12th DECEMBER-THE HINDU EDITORIAL

ನಮ್ಮ ಐಎಎಸ್ ಅಕಾಡೆಮಿಯ ಸಂಪಾದಕೀಯ ಒಳನೋಟ

 

ಆರ್ಥಿಕ ನಿರ್ಣಯ ಮತ್ತು ಠೇವಣಿ ವಿಮೆ ಮಸೂದೆ (ಎಫ್​ಆರ್​ ಡಿಐ)-2017

 

(  WHAT DOES THE FRDI BILL DO FOR YOU? )

 

SOURCE- THE HINDU

http://www.thehindu.com/business/Economy/what-does-the-frdi-bill-do-for-you/article21386264.ece

 

 

ಸನ್ನಿವೇಶ

 

  • ಪ್ರಸ್ತಾವಿತ 2017 ರ ಆರ್ಥಿಕ ನಿರ್ಣಯ ಮತ್ತು ಠೇವಣಿ ವಿಮೆ ಮಸೂದೆ (ಎಫ್​ಆರ್​ ಡಿಐ)ಯ ಬೇಲ್ ಇನ್ ನಿಯಮ ಸಾಮಾನ್ಯ ಗ್ರಾಹಕರ ಪಾಲಿಗೆ ಕಂಟಕವಾಗುವ ಆತಂಕ ತಂದೊಡ್ಡಿದೆ ಎಂಬ ಆರೋಪ ವ್ಯಾಪಕವಾಗಿ ಕೇಳಿದೆ.

 

ಏನಿದು ಎಫ್ಆರ್ ಡಿ ಐ ಮಸೂದೆ ?

 

  • ಪ್ರಸ್ತಾವಿತ ಮಸೂದೆಯಲ್ಲಿರುವ ಬೇಲ್-ಇನ್ ನಿಯಮದ ಪ್ರಕಾರ, ದಿವಾಳಿಯಾಗಿರುವ ಬ್ಯಾಂಕ್​ಗಳು, ಸಾಮಾನ್ಯ ಜನರು ತಮ್ಮಲ್ಲಿ ಠೇವಣಿ ಇಟ್ಟಿರುವ ಹಣದ ಮರುಪಾವತಿಯಿಂದ ತಪ್ಪಿಸಿಕೊಳ್ಳಲು ನಿರ್ಣಯ ಮಂಡಳಿ ಅವಕಾಶ ಮಾಡಿಕೊಡಬಹುದಾಗಿದೆ.
  • ಇದರಿಂದಾಗಿ ಇತರೆ ಹಣಕಾಸು ಸಂಸ್ಥೆಗಳ ಮೇಲಾಗುವ ಪರಿಣಾಮವನ್ನು ಕಡಿಮೆ ಮಾಡಲು ಸಹಕರಿಸಬಹುದಾಗಿದೆ.
  • ಈ ಮಸೂದೆಯ ಪ್ರಕಾರ, ನಷ್ಟದಲ್ಲಿರುವ ಅಥವಾ ದಿವಾಳಿಯಾಗಿರುವ ಬ್ಯಾಂಕ್​ಗಳು, ಬ್ಯಾಂಕಿಂಗೇತರ ಸಂಸ್ಥೆಗಳು, ವಿಮಾ ಕಂಪನಿಗಳು ಮತ್ತು ಷೇರು ವಿನಿಮಯ ಕೇಂದ್ರಗಳು, ಬೇಲ್-ಇನ್ ನಿಯಮ ಬಳಸಿಕೊಂಡು ಪುನಶ್ಚೇತನಗೊಳ್ಳಲು ಯತ್ನಿಸಬಹುದಾಗಿದೆ.

 

ಬೇಲ್-ಇನ್ ನಿಯಮ ಎಂದರೇನು ?

 

  • ಈ ನಿಯಮವನ್ನು ಆಧರಿಸಿ, ದಿವಾಳಿಯಾಗಿರುವ ಬ್ಯಾಂಕ್​ಗಳು, ಬ್ಯಾಂಕೇತರ ಸಂಸ್ಥೆಗಳು, ವಿಮಾ ಕಂಪನಿಗಳು ನಷ್ಟದ ಹೊಣೆಗಾರಿಕೆಯನ್ನು ಜನರ ಮೇಲೆ ಹೊರಿಸಬಹುದು.
  • ಹಾಗೂ ನಷ್ಟದ ಸುಳಿಯಿಂದ ಪಾರಾಗಲು ಜನರ ಠೇವಣಿ ಮತ್ತು ಖಾತೆಯಲ್ಲಿರುವ ಹಣವನ್ನು ಬಳಸಿಕೊಳ್ಳಬಹುದು.

