1st TO 7th-NOVEMBER CURRENT AFFAIRS

1st TO 7th-NOVEMBER

1.ಕೃಷಿ ವಿಕಾಸ ಯೋಜನೆಯ ಪರಿಷ್ಕರಣೆ

ಪ್ರಮುಖ ಸುದ್ದಿ

  • ಕೃಷಿ ವಲಯದಲ್ಲಿ ಉದ್ಯಮಶೀಲತೆಗೆ ಉತ್ತೇಜನ ನೀಡುವ ಸಲುವಾಗಿ ದಶಕಗಳಷ್ಟು ಹಳೆಯ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯನ್ನು (ಆರ್‌ಕೆವಿವೈ) ಪರಿಷ್ಕರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಮುಖ್ಯ ಅಂಶಗಳು

  • ಪರಿಷ್ಕೃತ ಯೋಜನೆಯ ಅಡಿಯಲ್ಲಿ ಕೃಷಿ ಕ್ಷೇತ್ರದಲ್ಲಿ ಕೊಯ್ಲಿನ ನಂತರದ ಮೂಲಸೌಕರ್ಯಗಳನ್ನು ಇನ್ನಷ್ಟು ಸುಧಾರಿಸುವ ಗುರಿಯನ್ನು ಅದು ಹೊಂದಿದೆ.
  • ಈ ಯೋಜನೆಗೆ ‘ಆರ್‌ಕೆವಿವೈ–ಆರ್‌ಎಎಫ್‌ಟಿಎಎಆರ್‌ ಎಂದು ಮರು ನಾಮಕರಣ ಮಾಡಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದ ಸಂಪುಟ ಸಮಿತಿ ಒಪ್ಪಿಗೆ ನೀಡಿದೆ.
  • ರೆಮ್ಯುನರೇಟಿವ್‌ ಅಪ್ರೋಚಸ್‌ ಫಾರ್‌ ಅಗ್ರಿಕಲ್ಚರ್‌ ಅಂಡ್ ಅಲೈಡ್‌ ಸೆಕ್ಟರ್‌ ರಿಜುವಿನೇಷನ್‌ (ಕೃಷಿ ಮತ್ತು ಅದಕ್ಕೆ ಸಂಬಂಧಿಸಿದ ವಲಯಗಳ ಪುನಶ್ಚೇತನಕ್ಕೆ ಪ್ರೋತ್ಸಾಹಕರ ವಿಧಾನಗಳು) ಎಂಬುದು ಆರ್‌ಎಎಫ್‌ಟಿಎಎಆರ್‌ನ ವಿಸ್ತೃತ ರೂಪ.
  • ಈಶಾನ್ಯ ಮತ್ತು ಹಿಮಾಲಯ ರಾಜ್ಯಗಳನ್ನು ಬಿಟ್ಟು ಉಳಿದ ರಾಜ್ಯಗಳಿಗೆ ಈ ಯೋಜನೆಗೆ 60:40ರ ಅನುಪಾತದಲ್ಲಿ ಕೇಂದ್ರ ಸರ್ಕಾರ ಅನುದಾನ ಹಂಚಿಕೆ ಮಾಡಲಿದೆ. ಈಶಾನ್ಯ ಮತ್ತು ಹಿಮಾಲಯ ರಾಜ್ಯಗಳಿಗೆ ಈ ಪ್ರಮಾಣ 90:10ರ ಅನುಪಾತದಲ್ಲಿರಲಿದೆ.
  • ಇದಲ್ಲದೇ, ಯೋಜನೆಗೆ ವಾರ್ಷಿಕವಾಗಿ ನೀಡುವ ಅನುದಾನದ ಶೇ 20ರಷ್ಟು ಮೊತ್ತವನ್ನು (ಹೆಚ್ಚುವರಿಯಾಗಿ) ಇದರ ಅಡಿಯಲ್ಲಿ ಬರುವ ರಾಷ್ಟ್ರೀಯ ಆದ್ಯತೆಗಳ ಉಪ ಯೋಜನೆಗಳಿಗಾಗಿ ಕೇಂದ್ರ ಒದಗಿಸಲಿದೆ.
  • ಶೇ 10ರಷ್ಟು ಮೊತ್ತವನ್ನು ಕೃಷಿ ಆಧರಿತ ಉದ್ಯಮದ ಅಭಿವೃದ್ಧಿಗೆ, ಕೌಶಲ ಅಭಿವೃದ್ಧಿ, ಕೃಷಿ ಉದ್ಯಮ ಸ್ಥಾಪಿಸುವವರಿಗೆ ಹಣಕಾಸಿನ ನೆರವು ನೀಡುವುದಕ್ಕೆ ಬಳಸಲಿದೆ.

 

  • ರಸಗೊಬ್ಬರ ಸಬ್ಸಿಡಿ ಪಾವತಿ: 2016–17ನೇ ಸಾಲಿನ ರಸಗೊಬ್ಬರ ಸಬ್ಸಿಡಿಯ ಬಾಕಿ ಮೊತ್ತ 10 ಸಾವಿರ ಕೋಟಿಯನ್ನು ಕಂಪೆನಿಗಳಿಗೆ ವಿಶೇಷ ಬ್ಯಾಂಕಿಂಗ್‌ ವ್ಯವಸ್ಥೆ (Special Banking Arrangement (SBA))ಮೂಲಕ ಪಾವತಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ.

 

ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಬಗ್ಗೆ (RKVY)

  • ಇದು ಕೇಂದ್ರ ಅನುದಾನಿತ ಯೋಜನೆಯಾಗಿದ್ದು, 11ನೇ ಪಂಚವಾರ್ಷಿಕ ಯೋಜನೆ ಅವಧಿಯಲ್ಲಿ ಜಾರಿಗೊಳಿಸಲಾಗಿದೆ.
  • ಇದರಡಿ, ಕೃಷಿ ಅಭಿವೃದ್ಧಿ ಮಟ್ಟವನ್ನು ಶೇ. 4ರಷ್ಟು ಕಾಯ್ದುಕೊಳ್ಳುವ ಉದ್ದೇಶ ಹೊಂದಲಾಗಿತ್ತು.

