Daily Current Affairs 30th August

30th AUGUST

 

1.ಯುವ – ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ

MAINS PAPER-2: ISSUES RELATING TO DEVELOPMENT AND MANAGEMENT OF SOCIAL SECTOR/SERVICES RELATING TO HEALTH, EDUCATION, HUMAN RESOURCES.

ಪ್ರಮುಖ ಸುದ್ದಿ

  • ಯುವ – ಈ ಕೌಶಲ್ಯ ಅಭಿವೃದ್ಧಿ ಯೋಜನೆಯನ್ನು  ದೆಹಲಿ ಪೊಲೀಸರು   ಪ್ರಧಾನ್ ಮಂತ್ರಿ  ಕೌಶಲ್ ವಿಕಾಸ್ ಯೋಜನೆಯಡಿಯಲ್ಲಿ   ಇತ್ತೀಚೆಗೆ ಪ್ರಾರಂಭಿಸಿದರು.

ಯುವ  ಕೌಶಲ್ಯ ಅಭಿವೃದ್ಧಿ ಯೋಜನೆಯ  ಬಗ್ಗೆ:

  • ದೆಹಲಿ ಪೊಲೀಸರು ಪ್ರಾರಂಭಿಸಿರುವ ಯುವ ಕೌಶಲ್ ಅಭಿವೃದ್ಧಿ ಯೋಜನೆಯು ಯುವಕರ  ಕೌಶಲ್ಯವನ್ನು ಅವರ ಸಾಮರ್ಥ್ಯದ ಪ್ರಕಾರ ನವೀಕರಿಸುವ ಮೂಲಕ  ಜಾಗತಿಕ ವಲಕ್ಕೆ ಸಂಪರ್ಕ ಕಲ್ಪಿಸುವ ಗುರಿ ಹೊಂದಿದೆ. ಕೌಶಲ್ಯ ಅಭಿವೃದ್ಧಿ ಸಚಿವಾಲಯದ ಅಡಿಯಲ್ಲಿನ  ಪ್ರಧಾನ್ ಮಂತ್ರಿ ಕೌಶಲ್ ವಿಕಾಸ್ ಯೋಜನೆಯಲ್ಲಿ  ಉದ್ಯೋಗ ಪಡೆಯಲು  ಅವರಿಗೆ  ಸಹಕಾರವಾಗಲಿದೆ.
  • ಆಯ್ಕೆಯಾದ ಯುವಕರಿಗೆ ಉದ್ಯೋಗ ಕೌಶಲ್ಯ ತರಬೇತಿಯನ್ನು ಒದಗಿಸಲು ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮ (NSDC) ಮತ್ತು ಭಾರತೀಯ ಉದ್ಯಮದ ಒಕ್ಕೂಟ (CII) ದೊಂದಿಗೆ ದಿಗೆ ದೆಹಲಿ ಪೊಲೀಸರು ಒಪ್ಪಂದ ಮಾಡಿಕೊಂಡಿದ್ದಾರೆ.
  • ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮವು ‘ಪ್ರಧಾನ್ ಮಂತ್ರಿ ಕೌಶಲ್ ವಿಕಾಸ್ ಯೋಜನಾ’ (PMKVY) ಅಡಿಯಲ್ಲಿ ಯುವಕರಿಗೆ ಕೌಶಲ್ಯ ತರಬೇತಿಯನ್ನು ನೀಡುತ್ತದೆ ಮತ್ತು ಸಿಐಐ ತನ್ನ ವಲಯ ಕೌಶಲ್ಯ ಕೌನ್ಸಿಲ್ಗಳ ಮೂಲಕ ಉದ್ಯೋಗದ  ಖಾತರಿಯನ್ನು ಒದಗಿಸುತ್ತದೆ.

ಕ್ರಮದ ಮಹತ್ವವೇನು ??

