9th AUGUST MLP-MODEL ANSWERS

9th   AUGUST  MLP

 

NOTE:: ದಯವಿಟ್ಟು  ಗಮನಿಸಿ ಕೆಳಗಿನ ಉತ್ತರಗಳು‘  ‘ಮಾದರಿ ಉತ್ತರಗಳುಎಂಬುದನ್ನು ನೆನಪಿಡಿ. ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ PROPER SOURCE ಎಲ್ಲದೇ ಇರುವುದರಿಂದ  ನಾವು ಮುಖ್ಯ ಪರೀಕ್ಷೆಯಲ್ಲಿ ನೀವು ಯಾವ ರೀತಿರೆಯಬೇಕು ಮತ್ತು ನಿಮ್ಮ ಸಮಯವನ್ನು ಉಳಿಸಲು ಕೊಡುತ್ತಿರುವ  ವಿಸ್ತಾರವಾದ ಸಾರಾಂಶ, ನಾವುಗಳು ಇಲ್ಲಿ ಪದಗಳ ಮಿತಿ ಗಣನೆಗೆ ತೆಗೆದುಕೊಂಡಿಲ್ಲ ಏಕೆಂದರೆ ಒಂದು ಪ್ರಶ್ನೆಗೆ ಎಷ್ಟು ಸಾದ್ಯೋವೊ ಅಷ್ಟು ಇನ್ಫಾರ್ಮಶನ್ ಕೊಟ್ಟಿರುತ್ತೆವೆ. ನಾವು ಒದಗಿಸುತ್ತಿರುವ ವಿಷಯವು ಪ್ರಶ್ನೆಯ ಬೇಡಿಕೆಯನ್ನು ಪೂರೈಸುತ್ತದೆ ಮತ್ತು ಅದೇ ಸಮಯದಲ್ಲಿ ನಿಮಗೆ ಹಿನ್ನೆಲೆ ಮಾಹಿತಿ ರೂಪದಲ್ಲಿ ಹೆಚ್ಚುವರಿ ಅಂಕಗಳನ್ನು ಗಳಿಸಲು ಅನುಕೂಲಕರವಾಗುತ್ತದೆ.

GENERAL STUDIES PAPER-1(ಸಾಮಾನ್ಯ ಅಧ್ಯಾಯ)

 

1.With The origin of folk sculpture, Explain some of the features of diverse folk sculpture.

 

(ಜನಪದ ಶಿಲ್ಪಕಲೆಯ ಉಗಮದ ಜೊತೆಗೆ ವೈವಿಧ್ಯಮಯ ಜನಪದ ಶಿಲ್ಪಕಲೆಯನ್ನು ಕುರಿತಂತೆ  ಕೆಲವು ಲಕ್ಷಣಗಳನ್ನು  ವಿವರಿಸಿ)

200 ಪದಗಳು

 

ಜನಪದ  ಶಿಲ್ಪ ಕಲೆ

ಆದಿಮ ಸ್ಥಿತಿಯಲ್ಲಿ ಕಾಡಿನಲ್ಲಿಯೇ ವಾಸವಾಗಿದ್ದ ಮಾನವ ತನ್ನ ಉದರ ಪೋಷಣೆಗೆ ಹಣ್ಣು- ಹಂಪಲು, ಗಡ್ಡೆ- ಗೆಣಸು ಮತ್ತು ಬೇಟೆಗೆ ದೊರೆತ ಪ್ರಾಣಿಗಳನ್ನು ಅವಲಂಬಿಸಿಕೊಂಡಿದ್ದಾಗ, ಕಲ್ಲು ಅವನ ಪ್ರಮುಖ ಆಯುಧವಾಗಿತ್ತು. ಪೃಕೃತಿಯ ಶಿಶುವಾಗಿ ಅದರ ಮಡಿಲಲ್ಲಿಯೇ ಬೆಳೆದರೂ ಮಿಂಚು, ಗುಡುಗು, ಸಿಡಿಲು, ಕಾಡ್ಗಿಚ್ಚು, ಭೂಕಂಪ, ನೆರೆ- ಪ್ರವಾಹ ಮುಂತಾದ ಪ್ರಾಕೃತಿಕ ವಿಕೋಪಗಳು ಅವನನ್ನು ತಲ್ಲಣಗೊಳಿಸುತ್ತಿದ್ದವು. ಇದರಿಂದ ನಿಸರ್ಗವನ್ನು ಕುರಿತಂತೆ ಭಯ- ಭಕ್ತಿ ಎರಡೂ ಅವನಲ್ಲಿ ಬೆಳೆದುಬಂದವು. ಅಂತೆಯೇ ಪ್ರಕೃತಿಯನ್ನು ನಾನಾ ರೀತಿಯಲ್ಲಿ ಆರಾಧಿಸತೊಡಗಿದನು.

