27th DECEMBER-DAILY CURRENT AFFAIRS BRIEF

27th DECEMBER

 

1.ಉತ್ತಮ ಆಡಳಿತ ದಿನ -2017  (Good Governance Day 2017)

 

ಸನ್ನಿವೇಶ

  • ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹುಟ್ಟುಹಬ್ಬವನ್ನು ಡಿಸೆಂಬರ್ 25ರಂದು ಸರಕಾರ ‘ಉತ್ತಮ ಆಡಳಿತ ದಿನ’ವನ್ನಾಗಿ ಆಚರಿಸುತ್ತಿದೆ.

 

ಇದರ ಉದ್ದೇಶವೇನು ?

 

  • ಸರ್ಕಾರದ ಜವಾಬ್ದಾರಿಯನ್ನು ಜನರಲ್ಲಿ ಜಾಗೃತಿ ಮೂಡಿಸುವುದರ ಸಲುವಾಗಿ  2014  ರಿಂದ ಅವರ ಜನುಮ ದಿನವನ್ನು  ಉತ್ತಮ ಆಡಳಿತ ದಿನವನ್ನಾಗಿ ಆಚರಿಸಲಾಗುತ್ತಿದೆ .
  • ದೇಶದಲ್ಲಿ ಪಾರದರ್ಶಕ ಮತ್ತು ಜವಾಬ್ದಾರಿಯುತ ಆಡಳಿತವನ್ನು ಒದಗಿಸಲು ಸರ್ಕಾರದ ಬದ್ಧತೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು .
  • ಜನರ ಕಲ್ಯಾಣ ಮತ್ತು ಉತ್ತಮತೆಯನ್ನು ಹೆಚ್ಚಿಸುವುದು
  • ಸರ್ಕಾರದ ಕಾರ್ಯಕ್ಷಮತೆಯನ್ನು ಪ್ರಮಾಣೀಕರಿಸಲು ಮತ್ತು ದೇಶದ ಪ್ರಜೆಗಳಿಗೆ ಹೆಚ್ಚು ಪರಿಣಾಮಕಾರಿ ಮತ್ತು ಜವಾಬ್ದಾರಿಯುತ ಆಡಳಿತವನ್ನು ನೀಡುವುದು .
  • ಭಾರತದಲ್ಲಿ ಉತ್ತಮ ಆಡಳಿತದ ಗುರಿಯನ್ನು ಪೂರ್ಣಗೊಳಿಸಲು ಉತ್ತಮ ಮತ್ತು ಪರಿಣಾಮಕಾರಿ ನೀತಿಗಳನ್ನು ಜಾರಿಗೊಳಿಸುವುದು .
  • ಈ ತತ್ವವನ್ನು ಅನುಸರಿಸಿಕೊಂಡು, ಉತ್ತಮ ಆಡಳಿತ ದಿನವನ್ನು ರಜೆಯನ್ನು ನೀಡದೆ ಸರ್ಕಾರದ ಕೆಲಸ ದಿನ ಎಂದು ಘೋಷಿಸಲಾಗಿದೆ.

 

 

2.ರಿಸರ್ವಾಯರ್ ಕಂಪ್ಯೂಟಿಂಗ್ ಸಿಸ್ಟಂ (Reservoir computing system)

 

ಪ್ರಮುಖ ಸುದ್ದಿ

 

  • ಬೋಧನೆ ಕ್ಷಮತೆಯನ್ನು ಸುಧಾರಿಸುವ ಸಲುವಾಗಿ ಮನುಷ್ಯನಂತೆ ಯೋಚಿಸುವ ತಂತ್ರಜ್ಞಾನವನ್ನು ಅಮೆರಿಕದ ಮಿಚಿಗನ್ ವಿವಿ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ. ರಿಸರ್ವಾಯರ್ ಕಂಪ್ಯೂಟಿಂಗ್ ಸಿಸ್ಟಂ ಬಳಸಿಕೊಂಡು ಈ ತಟಸ್ಥ ನೆಟ್‍ವರ್ಕ್ ಚಿಪ್ ಅಭಿವೃದ್ಧಿಪಡಿಸಲಾಗಿದೆ.

 

  • ಈ ವ್ಯವಸ್ಥೆಯನ್ನು ಬಳಸಿಕೊಂಡು ಅಭಿವೃದ್ಧಿಪಡಿಸಿದ ನೆಟ್‍ವರ್ಕ್‍ನಲ್ಲಿ, ಯಾವುದೇ ಶಬ್ದಗಳನ್ನು ಉಚ್ಚರಿಸುವ ಮುನ್ನ ಅದು ಶಬ್ದವನ್ನು ಅಂದಾಜಿಸಬಲ್ಲದು ಮತ್ತು ಪ್ರಸ್ತುತ ಪರಿಸ್ಥಿತಿಯನ್ನು ವಿಶ್ಲೇಷಿಸಿ ಭವಿಷ್ಯದ ಪರಿಣಾಮವನ್ನು ಅಂದಾಜಿಸುವ ಸಾಮಥ್ರ್ಯ ಹೊಂದಿದೆ.

