16th JULY.-DAILY CURRENT AFFAIRS BRIEF

16th JULY

 

CLICK HERE TO JOIN NIALP FOUNDATION COURSE-2019

 

1.ರಾಜ್ಯಸಭೆಗೆ ನಾಲ್ಕು ಸದಸ್ಯರ ನಾಮಕರಣ

 

ವಿದ್ಯಾರ್ಥಿಗಳ ಗಮನಕ್ಕೆ

 

ಪ್ರಿಲಿಮ್ಸ್ ಪರೀಕ್ಷೆಗಾಗಿ ಸಂವಿಧಾನದ 80 ನೇ ವಿಧಿ ಬಗ್ಗೆ , ರಾಜ್ಯಸಭೆಗೆ ನಾಮನಿರ್ದೇಶನ ಪ್ರಕ್ರಿಯೆ,ಅವರ  ಅಧಿಕಾರ ಮತ್ತು ನಾಮನಿರ್ದೇಶಿತ ಸದಸ್ಯರ ಸವಲತ್ತುಗಳು.

 ಮುಖ್ಯ ಪರೀಕ್ಷೆಗಾಗಿ ನಾಮನಿರ್ದೇಶನ ತತ್ವದ  ಹಿಂದಿನ ತಾರ್ಕಿಕತೆಯೇನು ?

 

ಪ್ರಮುಖ ಸುದ್ದಿ

  • ರಾಷ್ಟ್ರಪತಿ ರಾಮನಾಥ್​ ಕೋವಿಂದ್​​​ ರವರು ವಿವಿಧ ಕ್ಷೇತ್ರದ ನಾಲ್ವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದ್ದಾರೆ. ಮಾಜಿ ಸಂಸದ, ಉತ್ತರ ಪ್ರದೇಶದ ರಾಮ್​ ಶಕಲ್​​​​​​,   ರಾಕೇಶ್​ ಸಿನ್ಹಾ, ನೃತ್ಯಗಾರ್ತಿ ಸೋನಾಲ್​ ಮಾನ್​ಸಿಂಗ್​​ ಮತ್ತು ಶಿಲ್ಪಿ ರಘುನಾಥ್​​ ಮಹಾಪಾತ್ರಾರನ್ನು ಪ್ರಧಾನಿ ಕಚೇರಿಯ ಶಿಫಾರಸ್ಸಿನ ಮೇರೆಗೆ ಕೋವಿಂದ್​ ನೇಮಕ ಮಾಡಿದ್ದಾರೆ.
  • ಸದ್ಯ ರಾಜ್ಯಸಭೆಯ 8 ನಾಮಾಂಕಿತ ಸದಸ್ಯರಲ್ಲಿ 4 ಜನರಿಂದ ತೆರವಾದ ಸ್ಥಾನಕ್ಕೆ ಈ ನೇಮಕಾತಿಯನ್ನು ಮಾಡಲಾಗಿದೆ. ಸಂವಿಧಾನದ ವಿಧಿ 80 ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 12 ಜನರನ್ನು ರಾಜ್ಯಸಭೆಗೆ ನೇಮಕ ಮಾಡುವ ಅಧಿಕಾರವನ್ನು ರಾಷ್ಟ್ರಪತಿಗಳಿಗೆ ನೀಡುತ್ತದೆ.

 

ಮುಖ್ಯ ಅಂಶಗಳು

BACK TO BASICS

 

  • ರಾಜ್ಯಸಭೆ ಭಾರತದ ಶಾಸಕಾಂಗ ವ್ಯವಸ್ಥೆಯ ಮೇಲ್ಮನೆ. ಈ ಸದನದ ಒಟ್ಟು ಸದಸ್ಯರ ಸಂಖ್ಯೆ ೨೫೦, ಅದರಲ್ಲಿ ೧೨ ಜನರನ್ನು ಭಾರತದ ಅಧ್ಯಕ್ಷರು ನಾಮಕರಣ ಮಾಡುತ್ತಾರೆ. ಈ ೧೨ ಜನರನ್ನು ವಿವಿಧ ಕ್ಷೇತ್ರಗಳಲ್ಲಿ(ಕಲೆ, ಸಾಹಿತ್ಯ, ಕ್ರೀಡೆ, ಪತ್ರಿಕೋದ್ಯಮ, ಸಮಾಜ ಸೇವೆ, ಸಲ್ಲಿಸಿರುವ ಸೇವೆಯನ್ನು ಗುರುತಿಸಿ, ಅವರನ್ನು ರಾಜ್ಯಸಭೆಯ ಸದಸ್ಯರನ್ನಾಗಿ ನಾಮಕರಣ ಮಾಡಲಾಗುತ್ತದೆ. ಇವರನ್ನು ನಾಮಕರಣ ಸದಸ್ಯರೆಂದು ಕರೆಯಲಾಗುತ್ತದೆ.
  • ಇನ್ನುಳಿದ ಸದಸ್ಯರನ್ನು ರಾಜ್ಯ ವಿಧಾನಸಭೆ ಮತ್ತು ವಿಧಾನಪರಿಷತ್ತುಗಳಿಂದ ಆಯ್ಕೆ ಮಾಡಲಾಗುತ್ತದೆ. ರಾಜ್ಯ ಸಭೆಯ ಸದಸ್ಯರ ಅವಧಿ ೬ ವರ್ಷ. ಇದರಲ್ಲಿ ರಾಜ್ಯಸಭೆಯ ೧/೩ರಷ್ಟು ಸದಸ್ಯರು ೨ ವರ್ಷಗಳಿಗೊಮ್ಮೆ ನಿವೃತ್ತಿ ಹೊಂದುತ್ತಾರೆ.
  • ರಾಜ್ಯಸಭೆಯು ಸತತವಾಗಿ ಸೇರುವ ಸದನವಾಗಿದ್ದು, ಲೋಕಸಭೆಯ ಹಾಗೇ ಇದರ ಸೇವಾವಧಿಯು ಅನೂರ್ಜಿತವಾಗುವುದಿಲ್ಲ.
  • ರಾಜ್ಯಸಭೆಯು ಲೋಕಸಭೆಯ ಹಾಗೆಯೇ ಸಮನಾದ ಅಧಿಕಾರವನ್ನು ಹೊಂದಿರುತ್ತದೆ, ಕೆಲವು ವಿಷಯಗಳಲ್ಲಿ ಲೋಕಸಭೆ ರಾಜ್ಯಸಭೆಯ ನಿರ್ಣಯವನ್ನು ತಿರಸ್ಕರಿಸಬಹುದು. ಕೆಲವು ವಿಷಯಗಳು ಇತ್ಯರ್ಥವಾಗದ ಪಕ್ಷದಲ್ಲಿ ಜಂಟಿ ಸದನಗಳ ಬೈಠಕ್ ಕರೆಯಲಾಗುತ್ತದೆ.
  • ಭಾರತದ ಉಪಾಧ್ಯಕ್ಷರು ರಾಜ್ಯಸಭೆಯ ಸಭಾಧ್ಯಕ್ಷರು(ಸದ್ಯ, ಎಂ.ವೆಂಕಯ್ಯ ನಾಯ್ಡು).
  • ರಾಜ್ಯಸಭೆಯ ಉಪಸಭಾಧ್ಯಕ್ಷರನ್ನು ಚುನಾವಣೆಯ ಮೂಲಕ ಭಾರತದ ಸಂಸತ್ ನ ಲೋಕಸಭೆ ಹಾಗೂ ರಾಜ್ಯಸಭೆಯ ಸದಸ್ಯರು ಆರಿಸುತ್ತಾರೆ. ಮೇ ೧೩, ೧೯೫೨ರಂದು ರಾಜ್ಯಸಭೆಯ ಮೊದಲ ಅಧಿವೇಶನವು ನಡೆಯಿತು.

 

ಅಧಿಕಾರ  ಅವಧಿ :

 

  • ರಾಜ್ಯಸಭೆಯು ಖಾಯಂ ಸದನವಾಗಿದ್ದು, ಲೋಕಸಭೆಯಂತೆ ವಿಸರ್ಜಿಸಲಾಗದು, ಲೋಕಸಭೆಯಲ್ಲಿ ಸದಸ್ಯರ ಅಧಿಕಾರ ಅವಧಿ 6 ವರ್ಷಗಳಾಗಿರುತ್ತದೆ, ಪ್ರತಿ 2 ವರ್ಷಕೊಮ್ಮೆ ಮೂರನೇಯ ಒಂದು ಭಾಗದಷ್ಟು ಸದಸ್ಯರು ನಿವೃತ್ತರಾಗುತ್ತಾರೆ, ಸದಸ್ಯರು ತಮ್ಮ ಸ್ಥಾನದಲ್ಲಿ ಮುಂದುವರಿಯಲು ಇಷ್ಟವಿಲ್ಲದಿದ್ದರೆ ಸಭಾಧ್ಯಕ್ಷರಿಗೆ ರಾಜೀನಾಮೆ ನೀಡಬಹುದು.

