8th AUGUST MLP-MODEL ANSWERS

8th   AUGUST  MLP

 

NOTE:: ದಯವಿಟ್ಟು  ಗಮನಿಸಿ ಕೆಳಗಿನ ಉತ್ತರಗಳು‘  ‘ಮಾದರಿ ಉತ್ತರಗಳುಎಂಬುದನ್ನು ನೆನಪಿಡಿ. ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ PROPER SOURCE ಎಲ್ಲದೇ ಇರುವುದರಿಂದ  ನಾವು ಮುಖ್ಯ ಪರೀಕ್ಷೆಯಲ್ಲಿ ನೀವು ಯಾವ ರೀತಿರೆಯಬೇಕು ಮತ್ತು ನಿಮ್ಮ ಸಮಯವನ್ನು ಉಳಿಸಲು ಕೊಡುತ್ತಿರುವ  ವಿಸ್ತಾರವಾದ ಸಾರಾಂಶ, ನಾವುಗಳು ಇಲ್ಲಿ ಪದಗಳ ಮಿತಿ ಗಣನೆಗೆ ತೆಗೆದುಕೊಂಡಿಲ್ಲ ಏಕೆಂದರೆ ಒಂದು ಪ್ರಶ್ನೆಗೆ ಎಷ್ಟು ಸಾದ್ಯೋವೊ ಅಷ್ಟು ಇನ್ಫಾರ್ಮಶನ್ ಕೊಟ್ಟಿರುತ್ತೆವೆ. ನಾವು ಒದಗಿಸುತ್ತಿರುವ ವಿಷಯವು ಪ್ರಶ್ನೆಯ ಬೇಡಿಕೆಯನ್ನು ಪೂರೈಸುತ್ತದೆ ಮತ್ತು ಅದೇ ಸಮಯದಲ್ಲಿ ನಿಮಗೆ ಹಿನ್ನೆಲೆ ಮಾಹಿತಿ ರೂಪದಲ್ಲಿ ಹೆಚ್ಚುವರಿ ಅಂಕಗಳನ್ನು ಗಳಿಸಲು ಅನುಕೂಲಕರವಾಗುತ್ತದೆ.

 

GENERAL STUDIES PAPER-1(ಸಾಮಾನ್ಯ ಅಧ್ಯಾಯ)

 

1.What do you understand by three language policy? Critically Examine There is no doubt that English is also gets Important  place  in the In Indianian language .    

(ತ್ರಿ ಭಾಷಾ ನೀತಿ (ತ್ರಿಭಾಷ ಸೂತ್ರ) ಎಂದರೇನು? ಭಾರತಿಯ ಭಾಷೆಗಳಲ್ಲಿ ಇಂಗ್ಲಿಷ್ ಸಹ ಪ್ರಮುಖ ಸ್ಥಾನ ಪಡೆಯುವುದರಲ್ಲಿ ಸಂಶಯವೇ ಇಲ್ಲ  ಎಂಬುದನ್ನು ವಿಮರ್ಶಾತ್ಮಕವಾಗಿ ಪರೀಕ್ಷಿಸಿ . )

250ಪದಗಳು

 

 

ತ್ರಿ ಭಾಷಾ ನೀತಿ

 

ವಿಶ್ವದಲ್ಲಿ ಮೂರು ರೀತಿಯ ಭಾಷಾ ಪರಿಸ್ಥಿತಿಗಳನ್ನು ಕಾಣಬಹುದು. ಒಂದೇ ಒಂದು ಭಾಷೆ ಬಳಕೆಯಲ್ಲಿರುವ ದೇಶಗಳು, ಎರಡು ಭಾಷೆಗಳು ಬಳಕೆಯಲ್ಲಿರುವ ದೇಶಗಳು ಮತ್ತು ಎರಡಕ್ಕಿಂತ ಹೆಚ್ಚು ಎಂದರೆ ಬಹುಭಾಷೆಗಳನ್ನು ಬಳಸುತ್ತಿರುವ ಜನರಿರುವ ದೇಶಗಳು. ಸಾಮಾನ್ಯವಾಗಿ ಒಂದೇ ಭಾಷೆ ಬಳಕೆಯಲ್ಲಿರುವ ದೇಶದಲ್ಲಿ ಅದು ಅಲ್ಲಿಯ ಜನರ ಜೀವನದ ಎಲ್ಲ ಸಂದರ್ಭದಲ್ಲಿಯೂ ಬಳಕೆಗೊಂಡು ಅವರ ಎಲ್ಲ ಅಗತ್ಯಗಳನ್ನು ಪೂರೈಸುತ್ತಿರುತ್ತದೆ.