  • ಈ ಕೌಶಲ್ಯ ತರಬೇತಿಯನ್ನು ಪೊಲೀಸ್ ಠಾಣೆಗೆ ಸಂಬಂದಿಸಿದ ಕಟ್ಟಡದಲ್ಲಿ ಯುವಕರಿಗೆ ತರಬೇತಿಯನ್ನು ನೀಡಲಾಗುತ್ತದೆ. ಇದರಿಂದ ಪೊಲೀಸ್ ಸಂಘಟನೆಯಲ್ಲಿ ಜನಸಮೂಹಕ್ಕೆ ತಮ್ಮ ವಿಶ್ವಾಸ ಮತ್ತು ನಂಬಿಕೆಯನ್ನು ಬೆಳೆಸುವ ಭಾವನೆ ಮೂಡಲಿದೆ  ಮತ್ತು  ಪೊಲೀಸರ ಬಗ್ಗೆ ಸಕಾರಾತ್ಮವಾಗಿ ಆಲೋಚಿಸಲು ನೆರವು ನೀಡುತ್ತದೆ.

 

BACK TO BASICS

 ಪ್ರಧಾನ್ ಮಂತ್ರಿ  ಕೌಶಲ್ಯ ವಿಕಾಸ್ ಯೋಜನೆ

  • ಪ್ರಧಾನ್ ಮಂತ್ರಿ ಕೌಶಲ್ಯ ವಿಕಾಸ್ ಯೋಜನೆ (PMKVY) ಎಂಬುದು ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ (MSDE) ಪ್ರಮುಖ ಕೌಶಲ್ಯ ತರಬೇತಿ ಯೋಜನೆಯಾಗಿದೆ.
  • ಈ ಯೋಜನೆಯ ಮುಖ್ಯ ಉದ್ದೇಶ ವೆಂದರೆ ಹೆಚ್ಚಿನ ಸಂಖ್ಯೆಯ ಭಾರತೀಯ ಯುವಕರನ್ನು ಉದ್ಯೋಗಕ್ಕೆ ತಕ್ಕಂತೆ ಫಲಿತಾಂಶ ಆಧಾರಿತ ಕೌಶಲ್ಯ ತರಬೇತಿಯನ್ನುನೀಡುವುದು ಮತ್ತು ತಮ್ಮ ಜೀವನೋಪಾಯವನ್ನು ಸಜ್ಜುಗೊಳಿಸುವುದು.
  • ಈ ಯೋಜನೆಯಡಿ, ತರಬೇತಿ ಪಡೆದ ಯುವಕರಿಗೆ ತರಬೇತಿ ಪ್ರಮಾಣ ಪತ್ರದ ಜೊತೆಗೆ  ತರಬೇತಿ ನೀಡುವ  ತರಬೇತಿದಾರರಿಗೆ ವಿತ್ತೀಯ ಪ್ರತಿಫಲವನ್ನು ನೀಡಲಾಗುತ್ತದೆ.

SOURCE-PIB

 

 

2.ಸಾಗರ ಮುನ್ಸೂಚನಾ ವ್ಯವಸ್ಥೆಗೆ ಚಾಲನೆ

 MAINS PAPER-2: SCIENCE AND TECHNOLOGY- DEVELOPMENTS AND THEIR APPLICATIONS AND EFFECTS IN EVERYDAY LIFE ACHIEVEMENTS OF INDIANS IN SCIENCE & TECHNOLOGY; INDIGENIZATION OF TECHNOLOGY AND DEVELOPING NEW TECHNOLOGY. 

