28th AUGUST-DAILY CURRENT AFFAIRS BRIEF

28th AUGUST

 

1.ಡ್ರೋನ್ ಹಾರಿಸಲು ಲೈಸನ್ಸ್ ಕಡ್ಡಾಯ

SOURCE-https://indianexpress.com/article/technology/tech-news-technology/india-drone-policy-dgca-remotely-piloted-aircraft-5328143/

 

ವಿದ್ಯಾರ್ಥಿಗಳ ಗಮನಕ್ಕೆ

ಪ್ರಿಲಿಮ್ಸ್ ಪರೀಕ್ಷೆಗಾಗಿ-  ಡ್ರೋನ್  ಎಂದರೇನು  ? ಡ್ರೋನ್ ನ ಉಪಯೋಗಗಳ ಬಗ್ಗೆ

ಮುಖ್ಯ ಪರೀಕ್ಷೆಗಾಗಿ- ಡ್ರೋನ್‌ ಹಾರಾಟ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊಸ ನೀತಿ ತರಲು ಕಾರಣಗಳೇನು ?

 

ಪ್ರಮುಖ ಸುದ್ದಿ

 

  • ಇದೇ ಮೊದಲ ಬಾರಿಗೆ ಭಾರತ ಸರ್ಕಾರವು ದೇಶಿಯವಾಗಿ ಡ್ರೋನ್ ಹಾರಾಟಕ್ಕೆ ನಿಮಯವನ್ನು ರೂಪಿಸಿದ್ದು, ಈ ಹಿನ್ನಲೆಯಲ್ಲಿ ಯಾರು ಬೇಕಾದರೂ ಡ್ರೋನ್ ಅನ್ನು ಹಾರಿಸುವಂತಿಲ್ಲ ಎನ್ನಲಾಗಿದೆ. ಆಂತರಿಕ ಭದ್ರತೆಯ ದೃಷ್ಟಿಯಿಂದ ಡ್ರೋನ್‌ ಹಾರಾಟ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ನೀತಿ ರೂಪಿಸಿದ್ದು, ಇನ್ನು ಮುಂದೆ ಡ್ರೋನ್ ಹಾರಿಸಲು ಲೈಸನ್ಸ್‌ ಪಡೆಯುವುದನ್ನು ಕಡ್ಡಾಯಗೊಳಿಸಿದೆ.

 

ಮುಖ್ಯ ಅಂಶಗಳು

 

  • ಇದೇ ಡಿಸೆಂಬರ್ 1 ರಿಂದ ಈ ಹೊಸ ನಿಮಯವು ಜಾರಿಗೆ ಬರಲಿದ್ದು, ದೇಶದಲ್ಲಿ ಡ್ರೋನ್ ಹಾರಾಟ ಇನ್ನು ಮುಂದೆ ವಾಣಿಜ್ಯ ಚಟುವಟಿಕೆಯಾಗಲಿದೆ. ಕಾರಣ ಡ್ರೋನ್ ಮೂಲಕವೇ ವಸ್ತುಗಳ ಡಿಲಿವರಿ ಸೇರಿದಂತೆ ಸಾಕಷ್ಟು ದೊಡ್ಡ ಪ್ರಮಾಣದ ಸೇವೆಗಳು ಆರಂಭವಾಗಲಿದೆ. ಇದಕ್ಕೆ ಮುನ್ನಡಿಯಾಗಿ ಈ ಹೊಸ ಮಾದರಿಯ ನಿಯಮವನ್ನು ಜಾರಿಗೆ ತರಲಾಗಿದೆ.

 

  • ಸಿನಿಮಾ, ಮದುವೆ ಛಾಯಾಗ್ರಹಣಕ್ಕೆ ಸೀಮಿತವಾಗಿದ್ದ ಡ್ರೋನ್‌ಗಳನ್ನು ಕೃಷಿ, ನಗರಾಭಿವೃದ್ಧಿ, ಪೊಲೀಸ್‌, ಸೇನಾ ಕಾರ್ಯಾಚರಣೆಯಂತಹ ಜನಪರ ಕಾರ್ಯಗಳಿಗೂ ಇತ್ತೀಚೆಗೆ ವ್ಯಾಪಕವಾಗಿ ಬಳಸಿಕೊಳ್ಳಲಾಗುತ್ತಿದೆ. ಆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಹೊಸ ನೀತಿ ಪ್ರಕಟಿಸಿದೆ.

