12th DECEMBER-DAILY CURRENT AFFAIRS BRIEF

12th DECEMBER

 

 

1.”ಸೇಫ್ ಸಿಟಿ ಕಣ್ಗಾವಲು” ಯೋಜನೆ

 ಪ್ರಮುಖ ಸುದ್ದಿ

  • ಬಿಹಾರ ರಾಜ್ಯದಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಮೇಲೆ ನಡೆಯುವ ಅತ್ಯಾಚಾರ ಮತ್ತು ಇತರ ಅಪರಾಧಗಳನ್ನು ನಿಗ್ರಹಿಸುವ   ಉದ್ದೇಶದಿಂದ “ಸುರಕ್ಷಿತ ನಗರ ಕಣ್ಗಾವಲು” ಯೋಜನೆಯನ್ನು ಬಿಹಾರ ರಾಜ್ಯ ಸರ್ಕಾರ ಅನುಮೋದಿಸಿದೆ.

 

ಯೋಜನೆಯ ಬಗ್ಗೆ:

 

  • ಈ ಯೋಜನೆಯ ಪ್ರಕಾರ ಎಲ್ಲಾ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಸಿಸಿಟಿವಿ  ಕ್ಯಾಮರಾಗಳನ್ನು  ಅಳವಡಿಸುವುದು  ಮತ್ತು ರಾಜ್ಯದ ಒಟ್ಟಾರೆ ಅಪರಾಧವನ್ನು  ನಿಯಂತ್ರಿಸುವುದು.
  • ಈ ಯೋಜನೆಯು ವಿಶೇಷವಾಗಿ ಮಹಿಳೆಯರ ಮೇಲೆ ನಡೆಯುವ ಕಿರುಕುಳ ಮತ್ತು   ಮುಂತಾದ  ಅಪರಾಧವನ್ನು ತಡೆಯಲು  ಪ್ರಾರಂಭಿಸಲಾಗಿದೆ .  ಇದು ದುಷ್ಕರ್ಮಿಗಳ ಜಾಡನ್ನು ಇರಿಸಿಕೊಳ್ಳುವಲ್ಲಿ ಸಹಾಯ ಮಾಡುತ್ತದೆ.
  • ಬಿಹಾರ ರಾಜಧಾನಿ ಪಾಟ್ನಾದಿಂದ ಈ ಯೋಜನೆಯನ್ನು ಹಂತ- ಹಂತವಾಗಿ  ಪ್ರಾರಂಭಿಸಲಾಗುತ್ತದೆ.
  • ಈ ಯೋಜನೆಯ ಅನುಷ್ಠಾನಕ್ಕಾಗಿ ಬಿಹಾರದ ಗೃಹ ಇಲಾಖೆ ನೋಡಲ್ ಸಂಸ್ಥೆಯಾಗಿದೆ.

 

 

2.ಸೌದಿ ಅರೇಬಿಯಾದಲ್ಲಿ ಚಲನಚಿತ್ರ ಪ್ರದರ್ಶನಗಳ ಮೇಲಿದ್ದ ನಿಷೇಧ ತೆರವು

 

ಪ್ರಮುಖ ಸುದ್ದಿ

 

  • ದೊರೆ ಸಲ್ಮಾನ್‌ ಬಿನ್‌ ಅಬ್ದುಲಾಝಿಜ್‌ ಅಲ್‌ ಸೌದ್‌ ಅವರ ಸಾಮಾಜಿಕ ಸುಧಾರಣೆಗಳ ಪರಿಣಾಮ 2018ರಿಂದ ಸೌದಿ ಅರೇಬಿಯಾದಲ್ಲಿ ವಾಣಿಜ್ಯ ಚಲನಚಿತ್ರಗಳು ತೆರೆ ಕಾಣಲಿವೆ.
  • ದೊರೆಯ ನಿರ್ದೇಶನದ ಮೇರೆಗೆ ಸಂಸ್ಕೃತಿ ಮತ್ತು ಮಾಹಿತಿ ಸಚಿವಾಲಯವು ವಾಣಿಜ್ಯ ಚಿತ್ರಗಳ ಪ್ರದರ್ಶನಕ್ಕೆ 35 ವರ್ಷಗಳಿಂದ ಜಾರಿಯಲ್ಲಿದ್ದ ನಿಷೇಧವನ್ನು ತೆರೆವುಗೊಳಿಸುವ ನಿರ್ಣಯ ಕೈಗೊಂಡಿದ್ದು, ಮಾಧ್ಯಮಗಳು ಇದೊಂದು ಐತಿಹಾಸಿಕ ನಿರ್ಧಾರ ಎಂದು ಬಣ್ಣಿಸಿವೆ.

 

ಪ್ರಮುಖ ಅಂಶಗಳು

  • ತೈಲ ಸಂಪತ್ತನ್ನೊಂದೇ ಅವಲಂಬಿಸುವ ಬದಲು ಇತರೆ ಆರ್ಥಿಕ ಸಂಪನ್ಮೂಲಗಳ ಮೂಲಕ ದೇಶದ ಅಭಿವೃದ್ಧಿಯ ಕನಸು ಕಾಣುತ್ತಿರುವ ದೊರೆ ಸಲ್ಮಾನ್‌ ಅವರ ಸೂಚನೆ ಮೇರೆಗೆ ಸಿನಿಮಾ ಪ್ರದರ್ಶನಕ್ಕಿದ್ದ ನಿಷೇಧ ತೆರವು ನಿರ್ಣಯ ಕೈಗೊಳ್ಳಲಾಗಿದೆ.
  • ಕಡು ಸಂಪ್ರದಾಯವಾದಿಗಳ ವಿರೋಧದ ಹೊರತಾಗಿಯೂ ‘ವಿಷನ್‌ 2030’ ಭಾಗವಾಗಿ ದೇಶಾದ್ಯಂತ ಸುಮಾರು 300 ಚಿತ್ರಮಂದಿರಗಳನ್ನು ಪುನರುಜ್ಜೀವನಗೊಳಿಸುವ ಉದ್ದೇಶ ಹೊಂದಲಾಗಿದೆ. ಬರುವ ಮಾರ್ಚ್‌ನಲ್ಲಿ ಥೇಟರ್‌ಗಳು ಕಾರ್ಯಾರಂಭ ಮಾಡಲಿವೆ ಎಂದು ಸರಕಾರ ಹೇಳಿದೆ.

 

ಏಕೆ ವಿರೋಧವಿತ್ತು?

  • ಧಾರ್ಮಿಕ ಹಾಗೂ ಸಾಂಸ್ಕೃತಿಕ ಮೌಲ್ಯಗಳಿಗೆ ಧಕ್ಕೆಯಾಗುತ್ತದೆ ಎಂಬ ಸಂಪ್ರದಾಯವಾದಿಗಳ ವಾದ ಮನ್ನಿಸಿ, 1980ರ ದಶಕದಲ್ಲಿ ಅಂದಿನ ಸೌದಿ ಆಡಳಿತ ಈ ದೇಶದಲ್ಲಿ ವಾಣಿಜ್ಯ ಚಿತ್ರಗಳ ಪ್ರದರ್ಶನಕ್ಕೆ ನಿಷೇಧ ಹೇರಿತ್ತು.

 

  • ಆದರೆ ಇಂದಿನ ಇಂಟರ್‌ನೆಟ್‌ ಯುಗದಲ್ಲಿ ಇಂತಹ ನಿಷೇಧಕ್ಕೆ ಅರ್ಥವೇ ಇರದ ಕಾರಣ ಇದನ್ನು ತೆರವುಗೊಳಿಸಿ ಪ್ರದರ್ಶನಕ್ಕೆ ಪರವಾನಗಿ ನೀಡಬೇಕು ಎಂಬ ಆಗ್ರಹಗಳು ಕೇಳಿಬಂದಿದ್ದವು. ಸೌದಿಯನ್ನು ಹೊಸ ರಾಷ್ಟ್ರವಾಗಿ ರೂಪಾಂತರಿಸುವ ಕನಸು ಕಾಣುತ್ತಿರುವ ದೊರೆ ಸಲ್ಮಾನ್‌ ಈ ಆಗ್ರಹ ಮನ್ನಿಸಿದ್ದರಿಂದ ನಿಷೇಧ ತೆರವು ನಿರ್ಧಾರ ಸಾಧ್ಯವಾಗಿದೆ.