ಎರಡು ಭಾಷೆಗಳು ಬಳಕೆಯಲ್ಲಿರುವ ದೇಶದಲ್ಲಿ ಎರಡೂ ಬೇರೆ ಬೇರೆ ಗುಂಪಿನ ಜನರ ಮಾತೃಭಾಷೆಗಳಾಗಿರ ಬಹುದು. ಅವು ಎರಡೂ ಗುಂಪುಗಳವರಿಗೂ ಗೊತ್ತಿರಬಹುದು ಅಥವಾ ಒಂದು ಭಾಷೆ ಕೆಲವು ಸಂದರ್ಭಗಳಿಗೆ, ಇನ್ನೊಂದು ಭಾಷೆ ಉಳಿದ ಸಂದರ್ಭ ಗಳಿಗೂ ಅಗತ್ಯವಾಗಿರಬಹುದು. ಬಹುಭಾಷಾ ಸಂದರ್ಭದಲ್ಲಿ ಭಾಷೆಗಳ ಬಳಕೆಯ ಸಂದರ್ಭ ಮತ್ತು ಸಾಧ್ಯತೆಗಳೂ ಬಹುವಾಗಿಯೇ ಇರುತ್ತವೆ. ಬಳಕೆದಾರರಿಗೆ ಆಯ್ಕೆ, ತ್ಯಾಜ್ಯದ ಸಾಧ್ಯತೆಗಳೂ ಸಾಕಷ್ಟು ಇರುತ್ತವೆ.

ಇಂತಹ ಪರಿಸ್ಥಿತಿಯಲ್ಲಿ ಯಾವ ಯಾವ ಸಂದರ್ಭಗಳಲ್ಲಿ ಯಾವ ಯಾವ ಭಾಷೆಗಳು ಬಳಕೆಗೊಳ್ಳಬೇಕು, ಅವುಗಳ ಲಕ್ಷಣಗಳು ಹೇಗಿರಬೇಕು ಮುಂತಾದ ಅಂಶಗಳ ನಿರೂಪಣೆಯೇ

 

 

ಭಾಷಾನೀತಿಯ ಅವಶ್ಯಕತೆ  ಮತ್ತು  ಅದರ  ಕಾರ್ಯ

  • ಭಾಷೆ ಸಮಾಜದಲ್ಲಿ ನಾನಾ ಕಾರ್ಯಗಳನ್ನು ಮಾಡುತ್ತದೆ. ಅದು ಜನರ ಸಂಪರ್ಕ ಮಾಧ್ಯಮ. ಅವರ ಸಂಸ್ಕೃತಿಯ ವಾಹಕ. ಅವರ ಅಭಿವೃದ್ದಿಯ ಸಾಧನ. ಪ್ರತಿಕ್ಷಣವೂ ಅದು ಅವರ ಬುದ್ದಿ ಮತ್ತು ಭಾವಗಳಿಗೆ ಇಂಬು ಕೊಡುತ್ತಿರುತ್ತದೆ. ಅನ್ನ, ನೀರು, ಗಾಳಿಯಷ್ಟೇ ಸಾಮೀಪ್ಯವನ್ನು ಅವರ ಬದುಕಿನೊಟ್ಟಿಗೆ ಪಡೆದುಕೊಂಡಿರುತ್ತದೆ.
  • ಜೀವನದ ವಿವಿಧ ಕ್ಷೇತ್ರಗಳಲ್ಲಿ ಭಾಷೆಯ ಬಳಕೆಯನ್ನು ಆಡಳಿತ ವ್ಯವಸ್ಥೆ ನಿಯಂತ್ರಿಸತೊಡಗಿದ ಮೇಲೆ ಈ ನಿಯಂತ್ರಣದ ರೂಪುರೇಷೆಗಳನ್ನು ಸಹ ಸರ್ಕಾರವೇ ತೀರ್ಮಾನಿಸುತ್ತದೆ.
  • ಭಾಷಾನೀತಿ ಜನಜೀವನದಲ್ಲಿ ಭಾಷೆಯ ಅಥವಾ ವಿವಿಧ ಭಾಷೆಗಳ ಪಾತ್ರವನ್ನು ನಿಯಂತ್ರಿಸುತ್ತದೆ. ಶಿಕ್ಷಣದ ವಿವಿಧ ಹಂತಗಳಲ್ಲಿ ಯಾವ ಮತ್ತು ಎಷ್ಟು ಭಾಷೆಗಳನ್ನು ಮಕ್ಕಳು ಕಲಿಯಬೇಕು ಸರ್ಕಾರವು ತನ್ನ ಆಡಳಿತದ ಬೇರೆಬೇರೆ ಹಂತಗಳಲ್ಲಿ ಯಾವ ಯಾವ ಮತ್ತು ಎಂತಹ ಭಾಷೆಯನ್ನು ಬಳಸಬೇಕು, ಜನರು ಯಾವ ಯಾವ ಭಾಷೆಯ ಮೂಲಕ ಮನೋರಂಜನೆಯನ್ನು ಪಡೆಯಬೇಕು ಇತ್ಯಾದಿ ಪ್ರಶ್ನೆಗಳಿಗೆ ಭಾಷಾನೀತಿ ಸೂಕ್ತ ಮಾರ್ಗದರ್ಶನವಾಗಿರುತ್ತದೆ.

