MLP-2018-MODEL ANSWERS

15th NOVEMBER  MLP

 

NOTE:: ದಯವಿಟ್ಟು  ಗಮನಿಸಿ ಕೆಳಗಿನ ಉತ್ತರಗಳು‘  ‘ಮಾದರಿ ಉತ್ತರಗಳುಎಂಬುದನ್ನು ನೆನಪಿಡಿ. ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ PROPER SOURCE ಎಲ್ಲದೇ ಇರುವುದರಿಂದ  ನಾವು ಮುಖ್ಯ ಪರೀಕ್ಷೆಯಲ್ಲಿ ನೀವು ಯಾವ ರೀತಿರೆಯಬೇಕು ಮತ್ತು ನಿಮ್ಮ ಸಮಯವನ್ನು ಉಳಿಸಲು ಕೊಡುತ್ತಿರುವ  ವಿಸ್ತಾರವಾದ ಸಾರಾಂಶ, ನಾವುಗಳು ಇಲ್ಲಿ ಪದಗಳ ಮಿತಿ ಗಣನೆಗೆ ತೆಗೆದುಕೊಂಡಿಲ್ಲ ಏಕೆಂದರೆ ಒಂದು ಪ್ರಶ್ನೆಗೆ ಎಷ್ಟು ಸಾದ್ಯೋವೊ ಅಷ್ಟು ಇನ್ಫಾರ್ಮಶನ್ ಕೊಟ್ಟಿರುತ್ತೆವೆ. ನಾವು ಒದಗಿಸುತ್ತಿರುವ ವಿಷಯವು ಪ್ರಶ್ನೆಯ ಬೇಡಿಕೆಯನ್ನು ಪೂರೈಸುತ್ತದೆ ಮತ್ತು ಅದೇ ಸಮಯದಲ್ಲಿ ನಿಮಗೆ ಹಿನ್ನೆಲೆ ಮಾಹಿತಿ ರೂಪದಲ್ಲಿ ಹೆಚ್ಚುವರಿ ಅಂಕಗಳನ್ನು ಗಳಿಸಲು ಅನುಕೂಲಕರವಾಗುತ್ತದೆ.

 

 

GENERAL STUDIES PAPER-1(ಸಾಮಾನ್ಯ ಅಧ್ಯಾಯ1)

 

1.What is communism? Does modern world need communism? In the light of 100th anniversary of the Russian Revolution, critically comment.

(ಕಮ್ಯುನಿಸಮ್  ಎಂದರೇನು  ? ಆಧುನಿಕ ಜಗತ್ತಿನಲ್ಲಿ ಕಮ್ಯುನಿಸಂ ಅಗತ್ಯವಿದೆಯೇ? ರಷ್ಯಾದ ಕ್ರಾಂತಿಯ 100 ನೇ ವಾರ್ಷಿಕೋತ್ಸವದ ಬೆಳಕಿನಲ್ಲಿ ವಿಮರ್ಶಾತ್ಮಕವಾಗಿ ವ್ಯಾಖ್ಯೆಸಿ. )

(250 ಪದಗಳು)

 

ಕಮ್ಯುನಿಸಂ  ತಾತ್ವಿಕ, ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಸಿದ್ಧಾಂತ  ಚಳುವಳಿಯಾಗಿದ್ದು,  ಕಮ್ಯುನಿಸ್ಟ್ ಸಮಾಜದ ಸ್ಥಾಪನೆಯೆ ಇದರ  ಅಂತಿಮ ಗುರಿ.

ಎಲ್ಲ ಸ್ವತ್ತೂ ಸಮುದಾಯಕ್ಕೆ ಸೇರಿದುದೆಂದೂ ಪ್ರತಿಯೊಬ್ಬ ವ್ಯಕ್ತಿಯೂ ಶಕ್ತ್ಯನುಸಾರವಾಗಿ ದುಡಿದು ಆವಶ್ಯಕತೆಗೆ ಅನುಸಾರವಾಗಿ ಪ್ರತಿಫಲ ಪಡೆಯಬೇಕೆಂದೂ ಪ್ರತಿಪಾದಿಸುವ ತತ್ತ್ವ (ಸಾಮ್ಯವಾದ).ಮಾರ್ಕ್ಸ್ ಮತ್ತು ಎಂಗೆಲ್ಸ್‌ ರಿಂದ ಪ್ರಪ್ರಥಮವಾಗಿ ಶಾಸ್ತ್ರೀಯವಾಗಿ ಪ್ರತಿಪಾದಿತವಾದ ಈ ತತ್ತ್ವಕ್ಕೆ ವೈಜ್ಞಾನಿಕ ಸಮಾಜವಾದವೆಂದೂ ಹೆಸರಿದೆ.

 

ನೂರು ವರ್ಷಗಳ ಹಿಂದೆ 1917ರಲ್ಲಿ ರಷ್ಯಾದಲ್ಲಿ ಎರಡು ಕ್ರಾಂತಿಗಳು ಘಟಿಸಿದವು. ‘ಫೆಬ್ರವರಿ ಕ್ರಾಂತಿ’ ಎಂದು ಕರೆಯಲ್ಪಡುವ ಮೊದಲನೆಯದು ಜರುಗಿದ್ದು ಮಾರ್ಚ್ ತಿಂಗಳಲ್ಲಿ, ಎರಡನೆಯದೇ ವಿಶ್ವ ಇತಿಹಾಸವನ್ನು ಪೂರ್ಣವಾಗಿ ಬದಲಿಸಿಬಿಟ್ಟ ಅಕ್ಟೋಬರ್ ಕ್ರಾಂತಿ. ಅದು ಘಟಿಸಿದ್ದು ನವೆಂಬರ್​ನಲ್ಲಿ.