 

3.ಲೆಗೆಟಮ್ ಸಮೃದ್ಧಿ ಸೂಚ್ಯಂಕ (Legatum Prosperity Index)

 

ಪ್ರಮುಖ ಸುದ್ದಿ

  • ಮೂಡೀಸ್ ಹಾಗೂ ವಿಶ್ವಸಂಸ್ಥೆ ಭಾರತದ ಆರ್ಥಿಕ ಅಭಿವೃದ್ಧಿ ಬಗ್ಗೆ ಧನಾತ್ಮಕ ವರದಿ ನೀಡಿದ ಬೆನ್ನಲ್ಲೇ ಇದೀಗ ಲೆಗೆಟಮ್ ಸಮೃದ್ಧಿ ಸೂಚ್ಯಂಕವೂ ಒಳ್ಳೆ ಅಭಿಪ್ರಾಯ ವ್ಯಕ್ತಪಡಿಸಿದೆ. ದೇಶದ ಸಮೃದ್ಧಿಗೆ ಸಂಬಂಧಿಸಿದಂತೆ ಚೀನಾ ಹಾಗೂ ಭಾರತದ ನಡುವಿನ ಅಂತರ ಕಡಿಮೆಯಾಗಿದ್ದು, 2016ರಿಂದೀಚೆಗೆ ನಾಲ್ಕು ಅಂಕ ಏರಿಕೆ ಕಂಡಿದೆ.

 

ಪ್ರಮುಖ ಅಂಶಗಳು

 

  • ನೋಟು ಅಮಾನ್ಯೀಕರಣ ಹಾಗೂ ಜಿಎಸ್‌ಟಿ ನೀತಿ ಅಳವಡಿಕೆಯೇ ಮುಂತಾದ ಕಠಿಣ ಸುಧಾರಣಾ ಕ್ರಮಗಳ ಹಿನ್ನೆಲೆಯಲ್ಲಿ ಭಾರತದ ಜಿಡಿಪಿಯಲ್ಲಿ ಅಲ್ಪ ಮಟ್ಟದ ಕುಸಿತ ಕಂಡ ಹಿನ್ನೆಲೆಯಲ್ಲಿ ಸಮೃದ್ಧಿ ಸೂಚ್ಯಂಕದಲ್ಲಿ ಏರಿಕೆಯಾಗಿರುವುದು ಮಹತ್ವದ ಸಂಗತಿ.
  • ವ್ಯವಹಾರ ನಡೆಸುವ ವಾತಾವರಣ, ಆರ್ಥಿಕತೆಯ ಗುಣಮಟ್ಟ ಮತ್ತು ಆಡಳಿತ ವ್ಯವಸ್ಥೆಯ ಮೂಲಕ ಭಾರತವು ಚೀನಾದ ಸಮೃದ್ಧಿ ಸೂಚ್ಯಂಕಕ್ಕೆ ಮತ್ತಷ್ಟು ಹತ್ತಿರವಾಗಿದೆ ಎಂದು ಲೆಗಟನ್ ವರದಿ ತಿಳಿಸಿದೆ.
  • ‘ಶಾಸಕಾಂಗದ ಮೂಲಕ ಭಾರತವು ತನ್ನ ಆಡಳಿತವನ್ನು ಪ್ರಗತಿ ಹಂತಕ್ಕೆ ಕೊಂಡೊಯ್ಯುತ್ತಿರುವ ಬಗ್ಗೆ ಲೆಗೆಟಮ್ ಸಂಸ್ಥೆ ಶ್ಲಾಘಿಸಿದೆ. ಇದರಿಂದಲೇ ನ್ಯಾಯಾಂಗದಿಂದ ಎದುರಾದ ನಿರ್ಬಂಧನಾತ್ಮಕ ಸವಾಲನ್ನು ಎದುರಿಸುವಂಥ ಸಾಮರ್ಥ್ಯವನ್ನು ಭಾರತ ಹೆಚ್ಚಿಸಿಕೊಂಡಿದೆ.
  • ಈ ಎಲ್ಲ ಬೆಳವಣಿಗೆಯಿಂದ ಭಾರತದ ವ್ಯವಹಾರ ಹೆಚ್ಚಾಗಿದ್ದು, ಆರ್ಥಿಕ ಅಭಿವೃದ್ಧಿಯಾಗಿದೆ. ಜತೆಗೆ ಬೌದ್ಧಿಕ ಆಸ್ತಿ ಹಕ್ಕು ಹಾಗೂ ಬ್ಯಾಂಕ್ ಖಾತೆ ಹೊಂದಿರುವವರ ಸಂಖ್ಯೆಯೂ ಹೆಚ್ಚಾಗಿದೆ,’ ಎಂದೂ ಸೂಚ್ಯಂಕ ವರದಿ ತಿಳಿಸಿದೆ.

 

  • ವ್ಯವಹಾರಿಕ ವಲಯ, ಆಡಳಿತ, ಶಿಕ್ಷಣ, ಆರೋಗ್ಯ, ಸುರಕ್ಷತೆ ಮತ್ತು ಭದ್ರತೆ, ವೈಯಕ್ತಿಕ ಸ್ವಾತಂತ್ರ್ಯ, ಸಾಮಾಜಿಕ ಬಂಡವಾಳ ಮತ್ತು ಪರಿಸರ ಮುಂತಾದ ಕ್ಷೇತ್ರಗಳ ಅಭಿವೃದ್ಧಿ ಬಗ್ಗೆಯೂ ಲೆಗೆಟಮ್ ಸಮೀಕ್ಷೆ ನಡೆಸಿದೆ.
  • ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್, ಟಪ್ಟ್ಸ್ ವಿಶ್ವವಿದ್ಯಾಲಯ, ಮತ್ತು ಕ್ಯಾಲಿಫೋರ್ನಿಯಾ ವಿವಿಯಂಥ ಪ್ರತಿಷ್ಠಿತ ಸಂಸ್ಥೆಗಳ ವಿವಿಧ ವಿಷಯ ತಜ್ಞರು ಈ ಅಧ್ಯಯನದಲ್ಲಿ ಪಾಲ್ಗೊಂಡಿದ್ದರು.

 

  • 2017ರಲ್ಲಿ ಲೆಗೆಟಮ್ ಸಮೃದ್ಧಿ ಸೂಚ್ಯಂಕ 149 ದೇಶಗಳ 104 ವಿಷಯಗಳನ್ನು ಮೂಲವಾಗಿಟ್ಟುಕೊಂಡು, ಅಧ್ಯಯನ ನಡೆಸಿದ್ದು, ಆರ್ಥಿಕ ಗುಣಮಟ್ಟ ಮತ್ತು ಶೈಕ್ಷಣಿಕವಾಗಿಯೂ ಭಾರತ ಪ್ರಗತಿ ಪಥದಲ್ಲಿರುವುದು ಕಂಡು ಬಂದಿದೆ. ಭಾರತೀಯರು ತಮ್ಮ ಜೀವನ ಗುಣಮಟ್ಟ ಮತ್ತು ಕೌಟುಂಬಿಕ ಆದಾಯದ ಬಗ್ಗೆ ತೃಪ್ತರಾಗಿದ್ದರೆಂದು, ವರದಿ ಹೇಳಿದೆ.
  • ಭಾರತದ ಅಭಿವೃದ್ಧಿ ಪಥದಲ್ಲಿ ಮೇಲೆರಿದ್ದರೆ, ಚೀನಾ ಈ ಸೂಚ್ಯಂಕದಲ್ಲಿ ಕೆಳಗಿಳಿದಿದ್ದು, ಜನರು ವ್ಯವಹರಿಸಲು ಹಲವು ತೊಡಕುಗಳನ್ನು ಎದುರಿಸಬೇಕಾಗಿದ್ದು, ದೇಶದಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸುವವರ ಸಂಖ್ಯೆಯೂ ಕುಸಿದಿದೆ, ಎಂದಿದೆ ವರದಿ.