 

 

  1. ರಾಜಕಾರಣಿಗಳ ವಿಚಾರಣೆಗೆ ವಿಶೇಷ ನ್ಯಾಯಾಲಯ

 ಪ್ರಮುಖ ಸುದ್ದಿ

  • ರಾಜಕಾರಣಿಗಳ ವಿರುದ್ಧ ಇರುವ ಅಪರಾಧ ಪ್ರಕರಣಗಳ ತ್ವರಿತ ವಿಚಾರಣೆಗೆ ವಿಶೇಷ ನ್ಯಾಯಾಲಯ ಸ್ಥಾಪನೆಗೆ ಸುಪ್ರೀಂ ಕೋರ್ಟ್‌ ಒಲವು ತೋರಿದೆ. ಇಂತಹ ನ್ಯಾಯಾಲಯ ಸ್ಥಾಪನೆ ‘ರಾಷ್ಟ್ರೀಯ ಹಿತಾಸಕ್ತಿ’ಯ ಕ್ರಮ ಎಂದು ಹೇಳಿದೆ.

ಮುಖ್ಯ ಅಂಶಗಳು

  • ವಿಶೇಷ ನ್ಯಾಯಾಲಯ ಸ್ಥಾಪನೆಯ ಯೋಜನೆಯನ್ನು ತನ್ನ ಮುಂದೆ ಇರಿಸುವಂತೆ ಕೇಂದ್ರಕ್ಕೆ ಸುಪ್ರೀಂ ಕೋರ್ಟ್‌ ಸೂಚಿಸಿದೆ.
  • 2014ರಲ್ಲಿ ನಡೆದ ಚುನಾವಣೆಗಳಿಗೆ ನಾಮಪತ್ರ ಸಲ್ಲಿಸುವಾಗ ನೀಡಿದ ಮಾಹಿತಿಯಂತೆ ಸಂಸದರು ಮತ್ತು ಶಾಸಕರ ವಿರುದ್ಧ ಇರುವ 1,581 ಅಪರಾಧ ಪ್ರಕರಣಗಳ ವಿವರಗಳನ್ನು ಸಲ್ಲಿಸುವಂತೆ ಸುಪ್ರೀಂ ಕೋರ್ಟ್‌ ಹೇಳಿದೆ.

 

  • 2014ರಲ್ಲಿ ನೀಡಿದ ನಿರ್ದೇಶನದಂತೆ ನಂತರದ ಒಂದು ವರ್ಷದಲ್ಲಿ ಎಷ್ಟು ಪ್ರಕರಣಗಳು ವಿಲೇವಾರಿ ಆಗಿವೆ, ಎಷ್ಟು ಜನರು ತಪ್ಪಿತಸ್ಥರು ಎಂದು ಘೋಷಣೆ ಆಗಿದೆ ಮತ್ತು ಎಷ್ಟು ಮಂದಿಯನ್ನು ಖುಲಾಸೆ ಮಾಡಲಾಗಿದೆ ಎಂಬುದನ್ನು ತಿಳಿಸುವಂತೆ ಕೇಂದ್ರಕ್ಕೆ ಸುಪ್ರೀಂ ಕೋರ್ಟ್‌ ಸೂಚಿಸಿದೆ.

 

  • 2014ರ ಬಳಿಕ ಸಂಸದರು ಮತ್ತು ಶಾಸಕರ ವಿರುದ್ಧ ಎಷ್ಟು ಪ್ರಕರಣಗಳು ದಾಖಲಾಗಿವೆ ಎಂಬ ಬಗ್ಗೆಯೂ ಮಾಹಿತಿ ನೀಡಲು ತಿಳಿಸಿದೆ.

 

  • ರಾಜಕೀಯವನ್ನು ಅಪರಾಧಮುಕ್ತಗೊಳಿಸಬೇಕು ಮತ್ತು ಅದಕ್ಕಾಗಿ ವಿಶೇಷ ನ್ಯಾಯಾಲಯ ಸ್ಥಾಪಿಸುವುದಕ್ಕೆ ವಿರೋಧ ಇಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ ಪೀಠಕ್ಕೆ ತಿಳಿಸಿತು.

 

  • ಅಪರಾಧ ಪ್ರಕರಣಗಳಲ್ಲಿ ತಪ್ಪಿತಸ್ಥರು ಎಂದು ಸಾಬೀತಾದ ವ್ಯಕ್ತಿಗಳು ಜೀವನಪರ್ಯಂತ ಚುನಾವಣೆಗೆ ಸ್ಪರ್ಧಿಸದಂತೆ ನಿಷೇಧ ಹೇರಬೇಕು ಎಂದು ಚುನಾವಣಾ ಆಯೋಗ ಹಾಗೂ ಕಾನೂನು ಆಯೋಗ ನೀಡಿರುವ ಶಿಫಾರಸುಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಆತ್ಮಾರಾಮ ನಾಡಕರ್ಣಿ ಹೇಳಿದರು.

 

  • ರಾಜಕಾರಣಿಗಳ ವಿರುದ್ಧದ ಅಪರಾಧ ಪ್ರಕರಣಗಳ ವಿಚಾರಣೆಗೆ ರಚಿಸಲಾಗುವ ವಿಶೇಷ ನ್ಯಾಯಾಲಯಗಳನ್ನು ಈಗಾಗಲೇ ಇರುವ ಸಿಬಿಐ ವಿಶೇಷ ನ್ಯಾಯಾಲಯಗಳ ಜತೆ ಸಂಯೋಜಿಸಬಹುದೇ ಎಂಬ ಕೇಂದ್ರದ ಪ್ರಶ್ನೆಗೆ, ಅಂತಹ ಕೆಲಸ ಮಾಡಲೇಬೇಡಿ ಎಂದು ಸುಪ್ರೀಂ ಕೋರ್ಟ್ ತಿಳಿಸಿತು.

