12th JULY MLP-MODEL ANSWERS

12th  JULY  MLP

 

 

NOTE:: ದಯವಿಟ್ಟು  ಗಮನಿಸಿ ಕೆಳಗಿನ ಉತ್ತರಗಳು‘  ‘ಮಾದರಿ ಉತ್ತರಗಳುಎಂಬುದನ್ನು ನೆನಪಿಡಿ. ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ PROPER SOURCE ಎಲ್ಲದೇ ಇರುವುದರಿಂದ  ನಾವು ಮುಖ್ಯ ಪರೀಕ್ಷೆಯಲ್ಲಿ ನೀವು ಯಾವ ರೀತಿರೆಯಬೇಕು ಮತ್ತು ನಿಮ್ಮ ಸಮಯವನ್ನು ಉಳಿಸಲು ಕೊಡುತ್ತಿರುವ  ವಿಸ್ತಾರವಾದ ಸಾರಾಂಶ, ನಾವುಗಳು ಇಲ್ಲಿ ಪದಗಳ ಮಿತಿ ಗಣನೆಗೆ ತೆಗೆದುಕೊಂಡಿಲ್ಲ ಏಕೆಂದರೆ ಒಂದು ಪ್ರಶ್ನೆಗೆ ಎಷ್ಟು ಸಾದ್ಯೋವೊ ಅಷ್ಟು ಇನ್ಫಾರ್ಮಶನ್ ಕೊಟ್ಟಿರುತ್ತೆವೆ. ನಾವು ಒದಗಿಸುತ್ತಿರುವ ವಿಷಯವು ಪ್ರಶ್ನೆಯ ಬೇಡಿಕೆಯನ್ನು ಪೂರೈಸುತ್ತದೆ ಮತ್ತು ಅದೇ ಸಮಯದಲ್ಲಿ ನಿಮಗೆ ಹಿನ್ನೆಲೆ ಮಾಹಿತಿ ರೂಪದಲ್ಲಿ ಹೆಚ್ಚುವರಿ ಅಂಕಗಳನ್ನು ಗಳಿಸಲು ಅನುಕೂಲಕರವಾಗುತ್ತದೆ.

 

CLICK HERE TO JOIN NIALP FOUNDATION COURSE-2019 

 

GENERAL STUDIES PAPER-1(ಸಾಮಾನ್ಯ ಅಧ್ಯಾಯ)

 

1.Examine why BR Ambedkar called Article 32 as the heart and soul of the constitution.

(ಡಾ.  ಬಿ. ಆರ್ ಅಂಬೇಡ್ಕರ್ ರವರು   ಸಂವಿಧಾನದ  32ನೇ ವಿಧಿಯನ್ನು  ಸಂವಿಧಾನದ ಹೃದಯ ಮತ್ತು ಆತ್ಮಎಂದು  ಏಕೆ ಕರೆದಿದ್ದಾರೆ ಎಂಬುದನ್ನು ಪರೀಕ್ಷಿಸಿ.)

(150 ಪದಗಳು)

 

ಸಂವಿಧಾನದ  32 ನೇ ವಿಧಿಯು    ವ್ಯಕ್ತಿಯು  ತನ್ನ ಮೂಲಭೂತ ಹಕ್ಕುಗಳಿಗೆ ಧಕ್ಕೆಯುಂಟಾದಾಗ ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗಿ ತನ್ನ ಹಕ್ಕುಗಳನ್ನು ರಕ್ಷಿಸಿಕೊಳ್ಳಲು ಅವಕಾಶ ನೀಡಲಾಗಿದೆ.

 

ಸಂವಿಧಾನದ  32 ರ ಅಡಿಯಲ್ಲಿ  ಸರ್ವೋಚ್ಚ ನ್ಯಾಯಾಲಯವು ಮೂಲಭೂತ ಹಕ್ಕುಗಳನ್ನು ರಕ್ಷಿಸಲು   ವಿಶೇಷ ಆಜ್ಞೆ (ರಿಟ್) ಗಳನ್ನು ಹೊರಡಿಸಬಹುದು.ಹಾಗು  ಸಂವಿಧಾನದ  226    ವಿಧಿ ಅಡಿಯಲ್ಲಿ  ಹೈಕೋರ್ಟ್ಗಳಿಗೆ ಅದೇ ಅಧಿಕಾರ ನೀಡಲಾಗಿದೆ.