 

ಈ ಬಿಲ್ ನ  ಅಗತ್ಯತೆ ಏನು?

 

  • 2008 ರ ಆರ್ಥಿಕ ಬಿಕ್ಕಟ್ಟಿನ ನಂತರ ನಿರ್ದಿಷ್ಟ ನಿಯಂತ್ರಣದ ಅಗತ್ಯವು ಹೆಚ್ಚಾಯಿತು.
  • ಈ ಬಿಕ್ಕಟ್ಟು ಹೆಚ್ಚಿನ ಸಂಖ್ಯೆಯ ಉನ್ನತ-ಮಟ್ಟದ ದಿವಾಳಿತನಗಳನ್ನು ಎದುರಿಸಿತು.
  • ಕೇದ್ರ ಸರಕಾರ ಜನರು ಬ್ಯಾಂಕಿಂಗ್ ವಲಯ ಲ್ಲಿ ಹೆಚ್ಚು ತೊಡಗಿಸಿಕೊಳ್ಳಲು ಯೋಜನೆಗಳ (ಜನ್  ಧನ್  ಯೋಜನೆ ಮತ್ತು
  • ಅನಾಣ್ಯೀಕರಣ) ಮೂಲಕ ಸಕ್ರಿಯವಾಗಿ ಪ್ರೋತ್ಸಾಹಿಸುತ್ತಿದ್ದಾರೆ.
  • ಹೇಗೆ ಔಪಚಾರಿಕ ಆರ್ಥಿಕತೆಗೆ ಸೇರ್ಪಡೆಗೊಳ್ಳುವವರಿಗೆ ರಕ್ಷಿಸಲು ಬ್ಯಾಂಕ್ ಅಥವಾ ಇನ್ಶುರೆನ್ಸ್ ಸಂಸ್ಥೆಯು ವಿಫಲವಾದಲ್ಲಿ ಇದು  ಮುಖ್ಯವಾಗುತ್ತದೆ.
  • ದಿವಾಳಿಯಾದ ಬ್ಯಾಂಕ್​ಗಳು ತಮ್ಮ ಹೊಣೆಗಾರಿಕೆಯಿಂದ ಪಾರಾಗಲು ಜನರ ಠೇವಣಿ ಮತ್ತು ಖಾತೆಗಳಲ್ಲಿರುವ ಹಣವನ್ನು ಬಳಸಿಕೊಳ್ಳುತ್ತವೆ.
  • ಇದಕ್ಕೆ ಪ್ರತಿಯಾಗಿ ಅವು ಆಯಾ ಮೊತ್ತಕ್ಕೆ ಬಾಂಡ್ ಅಥವಾ ಷೇರುಗಳನ್ನು ಕೊಡುತ್ತವೆ. ನಿರ್ದಿಷ್ಟ ಅವಧಿಯ ಬಳಿಕವಷ್ಟೇ ಇವನ್ನು ನಗದೀಕರಿಸಿ ಕೊಳ್ಳಬಹುದು.
  • ಹೀಗಾಗಿ ತಕ್ಷಣವೇ ಹಣ ಸಿಗದಿದ್ದರೂ, ಒಂದಷ್ಟು ವರ್ಷಗಳ ಬಳಿಕ ಹಣ ಸಿಗುತ್ತದೆ ಎನ್ನಲಾಗುತ್ತಿದೆ.

 

ಬಿಲ್ ನಲ್ಲಿರುವ  ಕುಂದುಕೊರತೆಗಳು ಯಾವುವು?

 

  • ಸಾರ್ವಜನಿಕ ವಲಯದ ಬ್ಯಾಂಕ್ ಒಕ್ಕೂಟಗಳು ಬಿಲ್ ನಲ್ಲಿರುವ ಹಲವು ನಿಬಂಧನೆಗಳು ಠೇವಣಿದಾರರ ಹಿತಾಸಕ್ತಿಗಳಿಗೆ ವಿರುದ್ಧವಾಗಿವೆ ಎಂದು ವಾದಿಸುತ್ತಿದ್ದಾರೆ .
  • ಇದು ಬ್ಯಾಂಕುಗಳು ಮತ್ತು ಠೇವಣಿದಾರರ ನಡುವಿನ ಅಪನಂಬಿಕೆಯ ಪರಿಸರವನ್ನು ರಚಿಸುತ್ತದೆ.
  • ವಿಮಾ ಯೋಜನೆ ಅಡಿಯಲ್ಲಿ ಬರುವ ಠೇವಣಿಗಳನ್ನು ಪರಿಮಾಣಿಸಲು ಬಿಲ್ ವಿಫಲತೆಯು ಠೇವಣಿದಾರರಿಗೆ ಚಿಂತೆಗಳಿಗೆ ಕಾರಣವಾಗಿದೆ.

