WEEK-6 ESSAY MODEL ANSWER

ನಮ್ಮ ಐಎಎಸ್ ಅಕಾಡೆಮಿ ಮಾದರಿ ಪ್ರಬಂಧ ಉತ್ತರಗಳು

 

NOTE:: ದಯವಿಟ್ಟು  ಗಮನಿಸಿ ಕೆಳಗಿನ ಉತ್ತರಗಳು‘  ‘ಮಾದರಿ ಉತ್ತರಗಳುಎಂಬುದನ್ನು ನೆನಪಿಡಿ. ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ PROPER SOURCE ಎಲ್ಲದೇ ಇರುವುದರಿಂದ  ನಾವು ಮುಖ್ಯಾ ಪರೀಕ್ಷೆಯಲ್ಲಿ ನೀವು ಯಾವ ರೀತಿ ರೆಯಬೇಕು ಮತ್ತು ನಿಮ್ಮ ಸಮಯವನ್ನು ಉಳಿಸಲು ಕೊಡುತ್ತಿರುವ  ವಿಸ್ತಾರವಾದ ಸಾರಾಂಶ, ನಾವುಗಳು ಇಲ್ಲಿ ಪದಗಳ ಮಿತಿ ಗಣನೆಗೆ ತೆಗೆದುಕೊಂಡಿಲ್ಲ ಏಕೆಂದರೆ ಒಂದು ಪ್ರಶ್ನೆಗೆ ಎಷ್ಟು ಸಾದ್ಯೋವೊ ಅಷ್ಟು ಇನ್ಫಾರ್ಮಶನ್ ಕೊಟ್ಟಿರುತ್ತೆವೆ. ನಾವು ಒದಗಿಸುತ್ತಿರುವ ವಿಷಯವು ಪ್ರಶ್ನೆಯ ಬೇಡಿಕೆಯನ್ನು ಪೂರೈಸುತ್ತದೆ ಮತ್ತು ಅದೇ ಸಮಯದಲ್ಲಿ ನಿಮಗೆ ಹಿನ್ನೆಲೆ ಮಾಹಿತಿ ರೂಪದಲ್ಲಿ ಹೆಚ್ಚುವರಿ ಅಂಕಗಳನ್ನು ಗಳಿಸಲು ಅನುಕೂಲಕರವಾಗುತ್ತದೆ

 

Inter-State River Water Disputes in India: Is it time for a new mechanism rather than tribunals?

(ಭಾರತದಲ್ಲಿನ ಅಂತರ್ -ರಾಜ್ಯ ನದಿ ನೀರಿನ ವಿವಾದಗಳು: ನ್ಯಾಯಮಂಡಳಿ ರಚಿಸುವುದಕ್ಕಿಂತ ಹೊಸ ಕಾರ್ಯವಿಧಾನಕ್ಕೆ ಸೂಕ್ತ ಸಮಯವೇ ?)

 