 

  • ಒಟ್ಟಾರೆಯಾಗಿ ವಿಶ್ವದ ಸಮೃದ್ಧಿ ಸೂಚ್ಯಂಕ ಏರಿದ್ದು, ಇಸ್ಲಾಮಿಕ್ ದೇಶಗಳ ವಿರುದ್ಧ ಯುದ್ಧ, ಭಯೋತ್ಪಾದನೆ, ಪಶ್ಚಿಮ ಏಷ್ಯಾ ಮತ್ತು ಉತ್ತರ ಆಫ್ರಿಕಾದಿಂದ ಜನರ ಸ್ಥಳಾಂತರ ಮುಂತಾದ ಸಮಸ್ಯೆಗಳ ನಡುವೆಯೂ ಕಳೆದ ದಶಕಕ್ಕೆ ಹೋಲಿಸಿದ್ದಲ್ಲಿ ಈ ದಶಕದಲ್ಲಿ ಸಮೃದ್ಧಿ ಸೂಚ್ಯಂಕ ಅತ್ಯುತ್ತಮವಾಗಿದೆ.
  • 2007ಕ್ಕೆ ಹೋಲಿಸಿದಲ್ಲಿ ಈ ಸೂಚ್ಯಂಕ ಶೇ.6ರಷ್ಟು ಹೆಚ್ಚಾಗಿದೆ. ವಿಶ್ವದ ಮತ್ಯಾವ ಭಾಗದಲ್ಲಿಯೂ ಏಷ್ಯಾ ಪೆಸಿಫಿಕ್‌ನಷ್ಟು ಪ್ರಗತಿ ತ್ವರಿತವಾಗಿಲ್ಲ. ಭಾರತ ಮತ್ತು ಚೀನಾ ಏಷ್ಯಾ ಪೆಸಿಫಿಕ್ ಪ್ರಾಂತ್ಯಕ್ಕೆ ಸೇರಲ್ಪಟ್ಟಿದ್ದು, ವ್ಯವಹಾರ ಪ್ರಗತಿ ಸಾಧಿಸಿದ್ದರೆ, ಪರಿಸರ ಸಂರಕ್ಷಣೆಯಲ್ಲಿ ಈ ದೇಶಗಳು ಹಿಂದೆ ಉಳಿದಿವೆ.

 

4.ಏಕಕಾಲಕ್ಕೆ 2 ಕ್ಷೇತ್ರದಿಂದ ಸ್ಪರ್ಧೆಗೆ ತಡೆ-ಕೇಂದ್ರ ಚುನಾವಣಾ ಆಯೋಗ ಸ್ಪಷ್ಟನೆ

 

ಪ್ರಮುಖ ಸುದ್ದಿ 

  • ತಾತ್ವಿಕವಾಗಿ ಯೋಚಿಸುವುದಾದರೆ ಲೋಕಸಭೆ ಇಲ್ಲವೇ ವಿಧಾನಸಭೆ ಚುನಾವಣೆಯಲ್ಲಿ ಒಬ್ಬ ಅಭ್ಯರ್ಥಿ ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಿಗೆ ಸ್ಪರ್ಧಿಸಲು ಬರುವುದಿಲ್ಲ ಎಂದು ಕೇಂದ್ರ ಚುನಾವಣಾ ಆಯೋಗ ಸುಪ್ರೀಂಕೋರ್ಟ್‌ಗೆ ತಿಳಿಸಿದೆ.

 

ಪ್ರಮುಖ ಸಂಗತಿಗಳು

 

  • ಒಬ್ಬ ಅಭ್ಯರ್ಥಿ ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಿಗೆ ಸ್ಪರ್ಧಿಸುವುದಕ್ಕೆ ನಿಷೇಧ ಹೇರುವಂತೆ ಕೇಂದ್ರ ಹಾಗೂ ಆಯೋಗಕ್ಕೆ ಸೂಚನೆ ನೀಡಬೇಕೆಂದು ಕೋರಿ  ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಸಂಬಂಧಿಸಿದಂತೆ ಚು.ಆಯೋಗ ಕೋರ್ಟ್‌ಗೆ ತನ್ನ ನಿಲುವನ್ನು ಪ್ರಮಾಣಪತ್ರದಲ್ಲಿ ಸ್ಪಷ್ಟಪಡಿಸಿದೆ.

 

  • ಆದರೆ ಈ ಅರ್ಜಿಯ ವಿಚಾರಣೆ ಕೈಗೊಂಡ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ನ್ಯಾಯಪೀಠವು, ಈ ಬಗ್ಗೆ ಅಟಾರ್ನಿ ಜನರಲ್‌ ಅವರ ಅಭಿಪ್ರಾಯ ಕೋರಿದ್ದು, ಮನವಿಯ ಪತ್ರಿಗಳನ್ನು ಚುನಾವಣಾ ಆಯೋಗ ಹಾಗೂ ಅಟಾರ್ನಿ ಜನರಲ್‌ಗೆ ಸಲ್ಲಿಸುವಂತೆ ಅರ್ಜಿದಾರರಿಗೆ ಸೂಚಿಸಿದೆ.

 

1951ರ ಜನಪ್ರಾತಿನಿಧ್ಯ ಕಾಯಿದೆ (1951   Representation of People’s Act (RPA))

 

  • 1951ರ ಜನಪ್ರಾತಿನಿಧ್ಯ ಕಾಯಿದೆಯು ಅಭ್ಯರ್ಥಿಗೆ ಸಾರ್ವತ್ರಿಕ ಚುನಾವಣೆ ಅಥವಾ ಉಪಚುನಾವಣೆ ಅಥವಾ ದ್ವೈವಾರ್ಷಿಕ ಚುನಾವಣೆಯಲ್ಲಿ ಗರಿಷ್ಠ 2 ಕ್ಷೇತ್ರಗಳಿಂದ ಸ್ಪರ್ಧಿಸಲು ಅವಕಾಶ ಕಲ್ಪಿಸಿದೆ. ಆದರೆ, ಸಾಮಾನ್ಯವಾಗಿ ಎರಡೂ ಕ್ಷೇತ್ರಗಳಲ್ಲಿ ಗೆದ್ದ ಅಭ್ಯರ್ಥಿಗಳು ಒಂದು ಕ್ಷೇತ್ರವನ್ನು ಮಾತ್ರ ಉಳಿಸಿಕೊಂಡು, ಮತ್ತೊಂದಕ್ಕೆ ರಾಜೀನಾಮೆ ನೀಡುತ್ತಾರೆ.
  • 1996ರ ಚುನಾವಣಾ ಕಾಯಿದೆಗೆ ತಂದ ತಿದ್ದುಪಡಿಗೆ ಮುನ್ನ ಅಭ್ಯರ್ಥಿಗಳ ಸ್ಪರ್ಧಿಸುವ ಕ್ಷೇತ್ರಗಳ ಸಂಖ್ಯೆಗೆ ನಿರ್ಬಂಧ ಇರಲಿಲ್ಲ.
  • ಚುನಾವಣಾ ಆಯೋಗ ತಂದಿರುವ ಚುನಾವಣಾ ಸುಧಾರಣೆಗಳ ಪ್ರಸ್ತಾವನೆಗಳನ್ನು ಈ ತಿಂಗಳ ಆರಂಭದಲ್ಲಿ ಬಿಡುಗಡೆ ಮಾಡಿದ್ದು, ಚುನಾವಣಾ ಕಾಯಿದೆಯ ಸೆಕ್ಷನ್‌ 33(7)ಕ್ಕೆ ತಿದ್ದುಪಡಿ ತರುವಂತೆ ಕಾನೂನು ಸಚಿವಾಲಯಕ್ಕೆ ಸೂಚಿಸಿದೆ.