 

ಅರ್ಹತೆ:

 

  • ಸ್ವತಂತ್ರ್ಯ ಭಾರತದ ಪ್ರಜೆಯಾಗಿರಬೇಕು.
  • ವಯಸ್ಸು ೩೦ ವರ್ಷಕ್ಕಿಂತ ಹೆಚ್ಚಿರಬೇಕು.
  • ಭಾರತೀಯ ಸಂವಿಧಾನದ ಪ್ರಕಾರ ಯಾವುದೇ ಸಂವಿಧಾನ ಚಟುವಟಿಕೆಗಳಲ್ಲಿ ಭಾಗಿಯಾಗಿರಬಾರದು.

 

ರಾಜ್ಯಸಭೆಗೆ ಸದಸ್ಯರ ಆಯ್ಕೆ ಹೀಗೆ?

 

  • ರಾಜ್ಯಸಭೆಗೆ ನಾಮನಿರ್ದೇಶನವಾಗುವ ಸದಸ್ಯರ ಸಂಖೆ ಆ ರಾಜ್ಯದ ಜನಸಂಖ್ಯೆಯ ಮೇಲೆ ತೀರ್ಮಾನಿಸಲಾಗುತ್ತದೆ.

 

2.ಖಾಸಗಿ ಶಾಲೆಗಳ ಶುಲ್ಕ ನೀತಿಗೆ ಎನ್‌ಸಿಪಿಸಿಆರ್ ನಿಯಂತ್ರಣ

ವಿದ್ಯಾರ್ಥಿಗಳ ಗಮನಕ್ಕೆ

 ಪ್ರಿಲಿಮ್ಸ್ ಪರೀಕ್ಷೆಗಾಗಿ ಎನ್‌ಸಿಪಿಸಿಆರ್ ಬಗ್ಗೆ

 ಮುಖ್ಯ ಪರೀಕ್ಷೆಗಾಗಿ ಈ ಕ್ರಮ ದಿಂದ  ಬೀರುವ ಪರಿಣಾಮ ಮತ್ತು , ಶಾಲಾ ಶುಲ್ಕ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳು.

 

ಪ್ರಮುಖ ಸುದ್ದಿ

  • ಖಾಸಗಿ ಶಾಲೆಗಳಲ್ಲಿ ಹೆಚ್ಚುತ್ತಿರುವ ಶುಲ್ಕಕ್ಕೆ ಕಡಿವಾಣ ಹಾಕಲು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ(  ಎನ್‌ಸಿಪಿಸಿಆರ್)  ನೀತಿಯನ್ನು ಜಾರಿಮಾಡಿದೆ.

 

ಮುಖ್ಯ ಅಂಶಗಳು 

 

  • ದೇಶದಲ್ಲಿರುವ ಶಾಲೆಗಳ ಪೈಕಿ ಶೇ. 23 ಖಾಸಗಿ ಶಾಲೆಗಳು ಇದರಲ್ಲಿ ಶೇ.36 ಮಕ್ಕಳು ವಿದ್ಯಾಭ್ಯಾಸ ಪಡೆದುಕೊಳ್ಳುತ್ತಿದ್ದಾರೆ. ಇದರ ಶುಲ್ಕ ನೀತಿಗಾಗಿ ಮಾನದಂಡಗಳನ್ನು ರೂಪಿಸಲಾಗಿದೆಯಾದರೂ ಇದು ಪೂರ್ಣಪ್ರಮಾಣದಲ್ಲಿ ಕಾರ್ಯರೂಪಕ್ಕೆ ಬಂದಿಲ್ಲ.
  • ಏಕರೂಪದ ಶುಲ್ಕ ನೀತಿಯನ್ನು ಪಾಲಿಸುತ್ತಿಲ್ಲ. ಆದರೆ ಇನ್ನುಮುಂದೆ ಈ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸದೇ ಇದ್ದಲ್ಲಿ ಹೊಸ ದಾಖಲಾತಿ ಮಾಡಿಸಿಕೊಳ್ಳಲು ಅವಕಾಶವಿರಲಾರದು. ಜತೆಗೆ ಶಾಲೆಯ ಒಟ್ಟು ಆದಾಯದ ಶೇ.10 ದಂಡದ ರೂಪದಲ್ಲಿ ವಿಧಿಸುವುದಕ್ಕೂ ಅವಕಾಶವಿರಲಿದೆ.
  • ಜತೆಗೆ ಖಾಸಗಿ ಶಾಲೆಗಳು ಮತ್ತು ಅನುದಾನ ರಹಿತ ಶಾಲೆಗಳಲ್ಲಿ ವಾರ್ಷಿಕ ಶೇ.10 ಶುಲ್ಕ ಹೆಚ್ಚಳಕ್ಕೆ ಮಾತ್ರ ಅವಕಾಶ ನೀಡಬೇಕು ಮತ್ತು ಜಿಲ್ಲಾಮಟ್ಟದಲ್ಲಿ ಶುಲ್ಕ ನಿಯಂತ್ರಣ ಪ್ರಾಧಿಕಾರ ಆರಂಭಿಸಬೇಕೆಂದು ಆಯೋಗ ಶಿಫಾರಸನ್ನೂ ಮಾಡಿದೆ.

 

BACK TO BASICS

ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಬಗ್ಗೆ

  • ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ( ಎನ್.ಸಿ.ಪಿ.ಸಿ.ಆರ್)ವು ಮಕ್ಕಳ ಹಕ್ಕುಗಳ ಸಾರ್ವತ್ರೀಕರಣ ಮತ್ತು ಅಭಗ್ನತೆಯ ತತ್ವಗಳಿಗೆ ಒಟ್ಟು ನೀಡುತ್ತದೆ. ಅಲ್ಲದೆ ಮಕ್ಕಳಿಗೆ ಸಂಬಂಧಿಸಿದ ದೇಶದ ಎಲ್ಲಾ ನೀತಿಗಳಲ್ಲಿ ತ್ವರಿತ ಗತಿಯನ್ನು ಗುರುತಿಸುತ್ತದೆ.
  • ೦ ಯಿಂದ 18 ವರ್ಷ ವಯಸ್ಸಿನ ಎಲ್ಲಾ ಮಕ್ಕಳ ಹಕ್ಕುಗಳ ಸಂರಕ್ಷಣೆಯೇ ಆಯೋಗದ ಪ್ರಾಮುಖ್ಯತೆಯಾಗಿದೆ. ಹಾಗಾಗಿ ಎಲ್ಲಾ ನೀತಿಗಳು ಅತ್ಯಂತ ಭೇದನಿಯ ಮಕ್ಕಳಿಗೆ ಪ್ರಾಶಸ್ತ್ಯ ನೀಡುತ್ತದೆ.
  • ಈ ನಿಟ್ಟಿನಲ್ಲಿ ಅತ್ಯಂತ ಹಿಂದುಳಿದ ಪ್ರದೇಶದ ಅಥವಾ ಕೆಲವು ಸನ್ನಿವೇಶಗಳಲ್ಲಿ ಮಕ್ಕಳು ಇತ್ಯಾದಿಗಳಿಗೆ ಆಯೋಗ ಕೇಂದ್ರೀಕರಿಸುತ್ತದೆ. ಆಯೋಗದ ನಂಬಿಕೆಯೆಂದರೆ ಕೇವಲ ಸನ್ನಿವೇಶಗಳಲ್ಲಿ ಮಕ್ಕಳ ಸಮಸ್ಯೆಗಳತ್ತ ಗಮನಹರಿಸಿದ್ದಲ್ಲಿ ಕೇಂದ್ರೀಕರಿಸಲಾಗಿರದ ಹಲವಾರು ಭೇದನೀಯ ಮಕ್ಕಳನ್ನು ಕೈಬಿಡುವ ಸಾಧ್ಯತೆಗಳಿರುತ್ತವೆ. ಹಾಗಾಗಿ ನೀತಿಗಳನ್ನು ಜಾರಿಗೆ ತರುವಾಗ ಎಲ್ಲಾ ಮಕ್ಕಳಿಗೆ ತಲುಪುವ ಕಾರ್ಯ ರಾಜಿಯಾಗಿ ಸಮಾಜದಲ್ಲಿನ ಮಕ್ಕಳ ಹಕ್ಕುಗಳ ಉಲ್ಲಂಘನೆಯು ಮುಂದುವರಿಯುತ್ತದೆ.
  • ಇದರಿಂದ ಗುರಿಯಾಗಿಸಿರುವ ಜನಸಮುದಾಯದ ಕಾರ್ಯಕ್ರಮದ ಮೇಲೂ ಪರಿಣಾಮ ಬೀರುತ್ತದೆ. ಆದುದರಿಂದ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಸುಸಜ್ಜಿತ ವಾತಾವರಣ ನಿರ್ಮಿಸಿದಲ್ಲಿ ಮಾತ್ರ ಕೇಂದ್ರೀಕರಿಸಲಾಗಿರುವ ಮಕ್ಕಳನ್ನು ಗುರುತಿಸಿ ಅವರಿಗೆ ತಮ್ಮ ಹಕ್ಕುಗಳನ್ನು ಚಲಾಯಿಸುವ ಆತ್ಮವಿಶ್ವಾಸವನ್ನು ಮೂಡಿಸಬಹುದಾಗಿದೆ.