ಪೀಠಿಕೆ

ಪ್ರಕೃತಿಯಲ್ಲಿ ಹುಟ್ಟುವ ನದಿಗಳು ಯಾರ ಆಸ್ತಿ ? ಅದು ನೈಸರ್ಗಿಕವಾಗಿ ಹರಿದು ಸಮುದ್ರ ಸೇರುವಂತೆ ಇದ್ದಿದ್ದರೆ ಯಾರ ಆಸ್ತಿಯು ಆಗುತ್ತಿರಲಿಲ್ಲ ಆದರೆ ಭೂಮಿಯನ್ನು ಭೂಗೋಳ ಮಾಡಿ ಗಡಿ ರೇಖೆ ಎಳೆದು ದೇಶ ರಾಜ್ಯಗಳೆಂದು ವಿಭಜಿಸಿ ಹರಿಯುವ ನೀರಿಗೆ ಅಣೆಕಟ್ಟು ಕಟ್ಟಿ  ಗದ್ದೆಗಳಿಗೆ ಹಾಯಿಸಿ ಎರಡು ಮೂರು  ಬೆಳೆ ಬೆಳೆಯುವ ಲಾಭದಾಯಕ ಆಲೋಚನೆಗಳು ಅನುಷ್ಠಾನಗೊಂಡ ಮೇಲೆ ನದಿಗಳು ಆಸ್ತಿಗಳಾದವು.  ನದಿಗಳಿಗೆ ಮಾಲೀಕರು ವಾರಸುದಾರರು ಹುಟ್ಟಿಕೊಂಡರು.  ಗಂಗಾ ಮಾತೆ, ತುಂಗಾ ಮಾತೆ, ಕಾವೇರಿ ಮಾತೆ, ಎಂದು ಪ್ರಕೃತಿ ಆರಾಧಕರಿಂದ ವೇದಗಳಲ್ಲಿ ಆರಾಧಿಸಿಕೊಂಡು ಇದ್ದ  ಭಾವನಾತ್ಮಕ ಸಂಬಂಧಗಳೊಂದಿಗೆ  ವಾಣಿಜ್ಯ ಆರ್ಥಿಕ ಸಂಬಂಧಗಳು ಹುಟ್ಟಿಕೊಂಡವು, ಮಾಲೀಕತ್ವಕ್ಕಾಗಿ  ನದಿ ನೀರಿನ ಹಂಚಿಕೆಗಾಗಿ ತಂಟೆ ತಕರಾರುಗಳು ವಿವಾದಗಳು  ಹುಟ್ಟಿಕೊಂಡವು ಆದರೆ ಜಲ ವಿವಾದಗಳನ್ನು ಪರಿಹರಿಸುವ ವೈಜ್ಞಾನಿಕ ವ್ಯವಸ್ಥೆ ಮಾನದಂಡಗಳನ್ನು ಕಾಯಿದೆಗಳನ್ನು ಮಾಡುವ ಆಲೋಚನೆ ಅರವತ್ತೇಳು ವರ್ಷ ಆಳಿದವರಿಗೆ ಹೊಳೆಯಲಿಲ್ಲ.  ಆರಂಭದ ತಪ್ಪು ಹೆಜ್ಜೆಗಳೇ ಅನುಕರಣನೀಯವಾಗಿ ಮಹಾ ತಪ್ಪುಗಳೇ ಘಟಿಸುತ್ತಿವೆ ಆರಂಭದ ತಪ್ಪುಗಳನ್ನು ತಿದ್ದದ್ದೇ ಮುಂದೆ ಸರಿಯಾದ ಹೆಜ್ಜೆ ಇಡಲು ಸಾಧ್ಯವಿಲ್ಲ ಎಂಬುದೇ  ಅಂತರ್ -ರಾಜ್ಯ ನದಿ ನೀರಿನ ವಿವಾದಗಳಿಗೆ ಪರಿಹಾರಕ್ಕೆ ಸರಿಯಾದ ಪೀಠಿಕೆಯ ಮುನ್ನುಡಿಯಾಗಿದೆ.

 

ಸಾರಂಶ

ಅಂತರ್ -ರಾಜ್ಯ ನದಿ ನೀರಿನ ವಿವಾದ ಇಂದಿನ ಭಾರತೀಯ ಸಂಯುಕ್ತ ವ್ಯವಸ್ಥೆಯಲ್ಲಿ ಅತ್ಯಂತವಾದ ಗಂಭೀರವಾದ  ವಿಷಯವಾಗಿದೆ.ಇದರಿಂದ  ವಿವಿಧ ರಾಜ್ಯಗಳ ನಡುವಿನ ಸಂಬಂಧವನ್ನು ಕಡಿತಗೊಳಿಸುವಹಾಗೆ ಮಾಡಿದೆ .ಇದಕ್ಕೆ ಪ್ರಮುಖ ಉದಾಹರಣೆ ಎಂದರೆ ಇತ್ತೀಚಿನ   ಕಾವೇರಿ ನೀರಿನ ವಿವಾದ ಮತ್ತು ಗಂಗಾ ನದಿ ನೀರಿನ ಹಂಚಿಕೆ. 

ವಿವಿಧ ಅಂತರ್-ರಾಜ್ಯ ಜಲ ವಿವಾದ ಮಂಡಳಿಗಳು  ಇಲ್ಲಿಯವರೆಗೆ ಸ್ಥಾಪಿಸಲ್ಪಟ್ಟಿದ್ದವು, ಆದರೆ ಇದು ತನ್ನ ಸ್ವಂತ ಸಮಸ್ಯೆಗಳನ್ನು ಹೊಂದಿದೆ .