 

ರಷ್ಯಾದ ಕ್ರಾಂತಿಗೆ ಕಾರಣಗಳು

  • ಫೆಬ್ರವರಿ ಕ್ರಾಂತಿಯು ಆಗಿನ ರಷ್ಯಾದ ರಾಜಧಾನಿ ಪೆಟ್ರೋಗ್ರಾಡ್, (ಈಗ ಸೇಂಟ್ ಪೀಟರ್ಸ್ಬರ್ಗ್) ಸುತ್ತಲೂ ಕೇಂದ್ರೀಕೃತವಾಗಿತ್ತು. ಜನರು ನಿಕೋಲಸ್ II ನಾಯಕತ್ವದ ಸಾಮರ್ಥ್ಯದ ನಂಬಿಕೆಯನ್ನು ಕಳೆದುಕೊಂಡಿದ್ದರು. ಸರ್ಕಾರವು ಬಲು ಭ್ರಷ್ಟವಾಗಿತ್ತು.
  • ರಷ್ಯಾ ಆರ್ಥಿಕವಾಗಿ ಹಿಂದುಳಿದಿತ್ತು. ನಿಕೋಲಸ್‍ಗೆ ರಾಷ್ಟ್ರದ ವಿಷಯಗಳಿಗಿಂತ ತನ್ನ ಕುಟುಂಬದ ವಿಷಯಗಳಲ್ಲಿ ಬಗ್ಗೆ ಹೆಚ್ಚು ಆಸಕ್ತಿ ತೋರಿಸುತ್ತಿದ್ದರು. ಅವರು ರಾಜನಾಗುವುದು ದೇವರ ಆಯ್ಕೆ ಎಂಬುದನ್ನು ನಂಬಿದ್ದರು, ಅದಕ್ಕಾಗಿ ಅವರು ತನ್ನ ಸೌಲಭ್ಯಗಳನ್ನು ಅತಿಯಾಗಿ ಬಳಸುತ್ತಿದ್ದರು.
  • ನಿಕೋಲಸ್ ತನ್ನ ಇಚ್ಛೆಯನ್ನು ವಿರೋಧಿಸಿದಲ್ಲಿ, ರಷ್ಯಾದ ಪಾರ್ಲಿಮೆಂಟನ್ನೆ ವಿಸರ್ಜನೆ ಮಾಡುತ್ತಿದ್ದರು. ಅಲ್ಲದೆ, ರಷ್ಯಾದ ಉದ್ದಕ್ಕೂ ಕೈಗಾರೀಕರಣ ಮತ್ತು ರಾಷ್ಟ್ರೀಯತೆಯ ಹೆಚ್ಚಾಗುತ್ತಿದ್ದರೂ, ಅವರಿಗೆ ಅದು ಅರ್ಥವಾಗಲಿಲ್ಲ.
  • ಫೆಬ್ರುವರಿ ಕ್ರಾಂತಿಯ ಸಮಯದಲ್ಲಿ ರಷ್ಯಾ ಮೊದಲ ವಿಶ್ವಯುದ್ಧದಲ್ಲಿ ಭಾಗವಹಿಸಿ, ಹಾನಿಗೊಳಗಾಗಿತ್ತು.
  • ಜರ್ಮನಿ ಮತ್ತು ಮುಂತಾದ ರಾಷ್ಟ್ರಗಳಿಗಿಂತ ರಷ್ಯಾ ಯುದ್ಧೋಪಕರಣಗಳಲ್ಲಿ ದುರ್ಬಲವಾಗಿತ್ತು. ರಷ್ಯಾದವರ ಸಾವು-ನೋವುಗಳು ಹಿಂದಿನ ಯಾವುದೇ ಯುದ್ಧದಲ್ಲಿ ಯಾವುದೇ ರಾಷ್ಟ್ರ ಅನುಭವಿಸಿದ್ದಕ್ಕಿಂತ ಹೆಚ್ಚಾಗಿತ್ತು. ಯುದ್ಧದಲ್ಲಿ ಪಲ್ಗೊಳ್ಳುವಯತ್ನ ಆರ್ಥಿಕವಾಗಿ ದುಬಾರಿಯಾಗಿತ್ತು.
  • ಅಕ್ಟೋಬರ್ ಕ್ರಾಂತಿಯು ಬೋಲ್ಷೆವಿಕ್ ಪಕ್ಷದ ವ್ಲಾಡಿಮಿರ್ ಲೆನಿನ್ ನಾಯಕತ್ವದಲ್ಲಿ ಪ್ರಾರಂಭವಾಯಿತು. ಕಾರ್ಲ್ ಮಾರ್ಕ್ಸ್ ‍ರವರ‍ ರಾಜಕೀಯ ಕಲ್ಪನೆಗಳು ಲೆನಿನ್‍ಗೆ ಸರಿ ಅನಿಸಿದವು. ಈ ರಾಜಕೀಯ ಸಿದ್ಧಾಂತವನ್ನು ಸಾಮಾನ್ಯವಾಗಿ ಮಾರ್ಕ್ಸ್-ಲೆನಿನ್ಸ್ ಎಂದು ಕರೆಯಲಾಗುತ್ತದೆ. ಇದು ಸಮತಾವಾದ (ಕಮ್ಯುನಿಸ್ಟ್) ಸರ್ಕಾರದ ಬಗ್ಗೆ ೨೦ನೇ ಶತಮಾನದಲ್ಲಿ ಹರಡುವಿಕೆಗೆ ನಾಂದಿ ಹಾಡಿತ್ತು. ‍
  • ಇದು ಫೆಬ್ರವರಿ ಕ್ರಾಂತಿಗಿಂತ ತುಂಬಾ ಕಡಿಮೆ ವಿರಳವಾಗಿತ್ತು ಆದರು ಅಂತ್ಯದಲ್ಲಿ ಉದ್ದೇಶಪೂರ್ವಕ ಯೋಜನೆ ಮತ್ತು ಸಮನ್ವಯ ಚಟುವಟಿಕೆಗಳಿಂದ ಕ್ರಾಂತಿಗೆ ಜಯ ಬಂದಿತು. ಅನುಭವಿ ಸೈನ್ಯದ ಪಡೆಗಳು ಭಿನ್ನಮತೀಯರನ್ನು ಅಡಗಿಸಲು ನಗರಕ್ಕೆ ಬಂದಿದ್ದರು, ಆದರೆ ಬೋಲ್ಷೆವಿಕ್‍ ಪಕ್ಷದವರು ಜರ್ಮನ್ನರ ಜೊತೆ ರಹಸ್ಯ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂಬ ಆರೋಪಗಳಿದ್ದವು. ಲೆನಿನ್ ಫಿನ್‍ಲ್ಯಾಂಡ್‍ಗೆ ತಪ್ಪಿಸಿಕೊಂಡಿದ್ದರು, ಆದರು ಅನೇಕರನ್ನು ಬಂಧಿಸಲಾಯಿತು. ಲೆನಿನ್ ಯುರೋಪಿನಲ್ಲಿ ಭಾಗಶಃ ೨೦ನೇ ಶತಮಾನವನ್ನು ಪ್ರಯಾಣ, ಕೆಲಸ ಮತ್ತು ಪ್ರಚಾರದಲ್ಲಿ ಕಳೆದಿದ್ದರು.

