Daily Current Affairs 9th October

9th OCTOBER

 

1.SOURCE http://www.thehindu.com/news/national/devadasi-an-exploitative-ritual-that-refuses-to-die/article19821606.ece

 

ದಕ್ಷಿಣ ಭಾರತದಲ್ಲಿ  ದೇವದಾಸಿ ಪದ್ದತಿ  ಇನ್ನೂ ಅನುಸರಿಸುತ್ತಿದೆಯೇ?

 

ಪ್ರಮುಖ ಸುದ್ದಿ

 

  • ದಕ್ಷಿಣ ಭಾರತದ ಕೆಲವು ಭಾಗಗಳಲ್ಲಿ ಮಾತಮ್ಮ ವ್ಯವಸ್ಥೆಯ ಹೆಸರಿನೊಂದಿಗೆ ದೇವದಾಸಿ ವ್ಯವಸ್ಥೆಯು ಇನ್ನೂ ಪ್ರಚಲಿತವಾಗಿದೆ. ಆಂಧ್ರಪ್ರದೇಶದ ಚಿತ್ತೋರ್ ಜಿಲ್ಲೆಯಲ್ಲಿ ದೇವತೆಗೆ ಹೆಣ್ಣು ಮಕ್ಕಳನ್ನು “ಅರ್ಪಿಸುವ” ವಿಚಿತ್ರ ದೇವಾಲಯ ಆಚರಣೆ  ಬಗ್ಗೆ ಕೆಲವು ಮಾಧ್ಯಮ ವರದಿಮಾಡಿವೆ.
  • ಹಾಗು ಪ್ರಾಚೀನ ದೇವದಾಸಿ ಪದ್ದತಿಯ ಮಹಿಳಾ ಮತ್ತು ಯುವತಿಯರ ದೌರ್ಜನ್ಯದ ಆಚರಣೆಗಳ ನಿರ್ಮೂಲನದ  ಬಗ್ಗೆ ಪ್ರಶ್ನೆ ಯನ್ನು ಹುಟ್ಟು ಹಾಕಿದೆ.

 

ದೇವದಾಸಿ ಪದ್ಧತಿ ಬಗ್ಗೆ

  • ದೇವದಾಸಿ ದೇವಾಲಯಗಳಲ್ಲಿ ದೇವರುಗಳಿಗೆ ಬಿಭಿನ್ನ ರೀತಿಯ ಸೇವೆಯನ್ನು ಮಾಡಲು ಅರ್ಪಿಸಲಾಗಿರುವ ಯುವತಿಯರನ್ನು ದೇವದಾಸಿಯರೆಂದು ಕರೆಯಲಾಗುತ್ತಿತ್ತು.
  • ಈ ಯುವತಿಯರು ಭಗವಂತನ ದಾಸಿಯರಾದ್ದರಿಂದ ಮಂದಿರವನ್ನು ಶುದ್ಧಗೋಳಿಸುವುದು, ದೀಪ ಬೆಳಗಿಸುವುದು ಹಾಗೂ ದೇವರ ಪ್ರತಿಮೆಯ ಸಮ್ಮುಖದಲ್ಲಿ ಭಕ್ತಿಪೂರ್ವಕವಾಗಿ ಗಾಯನ ನರ್ತನ ಮೊದಲಾದ ನಿಶ್ಚಿತ ಕಾರ್ಯಗಳನ್ನು ಮಾಡುವುದು-ಇವುಗಳ ಮೂಲಕ ದೇವರ ಸೇವೆಯನ್ನು ನೆರವೇರಿಸುತ್ತಿದ್ದರು.
  • ಈ ಪದ್ಧತಿ ತೀರ ಪ್ರಾಚೀನವಾದುದೆಂದು ತಿಳಿದು ಬರುತ್ತದೆ. ಪ್ರಾಚೀನ ಬ್ಯಾಬಿಲೋನಿಯ, ಸೈಪ್ರೆಸ್, ಫಿನಿಷಿಯ, ಗ್ರೀಸ್, ಮೆಸಪೊಟೇಮಿಯ, ಈಜಿಪ್ಟ್, ಸಿರಿಯ ಅರೇಬಿಯ, ಮುಂತಾದ ಮಧ್ಯಪ್ರಾಚ್ಯಗಳಲ್ಲಿ ಹಾಗೂ ಆಗ್ನೇಯ ಏಷ್ಯದಲ್ಲಿ ಈ ಪದ್ಧತಿ ರೂಡಿಯಲ್ಲಿತ್ತು. ಒಂದು ಕಾಲಕ್ಕೆ ಸಮಗ್ರ ಭಾರತದಲ್ಲೆಲ್ಲ ಈ ಪದ್ಧತಿ ಪ್ರಚಾರದಲ್ಲಿದ್ದಿರಬೇಕೆಂದು ಕಾಣುತ್ತದೆ. ಉತ್ತರ ಭಾರತದಲ್ಲಿ ಇದರ ಪ್ರಚಾರ ವಿಶೇಷವಾಗಿತ್ತೆಂದು ಹೇಳಲು ಸಮರ್ಥನೀಯ ದಾಖಲೆಗಳು ಇಲ್ಲವಾಗಿವೆ.
  • ಮೊಹೆಂಜೊದಾರೊ ಸಂಸ್ಕøತಿಯ ಮಾತೃದೇವತೆ ಅಥವಾ ಸಂತಾನ ದೇವತೆಯ ಗುಡಿಯಲ್ಲಿ ಪುರುಷರು ಹಾಗು ಸ್ತ್ರೀಯರು ಗುಲಾಮರಾಗಿರುತ್ತಿದ್ದರೆಂದೂ ಅವರಲ್ಲಿ ಅನೇಕರು ದೇವದಾಸಿಯರೆಂದೂ ಅವರು ಗೃಹಿಣಿಯರಾಗುವ ಮುನ್ನ ಸ್ವಲ್ಪ ಕಾಲವಾದರೂ ಮಾತೃದೇವತಾ ಮಂದಿರದಲ್ಲಿ ದೇವದಾಸಿಯರಾಗಿರುವುದು ಆಗಿನ ಸಮಾಜದಲ್ಲಿ ಗೌರವ ಪ್ರತಿಷ್ಠೆಗಳ ಮಾತಾಗಿತ್ತೆಂದೂ ತಿಳಿದುಬರುತ್ತದೆ. ಮೊಹಂಜೊದಾರೊದಲ್ಲಿ ದೊರೆತಿರುವ ಸ್ತ್ರೀ ಪ್ರತಿಮೆಯೊಂದರಲ್ಲಿ ನರ್ತಕಿಯ ಲಕ್ಷಣಗಳನ್ನು ಗುರುತಿಸಲಾಗಿದೆ.
  • ಈ ಸಂಪ್ರದಾಯ ಜೀವಂತವಾಗಿರುವ ಕಡೆಗಳಲ್ಲಿನ ಜನ..,…CLICK HERE TO READ MORE
Share