 

ಸಂವಿಧಾನದ  32ನೇ ವಿಧಿಯನ್ನು  ಸಂವಿಧಾನದ ಹೃದಯ ಮತ್ತು ಆತ್ಮಎಂದು  ಕರೆಯಲು ಕಾರಣಗಳೆಂದರೆ

 

  • ಸಂವಿಧಾನದ 32ನೇ ವಿಧಿಯನ್ನು ಸುಪ್ರೀಂ ಕೋರ್ಟ್  ತನ್ನ  ಮೂಲ ರಚನಾ ಸಿದ್ಧಾಂತದಲ್ಲಿ ಸೇರಿಸಿದೆ. ಇದಲ್ಲದೆ, ಸಂವಿಧಾನದಿಂದ ನಿರ್ದಿಷ್ಟ ಪಡಿಸಲಾಗಿರುವ ನಿಯಮವನ್ನು ಹೊರತು   ಪಡಿಸಿ ಬೇರೆಯಾವರೀತಿಯಲ್ಲೂ  ಸುಪ್ರೀಂ ಕೋರ್ಟ್ ಗೆ   ಹೋಗುವ  ಹಕ್ಕನ್ನು  ರದ್ದುಪಡಿಸುವಂತಿಲ್ಲ  ಎಂದು ಸ್ಪಷ್ಟಪಡಿಸಲಾಗಿದೆ. ಈ ಹಕ್ಕನ್ನು  ಸಂವಿಧಾನ  359 ರ ಅಡಿಯಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ರಾಷ್ಟ್ರಾಧ್ಯಕ್ಷರು ರದ್ದುಪಡಿಸಬಹುದು.

 

  • ಈ ವಿಧಿಯು   ಸುಪ್ರೀಂ ಕೋರ್ಟ್ ಗೆ    ಮೂಲಭೂತ ಹಕ್ಕುಗಳನ್ನು ರಕ್ಷಿಸುವ ಕವಚ ಎಂದು ಸೂಚಿಸುತ್ತದೆ . ಇದಲ್ಲದೆ, ಸುಪ್ರೀಂ ಕೋರ್ಟ್ ಗೆ ತನ್ನ  ಮೂಲ ಅಧಿಕಾರ ವ್ಯಾಪ್ತಿಯಲ್ಲಿ ರಿಟ್ಸ್ ಗಳನ್ನು  ವಿತರಿಸುವ ಅಧಿಕಾರವನ್ನು ನೀಡುತ್ತದೆ   . ಅಂದರೆ ವ್ಯಕ್ತಿಯು ಬೇರೆ ಯಾವ ವಿಧಾನವನ್ನು ಅನುಸರಿಸದೆ ತನ್ನ ಮೂಲಭೂತ ಹಕ್ಕಿನ   ಪರಿಹಾರಕ್ಕಾಗಿ ನೇರವಾಗಿ ಸುಪ್ರೀಂ ಕೋರ್ಟ್ ಗೆ  ಪ್ರವೇಶಿಸಬಹುದು ಎಂದರ್ಥ.

 

  • 32 ನೆ ವಿಧಿಯು ಮೂಲಭೂತ ಹಕ್ಕುಗಳಿಗೆ ಸಂಬಂಧಿಸಿದ ಪರಿಹಾರೋಪಾಯವನ್ನು ಮಾತ್ರ ಪಡೆಯಬಹುದು ಎಂದು ಸೂಚಿಸುತ್ತದೆ  . ಇತರೆ ಸಾಂವಿಧಾನಿಕ ಅಥವಾ ಕಾನೂನುಬದ್ಧ ಹಕ್ಕುಗಳಿಗೆ ಸಂಬಂದಿಸಿದವುಗಳು ಇದರ ಅಡಿಯಲ್ಲಿ ಬರುವುದಿಲ್ಲ .

 

 

ಸಂವಿಧಾನದ  32 ನೆ ವಿಧಿಯ  ಪ್ರಭಾವವು  ವಿವಿಧ  ಹೆಗ್ಗುರುತು ಪ್ರಕರಣಗಳಲ್ಲಿ ಕಾಣಬಹುದು .ಅವುಗಳೆಂದರೆ   ಶ್ರೇಯ  ಸಿಂಘಾಲ್ ಮತ್ತು  ಯೂನಿಯನ್ ಆಫ್ ಇಂಡಿಯಾ  ಪ್ರಕರಣಗಳೊಂದಿಗೆ ಭಾರೀ ಪ್ರಭಾವ ಬೀರಿತು, ಅಲ್ಲಿ ಸರ್ವೋಚ್ಚ ನ್ಯಾಯಾಲಯವು ಮಾಹಿತಿ ತಂತ್ರಜ್ಞಾನ ಕಾಯಿದೆ, 2000 ರ ಸೆಕ್ಷನ್ 66 ಎ ಅನ್ನು ತಳ್ಳಿಹಾಕಿತು.  ಮೀರಾ ಸಂತೋಷ್ ಪಾಲ್  ಹಾಗು ಇತರರು  ಮತ್ತು  ಯೂನಿಯನ್ ಆಫ್ ಇಂಡಿಯಾ  ಪ್ರಕರಣದಲ್ಲಿ  ಸುಪ್ರೀಂ ಕೋರ್ಟ್  24 ವಾರಗಳ ಭ್ರೂಣದ ಗರ್ಭಧಾರಣೆಯ ವೈದ್ಯಕೀಯ ಮುಕ್ತಾಯ ದ ಬಗ್ಗೆ ತೀರ್ಪು ನೀಡಿತು .

 

 

GENERAL STUDIES PAPER-2(ಸಾಮಾನ್ಯ ಅಧ್ಯಾಯ2)

 

2.Creation of a body like Higher education Commission of India (HECI) is a welcome move in the path of reforming higher education in India. Discuss.

