29th AUGUST-THE HINDU EDITORIAL

ನಮ್ಮ ಐಎಎಸ್ ಅಕಾಡಮಿಯ ಸಂಪಾದಕೀಯ ಒಳನೋಟ

 

ಭಾರತದಲ್ಲಿ ಕುಷ್ಠರೋಗ ಕುಂಠಿತ ವಾಗಿದೆಯೇ ?

 

SOURCE-THE HINDU https://www.thehindu.com/opinion/editorial/restoring-dignity/article24794954.ece

 

ಈ ಆರ್ಟಿಕಲ್ ನಿಂದ ಮುಖ್ಯ ವಾಗಿ ತಿಳಿದುಕೊಳ್ಳಬೇಕಾದ ಅಂಶಗಳು 

 

  • ಕುಷ್ಠರೋಗ ಎಂದರೇನು?
  • ಕುಷ್ಠರೋಗ ನಡೆದು ಬಂದ ಹಾದಿ
  • ಕುಷ್ಠರೋಗ ಪತ್ತೆ ಹೇಗೆ?
  • ನಿರ್ಲಕ್ಷಿಸಲಾಗದ ಲಕ್ಷಣಗಳು ಯಾವವು?
  • ಹೊರ ಮೈಮೇಲಿನ ನರಗಳ ತೊಂದರೆಯನ್ನು ವಿವರಿಸಿ.
  • ಕುಷ್ಠರೋಗಕ್ಕೆ ತುತ್ತಾದ ಮೇಲೆಯೂ ಸಾಮಾನ್ಯ ಜೀವನ ನಡೆಸಬಹುದೆ?
  • ಕುಷ್ಠರೋಗಕ್ಕೆ ಚಿಕಿತ್ಸೆ :
  • ಭಾರತಕ್ಕೆ ಸಂಬಂದಿದ ಕುಷ್ಠರೋಗ ಪ್ರಕರಣಗಳ ಪ್ರಮುಖ ಸಂಗತಿಗಳು
  • ರಾಷ್ಟ್ರೀಯ ಕುಷ್ಠ ರೋಗ ನಿರ್ಮೂಲನೆ ಕಾರ್ಯಕ್ರಮ

         ಉದ್ದೇಶಗಳು

  • ಸವಾಲುಗಳು
  • ಕುಷ್ಠರೋಗಕ್ಕೆ ಸಂಬಂದಿದಿದಂತೆ ಕಾನೂನು ಆಯೋಗದ ವರದಿ
  • ಕುಷ್ಠ ರೋಗಕ್ಕೆ ಸಂಬಂಧಿಸಿದಂತೆ ಜಾಗತಿಕ ಪ್ರಯತ್ನಗಳು
  • ಇತ್ತೀಚಿಗೆ ಕೈಗೊಂಡಿರುವ ಸರಕಾರದ ಉಪಕ್ರಮಗಳು
  • ಮುಂದಿನ ಹಾದಿ

 

ಸನ್ನಿವೇಶ

  • ಇತ್ತೀಚೆಗೆ ಸರ್ವೋಚ್ಚ ನ್ಯಾಯಾಲಯವು ಕುಷ್ಠರೋಗದ ವಿರುದ್ಧ ಕಳಂಕ ಮತ್ತು ತಾರತಮ್ಯವನ್ನು ಕೊನೆಗೊಳಿಸಲು ಧನಾತ್ಮಕ ಕಾನೂನುಗಳನ್ನು ತರಲು ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಿದೆ.

 

 

ಕುಷ್ಠರೋಗ ಎಂದರೇನು?

