12th September MLP- ಮಾದರಿ ಉತ್ತರಗಳು

12th  SEPTEMBER  MLP

 

NOTE:: ದಯವಿಟ್ಟು  ಗಮನಿಸಿ ಕೆಳಗಿನ ಉತ್ತರಗಳು‘  ‘ಮಾದರಿ ಉತ್ತರಗಳುಎಂಬುದನ್ನು ನೆನಪಿಡಿ. ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ PROPER SOURCE ಎಲ್ಲದೇ ಇರುವುದರಿಂದ  ನಾವು ಮುಖ್ಯ ಪರೀಕ್ಷೆಯಲ್ಲಿ ನೀವು ಯಾವ ರೀತಿ ರೆಯಬೇಕು ಮತ್ತು ನಿಮ್ಮ ಸಮಯವನ್ನು ಉಳಿಸಲು ಕೊಡುತ್ತಿರುವ  ವಿಸ್ತಾರವಾದ ಸಾರಾಂಶ, ನಾವುಗಳು ಇಲ್ಲಿ ಪದಗಳ ಮಿತಿ ಗಣನೆಗೆ ತೆಗೆದುಕೊಂಡಿಲ್ಲ ಏಕೆಂದರೆ ಒಂದು ಪ್ರಶ್ನೆಗೆ ಎಷ್ಟು ಸಾದ್ಯೋವೊ ಅಷ್ಟು ಇನ್ಫಾರ್ಮಶನ್ ಕೊಟ್ಟಿರುತ್ತೆವೆ. ನಾವು ಒದಗಿಸುತ್ತಿರುವ ವಿಷಯವು ಪ್ರಶ್ನೆಯ ಬೇಡಿಕೆಯನ್ನು ಪೂರೈಸುತ್ತದೆ ಮತ್ತು ಅದೇ ಸಮಯದಲ್ಲಿ ನಿಮಗೆ ಹಿನ್ನೆಲೆ ಮಾಹಿತಿ ರೂಪದಲ್ಲಿ ಹೆಚ್ಚುವರಿ ಅಂಕಗಳನ್ನು ಗಳಿಸಲು ಅನುಕೂಲಕರವಾಗುತ್ತದೆ.

 

 

GENERAL STUDIES PAPER-1(ಸಾಮಾನ್ಯ ಅಧ್ಯಾಯ೧)

1.It is said that the many environmental concerns and massive price tag of the river-interlinking project may outweigh its projected benefits. Do you agree? Discuss critically.

 (ನದಿಅಂತರ ಸಂಪರ್ಕ ಯೋಜನೆಗೆ ಸಂಬಂಧಿಸಿದ೦ತೆ , ಪರಿಸರ ಕಾಳಜಿ ಮತ್ತು   ಯೋಜನೆಯ ವೆಚ್ಚವು  ಬೆಲೆಯು ಅದರ   ಪ್ರಯೋಜನಗಳನ್ನು ಮೀರಿಸುತ್ತದೆ ಎಂದು ಹೇಳಲಾಗುತ್ತದೆ. ನೀವು ಒಪ್ಪಿಕೊಳ್ಳುತ್ತೀರಾ ? ವಿಮರ್ಶಾತ್ಮಕವಾಗಿ ಚರ್ಚಿಸಿ. )                                   (200 ಪದಗಳು)

 

ಅಂತರ್ ರಾಜ್ಯ ನದಿ ಸಂಪರ್ಕದ ಕುರಿತು ನಡೆಸುವ  ಚರ್ಚೆ ತುಂಬಾ ಹಳೆಯದಾಗಿದೆ. 1858 ರಲ್ಲಿ ಬ್ರಿಟೀಷ್ ನೀರಾವರಿ ಎಂಜಿನಿಯರ್ ಅರ್ಥರ್ ಕಾಟನ್ ಈ ಕಲ್ಪನೆಯನ್ನು ಮೊದಲು ರೂಪಿಸಿದವರು , ಅವರನ್ನು  ಗೋದಾವರಿ ಜಿಲ್ಲೆಗಳ ‘ಡೆಲ್ಟಾ ಆರ್ಕಿಟೆಕ್ಟ್ (ವಾಸ್ತುಶಿಲ್ಪಿ)’ ಎಂದು ಕರೆಯುತ್ತಿದ್ದರು  ಏಕೆಂದರೆ ಆನಿಕಟ್ ವ್ಯವಸ್ಥೆಯ ನಿರ್ಮಾಣದ ಮೂಲಕ ನೀರಾವರಿ ಇಂಜಿನಿಯರಿಂಗ್ ನಲ್ಲಿ  ಅವರು ಮಾಡಿರುವ ಸಾಧನೆ ಗಣನೀಯ ವಾಗಿದೆ. 