 

ರಷ್ಯಾ ಕ್ರಾಂತಿ ಪರಿಣಾಮಗಳು

  • 1917ರಲ್ಲಿ ರಷ್ಯಾ ಕ್ರಾಂತಿ ಮೊಳಕೆಯೊಡೆದಿದ್ದೇ ಅಲ್ಲಿನ ದುರಾಡಳಿತದ ವಿರುದ್ಧ. ರಷ್ಯಾದ ಕೊನೆಯ ಸಾಮ್ರಾಟ ಎರಡನೇ ಝಾರ್ ನಿಕೋಲಸ್​ನ ಕೆಟ್ಟ ಆಡಳಿತದಿಂದ ಜನರು ರೋಸಿಹೋಗಿದ್ದರು. ಸಂಪತ್ತು, ಸಿರಿವಂತಿಕೆ ಕೇವಲ ಒಂದು ವರ್ಗದ ಪಾಲಾಗಿದ್ದರೆ ಉಳಿದವರು ಬಡತನದ ಸಂಕಷ್ಟದಲ್ಲಿ ದಿನ ದೂಡಬೇಕಾದ ದೈನೇಸಿ ಸ್ಥಿತಿ. ಹಾಗಾಗಿ, ದುರಾಡಳಿತದ ವಿರುದ್ಧ ಆಕ್ರೋಶ ಹೆಪ್ಪುಗಟ್ಟುತ್ತಲೇ ಇತ್ತು.
  • 1905ರ ಹೊತ್ತಲ್ಲಿ ಆ ಆಕ್ರೋಶ ಸ್ಪೋಟಗೊಂಡು ಕ್ರಾಂತಿಯ ಸ್ವರೂಪ ತಳೆದಿತ್ತಾದರೂ ಹೋರಾಟಗಾರರಲ್ಲಿನ ಆಂತರಿಕ ಭಿನ್ನಮತಗಳಿಂದ ಅದು ವಿಫಲಗೊಂಡಿತು. ಹೀಗಿದ್ದರೂ, ಈ ಹೋರಾಟ ರಷ್ಯಾದ ಜನರಿಗೆ ರಾಜಕೀಯ ಅಧಿಕಾರಗಳನ್ನು ಪರಿಚಯಿಸಿ ಕೊಡುವಲ್ಲಿ ಯಶಸ್ವಿಯಾಯಿತು. ಆದರೆ, 1917ರಲ್ಲಿ ಕ್ರಾಂತಿಯ ಕಿಡಿ ಪ್ರಬಲವಾಗಿತ್ತು.

