Daily Current Affairs 9th September

9th SEPTEMBER

SOURCE-THE HINDU

1.ಮಿಲಿಟರಿ ಪೊಲೀಸ್ಗೆ ಶೀಘ್ರದಲ್ಲಿ  ಸ್ತ್ರೀಶಕ್ತಿ ಪ್ರವೇಶ

ಪ್ರಾಮುಖ್ಯತೆಪ್ರಿಲಿಮ್ಸ್ ಮತ್ತು ಮೇನ್ಸ್ ಪರೀಕ್ಷೆಗಾಗಿ (ಪ್ರಬಂಧ ಬರವಣಿಗೆಗಾಗಿ )

 ಪ್ರಿಲಿಮ್ಸ್ ಗಾಗಿ

  • ಲಿಂಗ ತಾರತಮ್ಯಕ್ಕೆ ತೆರೆ ಎಳೆಯುವ ಮಹತ್ವದ ಕ್ರಮವಾಗಿ ಪ್ರತಿವರ್ಷ 52 ಸಿಬ್ಬಂದಿಯಂತೆ 800 ಮಹಿಳೆಯರನ್ನು ಮಿಲಿಟರಿ ಪೊಲೀಸ್ ಪಡೆಗೆ ಸೇರಿಸಿಕೊಳ್ಳುವ ಪ್ರಕ್ರಿಯೆಗೆ ಭಾರತೀಯ ಸೇನಾಪಡೆಯಲ್ಲಿ ಶೀಘ್ರ ಚಾಲನೆ ಸಿಗಲಿದೆ.
  • ದೇಶದ 2ನೇ ಮಹಿಳಾ ರಕ್ಷಣಾ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ನಿರ್ಮಲಾ ಸೀತಾರಾಮನ್ ದೇಶದ ಮಹಿಳೆಯರಿಗೆ ಈ ಮಹತ್ವದ ಕೊಡುಗೆ ಘೋಷಿಸಿದ್ದಾರೆ. ಬಹು ದಿನಗಳಿಂದ ಚರ್ಚೆಗೊಳಪಟ್ಟಿದ್ದ ಮಹಿಳಾ ಸಿಬ್ಬಂದಿ ನೇಮಕಾತಿಗೆ ಸಂಬಂಧಿಸಿದ ಯೋಜನೆ ಅಂತಿಮಗೊಂಡಿದೆ. ಸೇನೆಯಲ್ಲಿ ಮಹಿಳೆಯರಿಗೂ ಕೂಡ ಸಮಾನ ಪ್ರಾತಿನಿಧ್ಯ ಕೊಡುವಲ್ಲಿ ಇದು ಬಹುದೊಡ್ಡ ಕ್ರಮವಾಗಿದೆ .

ಮೇನ್ಸ್ ಪರೀಕ್ಷೆಗಾಗಿ

ಯಾವ ಯಾವ ದೇಶದ ಸೇನೆಯಲ್ಲಿ ಮಹಿಳೆಯರಿದ್ದಾರೆ ??

  • ಜರ್ಮನಿ, ಆಸ್ಟ್ರೇಲಿಯಾ, ಕೆನಡಾ, ಅಮೆರಿಕ, ಬ್ರಿಟನ್, ಡೆನ್ಮಾರ್ಕ್, ಫಿನ್ಲೆಂಡ್, ಫ್ರಾನ್ಸ್, ನಾರ್ವೆ, ಸ್ವೀಡನ್ ಮತ್ತು ಇಸ್ರೇಲ್​ನಲ್ಲಿ ಮಹಿಳಾ ಸೈನಿಕರನ್ನು ಸೇನೆಯ ಮುಂಚೂಣಿ ಘಟಕದಲ್ಲಿ ನಿಯೋಜಿಸಲಾಗುತ್ತಿದೆ.
  • ಸದ್ಯ ಭಾರತೀಯ ಸೇನೆಯ ವೈದ್ಯಕೀಯ, ಕಾನೂನು, ಶಿಕ್ಷಣ, ಸೂಚನೆ, ಇಂಜಿನಿಯರಿಂಗ್ ವಿಭಾಗಗಳಲ್ಲಿ ಮಹಿಳಾ ಸಿಬ್ಬಂದಿ ಇರುವರಾದರೂ, ಪೊಲೀಸ್ ವಿಭಾಗದಲ್ಲಿ ಮಹಿಳಾ ಸಿಬ್ಬಂದಿ ನೇಮಕ ಇದೇ ಮೊದಲು.