 

  • ಅದೇ ರೀತಿ ಪ್ರತಿ ಮಗು ಚಲಾಯಿಸುವ ಹಕ್ಕು ಪರಸ್ವರ ಬೆಂಬಲ ನೀಡುವುದು ಮತ್ತು ಅವಲಂಬಿತವಾಗಿವೆ. ಎಂದು ಆಯೋಗ ಪರಿಗಣಿಸುತ್ತದೆ. ಹಾಗಾಗಿ ಹಕ್ಕುಗಳಲ್ಲಿ ಶ್ರೇಣಿಕರಿಸುವ ಪ್ರಶ್ನೆಯೇ ಬರುವುದಿಲ್ಲ. ಒಂದು ಮಗುವು ತನ್ನ 18 ನೇ ವರ್ಷದಲ್ಲಿ ಅನುಭವಿಸುತ್ತಿರುವ ಹಕ್ಕು ಆಕೆ ಹುಟ್ಟಿದಾಗಿನಿಂದ ಆಕೆಗಿರುವ ಎಲ್ಲಾ ಅಧಿಕಾರಿಗಳ ಮೇಲೆ ಅವಲಂಬಿಸಿದೆ. ಹಾಗಾಗಿ ನೀತಿಗಳ ಮಧ್ಯವರ್ತನೆ ಎಲ್ಲಾ ಹಂತಗಳಲ್ಲಿ ಪ್ರಾಮುಖ್ಯತೆ ಹೊಂದುತ್ತದೆ. ಆಯೋಗಕ್ಕೆ ಮಕ್ಕಳ ಎಲ್ಲಾ ಹಕ್ಕುಗಳು ಸಮಾನ ಮಹತ್ವದಾಗಿರುತ್ತದೆ.

 

ಆಯೋಗದ ಜವಾಬ್ದಾರಿಗಳು

  • ಸಂಸತ್ತಿನ (ಡಿಸೆಂಬರ್ 2005) ಕಾಯ್ದೆಯಾದ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಆಯೋಗಗಳು ಕಾಯ್ದೆ, 2005(2006 ರ 4) ಅ ಅಡಿಯಲ್ಲಿ ಮಕ್ಕಳು ಹಕ್ಕುಗಳ ರಕ್ಷಣೇಗಾಗಿ ರಾಷ್ಟ್ರೀಯ ಆಯೋಗ (ಎನ್.ಸಿ.ಪಿ.ಸಿ.ಆರ್)ನ್ನು ಕಾನೂನುಬದ್ಧ ಅಂಗವಾಗಿ ಮಾರ್ಚ್ ೨೦೦೭ ರಲ್ಲಿ ಸ್ಥಾಪಿಸಲಾಯಿತು. ದೇಶದಲ್ಲಿ ಮಕ್ಕಳ ಹಕ್ಕುಗಳನ್ನು ಸಂರಕ್ಷಿಸಿ, ಪ್ರೋತ್ಸಾಹಿಸಿ ಅವುಗಳನ್ನು ಕಾಪಾಡುವ ಉದ್ದೇಶದಿಂದ ಆಯೋಗವನ್ನು ಸ್ಥಾಪಿಸಲಾಗಿದೆ.

 

ಕಾಯ್ದೆಯ ಪ್ರಕಾರ ಗೊತ್ತು ಮಾಡಿರುವ ಆಯೋಗದ ಕಾರ್ಯಚಟುವಟಿಕೆಗಳು    

 

  • ಆಯೋಗವು ಈ ಕೆಳಕಂಡ ಎಲ್ಲಾ ಅಥವಾ ಯಾವುದಾದರೂ ಕಾರ್ಯಗಳನ್ನು ಮಾಡಬಹುದಾಗಿದೆ.

 

  • ಮಕ್ಕಳ ಹಕ್ಕುಗಳನ್ನು ರಕ್ಷಿಸಲು ಕಾಯ್ದೆ ಅಥವಾ ಇತರೆ ಕಾನೂನಿನ ಪ್ರಕಾರ ಜಾರಿಯಲ್ಲಿರುವ ಭದ್ರತೆಗಳನ್ನು ಪರಿಶೀಲಿಸಿ, ಪರೀಕ್ಷಿಸಿ, ಅವುಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಸಲಹೆ ಮತ್ತು ಕ್ರಮಗಳನ್ನು ಶಿಫಾರಸ್ಸು ಮಾಡುವುದು.
  • ಈ ಭದ್ರತೆಗಳ ಅನುಷ್ಠಾನ ಕುರಿತು ವಾರ್ಷಿಕ ಅಥವಾ ಆಯೋಗ ಸೂಕ್ತವೆನ್ನುವ ಕಾಲಕಾಲಕ್ಕೆ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಪ್ರಸ್ತುತ ಪಡಿಸುವುದು.
  • ಮಕ್ಕಳ ಹಕ್ಕುಗಳ ಉಲ್ಲಂಘನೆಯ ಪ್ರಕರಣಗಳನ್ನು ತನಿಖೆ ಮಾಡಿ ಅಂತಹ ಪ್ರಕರಣಗಳಲ್ಲಿ ಸೂಕ್ತ ಕ್ರಮಗಳನ್ನು ಜರುಗಿಸಲು ಶಿಫಾರಸ್ಸು ಮಾಡುವುದು
  • ಭಯೋತ್ಪಾದನೆ, ಕೋಮು ಗಲಬೆ, ದೊಂಬಿ, ನೈಸರ್ಗಿಕ ವಿಕೋಪ, ಕೌಟುಂಬಿಕ ದೌರ್ಜನ್ಯ, ಹೆಚ್ ಐ ವಿ/ಏಡ್ಸ್ ಮಾನವ ಸಾಗಾಣಿಕೆಗೆ, ಕ್ರೂರತನ, ಪೀಡೆ ಮತ್ತು ದುರುಪಯೋಗ, ಅಶ್ಲೀಲ ಚಿತ್ರೀಕರಣ ಹಾಗೂ ವೇಶ್ಯವಾಟಿಕೆ ಪೀಡಿತ ಮಕ್ಕಳಿಗೆ ತಮ್ಮ ಹಕ್ಕುಗಳನ್ನು ಚಲಾಯಿಸುವಲ್ಲಿ ಉಂಟಾಗುವ ಬಾದೆಗಳನ್ನು ಗುರುತಿಸಿ ಸೂಕ್ತ ಕ್ರಮಗಳನ್ನು  ಶಿಫಾರಸ್ಸು ಮಾಡುವುದು.
  • ಸಂಕಷ್ಟದಲ್ಲಿರುವ ಮಕ್ಕಳು, ಬಾಲಾಪರಾಧಿಗಳು ಅಪಾಯದ ಅಂಚಿನಲ್ಲಿರುವ ಮಕ್ಕಳು, ಕುಟುಂಬ ವಂಚಿತ ಮಕ್ಕಳು ಮತ್ತು ಖೈದಿಗಳ ಮಕ್ಕಳು ಸೇರಿದಂತೆ ವಿಶೇಷ ಆರೈಕೆ ಮತ್ತು ರಕ್ಷಣೆಯ ಅವಶ್ಯಕತೆಯಿರುವ ಮಕ್ಕಳಿಗೆ ಸಂಬಂಧಿಸಿದ ವಿಷಯಗಳನ್ನು ಪರಿಗಣಿಸಿ ಸೂಕ್ತ ಕ್ರಮಗಳನ್ನು ಸೂಚಿಸುವುದು.
  • ಒಪ್ಪಂದಗಳನ್ನು ಮತ್ತು ಅಂತರಾಷ್ಟ್ರೀಯ ಸಾಧನಗಳನ್ನು ಪರಿವೀಕ್ಷಿಸುವುದು, ಮಕ್ಕಳ ಹಕ್ಕುಗಳಿಗೆ ಸಂಬಂಧಿಸಿದ ನೀತಿಗಳನ್ನು, ಕಾರ್ಯಕ್ರಮಗಳನ್ನು ಮತ್ತು ಇತರೆ ಚಟುವಟಿಕೆಗಳನ್ನು ಕಾಲಕಾಲಕ್ಕೆ ಪರಿಶೀಲಿಸಿ ಮಕ್ಕಳ ಒಳಿತಿಗಾಗಿ ಅವುಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಸೂಚನೆಗಳನ್ನು ನೀಡುವುದು.
  • ಮಕ್ಕಳ ಹಕ್ಕುಗಳ ಕ್ಷೇತ್ರದಲ್ಲಿ ಸಂಶೋಧನೆಗಳನ್ನು ಕೈಗೊಳ್ಳುವುದು ಮತ್ತು ಅವುಗಳನ್ನು ಪ್ರೋತ್ಸಾಹಿಸುವುದು.