(ಭಾರತದ ಉನ್ನತ ಶಿಕ್ಷಣ ಆಯೋಗ (ಹೆಚ್ಇಸಿಐ)  ರಚನೆಯು ಭಾರತದಲ್ಲಿ ಉನ್ನತ ಶಿಕ್ಷಣವನ್ನು ಸುಧಾರಿಸುವ ಹಾದಿಯಲ್ಲಿ ಸ್ವಾಗತಾರ್ಹ ಕ್ರಮವಾಗಿದೆ ಎಂಬುದನ್ನು  ಚರ್ಚಿಸಿ.)

 (250 ಪದಗಳು)

 

ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ ತರುವ ಪ್ರಯತ್ನಕ್ಕೆ ಕೇಂದ್ರ ಸರಕಾರ ಮುಂದಾಗಿದೆ. ಉನ್ನತ ಶಿಕ್ಷಣ ವ್ಯವಸ್ಥೆಯ ಸುಧಾರಣೆಗಾಗಿ ಪ್ರೊ. ಯಶ್‌ಪಾಲ್‌ ಸಮಿತಿ ನೀಡಿದ್ದ ವರದಿಯ ಆಧಾರದ ಮೇಲೆ ವಿಶ್ವವಿದ್ಯಾಲಯ ಅನುದಾನ ಆಯೋಗವನ್ನು (ಯುಜಿಸಿ) ಮರುರಚಿಸಲು ಕೇಂದ್ರ ಸಿದ್ಧತೆ ನಡೆಸಿದೆ.

 

ಯುಜಿಸಿಗೆ ಬದಲಾಗಿ ಭಾರತೀಯ ಉನ್ನತ ಶಿಕ್ಷಣ ಆಯೋಗವನ್ನು (ಎಚ್‌ಇಸಿಐ) ಹಲವು ಬದಲಾವಣೆಗಳೊಂದಿಗೆ ರಚಿಸಲು ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಕರಡು ಸಿದ್ಧಪಡಿಸಿದೆ. ‘ವಿಶ್ವವಿದ್ಯಾಲಯ ಅನುದಾಯ ಆಯೋಗ ಕಾಯ್ದೆ- 1956’ಕ್ಕೆ ಬದಲಾಗಿ ‘ಭಾರತೀಯ ಉನ್ನತ ಶಿಕ್ಷಣ ಆಯೋಗ ಕಾಯ್ದೆ-2018’ ಅನ್ನು ಜಾರಿಗೆ ತರಲು ಇಲಾಖೆ ಮುಂದಾಗಿದೆ.

 

ಉನ್ನತ ಶಿಕ್ಷಣದ ಆಮೂಲಾಗ್ರ ಬದಲಾವಣೆಗಾಗಿ ಯುಜಿಸಿಯ ಮಾಜಿ ಅಧ್ಯಕ್ಷ ಪ್ರೊ. ಯಶ್‌ಪಾಲ್‌ ಅವರ ಅಧ್ಯಕ್ಷತೆಯಲ್ಲಿ 2008ರಲ್ಲಿ ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಸಮಿತಿಯೊಂದನ್ನು ನೇಮಿಸಿತ್ತು. 2009ರಲ್ಲಿ ತನ್ನ ವರದಿಯನ್ನು ಸಲ್ಲಿಸಿದ ಈ ಸಮಿತಿಯು ಉನ್ನತ ಶಿಕ್ಷಣ ವ್ಯವಸ್ಥೆಯ ಸುಧಾರಣೆಗಾಗಿ ಯುಜಿಸಿ ಮತ್ತು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ತಿನ (ಎಐಸಿಟಿಎ) ಬದಲಿಗೆ ಅಖಿಲ ಭಾರತ ಮಟ್ಟಕ್ಕೆ ಒಂದು ಉನ್ನತ ಶಿಕ್ಷಣ ಆಯೋಗವನ್ನು ರೂಪಿಸುವಂತೆ ಶಿಫಾರಸು ಮಾಡಿತ್ತು.

ಭಾರತದಲ್ಲಿರುವ ಬ್ರಿಟಿಷರ ಕಾಲದ ಶಿಕ್ಷಣ ವ್ಯವಸ್ಥೆಯನ್ನು ಮರುರೂಪಿಸುವ ಕೆಲಸ ಆಗಬೇಕು. ಅದಕ್ಕಾಗಿ ಹೊಸದಾಗಿ ಉನ್ನತ ಶಿಕ್ಷಣ ಆಯೋಗ ರಚಿಸಿ ಅದಕ್ಕೆ ಹೆಚ್ಚಿನ ಅಧಿಕಾರ ನೀಡಬೇಕು ಎಂದು ಯಶ್‌ಪಾಲ್‌ ಸಮಿತಿ ವರದಿ ಹೇಳಿತ್ತು. ಯುಜಿಸಿಯಲ್ಲಿ ಭ್ರಷ್ಟಾಚಾರ ತುಂಬಿದೆ, ವಿಶ್ವವಿದ್ಯಾಲಯಗಳಿಗೆ ಮಾನ್ಯತೆ ನೀಡುವುದಷ್ಟೇ ಯುಜಿಸಿ ಕೆಲಸವಾಗಿದೆ ಎಂದು ಸಮಿತಿ ತಿಳಿಸಿತ್ತು.

