Daily Current Affairs 2nd September

2nd SEPTEMBER

 

1.ಅಂತಾರಾಜ್ಯ ನದಿಗಳ ಜೋಡಣೆಗೆ  ಮುಹೂರ್ತ

MAINS PAPER 2: GOVERNANCE | GOVERNMENT POLICIES AND INTERVENTIONS FOR DEVELOPMENT IN VARIOUS SECTORS AND ISSUES ARISING OUT OF THEIR DESIGN AND IMPLEMENTATION.

ಪ್ರಮುಖ ಸುದ್ದಿ

  • ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಕನಸಿನ ಕೂಸಾದ ಅಂತಾರಾಜ್ಯ ನದಿಗಳ ಜೋಡಣೆಗೆ ಕೊನೆಗೂ ಮುಹೂರ್ತ ಕೂಡಿ ಬಂದಿದೆ. ನೆರೆ ಕಾಡುವ ರಾಜ್ಯಗಳಲ್ಲಿ ಹರಿದು ಸಮುದ್ರ ಸೇರುವ ಹೆಚ್ಚುವರಿ ನೀರನ್ನು ಬರಪೀಡಿತ ಪ್ರದೇಶಗಳ ಜನ, ಜಾನುವಾರುಗಳ ದಾಹ ತಣಿಸುವ ಜತೆಗೆ ಕೃಷಿಗೆ ಬಳಸಿಕೊಳ್ಳುವ ಉದ್ದೇಶದಿಂದ ಕೇಂದ್ರ ಸರ್ಕಾರ ರೂಪಿಸಿರುವ ಈ ಮಹತ್ವಾಕಾಂಕ್ಷಿ ಯೋಜನೆಯ ಮೊದಲ ಹಂತದ ಕಾರ್ಯಕ್ಕೆ ಒಂದೆರಡು ವಾರದಲ್ಲಿ ಸಂಪುಟದ ಅನುಮೋದನೆ ನೀಡಲಿದೆ.

 

ಏನಿದು ಅಟಲ್ ಯೋಜನೆ..?

  • ನೆರೆಹಾವಳಿಗೆ ಕಾರಣವಾಗುವ ನದಿಗಳನ್ನು ಮಧ್ಯ ಭಾರತ, ಉತ್ತರ ಭಾರತ, ಪಶ್ಚಿಮ ಮತ್ತು ದಕ್ಷಿಣ ಭಾರತಗಳ ನದಿಗಳೊಂದಿಗೆ ಜೋಡಿಸುವ ಈ ಯೋಜನೆಗೆ 2002ರಲ್ಲಿ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಿಂದ ಅನುಮೋದನೆ ಸಿಕ್ಕಿತ್ತು
  • ಆದರೆ ವಿವಿಧ ರಾಜ್ಯಗಳ ನಡುವೆ ನದಿ ನೀರು ಹಂಚಿಕೆ ವಿವಾದ ಸೃಷ್ಟಿಯಾಗುವ ಆತಂಕ ಹಾಗೂ ಕೆಂಪುಪಟ್ಟಿ ಬಾಧೆಯಿಂದಾಗಿ ಯೋಜನೆ ನನೆಗುದಿಗೆ ಬಿದ್ದಿತ್ತು. ಮೊದಲ ಹಂತದಲ್ಲಿ ಯಶಸ್ಸು ದೊರೆತಲ್ಲಿ ದೇಶಾದ್ಯಂತ ಯೋಜನೆ ಅನುಷ್ಠಾನಕ್ಕೆ ವೇದಿಕೆ ನಿರ್ವಣವಾಗುತ್ತದೆ ಎಂದು ಸರ್ಕಾರ ವಿಶ್ವಾಸ ವ್ಯಕ್ತಪಡಿಸಿದೆ.

ಯಾವ್ಯಾವ ನದಿ ಜೋಡಣೆ :

  • ಪಶ್ಚಿಮ ಭಾರತದ ನರ್ಮದಾ ನದಿಗೆ ಪಾರ್-ತಾಪಿ ನದಿಗಳನ್ನು ಜೋಡಿಸುವುದಕ್ಕೂ ನಿರ್ಧರಿಸಲಾಗಿದೆ. ಇದರಂತೆ, ದಮನ್ ಗಂಗಾ ಮತ್ತು ಪಿಂಜಾಲ್ ನದಿಗಳು ಜೋಡಣೆಗೊಳ್ಳಲಿವೆ. ಇವೆಲ್ಲವೂ ಗುಜರಾತ್ ಮತ್ತು ಮಹಾರಾಷ್ಟ್ರದ ಯೋಜನೆಗಳಾಗಿವೆ.
  • ಇದಾದ ಬಳಿಕ ಗಂಗಾ, ಗೋದಾವರಿ ಮತ್ತು ಮಹಾನದಿಗೆ ಅಲ್ಲಲ್ಲಿ ಅಣೆಕಟ್ಟೆಗಳನ್ನು ನಿರ್ವಿುಸಿ, ಕಾಲುವೆಗಳ ಜಾಲದ ಮೂಲಕ ಇನ್ನಿತರ ನದಿಗಳಿಗೆ ನೀರು ಹರಿಸಿ, ನೆರೆಹಾವಳಿ ಮತ್ತು ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಕಾರ್ಯಯೋಜನೆ ರೂಪಿಸಲಾಗಿದೆ.