 

ಈ ಮಸೂದೆಯಲ್ಲಿ ಏನೇನಿದೆ ?

  • ಈ ಮಸೂದೆಯ ಸೆಕ್ಷನ್ 52 ಅನ್ವಯ ರಿಸೊಲ್ಯೂಶನ್ ಕಾರ್ಪೊರೇಶನ್ ಒಂದು ಲಕ್ಷದ ತನಕದ ಠೇವಣಿಗೂ ವಿಮಾ ಸೌಲಭ್ಯ ರದ್ದು ಪಡಿಸಬಹುದು.

 

  • ನಿಮ್ಮ ನಿರಖು ಠೇವಣಿಯ ಅವಧಿಯನ್ನು ನಿಮ್ಮ ಗಮನಕ್ಕೆ ತಾರದೆಯೇ ಹೆಚ್ಚಿಸಬಹುದು.

 

  • ಕೆಲವೊಂದು ಸಂದರ್ಭಗಳಲ್ಲಿ ಠೇವಣಿಗಳ ಮೇಲಿನ ಬಾಧ್ಯತೆಗಳು ಬ್ಯಾಂಕುಗಳಿಗೆ ಇಲ್ಲವಾಗಬಹುದು. ಆಗ ನೀವು ನಿಮ್ಮ ಎಲ್ಲಾ ಹಣ ಕಳೆದುಕೊಳ್ಳುತ್ತೀರಿ.

 

  • ಒಂದು ವೇಳೆ ಬ್ಯಾಂಕುಗಳು ನೀಡಿದ ದೊಡ್ಡ ಸಾಲದ ಮೊತ್ತ ಹಿಂದಕ್ಕೆ ಬರದೇ ಇದ್ದರೂ ಬ್ಯಾಂಕುಗಳು ಇಂತಹ ಕ್ರಮಕ್ಕೆ ಮೊರೆ ಹೋಗಬಹುದು.

 

  • ನಿಮ್ಮ ಅನುಮತಿಯಿಲ್ಲದೆಯೇ ಬ್ಯಾಂಕೊಂದು ನಿಮ್ಮ ಉಳಿತಾಯ ಖಾತೆಯನ್ನು ನಿರಖು ಖಾತೆಯನ್ನಾಗಿಸಬಹುದು ಹಾಗೂ ಕಡಿಮೆ ಬಡ್ಡಿ ನೀಡಬಹುದಲ್ಲದೆ ನೀವು ಅದನ್ನು ಪ್ರಶ್ನಿಸುವ ಹಾಗಿಲ್ಲ. ಪ್ರಶ್ನಿಸುವುದಿದ್ದರೆ ಕಾನೂನನ್ನೇ ಪ್ರಶ್ನಿಸಬೇಕಾದೀತು.

 

 

ಇದಕ್ಕೆ  ಸರ್ಕಾರದ ಪ್ರತಿಕ್ರಿಯೆ ಏನು?

  • ಉದ್ದೇಶಿತ ಮಸೂದೆಯಲ್ಲಿ ಠೇವಣಿದಾರರ ಹಕ್ಕುಗಳನ್ನು ರಕ್ಷಿಸಲಾಗುವುದು . ಅಲ್ಲದೆ, ಈಗಿರುವ ಕಾನೂನು ಅಂಶಗಳನ್ನು ಇನ್ನಷ್ಟು ಬಲಗೊಳಿಸಲಿದೆ ಮತ್ತು ಅದರಲ್ಲಿ ಯಾವುದೇ ದುರ್ಬಲ ಅಂಶಗಳಿರುವುದಿಲ್ಲ ಎಂದು ಅವರು ಹೇಳಿದ್ದಾರೆ.
  • ಸಾರ್ವಜನಿಕ ವಲಯದ ಬ್ಯಾಂಕ್ ಠೇವಣಿದಾರರ ಮೂಲ ಖಾತ್ರಿ ಕೇಂದ್ರ ಸರ್ಕಾರದ ಮಾಲೀಕತ್ವದ್ದಾಗಿರುತ್ತದೆ, ಅದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
Share