9th DECEMBER-THE HINDU EDITORIAL

ನಮ್ಮ ಐಎಎಸ್ ಅಕಾಡೆಮಿ ಸಂಪಾದಕೀಯ ಒಳನೋಟ

 

ಅಂತಾರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನ

(INTERNATIONAL ANTI-CORRUPTION DAY)

 

ಸನ್ನಿವೇಶ

 

  • ಪ್ರತಿವರ್ಷ ಡಿಸೆಂಬರ್‌ 9ರಂದು ಅಂತಾರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನವನ್ನು ಆಚರಿಸಲಾಗುತ್ತಿದೆ. ಪ್ರತಿ ವರ್ಷ ಒಂದು ಧ್ಯೇಯದೊಂದಿಗೆ ಈ ದಿನವನ್ನು ಆಚರಿಸಲಾಗುತ್ತದೆ.
  • 2017ರ THEME… ‘ಅಭಿವೃದ್ದಿ, ಶಾಂತಿ ಮತ್ತು ಭದ್ರತೆಗಾಗಿ ಭ್ರಷ್ಟಾಚಾರ ವಿರುದ್ಧ ಒಗ್ಗೂಡುವುದು’.

 

ಹಿನ್ನಲೆ

 

  • ಭ್ರಷ್ಟಾಚಾರವು ಎಲ್ಲಾ ಸಮಾಜಗಳಲ್ಲಿಯೂ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯನ್ನು ಹಾಳುಮಾಡುತ್ತಿರುವ ಗಂಭೀರ ಅಪರಾಧವಾಗಿದೆ. ಭ್ರಷ್ಟಾಚಾರದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಹಾಗೂ ಜನರು ಭ್ರಷ್ಟಾಚಾರವನ್ನು ಹೇಗೆ ತಡೆಯಬಹುದು ಮತ್ತು ಭ್ರಷ್ಟಾಚಾರವನ್ನು ಸಮರ್ಥವಾಗಿ ಮತ್ತು ಪರಿಣಾಮಕಾರಿಯಾಗಿ ಎದುರಿಸುವ ಕ್ರಮಗಳನ್ನು ಬಲಪಡಿಸುವ ಸಲುವಾಗಿ ಪ್ರತಿವರ್ಷ ಡಿಸೆಂಬರ್‌ 9ರಂದು ಅಂತಾರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನವನ್ನು ಆಚರಿಸಲಾಗುತ್ತಿದೆ.
  • ವಿಶ್ವ ಸಂಸ್ಥೆಯ ಸಾಮಾನ್ಯ ಸಭೆ 2003ರಲ್ಲಿ ಡಿಸೆಂಬರ್‌ 9 ಅನ್ನು ಅಂತಾರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನ ಎಂದು ಘೋಷಿಸಿತು.

 

ಭ್ರಷ್ಟಾಚಾರ ವಿರೋಧಿ ದಿನ ಆಚರಿಸುವ ಪ್ರಮುಖ ಉದ್ದೇಶ ವೇನು ?

  • ಶಿಕ್ಷಣ, ಆರೋಗ್ಯ, ಕ್ರೀಡೆ, ರಾಜಕೀಯ, ನ್ಯಾಯ, ದೇಶದ ಅಭಿವೃದ್ಧಿ ಎಲ್ಲಾ ಕ್ಷೇತ್ರದಲ್ಲೂ ಭ್ರಷ್ಟಾಚಾರ ಆಳವಾಗಿ ಬೇರೂರಿದೆ. ಇದರಿಂದ ಉಂಟಾಗುವ ಸಮಸ್ಯೆಗಳು ಗಂಭೀರವಾಗಿವೆ.
  • ಪ್ರಜಾಪ್ರಭುತ್ವ, ಸಮಾಜದ ಭದ್ರತೆ, ನೈತಿಕ ಮೌಲ್ಯ, ನ್ಯಾಯ ಸಂಸ್ಥೆಯ ಮೌಲ್ಯಗಳನ್ನು ಭ್ರಷ್ಟಾಚಾರ ಎಂಬ ಪಿಡುಗು ದುರ್ಬಲಗೊಳಿಸುತ್ತಿದೆ.
  • 2014ನೇ ವರ್ಷದ ವರದಿ ಪ್ರಕಾರ ಜಗತ್ತಿನ ಅತ್ಯಂತ ಭ್ರಷ್ಟಾಚಾರ ಪೀಡಿತ ರಾಷ್ಟ್ರಗಳಲ್ಲಿ ಹೈಟಿ, ಇರಾಕ್‌, ಉತ್ತರ ಕೊರಿಯ, ವೆನೆಜುವೆಲಾ, ಸೊಮಾಲಿಯಾ ಮತ್ತು ಅಫ್ಘಾನಿಸ್ತಾನ ಪ್ರಮುಖವಾಗಿದೆ. ಭಾರತವೂ ಭ್ರಷ್ಟಾಚಾರದಿಂದ ಮುಕ್ತವಾಗಿಲ್ಲ. ಭಾರತದಲ್ಲಿ ಭ್ರಷ್ಟಾಚಾರ ಮನೆ ಮಾತಾಗಿದೆ.
  • ಇದನ್ನು ಬುಡ ಸಮೇತ ಕಿತ್ತು. ಮುಂದಿನ ಪೀಳೆಗೆಯವರಾದರೂ ಇದರ ಕಪಿಮುಷ್ಟಿಯಿಂದ ಹೊರಬೇಕೆಂಬುದು ಈ ದಿನದ ಪ್ರಮುಖ ಉದ್ದೇಶವಾಗಿದೆ.
  • ಸಾರ್ವಜನಿಕರಿಗೆ ಅರಿವು ಮೂಡಿಸುವ ಸಲುವಾಗಿ ವಿಶ್ವದಾದ್ಯಂತ ಇರುವ ಸರ್ಕಾರಗಳು, ಸರ್ಕಾರೇತರ ಸಂಘಟನೆಗಳು, ಮಾಧ್ಯಮಗಳು ವಿವಿಧ ಚಟುವಟಿಕೆಗಳನ್ನು ಆಯೋಜಿಸಿ ಈ ದಿನವನ್ನು ಆಚರಿಸುತ್ತವೆ. ಯುವ ಜನಾಂಗದವರು ಈ ಭ್ರಷ್ಟಾಚಾರವನ್ನು ವಿರೋಧಿಸಬೇಕೆಂಬ ಉದ್ದೇಶದಿಂದ ಟ್ವಿಟರ್‌, ಫೇಸ್ಬುಕ್‌ನಂತ ಸಾಮಾಜಿಕ ನೆಟ್‌ವರ್ಕ್‌ಗಳ ಮೂಲಕ ಪರಿಣಾಮಕಾರಿ ಸಂದೇಶಗಳನ್ನು ಹರಡಿ ಜಾಗೃತಿ ಮೂಡಿಸಲಾಗುತ್ತದೆ.