 

  • ಸಾಮಾಜಿಕ ಅಸಮಾನತೆಯ ವಿರುದ್ಧ ಜನರ ಆಕ್ರೋಶ ಭುಗಿಲೆದ್ದಿತ್ತು. ಆಗ ರಷ್ಯಾದ ಸಾಮಾಜಿಕ ಸಂರಚನೆ ಮೂರು ಶ್ರೇಣಿಗಳಲ್ಲಿ ಅಥವಾ ಘಟಕಗಳಲ್ಲಿ ವಿಭಜನೆಗೊಂಡಿತ್ತು. ಮೊದಲನೆಯದು, ಸರ್ಕಾರ ಅಥವಾ ಪ್ರಭುತ್ವದಿಂದ ಹಲವು ಅಧಿಕಾರಗಳನ್ನು ಪಡೆದುಕೊಂಡಿದ್ದ ವರ್ಗ.
  • ಎರಡನೆಯದು, ಮೇಲ್ಮಧ್ಯಮ ವರ್ಗದವರು. ಇವರಲ್ಲಿ ವ್ಯಾಪಾರಿಗಳು, ಸಣ್ಣ ಜಮೀನ್ದಾರರು ಇದ್ದರು. ತೃತೀಯ ಶ್ರೇಣಿಯಲ್ಲಿ ಕೃಷಿಕರು, ಕೃಷಿ ಕಾರ್ವಿುಕರು ಹಾಗೂ ಬಡವರು ಇದ್ದರು. ಝಾರ್ ನಿಕೋಲಸ್ ಜನತೆಗೆ ಯಾವುದೇ ರೀತಿಯ ಅಧಿಕಾರ ಕೊಡುವುದನ್ನು ವಿರೋಧಿಸುತ್ತಿದ್ದ. ಹಾಗಾಗಿ, ಅವನ ಆಳ್ವಿಕೆಯಲ್ಲಿ ಜನರು ಅವನ ಆದೇಶಗಳನ್ನು ಕೇಳಬೇಕಿತ್ತಷ್ಟೇ, ವಿರೋಧಿಸುವ ಅವಕಾಶವೇ ಇರಲಿಲ್ಲ.

 

ಆಧುನಿಕ ಜಗತ್ತಿನಲ್ಲಿ ಕಮ್ಯುನಿಸಂ

 

ಇಂದಿನ ಪ್ರಸ್ತುತ ದಿನಗಳಲ್ಲಿ ಸಮಾಜವಾದ ಎಲ್ಲಿ ಉಳಿದುಕೊಂಡಿದೆ ಎಂದು ಹುಡುಕಬೇಕಾದ ಪರಿಸ್ಥಿತಿ ಬಂದಿದೆ. ಕಳೆದ ನೂರು ವರ್ಷಗಳಲ್ಲಿ ಮುಂದೆ ಚಲಿಸಿದ್ದೇವೆಯೋ ಇಲ್ಲವೆ ಮತ್ತಷ್ಟು ಹಿಂದಕ್ಕೆ ಬಂದಿದ್ದೇವೆಯೋ ಎಂಬುದು ಗೊತ್ತಾಗುತ್ತಿಲ್ಲ. ಕಾರಣ, ನೂರು ವರ್ಷಗಳ ಹಿಂದಿನ ಸಮಸ್ಯೆಗಳೇ ಜಗತ್ತನ್ನು ಮತ್ತೆ ಆವರಿಸಿವೆ. ಸಾಮಾಜಿಕ ಅಸಮಾನತೆ ತೀವ್ರವಾಗಿದೆ. ಸಿರಿವಂತರು ಮತ್ತಷ್ಟು ಸಿರಿವಂತರಾಗುತ್ತಿದ್ದಾರೆ, ಬಡವರು ಮತ್ತಷ್ಟು ಬಡವರಾಗುತ್ತಿದ್ದಾರೆ. ದುರ್ಬಲ ವರ್ಗದ ಹಿತವನ್ನು ಕಾಪಾಡುವ ಕಾಳಜಿ ರಾಜನೀತಿಯಿಂದ ಮರೆಯಾಗುತ್ತಿದೆ. ಹಸಿವಿನ ಹಾಹಾಕಾರ ಮರುಕಳಿಸುತ್ತಿದೆ.

 

ಯಾಕೆ ಹೀಗಾಯ್ತು ಮತ್ತೆ ಎಡವಿದ್ದೆಲ್ಲಿ ಎಂದು ಅವಲೋಕಿಸಿಕೊಳ್ಳಲು ಇದು ಸೂಕ್ತ ಕಾಲವಾಗಿದೆ. ಆ ಮೂಲಕ ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಂಡು ಬಡವರ, ದುರ್ಬಲ ವರ್ಗದವರ ಅಭಿವೃದ್ಧಿಯನ್ನು ಪ್ರಮುಖ ಧ್ಯೇಯವಾಗಿಸಿಕೊಂಡು ವಿಕಾಸದ ಕಡೆ ಮುಖ ಮಾಡಬೇಕಿದೆ. ಇಲ್ಲವಾದಲ್ಲಿ, ಮತ್ತೆ ಅತೃಪ್ತಿಯು ಕ್ರಾಂತಿಯ ಸ್ವರೂಪ ಪಡೆದು ಅದರ ಕಿಡಿಗಳು ಎಲ್ಲೆಡೆ ಹಬ್ಬಿ ಅಸಮಾನತೆಯ ಶಾಪವನ್ನು ದಹಿಸುವ ಸ್ಥಿತಿ ಬರಬಹುದು. ರಷ್ಯಾದ ಕ್ರಾಂತಿ ಎಲ್ಲ ಆಳುಗರಿಗೂ ಪಾಠ. ಜನಹಿತವನ್ನು ಕಡೆಗಣಿಸಿದಲ್ಲಿ ಎಂಥ ಘೊರ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂಬುದಕ್ಕೆ ಅಲ್ಲಿನ ವಿದ್ಯಮಾನ ಸಾಕ್ಷಿ.