ಸಂಯುಕ್ತ ರಾಜ್ಯ ಪದ್ಧತಿಗೆ ಅನುಗುಣವಾಗಿ ಸಂವಿಧಾನವು ಕೇಂದ್ರ-ರಾಜ್ಯಗಳ ನಡುವೆ ಆಧಿಕಾರಗಳನ್ನು ಹಂಚಿಕೊಟ್ಟಿದೆ. ಅದರಲ್ಲಿ ಜಲವು (ನೀರಾವರಿ ರಾಜ್ಯ ಪಟ್ಟಿ ಯಲ್ಲಿ ಸೇರಿದೆ ರಾಜ್ಯ ಪಟ್ಟಿಯಲ್ಲಿ 61 ವಿಷಯಗಳಿದ್ದು ರಾಜ್ಯ ಶಾಸಕಾಂಗಗಳಿಗೆ ಸ್ವತಂತ್ರವಾಗಿ ಈ ವಿಷಯಗಳ ಬಗ್ಗೆ ಕಾನೂನುಗಳನ್ನು ರಚ್ಚಿಸುವ ಅಧಿಕಾರ ವಿದೆ.

 

 ಭಾರತದ ಸಂವಿಧಾನ ಏನು ಹೇಳುತ್ತದೆ ?

ಭಾಗ-1 ಅರ್ಟಿಕಲ್-1 ಹೇಳುತ್ತದೆ “ಇಂಡಿಯಾ ಅರ್ಥಾತ್ ಭಾರತವು ರಾಜ್ಯಗಳ ಒಕ್ಕೂಟವಾಗಿರತಕ್ಕದ್ದು”ಎಂದು ಆದರೆ ನಮ್ಮ ಸಂವಿಧಾನ ರಚನಾಕಾರರು ರಾಜ್ಯಗಳ ರಚನೆ ವಿಲೀನ ಒಕ್ಕೂಟ ಮತ್ತು ರಾಜ್ಯಗಳ ನಡುವಿನ ಸಂಬಂಧಗಳ ಬಗ್ಗೆ ನಿಖರವಾಗಿ ಸ್ಪಷ್ಟವಾಗಿ ಹೇಳಿದಂತೆ ಅಂತರ ರಾಜ್ಯ ನದಿ ನೀರಿನ ವಿವಾದಗಳನ್ನು ಪರಿಹರಿಸುವುದು ಹೇಗೆ ? ಎಂದು ಹೇಳಲಿಲ್ಲ.  ಆರ್ಟಿಕಲ್ 262 ರಲ್ಲಿ ಅಂತರ ರಾಜ್ಯ ಜಲ ವಿವಾದಗಳನ್ನು ಸುಪ್ರೀಂ ಕೋರ್ಟ್ ವಿಚಾರಣೆ ಮಾಡುವಂತಿಲ್ಲ.  ತಜ್ಞರ ತಂಡ ಇರುವ ಟ್ರಿಬ್ಯುನಲ್  ಮಾತ್ರ ವಿಚಾರಣೆ ಮಾಡಬೇಕೆಂದು ಹೇಳುತ್ತದೆ.  ಆರ್ಟಿಕಲ್ 136 ರಲ್ಲಿ ಎಲ್ಲಾ ಟ್ರಿಬ್ಯುನಲ್ ಗಳ ತೀರ್ಪುಗಳನ್ನು ಅಂತಿಮವಾಗಿ ಪರಾಮರ್ಶಿಸುವ ಅಧಿಕಾರ ಸುಪ್ರೀಂ ಕೋರ್ಟಿಗಿದೆ ಎಂದು ಹೇಳುತ್ತದೆ.  ದ್ವಂದ್ವ ಇರುವುದ್ದರಿಂದ ಗೊಂದಲ. 