ಆರಂಭಕ್ಕೂ ಮೊದಲೇ ವಿರೋಧ ..??

  • ಕರ್ಣಾವತಿ ನದಿ ನಿತ್ಯಹರಿದ್ವರ್ಣ ಪನ್ನಾ ಸಂರಕ್ಷಿತ ಅರಣ್ಯ ಪ್ರದೇಶ ಹಾಗೂ ಹುಲಿ ಸಂರಕ್ಷಿತ ಪ್ರದೇಶವನ್ನು ಹಾದು 425 ಕಿ.ಮೀ. ದೂರದವರೆಗೆ ಹರಿಯುತ್ತದೆ. ದೌಧನ್ ಬಳಿಯ ಗಾಂಗಾಂವ್ ಎಂಬಲ್ಲಿ ಬ್ರಿಟಿಷರು 1915ರಲ್ಲಿ ನಿರ್ವಿುಸಿರುವ ಅಣೆಕಟ್ಟೆ ಇದೆ.
  • ಇದಕ್ಕೆ ಅನತಿ ದೂರದಲ್ಲೇ ವಿಶ್ವ ಸಂರಕ್ಷಿತ ಸ್ಮಾರಕ ಎಂದು ಯುನೆಸ್ಕೋ ಘೋಷಿಸಿರುವ ಖಜುರಾಹೊ ದೇಗುಲವಿದೆ. ಇಲ್ಲಿಂದ ಸ್ವಲ್ಪ ದೂರದಲ್ಲಿ, ಅರಣ್ಯ ಪ್ರದೇಶದೊಳಗೆ 250 ಅಡಿ ಎತ್ತರ, 2 ಕಿ.ಮೀ. ಉದ್ದದ ಅಣೆಕಟ್ಟೆ ನಿರ್ವಿುಸಲು ಉದ್ದೇಶಿಸಲಾಗಿದೆ.
  • ಅಣೆಕಟ್ಟೆ ನಿರ್ವಣವಾದರೆ, 9 ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶ ಹಿನ್ನೀರಿನಲ್ಲಿ ಮುಳುಗಡೆ ಯಾಗಲಿದೆ. 10ಕ್ಕೂ ಹೆಚ್ಚು ಕುಗ್ರಾಮದಲ್ಲಿರುವ 2 ಸಾವಿರಕ್ಕೂ ಹೆಚ್ಚು ಕುಟುಂಬಗಳನ್ನು ಬೇರೆಡೆಗೆ ಸ್ಥಳಾಂತರಿಸಬೇಕಾಗುತ್ತದೆ ಎಂಬ ಆಕ್ಷೇಪ ವ್ಯಕ್ತವಾಗಿದೆ.

 

ಪರಿಸರವಾದಿಗಳು ಹೇಳೋದೇನು?

  • ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅಣೆಕಟ್ಟೆ ನಿರ್ವಿುಸುವು ದರಿಂದ ಪರಿಸರ ಮತ್ತು ವನ್ಯಜೀವಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ ಎಂದು ಪರಿಸರವಾದಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
  • ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಅಣೆಕಟ್ಟೆ ನಿರ್ವಿುಸುವುದು, ನೈಸರ್ಗಿಕ ವಿಪತ್ತಿಗೆ ಆಹ್ವಾನ ನೀಡಿದಂತೆ. ಇದರಿಂದ ಅರಣ್ಯದಲ್ಲಿ ಪ್ರವಾಹ ಉಕ್ಕಿ, ಬಯಲುಸೀಮೆಯಲ್ಲಿ ಬರ ಉಂಟಾಗಲಿದೆ ಎಂದು ಪನ್ನಾದ ರಾಜವಂಶಸ್ಥ ಶ್ಯಾಮೇಂದ್ರ ಸಿಂಗ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
  • ಆದರೆ, ಹುಲಿ ಸಂರಕ್ಷಿತ ಪ್ರದೇಶದಲ್ಲಿರುವ 30-35 ಹುಲಿಗಳು ಮತ್ತು 500ಕ್ಕೂ ಹೆಚ್ಚು ರಣಹದ್ದುಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುವುದೆಂದು ಸರ್ಕಾರ ಸ್ಪಷ್ಟಪಡಿಸಿದೆ.

 

ಇದರ ಮುಂದಿರುವ ಸವಾಲುಗಳು?