 

  • ಅಪರಾಧ ಸಾಬೀತಾದ ವ್ಯಕ್ತಿಗಳು ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ಜೀವನಪರ್ಯಂತ ನಿಷೇಧ ಹೇರಬೇಕು ಎಂದು ಕೋರಿ ದೆಹಲಿಯ ವಕೀಲ ಮತ್ತು ಬಿಜೆಪಿ ಮುಖಂಡ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಸಲ್ಲಿಸಿದ ಅರ್ಜಿಯ ವಿಚಾರಣೆ ವೇಳೆ ಈ ಸೂಚನೆಗಳನ್ನು ನೀಡಲಾಗಿದೆ. ಚುನಾವಣಾ ಆಯೋಗವು ಉಪಾಧ್ಯಾಯ ಅವರಿಗೆ ಬೆಂಬಲ ನೀಡಿದೆ. ಆದರೆ ಜೀವನಪರ್ಯಂತ ನಿಷೇಧ ಹೇರುವ ಪ್ರಸ್ತಾವಕ್ಕೆ ಕೇಂದ್ರ ಸರ್ಕಾರ ವಿರೋಧ ವ್ಯಕ್ತಪಡಿಸಿದೆ. ರಾಜಕಾರಣವನ್ನು ಅಪರಾಧಮುಕ್ತಗೊಳಿಸಲು ಬೇಕಿರುವ ಎಲ್ಲ ಕ್ರಮಗಳನ್ನೂ ಕೈಗೊಳ್ಳುವುದಾಗಿ ಹೇಳಿದೆ.

ಸುಪ್ರೀಂಹೇಳಿದ್ದೇನು?

 

  • ಸಂಸದರು ಮತ್ತು ಶಾಸಕರ ವಿರುದ್ಧ ಇರುವ 1,581 ಅಪರಾಧ ಪ್ರಕರಣಗಳನ್ನು (2014ರಲ್ಲಿ ನಡೆದ ಚುನಾವಣೆಗಳಿಗೆ ಸಲ್ಲಿಸಿದ ನಾಮಪತ್ರದಲ್ಲಿ ನೀಡಿದ ಮಾಹಿತಿ ಪ್ರಕಾರ) ಒಂದು ವರ್ಷದಲ್ಲಿ ವಿಲೇವಾರಿ ಮಾಡಬೇಕು ಎಂದು 2014ರ ಮಾರ್ಚ್‌ 10ರಂದು ಸುಪ್ರೀಂ ಕೋರ್ಟ್‌ ಸೂಚಿಸಿತ್ತು

 

  • ಈ ಪ್ರಕರಣಗಳಲ್ಲಿ ಎಷ್ಟು ವಿಲೇವಾರಿ ಆಗಿವೆ, ಎಷ್ಟು ಮಂದಿ ಖುಲಾಸೆ ಆಗಿದ್ದಾರೆ ಎಂಬ ಮಾಹಿತಿ ಸಲ್ಲಿಸಲು ಸೂಚನೆ

 

  • 2014ರ ಬಳಿಕ ಶಾಸಕ ಅಥವಾ ಸಂಸದರ ವಿರುದ್ಧ ಮತ್ತೆ ಅಪರಾಧ ಪ್ರಕರಣಗಳು ದಾಖಲಾಗಿವೆಯೇ?

 

  • ವಿಶೇಷ ನ್ಯಾಯಾಲಯ ಸ್ಥಾಪನೆ ಯೋಜನೆ, ಅದಕ್ಕೆ ತಗಲುವ ವೆಚ್ಚದ ಮಾಹಿತಿ

 

3.ಎಥನಾಲ್ ಮಿಶ್ರಿತ ಪೆಟ್ರೋಲ್ ಕಾರ್ಯಕ್ರಮದಡಿ ಎಥನಾಲ್ ಬೆಲೆ ಪರಿಷ್ಕರಣಿಗೆ ಸಂಪುಟ ಒಪ್ಪಿಗೆ

ಪ್ರಮುಖ ಸುದ್ದಿ 

  • ಎಥನಾಲ್ ಮಿಶ್ರಿತ ಪೆಟ್ರೋಲ್ (ಇಬಿಪಿ) ಯೋಜನೆಯಡಿಯಲ್ಲಿ ಎಥೆನಾಲ್ ಅನ್ನು ಸಾರ್ವಜನಿಕ ವಲಯ ತೈಲ ಮಾರುಕಟ್ಟೆ ಸಂಸ್ಥೆಗಳಿಗೆ ಪೂರೈಸಲು ಎಥನಾಲ್ ಬೆಲೆ ಪರಿಷ್ಕರಣೆಗೆ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿ (ಸಿಸಿಇಎ) ಅನುಮೋದನೆ ನೀಡಿದೆ.
  • ಪರಿಷ್ಕೃತ ಬೆಲೆ ಪ್ರಕಾರ ಪ್ರತಿ ಲೀಟರ್ ಎಥೆನಾಲ್ ಗೆ ರೂ 85 ನಿಗದಿ ಪಡಿಸಲಾಗಿದೆ. ಜಿಎಸ್ಟಿ ಮತ್ತು ಸಾರಿಗೆ ವೆಚ್ಚ ಹೆಚ್ಚುವರಿಯಾಗಿ ಪಾವತಿಸಲಾಗುವುದು.