 

  • ಹೊಸ ನಿಯಮಾವಳಿಗಳ ಅನ್ವಯ ಮನರಂಜನೆ, ಮದುವೆ ಮುಂತಾದ ಛಾಯಾಗ್ರಹಣಕ್ಕೆ ಬಳಸಲಾಗುವ ಪುಟ್ಟ ಡ್ರೋನ್‌ಗಳಿಗೂ ವಿಶೇಷ ಗುರುತಿನ ಸಂಖ್ಯೆ (ಯುಐಎನ್‌) ಪಡೆಯುವುದು ಕಡ್ಡಾಯವಾಗಿದೆ.

 

ಹೊಸ ಮಾರ್ಗದರ್ಶಿ

  • ಕೇಂದ್ರ ವಿಮಾನಯಾನ ಸಚಿವಾಲಯವು ಹೊಸದಾಗಿ ಡ್ರೋನ್ ನೀತಿ ಬಗ್ಗೆ ಮಾರ್ಗದರ್ಶಿ ಸೂತ್ರದ ಬಗ್ಗೆ ಮಾಹಿತಿಯನ್ನು ನೀಡಿದ್ದು. ಷರತ್ತು ಮತ್ತು ನಿಬಂಧನೆಗಳನ್ನು ವಿಧಿಸಿ, ಡ್ರೋನ್ ಅನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಲು ಅವಕಾಶ ನೀಡುವ ಪ್ರಸ್ತಾವ ಮಾಡಿದೆ.

 

 

  • ದೇಶದಲ್ಲಿ ಡ್ರೋನ್ ಹಾರಿಸಲು ಪೈಲೆಟ್ ಲೈಸನ್ಸ್ ಪಡೆದುಕೊಳ್ಳಲು ಸರಕಾರವೂ ದೊಡ್ಡ ಮೊತ್ತವನ್ನು ವಿಧಿಸಲು ಮುಂದಾಗಿದೆ. ರೂ.25000 ವನ್ನು ಲೈಸನ್ಸ್ ಪಡೆದುಕೊಳ್ಳಲು ಕಟ್ಟ ಬೇಕಾಗಿದೆ. ಇದಾ ನಂತರದಲ್ಲಿ ಅದನ್ನು ರಿನಿವಲ್ ಮಾಡಿಸಲು ರೂ.10000 ಮತ್ತು ಡ್ರೋನ್ ಅನ್ನು ರಿಜಿಸ್ಟರ್ ಮಾಡಿಸಲು ರೂ.1000 ದರವನ್ನು ನಿಗಧಿ ಮಾಡಿದೆ.

 

  • ರಿಜಿಸ್ಟರ್ ಆದ ಪ್ರತಿ ಡ್ರೋನ್‌ಗಳಿಗೆ ಯೂನಿಕ್ ಐಡೆಂಟಿಫಿಕೇಷನ್ ನಂಬರ್ (ಯುಐಎನ್) ನೀಡಲಾಗುತ್ತದೆ. ಡ್ರೋನ್ ಗೆ ಪರವಾನಗಿ ಪಡೆದುಕೊಳ್ಳಲು ಹದಿನೆಂಟು ವರ್ಷ ತುಂಬಿರ ಬೇಕು, ಕನಿಷ್ಠ ಹತ್ತನೇ ತರಗತಿ ಪಾಸಾಗಿರ ಬೇಕು, ಇಂಗ್ಲಿಷ್ ಭಾಷಾ ಜ್ಞಾನ ಇರಬೇಕು ಎನ್ನಲಾಗಿದೆ.