 

ಭಾರತಿಯ ಭಾಷೆಗಳಲ್ಲಿ ಇಂಗ್ಲಿಷ್ ಸಹ ಪ್ರಮುಖ ಸ್ಥಾನ  ಪಡೆದಿದೆ

 

  • ಭಾರತದಲ್ಲಿ ಪ್ರಚಲಿತವಿರುವ ದೇಶೀಯ ಭಾಷೆಗಳೊಂದಿಗೆ ವಿದೇಶೀ ಭಾಷೆಗಳೂ ಬಳಕೆಯಲ್ಲಿವೆ. ಅವುಗಳಲ್ಲಿ ಪ್ರಮುಖವಾಗಿ ಇಂಗ್ಲಿಷ್ ಸಹ ಒಂದಾಗಿದೆ. ಇಂಗ್ಲೀಷರ ಆಳ್ವಿಕೆಯೊಂದಿಗೆ ಆಗಮಿಸಿದ ಇಂಗ್ಲಿಷ್ ಭಾಷೆ ಭಾರತದಲ್ಲಿ ಭದ್ರವಾಗಿ ತಳವೂರಿ ನಿಂತಿದೆ. ಭಾರತ ಸ್ವತಂತ್ರವಾದರೂ ಇಂಗ್ಲಿಷರು ನಮ್ಮ ದೇಶ ಬಿಟ್ಟು ಹೋದರೂ ಅವರ ಭಾಷೆ ನಮ್ಮನ್ನು ಬಿಟ್ಟಿಲ್ಲದಿರುವುದು ಆ ಭಾಷೆಯ ಸಾಮರ್ಥ್ಯದೊಂದಿಗೆ ನಮ್ಮ ಪರಾವಲಂಬನೆಯನ್ನೂ ವ್ಯಕ್ತಗೊಳಿಸುತ್ತದೆ.
  • ನಮಗೆ ಸ್ವಾತಂತ್ರ್ಯ ದೊರೆತಾಗಿನಿಂದ ಇಂಗ್ಲಿಷ್ ಭಾಷೆಯ ಬಗ್ಗೆ ವಿರೋಧ ಇದ್ದೇ ಇದೆ. ಅದರ ಬಗೆಗೆ ವಿರೋಧ ಹೆಚ್ಚಿದಷ್ಟೂ ಶೈಕ್ಷಣಿಕ ಕ್ಷೇತ್ರದಲ್ಲಿ ಅದರ ಪ್ರಾಬಲ್ಯ ಮತ್ತಷ್ಟು ದ್ರುಡವಾಗುತ್ತಾ ಸಾಗುತ್ತಿದೆ. ಸುಮಾರು ಇನ್ನೂರು ವರ್ಷಗಳ ಬಳಕೆಯ ಈ ಭಾಷೆ ಇಷ್ಟೊಂದು ಬೆಟ್ಟದಷ್ಟು ಗಟ್ಟಿಯಾಗಿ ನಿಲ್ಲಬಹುದೆಂದು ಯಾರೂ ಊಹಿಸಿರಲಿಲ್ಲ. ಆದರೆ ನಮ್ಮಲ್ಲಿ ರಾಷ್ಟೀಯ ಭಾವನೆಯೊಂದಿಗೆ ರಾಷ್ಟ್ರ ಭಾಷೆಯ ಪ್ರಶ್ನೆಯೂ ಹುಟ್ಟಿಕೊಂಡಿದೆ. ಇಂಗ್ಲಿಷರು ಭಾರತವನ್ನು ಬಿಟ್ಟು ಹೋದ ಮೇಲೆ ಸ್ವಾಭಾವಿಕವಾಗಿ ದೇಶಪ್ರೇಮಿಗಳ ಮನಸ್ಸಿನಲ್ಲಿ ಸ್ವದೇಶ, ಸ್ವಭಾಷೆ ಇತ್ಯಾದಿ ಭಾವನೆಗಳು ಜಾಗೃತವಾಗಿ ಇಂಗ್ಲೀಷನ್ನು ವಿರೋದಿಸಲಾರಂಭಿಸಿದರು.
  • ಆಡಳಿತದಲ್ಲಿ ಮತ್ತು ಶಿಕ್ಷಣದಲ್ಲಿ ಇಂಗ್ಲಿಷ್ ಭಾಷೆಯನ್ನು ಮುಂದುವರಿಸುವುದರ ಔಚಿತ್ಯವನ್ನು ಜನರು ಪ್ರಶ್ನಿಸಲಾರಂಭಿಸಿದರು. ಇದರೊಂದಿಗೆ ಇಂಗ್ಲಿಷ್ ಭಾಷೆಯನ್ನು ಸಮರ್ಥಿಸುತ್ತಾ ಅದರ ಮುಂದುವರಿಕೆಗೂ ಜನರ ಬೆಂಬಲ ವ್ಯಕ್ತವಾಗತೊಡಗಿತು.