ದೇಶದ ಒಂದು ಭಾಗದಲ್ಲಿ ಅತಿ ಹೆಚ್ಚು ಮಳೆಯಾದರೆ ಮತ್ತೊಂದ ಭಾಗ ಸದಾ ಬರಗಾಲದ ಛಾಯೆಯಲ್ಲಿರುತ್ತದೆ. ಈ ಅಸಮತೋಲನವನ್ನು ಹೋಗಲಾಡಿಸುವ ಸಲುವಾಗಿ ಹುಟ್ಟಿಕೊಂಡಿದ್ದೇ ಈ ನದಿ ಜೋಡಣೆ ಯೋಜನೆ. ಇದನ್ನು ಭಾರತೀಯ ನದಿಗಳ ಆಂತರಿಕ ಜೋಡಣೆಯೆಂದು ಕರೆಯಲಾಗುತ್ತದೆ. ನದಿಗಳನ್ನು ಕಾಲುವೆ ಮತ್ತು ಜಲಾಶಯಗಳ ಮೂಲಕ ಮತ್ತೊಂದು ಭಾಗದ ನದಿಗಳ ಜತೆ ಜೋಡಿಸುವುದೇ ಈ ಯೋಜನೆಯ ಗುರಿ. ಆ ಮೂಲಕ ಅತಿವೃಷ್ಟಿ ಮತ್ತು ಅನಾವೃಷ್ಟಿ ಯ ಅತಿರೇಕ ಎನ್ನಿಸುವ ಪರಿಣಾಮವನ್ನು ತಗ್ಗಿಸುವುದು ಮುಖ್ಯ ಉದ್ದೇಶವಾಗಿದೆ.

ನದಿ ಜೋಡಣೆ ಯೋಜನೆಯನ್ನು ಮೂರು ಭಾಗಗಳಲ್ಲಿ ವಿಂಗಡಿಸಲಾಗಿದೆ. 1. ಹಿಮಾಲಯನ್ ನದಿಗಳ ಜೋಡಣೆ. 2. ದಕ್ಷಿಣ ಭಾಗದ ನದಿಗಳ ಜೋಡಣೆ. 3. ಅಂತರ್ ರಾಜ್ಯ ನದಿಗಳ ಜೋಡಣೆ. ಈ ನದಿಗಳ ಜೋಡಣೆಯ ಮೇಲುಸ್ತುವಾರಿಯನ್ನು ಕೇಂದ್ರ ಜಲಸಂಪನ್ಮೂಲ ಇಲಾಖೆಯ ನ್ಯಾಷನಲ್ ವಾಟರ್ ಡೆವಲಪ್‌ಮೆಂಟ್ ಏಜೆನ್ಸಿ(ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ)- ಎನ್‌ಡಬ್ಲ್ಯೂಡಿಎ ನೋಡಿಕೊಳ್ಳುತ್ತಿದೆ.ಎನ್‌ಡಬ್ಲ್ಯೂಡಿಎ ನದಿ ಜೋಡಣೆ ಬಗ್ಗೆ ವರದಿ ತಯಾರಿಸಿದ್ದು, ಹಿಮಾಲಯದ ನದಿಗಳ ಜೋಡಣೆ ವಿಭಾಗದಲ್ಲಿ 14, ದಕ್ಷಿಣ ಭಾಗದ ನದಿಗಳ ಜೋಡಣೆ ವಿಭಾಗದಲ್ಲಿ 16 ಮತ್ತು ಅಂತರ್ ರಾಜ್ಯ ನದಿಗಳ ಜೋಡಣೆಯಲ್ಲಿ ಒಟ್ಟು 37 ಯೋಜನೆಗಳಿವೆ.

 

ನದಿ ಜೋಡಣೆಯಿಂದ ಆಗುವ  ಪ್ರಯೋಜನಗಳು:

ನದಿಗಳ ಜೋಡಣೆಯಿಂದ ಭಾರತ ಎದುರಿಸುತ್ತಿರುವ ಜಲ ಬಿಕ್ಕಟ್ಟನ್ನು…..CLICK HERE TO READ MORE

Share