28th AUGUST MLP-MODEL ANSWERS

28th   AUGUST  MLP

 

NOTE:: ದಯವಿಟ್ಟು  ಗಮನಿಸಿ ಕೆಳಗಿನ ಉತ್ತರಗಳು‘  ‘ಮಾದರಿ ಉತ್ತರಗಳುಎಂಬುದನ್ನು ನೆನಪಿಡಿ. ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ PROPER SOURCE ಎಲ್ಲದೇ ಇರುವುದರಿಂದ  ನಾವು ಮುಖ್ಯ ಪರೀಕ್ಷೆಯಲ್ಲಿ ನೀವು ಯಾವ ರೀತಿರೆಯಬೇಕು ಮತ್ತು ನಿಮ್ಮ ಸಮಯವನ್ನು ಉಳಿಸಲು ಕೊಡುತ್ತಿರುವ  ವಿಸ್ತಾರವಾದ ಸಾರಾಂಶ, ನಾವುಗಳು ಇಲ್ಲಿ ಪದಗಳ ಮಿತಿ ಗಣನೆಗೆ ತೆಗೆದುಕೊಂಡಿಲ್ಲ ಏಕೆಂದರೆ ಒಂದು ಪ್ರಶ್ನೆಗೆ ಎಷ್ಟು ಸಾದ್ಯೋವೊ ಅಷ್ಟು ಇನ್ಫಾರ್ಮಶನ್ ಕೊಟ್ಟಿರುತ್ತೆವೆ. ನಾವು ಒದಗಿಸುತ್ತಿರುವ ವಿಷಯವು ಪ್ರಶ್ನೆಯ ಬೇಡಿಕೆಯನ್ನು ಪೂರೈಸುತ್ತದೆ ಮತ್ತು ಅದೇ ಸಮಯದಲ್ಲಿ ನಿಮಗೆ ಹಿನ್ನೆಲೆ ಮಾಹಿತಿ ರೂಪದಲ್ಲಿ ಹೆಚ್ಚುವರಿ ಅಂಕಗಳನ್ನು ಗಳಿಸಲು ಅನುಕೂಲಕರವಾಗುತ್ತದೆ.

 

 

GENERAL STUDIES PAPER-2(ಸಾಮಾನ್ಯ ಅಧ್ಯಾಯ2)

 

1.Highlight the reasons behind failure of online companies to curb circulation of online videos of sexual violence against women and children. In your opinion what measures should government take to deal with this menace?

( ಮಹಿಳೆಯರು ಮತ್ತು ಮಕ್ಕಳ ವಿರುದ್ಧ ಲೈಂಗಿಕ ಹಿಂಸೆಯ ಆನ್ಲೈನ್ ​​ವೀಡಿಯೊಗಳ ಪ್ರಸಾರವನ್ನು ನಿಗ್ರಹಿಸಲು ಆನ್ಲೈನ್ ​​ಕಂಪನಿಗಳ ವಿಫಲತೆಯ ಹಿಂದಿನ ಕಾರಣಗಳನ್ನು  ಉಲ್ಲೇಖಿಸಿ   . ಈ ಅಭಿಪ್ರಾಯವನ್ನು ನಿಭಾಯಿಸಲು ಸರ್ಕಾರ ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು?)

250 ಪದಗಳು

 

ಮಹಿಳೆ ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಒಂದು ಪ್ರದೇಶ, ರಾಷ್ಟ್ರ ಅಥವಾ ವರ್ಗಕ್ಕೆ ಮಾತ್ರ ಸೀಮಿತವಾಗಿಲ್ಲ. ಇದೊಂದು ಜಾಗತಿಕ ಸಾಂಕ್ರಾಮಿಕ ರೋಗ. ಉದಾಹರಣೆಗೆ, ಜಗತ್ತಿನಲ್ಲಿ ದೊಡ್ಡಣ್ಣನೆನಿಸಿಕೊಂಡಿರುವ ಅಮೇರಿಕದಲ್ಲಿ ಪ್ರತಿ ಎರಡು ನಿಮಿಷಕ್ಕೆ ಒಬ್ಬರು ಮಹಿಳೆ ಲೈಂಗಿಕ ಅತ್ಯಾಚಾರಕ್ಕೆ ಒಳಗಾಗುತ್ತಾರೆ.