 

ಮುಖ್ಯ  ಅಂಶಗಳು

 

  • ಈ ವ್ಯವಸ್ಥೆಯು ಮೆದುಳಿನ ಕಾರ್ಯನಿರ್ವಹಣೆಯಿಂದ ಸ್ಫೂರ್ತಿ ಪಡೆದಿದೆ. ನರವ್ಯೂಹವು ನರಗಳಿಂದ ಕೂಡಿದ್ದು, ಇವುಗಳ ನಡುವೆ ಸಂಪರ್ಕ ಹೊಂದಿರುತ್ತದೆ.
  • ಹೊಸ ವ್ಯವಸ್ಥೆಯಲ್ಲಿ ಇದೇ ಸಂಚರನೆಯನ್ನು ಬಳಸಿಕೊಂಡು, ತಾರ್ಕಿಕವಾಗಿ ಚಿಂತಿಸಿ ಮಾಹಿತಿಯನ್ನು ದಾಸ್ತಾನು ಮಾಡಲಾಗುತ್ತದೆ.
  • ಇದು ವಿಶೇಷವಾದ ನೆನಪು ಮತ್ತು ಸ್ಮರಣಶಕ್ತಿಯನ್ನು ಬಳಸಿಕೊಂಡು ಸದ್ಯದ ಇತಿಹಾಸವನ್ನು ದಾಖಲಿಸುತ್ತದೆ. ಇದು ಕಂಪ್ಯೂಟರ್ ವ್ಯವಸ್ಥೆ ಜತೆಗೆ ಸಂಪರ್ಕ ಹೊಂದಿದ್ದು, ಸ್ಮರಣಶಕ್ತಿಯ ಮಾದರಿಗಿಂತ ಭಿನ್ನವಾದ ಪ್ರೊಸೆಸರ್‍ಗಳನ್ನು ಒಳಗೊಂಡಿರುತ್ತದೆ.
  • ಸಿಲಿಕಾನ್ ಆಧರಿತ ಎಲೆಕ್ಟ್ರಾನಿಕ್ಸ್ ಬಳಸಿಕೊಂಡು ಇದನ್ನು ದಾಖಲಿಸುವ ಕಾರ್ಯವನ್ನು ಇದು ನಿರ್ವಹಿಸುತ್ತದೆ.

 

ಇದರ ಮಹತ್ವ

 

  • ಈ ವ್ಯವಸ್ಥೆಯು ಕೈಬರಹವನ್ನು ಗುರುತಿಸುವ ವ್ಯವಸ್ಥೆಯನ್ನು ಒಳಗೊಂಡಿದ್ದು, ನರಮಂಡಲದ ವ್ಯೂಹವನ್ನು ಇದು ಬಳಸಿಕೊಳ್ಳಲಿದೆ. 88 ಸ್ಮರಣಶಕ್ತಿಯ ಯಂತ್ರಗಳನ್ನು ಬಳಸಿಕೊಂಡು ಇದನ್ನು ಅಭಿವೃದ್ಧಿಪಡಿಸಲಾಗಿದ್ದು,

 

  • ಸಾಂಪ್ರದಾಯಿಕವಾಗಿ ಇಂಥ ಸಾವಿರಾರು ಯಂತ್ರಗಳನ್ನು ಬಳಸಿಕೊಳ್ಳಬೇಕಾಗುತ್ತದೆ. ಇದು ಶೇಕಡ 91ರಷ್ಟು ನಿಖರತೆಯನ್ನು ಹೊಂದಿದೆ.

 

3.ಹಿಂದುಳಿದ ಜಿಲ್ಲೆಗಳ ಅಭಿವೃದ್ಧಿಗೆ ಕ್ರಿಯಾ ಯೋಜನೆ (Action plan for the backward districts)

 