 

  • ನದಿ ವಿಚಾರ ಕೋಟ್ಯಂತರ ಜೀವಗಳ ಜೀವನದ ಅಸ್ತಿತ್ವದ ಪ್ರಶ್ನೆಯಾಗಿರುವುದರಿಂದ ಯೋಜನೆ ಒಂದಿಂಚೂ ವಿಫಲವಾಗದಂತೆ ಮುಂಜಾಗ್ರತೆ ವಹಿಸಬೇಕು.
  • ಯೋಜನೆ ಜಾರಿಗೆ ಮುನ್ನ ರಾಜ್ಯಗಳ ಸಂಪೂರ್ಣ ಸಹಕಾರ ಪಡೆಯಬೇಕು.
  • ಸರ್ಕಾರದ ಜತೆಗೆ ರೈತರು, ಜನಸಾಮಾನ್ಯರಿಗೆ ಯೋಜನೆಯ ಅರಿವು ಮೂಡಿಸಬೇಕು.
  • ಯಾವ್ಯಾವ ರಾಜ್ಯಗಳಿಗೆ ಎಷ್ಟು ನೀರು ಹಂಚಿಕೆಯಾಗುತ್ತದೆ ಎಂಬ ವಿಷಯವನ್ನು ಮೊದಲೇ ಇತ್ಯರ್ಥಪಡಿಸಿಕೊಳ್ಳಬೇಕು.
  • ನ್ಯಾಯಾಲಯದ ಮೆಟ್ಟಿಲೇರಿರುವ ಜಲವಿವಾದಗಳನ್ನು ಮೊದಲು ಇತ್ಯರ್ಥಪಡಿಸಿಕೊಳ್ಳಬೇಕು.
  • ಯೋಜನೆಯ ಮೊದಲ ಹಂತದಲ್ಲಿ ಉತ್ತರ- ಮಧ್ಯ ಭಾರತದಲ್ಲಿ ಹರಿಯುವ ಕರ್ಣಾವತಿ(ಕೆನ್)-ಬೆಟ್ವಾ ನದಿಗಳ ಜೋಡಣೆಗೆ ಚಾಲನೆ ಸಿಗಲಿದೆ. ಕರ್ಣಾವತಿ ನದಿಗೆ ಅಡ್ಡಲಾಗಿ 250 ಅಡಿ ಎತ್ತರ ಮತ್ತು 2 ಕಿಮೀ ಉದ್ದದ ಅಣೆಕಟ್ಟೆ ನಿರ್ವಿುಸಲು ಉದ್ದೇಶಿಸಲಾಗಿದೆ.
  • ಜಲವಿದ್ಯುತ್ ಉತ್ಪಾದನಾ ಘಟಕದ ಮೂಲಕ ಸಹಸ್ರಾರು ಮೆಗಾವಾಟ್ ವಿದ್ಯುತ್ ಉತ್ಪಾದಿಸಿ, ವಿದ್ಯುತ್ ಸಂಪರ್ಕವೇ ಇಲ್ಲದಿರುವ ಗ್ರಾಮಗಳಿಗೆ ವಿದ್ಯುತ್ ಪೂರೈಸಲು ಉದ್ದೇಶಿಸಲಾಗಿದೆ.

ಇದರಿಂದ ಆಗುವ ಉಪಯೋಗಗಳೇನು..??

  • ಪ್ರತಿ ವರ್ಷ ಬರದ ಬೇಗೆಯಲ್ಲಿ ಬೇಯುವ ರಾಜ್ಯಗಳಿಗೆ ಸಹಕಾರಿ.
  • ಮಳೆಯಾಶ್ರಿತ ಪ್ರದೇಶಗಳಲ್ಲಿ ಕೃಷಿ ಕ್ರಾಂತಿ ಸಾಧಿಸಲು ಉಪಯುಕ್ತ.
  • ವ್ಯರ್ಥವಾಗಿ ಸಮುದ್ರ ಸೇರುವ ನೀರನ್ನು ಕೃಷಿ, ಜನೋಪಯೋಗಿ ಬಳಕೆ ಜತೆಗೆ ವಿದ್ಯುತ್ ಉತ್ಪಾದನೆಗೂ ಬಳಸಿಕೊಳ್ಳಬಹುದು.

ಕರ್ನಾಟಕ ರಾಜ್ಯಕ್ಕೇನು ಪರಿಣಾಮ?

 

  • ರಾಜ್ಯದ ನೈಜ ಸ್ಥಿತಿಯನ್ನು ಕೇಂದ್ರಕ್ಕೆ ಮನವರಿಕೆ ಮಾಡಿಕೊಟ್ಟು ಹೆಚ್ಚುವರಿಯಾಗಿ ಸಮುದ್ರ ಸೇರುತ್ತಿರುವ ತಮಿಳುನಾಡಿನ ಪಾಲಿನ ಕಾವೇರಿ ನೀರಿನ ಉಪಯೋಗ ಪಡೆಯಬಹುದು
  • ಮಹದಾಯಿ ವಿಚಾರದಲ್ಲೂ ಇದೇ ವಾದ ಮುಂದಿಡಬಹುದು.
  • ಸಮುದ್ರ ಸೇರುತ್ತಿರುವ ಈ ನದಿಯ ಹೆಚ್ಚುವರಿ ನೀರನ್ನು ಪಡೆಯುವ ಆಶಯ ಈಡೇರಬಹುದು.
  • ಕಾವೇರಿ ವಿಚಾರ ಸದ್ಯ ಸುಪ್ರೀಂಕೋರ್ಟ್​ನಲ್ಲಿರುವುದರಿಂದ ಈ ನದಿಯನ್ನು ಯೋಜನೆ ವ್ಯಾಪ್ತಿಗೆ ತರುವುದು ವಿಳಂಬವಾಗಬಹುದು.