 

 

  • ದೇಶಿಯವಾಗಿ ಹಾರಾಟ ನಡೆಸುವ ಡ್ರೋನ್‌ಗಳನ್ನು ಐದು ವಿಭಾಗವಾಗಿ ವಿಂಗಡಿಸಲಾಗಿದೆ. ಅದು ಕೂಡ ಅವುಗಳ ತೂಕದ ಆಧಾರದಲ್ಲಿ. ನ್ಯಾನೋ (250 ಗ್ರಾಮ್ ತೂಕ), ಮೈಕ್ರೋ (2 KG ತೂಕ), ಸ್ಮಾಲ್ (25 KG ತೂಕ), ಮೀಡಿಯಮ್ (150 KG ತೂಕದ ಒಳಗೆ), ಲಾರ್ಜ್ (150 KG ತೂಕ) ಎಂದು ವಿಂಗಡಿಸಲಾಗಿದೆ.

 

 

ಯಾವುದಕ್ಕೆ ರಿಜಿಸ್ಟೇಷನ್ ಬೇ?

  • 250 ಗ್ರಾಮ್ ಹಾಗೂ 2 KG ತೂಕದ ಡ್ರೋನ್‌ಗಳನ್ನು ಬಳಕೆ ಮಾಡಿಕೊಳ್ಳಲು ಯಾವುದೇ ರೀತಿಯ ನೋಂದಣಿ ಮಾಡಿಸಬೇಕಾಗಿಲ್ಲ ಎನ್ನಲಾಗಿದೆ. (ಇವೆರಡನ್ನು ಮಕ್ಕಳು ಆಟಿಕೆ ರೀತಿ ಬಳಸಬಹುದು) ಇದನ್ನು ಬಿಟ್ಟು ಉಳಿದವನ್ನು ಬಳಕೆ ಮಾಡಿಕೊಳ್ಳಲು ನೋಂದಣಿ ಮಾಡಿಸಲೇ ಬೇಕು ಎಂದು ನಿಮಯದಲ್ಲಿ ತಿಳಿಸಲಾಗಿದೆ.

ಯಾವುದಕ್ಕೆ ಬೇಕು ?

  • 2 KG ಗಿಂತಲೂ ಹೆಚ್ಚಿನ ತೂಕದ ಡ್ರೋನ್‌ಗಳ ಹಾರಾಟ ಮತ್ತು ನಿಯಂತ್ರಣಕ್ಕೆ ಲೈಸನ್ಸ್‌ ಪಡೆದುಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದ್ದು, ಇದಕ್ಕಾಗಿ ವಯೋಮಿತಿಯನ್ನು ನಿಗಧಿ ಮಾಡಲಾಗಿದ್ದು, 18 ವರ್ಷ ಮೇಲ್ಪಟ್ಟವರಿಗೆ ಮಾತ್ರವೇ ಲೈಸನ್ಸ್ ಪಡೆಯಲು ಅನುಮತಿಯನ್ನು ನೀಡಲಾಗಿದೆ.

 

 

  • ಸದ್ಯಕ್ಕೆ ಡ್ರೋನ್ ಅನ್ನು ಕಣ್ಣಿಗೆ ಕಾಣುವಷ್ಟು ದೂರದವರೆಗೆ ಮಾತ್ರ ಬಳಸಲು ಅವಕಾಶ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಇದಕ್ಕಾಗಿಯೇ ಕಾರ್ಯಪಡೆಯೊಂದನ್ನು ರಚಿಸಿ, ಅದರ ಮೂಲಕ ದೂರದ ಪ್ರದೇಶಗಳಿಗೂ ಡ್ರೋನ್ ಬಳಕೆ ಮಾಡುವ ಚಿಂತನೆ ನಡೆಸಲಾಗುವುದು ಎನ್ನಲಾಗಿದೆ. ಅಲ್ಲದೇ ಬೆಳಕು ಇರುವ ವೇಳೆಯಲ್ಲಿ ಮಾತ್ರವೇ ಡ್ರೋನ್ ಹಾರಟ ನಡೆಸಬೇಕಾಗಿದೆ.

