15th SEPTEMBER- DAILY CURRENT AFFAIRS BRIEF

15th SEPTEMBER

 

1.ಮಾನವ ಅಭಿವೃದ್ಧಿ ಸೂಚ್ಯಂಕ: ಒಂದು ಸ್ಥಾನ ಮೇಲೇರಿದ ಭಾರತಕ್ಕೆ 130ನೇ ಸ್ಥಾನ (Human Development Index)

SOURCE-https://economictimes.indiatimes.com/news/economy/indicators/india-ranks-130-in-uns-human-development-index/articleshow/65812719.cms

 

ವಿದ್ಯಾರ್ಥಿಗಳ ಗಮನಕ್ಕೆ

ಪ್ರಿಲಿಮ್ಸ್  ಪರೀಕ್ಷೆಗಾಗಿ– ಮಾನವ ಅಭಿವೃದ್ಧಿ ಸೂಚ್ಯಂಕದ ಬಗ್ಗೆ

ಮುಖ್ಯ ಪರೀಕ್ಷೆಗಾಗಿ -ಮಾನವ ಅಭಿವೃದ್ಧಿ ಸೂಚ್ಯಂಕ ವನ್ನು  ಹೇಗೆ ಲೆಕ್ಕ ಹಾಕಲಾಗುತ್ತದೆ ? ಭಾರತವು ಸೂಚ್ಯಂಕದಲ್ಲಿ ಅದರ ಶ್ರೇಣಿಯನ್ನು ಏಕೆ ಸುಧಾರಿಸುತ್ತಿಲ್ಲ ? ಪರೀಕ್ಷಿಸಿ

ಪ್ರಮುಖ ಸುದ್ದಿ

  

  • ವಿಶ್ವಸಂಸ್ಥೆಯ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಭಾರತ ಒಂದು ಸ್ಥಾನ ಜಿಗಿತ ಕಂಡಿದೆ. ಒಟ್ಟು 189 ದೇಶಗಳ ಪೈಕಿ ಭಾರತ ಈಗ 130ನೇ ಸ್ಥಾನ ಪಡೆದುಕೊಂಡಿದೆ.
  • ವಿಶ್ವಸಂಸ್ಥೆಯ ಅಭಿವೃದ್ಧಿ ಯೋಜನೆಯಡಿ ಬಿಡುಗಡೆ ಮಾಡಲಾಗಿರುವ ಪಟ್ಟಿಯಲ್ಲಿ ಭಾರತ ಮೇಲೇರಿದೆ.

ಮುಖ್ಯ ಅಂಶಗಳು

 

  • 2017ರಲ್ಲಿ ಭಾರತದ ಮಾನವ ಅಭಿವೃದ್ಧಿ ಸೂಚ್ಯಂಕ 640 ಇತ್ತು. ಇದು ಮಾನವ ಅಭಿವೃದ್ಧಿ ವಿಭಾಗದಲ್ಲಿ ಮಧ್ಯಮ ಪ್ರಗತಿ ಸಾಧಿಸಿದ ದೇಶಗಳ ಸಾಲಿಗೆ ಸೇರಿದೆ. 1999 ರಿಂದ 2017ರವರೆಗೆ ಭಾರತದ ಸೂಚ್ಯಂಕ 0.427 ರಿಂದ 0.640ಗೆ ಏರಿದೆ. ಶೇಕಡ 50ರಷ್ಟು ಏರಿಕೆ ಕಂಡಿದೆ.

 