 

ಉನ್ನತ ಶಿಕ್ಷಣ ಸಂಸ್ಥೆಗಳ ವ್ಯವಸ್ಥೆಯ ಸುಧಾರಣೆಯ ಜತೆಗೆ ಪಠ್ಯಕ್ರಮ ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ನಡೆಯಬೇಕಾದ ಸಂಶೋಧನೆ ಗುಣಮಟ್ಟದ ಬಗ್ಗೆ ಯಶ್‌ಪಾಲ್‌ ವರದಿ ಹೆಚ್ಚು ಒತ್ತು ನೀಡಿತ್ತು. ವಿಶ್ವವಿದ್ಯಾಲಯಗಳು ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳು ಪದವಿಗಳನ್ನು ನೀಡುವ ಕಟ್ಟಡಗಳಾಗಿ ಉಳಿಯುವ ಬದಲು ಅವುಗಳಲ್ಲಿ ನಡೆಯುವ ಸಂಶೋಧನೆ ಸಮಾಜದ ಉಪಯೋಗಕ್ಕೆ ಬರುವಂತಿರಬೇಕು ಎಂದು ವರದಿ ಶಿಫಾರಸು ಮಾಡಿತ್ತು.

 

ಭಾರತದಲ್ಲಿ ಉನ್ನತ ಶಿಕ್ಷಣವನ್ನು ಸುಧಾರಿಸುವ ಹಾದಿ  ಸ್ವಾಗತಾರ್ಹ ಕ್ರಮವಾಗಿದೆ ಏಕೆಂದರೆ

 

  • ಈ ಎಲ್ಲಾ ಶಿಫಾರಸುಗಳೊಂದಿಗೆ ಯುಜಿಸಿ ಮತ್ತು ಎಐಸಿಟಿಎ ಬದಲಿಗೆ ಉನ್ನತ ಶಿಕ್ಷಣ ಆಯೋಗ ರಚಿಸಬೇಕೆಂದು ಯಶ್‌ಪಾಲ್‌ ವರದಿ ಹೇಳಿತ್ತು. ಯುಜಿಸಿ ಈವರೆಗೆ ದೇಶದಲ್ಲಿರುವ ವಿಶ್ವವಿದ್ಯಾಲಯಗಳಿಗೆ ಮಾನ್ಯತೆ ನೀಡುವ ಹಾಗೂ ಅನುದಾನ ನೀಡುವ ಕೆಲಸವನ್ನು ಮಾಡಿಕೊಂಡು ಬಂದಿದ್ದರೆ, ಎಐಸಿಟಿಎ ತಾಂತ್ರಿಕ ಶಿಕ್ಷಣ ಸಂಸ್ಥೆಗಳಿಗೆ ಮಾನ್ಯತೆ ನೀಡುವ ಕೆಲಸ ಮಾಡುತ್ತಿದೆ. ಇನ್ನು ಮುಂದೆ ಈ ಕೆಲಸವನ್ನು ಉನ್ನತ ಶಿಕ್ಷಣ ಆಯೋಗ ಮಾಡಲಿದೆ.

 

  • ಉನ್ನತ ಶಿಕ್ಷಣ ಆಯೋಗ ಶಿಕ್ಷಣದ ಸುಧಾರಣೆಗೆ ಹಾಗೂ ಶಿಕ್ಷಣ ಸಂಸ್ಥೆಗಳ ಮೇಲೆ ನಿಗಾ ಇಡುವುದಕ್ಕೆ ಗಮನ ಕೊಡಲಿದೆಯೇ ಹೊರತು ಅನಗತ್ಯವಾಗಿ ಶಿಕ್ಷಣ ಸಂಸ್ಥೆಗಳ ಮೇಲೆ ನಿಯಂತ್ರಣ ಹೇರುವುದಿಲ್ಲ ಎಂದು ಪ್ರಸ್ತಾವಿತ ಕರಡು ಹೇಳುತ್ತದೆ. ಗುಣಮಟ್ಟ ಹಾಗೂ ವಿದ್ಯಾರ್ಥಿಗಳ ಹಿತ ಕಾಯದ ಶಿಕ್ಷಣ ಸಂಸ್ಥೆಗಳಿಗೆ ದಂಡ ವಿಧಿಸುವ ಹಾಗೂ ಅವುಗಳ ಮಾನ್ಯತೆ ರದ್ದುಗೊಳಿಸುವ ಅಧಿಕಾರ ಈ ಆಯೋಗಕ್ಕೆ ಇರಲಿದೆ.