 

3.ಜಾಗತೀಕರಣದಿಂದ ವಿಮುಖವಾಗುತ್ತಿರುವ ಅಮೆರಿಕ

 

ವಿದ್ಯಾರ್ಥಿಗಳ ಗಮನಕ್ಕೆ

ಪ್ರಿಲಿಮ್ಸ್ ಪರೀಕ್ಷೆಗಾಗಿಗ್ಯಾಟ್ (ಜನರಲ್ ಅಗ್ರಿಮೆಂಟ್ ಆನ್ ಟ್ಯಾರಿಫ್ ಆ್ಯಂಡ್ ಟ್ರೇಡ್) ಒಪ್ಪಂದದ ಬಗ್ಗೆ , ವಿಶ್ವ ವಾಣಿಜ್ಯ ಸಂಘಟನೆ ಬಗ್ಗೆ

 ಮುಖ್ಯ ಪರೀಕ್ಷೆಗಾಗಿ -ಇದರಿಂದ ಭಾರತದ ಮೇಲೆ ಯಾವ ರೀತಿ ಪರಿಣಾಮ ಬೀರಬಹುದು .

 

ಪ್ರಮುಖ ಸುದ್ದಿ

 

  • ಇದೀಗ ಅಮೆರಿಕ ವಾಣಿಜ್ಯ ಸಮರದಲ್ಲಿ ತೊಡಗಿದ್ದು, 2018ರ ಆರಂಭದಲ್ಲೇ ಭಾರತ, ಚೀನಾ, ಕೆನಡಾ, ಮೆಕ್ಸಿಕೋ ಸೇರಿದಂತೆ ಹಲವು ರಾಷ್ಟ್ರಗಳ ಉತ್ಪನ್ನಗಳ ಮೇಲೆ ಕರಭಾರ ಹೆಚ್ಚಿಸಿದೆ.ಇದಕ್ಕೆ ಉತ್ತರ ಎಂಬಂತೆ ಹಲವು ರಾಷ್ಟ್ರಗಳು ಅಮೆರಿಕದ ಉತ್ಪನ್ನಗಳ ಮೇಲೂ ತೆರಿಗೆ ಹೆಚ್ಚಿಸಿವೆ.

 

ಮುಖ್ಯ ಅಂಶಗಳು

 

  • ಭಾರತ, ಚೀನಾ ಹಾಗೂ ಕೆನಡಾಗಳು ಅಮೆರಿಕದ ಕರಭಾರಕ್ಕೆ ಪ್ರತಿಯಾಗಿ ತಾವೂ ಅಮೆರಿಕದ ಉತ್ಪನ್ನಗಳ ಮೇಲೆ ತೆರಿಗೆ ಹೆಚ್ಚಿಸಿವೆ.
  • ಭಾರತದಿಂದ ರಫ್ತಾಗುತ್ತಿದ್ದ ಉಕ್ಕು, ಅಲ್ಯುಮಿನಿಯಂ ಮೊದಲಾದ ಲೋಹಗಳ ಮೇಲಿನ ತೆರಿಗೆಯನ್ನು ಅಮೆರಿಕ ಹೆಚ್ಚಿಸಿತ್ತು. ಇದಕ್ಕೆ ಪ್ರತಿಯಾಗಿ ಭಾರತ ಅಮೆರಿಕದ 30 ವಿವಿಧ ಸರಕುಗಳ ಮೇಲೆ ಆಮದು ಸುಂಕವನ್ನು ಹೆಚ್ಚಿಸಿದೆ.

 

  • ಇಂದು ಕಾಣುತ್ತಿರುವ ಜಾಗತಿಕ ವಾಣಿಜ್ಯ ವ್ಯವಸ್ಥೆ ಹುಟ್ಟಿದ್ದೇ ಪಾಶ್ಚಾತ್ಯ ರಾಷ್ಟ್ರಗಳ ಕೈಗಾರಿಕಾ ಕ್ರಾಂತಿಯ ಕಾಲದಲ್ಲಿ ವಿಜ್ಞಾನ-ತಂತ್ರಜ್ಞಾನದ ಬೆಳವಣಿಗೆ ಪರಿಣಾಮ ನೌಕಾ, ವಾಯು ಹಾಗೂ ರಸ್ತೆ ಸಾರಿಗೆಯಲ್ಲಿ ಕ್ರಾಂತಿಕಾರಕ ಬೆಳವಣಿಗೆಯಾಯಿತು.
  • ಇಂಟರ್‌ನೆಟ್ ಪರಿಚಯವಾದ ನಂತರ ವಿಶ್ವವೇ ಒಂದು ‘ಜಾಗತಿಕ ಗ್ರಾಮದಂತಾಯಿತು. ಇದನ್ನು “ಅಂತರ ಕ್ಷೀಣಿಸುವಿಕೆ’ (death of distance) ಎಂದೇ ಉತ್ತೇಕ್ಷಿಸಲಾಗಿದೆ.
  • ದುರ್ಬಲಗೊಳ್ಳುತ್ತಿದೆ ಜಾಗತಿಕ ವಾಣಿಜ್ಯ ವ್ಯವಸ್ಥೆ:

 

  • ಗ್ಯಾಟ್ (ಜನರಲ್ ಅಗ್ರಿಮೆಂಟ್ ಆನ್ ಟ್ಯಾರಿಫ್ ಆ್ಯಂಡ್ ಟ್ರೇಡ್) ಒಪ್ಪಂದ ಹಾಗೂ ವಿಶ್ವ ವಾಣಿಜ್ಯ ಸಂಘಟನೆಗಳಂತಹ (WTO) ಜಾಗತಿಕ ವಾಣಿಜ್ಯ ವ್ಯವಸ್ಥೆ ಮಹತ್ವ ಕಳೆದುಕೊಂಡಿವೆ.
  • ವಿಶ್ವದ ಶಕ್ತಿ ರಾಷ್ಟಗಳಾವುವೂ ಆರ್ಥಿಕ ವಿವಾದಗಳಿಗೆ ಸಂಬಂಧಿಸಿದಂತೆ WTOನಲ್ಲಿ ದೂರು ನೀಡಿ ತೀರ್ಪಿಗಾಗಿ ಕಾಯುತ್ತಿಲ್ಲ. ಬದಲಿಗೆ ತಾವೇ ಪ್ರತೀಕಾರ ಕ್ರಮ ಕೈಗೊಳ್ಳತೊಡಗಿವೆ. ಚೀನಾ, ಕೆನಡಾ, ಭಾರತಗಳೇ ಇದಕ್ಕೆ ತಾಜಾ ಉದಾಹರಣೆ.

 

 ಮುಖ್ಯ ಪರೀಕ್ಷೆಗಾಗಿ  ಸಂಕ್ಷಿಪ್ತ ವಿವರ

 

  • ಸಾಗರಯಾನದ ಅಭಿವೃದ್ಧಿಯೊಟ್ಟಿಗೇ ಹುಟ್ಟಿಕೊಂಡಿದ್ದು ವಿಶ್ವವ್ಯಾಪಾರ. ಹೀಗಾಗಿ ವಿಶ್ವವ್ಯಾಪಾರವನ್ನು ಹಡಗಿಗೆ ಹೋಲಿಸಬಹುದು. ಜಾಗತಿಕ ವ್ಯಾಪಾರವನ್ನು ನಿಯಂತ್ರಿಸುತ್ತಿದ್ದ ವಿಶ್ವ ವ್ಯಾಪಾರ ಸಂಘಟನೆಯನ್ನು ಹಡಗಿನ ಇಂಜಿನ್ನಿಗೆ ಹೋಲಿಸಬಹುದು. ಆದರೀಗ ಇಂಜಿನ್ (ಡಬ್ಲ್ಯುಟಿಒ) ತನ್ನ ಸಾಮರ್ಥ್ಯ ಕಳೆದುಕೊಳ್ಳುತ್ತಿದೆ. ನಾವಿಕರು (ರಾಷ್ಟ್ರಗಳು) ಪರ್ಯಾಯ ವ್ಯವಸ್ಥೆ ಕಂಡುಕೊಳ್ಳಲು ಪ್ರಾರಂಭಿಸಿದ್ದಾರೆ. ಇತ್ತೀಚೆಗಷ್ಟೇ ಅರ್ಜೆಂಟೀನಾದ ಬ್ಯೂನಸ್ ಐರಿಸ್​ನಲ್ಲಿ ನಡೆದ ಡಬ್ಲ್ಯುಟಿಒ ಸಭೆ ಶೂನ್ಯಸಾಧನೆಯೊಂದಿಗೆ ವಿಫಲವಾಗಿರುವುದು ಡಬ್ಲ್ಯುಟಿಒ ಅಸಹಾಯಕತೆಯ ಪ್ರಮುಖ ಸೂಚಕವಾಗಿದೆ.