 ಪ್ರಮುಖ ಸುದ್ದಿ

  • ಕೇಂದ್ರ ಸರಕಾರವು 115 -ಹಿಂದುಳಿದ ಜಿಲ್ಲೆಗಳನ್ನು ಗುರುತಿಸಿದ್ದು ಅವುಗಳ ಸಾಮಾಜಿಕ- ಶೈಕ್ಷಣಿಕ  ಅಭಿವೃದ್ಧಿಪಡಿಸಲು ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿದೆ.
  • ಆರೋಗ್ಯ, ನೈರ್ಮಲ್ಯ , ಶಿಕ್ಷಣ ಮತ್ತು ಅಗತ್ಯ ಮೂಲಭೂತ ಸೌಕರ್ಯಗಳಾದ ರಸ್ತೆಗಳ ಅಭಿವೃದ್ಧಿ,  ಕುಡಿಯುವ ನೀರಿನ ಸೌಲಭ್ಯ ಹಾಗು ಇತರೆ  ಮೂಲಭೂತ ಸೌಕರ್ಯಗಳ ನ್ನು ಕಾಲಮಿತಿಯಲ್ಲಿ ಕಲ್ಪಿಸುವುದು    ಕ್ರಿಯಾ ಯೋಜನೆಯಲ್ಲಿ ಸೇರಿದೆ.
  • 2022 ರ ಹೊತ್ತಿಕ್ಕೆ ಭಾರತ ಸ್ವಾತಂತ್ರ್ಯ ಪಡೆದು 75 ನೇ ವರ್ಷ ತುಂಬಲಿದ್ದು  ಈ  ಹೊತ್ತಿಗೆ ಹಿಂದುಳಿದ ಪ್ರದೇಶಗಳಲ್ಲಿ ತ್ವರಿತ ಸರ್ಕಾರಿ-ಕಾರ್ಯಕ್ರಮಗಳು ಮತ್ತು ಮಧ್ಯಸ್ಥಿಕೆಗಳ ಮೂಲಕ ದೇಶದ ಸರ್ವಾ೦ಗಿಣ ಅಭಿವೃದ್ಧಿಯನ್ನು  ತರಲು ಕೇಂದ್ರ ಸರಕಾರ  ಅಪೇಕ್ಷಿಸುತ್ತಿದೆ.

 

ಹಿಂದುಳಿದ ಜಿಲ್ಲೆಗಳ ಆಯ್ಕೆ ವಿಧಾನ

  • ನಕ್ಸಲ್ ಪೀಡಿತರಿಂದ ಪ್ರಭಾವಿತವಾಗಿರುವ 35 ಜಿಲ್ಲೆಗಳನ್ನು ಒಳಗೊಂಡಂತೆ 115 ಜಿಲ್ಲೆಗಳ ನ್ನು ವಸತಿ ಅಭಾವ  ಆರೋಗ್ಯ ಮತ್ತು ಪೌಷ್ಟಿಕತೆ (ಸಾಂಸ್ಥಿಕ ವಿತರಣೆ, ಮಕ್ಕಳ ಕುಗ್ಗುವಿಕೆ ಮತ್ತು ಮಕ್ಕಳಲ್ಲಿ ಕ್ಷೀಣಿಸುವುದು), ಶಿಕ್ಷಣ  ಮತ್ತು ಮೂಲಭೂತ ಸೌಕರ್ಯಗಳು (  ಮನೆಗಳು, ಶೌಚಾಲಯಗಳ ಕೊರತೆ, ರಸ್ತೆ ಮತ್ತು ಕುಡಿಯುವ ನೀರಿನ ಕೊರತೆ ಹಳ್ಳಿಗಳು). ಇವುಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.

 

  ಯೋಜನೆಯ  ಅಗತ್ಯತೆ

 

  • 2016 ರಲ್ಲಿ, ಭಾರತವು ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ(HDI) 188 ದೇಶಗಳಲ್ಲಿ  131 ನೇ ಸ್ಥಾನದಲ್ಲಿದೆ.  ಅದರಲ್ಲೂ ಪ್ರಮುಖವಾಗಿ    ಅಂತರ-ರಾಜ್ಯ ಮತ್ತು ಅಂತರ-ಜಿಲ್ಲೆಗಳ  ವ್ಯತ್ಯಾಸಗಳು ಕಂಡುಬಂದಿದೆ .
  • ಭಾರತದಲ್ಲಿ ಜನಿಸಿದ ಸುಮಾರು 40% ಮಕ್ಕಳು ಕುಂಠಿತಗೊಂಡಿದ್ದಾರೆ ಮತ್ತು ಸುಮಾರು 50% ಮಹಿಳೆಯರು ರಕ್ತಹೀನತೆ ಹೊಂದಿರುತ್ತಾರೆ.
  • ಭಾರತವು ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ, ನೇಪಾಳ ಮತ್ತು ಚೀನಾಗಳಂತಹ ನೆರೆಹೊರೆಯ ದೇಶಗಳಿಗಿಂತ ಪೌಷ್ಟಿಕಾಂಶದಲ್ಲಿ ಹಿಂದೆ ಉಳಿದಿದೆ.