 

ಐತಿಹಾಸಿಕ ಘಟನೆಗಳು

 

  • 1950 ರಿಂದಾ 1980 ರವರೆಗೆ ಭಾರತದ ಆರ್ಥಿಕ ವ್ಯವಸ್ಥೆ ಸಮಾಜವಾದಿಗಳ ಕೆಳಗೆ ಇತ್ತು. ವಿಸ್ತಾರವಾದ ನಿಯಮ ನಿಬಂಧನೆಗಳು, ರಕ್ಷಣಾತ್ಮಕ ಕಾರ್ಯಗಳು ಇದ್ದರೂ ಸಹ ಭ್ರಷ್ಟಾಚಾರ ಬೆಳೆಯುವುದಕ್ಕೆ ಶುರು ಆಯ್ತು. License Raj ಭ್ರಷ್ಟಾಚಾರದ ಸುಳಿಯಲ್ಲಿತ್ತು. 1993 ರಲ್ಲಿ ಎನ್.ಎನ್.ವೊಹ್ರ ರವರು ಒಂದು ವರದಿಯನ್ನ ಕೊಟ್ಟರು. ಅದರಲ್ಲಿ ರಾಜಕಾರಣಿಗಳ ಪಾತಕಿತನ, ರಾಜಕಾರಣ – ಪಾತಕಿಗಳ ಸಹವಾಸ, ರಾಜಕಾರಣಿಗಳ ಹಿಂದೆ ಅವರನ್ನು ಆಡಿಸುವವರ ಬಗ್ಗೆ ತಿಳಿಸಿದ್ದರು.
  • ಅಧಿಕೃತ ಸಂಸ್ಥೆಗಳು ವೀಕ್ಷಣೆ ನಡೆಸಿದಂತೆ ಪಾತಕಿಗಳ ಜಾಲ ಹಾಗು ಅವರು ನಡೆಸುತ್ತಿದ್ದ ಸಮನಾಂತರ ಸರ್ಕಾರ, ಪಾತಕಿಗಳ ಗ್ಯಾಂಗ್ ಎಲ್ಲಾ ಪಕ್ಷದ ರಾಜಕಾರಣಿಗಳ ಆದಾರದಲ್ಲಿ ಸುಖವಾಗಿದ್ದದ್ದು, ಆ ವರದಿಗಳಲ್ಲಿ ಇದ್ದವು. ರಾಜಕೀಯ ಮುಖಂಡರು ಆ ಗ್ಯಾಂಗ್‌ಗಳ ಮುಖಂಡರಾದದ್ದುದನ್ನು ಅವು ತೋರ್ಪಡಿಸಿತು.
  • ಇಂತ ಮುಖಂಡರು ಚುಣಾವಣೆಗಳಲ್ಲಿ ಮತ ಗಳಿಸಿ ಗೆದ್ದು ವಿಧಾನಸೌಧ, ಪಾರ್ಲಿಮೆಂಟ್ ಮೆಟ್ಟಿಲುಗಳನ್ನ ಹತ್ತುತಿದ್ದರು.
  • ಈ ವರದಿಯನ್ನ ಸುಪ್ರೀಂ ಕೋರ್ಟ್ ಪರಿಶೀಲಿಸಿ, ಇನ್ನೂ ಹೆಚ್ಚು ವಿಚಾರಣೆ ನಡೆಸಬೇಕೆಂದು ಸಂಬಂದ್ಪಟ್ಟ ಅಧಿಕಾರಿಗಳಿಗೆ ತಿಳಿಸಿತು.

 

 

ಭ್ರಷ್ಟಾಚಾರದ ವಿಷಯಕ್ಕೆ ಬಂದಾಗ ಯಾವ ದೇಶವೂ ನಿಷ್ಕಳಂಕವಾಗಿಲ್ಲ, ಪರಿಪೂರ್ಣವಾಗಿಲ್ಲ ಎಂಬುದು ‘ಟ್ರಾನ್ಸ್​ಪರೆನ್ಸಿ ಇಂಟರ್​ನ್ಯಾಷನಲ್’ ಸಂಸ್ಥೆ ಹೊರಹಾಕಿರುವ ಅಂಕಿ-ಅಂಶಗಳ ಒಟ್ಟಾರೆ ಹೂರಣ. ಇದು ನಾಗರಿಕ ಜಗತ್ತಿನ ಪಾಲಿಗೆ ಆಘಾತಕಾರಿ ಸುದ್ದಿ.

 

 ಏನಿದು ಟ್ರಾನ್ಸ್​ಪರೆನ್ಸಿ ಇಂಟರ್​ನ್ಯಾಷನಲ್?

 

  • ಇದು ಜರ್ಮನಿಯ ಬರ್ಲಿನ್​ನಲ್ಲಿ ನೆಲೆಗೊಂಡಿರುವ, ಲಾಭಗಳಿಕೆಯ ಉದ್ದೇಶವಿಲ್ಲದ ಒಂದು ಸರ್ಕಾರೇತರ ಸಂಸ್ಥೆ. ಜಾಗತಿಕ ಮಟ್ಟದ ಭ್ರಷ್ಟಾಚಾರದ ವಿರುದ್ಧ ಸೆಣಸುವುದು ಮತ್ತು ಅದರಿಂದ ಉದ್ಭವಿಸುವ ಅಪರಾಧಿಕ ಚಟುವಟಿಕೆಗಳನ್ನು ತಡೆಗಟ್ಟುವುದು ಇದರ ಧ್ಯೇಯ.
  • ಈ ಕೈಂಕರ್ಯದ ಒಂದು ಅಂಗವಾಗಿ, ಜಾಗತಿಕ ಭ್ರಷ್ಟಾಚಾರ ಸೂಚ್ಯಂಕ ಪಟ್ಟಿಯನ್ನು ಸಂಸ್ಥೆ ಪ್ರತಿವರ್ಷವೂ ಬಿಡುಗಡೆ ಮಾಡುತ್ತದೆ. ಅದೇ ರೀತಿಯಲ್ಲಿ 2016ರ ಸೂಚ್ಯಂಕ ಪಟ್ಟಿಯೂ ಬಿಡುಗಡೆಯಾಗಿದ್ದು, 176 ದೇಶಗಳು ಮತ್ತು ಅಧೀನ ರಾಜ್ಯಗಳ ಪೈಕಿ ಮೂರನೇ ಎರಡಕ್ಕೂ ಹೆಚ್ಚಿನವು ‘ಅತೀವ ಭ್ರಷ್ಟ’ (ಅಂಕ ಸೊನ್ನೆ) ಮತ್ತು ‘ಅತ್ಯಂತ ಪರಿಶುದ್ಧ’ (ಅಂಕ ನೂರು) ಎಂಬ ಹಣೆಪಟ್ಟಿಗಳಿರುವ ಈ ಅಳತೆಗೋಲಿನ ಮಧ್ಯಬಿಂದುವಿನ ಕೆಳಗೆ ಸ್ಥಾನ ಕಂಡುಕೊಂಡಿವೆ ಎಂಬುದು ತಲೆತಗ್ಗಿಸುವ ಸಂಗತಿ.
  • ಜಾಗತಿಕ ಸರಾಸರಿ ಅಂಕ 43ರಲ್ಲಿ ನೆಲೆಗೊಂಡಿದ್ದು, ವಿಶ್ವದ ಪ್ರತಿಯೊಂದು ದೇಶದ ಸಾರ್ವಜನಿಕ ವಲಯದಲ್ಲಿ ತಾಂಡವವಾಡುತ್ತಿರುವ ‘ಭ್ರಷ್ಟಾಚಾರದ ಸಾಂಕ್ರಾಮಿಕತೆ’ಗೆ ಅದು ದ್ಯೋತಕವಾಗಿದೆ.

 

ಯಾರ್ಯಾರ ಹಣೆಬರಹ ಎಷ್ಟೆಷ್ಟು?