 

ದುರ್ಬಲಗೊಳ್ಳುತ್ತಿರುವ ಡಬ್ಲ್ಯುಟಿಒ

 

  • ಜಾಗತೀಕರಣದಿಂದ ವಿಮುಖವಾಗುತ್ತಿರುವ ಮುಂದುವರಿದ ರಾಷ್ಟ್ರಗಳು ಈ ಸಭೆಯಲ್ಲಿ ಯಾವುದೇ ಪಾತ್ರ ವಹಿಸಲಿಲ್ಲ. ಭಾರತ, ಚೀನಾದಂತಹ ಅಭಿವೃದ್ಧಿಶೀಲ ರಾಷ್ಟ್ರಗಳು ಕೂಡ ಸಭೆಯಲ್ಲಿ ಆಸಕ್ತಿ ಕಳೆದುಕೊಂಡಿದ್ದವು. ಅಲ್ಲಿ ಸೇರಿದ್ದ ಯಾವೊಂದು ರಾಷ್ಟ್ರಕ್ಕೂ ಸಭೆಯನ್ನು ಯಶಸ್ವಿಗೊಳಿಸುವ ಹುಮ್ಮಸ್ಸು ಇರಲಿಲ್ಲ. ಹೀಗಾಗಿ ಜಾಗತಿಕ ವ್ಯಾಪಾರವನ್ನು ನಿಯಂತ್ರಿಸಬೇಕಿದ್ದ ವಿಶ್ವಮಟ್ಟದ ಸಭೆ ಒಂದು ಸಣ್ಣ ಘೊಷಣೆಯೂ ಇಲ್ಲದಂತೆ ಮುಕ್ತಾಯವಾಯಿತು. ವಿಶ್ವದ ದೊಡ್ಡಣ್ಣನಂತೆ ಬೀಗುವ ಅಮೆರಿಕ ಕೂಡ ತನಗೂ ಸಭೆಗೂ ಸಂಬಂಧವೇ ಇಲ್ಲ ಎಂಬಂತಿತ್ತು.

 

  • ಬದಲಾವಣೆ ಜಗದ ನಿಯಮ ಎಂಬಂತೆ ವಿಶ್ವ ವ್ಯಾಪಾರ ಕ್ಷೇತ್ರದಲ್ಲಿಯೂ ಸದಾ ಒಂದಿಲ್ಲೊಂದು ಬದಲಾವಣೆ ಆಗುತ್ತಲೇ ಬಂದಿದೆ. ಇದೀಗ ಜಾಗತೀಕರಣವೂ ಹಳತಾಗಿದ್ದು, ಎಲ್ಲ ರಾಷ್ಟ್ರಗಳೂ ಹೊಸ ದಿಕ್ಕಿನತ್ತ ಮುಖಮಾಡಿದಂತಿವೆ. ಮಹಾಯುದ್ಧದ ನಂತರ ಜಾಗತಿಕ ನಾಯಕತ್ವ ವಹಿಸಿದ್ದ ಅಮೆರಿಕವೇ ಜಾಗತಿಕ ವ್ಯಾಪಾರ ನಿಯಂತ್ರಿಸುತ್ತಿತ್ತು. ಇದೀಗ ಹಲವು ರಾಜಕೀಯ ಬದಲಾವಣೆಯೊಂದಿಗೆ ವಿಶ್ವ ಮಾರುಕಟ್ಟೆಯ ಪರಿಸ್ಥಿತಿ ಬದಲಾಗಿದೆ. ಅಮೆರಿಕದ ಹೊಸ ಸರ್ಕಾರದ ನೀತಿಗಳಿಂದ ಜಾಗತಿಕ ವ್ಯಾಪಾರದಲ್ಲಿ ಒಂದು ರೀತಿಯ ನಿರ್ವಾತ ಉಂಟಾಗಿದೆ. 2008ರ ಆರ್ಥಿಕ ಬಿಕ್ಕಟ್ಟಿನಿಂದೀಚೆಗೆ ಜಾಗತಿಕ ವ್ಯಾಪಾರದಲ್ಲಿ ಹೇಳಿಕೊಳ್ಳುವಂಥ ಬೆಳವಣಿಗೆಯೇನೂ ಆಗಿಲ್ಲ. ಡಬ್ಲ್ಯುಟಿಒ ಹಾಗೂ ಅದರಾಚೆಗೂ ಸಾಮೂಹಿಕ ನಾಯಕತ್ವ ಕಂಡುಬರುತ್ತಿದೆ. ಇನ್ನು ಹೆಚ್ಚು ಕಾಲ ವಿಶ್ವ ಮಾರುಕಟ್ಟೆಯನ್ನು ತನ್ನಿಂದ ನಿಯಂತ್ರಿಸಲಾಗದು ಎಂಬುದು ಅಮೆರಿಕಕ್ಕೆ ಅರಿವಾದಂತಿದೆ.

 

  • ಭಾರತ, ಚೀನಾದಂತಹ ರಾಷ್ಟ್ರಗಳೂ ಅಮೆರಿಕದ ಪಾಲುದಾರಿಕೆಯಿಲ್ಲದೆಯೂ ಆರ್ಥಿಕವಾಗಿ ಸದೃಢವಾಗುವುದನ್ನು ಕಂಡುಕೊಂಡಿವೆ. ಎಲ್ಲ ರಾಷ್ಟ್ರಗಳೂ ಏಕಾಂಗಿಯಾಗಿರಲು ಬಯಸುತ್ತಿವೆಯೇ ಹೊರತು ವಿಶ್ವ ನಾಯಕತ್ವ ವಹಿಸಲು ಮುಂದಾಗುತ್ತಿಲ್ಲ. ಹೀಗಾಗಿ ವಿಶ್ವ ವ್ಯಾಪಾರ ಸಂಘಟನೆ ಇರಲಿ, ವಿಶ್ವಸಂಸ್ಥೆಯ ಪ್ರಭಾವವೇ ಮಂಕಾಗಿ ಹೋಗಿದೆ. ವಿಶ್ವಸಂಸ್ಥೆ ಸೇರಿದಂತೆ ಪ್ರಮುಖ ಅಂತಾರಾಷ್ಟ್ರೀಯ ಸಂಘಟನೆಗಳ ಸಾಂಸ್ಥಿಕ ಮರುರಚನೆಯಾಗಬೇಕೆಂಬ ಬೇಡಿಕೆಯೂ ತೀವ್ರವಾಗುತ್ತಿದೆ.

 

  • ಜಾಗತೀಕರಣದಿಂದ ವಿಮುಖ : ಹಲವು ರಾಷ್ಟ್ರಗಳು ಜಾಗತೀಕರಣದಿಂದ ಹಿಂದೆ ಸರಿಯುತ್ತಿವೆ. ಬ್ರೆಕ್ಸಿಟ್ ಇದಕ್ಕೊಂದು ಪ್ರಮುಖ ನಿದರ್ಶನ. ಯುರೋಪ್ ಒಕ್ಕೂಟದ ಪ್ರಮುಖ ರಾಷ್ಟ್ರವಾಗಿದ್ದ ಬ್ರಿಟನ್, ಒಕ್ಕೂಟದಿಂದ ಹೊರ ಬಂದಿದೆ. ಇತ್ತೀಚೆಗಷ್ಟೇ ವಿಶ್ವಸಂಸ್ಥೆಯ ಪ್ಯಾರಿಸ್ ಒಪ್ಪಂದದಿಂದ ಅಮೆರಿಕ ಹಿಂದೆ ಸರಿಯಿತು.