 

 

4.ಎಲೆಕ್ಟ್ರಾನಿಕ್ ಮಾನವ ಸಂಪನ್ಮೂಲ ನಿರ್ವಹಣೆ ವ್ಯವಸ್ಥೆ (e-HRMS)

 

ಪ್ರಮುಖ ಸುದ್ದಿ

  • ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ವಿದ್ಯುನ್ಮಾನ-ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ (ಇ-ಎಚ್‌ಆರ್‌ಎಂಎಸ್) ಯನ್ನು ಕೇಂದ್ರ ಸರ್ಕಾರವು ಪ್ರಾರಂಭಿಸಿದೆ.
  • ಇದು ಕೇಂದ್ರ ಸರ್ಕಾರಿ ನೌಕರರಿಗೆ ರಜೆಗಾಗಿ ಅರ್ಜಿ ಸಲ್ಲಿಸಲು ಮತ್ತು ಅವರ ಸೇವಾ-ಸಂಬಂಧಿತ ಮಾಹಿತಿಯನ್ನು ತಿಳಿದುಕೊಳ್ಳುವ ಆನ್ಲೈನ್ ​​ವೇದಿಕೆಯಾಗಿದೆ.

 

ಇದರಿಂದ ಆಗುವ ಲಾಭಗಳು

 

  • ಈ ಸೇವೆಯ ಪ್ರಾರಂಭದೊಂದಿಗೆ, ಸೇವೆಯ ಬಗ್ಗೆ ಸಂಬಳ, ಮತ್ತು ಇತ್ಯಾದಿಗಳಿಗೆ ಸಂಬಂಧಿಸಿದಂತೆ ಎಲ್ಲಾ ವಿವರಗಳನ್ನು ನೌಕರರು ನೋಡುವುದರ ಜೊತೆಗೆ  ಆದರೆ ವಿಭಿನ್ನ ರೀತಿಯ ಹಕ್ಕು    ಸಾಲ  , ಮುಂಗಡಗಳು  ಇತ್ಯಾದಿ ಅಂಶಗಳನ್ನು ಸಹ ನೋಡಬಹುದು .  ಅವರ ಕೆಲಸದ ಸ್ಥಿತಿಯನ್ನು ಸಹ  ಟ್ರ್ಯಾಕ್ ಮಾಡಿ  ವಿವರಗಳನ್ನು ತಕ್ಷಣವೇ ಹೊಂದಾಣಿಕೆ ಮಾಡಲು ಸಾಧ್ಯವಾಗುತ್ತದೆ.

 

  • ಇದರಿಂದ ವರ್ಗಾವಣೆ ಮತ್ತು ಸೇವೆಯಲ್ಲಿ  ನಿಯೋಜಿಸಲು   ಸರ್ಕಾರಕ್ಕೆ ಅನುಕೂಲವಾಗುತ್ತದೆ.

 

5.’ಒಂದು ದೇಶ-ಒಂದೇ ಪರ್ಮಿಟ್‌-ಒಂದೇ ತೆರಿಗೆ’ ನೀತಿಗೆ ಶಿಫಾರಸು

 

ಪ್ರಮುಖ ಸುದ್ದಿ

 

  • ‘ಮುಕ್ತ ಆಗಸ ನೀತಿ’ಯಂತೆ ‘ಮುಕ್ತ ರಸ್ತೆ ನೀತಿ’ಯೊಂದರ ಅಗತ್ಯವಿದ್ದು ಎಲ್ಲ ಬಸ್‌ ಪರವಾನಗಿಗಳನ್ನೂ ರಾಷ್ಟ್ರೀಯ ಪರವಾನಗಿಯಾಗಿ (ಪರ್ಮಿಟ್‌) ಪರಿವರ್ತಿಸಬೇಕು ಎಂದು ಸಂಸದೀಯ ಸಲಹಾ ಸಮಿತಿ ಶಿಫಾರಸು ಮಾಡಿದೆ.
  • ಕೇಂದ್ರ ಮತ್ತು ರಾಜ್ಯ ಸರಕಾರಗಳು ಈ ನಿಟ್ಟಿನಲ್ಲಿ ‘ಒಂದು ದೇಶ, ಒಂದೇ ಪರ್ಮಿಟ್‌ ಮತ್ತು ಒಂದೇ ತೆರಿಗೆ’ ನೀತಿಯನ್ನು ಅಳವಡಿಸಿಕೊಳ್ಳಬೇಕು ಎಂದು ಸಮಿತಿ ಹೇಳಿದೆ.

 

  • ರಾಜ್ಯಸಭೆಯ 24 ಸದಸ್ಯರ ಒಂದು ಸಮಿತಿ ಮೋಟಾರು ವಾಹನಗಳ ತಿದ್ದುಪಡಿ ವಿಧೇಯಕದ ಬಗ್ಗೆ ಪರಿಶೀಲನೆ ನಡೆಸುತ್ತಿದೆ.