 

SOURCE-THE HINDU

 

2.ಹಾರ್ಟಿನೆಟ್

MAINS PAPER-2: ISSUES RELATED TO DIRECT AND INDIRECT FARM SUBSIDIES AND MINIMUM SUPPORT PRICES; PUBLIC DISTRIBUTION SYSTEM OBJECTIVES, FUNCTIONING, LIMITATIONS, REVAMPING; ISSUES OF BUFFER STOCKS AND FOOD SECURITY; TECHNOLOGY MISSIONS; ECONOMICS OF ANIMAL-REARING.

 

ಪ್ರಮುಖ ಸುದ್ದಿ

  • ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳು ರಫ್ತು ಅಭಿವೃದ್ಧಿ ಪ್ರಾಧಿಕಾರ(APEDA) ಹಾರ್ಟಿನೆಟ್ ಎಂಬ ಒಂದು ಮೊಬೈಲ್ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಿದೆ.ರೈತರಿಗೆ ಕೃಷಿ ಗೆ ಸಂಬಂದಿಸಿದ ಕಾರ್ಯಗಳಿಗಳನ್ನು  ನೋಂದಣಿಗೆ ಅನುಕೂಲವಾಗುವಂತೆ ಆನ್ ಲೈನ್  ನಲ್ಲಿ ಅರ್ಜಿಗಳನ್ನು ಸಲ್ಲಿಸಲು ರಚಿಸಿದ್ದಾರೆ .
  • ಅರ್ಜಿಗಳ ಸ್ಥಿತಿಯನ್ನು ರಾಜ್ಯ ಸರ್ಕಾರ ಮತ್ತು  ಅನುಮೋದನೆ ಪಡೆದಿರುವ  ಅಧಿಕೃತ ಲ್ಯಾಬೋರೇಟರೀಸ್ ಗಳು  ಟ್ರ್ಯಾಕ್ ಮಾಡಲು ಅನುವು ಮಾಡಿಕೊಡುತ್ತದೆ.

ಹಾರ್ಟಿನೆಟ್ ಬಗ್ಗೆ:

  • ಹಾರ್ಡಿನೆಟ್ ಎನ್ನುವುದು ಭಾರತದಿಂದ ಯುರೋಪಿಯನ್ ಒಕ್ಕೂಟಕ್ಕೆ ದ್ರಾಕ್ಷಿ,,ದಾಳಿಂಬೆ ಮತ್ತು ತರಕಾರಿಗಳನ್ನು ಗುಣಮಟ್ಟಕ್ಕೆ ಅನುಸಾರವಾಗಿ  ರಫ್ತು ಮಾಡಲು  ಕೃಷಿಗೆ ಸಂಬಂದಿಸಿದ ಮಾಹಿತಿಯನ್ನು  ನೋಂದಣಿಮಾಡಲು , ಅದರ ಪರೀಕ್ಷೆ ಮತ್ತು ಪ್ರಮಾಣೀಕರಣಕ್ಕೆ ಅನುಕೂಲವಾಗುವಂತೆ ಪಾಲುದಾರರಿಗೆ ಇಂಟರ್ನೆಟ್ ಆಧಾರಿತ ಎಲೆಕ್ಟ್ರಾನಿಕ್ ಸೇವೆಗಳನ್ನು ಒದಗಿಸುವುದಕ್ಕಾಗಿ ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳು ರಫ್ತು ಅಭಿವೃದ್ಧಿ ಪ್ರಾಧಿಕಾರ (ಎಪಿಇಡಿಎ )ಅಭಿವೃದ್ಧಿಪಡಿಸಿದ ಸಂಯೋಜಿತ ಪತ್ತೆಹಚ್ಚುವಿಕೆ ವ್ಯವಸ್ಥೆಯಾಗಿದೆ.
  • ರೈತರ ಕೃಷಿ ಸ್ಥಳ, ಉತ್ಪನ್ನಗಳು ಮತ್ತು ತಪಾಸಣೆ ದಿನಾಂಕದಂತಹ ಪರಿಶೀಲನೆಗಳ ವಿವರಗಳನ್ನು, ಹಾಗು ತಮ್ಮ ಕ್ಷೇತ್ರದಿಂದ ನೇರವಾಗಿ ಪರಿಶೀಲಿಸುವ ನೈಜ ಸಮಯದ ವಿವರಗಳನ್ನು ಸೆರೆಹಿಡಿಯಲು ಈ ಹೊಸ ಮೊಬೈಲ್ ಅಪ್ಲಿಕೇಶನ್ ರಾಜ್ಯ ತೋಟಗಾರಿಕೆ / ವ್ಯವಸಾಯ ಇಲಾಖೆಗೆ ಸಹಾಯ ಮಾಡುತ್ತದೆ.

ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳು ರಫ್ತು ಅಭಿವೃದ್ಧಿ ಪ್ರಾಧಿಕಾರದ (APEDA) ಬಗ್ಗೆ

  • ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳು ರಫ್ತು ಅಭಿವೃದ್ಧಿ ಪ್ರಾಧಿಕಾರ (ಎಪಿಇಡಿಎ) ವನ್ನು 1985 ರ ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ ಕಾಯಿದೆ ಅಡಿಯಲ್ಲಿ ಭಾರತ ಸರ್ಕಾರವು ಸ್ಥಾಪಿಸಿತು.
  • ಈ ಪ್ರಾಧಿಕಾರವನ್ನು ಸಂಸ್ಕರಿಸಿದ ಆಹಾರ ರಫ್ತು ಪ್ರಚಾರ ಮಂಡಳಿಯ (PFEPC) ಬದಲು ರಚಿಸಲಾಗಿದೆ.

 ಈ ಕೆಳಗಿನ ನಿಗದಿತ ಉತ್ಪನ್ನಗಳ ರಫ್ತು  ಮತ್ತು ಅಭಿವೃದ್ಧಿಯ ಜವಾಬ್ದಾರಿಯನ್ನು APEDA  ನಿರ್ವಹಿಸುತ್ತದೆ

  • ಹಣ್ಣುಗಳು, ತರಕಾರಿಗಳು ಮತ್ತು ಅವುಗಳ ಉತ್ಪನ್ನಗಳು.
  • ಮಾಂಸ ಮತ್ತು ಮಾಂಸ ಉತ್ಪನ್ನಗಳು.
  • ಕೋಳಿ ಮತ್ತು ಕೋಳಿಯ ಉತ್ಪನ್ನಗಳು.
  • ಹಾಲಿನ ಉತ್ಪನ್ನಗಳು.
  • ಮಿಠಾಯಿ, ಬಿಸ್ಕಟ್ಗಳು ಮತ್ತು ಬೇಕರಿ ಉತ್ಪನ್ನಗಳು.
  • ಬೆಲ್ಲ ಮತ್ತು ಸಕ್ಕರೆ ಉತ್ಪನ್ನಗಳು.
  • ಕೊಕ್ ಮತ್ತು ಅದರ ಉತ್ಪನ್ನಗಳು, ಎಲ್ಲಾ ರೀತಿಯ ಚಾಕೊಲೇಟುಗಳು.

ಆಡಳಿತದ ಬಗ್ಗೆ :

  • ಅಧ್ಯಕ್ಷರು – ಕೇಂದ್ರ ಸರ್ಕಾರದಿಂದ ನೇಮಕಗೊಳ್ಳುತ್ತಾರೆ .
  • ನಿರ್ದೇಶಕರು – APEDA ಯಿಂದ ನೇಮಕವಾಗುತ್ತಾರೆ .
  • ಕಾರ್ಯದರ್ಶಿ – ಕೇಂದ್ರ ಸರ್ಕಾರದಿಂದ ನೇಮಕಗೊಳ್ಳುತ್ತಾರೆ .
  • ಇತರ ಅಧಿಕಾರಿಗಳು ಮತ್ತು ಸಿಬ್ಬಂದಿ – ಪ್ರಾಧಿಕಾರ ದಿಂದ ನೇಮಕಗೊಳ್ಳುತ್ತಾರೆ .

 

SOURCE-PIB

 

3.ನ್ಯಾಯಾಂಗ ಕಾರ್ಯಕ್ಷಮತೆ ಸೂಚ್ಯಂಕ ಸ್ಥಾಪನೆಗೆ ಶಿಫಾರಸು.

MAINS PAPER 2: GOVERNANCE | GOVERNMENT POLICIES AND INTERVENTIONS FOR DEVELOPMENT IN VARIOUS SECTORS AND ISSUES ARISING OUT OF THEIR DESIGN AND IMPLEMENTATION.

 ಪ್ರಮುಖ ಸುದ್ದಿ

  • ದೇಶದ ಕೆಳಹಂತದ ನ್ಯಾಯಾಲಯಗಳಲ್ಲಿ 2-7 ಕೋಟಿ ಪ್ರಕರಣಗಳು ಬಾಕಿ ಉಳಿದಿರುವ ಹಿನ್ನೆಲೆಯಲ್ಲಿ ಬೃಹತ್ ಸುಧಾರಣಾ ಕ್ರಮಗಳನ್ನು ಕೈಗೊಳ್ಳುವಂತೆ ಚಿಂತಕರು ಚಾವಡಿ ಎಂದೇ ಪ್ರಸಿದ್ಧವಾದ ನೀತಿ ಆಯೋಗ ಶಿಪಾರಸು ಮಾಡಿದೆ .
  • ಈ ನ್ಯಾಯಾಲಯಗಳಲ್ಲಿ ಸುಮಾರು 5 ಸಾವಿರ ನ್ಯಾಯಧೀಶರ ಹುದ್ದೆಗಳು ಖಾಲಿ ಇರುವುದರಿಂದ  ಸುಧಾರಣಾ ಕ್ರಮ ಕೈಗೊಳ್ಳುವುದು ಅಗತ್ಯವೆಂದು ಆಯೋಗ ಪ್ರತಿಪಾದಿಸಿದೆ. ಮೂರು ವರ್ಷಗಳ ಕಾರ್ಯನೀತಿಯ ಭಾಗವಾಗಿ ನ್ಯಾಯಾಂಗ ಕಾರ್ಯಕ್ಷಮತೆ ಸೂಚ್ಯಂಕ ಸ್ಥಾಪಿಸಲು ಶಿಫಾರಸು ಮಾಡಲಾಗಿದೆ
  • ಈ ಸಂಬoಧ, ದೇಶದ ಕೆಳಹಂತದಗಳ ನ್ಯಾಯಾಲಯಗಳಲ್ಲಿ ಹಲವು ವರ್ಷಗಳಿಂದ ಇತ್ಯರ್ಥವಾಗದಿರುವ ಪ್ರಕರಣಗಳು ಶೀಘ್ರ ಬಗೆಹರಿಯಬಹುದೆಂದು ನಿರೀಕ್ಸಿಲಾಗಿದೆ .