 

  • ಅಲೆಮಾರಿಯಾಗಿದ್ದ ಮಾನವ, ಒಂದೆಡೆ ನೆಲೆ ನಿಂತು ಕೃಷಿ ಜೀವನವನ್ನು ಪ್ರಾರಂಭಿಸಿದಾಗ ಆಹಾರ ನೀಡುವ ಭೂಮಿ ತಾಯಿ ಅವನಿಗೆ ದೈವವಾಯಿತು; ಅದರಂತೆ ಕೃಷಿ ಕೆಲಸಕ್ಕೆ ಸಹಾಯಕವಾದ ಎತ್ತು ದೈವವಾಯಿತು. ಮೊದಲು ಒರಟುಕಲ್ಲು, ಮರದ ತುಂಡು, ಮಣ್ಣಿನ ಗುಪ್ಪೆ, ಹುತ್ತ, ಸಗಣಿಯ ಮುದ್ದೆಗಳನ್ನು ಪೂಜಿಸಿದ ಮಾನವ ಕ್ರಮೇಣ ಅವಕ್ಕೆಲ್ಲ ಒಂದು ಕಲಾತ್ಮಕ ರೂಪ ಕೊಡತೊಡಗಿದ. ಇದೇ ಜನಪದ ಮೂರ್ತಿಶಿಲ್ಪ ಕಲೆಗೆ ತಳಹದಿಯಾಯಿತು.

 

 

  • ಜನಪದ ಶಿಲ್ಪ ಪ್ರಪಂಚ ವಿಸ್ತಾರವಾದುದು. ಜನಪದ ಮೂರ್ತಿ ಶಿಲ್ಪಗಳನ್ನು ಸಾಮಾನ್ಯವಾಗಿ ಕಲ್ಲು, ಮಣ್ಣು, ಮರ, ಲೋಹ, ಗಾರೆ, ಸಗಣಿಗಳಲ್ಲಿ ನಿರ್ಮಿಸಲಾಗುತ್ತದೆ. ಈ ಮೂರ್ತಿಶಿಲ್ಪಗಳು ಬಿಡಿ- ಬಿಡಿಯಾಗಿಯೂ ಇರುತ್ತವೆ; ಕೆಲವೊಮ್ಮೆ ದೇವಾಲಯ, ಮತ್ತಿತರ ಕಟ್ಟಡಗಳ ಭಿತ್ತಿಶಿಲ್ಪವಾಗಿಯೂ ರಚನೆಗೊಂಡಿರುತ್ತವೆ. ಜನಪದ ದೈವಗಳಿಗೆ ಆರಂಭದಲ್ಲಿ ಒಂದು ನಿರ್ದಿಷ್ಟ ಆಕಾರವಿರಲಿಲ್ಲ. ಆಯಾ ದೈವದ ಬಗೆಗಿನ ಕಲ್ಪನೆ ಬೆಳೆಯುತ್ತ ಬಂದಂತೆ ಅವು ಸ್ಪಷ್ಟರೂಪವನ್ನು ಪಡೆಯತೊಡಗಿದವು.

 

ಜನಪದ ಶಿಲ್ಪಕಲೆಯ ಉಗಮದ ಜೊತೆಗೆ ವೈವಿಧ್ಯಮಯ ಜನಪದ ಶಿಲ್ಪಕಲೆಯ ಲಕ್ಷಣಗಳು

 

 

  • ಜನಪದ ಶಿಲ್ಪಕಲೆಯ ಉಗಮ- ಸ್ವರೂಪ- ವಿಕಾಸಗಳು ಶಿಷ್ಟ ಕಲೆಗಿಂತ ಭಿನ್ನವೇ. `ಕಲೆಗಾಗಿ ಕಲೆ’ ಎಂಬ ಮಾತನ್ನು ಜನಪದ ಕಲೆಗಳ ಸಂದರ್ಭದಲ್ಲಿ ಅನ್ವಯಿಸಲು ಸಾಧ್ಯವಿಲ್ಲ. ಜನಪದ ಜೀವನದ ಒಂದು ಅವಿಭಾಜ್ಯ ಅಂಗವಾಗಿಯೇ ಜನಪದ ಕಲೆ ಬೆಳೆದುಬಂದಿದೆ. `ಜನಪದದಲ್ಲಿ ಕಲೆ ಎಂದರೆ ಜೀವನದ ಆಚರಣೆ, ಬದುಕಿನ ದಾಖಲೆ ಮತ್ತು ಆ ಮೂಲಕ ಮನುಷ್ಯ ಸಂವೇದನೆಗಳನ್ನು ವಿಸ್ತರಿಸಿಕೊಂಡು ಸುಖೀಸ್ಥಿತಿಗಾಗಿ ತವಕಿಸುವುದು’.

