8th SEPTEMBER- DAILY CURRENT AFFAIRS BRIEF

8th SEPTEMBER

 

1.ಹೈಫಾ ಕದನ

SOURCE- https://economictimes.indiatimes.com/news/defence/israel-celebrations-honour-indian-soldiers-who-liberated-haifa-city-during-world-war-i/articleshow/65705914.cms

 

ವಿದ್ಯಾರ್ಥಿಗಳ ಗಮನಕ್ಕೆ

ಪ್ರಿಲಿಮ್ಸ್ ಮತ್ತು ಮುಖ್ಯ ಪರೀಕ್ಷೆಗಾಗಿ -ಹೈಫಾ ಯುದ್ಧದ ಮಹತ್ವ ಮತ್ತು ಲಕ್ಷಣಗಳು.

 

 ಪ್ರಮುಖ ಸುದ್ದಿ

  • ಸೆಪ್ಟೆಂಬರ್ 6 ರಂದು ಉತ್ತರ ಇಸ್ರೇಲಿ ಕರಾವಳಿ ನಗರವಾದ ಹೈಫಾದಲ್ಲಿ ವಿಶ್ವ ಸಮರ- I ರ ಸಂದರ್ಭದಲ್ಲಿ ಒಟ್ಟೊಮಾನ್ ಆಳ್ವಿಕೆಯಿಂದ ಮುಕ್ತವಾದ ಶತಮಾನೋತ್ಸವದ ವರ್ಷವನ್ನು ಆಚರಿಸಿತು.

ಮುಖ್ಯ ಅಂಶಗಳು

 

  • ಪ್ರತಿ ವರ್ಷ ಭಾರತೀಯ ಸೇನೆ ಸೆ.23ನ್ನು ‘ಹೈಫಾ ದಿನ’ ಎಂದು ಆಚರಿಸುತ್ತಿದೆ. ಮೊದಲ ಜಾಗತಿಕ ಯುದ್ಧದ ವೇಳೆ ಪರಾಕ್ರಮದಿಂದ ಹೈಫಾ ಕದನದ ಗೆಲುವಿನ ನೆನಪಿಗೋಸ್ಕರ ಈ ದಿನವನ್ನು ಇಂದಿಗೂ ಆಚರಿಸಲಾಗುತ್ತಿದೆ.
  • ಈ ಯುದ್ಧ ಮುಂದೆ ಇಸ್ರೇಲ್ ದೇಶದ ಉದಯಕ್ಕೆ ಕಾರಣವಾಯಿತು. ಈ ಯುದ್ಧದ ಗೆಲುವಿಗೆ ಕಾರಣವಾದದ್ದು ಮೈಸೂರಿನ ಭಲ್ಲೆ ಅಶ್ವರೋಹಿ ಪಡೆ,ಮೈಸೂರು, ಹೈದರಾಬಾದ್ ಮತ್ತು ಜೋಧಪುರ್ ಪಡೆಗಳು.

 

ಹೈಫಾ ಯುದ್ಧದ ಇತಿಹಾಸ ಮತ್ತು ಮಹತ್ವ ಮತ್ತು   ಭಾರತ  

 