  • ಶ್ರೇಯಾಂಕದ ಪಟ್ಟಿಯಲ್ಲಿ ತಲಾ 90 ಅಂಕ ಗಳಿಸುವ ಮೂಲಕ ಡೆನ್ಮಾರ್ಕ್ ಮತ್ತು ನ್ಯೂಜಿಲೆಂಡ್ ‘ಭ್ರಷ್ಟಾಚಾರಮುಕ್ತ ದೇಶ’ ಎಂಬ ಹಣೆಪಟ್ಟಿಯೆಡೆಗೆ ಅಂಬೆಗಾಲಿಡುತ್ತಿದ್ದರೆ, ತರುವಾಯದ ಸ್ಥಾನಗಳಲ್ಲಿ ಫಿನ್ಲೆಂಡ್ (89), ಸ್ವೀಡನ್ (88), ಸ್ವಿಜರ್ಲೆಂಡ್ (86), ನಾರ್ವೆ (85), ಸಿಂಗಪೂರ್ (84), ನೆದರ್ಲೆಂಡ್ಸ್ (83), ಕೆನಡ (82), ಜರ್ಮನಿ (81) ದೇಶಗಳಿವೆ.
  • ಈ ಪಟ್ಟಿಯಲ್ಲಿ ಭಾರತಕ್ಕೆ ದಕ್ಕಿರುವ ಶ್ರೇಯಾಂಕ ಹೀಗಾಗಿ ಭ್ರಷ್ಟತೆಯ ತೀವ್ರತೆಯನ್ನು ಬಿಡಿಸಿ ಹೇಳುವ ಅಗತ್ಯವಿಲ್ಲ.
  • ದೈನಂದಿನ ವ್ಯವಹಾರಗಳಲ್ಲಿ ಅದರ ಪ್ರತಿಬಿಂಬ ಕಾಣುತ್ತಿರುವ ನಮ್ಮಂಥ ಭಾರತೀಯರಿಗೆ ಅದರ ಅಗತ್ಯವೂ ಇಲ್ಲ. ನಮ್ಮ ಪಾಡೇ ಹೀಗಿರುವಾಗ ಸೂಚ್ಯಂಕ ಪಟ್ಟಿಯಲ್ಲಿ ಕೊನೆಯ ಸ್ಥಾನ ಅಲಂಕರಿಸಿರುವ ದೇಶಗಳಲ್ಲಿನ ಜನರ ಪಾಡು ಹೇಗಿದ್ದೀತು? ಊಹಿಸಿ. ಅಂಥ ಕೆಲ ದೇಶಗಳ ಸ್ಯಾಂಪಲ್​ಗಳು ಹೀಗಿವೆ- ಅಫ್ಘಾನಿಸ್ತಾನ (15), ಲಿಬಿಯಾ, ಸೂಡಾನ್ ಮತ್ತು ಯೆಮನ್ (14), ಸಿರಿಯಾ (13), ಉತ್ತರ ಕೊರಿಯಾ (12), ದಕ್ಷಿಣ ಸೂಡಾನ್ (11), ಸೊಮಾಲಿಯಾ (10).

 

  • ಸಮಾಜಗಳ ಸ್ಥಿರತೆ ಮತ್ತು ಭದ್ರತೆಗೆ ಭ್ರಷ್ಟಾಚಾರವು ಒಡ್ಡಿರುವ ಸಮಸ್ಯೆಗಳು ಮತ್ತು ಬೆದರಿಕೆಗಳು ಗಂಭೀರ ಸ್ವರೂಪದಲ್ಲಿರುವುದರ ಕುರಿತು ವಿಶ್ವಸಂಸ್ಥೆಗೆ ಕಳವಳವಾಗಿದೆ. ಇಂಥ ಸಮಸ್ಯೆ/ಬೆದರಿಕೆಗಳಿಂದಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿನ ಸಂಸ್ಥೆಗಳ ಮಹತ್ವ ಮತ್ತು ಮೌಲ್ಯಗಳು ಕುಗ್ಗುವುದರ ಜತೆಗೆ, ನೈತಿಕತೆಗೆ ಮತ್ತು ನ್ಯಾಯವ್ಯವಸ್ಥೆಗೆ ಧಕ್ಕೆಯೊದಗುತ್ತದೆ. ತತ್ಪರಿಣಾಮವಾಗಿ, ದೇಶವೊಂದರ ಸುಸ್ಥಿರ ಬೆಳವಣಿಗೆ ಹಾಗೂ ಕಾನೂನು ನಿಯಮಕ್ಕೆ ಗಂಡಾತರ ಒದಗುತ್ತದೆ’.

 

ವಿಶ್ವಸಂಸ್ಥೆ ಈ ಒಡಂಬಡಿಕೆಗೆ ಈ ಅಧಿಕಾರಗಳನ್ನು ಪ್ರದಾನಿಸಿದೆ:

 

  • ಅತೀವ ದಕ್ಷತೆಯಿಂದ ಮತ್ತು ಪರಿಣಾಮಕಾರಿಯಾಗಿ ಭ್ರಷ್ಟಾಚಾರವನ್ನು ತಡೆಯಲು ಮತ್ತು ಅದರೊಂದಿಗೆ ಸೆಣಸಲು ಇರುವ ಮಾಗೋಪಾಯಗಳ ಪ್ರವರ್ತನೆ ಮತ್ತು ಬಲವರ್ಧನೆ;

 

  • ಭ್ರಷ್ಟಾಚಾರ ನಿಗ್ರಹ ಮತ್ತು ಅದರ ವಿರುದ್ಧದ ಹೋರಾಟದಲ್ಲಿನ ಅಂತಾರಾಷ್ಟ್ರೀಯ ಸಮುದಾಯದ ಸಹಕಾರ ಮತ್ತು ತಾಂತ್ರಿಕ ನೆರವಿಗೆ ಒತ್ತಾಸೆಯಾಗಿ ನಿಲ್ಲುವುದು;

 

  • ಸಾರ್ವಜನಿಕ ವ್ಯವಹಾರಗಳು ಮತ್ತು ಸಾರ್ವಜನಿಕ ಸ್ವತ್ತಿನ ಸಮರ್ಥ ನಿರ್ವಹಣೆ, ಉತ್ತರದಾಯಿತ್ವ ಹಾಗೂ ಸಮಗ್ರತೆಗೆ ಉತ್ತೇಜಿಸುವುದು.

 

ಭ್ರಷ್ಟಾಚಾರ ಮತ್ತು ಅಸಮಾನತೆ ಪರಸ್ಪರ ಪೂರಕವೇ ?

 

  • ಸಂಸ್ಥೆ ಬಿಡುಗಡೆ ಮಾಡಿರುವ 2016ರ ಭ್ರಷ್ಟಾಚಾರ ಸೂಚ್ಯಂಕ ಪಟ್ಟಿಯಲ್ಲಿ, ಭ್ರಷ್ಟಾಚಾರ ಮತ್ತು ಅಸಮಾನತೆಯ ನಡುವಿನ ನಂಟು ಗಮನಾರ್ಹವಾಗಿ ಬಿಂಬಿತವಾಗಿದೆ. ಅಂದರೆ, ಭ್ರಷ್ಟಾಚಾರ, ಸಮಾಜದಲ್ಲಿ ಅಧಿಕಾರಶಕ್ತಿಯ ಹಂಚಿಕೆಯಲ್ಲಾಗಿರುವ ಅಸಮಾನತೆ ಮತ್ತು ಸಂಪತ್ತಿನ ಹಂಚಿಕೆಯಲ್ಲಾಗಿರುವ ತಾರತಮ್ಯದಂಥ ಅಂಶಗಳ ನಡುವೆ ಒಂದು ‘ವಿಷವೃತ್ತ’ವನ್ನು ಹುಟ್ಟುಹಾಕುವ ನಿಟ್ಟಿನಲ್ಲಿ ಭ್ರಷ್ಟಾಚಾರ ಮತ್ತು ಅಸಮಾನತೆ ಪರಸ್ಪರ ಪೂರಕವಾಗಿವೆ ಎಂದರ್ಥ.