 

  • ಅನಾದಿ ಕಾಲದಿಂದಲೂ ಕುಷ್ಠರೋಗವನ್ನು ಒಂದು ಶಾಪ­ವೆಂದು ಪರಿಗಣಿಸಲಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕುಷ್ಠರೋಗವನ್ನು “ಬಹುಔಷಧಿ ಚಿಕಿತ್ಸಾ ಪದ್ಧತಿ” ಯಂತಹ ಚಿಕಿತ್ಸೆಯಿಂದ ಗುಣಪಡಿಸುವುದಷ್ಟೇ ಅಲ್ಲ, ಅದರಿಂದ ಉಂಟಾಗುವ ಅಂಗವೈಕಲ್ಯವನ್ನೂ ತಡೆಯಬಹುದು…

 

  • ಕುಷ್ಠರೋಗವು “ಮೈಕೋಬ್ಯಾಕ್ಟೀರಿಯಂ ಲೆಪ್ರೇ” ಎಂಬ ಸೂಕ್ಷ್ಮ ಜೀವಾಣುವಿನಿಂದ ಬರುವ ರೋಗ.
  • ಇದು ಮುಖ್ಯವಾಗಿ ಚರ್ಮ ಮತ್ತು ನರಗಳ ಮೇಲೆ ಪ್ರಭಾವ ಬೀರುತ್ತದೆ. ಲಿಂಗ, ವಯಸ್ಸಿನ ಭೇದಭಾವವಿಲ್ಲದೆ ಯಾರಿಗಾದರೂ ಬರಬಹುದು. ಸಕಾಲದಲ್ಲಿ ಚಿಕಿತ್ಸೆ ನೀಡದಿದ್ದರೆ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಆರಂಭದಲ್ಲಿಯೇ ರೋಗ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ನೀಡಿದರೆ ಅಂಗವೈಕಲ್ಯವನ್ನು ತಡೆಗಟ್ಟಬಹುದು.

 