ಹಿನ್ನಲೆ:

  • ಎಥೆನಾಲ್ ಅನ್ನು ಸಮರ್ಪಕವಾಗಿ ಸರಬರಾಜು ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ 2014 ಡಿಸೆಂಬರ್ ನಲ್ಲಿ ಎಥೆನಾಲ್ ಮಿಶ್ರಿತ ಪೆಟ್ರೋಲ್ ಕಾರ್ಯಕ್ರಮದಡಿ ಎಥೆನಾಲ್ ಬೆಲೆ ಪರಿಷ್ಕರಣೆ ಜಾರಿಗೆ ತಂದಿದೆ.
  • ಅದರಂತೆ 2014-15 ಮತ್ತು 2015-16 ರ ಅವಧಿಯಲ್ಲಿ ತೆರಿಗೆ ಮತ್ತು ಸಾರಿಗೆ ವೆಚ್ಚ ಸೇರಿ ಎಥೆನಾಲ್ ಅನ್ನು ರೂ 50 ರಿಂದ ರೂ 49.50 ಬೆಲೆಯನ್ನು ಸರ್ಕಾರವು ನಿಗದಿಪಡಿಸಿದತ್ತು. ಇದರ ಪ್ರತಿಫಲವಾಗಿ 2013-14 ರಲ್ಲಿ 38 ಕೋಟಿ ಲೀಟರ್ ನಷ್ಟಿದ್ದ ಎಥೆನಾಲ್ ಸರಬರಾಜು 2015-16 ರಲ್ಲಿ 111 ಕೋಟಿ ಲೀಟರ್ ಏರಿಕೆ ಕಂಡಿತ್ತು.

 

ಎಥೆನಾಲ್ ಮಿಶ್ರಣ:

  • ಪೆಟ್ರೋಲ್ ನೊಂದಿಗೆ ಎಥೆನಾಲ್ ಅನ್ನು ಬೆರೆಸುವ ವಿಧಾನವನ್ನು ಎಥೆನಾಲ್ ಮಿಶ್ರಿತ ಪೆಟ್ರೋಲ್ ಎನ್ನಲಾಗುತ್ತದೆ.
  • ಈ ಮಿಶ್ರಣವನ್ನು ಎಥೆನಾಲ್ ಇಂಧನ ಅಥವಾ ಗ್ಯಾಸೊಹಾಲ್ ಎನ್ನಲಾಗುವುದು. ಇದೊಂದು ಅರೆ ನವೀಕರಿಸಬಹುದಾದ ಇಂಧನ.
  • ಎಥೆನಾಲ್ ಒಂದು ಜೈವಿಕ ಇಂಧನವಾಗಿದ್ದು ಕಬ್ಬಿನ ತ್ಯಾಜ್ಯ, ಜೋಳ ಮತ್ತು ಸೋರ್ಗಮ್ ಇತ್ಯಾದಿಗಳಿಂದ ತಯಾರಿಸಲಾಗುವುದು.
  • ಭಾರತದಲ್ಲಿ ಎಥೆನಾಲ್ ಮಿಶ್ರಣ ಕಾರ್ಯಕ್ರಮವನ್ನು 2001 ರಿಂದ ಪರಿಚಯಿಸಲಾಗಿದೆ. ವಾಹನ ಇಂಧನ ನೀತಿ 2003 ರಲ್ಲಿ ಮೊದಲ ಬಾರಿಗೆ ಎಥೆನಾಲ್ ಮಿಶ್ರಣವನ್ನು ಉಲ್ಲೇಖಿಸಲಾಗಿದೆ. ರಾಷ್ಟ್ರೀಯ ಜೈವಿಕ ಇಂಧನ ನೀತಿ-2009ರ ಅನ್ವಯ ಎಲ್ಲಾ ತೈಲ ಕಂಪನಿಗಳು ಶೇ 5% ಎಥೆನಾಲ್ ಅನ್ನು ಪೆಟ್ರೋಲ್ ನೊಂದಿಗೆ ಮಿಶ್ರಣ ಮಾಡುವುದು ಕಡ್ಡಾಯವಾಗಿದೆ.

 

ಹೆಚ್ಚಿನ ಮಾಹಿತಿ

  • ಡೀಸೆಲ್‌ಗೆ ಜತ್ರೊಪಾ ಬೀಜದ(Jatropa seed) ತೈಲ ಬೆರೆಸಿದಂತೆ, ಪೆಟ್ರೋಲ್‌ಗೆ ಕಬ್ಬಿನಿಂದ ತೆಗೆದ ಎಥನಾಲ್ ಬಳಸುವ ಪದ್ಧತಿಯೂ ಇದೆ. ಇದನ್ನು ಮೊದಲು ಪ್ರಾಯೋಗಿಕವಾಗಿ ಜಾರಿಗೆ ತಂದಿದ್ದು ಬ್ರೆಜಿಲ್. 37 ವರ್ಷಗಳ ಹಿಂದೆ ಜಗತ್ತಿನಲ್ಲಿ ಎಥನಾಲ್ ಇಂಧನ ಉತ್ಪಾದಿಸುತ್ತಿರುವ ಎರಡನೇ ಅತಿ ದೊಡ್ಡ ರಾಷ್ಟ್ರ ಬ್ರೆಜಿಲ್.
  • ಬ್ರೆಜಿಲ್‌ನಲ್ಲಿ ಯಥೇಚ್ಛವಾಗಿರುವ ಕೃಷಿ ಭೂಮಿ ಹಾಗೂ ಕಬ್ಬಿನ ಬೆಳೆಯಿಂದಾಗಿ ಎಥನಾಲ್ ಉತ್ಪಾದನೆ ಸಹಜವಾಗಿ ಅಧಿಕವಾಗಿದೆ.