 

 

GENERAL STUDIES PAPER-2(ಸಾಮಾನ್ಯ ಅಧ್ಯಾಯ2)

 

2.The Prime Minister has recently constituted the economic advisory council (PMEAC) to provide sound policy advice in key areas such as reviving economic growth and creating enabling conditions for gainful employment. Do you think PMEAC was needed when the NITI Aayog and the office of the chief economic adviser (CEA) are fully functional with similar policy agendas? Discuss.

 

(ಆರ್ಥಿಕ ಬೆಳವಣಿಗೆಯನ್ನು ಪುನರುಜ್ಜೀವನಗೊಳಿಸಲು  ಮತ್ತು ಲಾಭದಾಯಕ ಉದ್ಯೋಗದ ಅವಕಾಶಗಳನ್ನು ರಚಿಸುವಂತಹ ಪ್ರಮುಖ ಕ್ಷೇತ್ರಗಳಲ್ಲಿ  ಸಲಹೆ ನೀಡಲು ಇತ್ತೀಚೆಗೆ ಪ್ರಧಾನ ಮಂತ್ರಿರವರು   ಆರ್ಥಿಕ ಸಲಹಾ ಸಮಿತಿಯನ್ನು (ಪಿಎಂಇಎಸಿ) ರಚಿಸಿದ್ದಾರೆ.  ನೀತಿ  ಆಯೋಗ ಮತ್ತು ಮುಖ್ಯ ಆರ್ಥಿಕ ಸಲಹೆಗಾರರ  ​​(ಸಿಇಎ) ಕಛೇರಿಗಳು ಇದೇ ರೀತಿಯ ನೀತಿಯ ಕಾರ್ಯಸೂಚಿಯೊಂದಿಗೆ ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿರುವಾಗ ಪಿಎಂಇಎಸಿ ಅಗತ್ಯವಿದೆಯೆ? ಚರ್ಚಿಸಿ.)                                                                    

(200 ಪದಗಳು)

 

 

ನೀತಿ ಆಯೋಗ ಅಥವಾ ಭಾರತದ ಬದಲಾವಣೆಗಾಗಿನ ರಾಷ್ಟ್ರೀಯ ಸಂಸ್ಥೆ  ವನ್ನು ಭಾರತದ ಯೋಜನಾ ಆಯೋಗದ ಬದಲಿಗೆ ಜನವರಿ ೨,೨೦೧೫ರಲ್ಲಿ ಸ್ಥಾಪಿಸಲಾಗಿದೆ..  ಇದು ಮುಖ್ಯವಾಗಿ ಭಾರತದ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ನೀತಿ ರೂಪಣೆಯಲ್ಲಿ ಬೌದ್ಧಿಕ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ.

ದೇಶದ ಅಭಿವೃದ್ಧಿಗೆ ಪರಿಗಣಿಸಬೇಕಾದ ವಿಷಯಗಳು,ಕ್ಷೇತ್ರಗಳು ಮತ್ತು ತಂತ್ರಗಳ ಕುರಿತು ರಾಜ್ಯಗಳ ಸಲಹೆಯೊಂದಿಗೆ ನೀತಿ ರೂಪಿಸುವುದು ಇದರ ಪ್ರಮುಖ ಕೆಲಸ. ಕೇಂದ್ರ -ರಾಜ್ಯಗಳ ನೀತಿ ರೂಪಣೆ ವಿಷಯದಲ್ಲಿ “ಚಿಂತಕರ ಚಾವಡಿ”ಯ ಪಾತ್ರವಹಿಸಿ ಸಲಹೆ ಸೂಚನೆಗಳನ್ನು ನೀಡುವುದು,ತಳಮಟ್ಟದಿಂದಲೇ ಅಭಿವೃದ್ಧಿಯಾಗುವಂತೆ ನೋಡಿಕೊಳ್ಳುವುದು ಮತ್ತು ಅಭಿವೃದ್ಧಿಯ ಮೌಲ್ಯಮಾಪನ ಮಾಡುವುದು.

 

ಮುಖ್ಯ ಆರ್ಥಿಕ ಸಲಹೆಗಾರ (ಸಿಇಎ) ಭಾರತದ ಸರ್ಕಾರದ ಆರ್ಥಿಕ ಸಲಹೆಗಾರರಾಗಿರುತ್ತಾರೆ . ಸಿಇಎ ಎಂಬುದು ಭಾರತೀಯ ಆರ್ಥಿಕ ಸೇವೆಯ ಮಾಜಿ ಅಧಿಕಾರಿಗಳ ನಿಯಂತ್ರಣ   ಪ್ರಾಧಿಕಾರ.   ಇದು  ಹಣಕಾಸು ಸಚಿವಲಾಯದ ಅಡಿಯಲ್ಲಿ ಬರುತ್ತದೆ.