ಕುಷ್ಠರೋಗ ನಡೆದು ಬಂದ ಹಾದಿ

  • ಕುಷ್ಠರೋಗ ಬಹು ಪುರಾತನ ಕಾಲದಿಂದ ಇರುವ ರೋಗ. ಉಷ್ಣವಲಯದಲ್ಲಿ ಇದರ ವ್ಯಾಪ್ತಿ ಹಾಗೂ ತೀವ್ರತೆ ಹೆಚ್ಚು. ಇದು ಹೇಗೆ ಅಂಕುರಿಸಿತು, ಹೇಗೆ ಹರಡಿತು-ಎಂಬುದು ಇನ್ನೂ ಊಹೆಯಾಗಿಯೇ ಇದೆ.
  • ಇದು ಬಹುಶಃ ಆಫ್ರಿಕ ದೇಶದಲ್ಲಿ ಅಂಕುರಿಸಿ ಭಾರತ ಚೀನಗಳಿಗೂ ಈಜಿಪ್ಟಿನ ಮಾರ್ಗವಾಗಿ ಯೂರೋಪಿಗೂ ಅನಂತರ ಅಮೆರಿಕ ದೇಶಗಳಿಗೂ ಹರಡಿರಬೇಕು. ಇಷ್ಟು ದೇಶಗಳನ್ನು ಈ ರೋಗ ಕಾಡಿದ್ದರೂ ಭಾರತದ ಪುರಾತನ ಗ್ರಂಥಗಳಲ್ಲಿ ಮಾತ್ರ ಇದರ ಬಗ್ಗೆ ವರದಿ ಉಂಟು.
  • 1ನೆಯ ಶತಮಾನದಲ್ಲಿದ್ದ ಚರಕ ಸುಶ್ರುತರ ಕಾವ್ಯಗಳಲ್ಲೂ 6ನೆಯ ಶತಮಾನದ ವಾಗ್ಭಟ ಬರೆದ ಸಂಹಿತೆಗಳಲ್ಲಿಯೂ ರೋಗದ ಲಕ್ಷಣ ಮತ್ತು ಚಿಕಿತ್ಸಾ ಕ್ರಮಗಳನ್ನು ವಿವರಿಸಿದ್ದಾರೆ. ಕ್ರಿ.ಪೂ. 5ನೆಯ ಶತಮಾನದ ಮನುಸ್ಮøತಿ ಮತ್ತು ಅದಕ್ಕೂ ಹಿಂದಿನ ಅಥರ್ವವೇದದಲ್ಲಿ (ಕ್ರಿ.ಪೂ. 10ನೆಯ ಶತಮಾನ) ಸಹ ಕುಷ್ಠರೋಗದ ಪ್ರಸ್ತಾಪ ಬಂದಿದೆ. ಚರಕ ಸಂಹಿತದಲ್ಲಿ ಕುಷ್ಠರೋಗದ ಏಳು ಭಿನ್ನರೂಪಗಳನ್ನು ವಿವರಿಸಲಾಗಿದೆ.
  • ಇದರಲ್ಲಿ ಕೆಲವು ರೂಪಗಳು ಆಧುನಿಕ ವೈದ್ಯಶಾಸ್ತ್ರದರೀತ್ಯಾ ಕುಷ್ಠರೋಗ ಚಿಹ್ನೆಗಳಿಗೆ ಹೋಲುತ್ತವೆ. ಮತ್ತೆ ಕೆಲವು ಬೇರೆ ಚರ್ಮರೋಗವಿದ್ದರೂ ಇರಬಹುದೆಂಬ ಶಂಕೆ ಬರುವುದು. ಚರ್ಮದ ಅರಿವಳಿಕೆ, ಬಣ್ಣಗುಂದಿಕೆ. ಕುಸಿದ ಮೂಗು, ಅಂಗವಿಕಾರ ಮೊದಲಾದ ಈ ರೋಗದ ಲಕ್ಷಣಗಳನ್ನು ಮಾತ್ರವಲ್ಲ ಇದು ಅಂಟುರೋಗವೆಂಬುದನ್ನೂ ಆ ಕಾಲದಲ್ಲಿಯೇ ಜನ ಸ್ಪಷ್ಟವಾಗಿ ತಿಳಿದಿದ್ದರು. ಕುಷ್ಠರೋಗಿಯೊಬ್ಬ ಅಂದು ತನ್ನ ಸ್ವಂತ ಹಕ್ಕುಗಳನ್ನೂ ಮತಧರ್ಮವನ್ನೂ ಕಳೆದುಕೊಳ್ಳುತ್ತಿದ್ದ. ಆದರೆ ಜನಜೀವನದಿಂದ ಅವನನ್ನು ಬಹಿಷ್ಕರಿಸುತ್ತಿರಲಿಲ್ಲ. ಪಾಶ್ಚಾತ್ಯ ರಾಷ್ಟ್ರಗಳಲ್ಲಾದರೋ ಕುಷ್ಠರೋಗಿ ಜನ ಸಂಪರ್ಕಕ್ಕೆ ಬರುವಂತಿರಲಿಲ್ಲ ಅವನನ್ನು ಪ್ರತ್ಯೇಕಿಸುತ್ತಿದ್ದರು. ಮಧ್ಯಯುಗದ ಯೂರೋಪು ಕುಷ್ಠರೋಗ ಪೀಡಿತವಾಗಿತ್ತು. ಆದರೆ ಬರಬರುತ್ತ ಇದು ವಿಮುಕ್ತಗೊಂಡದ್ದು ಒಂದು ಸೋಜಿಗ.

 

  • ಕೈಗಾರಿಕ ಕ್ರಾಂತಿಯಿಂದ ಜೀವನಮಟ್ಟ ಏರಿದ್ದೂ ಕುಷ್ಠರೋಗಗಳನ್ನೆಲ್ಲ ಕಡ್ಡಾಯವಾಗಿ ಅದಕ್ಕಾಗಿಯೇ ಊರ ಹೊರಗಡೆ ಕಟ್ಟಿದ ಕುಷ್ಠಗೃಹಗಳಲ್ಲಿ ಬೇರೆಯಾಗಿಡುತ್ತಿದ್ದ ಪದ್ಧತಿಗಳೂ ಇದಕ್ಕೆ ಸಹಾಯಕವಾಗಿರಬೇಕು. ಪ್ರಪಂಚದಲ್ಲಿ ಇಂದು 12 ದಶಲಕ್ಷಕ್ಕೂ ಕಡಿಮೆ ಇಲ್ಲದಷ್ಟು ಜನ ಕುಷ್ಠರೋಗಿಗಳಿದ್ದಾರೆಂದು ಅಂದಾಜು. ಭಾರತದಲ್ಲಿ ಸುಮಾರು 5 ದಶಲಕ್ಷ ರೋಗಿಗಳಿರಬಹುದು. ಕರ್ಣಾಟಕದಲ್ಲಿ ಸುಮಾರು 1.5 ಲಕ್ಷ ಜನ ರೋಗಪೀಡಿತರಿರುವರೆಂದು ಅಂದಾಜಾಗಿದೆ. ಭಾರತದಲ್ಲಿ ಪ್ರತಿ 1,000 ಜನಸಂಖ್ಯೆಯಲ್ಲಿ 6.4 ಮಂದಿ ಕುಷ್ಠ ರೋಗಗ್ರಸ್ತರಾಗಿರುವರೆಂದು ತಿಳಿದಿದೆ.