 

  • ಚುನಾವಣಾ ಆಯೋಗ 2004ರಲ್ಲಿ ಕೇಂದ್ರ ಸರಕಾರಕ್ಕೆ ಕಳಿಸಿರುವ ತಿದ್ದುಪಡಿ ಪ್ರಸ್ತಾವನೆಯ ಪ್ರಕಾರ, ಒಂದಕ್ಕಿಂತ ಹೆಚ್ಚಿನ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಸ್ಪರ್ಧಿಸುವುದನ್ನು ನಿಷೇಧಿಸದಿದ್ದರೆ, ಗೆದ್ದ ಅಭ್ಯರ್ಥಿ ರಾಜೀನಾಮೆ ನೀಡುವ ಕ್ಷೇತ್ರದಲ್ಲಿ ನಡೆಯುವ ಉಪಚುನಾವಣೆಯ ವೆಚ್ಚ ಭರಿಸಬೇಕು.

 

  • ವಿಧಾನಸಭೆ ಮತ್ತು ಪರಿಷತ್ತಿನ ಚುನಾವಣೆಯಾದರೆ 5 ಲಕ್ಷ ರೂ. ಹಾಗೂ ಲೋಕಸಭಾ ಚುನಾವಣೆಯಾದರೆ 10 ರೂ. ವೆಚ್ಚ ಭರಿಸಬೇಕು ಎಂದು ಆಯೋಗ ಪ್ರಸ್ತಾಪಿಸಿತ್ತು.

 

  • 2 ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಒಂದು ಸ್ಥಾನ್ಕಕೆ ರಾಜೀನಾಮೆ ನೀಡಿದಾಗ ನಡೆಯುವ ಉಪಚುನಾವಣೆಯಿಂದಾಗಿ ಸರಕಾರದ ಬೊಕ್ಕಸಕ್ಕೆ ಹಣಕಾಸಿನ ಹೊರೆ ಆಗುವ ಜತೆಗೆ, ಮಾನವ ಮತ್ತು ಇತರೆ ಸಂಪನ್ಮೂಲವೂ ವ್ಯರ್ಥವಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ, ನೆಚ್ಚಿನ ಅಭ್ಯರ್ಥಿಗೆ ಮತ ಹಾಕುವ ಮತದಾರನಿಗೂ ಅನ್ಯಾಯ ಮಾಡಿದಂತಾಗುತ್ತದೆ ಎಂದು ಆಯೋಗ, ತನ್ನ ಪ್ರಸ್ತಾವನೆಯಲ್ಲಿ ತಿಳಿಸಿದೆ.

 

 

5.ಆಸಿಯಾನ್ ಇಂಡಿಯಾ ಸಂಪರ್ಕ ಶೃಂಗಸಭೆ (ASEAN-India Connectivity Summit (AICS))

 

ಪ್ರಮುಖ ಸುದ್ದಿ

 

  • ಆಸಿಯಾನ್ ಇಂಡಿಯಾ ಸಂಪರ್ಕ ಶೃಂಗಸಭೆ ನವದೆಹಲಿಯಲ್ಲಿ ಇಂದಿನಿಂದ ಆರಂಭವಾಗಲಿದೆ. 21ನೇ ಶತಮಾನದಲ್ಲಿ ಏಷ್ಯಾಗೆ ಡಿಜಿಟಲ್ ಶಕ್ತಿ ಮತ್ತು ಭೌತಿಕ ಸಂಪರ್ಕ ಕಲ್ಪಿಸುವುದು 2 ದಿನಗಳ ಈ ಶೃಂಗಸಭೆಯ ಧ್ಯೇಯವಾಗಿದೆ.

 

  • ಸಂಪರ್ಕ ಸಾಧ್ಯತೆಗಳ ಉತ್ತೇಜನ, ಸುಸ್ಥಿರ ನೀತಿಯ ಶಿಫಾರಸ್ಸುಗಳು, ಆರ್ಥಿಕ ಅಭಿವೃದ್ಧಿಯ ಕಾರ್ಯತಂತ್ರ, ಆಸಿಯಾನ್ ಮತ್ತು ಭಾರತ ನಡುವೆ ಕೈಗಾರಿಕೆ ಹಾಗೂ ವ್ಯಾಪಾರ ಸಂಬಂಧಗಳು ಈ ಶೃಂಗಸಭೆಯ ಗುರಿಗಳಾಗಿವೆ.

 

ಆಸಿಯಾನ್ ಒಕ್ಕೂಟ ವೈಶಿಷ್ಟ್ಯಗಳು (ಮುಖ್ಯ ಪರೀಕ್ಷೆಗಾಗಿ )

 

  • ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟ (ಆಸಿಯಾನ್‌)ದ ಶೃಂಗ ಸಭೆ . ಆಗ್ನೇಯ ಏಷ್ಯಾದ 10 ಪುಟ್ಟ ರಾಷ್ಟ್ರಗಳು ಒಂದಾಗಿ ರಾಜಕೀಯ ಮತ್ತು ಆರ್ಥಿಕ ಅಭಿವೃದ್ಧಿ ನಿಟ್ಟಿನಲ್ಲಿ ಈ ಒಕ್ಕೂಟವನ್ನು ಸ್ಥಾಪಿಸಿಕೊಂಡಿದ್ದು, ವಿಶ್ವದ ಅತಿ ಪ್ರಬಲ ಒಕ್ಕೂಟಗಳಲ್ಲಿ ಒಂದು ಎಂಬ ಹೆಸರು ಗಳಿಸಿದೆ.

 

  • ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟ ಇದರ ಪೂರ್ಣ ಹೆಸರು. . ಆಗಸ್ಟ್ 8, 1967 ರಂದು ಥೈಲ್ಯಾಂಡ್ ನ ಬ್ಯಾಂಕಾಕ್ ನಲ್ಲಿ ಆಸಿಯಾನ್‌ ಘೋಷಣೆ (ಬ್ಯಾಂಕಾಕ್ ಘೋಷಣೆ)ಯಿಂದ ಸ್ಥಾಪನೆ ಮಾಡಲಾಯಿತು

 

  • ಆ ವೇಳೆ ಇಂಡೋನೇಷ್ಯಾ, ಮಲೇಷ್ಯಾ, ಫಿಲಿಪಿನ್ಸ್‌, ಸಿಂಗಾಪುರ, ಥೈಲೆಂಡ್‌ಗಳು ಇದರ ಸದಸ್ಯ ರಾಷ್ಟ್ರಗಳಾಗಿದ್ದವು. ಬಳಿಕ ಸದಸ್ಯತ್ವವನ್ನು ವಿಸ್ತರಿಸಲಾಗಿದ್ದು, ಬ್ರೂನಿ, ಕಾಂಬೋಡಿಯಾ, ಲಾವೋಸ್‌, ಮ್ಯಾನ್ಮಾರ್‌, ವಿಯೆಟ್ನಾಂಗಳೂ ಇದರ ಸದಸ್ಯರಾಷ್ಟ್ರಗಳಾಗಿವೆ. ಈ ದೇಶಗಳ ರಾಜಕೀಯ, ಆರ್ಥಿಕ, ಸಾಮಾಜಿಕ ವಿಚಾರಗಳಿಗೆ ಈ ಒಕ್ಕೂಟ ಶ್ರಮಿಸುತ್ತದೆ.

 

  • ಮಲೇಷ್ಯಾ ಸದ್ಯ ಆಸಿಯಾನ್‌ ಒಕ್ಕೂಟದ ಅಧ್ಯಕ್ಷ ರಾಷ್ಟ್ರವಾಗಿದೆ.