ಲೈಂಗಿಕ ದೌರ್ಜನ್ಯಗಳಿಂದ ಮಕ್ಕಳನ್ನು ಮಹಿಳೆಯರನ್ನು  ರಕ್ಷಿಸುವ ಸಲುವಾಗಿ ಕಠಿನ ಕಾನೂನು ರಚಿಸಲು  ಕೇಂದ್ರ  ಸರಕಾರ ಮುಂದಾಗಿದೆ . ಪ್ರಸ್ತುತ ಇರುವ ಕಾಯಿದೆ ಮಕ್ಕಳನ್ನು ಲೈಂಗಿಕ ದೌರ್ಜನ್ಯಕ್ಕೆ ಬಳಸಿಕೊಂಡು ಅದರ ವೀಡಿಯೊ ಚಿತ್ರೀಕರಿಸುವುದು ಮತ್ತು ಮಾರಾಟ ಮಾಡುವುದನ್ನು ಮಾತ್ರ ನಿಷೇಧಿಸಿತ್ತು. ಆದರೆ ಮಕ್ಕಳ ಲೈಂಗಿಕ ಶೋಷಣೆ ಎನ್ನುವುದು ಅಂತಾರಾಷ್ಟ್ರೀಯ ಆಯಾಮವನ್ನು ಹೊಂದಿರುವ ಗಂಭೀರ ಸ್ವರೂಪದ ಸಮಸ್ಯೆಯಾಗಿದ್ದು, ಇದನ್ನು ನಿಭಾಯಿಸಲು ಸಮಗ್ರವಾದ ಕಾನೂನಿನ ಅಗತ್ಯವಿದೆ. ಈ ನಿಟ್ಟಿನಲ್ಲಿ ಕೇಂದ್ರ ಕಾನೂನನ್ನು ಇನ್ನಷ್ಟು ಬಿಗಿಗೊಳಿಸಲು ಮುಂದಾಗಿದೆ. ಹೊಸ ಕಾನೂನಿನಲ್ಲಿ ಮಕ್ಕಳ ಮತ್ತು ಮಹಿಳೆಯರಿಗೆ ಸಂಬಂಧಪಟ್ಟ  ಪೋರ್ನೋಗ್ರಫಿ ವೀಡಿಯೊ ಇಟ್ಟುಕೊಳ್ಳುವುದು ಕೂಡಾ ಅಪರಾಧವಾಗಲಿದೆ ಹಾಗೂ ಈ ಕೃತ್ಯ ಎಸಗಿದವರಿಗೆ ಕನಿಷ್ಠ 5 ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸುವ ಅಂಶವನ್ನು ಸೇರ್ಪಡೆಗೊಳಿಸಲಾಗಿದೆ.

 

ಪ್ರಸ್ತುತ ದಂಡ ಸಂಹಿತೆಯ ಸೆಕ್ಷನ್‌ 292 ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್‌ 67 ಮಕ್ಕಳ ಪೋರ್ನೋಗ್ರಫಿಗೆ ಸಂಬಂಧಪಟ್ಟ ಅಪರಾಧಗಳಿಗೆ ಅನ್ವಯವಾಗುತ್ತದೆ. ಸೆಕ್ಷನ್‌ 292 ಅಸಭ್ಯ ವೀಡಿಯೊ, ಫೊಟೊ ಇತ್ಯಾದಿಗಳ ವಿನಿಮಯವನ್ನು ಅಪರಾಧವೆಂದು ಪರಿಗಣಿಸುತ್ತದೆ. ಅಂತೆಯೇ ಸೆಕ್ಷನ್‌ 67 ಇಂಥ ವೀಡಿಯೊ, ಫೊಟೊ ಮತ್ತಿತರ ಮಾಹಿತಿಗಳನ್ನು ಎಲೆಕ್ಟ್ರಾನಿಕ್‌ ಮಾಧ್ಯಮದ ಮೂಲಕ ಪ್ರಕಟನೆ,ಹಂಚಿಕೆ ಇತ್ಯಾದಿಗಳನ್ನು ಮಾಡುವುದನ್ನು ಅಪರಾಧವೆಂದು ಹೇಳುತ್ತದೆ. ಇದರ ಜತೆಗೆ ಲೈಂಗಿಕ ಅಪರಾಧಗಳಿಂದ ಮಕ್ಕಳನ್ನು ಸಂರಕ್ಷಿಸುವ ಕಾಯಿದೆಯಿದ್ದು, ಇದು ಕೂಡಾ ಮಕ್ಕಳ ಲೆಂಗಿಕ ಶೋಷಣೆಯನ್ನು ದಂಡನಾರ್ಹ ಅಪರಾಧವೆಂದು ಹೇಳುತ್ತದೆ. ಹೀಗೆ ನಮ್ಮಲ್ಲಿ ಈ ಪಿಡುಗಿಗೆ ಸಂಬಂಧಪಟ್ಟಂತೆ ಹಲವು ಕಾನೂನುಗಳಿದ್ದರೂ ಅದು ಸಮಗ್ರವಾಗಿಲ್ಲ.