 

ಕುಷ್ಠರೋಗ ಪತ್ತೆ ಹೇಗೆ?

  • ಸ್ಪರ್ಶ ಜ್ಞಾನವಿಲ್ಲದ ಚರ್ಮದ ಮೇಲಿನ ಮಚ್ಚೆ (ಶೀತ, ಉಷ್ಣ, ಸ್ಪರ್ಷ, ಅಥವಾ ನೋವಿನ ಅರಿವು ಆಗದು)
  • ಈ ಮಚ್ಚೆಗಳು ತಿಳಿ ಬಿಳಿ ಅಥವಾ ಕೆಂಪು ಇಲ್ಲವೇ ತಾಮ್ರ ವರ್ಣದ್ದಾಗಿದ್ದು, ಯಾವುದೇ ಗಾತ್ರದಲ್ಲಿರಬಹುದು. ಕೆಲವೊಮ್ಮೆ ಉಬ್ಬಿದಂತೆಯೂ ಕಾಣಬಹುದು.
  • ಇವುಗಳಲ್ಲಿ ಯಾವುದೇ ಲಕ್ಷಣಗಳು ಕಂಡು ಬಂದರೂ ಸಮೀಪದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ತಪಾಸಣೆಗೊಳಪಡಬೇಕು.

 

ನಿರ್ಲಕ್ಷಿಸಲಾಗದ ಲಕ್ಷಣಗಳು ಯಾವವು?

  • ತಕ್ಷಣ ಕಾಣಿಸಿಕೊಳ್ಳುವ ಆಯಾಸ, ಅಶಕ್ತ ಸ್ನಾಯುಗಳು, ಅಸಮರ್ಥ ಕೈಕಾಲುಗಳು; ಹೊರಮೈಮೇಲಿನ ನರಗಳು ಮೆದುವಾಗಿ, ಬಾತುಕೊಂಡು ನೋವಾಗುವುದು, ಕೀಲುಗಳಲ್ಲಿ ನೋವು; ಕೆಂಪಾಗಿರುವ, ನೋವಿರುವ ಅಥವಾ ನೀರಾಡುವ ಕಣ್ಣುಗಳು, ಜೊತೆಗೆ ದೃಷ್ಟಿ ಮಂಜಾಗುವುದು; ಕೈ ಕಾಲುಗಳು, ಬೆರಳುಗಳಲ್ಲಿ ಬಾವು ಕಾಣಿಸಿಕೊಳ್ಳುವುದು ಇತ್ಯಾದಿ.

 

ಹೊರ ಮೈಮೇಲಿನ ನರಗಳ ತೊಂದರೆಯನ್ನು ವಿವರಿಸಿ.