ಉಪಯೋಗಗಳು

 

  • ಆಲ್ಕೋಹಾಲ್‌ನ ಒಂದು ರೂಪವಾಗಿರುವ ಎಥನಾಲ್, ಪೆಟ್ರೋಲ್ ಅಥವಾ ಡೀಸೆಲ್‌ಗೆ ಬೆರೆಸಿದಲ್ಲಿ ವಾಹನದ ಕಾರ್ಯಕ್ಷಮತೆ ಉತ್ತಮವಾಗುವುದರ ಜತೆಗೆ ವಾಹನದಿಂದ ವಾತಾವರಣಕ್ಕೆ ಬಿಡುಗಡೆಯಾಗುವ ಇಂಗಾಲದ ಡೈ ಆಕ್ಸೈಡ್ ಪ್ರಮಾಣವೂ ತಗ್ಗಲಿದೆ.
  • ಕಬ್ಬನ್ನು ಅರೆದು ಅದರ ರಸದಿಂದ ಉತ್ಪಾದಿಸಲಾಗುವ ಎಥನಾಲ್‌ನಲ್ಲಿ ಕೈಗಾರಿಕಾ ಆಲ್ಕೋಹಾಲ್, ಪೋಟಬಲ್ ಆಲ್ಕೋಹಾಲ್ ಹಾಗೂ ಎಥನಾಲ್ ಎಂಬ ಮೂರು ಉತ್ಪನ್ನಗಳು ಲಭ್ಯ.

 

 

  • ಭಾರತದಲ್ಲಿ ಸಕ್ಕರೆ ಕಾರ್ಖಾನೆಗಳ ಸಂಖ್ಯೆ ಏರುತ್ತಿದ್ದಂತೆ ಎಥನಾಲ್ ಉತ್ಪಾದನೆಯೂ ಹೆಚ್ಚಾಗುತ್ತಿದೆ. ಹೀಗಾಗಿ ತೈಲ ಕಂಪೆನಿಗಳಿಗೆ ಕೈಗೆಟಕುವ ಬೆಲೆಗೆ ಎಥನಾಲ್ ಸಿಗುತ್ತಿದೆ.
  • ಪೆಟ್ರೋಲ್‌ಗೆ ಎಥನಾಲ್ ಸೇರಿಸುವುದರಿಂದ ಪೆಟ್ರೋಲ್ ಆಮದು ಮೇಲಿನ ಹೊರೆಯೂ ಇಳಿಮುಖವಾಗಲಿದೆ. ಎಥನಾಲನ್ನು ಕೇವಲ ಪೆಟ್ರೋಲ್‌ಗೆ ಮಾತ್ರವಲ್ಲ ಡೀಸೆಲ್‌ಗೂ ಬೆರೆಸಬಹುದು.

 

  1. ಮಾನಸಿಕ ರೋಗಿಗಳಲ್ಲಿ ಶೇ.90ರಷ್ಟು ಮಂದಿಗೆ ಸೂಕ್ತ ವೈದ್ಯಕೀಯ ಸೌಲಭ್ಯ ದೊರಕುತ್ತಿಲ್ಲ: ರಾಷ್ಟ್ರಪತಿ

 ಪ್ರಮುಖ ಸುದ್ದಿ

  • ಭಾರತದಲ್ಲಿ ಮಾನಸಿಕ ಕಾಯಿಲೆಯಿಂದ ಬಳಲುತ್ತಿರುವವರಲ್ಲಿ ಶೇಕಡಾ 90ರಷ್ಟು ಜನರಿಗೆ ಸೂಕ್ತ ವೈದ್ಯಕೀಯ ಸೌಲಭ್ಯ ಸಿಗುವುದಿಲ್ಲ. ಮುಂದಿನ ದಿನಗಳಲ್ಲಿ ಸಂಭಾವ್ಯ ಮಾನಸಿಕ ಆರೋಗ್ಯದ ಸಾಂಕ್ರಾಮಿಕ ರೋಗವನ್ನು ಎದುರಿಸಬೇಕಾಗಬಹುದು
  • ವಿಶ್ವ ಆರೋಗ್ಯ ಸಂಸ್ಥೆಯ ಅಂಕಿಅಂಶವನ್ನು ಉಲ್ಲೇಖಿಸಿ ಜಾಗತಿಕ ಮಟ್ಟದಲ್ಲಿ ಭಾರತದಲ್ಲಿ ಅತಿ ಹೆಚ್ಚು ಮಂದಿ ಮಾನಸಿಕ ಅನಾರೋಗ್ಯದಿಂದ ಬಳಲುತ್ತಿದ್ದಾರೆ

 

  • 2016ರ ರಾಷ್ಟ್ರೀಯ ಮಾನಸಿಕ ಆರೋಗ್ಯ ಸಮೀಕ್ಷೆ ಪ್ರಕಾರ ಭಾರತದ ಜನಸಂಖ್ಯೆಯ ಶೇಕಡಾ 14ರಷ್ಟು ಜನರಿಗೆ ಮಾನಸಿಕ ಆರೋಗ್ಯದ ಚಿಕಿತ್ಸೆಯ ನೆರವು ಬೇಕಾಗಿದೆ.
  • ಶೇಕಡಾ 2ರಷ್ಟು ಜನರು ತೀವ್ರ ಮಾನಸಿಕ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಮಾನಸಿಕ ಕಾಯಿಲೆಗೊಳಗಾದ ಸುಮಾರು 200 ಮಂದಿ ಭಾರತೀಯರು ಪ್ರತಿವರ್ಷ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಆತ್ಮಹತ್ಯೆಗೆ ಪ್ರಯತ್ನಿಸುವವರ ಸಂಖ್ಯೆ ಇನ್ನೂ ಅಧಿಕವಾಗಿದೆ .

 

  • ಇದು ಆತಂಕಪಡುವ ಅಂಕಿಅಂಶವಾಗಿದೆ. ಮಹಾನಗರ ಪಾಲಿಕೆಗಳಲ್ಲಿ ವಾಸಿಸುತ್ತಿರುವ ಮತ್ತು ಯುವ ವಯಸ್ಸಿನವರು, ಮಕ್ಕಳು, ಹದಿಹರೆಯದವರು ಮಾನಸಿಕ ಕಾಯಿಲೆಗೀಡಾಗುವುದು ಕಳವಳಕಾರಿ ಸಂಗತಿಯಾಗಿದೆ. ಭಾರತದಲ್ಲಿ ಶೇಕಡಾ 65ರಷ್ಟು ಜನರು 35 ವರ್ಷಕ್ಕಿಂತ ಒಳಗಿನವರಾಗಿದ್ದು ಇಂತವರು ಮಾನಸಿಕ ಕಾಯಿಲೆಗೀಡಾಗುವುದು ಖೇದಕರ ವಿಚಾರ.