 

  • ಜನಸಂಖ್ಯೆ: ಆಸಿಯಾನ್‌ ಒಕ್ಕೂಟ ಜಗತ್ತಿನ ಶೇ.9ರಷ್ಟು ಜನಸಂಖ್ಯೆಯ ಪ್ರತಿನಿಧಿಯಾಗಿದೆ. ಅಂದರೆ ಈ ಒಕ್ಕೂಟದ ರಾಷ್ಟ್ರಗಳಲ್ಲಿ ಸುಮಾರು 63 ಕೋಟಿ ಮಂದಿ ವಾಸಿಸುತ್ತಿದ್ದಾರೆ. ಯುರೋಪಿಯನ್‌ ಒಕ್ಕೂಟಕ್ಕಿಂತಲೂ ಇಲ್ಲಿ ಹೆಚ್ಚಿನ ಸಂಖ್ಯೆಯ ಜನರಿದ್ದಾರೆ. ಇಂಡೋನೇಷ್ಯಾ ಅತಿ ಹೆಚ್ಚು ಜನಸಂಖ್ಯೆಯಿರುವ ಆಸಿಯಾನ್‌ ಸದಸ್ಯ ರಾಷ್ಟ್ರವಾಗಿದೆ. ಇಲ್ಲಿ 6 ಕೋಟಿ ಜನರಿದ್ದಾರೆ. ಹಾಗೆಯೇ ಅತಿ ಕಡಿಮೆ ಜನಸಂಖ್ಯೆಯ ಆಸಿಯಾನ್‌ ಸದಸ್ಯ ರಾಷ್ಟ್ರ ಎಂದರೆ ಬ್ರೂನಿ ಇಲ್ಲಿ 4.12 ಲಕ್ಷ ಜನಸಂಖ್ಯೆಯಿದೆ.

 

  • ಸರ್ಕಾರಗಳು-ಆಸಿಯಾನ್‌ ಒಕ್ಕೂಟ ದೇಶಗಳ ಸರ್ಕಾರಗಳೂ ಅಷ್ಟೇ ವಿಚಿತ್ರ. ಇಲ್ಲಿ ಪ್ರಜಾಪ್ರಭುತ್ವ ರಾಷ್ಟ್ರವಿದೆ. ರಾಜಾಡಳಿತವಿರುವ ದೇಶವಿದೆ. ಮಿಲಿಟರಿ ಆಡಳಿತದ, ಮಿಲಿಟರಿ ಆಡಳಿತ ಪ್ರಭಾವದ ಕಮ್ಯೂನಿಸ್ಟ್‌ ಆಡಳಿತವೂ ಇಲ್ಲಿದೆ.

 

  • ಧರ್ಮ-ಆಸಿಯಾನ್‌ ರಾಷ್ಟ್ರಗಳು ಮೂಲ ನಿವಾಸಿ ಸಮುದಾಯಗಳು, ಬಹು ಭಾಷೆಯ, ವೈವಿಧ್ಯತೆಯ ಜನಾಂಗಗಳನ್ನು, ವಿವಿಧ ಧರ್ಮಗಳನ್ನು ಹೊಂಇದೆ. ಇಂಡೋನೇಷ್ಯಾದಲ್ಲಿ ಶೇ.90ರಷ್ಟು ಇಸ್ಲಾಂ ಧರ್ಮೀಯರಿದ್ದರೆ, ಫಿಲಿಫಿನ್ಸ್‌ನಲ್ಲಿ ಶೇ.80ಕ್ಕೂ ಹೆಚ್ಚು ರೋಮನ್‌ ಕ್ಯಾಥೋಲಿಕ್‌ ಸಮಯುದಾಯವಿದೆ. ಹಾಗೆಯೇ ಥೈಲೆಂಡ್‌ನ‌ಲ್ಲಿ ಶೇ.95ಕ್ಕೂ ಹೆಚ್ಚು ಬೌದ್ಧ ಧರ್ಮೀಯರು.

 

  • ಉಳಿದಂತೆ ಇಲ್ಲೆಲ್ಲ, ಹಿಂದೂಗಳು, ಸಿಖ್‌, ಟಾವೋಯಿಸಂ ಧರ್ಮೀಯರಿದ್ದಾರೆ. ಈ 10 ರಾಷ್ಟ್ರಗಳಲ್ಲಿ ಮಲೇಷ್ಯಾದಲ್ಲಿ ಬಹು ಸಂಸ್ಕೃತಿ ಇದೆ. ಇಲ್ಲಿ ಮಲಯ, ಚೀನೀ, ಭಾರತೀಯ, ಯುರೋಷ್ಯಾ, ಆದಿವಾಸಿ ಜನಾಂಗದ ಸಂಸ್ಕೃತಿಯಿದೆ.

 

  • ಸಮಯ ವಲಯ-ಆಸಿಯಾನ್‌ ಒಕ್ಕೂಟದ ರಾಷ್ಟ್ರಗಳು ಒಟ್ಟು ನಾಲ್ಕು ಸಮಯವಲಯ (ಟೈಂ ಝೋನ್‌) ಹೊಂದಿದೆ. ನಾಲ್ಕು ಆಸಿಯಾನ್‌ ರಾಷ್ಟ್ರಗಳು ಗ್ರೀನ್‌ವಿಚ್‌ ಸಮಯಕ್ಕಿಂತ 7 ಗಂಟೆ ಮುಂದೆ ಇದ್ದರೆ, ಇಂಡೋನೇಷ್ಯಾ ಸೇರಿದಂತೆ ಪೂರ್ವ ರಾಷ್ಟ್ರಗಳ ಸಮಯ 8-9 ಗಂಟೆಗಳಷ್ಟು ಮುಂದಿದೆ. (ಭಾರತೀಯ ಸಮಯ ಇದಕ್ಕಿಂತ 3 ಗಂಟೆ ಹಿಂದೆ ಇದೆ) ಐದು ರಾಷ್ಟ್ರಗಳ ಸಮಯ 8 ಗಂಟೆಯಷ್ಟು ಮುಂದಿದೆ. ಅದೇ ಮ್ಯಾನ್ಮಾರ್‌ ಸಮಯ 7 ಗಂಟೆಯಷ್ಟು ಮುಂದಿದೆ. (ಭಾರತದ ಸಮಯ ಮ್ಯಾನ್ಮಾರ್‌ ಸಮಯಕ್ಕಿಂತ 1 ಗಂಟೆ 63 ನಿಮಿಷ ಹಿಂದಿದೆ)

 

  • ಆರ್ಥಿಕತೆಒಂದು ವೇಳೆ ಆಸಿಯಾನ್‌ ಒಕ್ಕೂಟ ಎಂಬುದು ಒಂದೇ ರಾಷ್ಟ್ರವಾಗಿದ್ದರೆ, ಅದರ ಆರ್ಥಿಕ ಸಾಮರ್ಥ್ಯ ಜಗತ್ತಿನಲ್ಲೇ 7 ನೇ ಅತಿ ದೊಡ್ಡ ಆರ್ಥಿಕತೆಯಾಗಿರುತ್ತಿತ್ತು. ಆಸಿಯಾನ್‌ ರಾಷ್ಟ್ರಗಳ ಒಟ್ಟು ಒಟ್ಟು ರಾಷ್ಟ್ರೀಯ ಉತ್ಪನ್ನದ ಪ್ರಮಾಣ 237 ಲಕ್ಷ ಕೋಟಿ ರೂ. ಆಗಿದೆ. ಇದು 2020ರ ವೇಳೆಗೆ ದುಪ್ಪಟ್ಟಾಗಲಿದೆ ಎಂದು ಹೇಳಲಾಗಿದೆ. ಅಲ್ಲದೇ 2050ರವೇಳೆಗೆ ಇಲ್ಲಿನ ಆರ್ಥಿಕತೆ ವಿಶ್ವದಲ್ಲೇ ಮೂರನೇ ಸ್ಥಾನವನ್ನು ಪಡೆಯಬಹುದು ಎಂದು ಊಹಿಸಲಾಗಿದೆ. ಇಡೀ ಆಸಿಯಾನ್‌ ರಾಷ್ಟ್ರಗಳಲ್ಲಿ ಇಂಡೋನೇಷ್ಯಾದ ಆರ್ಥಿಕತೆ ಬಹುಪಾಲನ್ನು ಹೊಂದಿದ್ದು ಶೇ.40ರಷ್ಟನ್ನು ಅಲ್ಲಿನದ್ದು. ಈ ರಾಷ್ಟ್ರಗಳಲ್ಲಿ ಮ್ಯಾನ್ಮಾರ್‌ ಕನಿಷ್ಠ ಆರ್ಥಿಕ ಪಾಲನ್ನು ಹೊಂದಿದೆ.