  • ಹೊರಮೈಮೇಲಿನ ನರಗಳು ಮೆದುವಾಗಿ, ಬಾತುಕೊಂಡು ನೋವಾಗಬಹುದು (ಹಗ್ಗದ ಹಾಗೆ) ಸಾಮಾನ್ಯವಾಗಿ ಕಿವಿಯ ಹಿಂದೆ, ಕೈ ಮತ್ತು ಕಾಲುಗಳಲ್ಲಿನ ನರಗಳು ಬಾತುಕೊಳ್ಳಬಹುದು.
  • ಬೆರಳುಗಳ ತುದಿ ಮತ್ತು ಪಾದಗಳಲ್ಲಿ ಸ್ಪರ್ಷಜ್ಞಾನ ಇಲ್ಲದಿರುವುದು.
  • ಸ್ನಾಯುಗಳ ದೌರ್ಬಲ್ಯ
  • ಚರ್ಮದಲ್ಲಿ ತದ್ದು, ಚರ್ಮ ದಪ್ಪಗಾಗುವಿಕೆ
  • ಮರುಕಳಿಸುವ ಗಾಯ /ಸುಟ್ಟ ಗಾಯದ ಗುರುತುಗಳು; ಅಂಗೈ ಹಾಗೂ ಅಂಗಾಲುಗಳಲ್ಲಿ ಪದೇ ಪದೇ ಕಾಣಿಸಿಕೊಳ್ಳುವ ನೋವಿಲ್ಲದ ಹುಣ್ಣುಗಳು

 

ಕುಷ್ಠರೋಗಕ್ಕೆ ತುತ್ತಾದ ಮೇಲೆಯೂ ಸಾಮಾನ್ಯ ಜೀವನ ನಡೆಸಬಹುದೆ?

  • ಕುಷ್ಠರೋಗಕ್ಕೆ ತುತ್ತಾದ ವ್ಯಕ್ತಿಯು ಚಿಕಿತ್ಸೆ ಪಡೆಯುವಾಗ ಮನೆಯಲ್ಲಿಯೇ ಇರಬಹುದು ಹಾಗೂ ಮಾಮೂಲಿ ಜೀವನ ನಡೆಸಬಹುದು. ಉದಾ: ಶಾಲೆಗೆ ಹೋಗುವುದು, ಕೆಲಸಕ್ಕೆ ಹೋಗುವುದು, ಆಟವಾಡುವುದು, ಮದುವೆಯಾಗುವುದು ಮಕ್ಕಳನ್ನು ಪಡೆಯುವುದು. ಬಹುಔಷಧಿ ಚಿಕಿತ್ಸೆಯನ್ನು ಸರಿಯಾಗಿ ಪಡೆಯದೇ ಇರುವ ರೋಗಿಯು ಈ ಸೋಂಕನ್ನು ಇತರರಿಗೆ, ವಿಶೇಷವಾಗಿ ಮನೆಯಲ್ಲಿರುವ ಮಕ್ಕಳಿಗೆ ಹರಡಬಹುದು. ಬಹುಔಷಧಿ (ಎಂ.ಡಿ.ಟಿ) ಚಿಕಿತ್ಸೆಯು ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ದೊರೆಯುತ್ತದೆ. ಇದು ಸುರಕ್ಷಿತ ಹಾಗೂ ಪರಿಣಾಮಕಾರಿ. ಚಿಕಿತ್ಸೆ ಪಡೆದ ರೋಗಿಯು ಸೋಂಕನ್ನು ಹರಡುವುದಿಲ್ಲ. ಬಹು ಔಷಧಿ ಚಿಕಿತ್ಸೆಯು ಗರ್ಭಿಣಿಯರಿಗೂ ಸುರಕ್ಷಿತ.

 

ಕುಷ್ಠರೋಗಕ್ಕೆ ಚಿಕಿತ್ಸೆ :

 