ಪ್ರಮುಖ ಸುದ್ದಿ

  • ಹಿಂದೂ ಮಹಾಸಾಗರದ ತೀರ ರಾಷ್ಟಗಳಾದ ಕೊಮೊರೋಸ್, ಮಡಗಾಸ್ಕರ್ ಹಾಗೂ ಮೊಜಾoಬಿಕ್ ಗಳಿಗೆ ಮುನ್ಸೂಚನಾ ವ್ಯವಸ್ಥೆಯನ್ನು ಭಾರತೀಯ ಸಾಗರ ಮಾಹಿತಿ ಮತ್ತು ಸೇವಾ ಕೇಂದ್ರ ರೂಪಿಸಿದ್ದು , ಚಾಲನೆ ನೀಡಿದೆ.
  • ಪಪುವಾನ್ಯೂಗಿನಿಯಾದ ಮೊರೆಸ್ಟಿ ಬoದರಿನಲ್ಲಿ ಎತ್ತೀಚಿಗೆ ನಡೆದ ರೈಮ್ಸ್ (ಮಲ್ಟಿ ಹಜರ್ಡ್ ಅರ್ಲಿ ವಾರ್ನಿಂಗ್ ಸಿಸ್ಟಂ ಪಾರ್ ಏಷ್ಯಾ ಅಂಡ್ ಆಫ್ರಿಕಾ) ನ 3ನೇ ಸಭೆಯಲ್ಲಿ ಈ ಅಧುನಿಕ ಮುನ್ಸೂಚನಾ ವ್ಯವಸ್ಥೆಗೆ ಚಾಲನೆ ನೀಡಲಾಗಿದೆ.

ಚಾಲನೆಯ ಮಹತ್ವ

  • ಉಬ್ಬರ, ಪ್ರವಾಹ, ಗಾಳಿ , ಅಲೆ ಹಾಗೂ ಸಾಗರ ಮೇಲ್ಮೈ ಸೇರಿದಂತೆ ಮೀನುಗಾರರು ,ಕರಾವಳಿ ಜನಸಂಖ್ಯೆ,ಪ್ರವಾಸೋದ್ಯಮ ವಲಯ, ಕರಾವಳಿ ರಕ್ಷಣಿ ಹಾಗೂಅಧಿಕಾರಿಗಳು, ಬoದರುಗಳು, ಸಂಶೋಧನಾ ಸಂಸ್ಥೆಗಳನ್ನು ಒಳಗೊಂಡಂತೆ ಸಮಗ್ರ ಮಾಹಿತಿ ಇದರಿಂದ ಲಭ್ಯವಾಗಲಿದೆ. ಇವೆಲ್ಲವೂ ಸಮುದ್ರದಲ್ಲಿ ರಕ್ಷಣಿಗೆ ಸಂಬಧಿಸಿದoತೆ  ಮುಖ್ಯವಾಗುತ್ತವೆ.
  • ಇದೇ ಮಾದರಿಯ ಸೇವೆಯನ್ನು ಐಎನ್ ಸಿ ಒಐಎಸ್ ಈಗಾಗಲೇ ಮಾಲ್ಡಿವ್ಸ್, ಶ್ರೀಲಂಕಾ ಹಾಗೂಸೇಷಲ್ಸ್ ಗಳಿಗೆ ಒದಗಿಸಿದೆ. ಈ ಸೇವೆಯಿಂದ ನೈಜ ಸಮಯದ ಆಧಾರದ ಮೇಲೆ ದತ್ತಾಂಶ ಲಭ್ಯವಾಗುತ್ತಿದ್ದು,ಭಾರತಕ್ಕೂ ಲಾಭವಿದೆ.
  • 2016 ರಜುಲೈ ಹಾಗೂ ಆಗಸ್ಟ್ ನಲ್ಲಿ ಕೇರಳ ಹಾಗೂ ಪಶ್ಹಿಮಬಂಗಾಳದಲ್ಲಿ ಅಲೆಗಳ ಉಬ್ಬರ ಹಾಗೂಪ್ರವಾಹ ಸಂಭವಿಸುವ ಮುನ್ಸೂಚನೆ ದೊರೆತು,ಅನುಕೂಲವಾಗಿತ್ತು. ರೈಮ್ಸ್, ಅಂತರ ಸರ್ಕಾರಗಳ ಅಂತರರಾಷ್ಟ್ರೀಯ ಸಂಸ್ಥೆಯಾಗಿದ್ದು, ಸುನಾಮಿ ಸೇರಿದಂತೆ ಸಾಗರಕ್ಕೆ ಸಂಬಧಿಸಿದ ಎಲ್ಲಾ ರೀತಿಯ ಮಾಹಿತಿಯನ್ನು ಮುನ್ಸೂಚನೆ ಪಡೆಯುವ ಉದ್ದೇಶದಿಂದ ನಿರ್ಮಿಸಿಕೊಳ್ಳುಲಾಗಿದೆ.

