜಗತ್ತಿನಲ್ಲಿ ಕ್ರೀಡಾ ಸಂಸ್ಕೃತಿಯೊಂದು ರೂಪುಗೊಂಡಿದೆಯೇ ಈ ದೇಶದ ಜನಜೀವನದಲ್ಲಿ ಕ್ರೀಡಾ ಸಂಸ್ಕಾರ ಹಾಸು ಹೊಕ್ಕಾಗಿದೆಯೇ ಎಂದರೆ ಇಂದಿಗೂ ಇಲ್ಲವೆಂದು ಹೇಳಬೇಕಾಗುತ್ತದೆ. ಭಾರತದಲ್ಲಿ ಕ್ರಿಕೆಟ್‌ ಸಂಸ್ಕೃತಿಯಿದೆ, ಕ್ರಿಕೆಟ್‌ಗಾಗಿ ಎಲ್ಲವನ್ನೂ ತ್ಯಾಗ ಮಾಡಬಲ್ಲ ವ್ಯಕ್ತಿಗಳಿದ್ದಾರೆ. ಇಡೀ ದೇಶದಲ್ಲೇ ಇಂತಹದೊಂದು ಪರಂಪರೆ ಕ್ರಿಕೆಟ್‌ ಜನಪ್ರಿಯವಾದ ನಂತರ ಬೆಳೆಯುತ್ತಲೇ ಬಂದಿದೆ.

 

ಬಾಲ್ಯದಲ್ಲೇ ಬೇರೆಲ್ಲ ಕ್ರೀಡೆಗಳನ್ನೂ ಬಿಟ್ಟು ಅಷ್ಟೂ ಮಕ್ಕಳು ಕ್ರಿಕೆಟ್‌ ಮಾತ್ರ ಆಡಿಕೊಂಡು ಕಾಲ ಕಳೆಯುವ, ತಮ್ಮಷ್ಟಕ್ಕೆ ತಾವೇ ನೂರಾರು ಕ್ರಿಕೆಟ್‌ ಕೂಟಗಳನ್ನು ಹಳ್ಳಿಗಳ ಮಟ್ಟದಲ್ಲಿ ನಡೆಸುತ್ತಲೇ ಇರುವ ಪರಂಪರೆ ಎದ್ದು ನಿಂತಿದೆ. ಇದು ಭಾರತದಲ್ಲಿ ಜಗದ್ವಿಖ್ಯಾತ ಕ್ರಿಕೆಟ್‌ ತಾರೆಗಳನ್ನು ರೂಪಿಸಿದೆ. ಕ್ರಿಕೆಟ್‌ನಲ್ಲಿ ದೇವರ ಪಟ್ಟಕ್ಕೆ ಭಾರತದಲ್ಲಿ ಎಂದೂ ಕೊರತೆಯಾಗಿಲ್ಲ. ಇದೇ ವಿಚಾರ ಉಳಿದ ಕ್ರೀಡೆಗಳ ಕುರಿತು ಹೇಳಲು ಸಾಧ್ಯವೇ ಇಲ್ಲ.

 

ಕ್ರೀಡ  ಸಂಸ್ಕೃತಿಯನ್ನು ಉತ್ತೇಜಿಸಲು ಭಾರತ   ಹಿಂದೆ  ಉಳಿಯುತ್ತಿದೆ  ಏಕೆಂದರೆ 

 