 

ಜನಪದ ಶಿಲ್ಪಕಲೆಯನ್ನು ಕುರಿತಂತೆ  ಕೆಲವು ಲಕ್ಷಣಗಳನ್ನು ಗುರುತಿಸಲಾಗಿದೆ. ಅವುಗಳೆಂದರೆ;

 

  • ಜನಪದ ಸರಳ ಮನೋಭೂಮಿಕೆಗೆ, ಆರ್ಥಿಕ ಸ್ಥಿತಿಗೆ ಒಗ್ಗುವ ಸರಳತೆ ಜನಪದ ಶಿಲ್ಪಗಳ ಮುಖ್ಯ ಅಂಶ. ಸಾಮಗ್ರಿ, ತಂತ್ರ ಮತ್ತು ನಿರೂಪಣೆಯಲ್ಲಿ ಈ ಸರಳತೆ ಸ್ಪಷ್ಟವಾಗಿ ಕಾಣಿಸಿಕೊಳ್ಳುತ್ತದೆ. ಮಣ್ಣು, ಕಲ್ಲು, ಮರ, ಮರದ ಹೊಟ್ಟು, ಹಿತ್ತಾಳೆ ಮುಂತಾಗಿ ಆಯಾ ಪ್ರದೇಶಗಳಲ್ಲಿ ದೊರಕುವ ಸಾಮಗ್ರಿಗಳನ್ನಷ್ಟೇ ಶಿಲ್ಪಗಳ ತಯಾರಿಯಲ್ಲಿ ಬಳಸಲಾಗಿರುತ್ತದೆ. ಅತ್ಯಲಂಕರಣ ವಿಧಾನ, ಕ್ಲಿಷ್ಟ ತಂತ್ರಗಳು ಇದರಲ್ಲಿ ಇಲ್ಲ. ನಿರೂಪಣೆಯಲ್ಲಿ ಆಯಾ ಶಿಲ್ಪಗಳಿಗೆ ಸಂಬಂಧಿಸಿದ ಮುಖ್ಯ ಭಾವನೆಗಳ ಅಭಿವ್ಯಕ್ತಿ ಶಿಲ್ಪದ ಗುರಿಯಾಗುತ್ತದೆಯೇ ಹೊರತು ಯಥಾಸ್ಥಿತಿಯ ಸಮಗ್ರ ಪ್ರತಿ ರೂಪೀಕರಣ ಅಥವಾ ಅತಿಚತುರ ನಿರೂಪಣಾ ವಿಧಾನಗಳು ಇವುಗಳಲ್ಲಿ ಇರುವುದಿಲ್ಲ.

 

  • ಕಲೆಗಾಗಿ ಕಲೆ ಸೃಷ್ಟಿ ಮಾಡಬೇಕೆಂಬ ಉದ್ದೇಶ ಜನಪದ ಶಿಲ್ಪ ಸೃಷ್ಟಿಯಲ್ಲಿ ಇರುವುದಿಲ್ಲ. ಇಲ್ಲಿ ಶಿಲ್ಪಿಗಿಂತಲೂ ಶಿಲ್ಪವನ್ನು ಉಪಯೋಗಿಸುವವರ ದೃಷ್ಟಿ, ಅವಶ್ಯಕತೆಗಳೇ ಮುಖ್ಯವಾಗಿ ಪರಿಗಣಿಸಬೇಕಾದ ಅಂಶ. ಯಾರಿಗಾಗಿ ಕಲೆ ನಿರ್ಮಾಣವಾಗುತ್ತದೆಯೋ ಆ ಜನಪದವೇ ಜನಪದ ಶಿಲ್ಪದ ಜೀವಾಳ.

 

  • ಜನಪದ ಶಿಲ್ಪಗಳು ಕೇವಲ ಕಲಾಕೃತಿಗಳಾಗಿರದೆ ಯಾವುದೋ ಸಾಮಾಜಿಕ ಉದ್ದೇಶಗಳಿಗಾಗಿ (ಉದಾ: ಧರ್ಮ, ಮಾಟ, ವಿನೋದ) ರೂಪಿಸಲ್ಪಟ್ಟಿರುತ್ತದೆ. ಇಲ್ಲಿ ಕಲೆ ಪ್ರಯೋಜನಮೂಲವಾಗಿರುತ್ತದೆ.