 

ಇವತ್ತಿನ ಭ್ರಷ್ಟಾಚಾರ

 

  • ರಾಜಕೀಯ

 

ರಾಜಕಾರಣಿಗಳ ಪಾತಕಿತನ ಒಂದು ಮುಖ್ಯವಾದ ಅಂಶ. July 2008 ರ The Washington Post, ಭಾರತದ ಪಾರ್ಲಿಮೆಂಟ್ ಸದಸ್ಯರಲ್ಲಿ ತುಂಬ ಜನ ಕೊಲೆ, ಅತ್ಯಾಚಾರ ಹಾಗು ಇನ್ನು ಇತರ ಪ್ರಕರಣಗಳಲ್ಲಿ ಬಾಗಿಗಳಾಗಿದ್ದಾರೆ ಎಂದು ವರದಿ ಸಲ್ಲಿಸಿತು. ಉತ್ತರಪ್ರದೇಶದ 2002ನೇ ಚುನಾವಣೆಗಳಲ್ಲಿ ಪೊಲೀಸ್ ಪ್ರಕರಣಗಳಲ್ಲಿ ಒಳಗೊಂಡಿರುವ ಇಬ್ಬರು ಹೆಚ್ಚು ಮತಗಳಿಸಿ ಕುರ್ಚಿ ತಮ್ಮದಾಗಿಸಿಕೊಂಡರು.

 

  • ಸರ್ಕಾರಿ ಅಧಿಕಾರಿಗಳು

 

ಭಾರತದಲ್ಲಿನ 50% ಗೂ ಹೆಚ್ಚು ಜನರಿಗೆ ಲಂಚ ಕೊಟ್ಟು ತಮ್ಮ ಕೆಲಸ ಕಾರ್ಯಗಳನ್ನ ಸಾಧಿಸುವ ಅಭ್ಯಾಸ ಇದೆ. ಕರ ಮತ್ತು ಲಂಚ ರಾಜ್ಯಗಳ ಎಲ್ಲೆಗಳಲ್ಲಿ ಸರ್ವಸಾಧಾರಣ. ಟ್ರಕ್ ಮತ್ತು ಲಾರಿಗಳು ವರ್ಷಕ್ಕೆ 50,00,000 ಕ್ಕೂ ಹೆಚ್ಚು ರುಪಾಯಿಗಳನ್ನ ಲಂಚವಾಗಿ ಕೊಡುತ್ತಿವೆ ಎಂದು Transparency International ವರದಿ ಮಾಡಿದೆ. ಸಿಂಗಾಪುರ್, ಹಾಂಗ್ ಕಾಂಗ್, ದಕ್ಷಿಣ ಕೊರಿಯಾ, ಜಪಾನ್, ಮಲೇಶ್ಯಾ, ತೈವಾನ್, ವಿಯಟ್ನಮ್, ಚೈನಾ, ಫಿಲಿಪೈನ್ಸ್ ಮತ್ತು ಇಂಡೋನೇಶ್ಯ ನಾಡುಗಳಲ್ಲಿ ಇರುವ ಸರ್ಕಾರಿ ಅಧಿಕಾರಿಗಳಿಗಿಂತ, ಭಾರತದ ಅಧಿಕಾರಿಗಳು ತಮ್ಮ ಕಾರ್ಯ ನಿರ್ವಹಿಸುವಲ್ಲಿ ತುಂಬಾ ನಿಧಾನ ಎಂದು ಸಮೀಕ್ಷೆ ತಿಳಿಸಿದೆ.

ಅಧಿಕಾರಿಗಳು ಸರ್ಕಾರಿ ಸೊತ್ತುಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. 80% ಕ್ಕೂ ಹೆಚ್ಚು ಬಡ ಜನರ ಆಹಾರ ಪದಾರ್ಥಗಳನ್ನು ಕದ್ದಿದ್ದಾರೆ.

ಮುನ್ಸಿಪಾಲಿಟಿ ಸದಸ್ಯರು, ಸರ್ಕಾರಿ ಅಧಿಕಾರಿಗಳು, ಚುನಾವಣೆಯಲ್ಲಿ ಗೆದ್ದ ರಾಜಕಾರಣಿಗಳು, ನ್ಯಾಯಾಧಿಕಾರಿಗಳು ಮತ್ತು ರಿಯಲ್ ಎಸ್ಟೇಟ್ ಡೆವಲಪರ್ಸ್, ಭಾರತದಾದ್ಯಂತ ಸರ್ಕಾರಿ ಜಾಗಗಳನ್ನ ಅಕ್ರಮ ರೀತಿಯಲ್ಲಿ ತಮ್ಮದಾಗಿಸಿಕೊಂಡಿದ್ದಾರೆ. ಕಟ್ಟಡ ನಿರ್ಮಾಣ ಸಂಸ್ಥೆಗಳು, ರಾಜಕಾರಣಿಗಳು, ಸರ್ಕಾರಿ ಅಧಿಕಾರಿಗಳು, ನಿರ್ಮಾಣ ಸಾಮಾಗ್ರಿಗಳ ಸರಬರಾಜು ಮಾಡುವವರು, ಗುತ್ತಿಗೆದಾರದು ಎಷ್ಟೊ ಸರ್ಕಾರಿ ಟೆಂಡರ್‌ಗಳ (ಉದಾ: ರಸ್ತೆ ನಿರ್ಮಾಣ, ಫ್ಲೈ ಓವರ್, ಸರ್ಕಾರಿ ಕಟ್ಟಡ, ಇತ್ಯಾದಿ) ಮೇಲೆ ಆಡಳಿತ ನಡೆಸುತಿದ್ದಾರೆ. ದುರ್ಬಲವಾದ ನಿರ್ಮಾಣದಿಂದ ಹೆಚ್ಚು ಬಾಳಿಕೆ ಬರದೇ ಜೋರು ಮಳೆ ಅಥವ ಗಾಳಿ ಬಂದಾಗ ಕುಸಿದ ಕಟ್ಟಡಗಳು ಎಷ್ಟೊ ಇವೆ.

 

ಇನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಸರಿಯಾದ ಪ್ರಮಾಣದಲ್ಲಿ ಔಷಧಗಳು ಸಿಗುವುದಿಲ್ಲ. ಸಿಕ್ಕರೂ ಅವು ಕೆಲವೊಂಮ್ಮೆ ಅವು ನಕಲಿ ಆಗಿರುತ್ತವೆ. ರೋಗಿಯನ್ನು ಅಡ್ಮಿಟ್ ಮಾಡಿಸಬೇಕಾದರೆ ಲಂಚ ಕೊಡಬೇಕು. ವೈದ್ಯರನ್ನು ವಿಚಾರಿಸುವುದಕ್ಕೆ ಲಂಚ ಕೊಡಬೇಕು.