 

 

ಮುಖ್ಯ ಅಂಶಗಳು

 

  • ‘ದಕ್ಷಿಣದ ಐದು ರಾಜ್ಯಗಳಲ್ಲಿ ಸಂಚರಿಸುವ ಒಂದು ಬಸ್‌ ಪ್ರತಿವರ್ಷ 42 ಲಕ್ಷ ರೂ.ಗಳಷ್ಟು ಪರ್ಮಿಟ್‌ ಶುಲ್ಕ ಪಾವತಿಸಬೇಕಾಗಿದೆ. ರಾಜ್ಯಗಳು ಒಪ್ಪಿದಲ್ಲಿ ‘ಒನ್‌ ನೇಷನ್‌, ಒನ್‌ ಪರ್ಮಿಟ್‌, ಒನ್‌ ಟ್ಯಾಕ್ಸ್‌’ ನೀತಿಯನ್ನು ಅಳವಡಿಸಿಕೊಳ್ಳಬಹುದು ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಸಂಸದೀಯ ಸಮಿತಿಗೆ ತಿಳಿಸಿದೆ. ಇದರಿಂದ ರಾಜ್ಯಗಳ ಆದಾಯವೂ ಹೆಚ್ಚುತ್ತದೆ. ಅಲ್ಲದೆ ಒಬ್ಬರೇ ನಿರ್ವಾಹಕರು ಕೆಲವೇ ಪರ್ಮಿಟ್‌ ಪಡೆದು ಅನೇಕ ಬಸ್‌ಗಳನ್ನು ಓಡಿಸುವುದನ್ನು ತಡೆಯಬಹುದು’ ಎಂದು ಸಮಿತಿ ತನ್ನ ವರದಿಯಲ್ಲಿ ಹೇಳಿದೆ.

 

  • ‘ದೂರದ ಊರುಗಳಿಗೆ ಸಂಚರಿಸುವ ಬಸ್‌ಗಳಲ್ಲಿ ಅಂತರ್‌ನಿರ್ಮಿತ ಶೌಚಾಲಯ ಸೌಲಭ್ಯವಿರಬೇಕು. ಮೋಟಾರು ವಾಹನ ವಿಧೇಯಕ ತಿದ್ದುಪಡಿಯಲ್ಲಿ ಈ ಅಂಶವನ್ನೂ ಸೇರಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ. ಸಂಬಂಧಿತ ಸಚಿವಾಲಯ ಇದರ ಜಾರಿಗೆ ಕ್ರಮ ಕೈಗೊಳ್ಳಬೇಕು’ ಎಂದೂ ಸಮಿತಿ ಹೇಳಿದೆ. ಕಳೆದ ವಾರ ರಾಜ್ಯಸಭೆಯಲ್ಲಿ ಈ ವರದಿ ಮಂಡನೆಯಾಗಿದೆ.

 

  • ‘ಮೋಟಾರು ವಾಹನ ಕಾಯ್ದೆಯನ್ನು ಅನುಷ್ಠಾನಗೊಳಿಸುವ ಪ್ರತಿಯೊಬ್ಬ ಆರ್‌ಟಿಓ ಅಧಿಕಾರಿಗಳು ಮತ್ತು ಟ್ರಾಫಿಕ್‌ ಪೊಲೀಸರ ಬಳಿ ದೇಹದಲ್ಲಿ ಧರಿಸಬಹುದಾದ ಕ್ಯಾಮೆರಾಗಳನ್ನು ಹೊಂದಿರಬೇಕು. ಅಲ್ಲದೆ ಸಂಚಾರಿ ನಿಯಮ ಉಲ್ಲಂಘನೆಗಳನ್ನು ಡಿಜಿಟಲ್‌ ರೂಪದಲ್ಲಿ ದಾಖಲಿಸಿಕೊಳ್ಳಬೇಕು. ಇದನ್ನು ಕಂಟ್ರೋಲ್‌ ರೂಂನಲ್ಲಿ ಮೇಲ್ವಿಚಾರಣೆ ನಡೆಸಬೇಕು. ಈ ಮೂಲಕ ಅಧಿಕಾರಿಗಳ ಭ್ರಷ್ಟಾಚಾರವನ್ನು ತಗ್ಗಿಸಬಹುದು’ ಎಂದು ಸಮಿತಿ ವರದಿ ತಿಳಿಸಿದೆ.

 

  • ಟ್ರಾನ್ಸಪರೆನ್ಸಿ ಇಂಟರ್‌ನ್ಯಾಷನಲ್‌ ವರದಿ ಪ್ರಕಾರ, ಪ್ರತಿವರ್ಷ ವಿವಿಧ ಆರ್‌ಟಿಓಗಳಲ್ಲಿ ಅಧಿಕಾರಿಗಳು ಟ್ರಕ್‌ ಮಾಲೀಕರು/ಚಾಲಕರಿಂದ 10,000 ಕೋಟಿ ರೂ.ಗಳ ಲಂಚ ಸಂಗ್ರಹಿಸುತ್ತಾರೆ.