  • ಈ ವಿರೋದದ ಬೆಳವಣಿಗೆಯ ಪರಿಣಾಮವಾಗಿ ಉತ್ತರ ಭಾರತ -ದಕ್ಷಿಣ ಭಾರತವೆಂಬ ವಿಭಜಿತ ನೀತಿಯೂ ಪ್ರಾರಂಭವಾಗಿ ಸಮರ್ಥಕರು ಮತ್ತು ವಿರೋಧಿಗಳು ಹಿಂಸಾಚಾರಕ್ಕೂ ಕೈ ಹಾಕಿ ಜನರ ಭಾವನೆಗಳಿಗೆ ಧಕ್ಕೆಯುಂಟಾಗಲು ಕಾರಣವಾಯಿತು.
  • ೧೯೫೦ರಲ್ಲಿ ಸಂವಿಧಾನ ಅಂಗೀಕಾರವಾದಾಗ ರಾಷ್ಟ್ರವು ಗಣರಾಜ್ಯವಾಗುವುದರೊಂದಿಗೆ ಇಂಗ್ಲೀಷನ್ನು ಹದಿನೈದು ವರ್ಷಗಳ ಕಾಲ ಮುಂದುವರಿಸುವುದಕ್ಕೆ ಒಪ್ಪಿಗೆ ಸೂಚಿಸಲಾಯಿತು. ಆಗಿನ ಪ್ರಧಾನಿ ಜವಾಹರಲಾಲ್ ನೆಹರು “ಇಂಗ್ಲಿಷ್ ಭಾಷೆ ಆಧುನಿಕ ಪ್ರಪಂಚಕ್ಕೆ ಕಿಟಕಿಯಂತಿದೆ” ಎಂದು ಹೇಳಿ ಅದಕ್ಕೆ ಬೆಂಬಲ ನೀಡಿದರು.
  • ಇದೇ ಸಮಯದಲ್ಲಿ ಇಂಗ್ಲಿಷಿಗೆ ಪರ್ಯಾಯವಾಗಿ ಹಿಂದಿಯನ್ನು ಒಂದು ಭಾಷೆಯಾಗಿ ಬಳಸಲು ಪ್ರಯತ್ನಿಸಲಾಯಿತು. ಆದರೂ ೧೯೬೫ರ ನಂತರವೂ ಇಂಗ್ಲೀಷನ್ನು ಆಡಳಿತ ಭಾಷೆಯಾಗಿ ಮುಂದುವರಿಸಲು ಅವಶ್ಯಕ ಶಾಸನವನ್ನು ತರಬೇಕಾಯಿತು.ಇಂಗ್ಲಿಷಿಲ್ಲದೆ ಭಾರತ ಇನ್ನೂ ಕೆಲವು ವರ್ಷಗಳು ಬದುಕಲಾರದೆಂದು ಭಾವಿಸಿದರು.
  • ಇದರ ಪರಿಣಾಮವಾಗಿ ೧೯೬೭ರ ಡಿಸೆಂಬರ್ ನಲ್ಲಿ ಆಡಳಿತ ಭಾಷೆಗೆ ಒಂದು ತಿದ್ದುಪಡಿಯನ್ನು ತಂದು ಮೂರು ಭಾಷೆಗಳನ್ನು – ಇಂಗ್ಲಿಷ್, ಹಿಂದಿ ಮತ್ತು ಪ್ರಾಂತೀಯ ಭಾಷೆಗಳನ್ನು ಆಚರಣೆಗೆ ತರುವಂತೆ ಒಪ್ಪಿಗೆ ಸೂಚಿಸಲಾಯಿತು. ಎಲ್ಲಾ ರಾಜ್ಯಗಳೂ ತ್ರಿಭಾಷಾ ಸೂತ್ರವನ್ನು ಆಚರಣೆಗೆ ತರಲು ಒಪ್ಪಿಕೊಂಡೆವು. ಅದರಂತೆ ಇಂಗ್ಲಿಷ್ ಶಿಕ್ಷಣ ಹಾಗೂ ಇತರೆ ಎಲ್ಲಾ ಇಲಾಖೆಗಳಲ್ಲೂ ಇಂಗ್ಲಿಷಿನ ಪ್ರಾಮುಖ್ಯತೆಯನ್ನು……CLICK HERE TO READ MORE
Share