  • ಬಡತನ ನಿರ್ಮೂಲನೆಗಾಗಿ ಹಾಗೂ ಹಿಂದುಳಿದವರು ಮತ್ತು ಇತರರ ಏಳಿಗೆಗೆ ಭಾರತ ಕೈಗೊಂಡಿರುವ ಅಭಿವೃದ್ಧಿ ಯೋಜನೆಗಳ ಹಿನ್ನೆಲೆಯಲ್ಲಿ ಸೂಚ್ಯಂಕದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ.
  • ಇದರ ಜತೆಗೆ ಆರೋಗ್ಯ, ಶಿಕ್ಷಣ, ತಲಾವಾರು ಆದಾಯವನ್ನು ಗಣನೆಗೆ ತೆಗೆದುಕೊಂಡು ಸೂಚ್ಯಂಕ ನೀಡಲಾಗಿದೆ. ಭಾರತದಲ್ಲಿ ಅಸಮೋತಲನ ಇರುವುದರಿಂದ ಸೂಚ್ಯಂಕದ ಮೇಲೆ ಭಾರಿ ಪರಿಣಾಮ ಬೀರಿದೆ ಎಂದು ವಿಶ್ವಸಂಸ್ಥೆಯ ವರದಿಯೊಂದರಲ್ಲಿ ತಿಳಿಸಲಾಗಿದೆ. ಕೇಂದ್ರ ಮತ್ತು ಹಲವರು ರಾಜ್ಯ ಸರಕಾರಗಳ ಈ ನಿಟ್ಟಿನಲ್ಲಿ ಸಮಸ್ಯೆ ನಿವಾರಣೆಗೆ ಮುಂದಾಗಿರುವುದು ಗಮನಕ್ಕೆ ಬಂದಿದೆ. ಭಾರತದ ಆರ್ಥಿಕ ಪ್ರಗತಿಗೆ ಕೂಡ ಈ ಅಸಮತೋಲನ ಹೊಡೆತ ನೀಡಿದೆ.
  • ಭಾರತ ಸರಕಾರ ಮಾನವ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲು ಬದ್ಧತೆ ತೋರಿದೆ. ಕೆಲವು ವರ್ಷಗಳಿಂದೀಚೆಗೆ ಭಾರತದಲ್ಲಿ ಸಾಕಷ್ಟು ಬದಲಾವಣೆಗಳು ಆಗಿರುವುದು ಇದಕ್ಕೆ ಸಾಕ್ಷಿಯಾಗಿದೆ. ಮಾನವ ಅಭಿವೃದ್ಧಿಗೆ ಮತ್ತು ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಬೇಟಿ ಬಚಾವೋ, ಸ್ವಚ್ಛ ಭಾರತ ಆಂದೋಲನ, ಮೇಕ್‌ ಇನ್‌ ಇಂಡಿಯಾದಂಥ ಕ್ರಿಯಾಶೀಲ ಯೋಜನೆಗಳು ದೇಶದ ಪ್ರಗತಿಗೆ ಸಾಥ್‌ ನೀಡಿವೆ.
  • ಇದರ ಜತೆಗೆ ಕೇಂದ್ರ ಸರಕಾರ ಮಹಿಳಾ ಸಬಲೀಕರಣಕ್ಕೆ ಹಾಗೂ ಲಿಂಗಾನುಪಾತ ಸಮಸ್ಯೆ ನಿವಾರಣೆಯತ್ತಲೂ ಗಮನ ಹರಿಸಿದೆ. ಇದು ಪ್ರಗತಿಯ ಸೂಚಕವಾಗಿದೆ. ಬಾಲಕಿಯರು ಶಾಲೆಗೆ ತೆರಳುತ್ತಿರುವ ಸಂಖ್ಯೆ ಅಧಿಕವಾಗಿರುವುದು ನಿಜಕ್ಕೂ ಮೆಚ್ಚುಗೆಯ ಅಂಶವಾಗಿದೆ ಎಂದು ಪಿಕಪ್‌ ಪ್ರತಿಪಾದಿಸಿದ್ದಾರೆ.

ಪ್ರಾದೇಶಿಕವಾರು ಸೂಚ್ಯಂಕ ಪಟ್ಟಿ

 

  • ದಕ್ಷಿಣ ಏಷ್ಯಾದಲ್ಲಿ ಇತರೆ ದೇಶಗಳಿಗೆ ಹೋಲಿಸಿದರೆ ಭಾರತದ ಸೂಚ್ಯಂಕ ಗಣನೀಯವಾಗಿ ಏರಿಕೆಯಾಗಿದೆ. ಈ ಪ್ರಾಂತ್ಯದಲ್ಲಿ ಸರಾಸರಿ 638 ಸೂಚ್ಯಂಕ ಇದ್ದು, ಇದಕ್ಕೆ ಪೂರಕವಾಗಿಯೇ ಭಾರತದ ಸೂಚ್ಯಂಕವೂ ದಾಖಲಾಗಿದೆ. ದಕ್ಷಿಣ ಏಷ್ಯಾ ದೇಶಗಳ ಪೈಕಿ ಬಾಂಗ್ಲಾದೇಶ ಮತ್ತು ಪಾಕಿಸ್ತಾನ ಕ್ರಮವಾಗಿ 136 ಮತ್ತು 150ನೇ ಸ್ಥಾನದಲ್ಲಿದೆ.

 

  • ನಾರ್ವೆ, ಸ್ವಿಜರ್‌ಲೆಂಡ್‌, ಆಸ್ಟ್ರೇಲಿಯಾ, ಐಸ್‌ಲ್ಯಾಂಡ್‌, ಜರ್ಮನಿ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಮುಂಚೂಣಿಯಲ್ಲಿದೆ. ಸೆಂಟ್ರಲ್‌ ಆಫ್ರಿಕಾ ರಿಪಬ್ಲಿಕನ್‌ನ ನಿಗರ್‌, ದಕ್ಷಿಣ ಸೂಡಾನ್‌, ಚಾದ್‌ ಮತ್ತು ಬುರಾಂಡಿ ದೇಶಗಳು ಅತಿ ಕಡಿಮೆ ಸೂಚ್ಯಂಕ ಪಡೆದು ಕೊನೆಯ ಸಾಲಿನಲ್ಲಿದೆ…..CLICK HERE TO READ MORE
Share