 

  • ಜನಪದ ಶಿಲ್ಪಗಳಲ್ಲದಿದ್ದರೂ ಶಿಲ್ಪಸ್ವರೂಪಗಳೂ ಬಹುಕಾಲ ಮುಂದುವರಿಯುತ್ತಿರುತ್ತವೆ. ಸಂಪ್ರದಾಯಾತ್ಮಕ ಸಮೂಹಪ್ರಜ್ಞೆ ಇವುಗಳ ರಕ್ಷೆ. ನವಸೃಷ್ಟ್ಯಾತ್ಮಕ ವ್ಯಕ್ತಿ ಪ್ರಜ್ಞೆಗೆ ಇಲ್ಲಿ ಸಾಕಷ್ಟು ಸ್ಥಳವಿಲ್ಲ.

 

  • ಶಿಷ್ಟ ಕಲೆಗೆ ಹೋಲಿಸಿದರೆ, ಜನಪದ ಕಲೆ ಹೆಚ್ಚು ಸರಳವಾದುದು ಮತ್ತು ಮುಕ್ತವಾದುದು. ಸಹಜತೆ ಮತ್ತು ಮುಗ್ಧತೆಗಳೇ ಅದರ ಲಕ್ಷಣಗಳಾಗಿರುತ್ತವೆ. ಪ್ರಯೋಜನ ಮೂಲವಾಗಿರುವ ಈ ಕಲೆಯಲ್ಲಿ ಕ್ರಮೇಣ ಸೌಂದರ್ಯ ದೃಷ್ಟಿ ಮಿಳಿತಗೊಂಡಿದೆ. ಜನಪದ ಶಿಲ್ಪ ಕಲೆಯ ವಿನ್ಯಾಸದಲ್ಲಿ ಅದನ್ನು ಬಳಸುವವರ ಉದ್ದೇಶ ಮತ್ತು ಪ್ರಯೋಜನ ಮುಖ್ಯವಾಗುತ್ತದೆ

 

ಜನಪದ ವಾಸ್ತು ಶಿಲ್ಪ

 

  • `ಜನಪದ ವಾಸ್ತು ಶಿಲ್ಪ’ದಲ್ಲಿ ಊರು- ಕೇರಿ, ಹಟ್ಟಿ- ಗುಡಿಸಲುಗಳ ವೈವಿಧ್ಯ, ಮನೆ- ಮಠಗಳ ಸ್ವರೂಪ, ಕೋಟೆ-ಕೊತ್ತಲಗಳ, ಕೆರೆ- ಕೊಳಗಳ ನಿರ್ಮಾಣಗಳು, ಗುಡಿ- ದೇವಾಲಯಗಳ, ಹಿರಿಯರ ಗುತ್ತು (ಕೈಮಡ)ಗಳ, ದನಗಳ ಕೊಟ್ಟಿಗೆ, ಕಟ್ಟೆ- ಮಂಟಪಗಳ ನಿರ್ಮಾಣಗಳು ಇತ್ಯಾದಿ ಸೇರಿಕೊಳ್ಳುತ್ತವೆ. ಇವೆಲ್ಲವುಗಳ ಹಿಂದಿರುವ ಜನಪದ ತಂತ್ರಜ್ಞಾನ, ಪರಿಸರಸ್ನೇಹಿ ಕಟ್ಟಡ ನಿರ್ಮಾಣ, ಜನಪದರ ಸೌಂದರ್ಯ ಪ್ರಜ್ಞೆ ಮುಂತಾದವು ಸಾಕಷ್ಟು ಕುತೂಹಲಕಾರಿಯಾಗಿವೆ.

 

`ಜನಪದ ಮೂರ್ತಿಶಿಲ್ಪ

 

  • `ಜನಪದ ಮೂರ್ತಿಶಿಲ್ಪ’ ಭಾಗದಲ್ಲಿ ದೇವತಾಶಿಲ್ಪಗಳೊಂದಿಗೆ ಇತರ ಶಿಲ್ಪಗಳು, ಮುಖವಾಡಗಳು, ಸೋಮಗಳು, ಸಿಡಿಗಳು, ತೇರುಗಳು ಮುಂತಾದವು ಸೇರಿಕೊಳ್ಳುತ್ತವೆ. ಜನಪದ ನಂಬಿಕೆ ಮತ್ತು ಆಚರಣೆಗಳ ಒಂದು ಭಾಗವಾಗಿ…..CLICK HERE TO READ MORE
Share