 

ನೀತಿ  ಆಯೋಗ ಮತ್ತು ಸಿಇಎ ಹೊರತುಪಡಿಸಿ  ಪ್ರಧಾನ ಮಂತ್ರಿ ಯವರ ಆರ್ಥಿಕ ಸಲಹಾ ಸಮಿತಿಯ  ಮೂಲಕ ಸರ್ಕಾರವು ರಚನಾತ್ಮಕ ಮತ್ತು ರಚನಾತ್ಮಕ ರಹಿತ ಪ್ರಕ್ರಿಯೆಗಳ ಮೂಲಕ ಇತರರಿಂದ ಅಂದರೆ   ಉದ್ಯಮ, ಗ್ರಾಹಕ ಗುಂಪುಗಳು, ಚಿಂತಕ ರಿಂದ ,ಶೈಕ್ಷಣಿಕ ಸಂಸ್ಥೆಗಳು, ಮಾಧ್ಯಮಗಳು, ಇತರೆ  ತಜ್ಞರುಗಳಿಂದ    ಸಲಹೆಗಳನ್ನು ಪಡೆಯುತ್ತದೆ.

 

 ಪ್ರಧಾನ ಮಂತ್ರಿ ಯವರ ಆರ್ಥಿಕ ಸಲಹಾ ಸಮಿತಿ.

ಈ ಸಮಿತಿಯನ್ನು  ರಚಿಸಿರುವ ಪ್ರಧಾನಿ ನರೇಂದ್ರ ಮೋದಿ, ನೀತಿ ಆಯೋಗದ ಸದಸ್ಯ ಬಿಬೇಕ್ ದೇಬ್ರಾಯ್ರನ್ನು ಇದಕ್ಕೆ ಮುಖ್ಯಸ್ಥರನ್ನಾಗಿ ನೇಮಕ ಮಾಡಿದ್ದಾರೆ. ನೀತಿ ಆಯೋಗದ ಮುಖ್ಯ ಸಲಹೆಗಾರ ಹಾಗೂ ಹಣಕಾಸು ಇಲಾಖೆಯ ಮಾಜಿ ಕಾರ್ಯದರ್ಶಿ ರತನ್ ವತಲ್ ಈ ಸಮಿತಿಯ ಸದಸ್ಯ ಹಾಗೂ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ. ಆರ್ಥಿಕ ತಜ್ಞ ಸುರ್ಜಿತ್ ಬಲ್ಲಾ, ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ಫೈನಾನ್ಸ್ ಆಂಡ್ ಪಾಲಿಸಿಯ ನಿರ್ದೇಶಕ ರತಿನ್ ರಾಯ್ ಹಾಗೂ ಇಂದಿರಾ ಗಾಂಧಿ ಇನ್​ಸ್ಟಿಟ್ಯೂಟ್ ಆಫ್ ಡೆವಲಪ್​ವೆುಂಟ್ ರಿಸರ್ಚ್​ನ ಪ್ರಾಧ್ಯಾಪಕಿ ಅಶೀಮಾ ಗೊಯೆಲ್ ಸದಸ್ಯರಾಗಿದ್ದಾರೆ. ಇದು ಕೇಂದ್ರ  ಹಣಕಾಸು ಸಚಿವಲಾಯದ ಅಡಿಯಲ್ಲಿ ಬರುತ್ತದೆ

ಸೂಕ್ಹ್ಮವಾಗಿ ಗಮನಿಸಿದಾಗ ಆರ್ಥಿಕ ಸಲಹಾ ಸಮಿತಿ.ನೀತಿ  ಆಯೋಗ ಮತ್ತು ಸಿಇಎ ಕೆಲಸಗಳು ಒಂದೇ ದಿಕ್ಕಿನಲ್ಲಿ ಸಹಭಾಗಿತ್ವದಲ್ಲಿ ಕಾಣುತ್ತದೆ .

  • ಆರ್ಥಿಕತೆ ಹಾಗೂ ಸುಧಾರಣಾ ಕ್ರಮಗಳ ಬಗ್ಗೆ ಸಮಗ್ರ ಅಧ್ಯಯನ ನಡೆಸಿ ಪ್ರಧಾನಿಗೆ ಸಲಹೆ, ಶಿಫಾರಸುಗಳನ್ನು ನೀಡುವುದು.
  • ಕೆಲ ಪ್ರಮುಖ ವಿಚಾರಗಳ ಕುರಿತು ಅಧ್ಯಯನ ನಡೆಸುವಂತೆ ಪ್ರಧಾನಿಯೇ ಸಮಿತಿಗೆ ಸೂಚಿಸುತ್ತಾರೆ. ವಿಷಯ ಕುರಿತು ಅಧ್ಯಯನ ನಡೆಸಿ ಸಮಿತಿ ಪ್ರಧಾನಿ ಕಚೇರಿಗೆ ವರದಿ ಸಲ್ಲಿಸುತ್ತದೆ.
  • ಪ್ರಮುಖ ಯೋಜನೆ, ಮಹತ್ವದ ಆರ್ಥಿಕ ನಿರ್ಧಾರಗಳನ್ನು ಕೈಗೊ ಳ್ಳುವ ಮುನ್ನ ಪ್ರಧಾನಿ ಅಥವಾ ಹಣಕಾಸು ಸಚಿವಾಲಯ ಆರ್ಥಿಕ ಸಮಿತಿಯ ಜತೆ ಚರ್ಚೆ ನಡೆಸುತ್ತದೆ. ಈ ವೇಳೆ ಉದ್ದೇಶಿತ ಯೋಜನೆ ಅಥವಾ ಕ್ರಮದ ಕುರಿತು ಸಮಿತಿ ಸಮಗ್ರ ವಿಶ್ಲೇಷಣೆ ಕೈಗೊಂಡು ಇದರ ಪರಿಣಾಮಗಳು, ನಾಭ-ನಷ್ಟಗಳ ಬಗ್ಗೆ ವರದಿ ನೀಡುತ್ತದೆ.
  • ನೀತಿ ಆಯೋಗವನ್ನು ಹೋಲಿಸಿದಾಗ  ಆರ್ಥಿಕ ಸಲಹಾ ಸಮಿತಿ ಸ್ವತಂತ್ರ ಹಾಗೂ ಸಲಹಾ ಸಮಿತಿಯಾಗಿದ್ದು, ಯಾವುದೇ ಯೋಜನೆ ಅಥವಾ ಆರ್ಥಿಕ ಕ್ರಮಗಳನ್ನು ಸ್ವಯಂ ಜಾರಿಗೊಳಿಸುವ ಅಧಿಕಾರವಿಲ್ಲ.