  • ಇಂಗ್ಲೆಂಡ್, ಫ್ರಾನ್ಸ್ , ರಷ್ಯಾ ಮಿತ್ರ ಪಡೆ ರಾಷ್ಟ್ರಗಳಿಗೆ ಪರ ಹೋರಾಟ ಮಾಡಿದ ಜೋಧಪುರ ಅಶ್ವ ಸೈನ್ಯ ಮತ್ತು 16ನೇ ಚಕ್ರಾಧಿಪತ್ಯದ ಅಶ್ವ ಸೈನ್ಯ ಬ್ರಿಗೇಡ್ ಜತೆ ಮೈಸೂರು ರಾಜನ ವೈಯಕ್ತಿಕ ಸೇನೆ ಮೈಸೂರು ಭಲ್ಲೆ ಅಶ್ವಾರೋಹಿ ಪಡೆ (ಈಟಿರಾವುತ) ಈ ಯುದ್ಧದಲ್ಲಿ ಕೆಚ್ಚೆದೆಯಿಂದು ಹೋರಾಡಿತ್ತು.
  • ಹೈಫಾ ಇಸ್ರೇಲಿನ ಒಂದು ಪ್ರಮುಖ ಬಂದರು ನಗರ. ಹೈಫಾ ನಗರವನ್ನು ಸುತ್ತುವರಿದ ಜರ್ಮನ್ ಬೆಂಬಲಿತ ಮೆಷಿನ್ ಗನ್ ಮತ್ತು ತೋಪುಗಳನ್ನು ಹೊಂದಿದ್ದ ಶಸ್ತ್ರ ಸಜ್ಜಿತ ಆಸ್ಟ್ರಿಯಾ ಪಡೆ ಮುನ್ನುಗ್ಗುತ್ತಿತ್ತು.
  • ಆಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಈ ಪಡೆ ಎದುರಾಳಿ ಸೈನಿಕರನ್ನು ಸೆರೆಹಿಡಿಯುತ್ತಿತ್ತು. ಇಂತಹ ವೇಳೆ ಜೋಧಪುರ ಅಶ್ವಸೈನ್ಯ ಜತೆ ಸೇರಿದ ಮೈಸೂರು ಭಲ್ಲೆ ಅಶ್ವಾರೋಹಿ ಪಡೆ ಜರ್ಮನ್ ನ ಪ್ರಮುಖ ಮೆಷಿನ್ ಗನ್ ಪಡೆ ಮೇಲೆ ತಿರುಗಿ ಬಿತ್ತು. ಇಬ್ಬರು ಮೆಷಿನ್ ಗನ್ , ಎರಡು ಒಂಟೆ ಗನ್ ಮತ್ತು 30 ಸೈನಿಕರನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಯಿತು. ಆಗ ಹೈಫಾ ರಸ್ತೆ ತೆರೆದುಕೊಂಡಿತ್ತು. ನಂತರ ಜೋಧಪುರ ಅಶ್ವ ಪಡೆ ಪಟ್ಟಣದಲ್ಲಿ ಮುನ್ನುಗ್ಗಿತ್ತು. ಅದಕ್ಕೆ ಮೈಸೂರು ಪಡೆ ಬೆಂಗಾವಲಾಗಿ ನಿಂತಿತು. ನಂತರ ಹೈಪಾಕ್ಕೆ ನುಗ್ಗಿದ ಜೋಧಪುರ ಪಡೆ 1350 ಜರ್ಮನ್ ಮತ್ತು ಒಟ್ಟೊಮನ್ ಸೈನಿಕರನ್ನು ಸೆರೆಹಿಡಿಯಿತು. ತೋಪು ಮತ್ತು ಮೆಷಿನ್ ಗನ್ ಗಳ ಪಡೆಯನ್ನು ತನ್ನ ವಶಕ್ಕೆ ತೆಗೆದುಕೊಂಡಿತು.
  • ಈ ಯುದ್ಧದಲ್ಲಿ ಮೈಸೂರು ಮತ್ತು ಜೋಧಪುರದ ಎಷ್ಟು ಸೈನಿಕರು ಪಾಲ್ಗೊಂಡಿದ್ದರು ಎಂಬ ಬಗ್ಗೆ ಮಾಹಿತಿ ಇಲ್ಲ. ಇಂದಿಗೂ ಇಸ್ರೇಲ್ ನಲ್ಲಿ 800 ಭಾರತೀಯ ಸೈನಿಕರ ಸಮಾಧಿ ಇದೆ.

 

  • 1918ರಲ್ಲಿ ಮೈಸೂರು ಭಲ್ಲೆ ಅಶ್ವಾರೋಹಿ ಹೈಫಾ ನಗರವನ್ನು ಕಾಪಾಡಿತು. ಮಾತ್ರವಲ್ಲ ಒಟ್ಟಾಮಾನ್ ಚಕ್ರವರ್ತಿಗಳ 400 ವರ್ಷಗಳ ಆಳ್ಬಿಕೆ ಆ ಮೂಲಕ ಅಲ್ಲಿಗೆ ಅಂತ್ಯಗೊಂಡಿತು. ಒಟ್ಟಾಮಾನ್ ಗಳು ಜರ್ಮನ್ ಜತೆ ಸೇರಿಕೊಂಡು ಇಂಗ್ಲೆಂಡ್ , ಫ್ರಾನ್ಸ್ , ರಷ್ಯಾ ಮಿತ್ರ ಪಡೆಗಳ ವಿರುದ್ಧ ಸಮರ ಸಾರಿತ್ತು. ಬ್ರಿಟಿಷ್ ಪಡೆ ಪರವಾಗಿ ಭಾರತೀಯ ಪಡೆ ಯುದ್ಧದಲ್ಲಿ ಭಾಗವಹಿಸಿತ್ತು.

 

 

ತೀನ್ ಮೂರ್ತಿ ಸ್ಮಾರಕ

  • ತೀನ್ ಮೂರ್ತಿ ಸ್ಮಾರಕಸ್ಮಾರಕವನ್ನು 1922 ರಲ್ಲಿ ಭಾರತೀಯ ಸೈನಿಕರ ನೆನಪಿಗಾಗಿ ಮೂರು ರಾಜ ಸಂಸ್ಥಾನಗಳಾದ ಜೋಧ್ಪುರ್, ಹೈದರಾಬಾದ್ ಮತ್ತು ಮೈಸೂರುಗಳಿಂದ ನಿರ್ಮಿಸಲಾಯಿತು.
  • ತೀನ್ ಮೂರ್ತಿ ಚೌಕ್‌ನಲ್ಲಿ ಮೂರು ಕಂಚಿನ ಪ್ರತಿಮೆಗಳಿದ್ದು ಇವು 15 ಸಾಮ್ರಾಜ್ಯಶಾಹಿ ಸೇವಾ ಅಶ್ವದಳದ ಭಾಗವಾಗಿದ್ದ ಹೈದರಾಬಾದ್, ಜೋಧ್‌ಪುರ ಮತ್ತು ಮೈಸೂರಿನ ಅಶ್ವಾರೋಹಿಗಳನ್ನು ಪ್ರತಿನಿಧಿಸುತ್ತದೆ…..CLICK HERE TO READ MORE
Share