 

 

  • ಹೊಸ ಆಯೋಗ ಶಿಕ್ಷಣ ಸಂಸ್ಥೆಗಳ ಗುಣಮಟ್ಟದ ಮೇಲ್ವಿಚಾರಣೆ ನಡೆಸುತ್ತದೆಯೇ ಹೊರತು ಈ ಹಿಂದೆ ಇದ್ದ ಇನ್‌ಸ್ಪೆಕ್ಷನ್‌ ರಾಜ್‌ (ಪರಿವೀಕ್ಷಣೆ) ವ್ಯವಸ್ಥೆಯನ್ನು ಮುಂದುವರಿಸುವುದಿಲ್ಲ . ಇನ್‌ಸ್ಪೆಕ್ಷನ್‌ ರಾಜ್‌ ವ್ಯವಸ್ಥೆಗೆ ಅಂತ್ಯ ಹಾಡುವುದರಿಂದ ಸರಕಾರಿ ಹಾಗೂ ಸ್ವಾಯತ್ತ ವಿಶ್ವವಿದ್ಯಾಲಯಗಳ ಆಡಳಿತದಲ್ಲಿ ಸರಕಾರದ ಹಸ್ತಕ್ಷೇಪ ಇರುವುದಿಲ್ಲ ಎನ್ನಲಾಗಿದೆ.

 

  • ಶಿಕ್ಷಣ ಸಂಸ್ಥೆಗಳಿಗೆ ಅಗತ್ಯವಾದ ಅನುದಾನ ಹಾಗೂ ಸೌಲಭ್ಯಗಳನ್ನು ಸರಕಾರ ಒದಗಿಸುತ್ತದೆ. ಅದರೆ ಅನಗತ್ಯವಾಗಿ ಶಿಕ್ಷಣ ಸಂಸ್ಥೆಗಳ ಆಡಳಿತದಲ್ಲಿ ಸರಕಾರ ಮೂಗು ತೂರಿಸುವುದಿಲ್ಲ .

 

ಭಾರತದಲ್ಲಿ  ಉನ್ನತ ಶಿಕ್ಷಣದ  ಸುಧಾರಣೆಗಳನ್ನು ತಕ್ಷಣವೇ ಜಾರಿಗೆ ಬರುವ  ಅಗತ್ಯವಿದೆ .  ದಶಕಗಳ ಬಳಿಕ ಶಿಕ್ಷಣ ವ್ಯವಸ್ಥೆಯ ಸುಧಾರಣೆಯ ಪ್ರಯತ್ನಕ್ಕೆ ಕೇಂದ್ರ ಸರಕಾರ ಮುಂದಾಗಿದೆ. ಯುಜಿಸಿ ಮತ್ತು ಎಐಸಿಟಿಎ ಸಂಸ್ಥೆಗಳಲ್ಲಿ ಈಗಿರುವ ಸಿಬ್ಬಂದಿಯನ್ನು ಹೊರಗಿಟ್ಟೇ ಹೊಸ ಆಯೋಗವನ್ನು ಕಟ್ಟಬೇಕಿದೆ. ಇಲ್ಲವಾದರೆ ಸಂಸ್ಥೆಯ ಬೋರ್ಡ್‌ ಮತ್ತು ಕಟ್ಟಡ ಬದಲಾಗಬಹುದೇ ಹೊರತು ವ್ಯವಸ್ಥೆ ಹಿಂದಿನಂತೆಯೇ ಮುಂದುವರಿಯುತ್ತದೆ.

 

 

GENERAL STUDIES PAPER-3(ಸಾಮಾನ್ಯ ಅಧ್ಯಾಯ3)

 

3.Recently  Cash deficit faced across all the ATMs of country.what is the opinion of  government  regarding to it ? Elections, decline in the use of digital payment systems can also be  reasons to cash deficit? Examine

(ಇತ್ತೀಚಿಗೆ ರಾಷ್ಟ್ರ್ಯ ದಂತ  ಕಂಡು ಬಂದ ನಗದು  ಕೊರತೆಗೆ ಸರ್ಕಾರ ನೀಡುತ್ತಿರುವ ಕಾರಣ ಏನು?ಚುನಾವಣೆ, ಡಿಜಿಟಲ್‌ ಪಾವತಿ ವ್ಯವಸ್ಥೆಗಳ ಬಳಕೆಯಲ್ಲಿ ಕುಸಿತ ಕೂಡ ನಗದು ಕೊರತೆಗೆ ಕಾರಣ ಆಗಿರಬಹುದೇ? ಪರೀಕ್ಷಿಸಿ)

(200 ಪದಗಳು)

 