 

GENERAL STUDIES PAPER-3(ಸಾಮಾನ್ಯ ಅಧ್ಯಾಯ3)

3.Critically examine the features of Bharatmala Pariyojana (BMP) initiative and its likely impact on economic growth of India.

(ಭಾರತ್ ಮಾಲಾ  ಪರಿಯೋಜನಾ (ಬಿಎಂಪಿ) ಉಪಕ್ರಮವನ್ನು ಮತ್ತು ಭಾರತದ ಆರ್ಥಿಕ ಬೆಳವಣಿಗೆಯ ಮೇಲೆ  ಹೇಗೆ  ಪ್ರಭಾವ ಬೀರುತ್ತದೆ ಎಂಬುದನ್ನು ವಿಮರ್ಶಾತ್ಮಕವಾಗಿ ಪರೀಕ್ಷಿಸಿ)

(150 ಪದಗಳು)

 

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಸುಮಾರು 1,900 ಕಿ.ಮೀ. ರಸ್ತೆಗಳನ್ನು ಹಸಿರು ಯುಕ್ತ  ಮಾರ್ಗಗಳಾಗಿ ಅಭಿವೃದ್ಧಿಪಡಿಸಲು ನಿರ್ಧರಿಸಿದೆ. ಅದರಲ್ಲಿ 800 ಕಿ.ಮೀ ಭಾರತ್  ಮಾಲಾ  ಪರಿಯೋಜನಾ ಫೇಸ್ -1 ರಲ್ಲಿ  ನಿರ್ಮಿಸಲಾಗುತ್ತದೆ.

ಭಾರತ್  ಮಾಲಾ  ಪರಿಯೋಜನಾ  (BMP)   ವೈಶಿಷ್ಟ್ಯಗಳು: –

 

  • ಸಮಗ್ರ ಹೆದ್ದಾರಿ ಅಭಿವೃದ್ಧಿಗೆ ಸೂಕ್ತ ಸಂಪನ್ಮೂಲ ಹಂಚಿಕೆ ಮಾಡುವ  ಉದ್ದೇಶ ವನ್ನು ಹೊಂದಿರುವ ಯೋಜನೆ .
  • ಮೊದಲ ಹಂತದ ಯೋಜನೆಯ ಅಂಶಗಳೆಂದರೆ  ಆರ್ಥಿಕ ಕಾರಿಡಾರ್ ಅಭಿವೃದ್ಧಿ, ಇಂಟರ್-ಕಾರಿಡಾರ್ ಮತ್ತು ಫೀಡರ್ ರಸ್ತೆಗಳು, ರಾಷ್ಟ್ರೀಯ ಕಾರಿಡಾರ್ ದಕ್ಷತೆ, ಬಾರ್ಡರ್ ಮತ್ತು ಅಂತರರಾಷ್ಟ್ರೀಯ ಸಂಪರ್ಕ ರಸ್ತೆಗಳು, ಕರಾವಳಿ ಮತ್ತು ಬಂದರು ಸಂಪರ್ಕ ರಸ್ತೆಗಳು ಮತ್ತು ಹೆದ್ದಾರಿಗಳು .
  • ಭಾರತ್ ಮಾಲಾ  ಪರಿಯೋಜನೆ ಯನ್ನು  ಹೆದ್ದಾರಿಗಳ ಮೂಲಸೌಕರ್ಯದಲ್ಲಿನ ಅಂತರವನ್ನು ನಿರ್ಮಿಸಲು ಮನುಷ್ಯ ಮತ್ತು ವಸ್ತುಗಳ ಚಲನೆಯನ್ನು ಹೆಚ್ಚು ಪರಿಣಾಮಕಾರಿಯಾಗಿ  ಬಳಸಿಕೊಳ್ಳುವಹಾಗೆ   ವಿನ್ಯಾಸಗೊಳಿಸಲಾಗಿದೆ.
  • ಇದು ಸಂಚಾರ ದಟ್ಟಣೆಗೆ ಸಂಬಂಧಿಸಿದ ಸಮಸ್ಯೆಗಳನ್ನು, ಬಂದರುಗಳಲ್ಲಿ ತಡೆರಹಿತ ಸರಕು ಚಲನೆ ಮತ್ತು ಗಡಿ ಪ್ರದೇಶದ ಸಂಪರ್ಕವನ್ನು ಪರಿಹರಿಸುವ  ಗುರಿಯನ್ನು ಹೊಂದಿದೆ.
  • ಹಿಂದುಳಿದ ಮತ್ತು ಬುಡಕಟ್ಟು ಪ್ರದೇಶಗಳು, ಆರ್ಥಿಕ ಚಟುವಟಿಕೆಯ ಪ್ರದೇಶಗಳು, ಧಾರ್ಮಿಕ ಮತ್ತು ಪ್ರವಾಸಿ ಪ್ರದೇಶಗಳು, ಗಡಿ ಪ್ರದೇಶಗಳು, ಕರಾವಳಿ ಪ್ರದೇಶಗಳು, ಬಂದರು ಪ್ರದೇಶಗಳು ಮತ್ತು ನೆರೆಹೊರೆಯ ದೇಶಗಳೊಂದಿಗೆ ವ್ಯಾಪಾರದ ಮಾರ್ಗಗಳ ಸಂಪರ್ಕದ ಅಗತ್ಯಗಳನ್ನು ಪೂರೈಸಲು ವಿಶೇಷ ಗಮನವನ್ನು ನೀಡಲಾಗಿದೆ.