 

ಕೆಲವು ವಿಮಾನ ನಿಲ್ಡಾಣದಲ್ಲಿ (ಉದಾ: ಕೇರಳದ ತಿರುವನಂತಪುರ ವಿಮಾನ ನಿಲ್ದಾಣ) ವಿದೇಶೀ ಪ್ರವಾಸಿ ಪ್ರಯಾಣಿಕರ ಬ್ಯಾಗ್ಸ್, ಲಗ್ಗೇಜ್ಸ್ ಗಳು ಕಳೆದು ಹೋದಾಗ ಅಲ್ಲಿದ್ದ ಅಧಿಕಾರಿಗಳು ಸಂರಕ್ಷಣೆ ಕೊಡುವುದರಲ್ಲಿ ವಿಫಲರಾಗಿದ್ದಾರೆ. ನಿಲ್ಡಾಣದ ಭ್ರಷ್ಟ ಅಧಿಕಾರಿಗಳು, ಕೆಲಸಗಾರರು ಕೆಲವೊಮ್ಮೆ ಈ ರೀತಿ ಕೃತ್ಯಗಳಿಗೆ ಸಹಕಾರ ನೀಡುತ್ತಾರೆ ಅನ್ನೊ ಸುದ್ದಿ ಕೂಡ ಇದೆ.

  • ನ್ಯಾಯಾಲಯಗಳು

ನ್ಯಾಯಧೀಶರು ಕಮ್ಮಿಯಾಗಿರುವುದರಿಂದ ತುಂಬಾ ವರ್ಷಗಳ ಕೇಸುಗಳು ಮುಗಿಯದೆ ಹಾಗೆ ಇವೆ. ಇದರಿಂದಾಗಿ, ನಿಜವಾದ ಅಪರಾಧಿ ಯಾರು ಅಂತ ಪತ್ತೆ ಹಚ್ಚುವುದರ ಒಳಗೆ, ಆ ಅಪರಾಧಿ ಇನ್ನಷ್ಟು ಅಪರಾಧಗಳನ್ನು ಮಾಡಿರುತ್ತಾನೆ. ಅದಲ್ಲದೇ ಈಗೀಗ ಕೆಲವು ನ್ಯಾಯಾಧೀಶರ ಮೇಲೂ ಭ್ರಷ್ಟಾಚಾರದ ಕರಿ ನೆರಳು ಕಾಣಿಸಿಕೊಳ್ಳುತ್ತಿರುವುದು ವಿಷಾಧದ ಸಮ್ಗತಿ.

  • ಪೊಲೀಸ್

ಇವರ ಬಗ್ಗೆ ಹೆಚ್ಚು ಹೇಳಬೇಕಾಗಿಲ್ಲ. ಎಲ್ಲರಿಗೂ ಗೊತ್ತು. ನಿಜವಾದ ಅಪರಾಧಿಗಳನ್ನ ಪತ್ತೆ ಹಚ್ಚುವುದಕ್ಕೆ ಬದಲು, ಅಮಾಯಕ ಜನರನ್ನ ಹಿಡಿದು, ಆ ಅಪರಾಧವನ್ನ ಅವರ ತಲೆಗೆ ಕಟ್ಟಿ, ಹಿಂಸೆ ಕೊಟ್ಟು, ಆ ಕೇಸನ್ನು ಮುಚ್ಚುತ್ತಾರೆ. ಇದಕ್ಕೆ Target Achievement. ಯಾರಿಂದ? ಆ ನಿಜವಾದ ಅಪರಾಧಿಯಿಂದ .ನಿಷ್ಟಾವಂತ ಪೊಲೀಸ್ ಅಧಿಕಾರಿಗಳು ಕೂಡ ಇದಾರೆ. ಆದರೆ ಕಮ್ಮಿ.

 

  • ಧಾರ್ಮಿಕ ಮುಖಂಡರು

ಇತ್ತೀಚಿಗಷ್ಟೇ ಹೊರಬಂದ ಸ್ವಾಮಿಜಿಗಳ ಪ್ರಕರಣ. ಇದು ಮೊದಲನೆಯದಲ್ಲ. ಹಿಂದೆ ಇಂತಹ ಘಟನೆಗಳು ಬಹಳಷ್ಟು ನಡೆದಿವೆ. ಇವರಿಗೆಲ್ಲ ಎಲ್ಲಿಂದ ಬರುತ್ತೆ ಅಷ್ಟೊಂದು ಹಣ? ಹೊರ ದೇಶಗಳಿಂದ ಕಳಿಸುವ ಡೊನೇಷನ್ಸ್. ಬಂದ ಹಣದಿಂದ 10%ರಷ್ಟು ಧಾರ್ಮಿಕ ಕಾರ್ಯಗಳಿಗೆ ಉಪಯೋಗಿಸಿದರೆ, ಉಳಿದುದ್ದನ್ನು ಇನ್ಯಾರಿಗೋಸ್ಕರ ಉಪಯೋಗಿಸುತ್ತಾರೋ ಗೊತ್ತಿಲ್ಲ.

  • ಈಗ ನಮ್ಮ ವಿಚಾರಕ್ಕೆ ಬರೋಣ

Helmet ಇಲ್ಲದೆ ದ್ವಿಚಕ್ರ ಚಾಲನೆ ಮಾಡಿದರೆ fine ಕಟ್ಟಬೇಕು. ಅ ಜಾಗದಲ್ಲಿ ಲಂಚ ಕೊಡುವವರು ಯಾರು? ಪೊಲೀಸ್ ನವರು ಲಂಚ ಪಡೆಯೋ ವಿಷಯವನ್ನ ದೊಡ್ಡದಾಗಿ ಮಾತ್ತಾಡೋ ನಮಗೆ ನಮ್ಮ ತಪ್ಪಿನ ಅರಿವು ಯಾಕಿರುವುದಿಲ್ಲ?

ರಸ್ತೆಯಲ್ಲಿ ಉಗಿಯುವುದು, ರಸ್ತೆ ಬದಿಯಲ್ಲಿ ಮೂತ್ರ ವಿಸರ್ಜೆನೆ ಮಾಡುವುದು, ಓಡುವ ಬಸ್ ಹತ್ತುವುದು / ಇಳಿಯುವುದು, ಕೆಂಪು ಸಿಗ್ನಲ್ ಕೊಟ್ಟಿರೋ ಸ್ಥಳದಲ್ಲಿ ಬಸ್ ನಿಂದ ಇಳಿಯುವುದು ಇದೆಲ್ಲ ತಪ್ಪು.ಲಂಚ ಪಡೆಯೋದು ಎಷ್ಟು ತಪ್ಪೋ ಅಷ್ಟೇ ತಪ್ಪು ಲಂಚ ಕೊಡೊದು.

ವರದಕ್ಷಿಣೆ ಅನ್ನೊ ಹೆಸರಿನಲ್ಲಿ ನಡೆಯೋ Business Dealings. ಮದುವೆ ಅನ್ನೋ ಹೆಸರಿನಲ್ಲಿ ನಡೆಯೋ ವ್ಯಾಪಾರ.ವರದಕ್ಷಿಣೆ ಪಡೆಯೋದು ಎಷ್ಟು ತಪ್ಪೋ ಅಷ್ಟೇ ತಪ್ಪು ವರದಕ್ಷಿಣೆ ಕೊಡೊದು.