 

  • ಇದಲ್ಲದೇ ದೇಶದ ಹಲವು ಕಡೆಗಳಲ್ಲಿ ಡ್ರೋನ್ ಹಾರಾಟ ನಿಷೇಧ ಪ್ರದೇಶ ಎಂದು ಗುರುತಿಸಿ, ಅಲ್ಲಿ ಡ್ರೋನ್ ಹಾರಾಟ ನಡೆಸುವಂತಿಲ್ಲ ಎಂಬ ನಿಯಮ ಮಾಡಲಾಗುವುದು. ಇವುಗಳನ್ನು ಪಾಲನೆ ಮಾಡಬೇಕಾಗಿದೆ.

 

ಡ್ರೋನ್    ಎಂದರೇನು  ?

 

  • ಮಾನವರಹಿತ ವಾಯು ವಾಹನಗಳು (Unmanned Aerial Vehicles) ಚಾಲಕರಿಲ್ಲದಿರುವ ವಿಮಾನಗಳು. ಇವುಗಳು ದೂರನಿಯಂತ್ರಿತ ಅಥವಾ ಮೊದಲೇ ಸಿದ್ಧಪಡಿಸಿದ ನಿರ್ದಿಷ್ಟ ಕಾರ್ಯಕ್ರಮದಂತೆ ಹಾರಾಡುತ್ತವೆ. ಪ್ರಸ್ತುತ ಈ ವಿಮಾನಗಳನ್ನು ಹೆಚ್ಚಾಗಿ ಸೈನ್ಯದ ಕಾರ್ಯಾಚರಣೆಗಳಿಗಾಗಿ ಬಳಸಲಾಗುತ್ತಿದೆಯಾದರೂ ನಾಗರಿಕ ಕಾರ್ಯಗಳಿಗೆ ಕೂಡಾ ಇವುಗಳ ಬಳಕೆ ನಡೆಯುತ್ತಿವೆ. ಈ ವಿಮಾನಗಳನ್ನು UAV, UAVS (Unmanned Aerial Vehicle System), UAS (Unmanned Aircraft System), RPV (Remotely Piloted Vehicles) ಎಂದೂ ಕರೆಯಲಾಗುತ್ತದೆ.
  • ಆರಂಭದಲ್ಲಿ ಯುಏವಿಗಳನ್ನು “ಡ್ರೋನ್”ಗಳೆಂದು (Drone) ಕರೆಯಲಾಗುತ್ತಿತ್ತು. ಈ ವಿಮಾನಗಳ ವ್ಯವಸ್ಥೆ ಹೆಚ್ಚೇನೂ ಸಂಕೀರ್ಣವಾಗಿರದೆ ಅವು ಆಕಾಶದಲ್ಲಿ ಹಾರಾಡುತ್ತಿದ್ದಷ್ಟು ಕಾಲ ರೇಡಿಯೋ ಮೂಲಕ ಮಾನವ ಚಾಲಕನ (ಆಪರೇಟರ್) ನಿಯಂತ್ರಣದಲ್ಲಿರುತ್ತಿದ್ದವು. ತಾಂತ್ರಿಕತೆ ಮುಂದುವರಿದಂತೆ, ಹೆಚ್ಚು ಶಕ್ತಿಶಾಲಿಯಾದ ಕಂಪ್ಯೂಟರ್ ಹಾಗೂ ಆ ಕಂಪ್ಯೂಟರಿನೊಂದಿಗೆ ಹೊಂದಾಣಿಸಿದ (Integrated) ಸಂವೇದಕಗಳನ್ನು (Sensors) ಅಳವಡಿಸುವುದರಿಂದ ಯುಏವಿಗಳು ಮಾನವ ಚಾಲಕನ ನಿಯಂತ್ರಣವಿಲ್ಲದೆ ಹಾರಾಡಲು ಸಾಧ್ಯವಾಯಿತು.