ವಾಯುಮಾಲಿನ್ಯದಿಂದ ಮಾನಸಿಕ ಕಾಯಿಲೆ ಹೇಗೆ ?

 

  • ನಗರೀಕರಣದಿಂದ ವಾಯುಮಾಲಿನ್ಯ ಹೆಚ್ಚುತ್ತಿದೆ. ಗಾಳಿಯಲ್ಲಿ ಕಲುಷಿತ ಅಂಶಗಳು ಸೇರಿಕೊಳ್ಳುವುದರಿಂದ ಕೇವಲ ಶ್ವಾಸಕೋಶ ಸಮಸ್ಯೆ ಮಾತ್ರವಲ್ಲ, ಮಾನಸಿಕ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತವೆ ಎಂದು ವಾಷಿಂಗ್ಟನ್ ವಿಶ್ವವಿದ್ಯಾಲಯದ ಅಧ್ಯಯನವೊಂದು ಎಚ್ಚರಿಸಿದೆ.
  • ಕಲುಷಿತ ಗಾಳಿ ಸೇವನೆಯಿಂದ ಹೃದಯ ಹಾಗೂ ಶ್ವಾಸಕೋಶ ಸಂಬಂಧಿ ಸಮಸ್ಯೆಗಳು ಮತ್ತು ಅಸ್ತಮಾದಂಥ ರೋಗಗಳು ಕಾಣಿಸಿಕೊಳ್ಳುವ ಬಗ್ಗೆ ಈಗಾಗಲೇ ಹಲವು ಅಧ್ಯಯನಗಳು ನಡೆದಿವೆ.
  • ಆದರೆ ವಾಯುಮಾಲಿನ್ಯ ಹಾಗೂ ಮಾನಸಿಕ ಆರೋಗ್ಯದ ನಡುವಣ ಸಂಬಂಧದ ಕುರಿತು ಇದೇ ಮೊದಲ ಬಾರಿಗೆ ಅಧ್ಯಯನ ನಡೆಸಲಾಗಿದೆ ಎಂದು ತಜ್ಞರು ತಿಳಿಸಿದ್ದಾರೆ. ಅಧ್ಯಯನ ತಂಡ ಅಮೆರಿಕದ ಹಲವು ಮಹಾನಗರಗಳಿಗೆ ತೆರಳಿ ಜನರನ್ನು ಅಧ್ಯಯನಕ್ಕೆ ಒಳಪಡಿಸಿತ್ತು.
  • ಈ ವೇಳೆ, ಗಾಳಿಯಲ್ಲಿರುವ ಕಲುಷಿತ ಅಂಶಗಳು ವ್ಯಕ್ತಿಯ ಮಾನಸಿಕ ಆರೋಗ್ಯದ ಮೇಲೆ ಪ್ರಭಾವ ಬೀರಿರುವ ವಿಚಾರ ಬೆಳಕಿಗೆ ಬಂದಿತ್ತು. ಗಾಳಿ ಎಷ್ಟು ಪ್ರಮಾಣದಲ್ಲಿ ಕಲುಷಿತವಾಗಿದೆ ಎಂಬುದು ಕೂಡ ಇಲ್ಲಿ ಮುಖ್ಯವಾಗುತ್ತದೆ ಎಂದು ಅಧ್ಯಯನದ ವರದಿಯಲ್ಲಿ ಹೇಳಲಾಗಿದೆ.

 

  1. ಉತ್ತರ ಪ್ರದೇಶದಲ್ಲಿ ಭಾರತದ ಮೊದಲ ಬ್ಲಾಕ್ ಬಕ್ (Blackbuck) ಸಂರಕ್ಷಣಾ ವಲಯ

ಪ್ರಮುಖ ಸುದ್ದಿ

  • ಭಾರತದ ಮೊದಲ ಬ್ಲಾಕ್ ಬಕ್ (ಕೃಷ್ಣಮೃಗ) ಸಂರಕ್ಷಣಾ ವಲಯ ಉತ್ತರ ಪ್ರದೇಶದ ಅಲಹಬಾದ್ ಬಳಿ ಸ್ಥಾಪನೆಯಾಗಲಿದೆ. ಈ ಸಂಬಂಧ ಉತ್ತರ ಪ್ರದೇಶ ಸರ್ಕಾರದ ಸಚಿವ ಸಂಪುಟ ಅನುಮೋದನೆ ನೀಡಿದೆ. ಬ್ಲಾಕ್ ಬಕ್ ಗಳ ಸಂರಕ್ಷಣೆಗಾಗಿ ಪ್ರತ್ಯೇಕವಾಗಿ ಮೀಸಲಿಡಲಾದ ಸಂರಕ್ಷಣಾ ವಲಯ ಇದಾಗಲಿದೆ.
  • ವನ್ಯಜೀವಿ ಸಂರಕ್ಷಣಾ ಕಾಯಿದೆ, 1972ರ ಸೆಕ್ಷನ್ 36 ಎ (1) ಮತ್ತು (2) ರಡಿ ಸಂರಕ್ಷಣಾ ವಲಯವನ್ನು ರಾಜ್ಯ ಸರ್ಕಾರ ಘೋಷಿಸಿದೆ.