 

ಚಿಕ್ಕ ಚಿಕ್ಕ ನಿಯಮಗಳನ್ನ ನಾವು ಪಾಲಿಸಬೇಕು. ಇಂತಹ ನಿಯಮಗಳು ಬಹಳಷ್ಟು ಇವೆ. ಆ ನಿಯಮಗಳನ್ನ ಮೀರಿದರೆ ಅದು ಕೂಡ ಭ್ರಷ್ಟಾಚಾರವೇ. ದಿನನಿತ್ಯ ಇಂತಹ ತಪ್ಪುಗಳನ್ನು ಮಾಡೊ ನಾವು ಭಾರತದ ಭ್ರಷ್ಟಾಚಾರದ ಬಗ್ಗೆ ಚಿಂತಿಯೋದು ನ್ಯಾಯನ?

 

ಭ್ರಷ್ಟಾಚಾರ ತಡೆಗಟ್ಟಲು ಮಾಡಿರುವ ಪ್ರಯತ್ನಗಳು:

 

  • Right to Information Act

 

  • Bhoomi (Computerization of land registry records of karnataka)

 

  • Wistleblowers

 

 

  • ಟ್ರಾನ್ಸ್​ಪರೆನ್ಸಿ ಸಂಸ್ಥೆಯ ಚೇರ್ಮನ್ ಜೋಸ್ ಉಗಾಜ್ ಅಭಿಪ್ರಾಯದಂತೆ, ಬಹಳಷ್ಟು ದೇಶಗಳಲ್ಲಿ ಜನರು ಭ್ರಷ್ಟಾಚಾರದ ಕಾರಣದಿಂದಾಗಿ ಅತ್ಯಂತ ಮೂಲಭೂತವಾಗಿರುವ ಅವಶ್ಯಕತೆಗಳಿಂದ ವಂಚಿತರಾಗಿ ಪ್ರತಿದಿನ ರಾತ್ರಿ ಹಸಿದ ಹೊಟ್ಟೆಯಲ್ಲೇ ಮಲಗಿದರೆ, ಪ್ರಭಾವಿಗಳು ಮತ್ತು ಭ್ರಷ್ಟರು ನಿರ್ಭೀತಿಯಿಂದ-ನಿರ್ಲಜ್ಜೆಯಿಂದ ಐಷೋರಾಮಿ ಜೀವನಸೌಕರ್ಯಗಳನ್ನು ಅನುಭವಿಸುತ್ತಿದ್ದಾರೆ.

.

 

ಅಮೆರಿಕಾ,ಸಿಂಗಾಪೂರ, ಇಂಗ್ಲೆಂಡ್, ದುಬೈ ದೇಶಗಳ ಹಾಗೆ ನಮ್ಮ ದೇಶವು ಆಗ ಬಹುವುದೇ.?

 

Yes ಆಗಬಹುವುದು ಕೆಲವು ದಾರಿಗಳುಯಿವೆ

  • ಪ್ರತಿಯೊಂದು ಸಕಾ೯ರೀ ಸೇವೆಯನ್ನು Online ಮಾಡಬೇಕು.ಇದರಿಂದ ಪೂತಿ೯ ತಡೆಯೋಕೆ ಆಗಲ್ಲ. ಆದರೂ ಒಂದು ಇಷ್ಟು ಶೇಕಡಾವಾರು ಕಡಿಮೆ ಮಾಡಬಹುವುದು.
  • ನಮ್ಮ ದೇಶದ ಪ್ರತಿಯೊಬ್ಬ ನಾಗರಿಕನು ತನ್ನಗೆ ಏಷ್ಷೆ ತೋದರೆ ಆದರೂ ಲಂಚ ಕೊಡಬಾರದು, ತೇಗಿದು ಕೊಳಬಾರದು ಅಂತ ದೃಢ ಸಂಕಲ್ಪ ಮಾಡಬೇಕು.
  • ನಮ್ಮ ದೇಶದಲ್ಲಿರುವ ಆಸ್ತಿ ಹಕ್ಕು ಕಾಯ್ದೆ ತೇಗಿಯಬೇಕು.ಅಂದರೆ ದೇಶದ ಎಲ್ಲಾ ಭೂಮಿಯು ಸಕಾ೯ರದ ಹೆಸರಿನಲ್ಲಿ ಇರಬೇಕು. ಯಾರು ಭೂಮಿಯನ್ನು ಕೋಡುಕೊಳುವ,ಮಾರುವ ಹಾಗೆ ಇರಬಾರದು. ಸಕಾ೯ರವೆ ಮನೆ ಕಟ್ಟಿಸಿ ಜನರಿಗೆ ಅವರ ಕುಟುಂಬದ ಜನ ಸಂಖ್ಯೆ ಯ ಆಧಾರದ ಮೇಲೆ 1 BHK, 2 BHK ಮನೆಗಳನ್ನು ತಿಂಗಳ ಬಾಡಿಗೆಗೆ ಕೊಡಬೇಕು.ರೈತರಿಗೂ ಇದೇ ರೀತಿಯಲ್ಲಿ ಹೊಲವನ್ನು ಒಂದು ವಷ೯ಕ್ಕೆ ಇಂತಿಷ್ಟು ಅಂಥ Tax ತೆಗಿದುಕೊಂಡು ಬೆಳೆಯಲು ಕೊಡಬೇಕು. ಮುಂದಿನ ವಷ೯ ಅವರು ದುಡಿಮೆಯನ್ನು ನೋಡಿ Renewal ಮಾಡಬೇಕು.

 

  • 2000 Rs ಮೇಲಪ್ಟ ಎಲ್ಲಾ ವ್ಯವಹಾರಗಳನ್ನು ಬ್ಯಾಂಕುಗಳ ಮುಖಾಂತರವೆ ಮಾಡಬೇಕು ಅಂತ ಕಾಯ್ದೆ ಜಾರಿಮಾಡಬೇಕು. ಎಲ್ಲಾ ಸಣ್ಣ ದೊಡ್ಡ ಅಂಗಡಿಯವರಿಗೆ ATM Card Reader machine ಗಳನ್ನು ಉಚಿತವಾಗಿ ಕೊಡಬೇಕು.
  • 2000Rs ಮೇಲಪ್ಟ ಎಲ್ಲಾ ವ್ಯವಹಾರಗಳನ್ನು Debit Card ಯಿಂದ ಮಾಡಬೇಕು ಅಂಥ ಕಾಯ್ದೆಯನ್ನು ಮಾಡಬೇಕು. ಇದನ್ನ ಎಲ್ಲಾ ಮಾಡೋದು ಅಷ್ಟು ಸುಲಭವಲ್ಲ ನಮ್ಮ ದೇಶದಲ್ಲಿ ಯಾಕೆಂದರೆ ನಮ್ಮದು ಪ್ರಜಾಪ್ರಭುತ್ವವುಳ ದೇಶ. ಈ ರೀತಿಯ ಕಾಯ್ದೆ ನಮ್ಮ ನೆರೆ ದೇಶ ಚೀನಾದಲ್ಲಿ ಇದೆ.ಅದಕ್ಕೆ ಆ ದೇಶ ಅಷ್ಟೊಂದು ವೇಗವಾಗಿ ಬೆಳೆಯುತ್ತಿದೆ.