 

ಮಹಿಳೆಯರು ಮತ್ತು ಮಕ್ಕಳ ವಿರುದ್ಧ ಲೈಂಗಿಕ ಹಿಂಸೆಯ ಆನ್ಲೈನ್ ವೀಡಿಯೊಗಳ ಪ್ರಸಾರವನ್ನು ನಿಗ್ರಹಿಸಲು ಆನ್ಲೈನ್ ಕಂಪನಿಗಳ ವಿಫಲತೆಯ   ಕಾರಣಗಳು :

 

  • ಹಿಂದಿನ ಮಾರ್ಗದರ್ಶಿಗಳು ಸೇವಾ ಪೂರೈಕೆದಾರರ ಅನುಸರಣೆ ಕಳಪೆಯಾಗಿರುವದು ಕಂಡು ಬರುತ್ತದೆ.
  • “ಕಾನೂನುಬಾಹಿರ” ವಿಷಯದ ಮೂಲವನ್ನು ಅಂದರೆ ಅದು ಎಲ್ಲಿಂದ ಪ್ರಸಾರ ವಾಗಿದೆ ಎಂಬುದನ್ನು ಕಂಡುಹಿಡಿಯುವುದು   ಒಂದು  ದೊಡ್ಡ ಸವಾಲಾಗಿದೆ.
  • ಇದಕ್ಕೆ ಉತ್ತಮ ಉದಾಹರಣೆ ಎಂದರೆ ಕೆಲ ತಿಂಗಳ ಹಿಂದೆ ಉತ್ತರ ಪ್ರದೇಶದಲ್ಲಿ ಬಯಲಾಗಿರುವ ಬೃಹತ್‌ ಮಕ್ಕಳ ಪೋರ್ನೋಗ್ರಫಿ ಜಾಲದ ಪ್ರಕರಣವನ್ನು ನೆನಪಿಸಿಕೊಳ್ಳಬಹುದು. ವಾಟ್ಸಪ್‌ ಗ್ರೂಪ್‌ ಮೂಲಕ ಮಕ್ಕಳ ಲೈಂಗಿಕ ಶೋಷಣೆಯ ವೀಡಿಯೊ ಮತ್ತು ಫೋಟೊಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದ ಈ ಗ್ರೂಪಿನಲ್ಲಿ 40 ದೇಶಗಳ 250 ಸದಸ್ಯರಿದ್ದರು. ಅಮೆರಿಕ, ಚೀನ, ಬ್ರಝಿಲ್‌, ಕೆನ್ಯಾ, ನೈಜೀರಿಯಾ, ಮೆಕ್ಸಿಕೊ, ಪಾಕಿಸ್ಥಾನದಂಥ ದೇಶಗಳ ಜನರು ಸದಸ್ಯರಾಗಿದ್ದರು. ಪೊಲೀಸರು ಭಾರತದಲ್ಲಿ ಈ ಗ್ರೂಪನ್ನು ನಿಭಾಯಿಸುತ್ತಿದ್ದವರನ್ನೇನೊ ಸೆರೆ ಹಿಡಿದಿದ್ದಾರೆ.