 ಉದ್ದೇಶ

 

  • ಮಹಿಳೆಯರಿಗೆ ಸಮಾನ ಪ್ರಾತಿನಿಧ್ಯ ಕೊಡುವುದು
  • ಲಿಂಗ ಆಧಾರಿತ ಅಪರಾಧಗಳ ತನಿಖೆಗೆ ನೆರವಾಗುವುದು.

 

ಪ್ರಬಂಧ ಬರವಣಿಗೆಗಾಗಿ

ತೊಟ್ಟಿಲು ತೂಗುವ ಕೈ ಗನ್ ಹಿಡಿಯಲಾರದೆ?

  • 1857ರಲ್ಲಿ ಪ್ರಾರಂಭವಾದ ಭಾರತದ ಸ್ವಾತಂತ್ರ ಹೋರಾಟವನ್ನು ನಾವು ಪ್ರಥಮ ಸ್ವಾತಂತ್ರ ಸಂಗ್ರಾಮವೆಂದು ಕರೆದರೆ, ಬ್ರಿಟಿಷರು ಇದನ್ನು ಸಿಪಾಯಿ ದಂಗೆ ಎಂದು ಕರೆದರು. ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹಿಳೆಯರೂ ಬ್ರಿಟಿಷರ ಜೊತೆ ಕಾದಾಡಿದರು. ಈ ರೀತಿಯಾಗಿ ಸ್ವಾತಂತ್ರ ಸಂಗ್ರಾಮದಲ್ಲಿ ಧುಮುಕಿದ ಪ್ರಥಮ ಮಹಿಳೆಯೆಂದರೆ ಝಾನ್ಸಿರಾಣಿ ಲಕ್ಷ್ಮೀ ಬಾಯಿ.
  • 1857ರ ಸಂಗ್ರಾಮದಲ್ಲಿ ಯಾವ ನಾಯಕರಿಗೂ ಕಡಿಮೆಯಿಲ್ಲದೇ ಬ್ರಿಟಿಷರ ವಿರುದ್ಧ ಹೋರಾಡಿದಳು. ಬ್ರಿಟಿಷರನ್ನು ಪಣತೊಟ್ಟು ಎದುರಿಸಿದ ಕಾರಣ ಇವಳ ಹೋರಾಟದ ಕಿಚ್ಚನ್ನು ನೋಡಿ ಅನೇಕ ಮಹಿಳೆಯರು ಆ ಸಂಗ್ರಾಮದಲ್ಲಿ ಭಾಗವಹಿಸಿದರು.

ಆಮೇಲೆ ಕಿತ್ತೂರು ರಾಣಿ ಚೆನ್ನಮ್ಮ, ವೀರರಾಣಿ ಅಬ್ಬಕ್ಕ ಮುಂತಾದವರು ಬ್ರಿಟಿಷರ ಜೊತೆ ವೀರಾವೇಶದಿಂದ ಕಾದಾಡಿ ಪ್ರಾಣವನ್ನೇ ಅರ್ಪಿಸಿದ್ದಾರೆ. ಭಾರತದಇತಿಹಾಸವನ್ನು ಗಮನಿಸಿದಾಗ ಮಹಿಳೆಯರಿಗೂ ಶಶಸ್ತ್ರ ತರಬೇತಿಯನ್ನು…….CLICK HERE TO READ MORE

 

Share