 

  • ಲೈಸೆನ್ಸ್‌ಗಳು, ನೋಂದಣಿ, ತೆರಿಗೆ ಪಾವತಿ, ಪರ್ಮಿಟ್‌ಗಳು- ಇವೆಲ್ಲ ಸೇರಿದರೆ ಈ ಲಂಚದ ಮೊತ್ತ ದುಪ್ಪಟ್ಟಿಗಿಂತಲೂ ಹೆಚ್ಚಾಗುತ್ತದೆ. ಆರ್‌ಟಿಓಗಳಲ್ಲಿ ವಾರ್ಷಿಕ ಒಟ್ಟಾರೆ 23,000 ಕೋಟಿ ರೂ ಭ್ರಷ್ಟಾಚಾರ ನಡೆಯುತ್ತದೆ ಎಂದು ಮತ್ತೊಂದು ವರದಿ ತಿಳಿಸಿದೆ.

 

6.ಎಲ್‌ಪಿಜಿ ಆಮದು: ಚೀನಾ ಹಿಂದಿಕ್ಕಿದ ಭಾರತ

 

ಪ್ರಮುಖ ಸುದ್ದಿ

  • ಭಾರತ ಇದೇ ಮೊದಲ ಬಾರಿಗೆ ಅಡುಗೆ ಅನಿಲ (ಎಲ್‌ಪಿಜಿ) ಆಮದಿನಲ್ಲಿ ಚೀನಾವನ್ನು ಹಿಂದಿಕ್ಕಿದೆ. ಅಡುಗೆಗೆ ಕಟ್ಟಿಗೆ ಮತ್ತು ಸೆಗಣಿಯ ಉರುವಲು ಬಳಸುವುದನ್ನು ತಡೆಯಲು ಹೆಚ್ಚು ಹೆಚ್ಚು ಅನಿಲ ಸಂಪರ್ಕ ಒದಗಿಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಡಿಸೆಂಬರ್‌ ತಿಂಗಳಲ್ಲಿ ಅಡುಗೆ ಅನಿಲದ ಆಮದು ಪ್ರಮಾಣ 4 ಕೋಟಿ ಟನ್‌ಗಳಿಗೇರಿದೆ.

 

ಮುಖ್ಯ ಅಂಶಗಳು

 

  • 2015ರ ಆರಂಭದಲ್ಲಿ ಮಾಸಿಕ ಕೇವಲ 10 ಲಕ್ಷ ಟನ್‌ಗಳಷ್ಟು ಎಲ್‌ಪಿಜಿ ಆಮದು ಮಾಡಿಕೊಳ್ಳಲಾಗುತ್ತಿತ್ತು.
  • ‘ಭಾರತದಲ್ಲಿ ಎಲ್‌ಪಿಜಿ ಆಮದು ಪ್ರಮಾಣದ ಬೆಳವಣಿಗೆ ಅಭೂತಪೂರ್ವ. 2015ರಲ್ಲಿ 14 ಕೋಟಿ ಸಬ್ಸಿಡಿಯುಕ್ತ ಎಲ್‌ಪಿಜಿ ಸಂಪರ್ಕಗಳಿದ್ದರೆ, ಈಗ ಅದು 1 ಕೋಟಿಗೇರಿದೆ’ ಎಂದು ಎಲ್‌ಪಿಜಿ ಶಿಪ್ಪಿಂಗ್‌ ಸಂಸ್ಥೆ ಡೊರಿಯಾನ್‌ನ ಮುಖ್ಯ ಹಣಕಾಸು ಅಧಿಕಾರಿ ಟೆಡ್‌ ಯಂಗ್‌ ರಾಯ್ಟರ್ಸ್‌ ಸುದ್ದಿಸಂಸ್ಥೆಗೆ ತಿಳಿಸಿದರು.

 

  • ಅಮೆರಿಕ ಮೂಲದ ಡೊರಿಯಾನ್‌ 22 ಟ್ಯಾಂಕರ್‌ಗಳ ಸಮೂಹವನ್ನು ಹೊಂದಿದ್ದು, ಜಗತ್ತಿನ ಅತಿದೊಡ್ಡ ಶಿಪ್ಪಿಂಗ್‌ ಏಜೆನ್ಸಿಗಳಲ್ಲಿ ಒಂದಾಗಿದೆ.