 

  • ಅಮೆರಿಕ ನೀತಿಯನ್ನೇ ಇಸ್ರೇಲ್ ಮತ್ತು ಚೀನಾಗಳೂ ಅನುಸರಿಸಿದವು. ಮರಳಿ ಮಣ್ಣಿಗೆ ಎಂಬಂತೆ ಎಲ್ಲ ರಾಷ್ಟ್ರಗಳು ಅಂತಾರಾಷ್ಟ್ರೀಯ ರಾಜಕಾರಣದ ಬದಲು ಆಂತರಿಕ ಅಂಶಗಳ ಕುರಿತು ಹೆಚ್ಚು ಕಾಳಜಿ ವಹಿಸುತ್ತಿವೆ. ಆದರೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿಯಂತ್ರಕ ವ್ಯವಸ್ಥೆಯ ಅಗತ್ಯವಿದೆ. ಜಾಗತಿಕ ನಾಯಕತ್ವ, ನಿಯಂತ್ರಣ ಇಲ್ಲವಾದಲ್ಲಿ ಉತ್ತರ ಕೊರಿಯಾಂದತಹ ಪುಂಡ ರಾಷ್ಟ್ರಗಳು ವಿಶ್ವಕ್ಕೇ ಕಂಟಕವಾಗಿ ಪರಿಣಮಿಸುವ ಅಪಾಯವಿದೆ. ಇದರಿಂದ ಎಚ್ಚೆತ್ತುಕೊಂಡಿರುವ ಅಭಿವೃದ್ಧಿಶೀಲ ರಾಷ್ಟ್ರಗಳು ಜಿ-20 ಎಂಬ ಪ್ರತ್ಯೇಕ ಸಂಘಟನೆಯನ್ನೇ ಮಾಡಿಕೊಂಡಿವೆ. ಡಬ್ಲ್ಯುಟಿಒ ಮೂಲಕ ಆಗದ್ದನ್ನು ಜಿ-20 ಮೂಲಕ ಸಾಧಿಸಲಾಗುತ್ತಿದೆ. ಇಷ್ಟಾದರೂ ಡಬ್ಲ್ಯುಟಿಒ ಮೇಲೆ ನಂಬಿಕೆ ಕಳೆದುಕೊಳ್ಳದ ಭಾರತ ಅದರಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರಿದೆ.

 

ನಿಯಂತ್ರಣ ಕಳೆದುಕೊಳ್ಳುತ್ತಿರುವ ವಿಶ್ವವ್ಯಾಪಾರ

 

  • ದ್ವಿತೀಯ ಮಹಾಯುದ್ಧದ ನಂತರ ಜಾಗತಿಕ ವಾಣಿಜ್ಯವನ್ನು ಹಿಡಿತದಲ್ಲಿ ಇರಿಸಿಕೊಂಡಿದ್ದ ಅಮೆರಿಕ ಇತ್ತೀಚೆಗೆ ಜಾಗತಿಕ ವ್ಯವಹಾರಗಳಿಂದ ಹಿಂದೆ ಸರಿಯುತ್ತಿದೆ. ‘ಅಮೆರಿಕನ್ನರಿಗೆ ಅಮೆರಿಕ’ ಎಂಬ ನೀತಿ ಅನುಸರಿಸಲು ಪ್ರಾರಂಭಿಸಿದೆ. ಮುಂದುವರಿದ ರಾಷ್ಟ್ರಗಳು ಜಾಗತೀಕರಣದಿಂದ ಹಿಂದೆ ಸರಿಯುವ ಪ್ರವೃತ್ತಿ ಆರಂಭಿಸಿವೆ.
  • ಅಭಿವೃದ್ಧಿಶೀಲ ರಾಷ್ಟ್ರಗಳು ಏಕಾಂಗಿಯಾಗಿರಲು ಬಯಸಿವೆ. ಕೆಲವೆಡೆ ಸಾಮೂಹಿಕ ನಾಯಕತ್ವ ಕಂಡುಬರುತ್ತಿದೆ. ಒಟ್ಟಾರೆ, ವಿಶ್ವ ನಾಯಕನ ಸ್ಥಾನ ಭಾಗಶಃ ತೆರವಾದಂತಾಗಿದೆ. ಇತ್ತೀಚೆಗೆ ನಡೆದ ವಿಶ್ವ ವ್ಯಾಪಾರ ಸಂಘಟನೆ ಸಭೆ ವಿಫಲವಾಗಿದ್ದು, ಇದಕ್ಕೊಂದು ಪ್ರಮುಖ ನಿದರ್ಶನ.

 

4.ಪೂರ್ವಾಂಚಲ ಎಕ್ಸ್​ಪ್ರೆಸ್ ವೇ

ಪ್ರಮುಖ ಸುದ್ದಿ

 

  • ಭಾರತದ ಅತಿ ಉದ್ದನೆಯ ಎಕ್ಸ್ ಪ್ರೆಸ್ ಮಾರ್ಗ ಎನ್ನಲಾದ ಉತ್ತರಪ್ರದೇಶದ ಪೂರ್ವಾಂಚಲ ಎಕ್ಸ್​ಪ್ರೆಸ್​ವೇಗೆ ಅಜಂಗಢದಲ್ಲಿ ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ ನೆರ ವೇರಿಸಿದ್ದಾರೆ.

 

ಮುಖ್ಯ ಅಂಶಗಳು

 

  • ರೂ. 23,000 ಕೋಟಿ ಮೊತ್ತದ ಈ ಯೋಜನೆಯನ್ನು ಮೂರು ವರ್ಷಗಳ ದಾಖಲೆ ಅವಧಿಯಲ್ಲಿ ಪೂರ್ಣಗೊಳಿಸುವ ಉದ್ದೇಶ ಸರ್ಕಾರ ದ್ದಾಗಿದೆ. ಸುಲ್ತಾನ್​ಪುರ ಜಿಲ್ಲೆ ಮೂಲಕ ಹಾದು ಹೋಗುವ ಎಕ್ಸ್​ಪ್ರೆಸ್​ವೇನಲ್ಲಿ ತುರ್ತುಪರಿಸ್ಥಿತಿ ವೇಳೆ ಯುದ್ಧವಿಮಾನಗಳನ್ನು ಇಳಿಸಲು ಅನುಕೂಲವಾಗುವಂತೆ ‘ಏರ್​ಸ್ಟ್ರಿಪ್ ’ ಕೂಡ ನಿರ್ವಿುಸಲಾಗುತ್ತದೆ.

 

ಎಕ್ಸ್ಪ್ರೆಸ್ ವೇ ವಿಶೇಷತೆಗಳು

 

  • ಲಖನೌ ಮತ್ತು ಘಾಜಿಪುರ ನಡುವೆ ನಿರ್ಮಾಣ (340 ಕಿ.ಮೀ. ಉದ್ದ ).
  • ಲಖನೌ- ಆಗ್ರಾ ಎಕ್ಸ್​ಪ್ರೆಸ್ ವೇ ಮತ್ತು ಯಮುನಾ ಎಕ್ಸ್​ಪ್ರೆಸ್ ವೇಗೆ ಸಂಪರ್ಕ.
  • ನವದೆಹಲಿಯಿಂದ ಪೂರ್ವ ಉತ್ತರಪ್ರದೇಶಕ್ಕೆ ಪ್ರಯಾಣ ಸಮಯದಲ್ಲಿ 5 ಗಂಟೆ ಇಳಿಕೆ.
  • ಚತುಷ್ಪಥ ಎಕ್ಸ್​ಪ್ರೆಸ್ ವೇಯನ್ನು ಆರು ಪಥಗಳಾಗಿ ಪರಿವರ್ತಿಸಿ   ವಾರಾಣಸಿಗೆ ಸಂಪರ್ಕ ಕಲ್ಪಿಸಲು ಚಿಂತನೆ.

 

5.ಎಲ್​ಪಿಜಿ ಬದಲು ಅಡುಗೆ ಸಬ್ಸಿಡಿ

 

ಪ್ರಮುಖ ಸುದ್ದಿ

  • ಪ್ರಸ್ತುತ ಎಲ್​ಪಿಜಿ ಸಿಲಿಂಡರ್​ಗಳಿಗೆ ನೀಡಲಾಗುತ್ತಿರುವ ಸಬ್ಸಿಡಿ ಮುಂದಿನ ದಿನಗಳಲ್ಲಿ ಪೈಪ್ಡ್ ನ್ಯಾಚುರಲ್ ಗ್ಯಾಸ್, ಬಯೋ ಇಂಧನಕ್ಕೂ ಸಿಗಲಿದೆ . ಎಲ್​ಪಿಜಿ ಸಬ್ಸಿಡಿ ವ್ಯವಸ್ಥೆ ಬದಲು ಅಡುಗೆ ಸಬ್ಸಿಡಿ ವ್ಯವಸ್ಥೆ ಜಾರಿಗೆ ತರಲು ನೀತಿ ಆಯೋಗ ಪ್ರಸ್ತಾವನೆ ಸಿದ್ಧಪಡಿಸುತ್ತಿದೆ.

