WEEK-7-ESSAY MODEL ANSWER

ನಮ್ಮ ಐಎಎಸ್ ಅಕಾಡೆಮಿ ಮಾದರಿ ಪ್ರಬಂಧ ಉತ್ತರಗಳು

 

NOTE:: ದಯವಿಟ್ಟು  ಗಮನಿಸಿ ಕೆಳಗಿನ ಉತ್ತರಗಳು‘  ‘ಮಾದರಿ ಉತ್ತರಗಳುಎಂಬುದನ್ನು ನೆನಪಿಡಿ. ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ PROPER SOURCE ಎಲ್ಲದೇ ಇರುವುದರಿಂದ  ನಾವು ಮುಖ್ಯಾ ಪರೀಕ್ಷೆಯಲ್ಲಿ ನೀವು ಯಾವ ರೀತಿರೆಯಬೇಕು ಮತ್ತು ನಿಮ್ಮ ಸಮಯವನ್ನು ಉಳಿಸಲು ಕೊಡುತ್ತಿರುವ  ವಿಸ್ತಾರವಾದ ಸಾರಾಂಶ, ನಾವುಗಳು ಇಲ್ಲಿ ಪದಗಳ ಮಿತಿ ಗಣನೆಗೆ ತೆಗೆದುಕೊಂಡಿಲ್ಲ ಏಕೆಂದರೆ ಒಂದು ಪ್ರಶ್ನೆಗೆ ಎಷ್ಟು ಸಾದ್ಯೋವೊ ಅಷ್ಟು ಇನ್ಫಾರ್ಮಶನ್ ಕೊಟ್ಟಿರುತ್ತೆವೆ. ನಾವು ಒದಗಿಸುತ್ತಿರುವ ವಿಷಯವು ಪ್ರಶ್ನೆಯ ಬೇಡಿಕೆಯನ್ನು ಪೂರೈಸುತ್ತದೆ ಮತ್ತು ಅದೇ ಸಮಯದಲ್ಲಿ ನಿಮಗೆ ಹಿನ್ನೆಲೆ ಮಾಹಿತಿ ರೂಪದಲ್ಲಿ ಹೆಚ್ಚುವರಿ ಅಂಕಗಳನ್ನು ಗಳಿಸಲು ಅನುಕೂಲಕರವಾಗುತ್ತದೆ

 

 

India and Single –Party System –Is Good for Development ?

             (ಭಾರತ ಮತ್ತು ಏಕ ಪಕ್ಷೀಯ ರಾಜಕೀಯತೆ – ಅಭಿವೃದ್ಧಿಗೆ ಒಳಿತೇ ?)

 

ಪೀಠಿಕೆ

ಭಾರತವು  ಬಹು-ಸಾಂಸ್ಕೃತಿಕ, ಬಹು-ಭಾಷಾ, ಬಹು ಜನಾಂಗೀಯತೆ ವನ್ನು ಒಳಗೊಂಡ  ಸಮಾಜವಾಗಿದೆ. ಇದರ  ವೈವಿಧ್ಯತೆಯು ತುಂಬಾ ಅಪಾರವಾಗಿದೆ, ಅನೇಕ ಯುರೋಪ್ ರಾಷ್ಟ್ರಗಳು ಒಟ್ಟಾಗಿ ಸೇರಿಕೊಂಡರು ಇದನ್ನು ಮೆಟ್ಟಿನಿಲ್ಲಲು ಸಾಧ್ಯವಿಲ್ಲ . ಈ ಅನೇಕ ಗುರುತುಗಳು ಹೊರತಾಗಿಯೂ, ನಾವು ಒಂದಾಗಿಯೇ ಇದ್ದೇವೆ. ‘ವೈವಿಧ್ಯದಲ್ಲಿ ಏಕತೆ’ ಯನ್ನು ಅಂಗೀಕರಿಸುವ ಮೂಲಕ ನಾವು ನಿಜವಾಗಿಯೂ ಸಮಯದ ಪರೀಕ್ಷೆಯಲ್ಲಿ ಚಲಿಸುತ್ತಿದ್ದೇವೆ .  ವೈವಿಧ್ಯತೆಯನ್ನು ಗುರುತಿಸುವ ಮತ್ತು ಅದರ ನಾಗರಿಕರಲ್ಲಿ ಸಾರ್ವಭೌಮತ್ವವನ್ನು ನೀಡುವ ಸಂವಿಧಾನಾತ್ಮಕ ನಿಬಂಧನೆಗಳ ಕಾರಣದಿಂದ  ಸಾಧ್ಯವಾಗಿದೆ. ನಮ್ಮ ಸಂವಿಧಾನದ ಮೂಲ ರಚನೆಯನ್ನು ಪ್ರಜಾಪ್ರಭುತ್ವ ರೂಪಿಸುತ್ತದೆ.  ಜಾತಿ,ಬಣ್ಣ, ವರ್ಗ,  ಹೊರತಾಗಿಯೂ ಎಲ್ಲಾ ನಾಗರಿಕರಿಗೆ ಸಾರ್ವತ್ರಿಕ ವಯಸ್ಕ ಮತದಾರರನ್ನಾಗಿಸೀದು  ನಮ್ಮ ದೇಶವು ಮೊದಲು.