 

  • ಪ್ರೊಪೇನ್‌ ಮತ್ತು ಬುಟೇನ್‌ನ ಮಿಶ್ರಣವಾಗಿರುವ ಎಲ್‌ಪಿಜಿಯನ್ನು ಅಡುಗೆ ಮತ್ತು ಸಾರಿಗೆ ಇಂಧನವಾಗಿ ಬಳಸಲಾಗುತ್ತದೆ. ಇದೇ ರೀತಿ ದ್ರವೀಕೃತ ನೈಸರ್ಗಿಕ ಅನಿಲ (ಎಲ್‌ಎನ್‌ಜಿ) ಕೂಡ ಜಾಗತಿಕ ಮಾರುಕಟ್ಟೆಯಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಮಾರಾಟವಾಗುತ್ತಿದೆ. ಈ ವರ್ಷ 30 ಕೋಟಿ ಟನ್‌ ಎಲ್‌ಎನ್‌ಜಿ ಮಾರಾಟವಾಗಿದೆ. ಸಾಮಾನ್ಯವಾಗಿ ವಾರ್ಷಿಕ 400 ಕೋಟಿ ಟನ್‌ಗಳಷ್ಟು ಮಾರಾಟವಾಗುತ್ತಿದ್ದ ಕಚ್ಚಾತೈಲದ ಮಾರುಕಟ್ಟೆಯೂ ಇದರಿಂದಾಗಿ ಸ್ವಲ್ಪಮಟ್ಟಿಗೆ ಕುಗ್ಗಿದೆ.

 

  • 2017ರಲ್ಲಿ ಭಾರತದ ಮಾಸಿಕ ಸರಾಸರಿ ಆಮದು 17 ಲಕ್ಷ ಟನ್‌ಗಳಾಗಿದ್ದು, ಚೀನಾಗಿಂತ (22 ಲಕ್ಷ ಟನ್‌) ಸ್ವಲ್ಪ ಹಿಂದಿದೆ. ಆದರೆ ಮೂರನೇ ಸ್ಥಾನದಲ್ಲಿದ್ದ ಜಪಾನ್‌ ಅನ್ನು (ಜಪಾನ್‌ ಆಮದು ಪ್ರಮಾಣ 10 ಲಕ್ಷ ಟನ್‌) ಹಿಂದಿಕ್ಕಿ ಎರಡನೇ ಸ್ಥಾನಕ್ಕೆ ಜಿಗಿದಿದೆ.

 

  • ಭಾರತದ ಕಾರುಗಳಲ್ಲೂ ಅನಿಲ ಇಂಧನದ ಬಳಕೆ ಹೆಚ್ಚುತ್ತಿದ್ದು ಎಲ್‌ಪಿಜಿ ಆಮದು ಏರಿಕೆಗೆ ಕಾರಣವಾಗಿದೆ ಎಂದು ಡೊರಿಯಾನ್‌ ಎಲ್‌ಪಿಜಿ ತಜ್ಞರು ಹೇಳುತ್ತಾರೆ.

 

  • ಚೀನಾ, ಭಾರತ ಮತ್ತು ಜಪಾನ್‌ ಒಟ್ಟಾಗಿ ಜಾಗತಿಕ ಎಲ್‌ಪಿಜಿ ಖರೀದಿಯ ಶೇ 45ರಷ್ಟು ಪಾಲು ಹೊಂದಿವೆ.

 

 

ONLY FOR PRELIMS

 

 

7.ಪ್ರಕಾಶ್ ಹೇ ತೋ ವಿಕಾಸ್ ಯೋಜನೆಗೆ ಚಾಲನೆ

  • ಉತ್ತರ ಪ್ರದೇಶ ಸರ್ಕಾರ ಮಹತ್ವಾಕಾಂಕ್ಷಿ ಪ್ರಕಾಶ್ ಹೇ ತೋ ವಿಕಾಸ್ ಯೋಜನೆಗೆ ಚಾಲನೆ ನೀಡಿದೆ.
  • ಇದು ಮನೆಗಳಿಗೆ ಉಚಿತ ವಿದ್ಯುತ್ ನೀಡುವ ಯೋಜನೆಯಾಗಿದ್ದು, ರಾಜ್ಯದ ಎಲ್ಲ ಬಡಕುಟುಂಬಗಳು ಇದರ ಪ್ರಯೋಜನ ಪಡೆಯಲಿವೆ.
  • ಆರಂಭಿಕ ಹಂತದಲ್ಲಿ ಮಥುರಾ ಜಿಲ್ಲೆಯ ಎರಡು ಗ್ರಾಮಗಳಾದ ಲೋಬ್ಹಾನ್ ಮತ್ತು ಗೌಸಿಯಾನಾವನ್ನು ಈ ಯೋಜನೆಗೆ ಆಯ್ಕೆ ಮಾಡಲಾಗಿದೆ.
  • ಈ ಯೋಜನೆಯಡಿ ಎರಡು ಗ್ರಾಮಗಳಲ್ಲಿ ಶೇಕಡ 100ರಷ್ಟು ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಈ ಯೋಜನೆಯಡಿ ರಾಜ್ಯ ಸರ್ಕಾರವು ಮಹತ್ವಾಕಾಂಕ್ಷಿ ಗುರಿ ಹಾಕಿಕೊಂಡಿದ್ದು, 16 ದಶಲಕ್ಷ ಕುಟುಂಬಗಳಿಗೆ 2018ರ ಅಂತ್ಯದ ಒಳಗಾಗಿ ವಿದ್ಯುತ್ ಸಂಪರ್ಕ ಕಲ್ಪಿಸಲು ಉದ್ದೇಶಿಸಿದೆ.