ಪ್ರಮುಖಾಂಶಗಳು:

  • ಕಲ್ಲು ಮತ್ತು ಶುಷ್ಕ ಭೂಪ್ರದೇಶಗಳಿಗೆ ಹೆಸರುವಾಸಿಯಾಗಿರುವ ಮೆಜ ಅರಣ್ಯ ವಿಭಾಗದ 126 ಹೆಕ್ಟೇರ್ ಪ್ರದೇಶದಲ್ಲಿ ಈ ಸಂರಕ್ಷಣಾ ವಲಯನ್ನು ಸ್ಥಾಪಿಸಲಾಗುವುದು. ಸುಮಾರು 350 ಬ್ಲಾಕ್ ಬಕ್ ಗಳು ಈ ಪ್ರದೇಶದಲ್ಲಿ ಇರುವುದಾಗಿ ಅಂದಾಜಿಸಲಾಗಿದೆ.
  • ಇದರಿಂದ ಬ್ಲಾಕ್ ಬಕ್ಗಳನ್ನು ಪರಿಣಾಮಕಾರಿಯಾಗಿ ಸಂರಕ್ಷಿಸಲು ಸಹಾಯವಾಗಲಿದೆ. ಇದರ ಜೊತೆಗೆ ಜೀವವೈವಿಧ್ಯತೆ ಸಂರಕ್ಷಣೆ ಹಾಗೂ ಅದಕ್ಕಾಗಿ ಜನರ ಪಾಲ್ಗೊಳ್ಳಲು ಅವಕಾಶ ದೊರೆಯಲಿದೆ.
  • ಜೊತೆಗೆ ಪರಿಸರ-ಪ್ರವಾಸೋದ್ಯಮವನ್ನು ಉತ್ತೇಜಿಸುವದರೊಂದಿಗೆ ಸ್ಥಳೀಯರಿಗೆ ಉದ್ಯೋಗದ ಅವಕಾಶಗಳು ದೊರೆಯಲಿವೆ.

ಬ್ಲಾಕ್ ಬಕ್ ಬಗ್ಗೆ

  • ಇಂಡಿಯನ್ ಬ್ಲ್ಯಾಕ್ಬಕ್ (ಆಂಟಿಲೋಪ್ ಸೆರ್ವಿಕಾಪ್ರಾ) ಎಂಬುದು ಒಂದು ಜಿಂಕೆಯಾಗಿದ್ದು, ಅಂಟಿಲೋಪ್ ಕುಲದ ಬದುಕುಳಿದಿರುವ ಏಕೈಕ ಜೀವಿ. ಚಿರತೆಯ ನಂತರ ವೇಗವಾಗಿ ಓಡುವ ಎರಡನೇ ಪ್ರಾಣಿ ಇದಾಗಿದೆ. ಹುಲ್ಲುಗಾವಲು ಪ್ರದೇಶಗಳು ಮತ್ತು ಸ್ವಲ್ಪ ಅರಣ್ಯ ಪ್ರದೇಶಗಳಲ್ಲಿ ಬ್ಲ್ಯಾಕ್ಬಕ್ ಹೆಚ್ಚಾಗಿ ಕಾಣಬಹುದು.
  • ನೀರು ಹೆಚ್ಚಾಗಿ ಬೇಕಾಗಿರುವುದರಿಂದ ದೀರ್ಘಕಾಲದವರೆಗೆ ನೀರು ಲಭ್ಯವಿರುವ ಪ್ರದೇಶಗಳಲ್ಲಿ ಹೆಚ್ಚು ಆದ್ಯತೆಯನ್ನು ನೀಡುತ್ತವೆ. ಇವುಗಳು ಕೇಂದ್ರ ಪಶ್ಚಿಮ ಭಾರತ (ರಾಜಸ್ಥಾನ, ಗುಜರಾತ್, ಪಂಜಾಬ್, ಹರಿಯಾಣ, ಮಹಾರಾಷ್ಟ್ರ ಮತ್ತು ಒಡಿಶಾ) ಮತ್ತು ದಕ್ಷಿಣ ಭಾರತ (ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ)ದಲ್ಲಿ ಕಂಡುಬರುತ್ತವೆ.
  • ವನ್ಯಜೀವಿ ಕಾಯಿದೆ-1972ರ ಭಾಗ 1 ರಲ್ಲಿ ಬ್ಲಾಕ್ ಬಕ್ ಭೇಟೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
  • ರಾಜಸ್ತಾನದ ಬಿಷ್ಣೋಯ್ ಸಮುದಾಯ ಬ್ಲಾಕ್ ಬಕ್ ಮತ್ತು ಚಿಂಕಾರಗಳ ಸಂರಕ್ಷಣೆಗೆ ವಿಶ್ವಮನ್ನಣೆ ಗಳಿಸಿದೆ.
  1. ವಿಶ್ವ ಆಹಾರ ಭಾರತ 2017

ಪ್ರಮುಖ ಸುದ್ದಿ

  • ಭಾರತೀಯ ಉದ್ಯಮದ ಒಕ್ಕೂಟದ ಸಹಯೋಗದಲ್ಲಿ ಆಹಾರ ಸಂಸ್ಕರಣಾ ಸಚಿವಾಲಯ ನವದೆಹಲಿಯಲ್ಲಿ ‘ವಿಶ್ವ ಆಹಾರ ಭಾರತ’ ಕಾರ್ಯಕ್ರಮ ಹಮ್ಮಿಕೊಂಡಿದ್ದು, ನವೆಂಬರ್ 3ರಿಂದ 3 ದಿನಗಳ ಕಾಲ ನಡೆಯಲಿದೆ.
  • ‘ವಿಶ್ವ ಆಹಾರ ಭಾರತ’ ಕಾರ್ಯಕ್ರಮದ ಪ್ರಯುಕ್ತ ನವೆಂಬರ್ 4ರಂದು 800 ಕಿಲೋ ಖಿಚಡಿ ತಯಾರಿಸಿ ವಿಶ್ವ ದಾಖಲೆ ನಿರ್ಮಿಸಲು ಸರ್ಕಾರ ಮುಂದಾಗಿದೆ. ಖಿಚಡಿಯನ್ನು ಭಾರತದ ಬ್ರ್ಯಾಂಡ್ ಆಹಾರವಾಗಿ ವಿಶ್ವಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
  • ‘ಖಿಚಡಿಯು ಭಾರತದ ಪ್ರಮುಖ ಮತ್ತು ಆರೋಗ್ಯಕರ ಆಹಾರವಾಗಿದೆ. ಬಡವರಿಂದ ತೊಡಗಿ ಶ್ರೀಮಂತರವರೆಗೂ ಇದನ್ನು ತಯಾರಿಸಿ ಸೇವಿಸುತ್ತಾರೆ’ ಖಿಚಡಿಯು ಭಾರತದ ’ವಿವಿಧತೆಯಲ್ಲಿ ಏಕತೆ’ಯ ಸಂಸ್ಕೃತಿಯನ್ನು ಸಾರುತ್ತದೆ  .
  • The event aims to facilitate participation between domestic and international businesses
  • This is the first time that India is hosting such an event for the food processing sector.