ಒಂದು ಶತಮಾನದ ಕಾಲ ನಡೆದ ಸ್ವಾತಂತ್ರ್ಯ ಹೋರಾಟದಲ್ಲಿ ಮೂಡಿದ ಆಶೋತ್ತರಗಳ ಅಭಿವ್ಯಕ್ತಿಯಾಗಿ ನಾವು ಸಂವಿಧಾನದ ಮೂಲಕ ಈ ಘೋಷಣೆಯನ್ನು ಮಾಡಿದ್ದೇವೆ. ಅಂದ ಮಾತ್ರಕ್ಕೆ ನಮ್ಮದು ಈ ಆದರ್ಶಗಳ ಗಣರಾಜ್ಯವಾಗಿಬಿಟ್ಟಿದೆ ಎಂದರ್ಥವಲ್ಲ. ಈ ಗಣರಾಜ್ಯವೆಂಬುದು ಒಂದು ತತ್ವ ಹೇಗೋ ಒಂದು ಪ್ರಕ್ರಿಯೆ ಕೂಡ. ಪ್ರತಿ ಐದು ವರ್ಷಗಳಿಗೊಮ್ಮೆ ನಡೆಯಬೇಕೆಂದು ನಾವೇ ಗೊತ್ತು ಮಾಡಿಕೊಂಡಿರುವ ಚುನಾವಣೆಗಳ ಮೂಲಕ ಈ ಪ್ರಕ್ರಿಯೆಯನ್ನು ಸದಾ ಜಾರಿಯಲ್ಲಿಡಬೇಕಾದ ಜವಾಬ್ದಾರಿ ಈ ಗಣರಾಜ್ಯದ ಪ್ರಜೆಯದು. ಅಂದರೆ, ನಮ್ಮ ಆದರ್ಶವಾದ ಸಾರ್ವಭೌಮ ಪ್ರಜಾಸತ್ತಾತ್ಮಕ ಧರ್ಮನಿರಪೇಕ್ಷ ಸಮಾಜವಾದಿ ಗಣರಾಜ್ಯವನ್ನು ಕಟ್ಟುವ ಕೆಲಸವನ್ನು ಐದು ವರ್ಷಗಳಿಗೊಮ್ಮೆ(ರಾಜಕೀಯ ಅನಿವಾರ್ಯತೆಗಳ ಸಂದರ್ಭದಲ್ಲಿ ಕೆಲವೊಮ್ಮೆ ಇನ್ನೂ ಮೊದಲೇ) ಹಿಂದಿರುಗಿ ನೋಡಿ, ಅಗತ್ಯವೆನಿಸಿದ ಮಾರ್ಪಾಡುಗಳನ್ನು ಮಾಡಿಕೊಳ್ಳುವ ಅವಕಾಶಗಳನ್ನೂ ಈ ಪಕ್ಷಗಳು ಚುನಾವಣೆಗಳ ಮೂಲಕ  ಒದಗಿಸುತ್ತವೆ. ನಾವು ಸಂಸದೀಯ ಪ್ರಜಾಪ್ರಭುತ್ವವೆಂಬ ಪ್ರಾತಿನಿಧಿಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಆಯ್ದುಕೊಂಡಿದ್ದೇವೆ. ಇದರಡಿಯಲ್ಲಿ ನಮ್ಮ ಪ್ರತಿನಿಧಿಗಳನ್ನು ಪ್ರತಿ ಚುನಾವಣೆಯಲ್ಲೂ ಹೊಸದಾಗಿ ಆಯುವ ಮೂಲಕ ಈ ಕೆಲಸದಲ್ಲಿನ ಮಾರ್ಪಾಡುಗಳನ್ನು ಕುರಿತಂತೆ ನಮ್ಮ ಸೂಚನೆಗಳನ್ನು ನಿರಂತರವಾಗಿ ನೀಡುತ್ತಾ ಹೋಗಬಹುದಾಗಿದೆ.