2018 ರಲ್ಲಿ ಭೂ ವಿಜ್ಞಾನ ಸಾಗರ ಮಿಷನ್:

  • ಸಮುದ್ರ ವಿಜ್ಞಾನದ ಸಂಶೋಧನಾ ಚಟುವಟಿಕೆಗಳನ್ನು ಉತ್ತೇಜಿಸಲು ಹಾಗೂ ಸಮುದ್ರ ತಂತ್ರಜ್ಞಾನವನ್ನು ಅಭಿವೃದ್ದಿ ಪಡಿಸಲು ಕೇಂದ್ರ ಭೂ ವಿಜ್ಞಾನ ಸಚಿವಾಲಯವು 2018ರ ಜನವರಿಯಿಂದ ಭೂ ವಿಜ್ಞಾನ ಸಾಗರ ಮಿಷನ್ ಅನ್ನು ಪ್ರಾರಂಭಿಸಿಲಿದೆ .
  • ಪ್ರಸ್ತಾವಿತ ಯೋಜನೆಯು ಸಾಗರದ ಕೆಳಗೆ ಖನಿಜ ಸಂಪನ್ಮೂಲಗಳನ್ನು ಅನ್ವೇಷಿಸುವ ಪ್ರಮುಖ ಗುರಿ ಹೊಂದಿದೆ. ಭೂ ವಿಜ್ಞಾನ ಸಾಗರ ಮಿಷನ್, ರಾಷ್ಟ್ರದ ಭದ್ರತೆಯ ವಿಷಯದಲ್ಲಿಯೂ ಮಹತ್ವದ ಪಾತ್ರ ವಹಿಸುತ್ತದೆ.ಇದು ಸಾಗರ ವಿಜ್ಞಾನದಲ್ಲಿ ಉದ್ಯೋಗವಕಾಶ ಮತ್ತು ವ್ಯವಹಾರಗಳನ್ನು ಉತ್ತೇಜಿಸುತ್ತದೆ.

SOURCE-THE HINDU

 

3.ಅಕ್ಟೋಬರ್ ನಲ್ಲಿ ಭವಿಷ್ಯದ ಕೈಗಾರಿಕಾ ನೀತಿಯನ್ನು ಅನಾವರಣಗೊಳಿಸಲು ಕೇಂದ್ರ ಸಿದ್ಧತೆ

 MAINS PAPER 2: GOVERNANCE | GOVERNMENT POLICIES AND INTERVENTIONS FOR DEVELOPMENT IN VARIOUS SECTORS AND ISSUES ARISING OUT OF THEIR DESIGN AND IMPLEMENTATION.

 ಪ್ರಮುಖ ಸುದ್ದಿ

  • ಅಕ್ಟೋಬರ್ ನಲ್ಲಿ ‘ಭವಿಷ್ಯಕ್ಕೆ ಸಿದ್ಧ’ ಹೊಸ ಕೈಗಾರಿಕಾ ನೀತಿಯನ್ನು ಪ್ರಕಟಿಸುವಂತೆ ಮಂಗಳವಾರ ಸರ್ಕಾರ ಹೇಳಿದೆ. ಸ್ಮಾರ್ಟ್ ತಂತ್ರಜ್ಞಾನಗಳದ internet of things (IoT), artificial intelligence (AI) and robotics for advanced manufacturing.ಬಳಕೆಯನ್ನು ಸುಲಭಗೊಳಿಸಲು ಕ್ರಮಗಳನ್ನು ಸೇರಿಸುವ ಮೂಲಕ ಕೈಗಾರಿಕಾ ನೀತಿ ಸಿದ್ಧಪಡಿಸಲು ತಿಳಿಸಿದೆ.