 

  • ಸಿಂಗಾಪುರ ಶ್ರೀಮಂತ-ಆಸಿಯಾನ್‌ ರಾಷ್ಟ್ರಗಳಲ್ಲಿ ಸುಮಾರು ಬೆಂಗಳೂರಿನ ವಿಸ್ತೀರ್ಣದಷ್ಟೇ ಇರುವ ಸಿಂಗಾಪುರವೇ ಅತಿ ಶ್ರೀಮಂತ ದೇಶ. ವಿಶ್ವಮಟ್ಟದಲ್ಲೂ ಶ್ರೀಮಂತ ರಾಷ್ಟ್ರವಾಗಿ ಹೆಸರು ಪಡೆದಿದೆ. ಅಭಿವೃದ್ಧಿಯಲ್ಲೂ ಇದೇ ಮುಂದು. ಸಿಂಗಾಪುರ ಲಾವೋಸ್‌ಗಿಂತ 30 ಪಟ್ಟು ಹೆಚ್ಚು ಶ್ರೀಮಂತವಾಗಿದ್ದು, ಕಾಂಬೋಡಿಯಾ, ಮ್ಯಾನ್ಮಾರ್‌ಗಿಂತ 50 ಪಟ್ಟು ಶ್ರೀಮಂತವಾಗಿದೆ.

 

 

6.ಸಾರಂಗ್‌ಖೇಡಾದಲ್ಲಿ ದೇಶದ ಮೊದಲ ಹಾರ್ಸ್‌ ಮ್ಯೂಸಿಯಂ

ಪ್ರಮುಖ ಸುದ್ದಿ

 

  • ಏಷ್ಯಾದ ಅತ್ಯಂತ ಪುರಾತನ ಕುದುರೆ ಉತ್ಸವಗಳಲ್ಲಿ ಒಂದಾದ ಜಿಲ್ಲೆಯ ಸಾರಂಗ್‌ಖೇಡಾ ಗ್ರಾಮದ ಪ್ರಸಿದ್ಧ ಚೇತಕ್‌ ಉತ್ಸವಕ್ಕೆ ಮಹಾ ರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನ ವೀಸ್‌ ಅವರು ಭೇಟಿ ನೀಡಿದರು. ಇದೇ ಸಂದರ್ಭಲ್ಲಿ ಸಾರಂಗ್‌ಖೇಡಾ ಗ್ರಾಮ ದಲ್ಲಿ ಪ್ರಸ್ತಾವಿತ ದೇಶದ ಮೊದಲ ಕುದು ರೆ ವಸ್ತುಸಂಗ್ರಹಾಲಯಕ್ಕೆ ಅವರು ಭೂ ಮಿ ಪೂಜೆ ನೆರವೇರಿಸಿದರು.

 

ಪ್ರಮುಖ ಸಂಗತಿಗಳು

  • ಸಾರಂ ಗ್‌ಖೇಡಾದಲ್ಲಿ ತಲೆ ಎತ್ತಲಿರುವ ಕುದುರೆ ವಸ್ತುಸಂಗ್ರಹಾಲಯವು ವಿಶ್ವ ಆಕರ್ಷ ಣೆಯ ಕೇಂದ್ರವಾಗಲಿದೆ. ಇದರೊಂದಿಗೆ ಪ್ರವಾಸೋದ್ಯಮ ದೃಷ್ಟಿಯಿಂದಲೂ ಸಾರಂಗ್‌ಖೇಡಾದ ಹೆಸರು ಜಾಗತಿಕ ನಕ್ಷೆಯಲ್ಲಿ ಸ್ಥಾನವನ್ನು ಪಡೆದುಕೊಳ್ಳಲಿದೆ .

 

  • ಮಹಾಭಾರತ ಕಾಲದ ಕೆಲವು ಅವಶೇಷಗಳು ಈ ಕ್ಷೇತ್ರದಲ್ಲಿ ಕಾಣಲು ಸಿಕ್ಕಿವೆ. ಸಾರಂಗ್‌ಖೇಡಾದ ಕುದುರೆ ಮೇಳವು 300 ವರ್ಷ ಹಳೆಯ ಪರಂಪರೆಯನ್ನು ಹೊಂದಿದೆ. ಇಲ್ಲಿನ ಕುದುರೆ ವಸ್ತುಸಂಗ್ರಹಾಲಯವು ದೇಶದಲ್ಲೇ ಅತಿ ಸುಂದರ ವಸ್ತು ಸಂಗ್ರಹಾಲಯವಾಗಿ ಮೂಡಿಬರಲಿದೆ .

 

ಚೇತಕ್ ಕುದುರೆ ಮೇಳದ ಬಗ್ಗೆ

  • ಪ್ರತಿ ವರ್ಷ ಡಿಸೆಂಬರ್‌ನಲ್ಲಿ ನಡೆಯುವ ಸಾರಂಗ್‌ಖೇಡಾ ದ ಚೇತಕ್‌ ಕುದುರೆ ಮೇಳಕ್ಕೆ ದೇಶದಾದ್ಯಂತ ದೊಡ್ಡ -ದೊಡ್ಡ ಕುದುರೆ ವ್ಯಾಪಾರಿಗಳು ಆಗಮಿಸುತ್ತಾರೆ.
  • ಈ ವಾರ್ಷಿಕ ಮೇಳದಲ್ಲಿ ಕೋಟ್ಯಾಂತರ ರೂಪಾಯಿಗಳ ವ್ಯಾಪಾರ ವಹಿವಾಟು ನಡೆಯುತ್ತದೆ.

 

ಹಾರ್ಸ್ ಮ್ಯೂಸಿಯಂ ಬಗ್ಗೆ

 

  • ದೇಶದ ಮೊದಲ ಹಾರ್ಸ್‌ ಮ್ಯೂಸಿಯಂ ನಂದುರ್ಬಾರ್‌ ಜಿಲ್ಲೆಯ ಸಾರಂಗ್‌ಖೇಡಾದಲ್ಲಿ ತಲೆ ಎತ್ತಲಿರುವ ಹಾರ್ಸ್‌ ಮ್ಯೂಸಿಯಂ (ಕುದುರೆ ವಸ್ತುಸಂಗ್ರಹಾಲಯ) ದೇಶದಲ್ಲಿ ಅಂತಹ ಮೊದಲ ಹಾಗೂ ವಿಶ್ವದಲ್ಲಿ ಮೂರನೇ ಮ್ಯೂಸಿಯಂ ಆಗಿರಲಿದೆ. ಇದರ ನಿರ್ಮಾಣ ಕಾರ್ಯ ಎರಡು ಹಂತಗಳಲ್ಲಿ ಪೂರ್ಣವಾಗಲಿದ್ದು, ಮೊದಲ ಹಂತದ ಅಡಿಯಲ್ಲಿ ಸದ್ಯಕ್ಕೆ ಟೆಂಡರ್‌ ಪ್ರಕ್ರಿಯೆ ನಡೆಯುತ್ತಿದೆ

 