 

ನಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುವುದು ಎಂದರೆ ನಮ್ಮ ಗಣರಾಜ್ಯದ ಭವಿಷ್ಯ ಕುರಿತಂತೆ ನಮ್ಮ ಅಭಿಪ್ರಾಯಗಳನ್ನು ಅನುಮೋದಿಸುವ ಅಥವಾ ಅದಕ್ಕೆ ಹತ್ತಿರದ ಅಭಿಪ್ರಾಯಗಳನ್ನುಳ್ಳ ಅಭ್ಯರ್ಥಿಯನ್ನು ಅಥವಾ ಪಕ್ಷವನ್ನು ಬೆಂಬಲಿಸುವುದೇ ಆಗಿದೆ. ಈ ಅರ್ಥದಲ್ಲಿ ಚುನಾವಣೆ ಎಂದರೆ ದೇಶದ ಅಭಿವೃದಿ ಕೆಲಸವೇ ಆಗಿದೆ. ಆದರೆ ಇಂದಿನ ಚುನಾವಣೆಗಳು ದೇಶದ ಅಭಿವೃದಿ ಕೆಲಸವಾಗಿ ಕಾಣುತ್ತಿದೆಯೆ? ಇಂದು ಚುನಾವಣೆಗಳು ನಡೆಯುತ್ತಿರುವ ರೀತಿ ನೋಡಿದರೆ ಅದು ದೇಶ ಕಟ್ಟುವ ಕೆಲಸಕ್ಕೆ ಬದಲಾಗಿ ದೇಶ ಕೆಡುವುವ ಕೆಲಸವಾಗಿಯೇ ಕಾಣುತ್ತಿದೆ ಎಂಬುದು ಸಾಮಾನ್ಯ ಸಾರ್ವಜನಿಕ ಅಭಿಪ್ರಾಯವಾಗಿದೆ. ಏಕೆಂದರೆ, ಚುನಾವಣೆಗಳ ಮೂಲಕ ನಾವು ಆರಿಸಬೇಕಾದದ್ದು, ಹೊಸ ಹೊಸ ಜಾಗತಿಕ ಸವಾಲುಗಳ ಎದುರಲ್ಲಿ ರಾಷ್ಟ್ರ ಕಟ್ಟುವ ಕೆಲಸಕ್ಕೆ ಅಗತ್ಯವಾದ ಶಾಸನಗಳನ್ನೂ, ಆಡಳಿತಾತ್ಮಕ ಕಾನೂನುಗಳನ್ನೂ ಚರ್ಚಿಸಿ ರೂಪಿಸಬಲ್ಲ ಸಮರ್ಥ ಪ್ರತಿನಿಧಿಗಳನ್ನು. ಆದರೆ ಇಂದು ನಾವು ರಾಷ್ಟ್ರದ ಲೋಕಸಭೆಗೆ ಮತ್ತು ರಾಜ್ಯ ವಿಧಾನ ಸಭೆಗಳಿಗೆ ಆರಿಸಿ ಕಳಿಸುತ್ತಿರುವ ಪ್ರತಿನಿಧಿಗಳ ಈ ಸಂಬಂಧದ ಅರ್ಹತೆಗಳನ್ನು ನೋಡಿದರೆ ಆಘಾತವಾಗುತ್ತದೆ.

 

ಸಾರಾಂಶ

ಸ್ವಾತಂತ್ರ್ಯಾ ಪೂರ್ವದ ದಿನಗಳಲ್ಲಿ ಕಾಂಗ್ರೆಸ್ ಪ್ರಬಲ ಪಕ್ಷವಾಗಿತ್ತು. ಭಾರತ ರಾಷ್ಟ್ರೀಯ ಕಾಂಗ್ರೆಸ್ ಅನ್ನು ಸುಶಿಕ್ಷಿತ ಭಾರತೀಯರಿಗೆ ಸರ್ಕಾರದಲ್ಲಿ ಹೆಚ್ಚಿನ ಅವಕಾಶ ಸೃಷ್ಟಿಸುವ ಉದ್ದೇಶದೊಂದಿಗೆ ೧೮೮೫ ರಲ್ಲಿ ಸ್ಥಾಪಿಸಲಾಯಿತು. ಪ್ರಾರಂಭಿಕ ಹಂತದಲ್ಲಿ ಕಾಂಗ್ರೆಸ್ ಬ್ರಿಟಿಷ್ ಆಡಳಿತಕ್ಕೆ ವಿರೋಧಿಯಾಗಿರಲಿಲ್ಲ. ಇದರ ಮೊದಲ ಸಭೆ ಸ್ಕಾಟ್ಲೆಂಡ್ನ ಅಲನ್ ಆಕ್ಟೇವಿಯನ್ ಹ್ಯೂಮ್ ಎಂಬವರಿಂದ ಆಗಿನ ವೈಸ್‍ರಾಯ್ ಆದ ಲಾರ್ಡ್ ಡಫರಿನ್ ಅವರ ಅನುಮತಿಯೊಂದಿಗೆ ವ್ಯವಸ್ಥೆಯಾದದ್ದು. ಆದರೆ ನಂತರದ ವರ್ಷಗಳಲ್ಲಿ ಬ್ರಿಟಿಷ್ ಸರ್ಕಾರದಿಂದ ಹೆಚ್ಚು ಪ್ರತಿಕ್ರಿಯೆ ಕಾಣದಿದ್ದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಭಾರತೀಯ ಸ್ವಾತಂತ್ರ್ಯ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಲಾರಂಭಿಸಿತು. ಈ ಸಮಯದಲ್ಲಿ……..CLICK HERE TO READ MORE

Share