ಏನಿದು ಹೊಸ ನೀತಿ  ?

  • ಹೊಸ ನೀತಿಯು ‘ಮೇಕ್ ಇನ್ ಇಂಡಿಯಾ’ವನ್ನು ಉತ್ತೇಜಿಸುವ ಮೂಲಕ ಭಾರತವನ್ನು ಉತ್ಪಾದನಾ ಕೇಂದ್ರವಾಗಿ ಮಾಡುವ ಉದ್ದೇಶವನ್ನು ಹೊಂದಿದೆ ಮತ್ತು ಇದನ್ನು  ರಾಷ್ಟ್ರೀಯ ಉತ್ಪಾದನಾ ನೀತಿಯನ್ನು ಅಳವಡಿಸಿಕೊಳ್ಳಲಿದೆ.
  • ವಾಣಿಜ್ಯ ಮತ್ತು ಕೈಗಾರಿಕಾ ಸಚಿವೆ ನಿರ್ಮಲಾ ಸೀತಾರಾಮನ್ ರವರು ಚೆನ್ನೈ, ಗುವಾಹಟಿ ಮತ್ತು ಮುಂಬೈನಲ್ಲಿ ಉದ್ಯಮದ ನಾಯಕರು, ಚಿಂತಕರು ​​ಮತ್ತು ರಾಜ್ಯ ಸರ್ಕಾರಗಳು ಸೇರಿದಂತೆ  ಹಲವು ಉದ್ಯಮ ತಜ್ಞರ ಜೊತೆ  ಚರ್ಚಿಸಲಿದ್ದಾರೆ.
  • ಪಾಲಿಸಿಯ ಕುರಿತಾದ ಸಾರ್ವಜನಿಕರಿಂದ ಅಭಿಪ್ರಾಯಗಳು , ಪ್ರತಿಕ್ರಿಯೆ ಮತ್ತು ಸಲಹೆಗಳಿಗೆ , ಸೆಪ್ಟೆಂಬರ್ 25 ರೊಳಗೆ ಕೈಗಾರಿಕಾ ನೀತಿ ಮತ್ತು ಉತ್ತೇಜನಾ ಇಲಾಖೆ (ಡಿಐಪಿಪಿ – ಹೊಸ ನೀತಿ ಮತ್ತು ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯದ ಅಂಗಸಂಸ್ಥೆ ) ಅನಾವರಣಗೊಳಿಸಲಿದೆ.

ನೀತಿಯಿಂದ ಬರುವ ಪ್ರಮುಖ ಫಲಿತಾಂಶಗಳೇನು..?

ಕಾಗದದಲ್ಲಿ ಚಿತ್ರಿಸಲಾದ ನೀತಿಯ ‘ವಿವರಣಾತ್ಮಕ ಪರಿಣಾಮಗಳು’  ಈ ಕೆಳಗಿನವುಗಳನ್ನು  ಒಳಗೊಂಡಿದೆ:

  • ದೀರ್ಘಾವಧಿಯ ಸುಯೋಗಕ್ಕಾಗಿ -500 ವರ್ಗಗಳಲ್ಲಿ ಜಾಗತಿಕ-ಭಾರತೀಯ ಸಂಸ್ಥೆಗಳ ಸಂಖ್ಯೆಯನ್ನು ಹೆಚ್ಚಿಸುವುದು.
  • ವಾರ್ಷಿಕವಾಗಿ $ 100 ಶತಕೋಟಿ ಒಳಗಿನ FDI ಅನ್ನು ಆಕರ್ಷಿಸುವುದು.
  • ವಿಶ್ವ ಮಾರುಕಟ್ಟೆಯಲ್ಲಿ ಭಾರತೀಯ ಉಪಸ್ಥಿತಿಗೆ ಒತ್ತು ನೀಡುವುದರ ಜೊತೆಗೆ ಬಾಹ್ಯ FDI ಗೆ ಬೆಂಬಲ ನೀಡುತ್ತದೆ ಮತ್ತು ಔಪಚಾರಿಕ ವಲಯದಲ್ಲಿ ಕಡಿಮೆ ಉದ್ಯೋಗದ ಸಮಸ್ಯೆಯನ್ನು ಪರಿಹರಿಸುತ್ತದೆ.
  • ಬ್ಯಾಂಕುಗಳಿಗೆ ಪರ್ಯಾಯ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಿ ಮತ್ತು ‘peer to peer lending’ and ‘crowd funding’’ ಮೂಲಕ MSME ಗಳಿಗೆ ಬಂಡವಾಳವನ್ನು  ಒದಗಿಸುವುದರ ಜೊತೆಗೆ  MSME ಗಳಿಗೆ ಕ್ರೆಡಿಟ್ ರೇಟಿಂಗ್ ವ್ಯವಸ್ಥೆಯನ್ನು ಒದಗಿಸುವುದು.
  • ಕರ್ತವ್ಯ ರಚನೆಯ ಸಮಸ್ಯೆಯನ್ನು ಪರಿಹರಿಸುವುದು.
  • ಬಹುಪಕ್ಷೀಯ ಅಥವಾ ದ್ವಿಪಕ್ಷೀಯ ವ್ಯಾಪಾರ ಒಪ್ಪಂದಗಳ ಅಡಿಯಲ್ಲಿ ಕಟ್ಟುಪಾಡುಗಳ ವಿರುದ್ಧ ಸಮತೋಲನಗೊಳಿಸುವುದು.
  • ಉದ್ಯೋಗದ ಮೇಲೆ ಯಾಂತ್ರಿಕರಣ ಯಾವ ರೀತಿ ಪರಿಣಾಮ ಬೀರಿದೆ ಎಂದು ಅಧ್ಯಯನ ಮಾಡುವುದು.
  • ಕೈಗಾರಿಕಾ ಚಟುವಟಿಕೆಗಳಿಂದ ಕನಿಷ್ಠ / ಶೂನ್ಯ ತ್ಯಾಜ್ಯವನ್ನು ಖಾತ್ರಿಪಡಿಸುವುದು ಮತ್ತು ಕೆಲವು ಕ್ಷೇತ್ರಗಳಲ್ಲಿ ಹೊರಸೂಸುವಿಕೆಗಳನ್ನು ಕಡಿವಾಣಗೊಳಿಸುವುದು.

ಹೊಸ ನೀತಿಯು ಮುಖ್ಯವಾಗಿ ಆರು ವಿಷಯಾಧಾರಿತ ಗುಂಪುಗಳ ಮೇಲೆ ಕೇಂದ್ರೀಕರಿಸುವುದು ಅವುಗಳೆಂದರೆ :

  • ಉತ್ಪಾದನೆ ಮತ್ತು MSME
  • ತಂತ್ರಜ್ಞಾನ ಮತ್ತು ನಾವೀನ್ಯತೆ
  • ಪರಿಸರ ಸ್ನೇಹಿ ವ್ಯಾಪಾರ ಮಾಡುವ ವ್ಯವಸ್ಥೆ
  • ಮೂಲಸೌಕರ್ಯ, ಬಂಡವಾಳ, ವ್ಯಾಪಾರ ಮತ್ತು ಹಣಕಾಸು ನೀತಿ ಮತ್ತು
  • ಭವಿಷ್ಯದ ಕೌಶಲ್ಯಗಳು ಮತ್ತು ಉದ್ಯೋಗಿಗಳು, ಒಳಹರಿವುಗಳನ್ನು ಸುಲಭಗೊಳಿಸುವುದು

SOURCE-THE HINDU

 

 

ONLY FOR PRELIMS

 

4.ವಿಶ್ವದಲ್ಲೇ ಅತಿ ಹೆಚ್ಹು ಘೇoಡಾಮೃಗ ಹೊಂದಿರುವ ಕಾಜಿರ೦ಗ:

  • ಅಸ್ಸಾಂ ಗೋಲಘಟ್ ಮತ್ತು ನಾಗಾoವ್ ಜಿಲ್ಲೆಯಲ್ಲಿರುವ ಕಾಜಿರ೦ಗ ರಾಷ್ಟ್ರೀಯ ಉಧ್ಯಾನವನವು ಪ್ರಪಂಚದ ಮೂರನೇ ಎಡರಷ್ಟು ಘೇoಡಾಮೃಗಗಳನ್ನು ಹೊಂದಿದೆ.
  • 2015ರ ಗಣತಿಯ ಪ್ರಕಾರ ,ಈ ಉಧ್ಯಾನದಲ್ಲಿ 2401 ಘೇoಡಾಮೃಗಗಳಿವೆ. ಇದೂ ಹುಲಿ ಸಂರಕ್ಷಣಾ ಪ್ರದೇಶವು ಆಗಿದ್ದು, ಕಾಡೆಮ್ಮೆ, ಆನೆ, ಜೌಗುಜಿಂಕೆಗಳಿಗೆ ದೊಡ್ಡ ನೆಲೆಯಾಗಿದೆ.ವಿವಿದ ಜಾತಿಯ ಪಕ್ಷಿಗಳು ಇಲ್ಲಿರುವುದರಿಂದ ಬರ್ಡ್ಸ್ ಇಂಟರ್ ನ್ಯಾಷನಲ್ ಸಂಸ್ಥೆಯು ಈ ಉಧ್ಯಾನವನವನ್ನು ಗುರುತಿಸಿದೆ .
  • ಪೂರ್ವ ಹಿಮಾಲಯದ ಜೀವವ್ಯವಿಧ್ಯತೆಯನ್ನು ಇಲ್ಲಿಕಾಣಬಹುದು.ಬ್ರಹ್ಮಪುತ್ರಾ ಸೇರಿದಂತೆ ನಾಲ್ಕು ನದಿಗಳು ಈ ಪ್ರದೇಶದಲ್ಲಿ ಹಾದು ಹೋಗುತ್ತಿದ್ದು ,ದಟ್ಟವಾದ ಕಾಡುಗಳಿಗೆ ನೀರನ್ನುಒದಗಿಸುತ್ತವೆ .ಸಾಮನ್ಯವಾಗಿ ಬ್ರಹ್ಮಪುತ್ರಾ ನದಿಗೆ ಪ್ರವಾಹ ಬoದಾಗಲೆಲ್ಲ ಕಾಜಿರ೦ಗ ಉಧ್ಯಾನವನವು ನೀರಿನಿoದ ಆವೃತವಾಗುತ್ತದೆ.