 ಭಾರತ ಒಕ್ಕೂಟದಲ್ಲಿರುವ ರಾಜ್ಯಗಳಲ್ಲಿ ನದಿಗಳು  ಒಂದು ರಾಜ್ಯದಲ್ಲಿ ಹುಟ್ಟಿ ಎರಡು ಮೂರು ರಾಜ್ಯಗಳಲ್ಲಿ ಹರಿದು ಸಮುದ್ರ ಸೇರುವಂತೆ ಒಂದು ದೇಶದಲ್ಲಿ ಹುಟ್ಟಿದ ನದಿ ಮತ್ತೊಂದು ದೇಶದಲ್ಲಿ ಹರಿದು ಸಮುದ್ರ ಸೇರುತ್ತದೆ.  ನದಿ  ನೀರಿನ ವಿಚಾರದಲ್ಲಿ  ನಾವು ಪ್ರಾದೇಶಿಕವಾಗಿ ಯೋಚಿಸುವುದ್ದರಿಂದ ಭಾರತ ಒಕ್ಕೂಟದಿಂದ ಹರಿದು ಹೋಗುತ್ತಿರುವ ನೀರಿನ ಪರಿಣಾಮ ನಮಗೆ  ಅರಿವಾಗುತ್ತಿಲ್ಲ.   ಅಭ್ಯಾಸ ಬಲದಂತೆ ನಾವು ಒಕ್ಕೂಟದ ಒಳಗೆ ನದಿ ನೀರಿಗಾಗಿ ಪರಸ್ಪರ ಜಗಳವಾಡುತ್ತಿದ್ದೇವೆ.  ಭಾರತ ವಿಭಜನೆಯ ನಂತರ ಸಿಂಧೂ ಮತ್ತು ಗಂಗಾ ನದಿಗಳು ಭಾರತದಲ್ಲಿ ಹುಟ್ಟಿ  ಬಾಂಗ್ಲಾ  ಮತ್ತು  ಪಾಕಿಸ್ತಾನದಲ್ಲಿ ಹರಿದು ಸಮುದ್ರ ಸೇರುತ್ತವೆ.  ಸಿಂಧೂ ನದಿ ನೀರಿನ ಹಂಚಿಕೆಯಲ್ಲಿ  ಭಾರತ ಪಾಕಿಸ್ತಾನದ ಮದ್ಯೆ ವಿವಾದವಿದೆ.  ಗಂಗಾ ನದಿ ನೀರಿನ ಹಂಚಿಕೆಯಲ್ಲಿ ಭಾರತ ಬಾಂಗ್ಲಾ ನಡುವೆ ವಿವಾದವಿದೆ.  ಒಪ್ಪಂದಗಳ ಫಲವಾಗಿ ವಿವಾದಗಳು ಅಂತ್ಯವಾಗಿವೆ, ಭಾರತದ ಹಿತ್ತಾಸಕ್ತಿಯನ್ನು ಬಲಿ ಕೊಟ್ಟು.

 

 

ಸಂವಿಧಾನ 262 ವಿಧಿ  ಪ್ರಕಾರ ಸಂಸತ್ತು ಎರಡು ಕಾನೂನುಗಳನ್ನು ಜಾರಿಗೆ ತಂದಿದೆ:

1)   1956ರ ಜಲ ವಿವಾದ ಕಾಯಿದೆ 

ರಾಜ್ಯ ಸರ್ಕಾರಗಳೊಂದಿಗೆ ಸಮಾಲೋಚಿಸಿ ಅಂತರರಾಜ್ಯ ನದಿಗಳು ಮತ್ತು ನದಿ ಕಣಿವೆಗಳಿಗಾಗಿ ಮಂಡಳಿಗಳನ್ನು ರಚಿಸಲು ಕೇಂದ್ರ ಸರ್ಕಾರವನ್ನು ಸಕ್ರಿಯಗೊಳಿಸುವುದು ಈ ಕಾಯಿದೆಯ ಉದ್ದೇಶ. ಮಂಡಳಿಯ ಉದ್ದೇಶವು ಅಭಿವೃದ್ಧಿಯ ಯೋಜನೆಯನ್ನು ತಯಾರಿಸಲು ಮತ್ತು ಸಂಘರ್ಷಗಳ ಹೊರಹೊಮ್ಮುವಿಕೆಯನ್ನು ತಡೆಯಲು  ಸಂಸ್ಥಾನದ ಜಲಾನಯನ ಪ್ರದೇಶದ ಬಗ್ಗೆ ಸಲಹೆ ನೀಡುವುದು.

2) 1956 ಅಂತರ್ ರಾಜ್ಯ ನದಿ ನೀರಿನ ಹಂಚಿಕೆ ಕಾಯಿದೆ

ಕಾಯಿದೆಯ  ನಿಬಂಧನೆಗಳು: ಒಂದು ನಿರ್ದಿಷ್ಟ ರಾಜ್ಯ ಅಥವಾ ರಾಜ್ಯಗಳು ಕೇಂದ್ರೀಯ ಸರ್ಕಾರಕ್ಕೆ ಟ್ರಿಬ್ಯೂನಲ್  ರಚಿಸುವುದಕ್ಕೆ ಕೇಳಬಹುದು

ಅನ್ಯಾಯಕ್ಕೊಳಗಾದ ರಾಜ್ಯಗಳ ನಡುವೆ ಸಮಾಲೋಚನೆಯ ಮೂಲಕ ಕೇಂದ್ರ ಸರ್ಕಾರವು ಈ ವಿಷಯವನ್ನು ಪರಿಹರಿಸಲು ಯತ್ನಿಸಬೇಕು.