 

ಮುಂದಿನ ಹಾದಿ

  • ಪ್ರಪಂಚದಲ್ಲಿ ಭ್ರಷ್ಟಾಚಾರವೇ ಇಲ್ಲದ ದೇಶ ಯಾವುದೂ ಇಲ್ಲ. ಒಂದಲ್ಲ ಒಂದು ಬಗೆಯಲ್ಲಿ ಭ್ರಷ್ಟಾಚಾರ ಮನೆಮಾಡಿಕೊಂಡಿದೆ. ಆದರೆ, ಕೆಲವು ರಾಷ್ಟ್ರಗಳಲ್ಲಿ ಭ್ರಷ್ಟಾಚಾರದ ಪ್ರಮಾಣ ಅತಿ ಹೆಚ್ಚಿದ್ದರೆ ಮತ್ತೆ ಕೆಲ ದೇಶಗಳಲ್ಲಿ ಕಡಿಮೆ. ಇನ್ನು ರಾಷ್ಟ್ರದಿಂದ ರಾಷ್ಟ್ರಕ್ಕೆ ಅದರ ಸ್ವರೂಪವೂ ಭಿನ್ನ. ಉದಾಹರಣೆಗೆ, ಸೌದಿ ಅರೇಬಿಯಾದಲ್ಲಿ ರಾಜಪರಿವಾರದ ಕೈಯಲ್ಲಿ ಅಧಿಕಾರವಿದ್ದು, ಅವರು ಜನರ ಮೇಲೆ ಕಡಿಮೆ ತೆರಿಗೆ ಹಾಕಿ, ಅವರಿಗೆ ಬೇಕಾದ ಸೌಲಭ್ಯಗಳನ್ನೆಲ್ಲ ಒದಗಿಸುತ್ತಾರೆ. ಹಾಗಾಗಿ, ಮೇಲ್ನೋಟಕ್ಕೆ ಇಲ್ಲಿ ಭ್ರಷ್ಟಾಚಾರ ಕಾಣಿಸುವುದಿಲ್ಲವಾದರೂ ಅದರ ಒಳಸುಳಿಗಳು ಭಿನ್ನವಾಗಿಯೇ ಇವೆ. ಅಮೆರಿಕದಂಥ ಮುಂದುವರಿದ ರಾಷ್ಟ್ರಗಳ ಉದಾಹರಣೆ ತೆಗೆದುಕೊಂಡರೆ ಅಲ್ಲಿ ಕೆಳಹಂತದಲ್ಲಿ ಭ್ರಷ್ಟಾಚಾರ ಬಿಲ್​ಕುಲ್ ಇಲ್ಲ. ಜನರು ದೈನಂದಿನ ವ್ಯವಹಾರಗಳನ್ನು ಭ್ರಷ್ಟಾಚಾರದ ಗೊಡವೆ ಇಲ್ಲದೆ ಪಾರದರ್ಶಕವಾಗಿ, ನಿಗದಿತ ಕಾಲಾವಧಿಯಲ್ಲಿ ಮಾಡಿಕೊಳ್ಳಬಹುದು. ಜನನ ಪ್ರಮಾಣಪತ್ರ, ನೋಂದಣಿ ಪ್ರಕ್ರಿಯೆಗಳಲ್ಲೆಲ್ಲ ಲಂಚದ ಹಾವಳಿಯಿಲ್ಲ.

 

  • ಮುಂದುವರಿದ ದೇಶಗಳಲ್ಲಿ ಭ್ರಷ್ಟಾಚಾರದ ಪ್ರಮಾಣ ಕಡಿಮೆ ಯಾಕೆ ಎನ್ನುವುದನ್ನು ಅವಲೋಕಿಸುವಾಗ ಕೆಲ ಸಂಗತಿಗಳು ಸ್ಪಷ್ಟಗೋಚರವಾಗುತ್ತವೆ. ಮೊದಲನೆಯದು, ಕಠಿಣ ನಿಯಮಗಳು ಮತ್ತು ಪಾಲನೆ. ಅಲ್ಲೆಲ್ಲ ನಿಯಮಗಳು ಎಲ್ಲರಿಗೂ ಅನ್ವಯವಾಗುತ್ತವೆ. ಯಾರೇ ತಪು್ಪ ಮಾಡಿದರೂ ಅದು ತಪ್ಪೇ. ಹಾಗಾಗಿ, ನಿಯಮ ಉಲ್ಲಂಘಿಸಿದವರಿಗೆ ಶಿಕ್ಷೆ, ದಂಡ ಕಟ್ಟಿಟ್ಟಬುತ್ತಿ. ಉದಾ: ಅಮೆರಿಕದಲ್ಲಿ ಟ್ರಾಫಿಕ್​ನಲ್ಲಿ ರೆಡ್ ಸಿಗ್ನಲ್ ಜಂಪ್ ಮಾಡಿದರೆ ಸಾವಿರ ಡಾಲರ್, ರಸ್ತೆಯಲ್ಲಿ, ಸಾರ್ವಜನಿಕ ಪ್ರದೇಶದಲ್ಲಿ ಕಸ ಚೆಲ್ಲಿದರೆ 1,500 ಡಾಲರ್ ದಂಡ ವಿಧಿಸಲಾಗುತ್ತದೆ. ಹೀಗೆ ತಪು್ಪ ಮಾಡಿದವರು ಪ್ರತಿಷ್ಠಿತರೋ, ಜನಸಾಮಾನ್ಯರೋ ಎಂಬುದನ್ನು ಅಲ್ಲಿ ಪರಿಗಣಿಸುವುದಿಲ್ಲ. ಆರ್ಥಿಕ ವ್ಯವಹಾರಗಳ ವಿಷಯಕ್ಕೆ ಬಂದಾಗ ಇಂದು ನಿಯಮ ಉಲ್ಲಂಘಿಸಿ ಆಕಸ್ಮಾತ್ ಶಿಕ್ಷೆಯಿಂದ ತಪ್ಪಿಸಿಕೊಂಡರೂ ಕೆಲ ವರ್ಷಗಳ ಬಳಿಕ ಆ ವ್ಯಕ್ತಿ ತಪು್ಪ ಮಾಡಿದ್ದಾನೆ ಎಂದು ಗೊತ್ತಾದರೆ ಶಿಕ್ಷೆ ನಿಕ್ಕಿ. ಆದ್ದರಿಂದ, ಜನರು ನಿಯಮಗಳನ್ನು ಉಲ್ಲಂಘಿಸಲು ಹೆದರುತ್ತಾರೆ. ನಿಯಮಗಳನ್ನು ಚಾಚೂತಪ್ಪದೆ ಪಾಲಿಸುತ್ತಾರೆ. ಸ

 

  • ರ್ಕಾರಿ ಕಚೇರಿಗಳಲ್ಲಿ ಕೆಲಸಕಾರ್ಯಗಳು ನಿಗದಿತ ಕಾಲಾವಧಿಯಲ್ಲೇ ಮುಗಿಯಬೇಕು. ಒಂದು ವೇಳೆ ಹಾಗಾಗದಿದ್ದರೆ, ಅಂಥ ನೌಕರನ ಮೇಲೆ ಶಿಸ್ತುಕ್ರಮ ಖಾತ್ರಿ. ಆದ್ದರಿಂದ, ಸರ್ಕಾರಿ ಕಚೇರಿಗಳು ಲಂಚ ಮತ್ತು ವಿಳಂಬಧೋರಣೆಯಿಂದ ದೂರವುಳಿದಿವೆ. ಸರ್ಕಾರಿ ನೌಕರರು, ಇತರೆ ಸಿಬ್ಬಂದಿ ನಿಗದಿತ ಕಾಲಾವಧಿಯಲ್ಲಿ ಕೆಲಸ ಮಾಡಲು ಬಾಧ್ಯಸ್ಥರಾಗುತ್ತಾರೆ. ಅಂದರೆ, ಅಲ್ಲಿ ಟೈಮ್ ಬಾಂಡ್ ಇದೆ, ರೆಸ್ಪಾನ್ಸಿಬಿಲಿಟಿ(ಜವಾಬ್ದಾರಿ) ಮತ್ತು ರೂಲ್ಸ್ ಬಾಂಡ್ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ.