  • ತಾಪಿ ನದಿಯ ತಟದಲ್ಲಿ ಸುಮಾರು 5 ಎಕರೆ ಜಮೀನಿ ನಲ್ಲಿ ಹಾರ್ಸ್‌ ಮ್ಯೂಸಿಯಂ ನಿರ್ಮಾಣವಾಗಲಿದ್ದು, ಅದು ಗುಮ್ಮಟಾಕಾರದಲ್ಲಿರಲಿದೆ. ಈ ಸಂಗ್ರಹಾಲಯದಲ್ಲಿ ದೇಶದಾದ್ಯಂತ ಕಾಣಸಿಗುವ ವಿವಿಧ ಜಾತಿಯ ಕುದುರೆಗಳ ಪ್ರತಿಕೃತಿಯನ್ನು ಇಡಲಾಗುವುದು.
  • ಜೊತೆಗೆ ಕುದುರೆಗಳ ಇತಿಹಾಸ ಹಾಗೂ ದೇಶದ ಐತಿಹಾಸಿಕ ಪರಂಪರೆಯನ್ನು ಬಿಂಬಿಸುವ ವಸ್ತುಗಳನ್ನೂ ಅಲ್ಲಿ ಪ್ರದರ್ಶನಕ್ಕೆ ಇಡಲಾಗುವುದು. ಈ ಮ್ಯೂಸಿಯಂ ಆರ್ಟ್‌ ಗ್ಯಾಲರಿ, ಪ್ರದರ್ಶನ ಸ್ಥಳ, ಆಡಿಯೋ ವಿಶುವಲ್‌ ರೂಮ್‌, ರಿಸೆಪ್ಶನ್‌ ಡೆಸ್ಕ್, ಫುಡ್‌ ಸ್ಟಾಲ್‌, ವೈಟಿಂಗ್‌ ರೂಂ ಹಾಗೂ ಇತರ ಮಳಿಗೆಗಳನ್ನು ಹೊಂದಿರಲಿದೆ.
  • ಈ ಯೋಜನೆಯ ಅಡಿಯಲ್ಲಿ ಮ್ಯೂಸಿಯಂನ ಮುಖ್ಯ ದ್ವಾರ, ಪರಿಸರದ, ಉದ್ಯಾನ ಮತ್ತು ತಾಪಿ ನದಿಯ ತಟವನ್ನು ಆಕರ್ಷಣೀಯ ಹಾಗೂ ಸೌಂದಯೀಕರಣ ಮಾಡಲಾಗುವುದು

 

  • ಮ್ಯೂಸಿಯಂ ನಿರ್ಮಾಣ ಕಾರ್ಯ ಪೂರ್ಣಗೊಂಡ ಬಳಿಕ ಸಾರಂಗ್‌ಖೇಡಾ ಗ್ರಾ ಮ ಪಂಚಾಯತ್‌ಗೆ ಅದರ ನಿರ್ವಹಣೆಯ  ಜವಾಬ್ದಾರಿಯನ್ನು ವಹಿಸಲಾಗುವುದು. ಪ್ರ ವಾಸಿಗರ ಶುಲ್ಕ ದರವನ್ನು ಗ್ರಾಮ ಪಂಚಾ ಯತ್‌ ನಿರ್ಣಯಿಸಲಿದೆ. ಈ ಮ್ಯೂಸಿಯಂ ನಿಂದ ಸಾರಂಗ್‌ಖೇಡಾ ಕುದುರೆ ಮೇಳಕ್ಕೆ ಹೊಸ ಮೆರುಗು ಸಿಗಲಿದೆ.

 

 

7.ಭಾರತದ ದಿವಾಳಿತನ ಮತ್ತು ದಿವಾಳಿ ಘೋಷಣೆ ಮಂಡಳಿ (Insolvency and Bankruptcy Board of India (IBBI) )

 

ಪ್ರಮುಖ ಸುದ್ದಿ

 

  • ಸುಸ್ತಿದಾರರ ಸಾಲ ವಸೂಲಾತಿಗೆ ಬಿಗಿ ಕ್ರಮ ಕೈಗೊಳ್ಳುತ್ತಿರುವ ಭಾರತದ ದಿವಾಳಿತನ ಮತ್ತು ದಿವಾಳಿ ಘೋಷಣೆ ಮಂಡಳಿ(ಐಬಿಬಿಐ), ವೈಯಕ್ತಿಕ ಜಾಮೀನುದಾರರ ಆಸ್ತಿ ಮುಟ್ಟುಗೋಲು ಹಾಕಿ ಕೊಳ್ಳುವುದಕ್ಕೆ ಬ್ಯಾಂಕುಗಳಿಗೆ ಶೀಘ್ರವೇ ಅನು ಮತಿ ನೀಡಲಿದೆ.

 

ಪ್ರಮುಖ ಅಂಶಗಳು

 

  • ಕಾರ್ಪೊರೇಟ್ ವಲಯದ ಸುಸ್ತಿ ಸಾಲ ವಸೂಲಿಗೆ ಕಠಿಣ ಕ್ರಮಕ್ಕೆ ಮುಂದಾಗಿರುವ ಮಂಡಳಿ, ವೈಯಕ್ತಿಕ ಜಾಮೀನುದಾರರ ಆಸ್ತಿಯನ್ನು ಸುಸ್ತಿ ಸಾಲ ವಸೂಲಿಗೆ ಮುಟ್ಟುಗೋಲು ಹಾಕುವುದಕ್ಕೆ ಬ್ಯಾಂಕುಗಳಿಗೆ ಅವಕಾಶ ನೀಡುವ ತೀರ್ಮಾನ ಶೀಘ್ರವೇ ಕೈಗೊಳ್ಳಲಿದೆ.

 

  • ತಿಂಗಳ ಅಂತ್ಯದಲ್ಲಿ ಅಧಿಸೂಚನೆ ಪ್ರಕಟವಾಗುವ ನಿರೀಕ್ಷೆ ಇದೆ. ಕಳೆದ ತಿಂಗಳು ಈ ಸಂಬಂಧದ ಕಾಯ್ದೆಗೆ ತಿದ್ದುಪಡಿ ತಂದಿರುವ ಸರ್ಕಾರ, ಉದ್ದೇಶ ಪೂರ್ವಕ ಸುಸ್ತಿದಾರರು ಹಾಗೂ ಸುಸ್ತಿದಾರರ ಪ್ರಮೋಟರ್​ಗಳು ದಿವಾಳಿತನದ ಪ್ರಕ್ರಿಯೆ ಯಲ್ಲಿ ಪಾಲ್ಗೊಳ್ಳದಂತೆ ನಿಷೇಧ ಹೇರಿತ್ತು. ಇದನ್ನು ಪ್ರಶ್ನಿಸಿ ಪಂಜಾಬ್ ಮತ್ತು ಹರಿಯಾಣದ ಕಂಪನಿಯೊಂದು ಹೈಕೋರ್ಟ್​ನಲ್ಲಿ ದಾವೆಯನ್ನು ದಾಖಲಿಸಿದೆ.

 

 

 

  • ದಿವಾಳಿತನ ಮತ್ತು ದಿವಾಳಿ ಘೋಷಣೆ ನೀತಿ ಪ್ರಕಾರ ಅನೇಕ ದೂರುಗಳು ದಾಖಲಾಗಿವೆ. ದಿವಾಳಿತನ ಪ್ರಕ್ರಿಯೆಯಲ್ಲಿ ಭಾಗಿಯಾಗುತ್ತಿರುವ ದಿವಾಳಿ ಕಂಪನಿಗಳ ಕುರಿತೂ ದೂರುಗಳು ಹೆಚ್ಚಾಗಿವೆ. ಹೀಗಾಗಿಯೇ ದಿವಾಳಿ ಘೋಷಣೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಕುರಿತ ನಿಯಮ ಬಿಗಿಗೊಳಿಸಲು ಐಬಿಬಿಐ ಮುಂದಾಗಿದ್ದು, ಅದನ್ನು ಹಂತ ಹಂತವಾಗಿ ಜಾರಿಗೊಳಿಸುತ್ತಿದೆ. ಇದರಂತೆ, ಯಾವುದೇ ವೃತ್ತಿಪರ ದಿವಾಳಿತನ ಏಜೆನ್ಸಿ, ದಿವಾಳಿತನ ವೃತ್ತಿಪರ, ದಿವಾಳಿತನ ಸಂಸ್ಥೆ ವಿರುದ್ಧ ದೂರು ದಾಖಲಿಸಬಹುದಾಗಿದೆ ಮತ್ತು ಅವುಗಳ ಕುರಿತ ಮಾಹಿತಿಯನ್ನೂ ಪಡೆಯಬಹುದಾಗಿದೆ.