1,000 ಮತ್ತು  500 ಮುಖಬೆಲೆಯ ನೋಟುಗಳ ಚಲಾವಣೆಯನ್ನು ಕೇಂದ್ರ ಸರ್ಕಾರ 2016ರ ನವೆಂಬರ್‌ 8ರಂದು ರದ್ದು ಮಾಡಿದ ನಂತರ ದೇಶದ ಎಟಿಎಂಗಳ ಮುಂದೆ ಕೆಲವು ದಿನಗಳವರೆಗೆ ‘ನೋ ಕ್ಯಾಷ್’ (ನಗದು ಇಲ್ಲ) ಫಲಕ ಕಾಣಿಸಿದ್ದು ವಿಶೇಷವೇನೂ ಆಗಿರಲಿಲ್ಲ. ನೋಟು ರದ್ದತಿ ಎನ್ನುವುದು ಇಂದಿನ ತಲೆಮಾರಿಗೆ ಸಂಪೂರ್ಣ ಹೊಸದಾಗಿತ್ತು. ಹಾಗೆಯೇ ಎಟಿಎಂ ಘಟಕಗಳ ಎದುರು ಉದ್ದನೆಯ ಸಾಲುಗಳನ್ನು ಕಾಣುವುದೂ ಆ ಸಂದರ್ಭದಲ್ಲಿ ವಿಶೇಷವೇ ಆಗಿತ್ತು. ಆರಂಭದಲ್ಲಿ ವಿಶೇಷ ಆಗಿದ್ದ ಈ ಚಿತ್ರಣ, ಕೆಲವು ದಿನಗಳ ನಂತರ ಸಹಜ ಎಂಬಂತೆ ಆಯಿತು. ನಂತರ, ಸ್ಮೃತಿಪಟಲದಿಂದ ತುಸು ಹಿಂದಕ್ಕೆ ಸರಿಯಿತು.

 

ಆದರೆ  ಇತ್ತೀಚಿಗೆ  ದೇಶದ ಹಲವು ರಾಜ್ಯಗಳಲ್ಲಿ ಕಂಡುಬಂದ ನಗದು ಕೊರತೆ, ನೋಟು ರದ್ದತಿಯ ನಂತರದ ದಿನಗಳನ್ನು ಪುನಃ ನೆನಪಿಸಿತು. ಎಟಿಎಂಗಳಲ್ಲಿ ನಗದು ಸಿಗದೆ ಜನ ತೊಂದರೆ ಅನುಭವಿಸಿದರು, ವಿರೋಧ ಪಕ್ಷಗಳು ಸರ್ಕಾರವನ್ನು ಮಾತಿನಿಂದ ತಿವಿದವು. ಆದರೆ, ನೋಟು ರದ್ದತಿ ನಂತರ ಎದುರಾದ ಸಮಸ್ಯೆಗೂ, ಈಗ ಎದುರಾಗಿರುವ ಸಮಸ್ಯೆಗೂ ಒಂದು ವ್ಯತ್ಯಾಸ ಇದೆ. ನೋಟು ರದ್ದತಿ ನಂತರ, ಬ್ಯಾಂಕ್‌ಗಳಲ್ಲಿ ಕೂಡ ಕೇಳಿದಷ್ಟು ನಗದು ಸಿಗುತ್ತಿರಲಿಲ್ಲ. ಈಗ, ನಗದು ಸಿಗುತ್ತಿಲ್ಲದಿರುವುದು ಎಟಿಎಂ ಕೇಂದ್ರಗಳಲ್ಲಿ. ಬ್ಯಾಂಕ್‌ ಶಾಖೆಗಳಲ್ಲಿ ನಗದು ಕೊಡುತ್ತಿಲ್ಲ ಎಂಬ ದೂರುಗಳು ವರದಿಯಾಗಿಲ್ಲ.

 

ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಮಧ್ಯಪ್ರದೇಶ, ಉತ್ತರಪ್ರದೇಶ, ರಾಜಸ್ಥಾನ, ಆಂಧ್ರಪ್ರದೇಶ ರಾಜ್ಯಗಳಲ್ಲಿ ಎಟಿಎಂಗಳಲ್ಲಿ ನಗದು ಸಿಗುತ್ತಿಲ್ಲ ಎಂಬ ದೂರುಗಳು ವರದಿಯಾಗಿವೆ.

 

ಈ ಕೊರತೆಗೆ ಸರ್ಕಾರ ನೀಡುತ್ತಿರುವ ಕಾರಣ 

 