  • ಇಂದಿನ ಶಾಲಾ ಶಿಕ್ಷಣದ ಪ್ರಕೃತಿ ಬಹುತೇಕ ಏಕತಾನತೆಯಿಂದ ಕೂಡಿರುತ್ತದೆ ಮತ್ತು ಮಕ್ಕಳಲ್ಲಿ ಸೃಜನಾತ್ಮಕತೆಯನ್ನು ಪ್ರೋತ್ಸಾಹಿಸುವುದಿಲ್ಲ. . ಇಂದಿನ ಶಿಕ್ಷಣದ ಕೇಂದ್ರಬಿಂದುವು ಹೆಚ್ಚು ರಿಸಲ್ಟ್(ಫಲಿತಾಂಶ ) ಮೇಲೆ ಕೇಂದ್ರಿಸಿದೆ  .
  • ಶ್ರೇಷ್ಠತೆಯ ಕಲ್ಪನೆಗೆ ಸಾಂಸ್ಕೃತಿಕ ಪ್ರತಿಕ್ರಿಯೆ – ವ್ಯವಸ್ಥೆಯು ಶ್ರೇಷ್ಠತೆಗೆ ಕಡಿಮೆ ಬೆಂಬಲವನ್ನು ಹೊಂದಿರುವುದರಿಂದ ಒಬ್ಬ ವ್ಯಕ್ತಿ ಉತ್ತಮ ಗುಣಮಟ್ಟದ ವಿಷಯದಲ್ಲಿ ಎದ್ದುಕಾಣಿಸುವುದು ಕಷ್ಟ.
  • ಅಸಂಖ್ಯಾತ ಕಲಾವಿದರು ಮತ್ತು ಸಂಗೀತಗಾರರು ದೊಡ್ಡ ಕೆಲಸವನ್ನು ಸೃಷ್ಟಿಸುವ ಹೋರಾಟ ಮಾಡುತ್ತಾರೆ. ಕೆಲವು ಮಹಾನ್ ಕಲಾವಿದರು, ಪ್ರದರ್ಶಕರು, ಬರಹಗಾರರು ಮತ್ತು ಇತರರಿಗೆ ಮಾಸಿಕ ಸಂಬಳ, ಪ್ರಾವಿಡೆಂಟ್ ನಿಧಿ ಮತ್ತು ಪಿಂಚಣಿ ಇಲ್ಲ.
  • ಸೃಜನಶೀಲತೆ ಮತ್ತು ಪ್ರತಿಭೆಗೆ ರಾಜ್ಯದ ಬೆಂಬಲದ ಕೊರತೆ ನಮ್ಮ ಕಾರ್ಯಕ್ಷಮತೆಗೆ ಕಾರಣವಾಗಿದೆ.
  • ನಮ್ಮ ದೇಶದ ಒಂದು ದುರಂತವೆಂದರೆ, ಕ್ರೀಡಾ ಅಕಾಡೆಮಿ, ಪ್ರಾಧಿಕಾರಗಳಿಗೆ ರಾಜಕಾರಣಿಗಳು ಅಥವಾ ಅವರ ಪುತ್ರರು, ಸಂಬಂಧಿಗಳೇ ಮುಖ್ಯಸ್ಥರಾಗುವುದು. ಇಲ್ಲಿಂದಲೇ ಸಮಸ್ಯೆಗಳ ಆರಂಭ. ದಶಕಗಳ ಕಾಲ ಅಲ್ಲಿ ದರ್ಬಾರು ನಡೆಸಿದ್ದಾರೆ. ಇಲ್ಲಿ ನಡೆಯುವುದೆಲ್ಲ ಜಾತಿ, ಷಡ್ಯಂತ್ರ, ಕಾಲೆಳೆಯುವ ಪ್ರವೃತ್ತಿ. ಈ ರಾಜಕಾರಣಿಗಳಿಗೆ ಕ್ರೀಡೆಯ ಬಗ್ಗೆ ಕಿಂಚಿತ್ತೂ ಜ್ಞಾನವಿರುವುದಿಲ್ಲದಿರುವುದು .

 

ದೇಶಕ್ಕಾಗಿ ಈ ಕ್ಷೇತ್ರಗಳಲ್ಲಿನ ಪ್ರಗತಿಯ ಮಹತ್ವ

  • ಇದು ವಿಶ್ವ ವೇದಿಕೆಯಲ್ಲಿ ದೇಶದ ಸ್ಥಿತಿಯನ್ನು ಹೆಚ್ಚಿಸುತ್ತದೆ. ದೇಶದ ಮೃದು ಶಕ್ತಿಯನ್ನು ಹೆಚ್ಚಿಸಲು ಸಹಕರಿಸುತ್ತದೆ
  • ವ್ಯಕ್ತಿಗಳು ವಿಭಿನ್ನ ಕ್ಷೇತ್ರಗಳಲ್ಲಿ ಉತ್ಕೃಷ್ಟಗೊಳಿಸಲು ಬಹು ಅವಕಾಶಗಳನ್ನು ಇದು ಒದಗಿಸುತ್ತದೆ.
  • ಮನೋಭಾವದಲ್ಲಿರುವ ಪ್ರಗತಿಗಳು ಒಂದು ದೇಶದಲ್ಲಿನ…CLICK HERE TO READ MORE
Share