ಒಂದು ವೇಳೆ ಅದು ಕೆಲಸ  ಸಾಧ್ಯವಾಗದಿದ್ದರೆ  ಟ್ರಿಬ್ಯೂನಲ್ ಅನ್ನು ರಚಿಸಬಹುದು.

ಗಮನಿಸಿ:  ಟ್ರಿಬ್ಯೂನಲ್ ನೀಡುವ ತೀರ್ಪುನ್ನು   ಸುಪ್ರೀಂ ಕೋರ್ಟ್ ಸಹ   ಪ್ರಶ್ನಿಸುವಂತಿಲ್ಲ  ಆದರೆ ಟ್ರಿಬ್ಯೂನಲ್ ಕಾರ್ಯವನ್ನು ಪ್ರಶ್ನಿಸಬಹುದು.

ನದಿ ನೀರಿನ ನ್ಯಾಯಮಂಡಳಿಯ ಸಂಯೋಜನೆ:  ನ್ಯಾಯಮಂಡಳಿಯಲ್ಲಿ  ಭಾರತದ ಮುಖ್ಯ ನ್ಯಾಯಾಧೀಶರಿಂದ ರಚಿಸಲ್ಪಟ್ಟಿದೆ ಮತ್ತು ಸುಪ್ರೀಂ ಕೋರ್ಟ್ನ ನ್ಯಾಯಾಧೀಶರು ಮತ್ತು ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್ನ ಇತರ ಇಬ್ಬರು ನ್ಯಾಯಾಧೀಶರನ್ನು ಒಳಗೊಂಡಿರುತ್ತದೆ.

 

ಈ ನದಿ ನೀರಿನ ವಿವಾದ ಇಂದಿನಿಂದಲ್ಲ ಪ್ರಾಚೀನತೆಯಿಂದ ಬಂದಿದೆ. ಅವುಗಳನ್ನು ಗಮನಿಸಿವುದಾದರೆ

 ಸಿಂಧೂ ನದಿ ನೀರಿನ ಹಂಚಿಕೆ

ಭಾರತ ಪಾಕಿಸ್ತಾನ ವಿಭಜನೆಯ ನಂತರ ಸಿಂಧೂ ನದಿ ನೀರಿನ ಹಂಚಿಕೆಯು ಪ್ರಮುಖ ವಿವಾದವಾಗಿ ಪರಿಣಮಿಸಿತು. ಪಾಕಿಸ್ತಾನ ಪಡೆದ ನೀರಿನ  ಹಣವನ್ನು ಪಾವತಿಸುತ್ತಿಲ್ಲವೆಂದು    ಏಪ್ರಿಲ್ 1, 1948ರಂದು ಭಾರತದ ಪಂಜಾಬ್ ರಾಜ್ಯ ಸರ್ಕಾರ  ಪಾಕಿಸ್ತಾನಕ್ಕೆ ನೀರು ಸರಬರಾಜನ್ನು ನಿಲ್ಲಿಸಿತು. 

 ಇದರಿಂದ ಪಾಕಿಸ್ತಾನದ ಬೆಳೆದು ನಿಂತ ಬೆಳೆ ನಾಶವಾಯಿತು. ಪಾಕಿಸ್ತಾನ  ಸಿಂಧೂ ನದಿ ನೀರಿನ ಹಂಚಿಕೆಯ ವಿವಾದವನ್ನು ಅಂತರ ರಾಷ್ಟ್ರೀಯ ವೇದಿಕೆಗಳಲ್ಲಿ ಪ್ರಸ್ತಾಪಿಸುತ್ತಾ ವಿಶ್ವಬ್ಯಾಂಕಿನೊಂದಿಗೆ ತಂತ್ರ ಎಣೆಯಿತು.  ಅದರ ಪರಿಣಾಮವಾಗಿ ಸಿಂಧೂ ನದಿ ನೀರಿನ ಹಂಚಿಕೆಗೆ ಸಂಬಂಧಿಸಿದಂತೆ ವಿಶ್ವಬ್ಯಾಂಕ್ ಸಂಧಾನ ಮಾಡುವುದಕ್ಕೆ ತಾನು ಸಿದ್ಧವೆಂದು ಫೆಬ್ರವರಿ 5,1954 ರಂದು ಘೋಷಿಸಿತು.

 ಸಿಂಧೂ ನದಿ ಬೇಸಿನ್ ಅನ್ನು…..CLICK HERE TO READ MORE

Share