 

  • ಭಾರತದ ವಿಷಯಕ್ಕೆ ಬಂದರೆ ಇಲ್ಲಿ ಕಾನೂನು ರೂಪಿಸುವವರೇ ಕಾನೂನನ್ನು ಉಲ್ಲಂಘಿಸುತ್ತಾರೆ. ಇದು ಬಹುದೊಡ್ಡ ದುರಂತ. ಮತ್ತೊಂದು ವೈಚಿತ್ರ್ಯವೆಂದರೆ ‘ನಿಯಮ ಎಲ್ಲರಿಗೂ ಅನ್ವಯವಾಗಬೇಕು, ಆದರೆ ತನ್ನನ್ನು ಹೊರತುಪಡಿಸಿ’ ಎಂಬುದು. ಇಲ್ಲಿ ನಿಯಮಗಳಿಂದ ತಪ್ಪಿಸಿಕೊಳ್ಳಲು, ವಿನಾಯ್ತಿ ಪಡೆದುಕೊಳ್ಳಲು ಪೈಪೋಟಿಯೇ ನಡೆಯುತ್ತದೆ. ‘ನಾನು ಯಾರು ಗೊತ್ತಾ?’ ಎಂಬ ಅಹಂಕಾರದ ಪ್ರದರ್ಶನವಾಗುತ್ತದೆ. ಭಾರತದಲ್ಲಿ ಮೊದಲಿನ ಸ್ಥಿತಿಗೆ ಹೋಲಿಸಿದರೆ ಭ್ರಷ್ಟಾಚಾರ ಗಮನಾರ್ಹ ಪ್ರಮಾಣದಲ್ಲಿ ಕಡಿಮೆಯಾಗಿದೆ. ಆನ್​ಲೈನ್ ವಹಿವಾಟು, ಬಿಗಿಗೊಂಡ ನಿಯಮಗಳ ಪರಿಣಾಮ ಈ ಬದಲಾವಣೆ ಸಾಧ್ಯವಾಗಿದೆ.

 

  • ಭ್ರಷ್ಟಾಚಾರ ನಿಗ್ರಹದಲ್ಲಿ ಮತ್ತೊಂದು ಮುಖ್ಯ ಅಂಶವನ್ನು ಗ್ರಹಿಸಬೇಕು, ಲಂಚ ತೆಗೆದುಕೊಳ್ಳುವುದು ಎಷ್ಟು ತಪ್ಪೋ, ಅದನ್ನು ನೀಡುವುದು ಕೂಡ ಅಷ್ಟೇ ತಪು್ಪ. ಜನರು ಅಲೆದಾಟವನ್ನು ತಪ್ಪಿಸಿಕೊಳ್ಳಲು ಅಥವಾ ಕೆಲಸಗಳನ್ನು ತುರ್ತಾಗಿ ಮಾಡಿಸಿಕೊಳ್ಳಲು ಲಂಚ ನೀಡುತ್ತಾರೆ. ಈ ಪರಿಪಾಠ ನಿಲ್ಲಬೇಕು. ಯಾವುದೇ ಕೆಲಸಕ್ಕೂ, ಯಾವುದೇ ಕಾರಣಕ್ಕೂ ಲಂಚ ನೀಡುವುದಿಲ್ಲ ಎಂದು ಜನರು ಸಂಕಲ್ಪಿಸಿಕೊಂಡರೆ ಸರ್ಕಾರಿ ಯಂತ್ರವೂ ದುರಸ್ತಿಯಾಗುತ್ತದೆ. ಇಂಥ ಜನಾಂದೋಲನ ಭಾರತದಲ್ಲಿ ನಡೆಯಬೇಕಿದೆ. ಹಿಂದೆಲ್ಲ ಸಮಾಜ ಸುಧಾರಕ ಅಣ್ಣಾ ಹಜಾರೆ ಸೇರಿದಂತೆ ಕೆಲವರು ಭ್ರಷ್ಟಾಚಾರ ವಿರೋಧಿ ಅಭಿಯಾನ ನಡೆಸಿದಾಗ ಆ ಬಗೆಯ ಜಾಗೃತಿ ಒಂದಿಷ್ಟು ಕಂಡುಬಂದಿತ್ತು.

 

  • ಇನ್ನೊಂದು ಸಕಾರಾತ್ಮಕ ಅಂಶವೆಂದರೆ ಭಾರತ ಈಗ ಯುವರಾಷ್ಟ್ರ. ಇಲ್ಲಿನ ಯುವಕರು ಭ್ರಷ್ಟಾಚಾರಮುಕ್ತ ವ್ಯವಸ್ಥೆಯನ್ನು ಬಯಸುತ್ತಿದ್ದಾರೆ. ಇವರೆಲ್ಲ ಒಟ್ಟಾಗಿ ಭ್ರಷ್ಟಾಚಾರದ ವಿರುದ್ಧ ಸಿಡಿದೆದ್ದರೆ ಪರಿವರ್ತನೆ ಸಾಧ್ಯ. ಜತೆಗೆ, ಸಮಾಜದ ಮೌಲ್ಯವಸ್ಥೆಯೂ ಪುನರ್ ಸ್ಥಾಪಿತವಾಗಬೇಕು. ಮುಂಚೆಲ್ಲ, ಮನೆ-ಮನೆಗಳಲ್ಲೂ ಮೌಲ್ಯವ್ಯವಸ್ಥೆ ಆರ್ಥಿಕಶುದ್ಧಿಗೆ ಅವಕಾಶ ಕಲ್ಪಿಸಿತ್ತು. ಬೆವರಿನ ದುಡಿಮೆಯ ಗಳಿಕೆಯಲ್ಲೇ ಬದುಕಬೇಕು ಎಂಬ ಅರಿವಿತ್ತು. ಇಂದು ಸಮಾಜದಲ್ಲಿ ಈ ಮೌಲ್ಯ ಮರೆಯಾದ ಪರಿಣಾಮವೇ ದುಡ್ಡಿದ್ದವನಿಗೆ ಬೆಲೆ ಎಂಬಂತಾಗಿದೆ. ಆತ ಆ ಸಂಪತ್ತನ್ನು ಹೇಗೆ ಸಂಪಾದಿಸಿದ ಎಂಬುದನ್ನು ಸಮಾಜ ಗ್ರಹಿಸುತ್ತಿಲ್ಲ.

 

  • ಎಲ್ಲವನ್ನೂ ನಿಯಮಗಳಿಂದಲೇ ಮಾಡಲು ಸಾಧ್ಯವಿಲ್ಲ. ವ್ಯವಸ್ಥೆಯೊಂದು ಪರಿಣಾಮಕಾರಿಯಾಗಿ ನಡೆಯಬೇಕಾದರೆ ನಿಯಮಗಳು ಬೇಕು ಎಂಬುದು ನಿಜ. ಆದರೆ ಉತ್ತಮ ಮೌಲ್ಯವ್ಯವಸ್ಥೆ ಸಮಾಜದಲ್ಲಿ ಅನುಷ್ಠಾನಗೊಂಡಿದ್ದೇ ಆದಲ್ಲಿ ಭ್ರಷ್ಟಾಚಾರ ಸೇರಿದಂತೆ ಹಲವು ಕೆಡಕುಗಳನ್ನು ಪರಾಭವಗೊಳಿಸಬಹುದು.
Share