 

ಮುಖ್ಯ ಅಂಶಗಳು

 

  • ಪೈಪ್ಡ್ ನ್ಯಾಚುರಲ್ ಗ್ಯಾಸ್, ಬಯೋ ಗ್ಯಾಸ್ ಸಹಿತ ಅಡುಗೆ ತಯಾರಿಕೆಗೆ ಬಳಸುವ ಎಲ್ಲ ಇಂಧನಗಳಿಗೆ ಸಬ್ಸಿಡಿ ನೀಡುವುದು ಯೋಜನೆಯ ಉದ್ದೇಶವಾಗಿದೆ. ಎಲ್​ಪಿಜಿ ಒಂದು ಉತ್ಪನ್ನ ಮಾತ್ರ. ಇದರ ಹೊರತಾಗಿ ವಿವಿಧ ಇಂಧನಗಳನ್ನು ಉರಿಸಿ ಅಡುಗೆ ತಯಾರಿಸಲಾಗುತ್ತದೆ.
  • ಇಂದು ನಗರಗಳಲ್ಲಿ ಪೈಪ್ಡ್ ನ್ಯಾಚುರಲ್ ಗ್ಯಾಸ್ (ಪಿಎನ್​ಜಿ)ನ್ನು ವ್ಯಾಪಕ ಪ್ರಮಾಣದಲ್ಲಿ ಬಳಕೆ ಮಾಡಲಾಗುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಬಯೋ ಇಂಧನ ಬಳಕೆ ಮಾಡಲಾಗುತ್ತಿದೆ. ಆದರೆ ಇದಕ್ಕೆ ಸಬ್ಸಿಡಿ ಸಿಗುತ್ತಿಲ್ಲ .

 

  • ರಾಷ್ಟ್ರೀಯ ಇಂಧನ ನೀತಿ 2030ರಲ್ಲಿ ಈ ಅಂಶ ಸೇರಿಸುವ ಸಾಧ್ಯತೆಯಿದೆ. ಅಂತರ ಸಚಿವಾಲಯ ಸಮಿತಿ ಪರಿಶೀಲನೆ ಬಳಿಕ ಕೇಂದ್ರ ಸಂಪುಟದಲ್ಲಿ ಚರ್ಚೆ ನಡೆಸಲು ನಿರ್ಧರಿಸಲಾಗಿದೆ.

 

BACK TO BASICS

ಏನಿದು ಸಬ್ಸಿಡಿ?

  • ಸಹಾಯಧನ (subvention ಎಂದೂ ಕರೆಯಲ್ಪಡುವುದು) ಎಂಬುದು ಒಂದು ವ್ಯವಹಾರ ಅಥವಾ ಆರ್ಥಿಕ ಕ್ಷೇತ್ರಕ್ಕೆ ಪಾವತಿಸಲಾಗುವ ಆರ್ಥಿಕ ಸಹಾಯದ ಒಂದು ರೂಪ. ಬಹುತೇಕ ಸಹಾಯಧನಗಳು ಸರ್ಕಾರದಿಂದ ಒಂದು ಉದ್ಯಮದಲ್ಲಿನ ಉತ್ಪಾದಕರಿಗೆ ಅಥವಾ ವಿತರಕರಿಗೆ, ಆ ಉದ್ಯಮದ ಅಧೋಗತಿಯನ್ನು ತಡೆಯಲು(ಉದಾಹರಣೆಗೆ ಸತತ ಲಾಭಕಾರಿಯಲ್ಲದ ಕಾರ್ಯಾಚರಣೆಗಳ ಪರಿಣಾಮವಾಗಿ) ಅಥವಾ ಅದರ ಉತ್ಪನ್ನಗಳ ಬೆಲೆಯಲ್ಲಿ ಏರಿಕೆಯನ್ನು ತಡೆಯಲು ಅಥವಾ ಸುಮ್ಮನೆ ಅದು ಹೆಚ್ಚು ಕಾರ್ಮಿಕರನ್ನು ತೆಗೆದುಕೊಳ್ಳಲು ಪ್ರೋತ್ಸಾಹಿಸಲು (ಕೂಲಿ ಸಹಾಯಧನದ ಪ್ರಕರಣದಲ್ಲಿನಂತೆ) ನೀಡಲಾಗುತ್ತದೆ.
  • ಉದಾಹರಣೆಗಳೆಂದರೆ ರಫ್ತುಗಳನ್ನು ಪ್ರೋತ್ಸಾಹಿಸಲು ನೀಡಲಾಗುವ ಸಹಾಯಧನಗಳು; ಜೀವನನಿರ್ವಹಣಾ ವೆಚ್ಚವನ್ನು ಕಡಿಮೆ ಮಟ್ಟದಲ್ಲಿಡಲು ಕೆಲವು ಆಹಾರಗಳ ಮೇಲೆ ಸಹಾಯಧನಗಳು, ವಿಶೇಷವಾಗಿ ನಗರ ಪ್ರದೇಶಗಳಲ್ಲಿ; ಮತ್ತು ಜಮೀನಿನ ಉತ್ಪಾದನೆಯ ವಿಸ್ತರಣೆಯನ್ನು ಪ್ರೋತ್ಸಾಹಿಸಲು ಮತ್ತು ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆಯನ್ನು ಸಾಧಿಸಲು ನೀಡುವ ಸಹಾಯಧನಗಳು

 

  • ಸಹಾಯಧನ ನೀಡಿಕೆಯನ್ನು ಸ್ಥಾನಿಕ ಸರಕು ಮತ್ತು ಸೇವೆಗಳನ್ನು ಆಮದುಗಳಿಗೆ ಸಂಬಂಧಿಸಿದಂತೆ ಕೃತಕವಾಗಿ ಸ್ಪರ್ಧಾತ್ಮಕಗೊಳಿಸುವ ಒಂದು ಪ್ರಕಾರದ ಸಂರಕ್ಷಕತ್ವ ಅಥವಾ ವಾಣಿಜ್ಯ ಅಡಚಣೆ ಎಂದು ಪರಿಗಣಿಸಬಹುದು. ಸಹಾಯಧನವು ಮಾರುಕಟ್ಟೆಗಳನ್ನು ತಿರುಚಬಹುದು, ಮತ್ತು ಬೃಹತ್ ಆರ್ಥಿಕ ವೆಚ್ಚಗಳನ್ನು ಹೇರಬಲ್ಲದು.
  • ಒಂದು ಸಬ್ಸಿಡಿಯ ಸ್ವರೂಪದಲ್ಲಿ ಆರ್ಥಿಕ ಸಹಾಯವು ಒಬ್ಬರ ಸರಕಾರದಿಂದ ಬರಬಹುದು, ಆದರೆ, ಸಬ್ಸಿಡಿ ಶಬ್ದವು ಇತರರು ಅಂದರೆ ವ್ಯಕ್ತಿಗಳು ಮತ್ತು ಸರಕಾರೇತರ ಸಂಸ್ಥೆಗಳಂತಹವು ಒದಗಿಸುವ ಸಹಾಯಕ್ಕೂ, ಸಲ್ಲಬಹುದು – ಅಂಥ ಸಹಾಯವನ್ನು ಹೆಚ್ಚು ಸಾಮಾನ್ಯವಾಗಿ ದೇಣಿಗೆ ಎಂದು ಬಣ್ಣಿಸಲಾಗುತ್ತದೆಯಾದರೂ ಕೂಡ.

 

  • ಸದ್ಯ ಅಡುಗೆ ಅನಿಲ ಸಹಾಯ ಧನ ವ್ಯಾಪ್ತಿಯಲ್ಲಿ LPG ಸಿಲಿಂಡರ್‌ ಮಾತ್ರ
  • ಶೀಘ್ರ ಬೆಂಗಳೂರು ಸೇರಿದಂತೆ ಇತರ ಪ್ರಮುಖ ನಗರ, ಪಟ್ಟಣಗಳ ವ್ಯಾಪ್ತಿಯಲ್ಲಿ ಕೊಳವೆ ಮೂಲಕ ಅನಿಲ ಪೂರೈಕೆ ಮಾಡುವ ವ್ಯವಸ್ಥೆ ಬರಲಿದೆ
  • ಆಗ ಪೈಪ್‌ ಲೈನ್‌ ಮೂಲಕ ಬರುವ ಇಂಧನ ಹಾಗೂ ಇತರೆ ಜೈವಿಕ ಇಂಧನಗಳನ್ನೂ ಸಬ್ಸಿಡಿ ವ್ಯಾಪ್ತಿಗೆ ತರುವ ಚಿಂತನೆಯಿದೆ.