  • ‘ಅಗತ್ಯಕ್ಕಿಂತ ಹೆಚ್ಚು ನಗದು ಚಲಾವಣೆಯಲ್ಲಿ ಇದೆ. ಬ್ಯಾಂಕ್‌ಗಳಲ್ಲಿಯೂ ನಗದು ಲಭ್ಯವಿದೆ. ನೋಟುಗಳ ಬೇಡಿಕೆ ಕೆಲವು ಭಾಗಗಳಲ್ಲಿ ದಿಢೀರನೆ ಹಾಗೂ ಅಸಹಜವೆಂಬಂತೆ ಹೆಚ್ಚಾಗಿದೆ. ಈ ಪರಿಸ್ಥಿತಿಯನ್ನು ಸೂಕ್ತವಾಗಿ ನಿಭಾಯಿಸಲಾಗುತ್ತಿದೆ’ ಎಂದು ಕೇಂದ್ರ ಹಣಕಾಸು ಸಚಿವರು ತಿಳಿಸಿದರು . ಆದರೆ, ಹಠಾತ್ತಾಗಿ, ಅಸಹಜವಾಗಿ ಎಂದು ಹೇಳುವ ಬಗೆಯಲ್ಲಿ ನಗದು ಬೇಡಿಕೆಯ ಹೆಚ್ಚಳ ಆಗಿದ್ದು ಏಕೆ ಎಂಬುದನ್ನು ಅವರು ತಿಳಿಸಿಲ್ಲ.
  • ಗರಿಷ್ಠ ಮುಖಬೆಲೆಯ ನೋಟುಗಳ ಚಲಾವಣೆ ರದ್ದು ಮಾಡಿದ ಸಂದರ್ಭದಲ್ಲಿ ದೇಶದಲ್ಲಿ ಚಲಾವಣೆಯಲ್ಲಿ (ಸಾರ್ವಜನಿಕರ ಬಳಿ ಮತ್ತು ಬ್ಯಾಂಕ್‌ಗಳ ಬಳಿ) ಇದ್ದ ನಗದಿನ ಮೊತ್ತ 97 ಲಕ್ಷ ಕೋಟಿ. ನೋಟು ರದ್ದು ಕ್ರಮ ಕೈಗೊಂಡು ಈಗಾಗಲೇ ಒಂದು ವರ್ಷ ಐದು ತಿಂಗಳು ಸಂದಿವೆ. ಈ ವರ್ಷದ ಏಪ್ರಿಲ್‌ ಮೊದಲ ವಾರದಲ್ಲಿ ಚಲಾವಣೆಯಲ್ಲಿದ್ದ ನಗದಿನ ಮೊತ್ತ   18.42 ಲಕ್ಷ ಕೋಟಿ. ಅಂದರೆ, ನೋಟು ರದ್ದತಿ ನಂತರದ ಅವಧಿಯಲ್ಲಿ ಚಲಾವಣೆಯಲ್ಲಿರುವ ನಗದಿನ ಮೊತ್ತದಲ್ಲಿ ಆಗಿರುವ ಹೆಚ್ಚಳ ಶೇಕಡ 2.5ರಷ್ಟು. ಇದೇ ಅವಧಿಯಲ್ಲಿ ದೇಶದ ತ್ರೈಮಾಸಿಕ ಜಿಡಿಪಿ ಬೆಳವಣಿಗೆ ದರದ ಪ್ರಮಾಣ ಶೇಕಡ 5.7ರಷ್ಟಕ್ಕಿಂತ ಹೆಚ್ಚೇ ಇದೆ. ಚಲಾವಣೆಯಲ್ಲಿರುವ ನೋಟುಗಳ ಹೆಚ್ಚಳವು, ಜಿಡಿಪಿ ಬೆಳವಣಿಗೆ ದರಕ್ಕೆ ಸಮನಾಗಿ ಇಲ್ಲದಿರುವುದು ಕೂಡ ನಗದು ಕೊರತೆಗೆ ಒಂದು ಕಾರಣ ಆಗಿದ್ದಿರಬಹುದು .

 

ದೇಶದಲ್ಲಿ ನಗದು ಕೊರತೆ ಇಲ್ಲ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಹಾಗೂ ಕೇಂದ್ರ ಹಣಕಾಸು ಸಚಿವಾಲಯ ಹೇಳಿದ್ದರೂ, ಭಾರತೀಯ ಸ್ಟೇಟ್‌ ಬ್ಯಾಂಕ್‌ ಸಿದ್ಧಪಡಿಸಿರುವ ವರದಿ, ನಗದು ಕೊರತೆ ಇರುವುದನ್ನು ತೋರಿಸುತ್ತಿದೆ. ಜಿಡಿಪಿ ಬೆಳವಣಿಗೆ ದರ, ಇದಕ್ಕೆ ಪೂರಕವಾಗಿ ಚಲಾವಣೆಯಲ್ಲಿ ಇರಬೇಕಾದ ನೋಟುಗಳ ಮೌಲ್ಯವನ್ನು ಲೆಕ್ಕಹಾಕಿ ದೇಶದಲ್ಲಿನ ನೋಟುಗಳ ಕೊರತೆಯು   70 ಸಾವಿರ ಕೋಟಿ ಆಗಿರಬಹುದು ಎಂದು ಎಸ್‌ಬಿಐ ಅಂದಾಜಿಸಿದೆ. ಈ ಮೊತ್ತವು ದೇಶದಲ್ಲಿ ಒಂದು ತಿಂಗಳಲ್ಲಿ ಎಟಿಎಂಗಳ ಮೂಲಕ ನಗದು ಪಡೆಯುವ ಒಟ್ಟು ಮೊತ್ತದ ಮೂರನೆಯ ಒಂದು ಭಾಗಕ್ಕೆ ಸಮ ಎನ್ನಲಾಗಿದೆ.

 

ಹೊಸದಾಗಿ ಮುದ್ರಿಸಿರುವ   200 ಮುಖಬೆಲೆಯ ನೋಟುಗಳನ್ನು ವಿತರಿಸಲು ಎಲ್ಲ ಎಟಿಎಂಗಳಲ್ಲಿ ಸೂಕ್ತ ಮಾರ್ಪಾಡು ಮಾಡಿಲ್ಲದಿರುವುದು ಕೂಡ ನಗದು ಲಭ್ಯತೆಯ ಮೇಲೆ ಪರಿಣಾಮ ಬೀರಿದೆ .