ಆರ್ಥಿಕ ಬೆಳವಣಿಗೆ ಮೇಲೆ ಬೀರುವ ಪರಿಣಾಮ

 

  • ಭಾರತ್ ಮಾಲಾ ಯೋಜನೆಯ ಮೊದಲ ಹಂತದಲ್ಲಿ 20,000 ಕಿಲೋಮೀಟರ್ ಹೆದ್ದಾರಿಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ.
  • ಮುಂದಿನ ಐದು ವರ್ಷಗಳಲ್ಲಿ ಭಾರತ್ ಮಾಲಾ ಯೋಜನೆಯೂ ಸೇರಿದಂತೆ 80 ಸಾವಿರ ಕಿ.ಮೀ ಹೆದ್ದಾರಿಗಳ ಅಭಿವೃದ್ಧಿಗಾಗಿ 7 ಲಕ್ಷ ಕೋಟಿ ರೂ. ಮೌಲ್ಯದ ಹೆದ್ದಾರಿ ಯೋಜನೆಗಳಿಗೆ ಸಚಿವ ಸಂಪುಟ ಇಂದು ಅನುಮೋದನೆ ನೀಡಿದೆ.
  • ಇದು ಸರ್ಕಾರದ ಒಂದು ಮೆಗಾ ಯೋಜನೆ ಆಗಿದ್ದು 50,000 ಕಿ.ಮೀ. ಅಭಿವೃದ್ಧಿಯನ್ನು ಕಂಡ ಎನ್ ಎಚ್ ಡಿಪಿ ಯೋಜನೆಯ ನಂತರ ಎರಡನೆಯ ಅತಿದೊಡ್ಡ ಹೆದ್ದಾರಿ ಯೋಜನೆಯಾಗಿದೆ. ಬಾರತ್ ಮಾಲಾ ಯೋಜನೆಯು ಗಡಿ ಮತ್ತು ಇತರ ಪ್ರದೇಶಗಳ ಸಂಪರ್ಕವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ.

 

  • ಇಂದು ಸಂಪುಟ ಅನುಮೋದಿಸಿರುವ ಯೋಜನೆಗಳಲ್ಲಿ ಆರ್ಥಿಕ ಕಾರಿಡಾರ್ ಅಭಿವೃದ್ಧಿ ಯೋಜನೆಗಳೂ ಸೇರಿವೆ. 21,000 ಕಿಲೋ ಮೀಟರ್‌ನ ಆರ್ಥಿಕ ಕಾರಿಡಾರ್‌ಗಳ ಅಭಿವೃದ್ಧಿ ಯೋಜನೆ ಹಮ್ಮಿಕೊಳ್ಳಲು ಕೇಂದ್ರ ಸರ್ಕಾರ ಈ ಹಿಂದೆಯೇ ನಿರ್ಧಾರ ತೆಗೆದುಕೊಂಡಿತ್ತು.
  • ಭಾರತ್ ಮಾಲಾ  ಪರಿಯೋಜನೆ ನಿರ್ಮಾಣ ಕಾರ್ಯದಲ್ಲಿ ಹೆಚ್ಚಿನ ಸಂಖ್ಯೆಯ ನೇರ ಮತ್ತು ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ,
  • ಭಾರತ್ ಮಾಲಾ  ಪರಿಯೋಜನೆ ಯಿಂದ     ದೇಶದ ಲಾಜಿಸ್ಟಿಕ್ ಪರ್ಫಾರ್ಮೆನ್ಸ್ ಇಂಡೆಕ್ಸ್ (LPI)  ಮೇಲೆ ಧನಾತ್ಮಕ ಪ್ರಭಾವ ಬೀರುತ್ತದೆ.

 

 

 

 

Share