ಪ್ರಮುಖ ಶಿಫಾರಸುಗಳು :

  • ನ್ಯಾಯಾಂಗ ಕಾರ್ಯಕ್ಷಮತೆ ಸೂಚ್ಯಂಕ ಸ್ಥಾಪಿಸುವುದರಿಂದ ಬಾಕಿ ಉಳಿದಿರುವ ಪ್ರಕರಣಗಳ ವಿಚಾರಣಿ ವಿಳಂಬವಾಗದಂತೆ ಜಿಲ್ಲಾ ಹಾಗೂ ಅಧೀನ ಹಂತದ ನ್ಯಾಯಾಲಯಗಳ ನಿರ್ವಹಣೆ ಮತ್ತು ಪ್ರಕ್ರಿಯೆಗಳ ಮೇಲೆ ಮುಖ್ಯ ನ್ಯಾಯಧೀಶರು ಕಣ್ಣಿಡಲು ಅನುಕೂಲವಾಗುತ್ತದೆ.
  • ಅಲ್ಲದೆ ಪ್ರಕರಣಗಳು ಯಾವ ವೇಗದಲ್ಲಿ ಸಾಗುತ್ತಿದೆ ಎಂಬುದನ್ನು ಅಳೆಯಲು ಸಹ ಇದು ಅನುಕೂಲ ಮಾಡಿಕೊಡುತ್ತದೆ .
  • ಪ್ರಕರಣಗಳ ಭಿನ್ನತೆ ಆದರಿಸಿ ವಿಚಾರಣಾ ಪ್ರಕ್ರಿಯೆಗೆ ಕಾಲಮಿತಿ ನಿಗದಿಪಡಿಸುವುದು. ಪ್ರಸ್ತತ ಇರುವ ಮೂಲ ದತ್ತಾoಶ ಮಾಹಿತಿಯೊಂದಿಗೆ ಕೇಸುಗಳು ಎಷ್ಟೋ ಕಾಲದಿಂದ ಬಾಕಿ ಉಳಿದಿವೆ ಎಂಬ ಮಾಹಿತಿ ,ವಿಳಂಬವಾದ ಪ್ರಕರಣಗಳ ಶೇಕಡಾವಾರು ಮಾಹಿತಿ .ಕಳೆದ ವರ್ಷ ಹಾಗೂ ಅದಕ್ಕೂ ಹಿಂದಿನ ವರ್ಷಗಳಲ್ಲಿ ಎಷ್ಟೋ ವಿಚಾರಣಿಗಳು ಇತ್ಹರ್ಥವಾಗಿವೆ ಎಂಬ ಮಾಹಿತಿ ದಾಖಲಿಸುವುದು. ಇದರಿಂದ ಪ್ರಕರಣಗಳ ನಿಖರ ದತ್ತಾoಶ  ಲಭ್ಯವಾಗುತ್ತದೆ.
  • ಪ್ರಸ್ತತ ನ್ಯಾಯಧೀಶರು ಕೆಲವು ಜವಾಬ್ದಾರಿಯನ್ನೂ ನಿಭಾಯಿಸುತ್ತಿರುವುದರಿಂದ,ಸಮಯ, ಶ್ರಮ ಹೆಚ್ಹು ಬೇಕಾಗುತ್ತದೆ .ಅದರಿಂದ ನ್ಯಾಯಾಂಗದ ಆಡಳಿತ ನಿರ್ವಹಣೆಗಾಗಿ ಪ್ರತ್ಹೇಕ ಆಡಳಿತ್ಮಕ ವ್ಯವಸ್ಥೆ ರಚಿಸುವುದು ಪ್ರಮುಖ ಶಿಫಾರಸುಗಳ್ಲೊಂದು ಎನ್ನಲಾಗಿದೆ.
  • ಇದರಿಂದ ನ್ಯಾಯಧೀಶರ ಕೆಲಸದ ಭಾರ ಕಮ್ಮಿಯಾಗುತ್ತದೆ. ಈ ಆಡಳಿತ್ಮಕ ವ್ಯವಸ್ಥೆ ಆಯಾ ರಾಜ್ಯಗಳ ಮುಖ್ಯನ್ಯಾಯಧೀಶರಿ ಗೆ ನೇರವಾಗಿ ಜವಾಬ್ದಾರಿಯಾಗಿರಬೇಕು.ಜತೆಗೆ ಇದು ಹೈ ಕೋರ್ಟ್ ಗೆ ವರದಿ ಸಲ್ಲಿಸಬೇಕು .ನ್ಯಾಯಾಂಗದ ಸ್ವಾತಂತ್ರ್ಯ ರಕ್ಷಣಿಯಾಗಲು ಈ ಕ್ರಮ ಅನುಕೂಲ ಮಾಡಿಕೊಡುತ್ತದೆ .
  • ಬಹು ದೊಡ್ದ ಕ್ರಮ ಎoದರೆ ನ್ಯಾಯಾಲಯದ ಕಾರ್ಯಕಲಾಪ ,ಸ್ವಯಂಚಾಲಿತ, ಮಾಹಿತಿದಾಯಕವಾಗಬೇಕು .ಹಾಗೂ ಸಂವಹನ ತಂತ್ರಜ್ಞಾನ ಬಳಸುವ ಮೂಲಕ ನಡೆಯಬೇಕು .ದೇಶದಲ್ಲಿ ಎಲೆಕ್ಟ್ರಾನಿಕ್ ಕೋರ್ಟ್ ಗಳ ಅಗತ್ಯವಿದೆ . ನ್ಯಾಯಾಲಯಗಳ ವೇಳಾಪಟ್ಟಿ ,ಕೇಸ್ ಗಳ ವಿಚಾರಣಿ ಸೇರಿದಂತೆ ಇ-ನಿರ್ವಹಣೆ ಏಕೀಕೃತ ರಾಷ್ಟ್ರೀಯ ನ್ಯಾಯಾಲಯ ಅಪ್ಲಿಕೇಶನ್ ಸಾಫ್ಟ್ವೇರ್ ಆರoಭಬೇಕು .
  • ಸರ್ಕಾರವು ಅಂತರರಾಷ್ಟ್ರೀಯ ಮಟ್ಟದಲ್ಲಿ ಅಭಿರುದ್ದಿಪಡಿಸಲಾಗದ ಕ್ರಮಗಳನ್ನು ಅನುಸರಿಸಬೇಕು ಊದಾಹರಣಿಗೆ :ನ್ಯಾಯಾಲಯದ ಕಾರ್ಯಕ್ಷಮತೆಯ ಜಾಗತಿಕ ಕ್ರಮಗಳನ್ನು ಆಸ್ಟ್ರೇಲಿಯಾದ ನ್ಯಾಯಾಂಗ ಆಡಳಿತ .
  • ಅಮೇರಿಕಾದ ಫೆಡರಲ್ ನ್ಯಾಯಾಂಗ ಕೇಂದ್ರ ಹಾಗೂ ರಾಜ್ಯ ನ್ಯಾಯಾಲಯಗಳ ರಾಷ್ಟ್ರೀಯ ಕೇಂದ್ರ ,ಸಿಂಗಾಪುರ ಅಧೀನ ನ್ಯಾಯಾಲಯಗಳು ಜಂಟಿಯಾಗಿ ರಚಿಸಿವೆ. ಇದೇ ಮಾದರಿಯಲ್ಲಿ ಭಾರತ ಕೂಡ ಜಾಗತಿಕ ಮಟ್ಟದಲ್ಲಿ ಕಾನೂನಿನ ಸಮಸ್ಹ್ಯೇಗಳನ್ನು ಬಗೆಹರಿಸಲು ಕ್ರಮ ಕೈಕೊಳ್ಳುವ ಅಗತ್ಯವಿದೆ .