 

  • ಉಳಿದವರ ಪತ್ತೆಗಾಗಿ ಸಿಬಿಐ ಮೂಲಕ ಇಂಟರ್‌ಪೋಲ್‌ಗೆ ಮನವಿ ಸಲ್ಲಿಸಲಾಗಿದೆ. ಅಲ್ಲಿಗೆ ಈ ಪ್ರಕರಣ ಸ್ಥಗಿತಗೊಂಡಿದೆ. ಹೇಗೆ ಮಕ್ಕಳ ಪೋರ್ನೋಗ್ರಫಿ ಜಾಲ ವಿಶ್ವವ್ಯಾಪಿಯಾಗಿ ವ್ಯಾಪಿಸಿಕೊಂಡಿದೆ ಎನ್ನುವುದನ್ನು ಈ ಪ್ರಕರಣದಿಂದ ಅರ್ಥ ಮಾಡಿಕೊಳ್ಳಬಹುದು. ಬಹುತೇಕ ಪ್ರಕರಣಗಳಲ್ಲಿ ವೀಡಿಯೊ ಚಿತ್ರಿಕೆ ಅಥವಾ ಫೊಟೋಗಳನ್ನು ವಿನಿಮಯಿಸಲು ಸಾಮಾಜಿಕ ಮಾಧ್ಯಮದ ಸರ್ವರ್‌ ಯಾವುದೋ ದೂರದ ದೇಶದಲ್ಲಿರುವುದರಿಂದ ಪ್ರಕರಣವನ್ನು ಬೇಧಿಸುವುದು ಸಾಧ್ಯವಾಗುವುದಿಲ್ಲ. ಹೊಸ ಕಾನೂನು ರಚಿಸುವಾಗ ಇಂಥ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಅಗತ್ಯ.

 

  • ಅಪರಾಧಿಗಳ ಗುರುತಿಗಾಗಿ ಕಾನೂನು ಜಾರಿ ಸಂಸ್ಥೆಗಳ ನೆರವು ವಿಳಂಬವಾಗಿದೆ ಮತ್ತು ಸಂವಹನವನ್ನು ಅಂತ್ಯಗೊಳಿಸಲು ಡೇಟಾವನ್ನು ಒದಗಿಸಲಾಗುವುದಿಲ್ಲ.
  • ತಮ್ಮ ವೇದಿಕೆಯಲ್ಲಿ ಸಾರ್ವಜನಿಕರಿಗೆ ಸುಲಭವಾಗಿ ವರದಿ ಮಾಡುವ ಕಾನೂನುಬಾಹಿರ” ವಿಷಯದ ವ್ಯವಸ್ಥೆಯನ್ನು ಸ್ಥಾಪಿಸಲು ಸರ್ಕಾರವು ಸೂಚನೆ ನೀಡಿತು. ಫೇಸ್ಬುಕ್ ಭಾಗಶಃ ಅನುಸರಿಸಿದ್ದರೂ,  ವಾಟ್ಸ್ ಅಪ್  ಮತ್ತು  ಟ್ವಿಟ್ಟರ್  ಇನ್ನೂ ಅನುಸರಿಸಬೇಕಿದೆ.

 

 