  • ಯುಏವಿಯಲ್ಲಿ ಅಳವಡಿಸಲಾದ ಕಂಪ್ಯೂಟರ್ ಮಾನವ ಚಾಲಕನ ಕೆಲವು ಸರಳವಾದ ಕಾರ್ಯಗಳನ್ನು ನಿರ್ವಹಿಸತೊಡಗಿತು. ವಿಮಾನದ ಹತೋಟಿ (Flight Control), ವೇಗ (Airspeed), ಹಾರಾಟದ ಎತ್ತರ (Altitude), ದಿಕ್ಕು (Heading) ನಿಯಂತ್ರಣ ಇತ್ಯಾದಿಗಳು ಈ ಕಾರ್ಯಗಳು. ಅಲ್ಲದೆ ಮೊದಲೇ ಸಿದ್ಧಪಡಿಸಿದ ನಿರ್ದಿಷ್ಟ ಕಾರ್ಯಕ್ರಮದಂತೆ (Preplanned Programme) ಸ್ಥಳದಿಂದ ಸ್ಥಳಕ್ಕೆ ಯುಏವಿಗಳು ಹಾರಾಡಬಲ್ಲವಾದವು. ಹಲವಾರು ಸ್ಥಳಗಳ (Waypoints) ಅಕ್ಷಾಂಶ-ರೇಖಾಂಶಗಳನ್ನು (co-ordinates) ಪಟ್ಟಿ ಮಾಡಿ, ಕಾರ್ಯಕ್ರಮವೊಂದನ್ನು ರೂಪಿಸಿ ಆ ಕಾರ್ಯಕ್ರಮವನ್ನು ಯುಏವಿಯ ಕಂಪ್ಯೂಟರಲ್ಲಿ ಅಳವಡಿಸಿದರೆ, ಕಂಪ್ಯೂಟರ್ ಯುಏವಿಯನ್ನು ಪಟ್ಟಿಯ ಪ್ರಕಾರ ಸ್ಥಳದಿಂದ ಸ್ಥಳಕ್ಕೆ ಹಾರಾಡಲು ನಿರ್ದೇಶಿಸುತ್ತದೆ.
  • ಕಂಪ್ಯೂಟರ್ ತಾನು ಪ್ರಸ್ತುತವಾಗಿ ಇರುವ ಸ್ಥಳದ ಅಕ್ಷಾಂಶ-ರೇಖಾಂಶವನ್ನು ಅರಿಯಲು ಜಿಪಿಎಸ್ಅನ್ನು (Global Positioning Satellite System) ಉಪಯೋಗಿಸುತ್ತದೆ. ಸ್ವಯಂಚಾಲನೆಯ ಪರಿಮಿತಿ ನಿರಂತರವಾಗಿ ವಿಸ್ತರಿಸುತ್ತಿದೆ. ಸ್ವಯಂ ನಿಯಂತ್ರಣದ (Autonomy) ಮುಖ್ಯ ಉದ್ದೇಶವೆಂದರೆ ಮಾನವನ ನಿಯಂತ್ರಣವಿಲ್ಲದೆ ತೀರ್ಮಾನಗಳನ್ನು ತೆಗೆದುಕೊಳ್ಳುವುದು. ಯುಏವಿ ಕ್ಷೇತ್ರದಲ್ಲಿ ಸ್ವಯಂ ನಿಯಂತ್ರಣದ ಸೈನಿಕ ಗುರಿಯೆಂದರೆ ಒಂದು ಸಂಪೂರ್ಣ ಸಮರ ವಿಮಾನದಲ್ಲಿ ಚಾಲಕನ ಬದಲು ಕಂಪ್ಯೂಟರ್ ನಿಯಂತ್ರಣದ ಬಳಕೆ.
  • ಅಮೆರಿಕ ಹಾಗೂ ಐರೋಪ್ಯ ದೇಶಗಳು ಈ ದಿಕ್ಕಿನತ್ತ ಈಗಾಗಲೇ ಧಾಪುಗಾಲಿಕ್ಕಿವೆ. ಮಾನವರಹಿತ ಸಮರ ವಿಮಾನವು…CLICK HERE TO READ MORE
Share