  • ಕಳೆದ 25 ವರ್ಷಗಳಲ್ಲಿ ರೋಗದ ಚಿಕಿತ್ಸೆ ಮತ್ತು ಚಿಕಿತ್ಸೆಯ ಫಲಿತಾಂಶ ಬಹುಮಟ್ಟಿಗೆ ಉತ್ತಮಗೊಂಡಿವೆ. ಹಿಂದೆ ಚಾಲಮೂಗ್ರ ಮತ್ತು ಹಿಡಿನೋಕಾರ್ಪಸ್ ಎಣ್ಣೆಗಳಿಂದ ತಯಾರಾದ ಔಷಧಿಗಳನ್ನು ಬಿಟ್ಟರೆ ಬೇರೆ ಯಾವ ಔಷಧಿಗಳೂ ಇರಲ್ಲಿಲ್ಲ. ಇವೂ ಅಷ್ಟು ಪ್ರಯೋಜನಕಾರಿಗಳಾಗಿರಲಿಲ್ಲ. 25 ವರ್ಷಗಳಿಂದ ಬಳಿಕೆಯಲ್ಲಿರುವ ಡ್ಯಾಪ್‍ಸೋನ್ ಅತ್ಯುಪಯುಕ್ತವಾಗಿ ಕಂಡುಬಂದಿದೆ. ಈ ಸಣ್ಣ ಗುಳಿಗೆಗಳನ್ನು ನುಂಗಬಹುದು. ಬೆಲೆ ಸುಲಭ. ಕುಷ್ಠರೋಗದ ಔಷಧಿಗಳಿಗೆ ಇವೆರಡೂ ಮುಖ್ಯ ಗುಣಗಳು. ಡ್ಯಾಪ್‍ಸೋನನ್ನು ಪ್ರಾರಂಭಾವಸ್ಥೆಯಲ್ಲಿ ಸೇವಿಸಿದರೆ ಆ ರೋಗಿ ತನ್ನ ಅಂಗವಿಕಾರವಾಗುವ ಮೊದಲೇ ಪೂರ್ಣವಾಗಿ ಗುಣ ಹೊಂದುವನು.
  • ಸುಮಾರು 6 ರಿಂದ 12 ತಿಂಗಳ ಸೇವನೆಯಿಂದ ಅಂಟುರೋಗಿಗಳು ಅಂಟಿಲ್ಲದಂತೆ ಆಗುತ್ತಾರೆ. ರೋಗಮುಂದುವರಿದ ಮೇಲೆ ಚಿಕಿತ್ಸೆಯನ್ನು ಪ್ರಾರಂಭಿಸಿದರೆ ಅಂಗವಿಕಾರಗಳನ್ನು ಗುಣಪಡಿಸಲಾಗದು, ರೋಗ ಮಾತ್ರ ವಾಸಿಯಾಗಬಹುದು. ಈ ಔಷಧಿಯ ಉಪಯೋಗದಲ್ಲಿ ಕೆಲವು ಭಿನ್ನಾಭಿಪ್ರಾಯಗಳಿವೆ.
  • ದಿನವಹಿ ಸೇವಿಸಬೇಕಾದ ಪರಿಮಾಣ ಎಷ್ಟು ಮತ್ತು ಸೇವನೆಯ ಕಾಲಾವಧಿ ಎಷ್ಟು ಎಂಬ ವಿಚಾರದಲ್ಲಿ ಒಮ್ಮತವಿಲ್ಲ. 20 ವರ್ಷಗಳ ಹಿಂದೆ ಕೊಡುತ್ತಿದ್ದ ಪರಿಮಾಣಕ್ಕಿಂತ ಬಹು ಕಡಿಮೆ ಸಾಕು ಎನ್ನುವುದು ಈಚಿನ ಮತ. ಈ ಔಷಧಿಗಳನ್ನು ವೈದ್ಯರ ಸಲಹೆಯಂತೆ ಸೇವಿಸಬೇಕು.