ಭಾರತದ ಸಂದರ್ಭದಲ್ಲಿ ಈ ಘಟನೆಗಳನ್ನು ಅವಲೋಕಿಸುವಾಗ ಗಮನಿಸಬೇಕಾದ ಅಂಶವೆಂದರೆ, ಸಾಮಾನ್ಯವಾಗಿ ದಲಿತ ವರ್ಗದ ಮೇಲಿನ ದೌರ್ಜನ್ಯಗಳ ತೀವ್ರತೆ ಹೆಚ್ಚು. ಉದಾಹರಣೆಗೆ; ಮಾನವ ಹಕ್ಕುಗಳ ಆಯೋಗದ ವರದಿ ಅನ್ವಯ, ನಮ್ಮ ದೇಶದಲ್ಲಿ ಪ್ರತಿದಿನ ಮೂರು ದಲಿತ ಮಹಿಳೆಯರು ಅತ್ಯಾಚಾರಕ್ಕೆ ಒಳಗಾಗುತ್ತಾರೆ. ಪ್ರತಿದಿನ ಇಬ್ಬರು ದಲಿತರು ಕೊಲೆಯಾಗುತ್ತಾರೆ. ಪ್ರತಿದಿನ ಎರಡು ದಲಿತ ಮನೆಗಳಿಗೆ ಬೆಂಕಿ ಬೀಳುತ್ತದೆ. ಪ್ರತಿದಿನ ಹನ್ನೊಂದು ದಲಿತರು ಒಂದಲ್ಲ ಒಂದು ರೀತಿಯ ದೈಹಿಕ ಹಲ್ಲೆಗೆ ಒಳಗಾಗುತ್ತಾರೆ. ವಾಸ್ತವದಲ್ಲಿ ಮಹಿಳೆ ಮತ್ತು ಮಕ್ಕಳ ಮೇಲೆ ನಡೆಯುವ ದೌರ್ಜನ್ಯ ಪ್ರಕರಣಗಳಲ್ಲಿ ಹತ್ತರಲ್ಲಿ ಒಂದು ಮಾತ್ರ ಬೆಳಕಿಗೆ ಬರುತ್ತದೆ. ಉಳಿದ ಒಂಬತ್ತು ಪ್ರಕರಣಗಳು ಸಮಾಜ, ಮರ್ಯಾದೆ, ಬಡತನ, ದೌರ್ಜನ್ಯವೆಸಗುವ ಸಿರಿವಂತರ ಹಣ ಅಥವಾ ತೋಳ್ಬಲದ ಅಬ್ಬರದ ಕಾರಣಕ್ಕೆ ಬೆಳಕಿಗೆ ಬರುವುದೇ ಇಲ್ಲ. ಇನ್ನು ವರದಿಯಾದ ಪ್ರಕರಣಗಳಲ್ಲಿ ನ್ಯಾಯಸಮ್ಮತ ತೀರ್ಪು ದೊರೆಯುವುದು ಮತ್ತೊಂದು ದೊಡ್ಡ ಸವಾಲು.

 

ಸರ್ಕಾರ ಕೈಗೊಳ್ಳಬೇಕಾದ ಕ್ರಮಗಳು:

 

  • ಐಟಿ ಕಾಯಿದೆ  ವಿಭಾಗಗಳ ಅಡಿಯಲ್ಲಿ  ಕಾನೂನು ಬಾಹಿರ ವಿಷಯ ತೆಗೆದುಹಾಕುವ ಕೋರಿಕೆಯನ್ನು ಅನುಸರಿಸಲು  ತೆಗೆದುಕೊಳ್ಳುವ  ಸಮಯವನ್ನು ತಗ್ಗಿಸಲು ನಿರ್ದೇಶನಗಳನ್ನು  ಜಾರಿಗೆ ಬರಬೇಕಿದಿ
  • ಲೈಂಗಿಕವಾಗಿ ಹಿಂಸಾತ್ಮಕ ವಿಷಯದ ಗುರುತಿಸುವಿಕೆ ಮತ್ತು ತೆಗೆದುಹಾಕುವಿಕೆಗೆ ಪ್ರತಿ ಕಂಪನಿಗಳು ಪ್ರತ್ಯೇಕ ವಿಭಾಗ ವನ್ನು ರಚಿಸಬೇಕು ಎಂದು ಸೂಚಿಸಬೇಕು
  • ಅಂತಹ ವಿಷಯದ ಮೂಲವನ್ನು ಗುರುತಿಸಲು ಮಧ್ಯವರ್ತಿಗಳು ಕಾನೂನು ಜಾರಿ ಸಂಸ್ಥೆಗಳೊಂದಿಗೆ ಕೆಲವು  ಸಂಬಂಧ ಪಟ್ಟ ಡೇಟಾವನ್ನು ಹಂಚಿಕೊಳ್ಳಬೇಕು.ಆಗ ಕಾನೂನು ಜಾರಿ ಸಂಸ್ಥೆಗಳಿಗೆ……CLICK HERE TO READ MORE
Share