 

ONLY FOR PRELIMS

 

6.ಅಳಿವಿನಂಚಿನಲ್ಲಿ ತಮಿಳುನಾಡು ರಾಜ್ಯ ಪ್ರಾಣಿ ನೀಲಿ ಮೇಕೆ

ಪ್ರಮುಖ ಸುದ್ದಿ

 

  • ಇತ್ತೀಚಿನ ಅಧ್ಯಯನದ ಪ್ರಕಾರ ಹವಾಮಾನ ವೈಪರಿತ್ಯದಿಂದ ತಮಿಳುನಾಡಿನ ರಾಷ್ಟ್ರೀಯ ನೀಲಿ ಮೇಕೆ ಅವನತಿಯಂಚಿಗೆ ತಲುಪಿದ ಈ ಆಘಾತಕಾರಿ ಅಂಶವನ್ನು ಅಂತಾರಾಷ್ಟ್ರೀಯ ಎಕಾಲಜಿಕಲ್ ಇಂಜಿನೀರಿಂಗ್ ಪತ್ರಿಕೆ ಇಲ್ಲಿಗೆ ಪ್ರಕಟಿಸಿದೆ.
  • ಸುಮಾರು 2030ರ ವೇಳೆಗೆ ಕಾಡುಮೇಕೆ ಆವಾಸಸ್ಥಾನದ ಶೇ.60ರಷ್ಟನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ.
  • ಪ್ರಸ್ತುತ ಈ ಮೇಕೆಗಳು 2,500 ಮಾತ್ರ ಉಳಿದಿದ್ದು, ಇವುಗಳ ಸಂಖ್ಯೆ ಕ್ಷೀಣಿಸುತ್ತಿದೆ. ಇದರಿಂದ ಸ್ಥಳೀಯ ಪರಿಸರ ವ್ಯವಸ್ಥೆಯಲ್ಲಿ ಏರುಪೇರಾಗಲಿದೆ.
  • ನೀಲಗಿರಿ ಬೆಟ್ಟಗಳ ಪರಿಸರ ವ್ಯವಸ್ಥೆಯಲ್ಲಿ ಈ ಮೇಕೆಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಅಧ್ಯಯನ ತಿಳಿಸಿದೆ. ಇವು ಪಶ್ಚಿಮ ಘಟ್ಟಗಳಿಂದ ಕನ್ಯಾಕುಮಾರಿವರೆಗೆ ನೆಲೆಸಿವೆ.
  • ಪಶ್ಚಿಮ ಘಟ್ಟದ ಎತ್ತರದ ಹಾಗೂ ಕಿರಿದಾದ ಸೋಹಾ ಅರಣ್ಯದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ.
  • ಅಳಿವಿನಂಚಿನಲ್ಲಿರುವ ಇವುಗಳನ್ನು ಈಗಾಗಲೆ ಐಯುಸಿಎನ್ ರೆಡ್ ಡೇಟಾ ಪುಸ್ತಕದಲ್ಲಿ ಸೇರಿಸಿದ್ದು, 1972ರ ವನ್ಯಜೀವಿ ಸಂರಕ್ಷಣೆ ಕಾಯ್ದೆಯ ಷೆಡ್ಯೂಲ್ ಐ ಅಡಿ ಇವುಗಳನ್ನು ಸಂರಕ್ಷಿಸಲಾಗಿದೆ.
  • ನೀಲಗಿರಿ ಹೆಣ್ಣಿಗಿಂತ ಗಂಡು ದೊಡ್ಡದಾ ಗಿರುತ್ತದೆ. ಅಲ್ಲದೇ ಗಾಢ ಬಣ್ಣವನ್ನು ಹೊಂದಿರುತ್ತದೆ.
  • ಗಂಡು ಹೆಣ್ಣು ಎರಡಕ್ಕೂ ಕೊಂಬು ಇದ್ದು, ಗಂಡಿಗೆ 40 ಸೆಂ.ಮೀ. ಹಾಗೂ ಹೆಣ್ಣಿಗೆ 30 ಸೆಂ.ಮೀ. ಉದ್ದವಿರುತ್ತದೆ. ವಯಸ್ಕ ನೀಲಗಿರಿ 80-100ಕೆಜಿ ತೂಕ ತೂಗುತ್ತವೆ.
  • ಹುಲ್ಲುಗಾವಲು ಪ್ರದೇಶದಲ್ಲೇ ಹೆಚ್ಚುವಾಸಿಸುವ ಇವುಗಳ ಪ್ರಮುಖ ಆಹಾರ ಹುಲ್ಲು. 19ನೇ ಶತಮಾನದಲ್ಲಿ ಇವುಗಳ ಭೇಟೆ ಹೆಚ್ಚಿದ್ದರಿಂದ ಇವುಗಳು ಅಳಿವಿನಂಚಿಗೆ ತಲುಪಿವೆ.

 

 

7.ದೆಹಲಿಯಲ್ಲಿ ASI ಮುಖ್ಯ ಕಚೇರಿ

ಪ್ರಮುಖ ಸುದ್ದಿ

 

  • ಭಾರತದ ಪುರಾತತ್ವ ಸಮೀಕ್ಷೆ (ಆರ್ಕಿಯಾಲಜಿಕಲ್ ಸರ್ವೆ ಆಫ್ ಇಂಡಿಯಾ ಎಎಸ್‌ಐ)ಯ ನೂತನ ಪ್ರಧಾನ ಕಚೇರಿ ಕಟ್ಟಡ ಧೋರೊಹರ್ ಭವನವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು.
  • ಎಎಸ್‌ಐ ನೂತನ ಕಟ್ಟಡದಲಿ ಮಳೆ ನೀರು ಕೊಯ್ದು, ಸೋಲಾರ್ ಲೈಟ್ ಅಳವಡಿಸಲಾಗಿದೆ. ಅಜಂತಾ, ಎಲ್ಲೋರ ಮತ್ತು ಇತರ ಪ್ರಸಿದ್ದ ಸ್ಥಳಗಳ ಅಪರೂಪದ ಚಿತ್ರಗಳನ್ನು ಪ್ರದರ್ಶಿಸಿ ಪುರಾತತ್ವ ಪ್ರಾಮುಖ್ಯತೆ ಸಾರಲಾಗಿದೆ.
  • ಇಲ್ಲಿ ಸುಮಾರು 5 ಲಕ್ಷ ಪುಸ್ತಕ ಹಾಗೂ ನಿಯತಕಾಲಿಕೆಗಳ ಸಂಗ್ರಹವಿರುವ ಪುರಾತನ ಗ್ರಂಥಾಲಯವಿದ್ದು, ಇಲ್ಲಿ ಭಾರತ ಮತ್ತು ವಿಶ್ವದ ಮೌಲ್ಯಯುತ ಪುರಾತತ್ವ ಶಾಸ್ತ್ರ ಹಾಗೂ ಸಂಪತ್ತಿನ ಸಂಗ್ರಹಗಳನ್ನು ಇಡಲಾಗಿದೆ.
  • ಭಾರತದ ಸಂಸ್ಕೃತಿ ಮತ್ತು ಅದಕ್ಕೆ ಸಂಬಂಧಿಸಿದ ಹಲವು ಪುಸ್ತಕಗಳನ್ನು ಸಂಗ್ರಹಿಸಲಾಗಿದೆ.

 

8.ಪಿಫಾ ವಿಶ್ವಕಪ್​ ಫ್ರಾನ್ಸ್​ ಪಾಲಿಗೆ

ಪ್ರಮುಖ ಸುದ್ದಿ

 

  • ಪಿಫಾ ಫುಟ್​ಬಾಲ್​ ವಿಶ್ವಕಪ್​ನಲ್ಲಿ ಫ್ರಾನ್ಸ್​ ಗೆಲುವು ಸಾಧಿಸಿದ್ದು ಈ ಮೂಲಕ ಎರಡನೇ ಬಾರಿಗೆ ವಿಶ್ವಕಪ್​ನ್ನು ತನ್ನದಾಗಿಸಿಕೊಂಡು ಬೀಗಿದೆ.

 

  • ಮಾಸ್ಕೋದಲ್ಲಿ ನಡೆದ ಫೈನಲ್​ ಪಂದ್ಯದಲ್ಲಿ ಕ್ರೊಯೇಷ್ಯಾ ತಂಡವನ್ನು ಸೋಲಿಸಿ ಗೆಲುವಿನ ನಗೆ ಬೀರಿದೆ. ಕ್ರೊವೇಷಿಯಾ ಇದೇ ಮೊದಲಬಾರಿಗೆ ಫೈನಲ್​ ಪ್ರವೇಶಿಸಿ ರನ್ನರ್​ ಅಪ್​ ತಂಡವಾಗಿ ಹೊರಹೊಮ್ಮಿದೆ.

 

  • ಫ್ರಾನ್ಸ್​ 1998ರಲ್ಲಿ ಮೊದಲ ಸಲ ವಿಶ್ವಕಪ್​ ಗೆದ್ದಿತ್ತು. 2006ರಲ್ಲಿ ರನ್ನರ್​ ಅಪ್​ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು. ಈ ಬಾರಿ ಮತ್ತೊಮ್ಮೆ ಕಪ್​ನ್ನು ತನ್ನದಾಗಿಸಿಕೊಂಡಿದೆ.

 

CLICK HERE TO JOIN NIALP FOUNDATION COURSE-2019

 

Share