 

ಕರ್ನಾಟಕ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ನಗದು ಹಣದ ಬಳಕೆ ಹೆಚ್ಚಿರುತ್ತದೆ, ಆ ಕಾರಣದಿಂದಾಗಿ ಕರ್ನಾಟಕದಲ್ಲಿ ಹಾಗೂ ಕರ್ನಾಟಕದ ನೆರೆಯ ರಾಜ್ಯಗಳ ಎಟಿಎಂಗಳಲ್ಲಿ ನಗದು ಕೊರತೆ ಕಂಡುಬಂದಿರಬಹುದು ಎಂಬ ವಾದ ಕೂಡ ಇದೆ. ಆದರೆ, ಈ ವಾದವನ್ನು ಪುಷ್ಟೀಕರಿಸುವಂತಹ ಅಂಕಿ–ಅಂಶಗಳು ಇಲ್ಲ. ಅಲ್ಲದೆ, ದೂರದ ಬಿಹಾರ, ರಾಜಸ್ಥಾನ ರಾಜ್ಯಗಳಲ್ಲಿ ಏಕೆ ನಗದು ಕೊರತೆ ಸೃಷ್ಟಿಯಾಗಿದೆ ಎಂಬ ಪ್ರಶ್ನೆಗೆ ಈ ವಾದ ಸಮರ್ಪಕ ಉತ್ತರ ನೀಡಲಾರದು.

 

ನೋಟು ರದ್ದತಿ ನಂತರ, ಅಂದರೆ 2017ರ ಮಾರ್ಚ್‌ನಲ್ಲಿ, ಒಟ್ಟು  149.6 ಲಕ್ಷ ಕೋಟಿ ಮೊತ್ತದ ಡಿಜಿಟಲ್‌ ವಹಿವಾಟಿಗೆ ದೇಶ ಸಾಕ್ಷಿಯಾಗಿತ್ತು. ಆದರೆ ಡಿಜಿಟಲ್‌ ಪಾವತಿ ವ್ಯವಸ್ಥೆಗಳ ಮೂಲಕ ನಡೆದ ವಹಿವಾಟಿನ ಮೊತ್ತ ಈ ವರ್ಷದ ಫೆಬ್ರುವರಿ ತಿಂಗಳಲ್ಲಿ   115.5 ಲಕ್ಷ ಕೋಟಿಗೆ ಕುಸಿದಿದೆ. ಡಿಜಿಟಲ್‌ ಪಾವತಿಗಳ ಮೊತ್ತ ಕುಸಿದಿರುವುದು, ಭಾರತದ ಜನ ನಗದು ಹಣದ ಮೇಲೆ ಮತ್ತೆ ಹೆಚ್ಚು ಅವಲಂಬಿತರಾಗಿರುವುದನ್ನು ಸೂಚಿಸುತ್ತಿರಬಹುದು. ಇದು ಕೂಡ ನಗದು ಕೊರತೆಗೆ ಒಂದು ಕಾರಣ ಆಗಿರಬಹುದು.

 

 

ದೇಶದ ವಾರ್ಷಿಕ ನಗದು ಬೇಡಿಕೆ ಬಗ್ಗೆ ನಿರ್ಧಾರ ಕೈಗೊಳ್ಳಲು ಆರ್‌ಬಿಐ ಅಧಿಕಾರಿಗಳು ವರ್ಷಕ್ಕೊಮ್ಮೆ ಸಭೆ ಸೇರುತ್ತಾರೆ. ಆ ಹಂತದಲ್ಲಿ (ಸಭೆ ನಡೆಯುವ ಸಂದರ್ಭದಲ್ಲಿ) ಚಲಾವಣೆಯಲ್ಲಿರುವ ನೋಟುಗಳು, ನಾಶಪಡಿಸಿದ ನೋಟುಗಳು, ಡಿಜಿಟಲ್‌ ಪಾವತಿ ವ್ಯವಸ್ಥೆ ಮೂಲಕ ನಡೆಯುವ ವಹಿವಾಟುಗಳ ಮೊತ್ತ, ಹಣದುಬ್ಬರ ಹೆಚ್ಚಳದ ಅಂದಾಜು ಪ್ರಮಾಣ, ಜಿಡಿಪಿ ಬೆಳವಣಿಗೆ ದರದ ಅಂದಾಜು ಪ್ರಮಾಣಗಳನ್ನು ಗಮನದಲ್ಲಿ ಇರಿಸಿಕೊಂಡು ದೇಶಕ್ಕೆ ಎಷ್ಟು ಹೊಸ ನೋಟುಗಳು ಬೇಕು, ಅವುಗಳ ಮೌಲ್ಯ ಎಷ್ಟಿರಬೇಕು ಎಂಬುದನ್ನು ಆರ್‌ಬಿಐ ತೀರ್ಮಾನಿಸುತ್ತದೆ.

 

CLICK HERE TO JOIN NIALP FOUNDATION COURSE-2019 

Share