 

 

  • ದಿವಾಳಿತನಕ್ಕೆ ಸಂಬಂಧಿಸಿದ ದೂರು ಗಂಭೀರವಾಗಿದ್ದರೆ ಸಂಬಂಧಪಟ್ಟವರಿಗೆ ಶುಲ್ಕ ಹಿಂತಿರುಗಿಸಲಾಗುತ್ತದೆ.ದೂರುಗಳ ಗಂಭೀರತೆ ಆಧರಿಸಿ ಅದರ ತನಿಖೆಗೆ ಆದೇಶ ನೀಡಬೇಕೋ ಅಥವಾ ಸಂಬಂಧಿಸಿದವರಿಗೆ ಶೋಕಾಸ್ ನೋಟಿಸ್ ನೀಡಿ ವಿಚಾರಣೆಗೆ ಆಹ್ವಾನಿಸಬೇಕೋ ಎಂಬುದನ್ನು ಐಬಿಬಿಐ ನಿರ್ಧರಿಸುತ್ತದೆ.

 

  • ದೂರುಗಳು ಮತ್ತು ಅಹವಾಲುಗಳ ವಿಲೇವಾರಿಗೆ ಐಬಿಬಿಐ ಪಾರದರ್ಶಕ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಹಾನಿ ಎಸಗುವಂತಹ ಯಾವುದೇ ಸೇವಾ ಪೂರೈಕೆದಾರರನ್ನೂ ಐಬಿಬಿಐ ಸಹಿಸುವುದಿಲ್ಲ. ಸೇವಾ ಪೂರೈಕೆದಾರರು ಪ್ರಾಮಾಣಿಕವಾಗಿದ್ದರೆ ಅವರ ಹಿತರಕ್ಷಣೆಗೂ ಬದ್ಧವಾಗಿದೆ.

 

 

ONLY FOR PRELIMS

 

8.ಲಕ್ಷ್ಯ  ಇನಿಶಿಯೇಟಿವ್ (Laqshya Initiative)

 

  • ಭಾರತ ಸರ್ಕಾರ ಇತ್ತೀಚೆಗೆ ಲಕ್ಷ್ಯ-ಲೇಬರ್ ರೂಮ್ ಕ್ವಾಲಿಟಿ ಇಂಪ್ರೂವ್ಮೆಂಟ್ ಉಪಕ್ರಮನ್ನು ಪ್ರಾರಂಭಿಸಿದೆ.
  • ಕಾರ್ಮಿಕ ಕೋಣೆಯಲ್ಲಿ ಒದಗಿಸಿದ ಕಾಳಜಿಯ ಗುಣಮಟ್ಟವನ್ನು ಸುಧಾರಿಸುವ ಮೂಲಕ ತಾಯಿಯ ಮತ್ತು ನವ ಜಾತ ಶಿಶುವಿನ  ಮರಣ,(new-born mortality)
  • ಮತ್ತು ಅಸ್ವಸ್ಥತೆ (morbidity) ಕಡಿಮೆ ಮಾಡುವುದು ಇದರ ಗುರಿಯಾಗಿದೆ.
  • ಇದನ್ನು ಜಿಲ್ಲಾ ವೈದ್ಯಕೀಯ ಆಸ್ಪತ್ರೆ ಮತ್ತು ಉಪ ಜಿಲ್ಲಾ ಆಸ್ಪತ್ರೆ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ  ಜೊತೆಗೆ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಅನುಷ್ಠಾನಗೊಳಿಸಲಾಗುವುದು.
  • ಈ ಉಪಕ್ರಮವು ಕಾರ್ಮಿಕ ಕೊಠಡಿಗಳ ಗುಣಮಟ್ಟದ ಪ್ರಮಾಣೀಕರಣವನ್ನು ನಡೆಸಲು ಯೋಜಿಸಿದೆ ಮತ್ತು ಗುರಿಗಳನ್ನು ಸಾಧಿಸುವ ಸೌಕರ್ಯಗಳನ್ನು ಉತ್ತೇಜಿಸುತ್ತದೆ.

 

9.ರಂಗನಾಡಿ ಜಲವಿದ್ಯುತ್ ಅಣೆಕಟ್ಟು

 

  • ಇದು ಅರುಣಾಚಲ ಪ್ರದೇಶದ ರಂಗನಾಡಿ ನದಿಯ ಮೇಲೆ ನಿರ್ಮಿಸಿದ (ROR- Run-of-the-River) ಅಣೆಕಟ್ಟು.
  • ROR ಎಂಬುದು ಹೈಡ್ರೊಎಲೆಕ್ಟ್ರಿಕ್ ಪೀಳಿಗೆಯ ಒಂದು ವಿಧವಾಗಿದೆ, ಇದರಿಂದಾಗಿ ಕಡಿಮೆ ಅಥವಾ ನೀರಿನ ಸಂಗ್ರಹಣೆ ಒದಗಿಸಲಾಗುತ್ತದೆ.
  • ನದಿಯ ಮೇಲಿನ ಭಾಗದ ಗಣನೀಯ ಪ್ರಮಾಣದ ಪ್ರವಾಹವು ROR ಯೋಜನೆಗಳಿಗೆ ಅಗತ್ಯವಿರುವುದಿಲ್ಲ ಹಾಗು ದೊಡ್ಡ ಜಲಾಶಯವು ಅಗತ್ಯವಿಲ್ಲ.
  • ಮೀಥೇನ್ ಮತ್ತು ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯನ್ನು ತೆಗೆದುಹಾಕುವ ಮೂಲಕ ಜಲಾಶಯದ ರಚನೆಯ ಅಗತ್ಯವಿರುವುದಿಲ್ಲ.
  • ಸಾಂಪ್ರದಾಯಿಕ ಹೈಡ್ರೊ-ಎಲೆಕ್ಟ್ರಿಕ್ ಅಣೆಕಟ್ಟಿನ ಜಲಾಶಯದಲ್ಲಿ ಸಾವಯವ ವಸ್ತುಗಳ ವಿಭಜನೆಯಿಂದ ಹೊರಸೂಸುವಿಕೆಯು ಸಾಮಾನ್ಯವಾಗಿ ಉಂಟಾಗುತ್ತದೆ.

 

10.ದೇಶದ ಮೊಟ್ಟಮೊದಲ ಆಹಾರ, ನೀರಿನ ಗುಣಮಟ್ಟ ಪರೀಕ್ಷೆಗೆ ಸಂಚಾರಿ ಪ್ರಯೋಗಾಲಯ

 

  • ಗೋವಾ ರಾಜ್ಯ ಸರ್ಕಾರ ದೇಶದ ಮೊಟ್ಟಮೊದಲ ಆಹಾರ, ನೀರಿನ ಗುಣಮಟ್ಟ ಪರೀಕ್ಷೆಗೆ ಸಂಚಾರಿ ಪ್ರಯೋಗಾಲಯವನ್ನು ಆರಂಭಿಸಿದೆ.
  • ಈ ಸಂಚಾರಿ ಪ್ರಯೋಗಾಲಯಕ್ಕೆ ಕೇಂದ್ರ ಸರಕಾರ ಅನುದಾನ ನೀಡಿದೆ, ಇದು ಐದು ವರ್ಷಗಳವರೆಗೆ ನಿರ್ವಹಣಾ ವೆಚ್ಚವನ್ನು ಸಹ ಹೊಂದುತ್ತದೆ.
  • ಈ ವಾಹನದಲ್ಲಿ ಇರುವ ಉಪಕರಣಗಳಿಂದ ಆಹಾರ ಹಾಗೂ ನೀರಿನ ಸ್ವಚ್ಛತೆ, ಇನ್ನಿತರೆ ಅಗತ್ಯ ಅಂಶಗಳ ಗುಣಮಟ್ಟವನ್ನು ಪರೀಕ್ಷಿಸಲಾಗುತ್ತದೆ. ಇದರ ಫಲಿತಾಂಶ ಕೇವಲ 15 ನಿಮಿಷಗಳಲ್ಲಿಯೇ ಬರಲಿದೆ.
  • ಅಕಸ್ಮಾತ್ ಪರೀಕ್ಷಿಸಿದ ಆಹಾರದ ಮಾದರಿ ನಿಗದಿತ ಗುಣಮಟ್ಟಕ್ಕಿಂತ ಕಳಪೆಯಾಗಿದ್ದಲ್ಲಿ, ಸಂಬಂಧಿಸಿದ ಕಂಪನಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು, ಎನ್ನಲಾಗಿದೆ.
Share