  • ಡ್ಯಾಪ್‍ಸೋನ್ ಚಿಕಿತ್ಸೆಯಲ್ಲಿ ಎರಡು ಮುಖ್ಯ ತೊಡಕುಗಳಿವೆ. ಕೆಲವುವೇಳೆ ದಂಡಾಣುಗಳು ಈ ಔಷಧಿಗೆ ಪ್ರತಿರೋಧ (ರೆಸಿಸ್ಟೆನ್ಸ್) ಪಡೆಯಬಹುದು. ಅಂಥ ರೋಗಿಗಳಲ್ಲಿ ಬೇರೆ ಔಷಧಿ ಪ್ರಯೋಗ ಮಾಡಬೇಕಾಗಬಹುದು. ಮತ್ತೆ ಕೆಲವು ವೇಳೆ ಅದರಲ್ಲೂ ಕುಷ್ಠಗಂತಿ ತೆರನ ರೂಪದಲ್ಲಿ ಆಗುವ ಕೆಂಪು ಗಂತಿ ಕುಷ್ಠಾಂದ ಪ್ರತಿಕ್ರಿಯೆಯನ್ನು ಹತೋಟಿಗೆ ತರುವುದು ಕಷ್ಟಸಾಧ್ಯ.
  • ಡ್ಯಾಪೊಸೋಸ್ ಪ್ರತಿರೋಧವಿರುವ ರೋಗಿಗಳಲ್ಲಿ ಉಪಯೋಗಿಸಬಹುದಾದ ತಯಾಂಬೂಟೋಸೋನ್, ತಯಾಸಿಟಾಮೈಡ್, ಇಟಿಸಲ್ ಮತ್ತು ಲ್ಯಾಮಾಪ್ರೀನ್ ಎಂಬ ಹೊಸ ಔಷಧಗಳಿವೆ. ಇವನ್ನೆಲ್ಲಾ ಡ್ಯಾಪ್‍ಸೋನ್ ಪ್ರತಿರೋಧದಲ್ಲಿ ಬದಲಿ ಔಷಧಿಗಳಾಗಿ ಉಪಯೋಗ ಮಾಡಬಹುದು. ಲ್ಯಾಮಪ್ರೀನ್ ಕೆಂಪುಗಂತಿ ಕುಷ್ಠಾಂದ ಪ್ರತಿಕ್ರಿಯೆ ಶಮನಕ್ಕೂ ಸಹಾಯಕ. ರೋಗದ ಪ್ರಾರಂಭದಲ್ಲಿ ಚಿಕಿತ್ಸೆ ಪಡೆಯುವವರಿಗೆ ಕಾಲು ಕೈ ಮತ್ತು ಮುಖದಲ್ಲಿ ಅಂಗವಿಕಾರಗಳಾಗುತ್ತವೆ. ಇಂಥ ರೋಗಿಗಳಿಗೆ ಶಸ್ತ್ರ ಚಿಕಿತ್ಸೆಯಿಂದ ಕೈ ಕಾಲುಗಳ ಬಳಕೆಯನ್ನು ತಕ್ಕಮಟ್ಟಿಗೆ ಮೊದಲ ಸ್ಥಿತಿಗೆ ತರಬಹುದು. ಮುಖದ ವಿಕಾರಗಳನ್ನು ಸರಿಪಡಿಸಬಹುದು. ಭೌತರೋಗ ಚಿಕಿತ್ಸೆಯಿಂದ ನಾಶವಾದ ನರಗಳಿಂದಾಗುವ ಪರಿಣಾಮಗಳನ್ನು ಸರಿಪಡಿಸಬಹುದು.

 

 

ಭಾರತಕ್ಕೆ ಸಂಬಂದಿದ ಕುಷ್ಠರೋಗ ಪ್ರಕರಣಗಳ ಪ್ರಮುಖ ಸಂಗತಿಗಳು

 

  • ಜಾಗತಿಕವಾಗಿ ಭಾರತದಲ್ಲಿ ಅತಿ ಹೆಚ್ಚು ಹೊಸ ಕುಷ್ಠರೋಗ ಪ್ರಕರಣಗಳು (58%) ಇದೆ.
  • ಒಟ್ಟು 36 ರಾಜ್ಯಗಳಲ್ಲಿ 34 ರಾಜ್ಯಗಳು ಮತ್ತು ಯುಟಿಗಳು ಕುಷ್ಠರೋಗವನ್ನು ಹೊರಹಾಕುವಿಕೆಯನ್ನು ಸಾಧಿಸಿವೆ.
  • ಛತ್ತೀಸ್ ಘಡ ಮತ್ತು ದಾದ್ರಾ ಮತ್ತು ನಗರ ಹವೇಲಿಯ ಮಾತ್ರ….CLICK HERE TO READ MORE
Share