 

SOURCE-THE HINDU

 

 

 

ONLY FOR PRELIMS

4.ನೂತನ ಮಹಾಲೇಖಪಾಲ ರಾಗಿ – ರಾಜೀವ್ ಮಹರ್ಷಿ

  • ಕೇಂದ್ರ ಸರ್ಕಾರ 16 ಸಚಿವಾಲಯ ಕಾರ್ಯದರ್ಶಿಗಳ ಸ್ಥಾನವನ್ನು ಮರುರಚನೆ ಮಾಡಿದ್ದು ಕೇಂದ್ರ ಗೃಹ ಖಾತೆಯ ಮಾಜಿ ಕಾರ್ಯದರ್ಶಿ ರಾಜೀವ್ ಮಹರ್ಷಿ ಅವರನ್ನು  ನೂತನ ಮಹಾಲೇಖಪಾಲರನ್ನಾಗಿ, ನೇಮಕ ಮಾಡಿದೆ.
  • 1978 ನೇ ತಂಡದ ರಾಜಸ್ಥಾನ ಕೇಡರ್ ನ ಐಎಎಸ್ಅಧಿಕಾರಿಯಾಗಿದ್ದ ಮಹರ್ಷಿ ಬುಧವಾರವಷ್ಟೇ ನಿವೃತರಾದರು . ಸೆ 24 ರಂದು  ನಿವೃತರಾಗಳಿರುವ ಸಿಎಜಿ  ಎಸ್,ಕೆ. ಶರ್ಮ ಸ್ಥಾನವನ್ನು  ಮಹರ್ಷಿ ತುಂಬಲಿದ್ದಾರೆ.
  • ಇನ್ನುಳಿದoತೆ ಹಣಕಾಸು ಸೇವೆ ಇಲಾಖೆಯ ಕಾರ್ಯದರ್ಶಿಯಾಗಿ ರಾಜೀವ್ ಕುಮಾರ್ .ಸಿಬಿಎಸ್ಇ ಅಧ್ಯಕ್ಷರಾಗಿ ಅನಿತಾ ಕರ್ವಲ್ ನೇಮಕಗೊಂದಿದ್ದಾರೆ .