 

8.ಜಿಎಸ್‍ಟಿ ಸಂಗ್ರಹ  ಮಹಾರಾಷ್ಟ್ರ  ಪ್ರಥಮ

 

  • ಕೇಂದ್ರ ಸರ್ಕಾರ ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆಯನ್ನು 2017ರ ಜುಲೈ 1ರಂದು ಆರಂಭಿಸಿದ ಬಳಿಕ ಮೊದಲ ಐದು ತಿಂಗಳಲ್ಲಿ ಗರಿಷ್ಠ ಜಿಎಸ್‍ಟಿ ತೆರಿಗೆ ಸಂಗ್ರಹಿಸಿದ ಕೀರ್ತಿಗೆ ಮಹಾರಾಷ್ಟ್ರ ಹಾಗೂ ಉತ್ತರ ಪ್ರದೇಶ ಪಾತ್ರವಾಗಿವೆ.
  • ಈ ಮಾಹಿತಿಯನ್ನು ಹಣಕಾಸು ಖಾತೆ ರಾಜ್ಯ ಸಚಿವ ಶಿವಪ್ರತಾಪ್ ಸುಕ್ಲಾ ಅವರು ಲಿಖಿತ ಉತ್ತರದಲ್ಲಿ ಲೋಕಸಭೆಗೆ ತಿಳಿಸಿದರು.


9.
ವಿಶ್ವದ ಅತಿದೊಡ್ಡ ಉಭಯವಾಸಿ ವಿಮಾನ ಟೆಕಾಫ್

 

  • ಚೀನಾ ನಿರ್ಮಿಸಿದ ಎಜಿ-600 ಎಮಬ ವಿಶ್ವದ ಅತಿದೊಡ್ಡ ಉಭಯವಾಸಿ (ಆಂಪಿಬಿಯಸ್) ವಿಮಾನ ದಕ್ಷಿಣ ಝುಹೈ ನಗರದಿಂದ ಹೊರಟು ಒಂದು ಗಂಟೆ ಯಾನದ ಬಳಿಕ ಯಶಸ್ವಿಯಾಗಿ ಕಳಕ್ಕೆ ಇಳಿದಿದೆ.

 

  • ಈ ಯಶಸ್ವಿ ಹಾರಟದಿಂದಾಗಿ ವಿಶ್ವದ ಬೆರಳೆಣಿಕೆಯ ದೇಶಗಳ ಸಾಲಿಗೆ ಚೀನಾ ಸೇರಿದೆ. ದೊಡ್ಡ ಉಭಯವಾಸಿ ವಿಮಾನಗಳನ್ನು ಅಭಿವೃದ್ಧಿಪಡಿಸುವ ಕೆಲವೇ ದೇಶಗಳ ಪೈಕಿ ಚೀನಾ ಕೂಡಾ ಒಂದಾಗಿದೆ. ಇದು ಚೀನಾದ ಕ್ಷಿಪ್ರ ಮಿಲಿಟರಿ ಆಧುನೀಕರಣಕ್ಕೆ ನೆರವಾಗಲಿದೆ.

 

 

10.ಕಿಸಾನ್ ಉದಯ್ ಯೋಜನೆ

 

  • ಉತ್ತರಪ್ರದೇಶ ಸರ್ಕಾರವು ಇದರ ಜತೆಗೆ ಕಿಸಾನ್ ಉದಯ್ ಎಂಬ ವಿಶಿಷ್ಟ ಯೋಜನೆಗೆ ಕೂಡಾ ಚಾಲನೆ ನೀಡಿದೆ. ಇದರ ಅನ್ವಯ ಹಾಲಿ 5 ಅಶ್ವಶಕ್ತಿಯ ಮೋಟರ್ ವಿದ್ಯುತ್ ಸಂಪರ್ಕ ಹೊಂದಿರುವ ರೈತರಿಗೆ 7,5 ಅಶ್ವಶಕ್ತಿಯ ಸಬ್‍ಮರ್ಸಿಬಲ್ ಪಂಪ್‍ಗಳನ್ನು ಉಚಿತವಾಗಿ ಬದಲಿಸಿಕೊಡಲಾಗುವುದು.
  • ಈ ಯೋಜನೆಯಡಿ 10 ಲಕ್ಷ ರೈತರಿಗೆ 2022ರೊಳಗೆ ಸೌಲಭ್ಯ ಕಲ್ಪಿಸಲಾಗುವುದು. ಇದು ಶೇಕಡ 35ರಷ್ಟು ವಿದ್ಯುತ್ ಉಳಿತಾಯಕ್ಕೆ ಕಾರಣವಾಗಲಿದೆ.
Share