5.. ಕ್ರೀಡಾ ಪ್ರತಿಭಾನ್ವೇಷಣೆ ಪೋರ್ಟೆಲ್ಗೆ ಚಾಲನೆ

  • ರಾಷ್ಟ್ರೀಯ ಕ್ರಿಡಾ ಪ್ರತಿಭೆ ಶೋಧನೆಗೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಚಾಲನೆ ನೀಡಿದರು    .
  • ದೇಶದ ಎಲ್ಲ ಮೂಲೆ ಮೂಲೆಗಳಿಂದ ಕ್ರೀಡಾ ಪ್ರತಿಭೆಗಳನ್ನು ಗುರುತಿಸುವು ಈ ಪೋರ್ಟಲ್ ನ ಪ್ರಮುಖ  ಉದ್ದೇಶವಾಗಿದೆ .
  • ಈ ಪೋರ್ಟೆಲ್, ದೇಶದ ಎಲ್ಲೆಡೆಯ ಕ್ರೀಡಾ ಪ್ರತಿಭೆಗಳು ತಮ್ಮ ಮಾಹಿತಿಯನ್ನು ಮೂರು ಹಂತಗಳ ಮೂಲಕ ಅಪ್‍ಲೋಡ್ ಮಾಡಲು ಅವಕಾಶವಿರುತ್ತದೆ.
  • ನೋಂದಣಿ, ಪ್ರೊಫೈಲ್ ಸೃಷ್ಟಿ ಹಾಗೂ ತಮ್ಮ ಸಾಧನೆಗಳನ್ನು ಅಪ್‍ಲೋಡ್ ಮಾಡಲು ಅವಕಾಶವಿರುತ್ತದೆ.
  • ಈ ಪೋರ್ಟೆಲ್ ಬಳಸಿಕೊಂಡು, ಪ್ರತಿ ಮಗು ಅಥವಾ ಪೋಷಕರು, ತರಬೇತಿದಾರರು ಅಥವಾ ಶಿಕ್ಷಕರು ತಮ್ಮ ವೈಯಕ್ತಿಕ ಮಾಹಿತಿ ಅಥವಾ ವಿಡಿಯೊವನ್ನು ಪೋರ್ಟೆಲ್‍ನಲ್ಲಿ ಅಪ್‍ಲೋಡ್ ಮಾಡಲು ಸಾಧ್ಯವಾಗುತ್ತದೆ.

6..ಡೈಮಂಡ್ ಕೇತ್ರದ ಮೊದಲ ಮುoಗಡ ಒಪ್ಪಂದ:

  • ರಪ್ಪುದಾರರಿಗೆ ಅನುಕೂಲವಾಗುವಂತೆ ಭಾರತೀಯ ಸರಕು ವಿನಿಮಯವು ಡೈಮಂಡ್ ಕೇತ್ರಕ್ಕೆ ಸಂಬಧಿಸಿದ ವಿಶ್ವದ ಮೊದಲ ಮುoಗಡ ಆಸ್ತಿ ಒಪ್ಪಂದ ಮಾಡಿಕೊಂಡಿದೆ. ಒಪ್ಪಿತ ದರದಲ್ಲಿ ಆಸ್ತಿ (ಮುಖ್ಯವಾಗಿ ಸರಕು ಅಥವಾ ಷೇರು) ಖರೀದಿಸುವ ಒಪ್ಪಂದ ಇದಾಗಿದ್ದು,ತಕ್ಷಣಕ್ಕೆ ಹಣ ಪಾವತಿ ಮಾಡಬೇಕಿಲ್ಲ ಹಾಗೂ ವಿಲೇವಾರಿಯೂ ವಿಳಂಬವಾಗಿಯೇ ನಡೆಯುತ್ತದೆ.
  • ಈ ಒಪ್ಪಂದದಿಂದ ರಪ್ಪುಕಂಪನಿಗಳು ಪಾಲಿಷ್ ಮಾಡಿದ ಹರಳುಗಳ ವಹಿವಾಟು ನಡೆಸಲು ಅನುಕೂಲವಾಗಲಿದೆ. ವಿಶ್ವದಲ್ಲೇ ಭಾರತ ಡೈಮಂಡ್ ಪಾಲಿಷಿoಗ್ ಹಬ್ ಎನಿಸಿಕೊಂಡಿದ್ದು.15 ಮಾದರಿಯ ಗಡಸು ವಜ್ರಗಳಲ್ಲಿ 14 ಮಾದರಿಗಳನ್ನು ಇಲ್ಲಿ ಪಾಲಿಷ್ ಮಾಡಲಾಗುವುದು .
  • ಈ ಒಪ್ಪಂದದಿಂದ ದರ ಏರಿಳಿತದ ಅಪಾಯವಿಲ್ಲದೆ ವಹಿವಾಟು ನಡೆಸಬಹುದಾಗಿದೆ.ಭಾರತೀಯ ಬಂಡವಾಳ ಪತ್ರಗಳು ಮತ್ತು ವಿನಿಮಯ ಮಂಡಳಿ (ಸೆಬಿ) ಈ ಒಪ್ಪಂದಕ್ಕೆ ಅನುಮತಿ ನೀಡಿದೆ ..

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Share