 

5.ಭೂಗತ ಪಟ್ಟಣ ಆಸ್ಟ್ರೇಲಿಯಾದ ಕೂಬರ್ ಪೆಡಿ..

  • ಜನರು ಸಾಮಾನ್ಯವಾಗಿ ಭೂಮಿಯ ಮೇಲೆ ವಾಸಿಸುತ್ತಾರೆ.ಆದರೆ ಆಸ್ಟ್ರೇಲಿಯಾದ ಕೂಬರ್ ಪೆಡಿ ಭೂಗತ ಪಟ್ಟಣವಾಗಿದ್ದು ,ಹಳೆಯ ಗಣಿ ಪ್ರದೇಶದಲ್ಲಿ ಜನರು ವಾಸಿಸುತ್ತಾರೆ.

ಇಲ್ಲಿನ ಶೇ.60ರಷ್ಟು ಜನ ಭೂಮಿಯ ಅಡಿಯಲ್ಲಿಯೇ ವಾಸ ಮಾಡುತ್ತಾರೆ .

  • ಬೇಸಿಗೆ ಕಾಲದಲ್ಲಿ ಬಿಸಲಿನ ಬೇಗೆಯಿಂದ ತಪ್ಪಿಸಿಕೊಳ್ಳುವುದಕ್ಕು ಇದು ಒಂದು ಕಾರಣ ಎನ್ನಲಾಗಿದೆ.ಭೂಗತ ಚರ್ಚ್ ,ಹೋಟೆಲ್,ಪಬ್ ಎಲ್ಲವು ನೆಲದಡಿಯಲ್ಲಿದೇ ಇದೇ ಎಂಬುವುದನ್ನು ಕೇಳಿದರೆ ಅಚ್ಹರಿಯಾಗದೆ ಇರದು ಕ್ಷೀರ ಸ್ಪಟಿಕಕ್ಕೆ ಈ ಪ್ರದೇಶವು ಹೆಸರಾಗಿದ್ದು,ವಿಶ್ವದಲ್ಲಿಯೇ ಕ್ಷೀರ ಸ್ಪಟಿಕವನ್ನು ಹೊಂದಿದ ಅತಿ ದೊಡ್ಡಪ್ರದೇಶವಾಗಿದೆ .ನೆಲದಡಿಯಲ್ಲಿರುವ ಎಲ್ಲ ಕಟ್ಟಡಗಳೂ ಉಷ್ಣಾಂಶವನ್ನು ನಿಯಂತ್ರಿಸುವಂತೆ ರೂಪಿಸಲಾಗಿದೆ.

 

6. ರೈಲ್ವೆ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಭಾರತಸ್ವಿಡ್ಜರ್ಲೆಂಡ್ ನಡುವೆ  ಒಪ್ಪಂದ

  • ಭಾರತ ಹಾಗೂ ಸ್ವಿಡ್ಜರ್‍ಲೆಂಡ್ ಎರಡು ದೇಶಗಳು ರೈಲ್ವೆ ಕ್ಷೇತ್ರದಲ್ಲಿ ತಾಂತ್ರಿಕ ಸಹಕಾರವನ್ನು ವಿನಿಮಯ ಮಾಡಿಕೊಳ್ಳುವ ಸಂಬಂಧ ಒಪ್ಪಂದಗಳಿಗೆ ಸಹಿ ಮಾಡಿವೆ.
  • ಸಹಿ ಮಾಡಿದ ಒಪ್ಪಂದಗಳೆಂದರೆ – ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ (ಕೆಆರ್‍ಸಿಎಲ್) ಹಾಗೂ ಸ್ವಿಸ್ ಫೆಡರಲ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಜಲಿ ಜ್ಯೂರಿಚ್ ನಡುವೆ ಒಡಂಬಡಿಕೆ.
  • ಭಾರತದ ರೈಲ್ವೆ ಸಚಿವಾಲಯ ಹಾಗೂ ಸ್ವಿಡ್ಜರ್‍ಲೆಂಡ್‍ನ ಫೆಡರಲ್ ಡಿಪಾರ್ಟ್‍ಮೆಂಟ್ ಆಫ್ ದ ಎನ್ವಿರಾನ್‍ಮೆಂಟ್, ಟ್ರಾನ್ಸ್ ಪೋರ್ಟ್, ಎನರ್ಜಿ ಅಂಡ್ ಕಮ್ಯುನಿಕೇಶನ್ ಸಂಸ್ಥೆಗಳು ರೈಲ್ವೆ ವಲಯದ ತಾಂತ್ರಿಕ ಸಹಕಾರಕ್ಕೆ ಸಂಬಂಧಿಸಿದಂತೆ ಮಾಡಿಕೊಂಡ ಒಡಂಬಡಿಕೆ.

 

 

 

 

Share