 

ವಿಶ್ವ ಆಹಾರ ಭಾರತ:

 

  • ವಿಶ್ವ ಆಹಾರ ಭಾರತ ದ ಮುಖ್ಯ ಉದ್ದೇಶವೆಂದರೆ ಆಹಾರ ಆರ್ಥಿಕತೆಯ ರೂಪಾಂತರ ಮತ್ತು ಭಾರತವನ್ನು ಆದ್ಯತೆಯ ಹೂಡಿಕೆಯ ತಾಣವಾಗಿ ಸ್ಥಾಪಿಸುವುದು
  • ಜಾಗತಿಕ ಆಹಾರ ಸಂಸ್ಕರಣಾ ಉದ್ದಿಮೆಗಳಿಗೆ ಕೇಂದ್ರವನ್ನು ಸ್ಥಾಪಿಸುವ ಮೂಲಕ ರೈತರ ಆದಾಯವನ್ನು ದ್ವಿಗುಣಗೊಳಿಸುವುದು

 

ಮಹತ್ವ:

  • ಭಾರತವು ಆಹಾರ ಸಂಸ್ಕರಣಾ ಕ್ಷೇತ್ರದ ಕ್ರಾಂತಿಗೆ ಸಜ್ಜಾಗಿದೆ ಮತ್ತು ಜಾಗತಿಕ ಕಂಪನಿಗಳು ಸಹಭಾಗಿತ್ವಕ್ಕಾಗಿ ಉತ್ಸಾಹದಿಂದ ನೋಡುತ್ತಿವೆ ಎಂಬುದು ಸ್ಪಷ್ಟವಾಗಿದೆ.
  • ಜಾಗತಿಕ ಫುಡ್ ಇಂಡಿಯಾ ಪ್ಲಾಟ್ಫಾರ್ಮ್ ಜಾಗತಿಕ ಮಟ್ಟದಲ್ಲಿ  ಭಾರತದ ಸ್ಥಾನವನ್ನು ಬಲಪಡಿಸುತ್ತದೆ ಮತ್ತು ದೇಶದ ಆಹಾರವನ್ನು ಸುರಕ್ಷಿತವಾಗಿ ಮಾಡುವ ಧನಾತ್ಮಕ ಹೆಜ್ಜೆಯಾಗಿದೆ .
  • ಭಾರತವು ಆಹಾರ ಸಂಸ್ಕರಣಾ ಕ್ಷೇತ್ರದಲ್ಲಿ 10 ಬಿಲಿಯನ್ ಡಾಲರ್ ಹೂಡಿಕೆಯನ್ನು ಆಕರ್ಷಿಸುವ ನಿರೀಕ್ಷೆಯಿದೆ ಮತ್ತು ಮುಂದಿನ ಮೂರು ವರ್ಷಗಳಲ್ಲಿ ಒಂದು ದಶಲಕ್ಷ ಉದ್ಯೋಗಗಳನ್ನು ಸೃಷ್ಟಿಸುತ್ತದೆ.

 

 

  1. ಭಾರತದಿಂದ ಹತ್ತು ದೇಶಗಳಿಗೆ ಸಾಗರ ಮಾಹಿತಿ ವ್ಯವಸ್ಥೆ

ಪ್ರಮುಖ ಸುದ್ದಿ

  • ಭಾರತವು ಸಾಗರ ಚಲನ ವಲನಗಳ ಗುಪ್ತಚರ ಮಾಹಿತಿಯನ್ನು ಹಿಂದೂ ಮಹಾಸಾಗರ ವ್ಯಾಪ್ತಿಯ 10 ದೇಶಗಳ ಜತೆ ಹಂಚಿಕೊಳ್ಳಲು ಮುಂದಾಗಿದೆ.
  • ಹಿಂದೂಮಹಾಸಾಗರ ಪ್ರದೇಶದಲ್ಲಿ ( Indian Ocean Region (IOR))ಚೀನಾದ ಪಾತ್ರ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತದ ಈ ನಿರ್ಧಾರ ಮಹತ್ವದ್ದಾಗಿದೆ.
  • ಹೀಗೆ ಭಾರತ ಹಂಚಿಕೊಳ್ಳುವ ಮಾಹಿತಿಗಳಲ್ಲಿ ವಾಣಿಜ್ಯ ಸಂಚಾರ ಮತ್ತು ಗುಪ್ತಚರ ಮಾಹಿತಿಗಳು ಸೇರಿವೆ. ಈ ಗುಪ್ತಚರ ಮಾಹಿತಿಗಲು ಸಾಮಾನ್ಯವಾಗಿ ಸೇನಾ ಉದ್ದೇಶದ ಮಾಹಿತಿಗಳಾಗಿರದೇ, ಮುಖ್ಯವಾಗಿ ಸಮುದ್ರದಲ್ಲಿ ಎದುರಾಗುವ ಅಸಾಂಪ್ರದಾಯಿಕ ಅಪಾಯಗಳ ಬಗೆಗೆ ಇರುತ್ತದೆ.
  • ಭಾರತ ಈಗಾಗಲೇ ಈ ಪ್ರದೇಶದ ಹಲವು ದೇಶಗಳ ಜತೆ ಸಹಕಾರ ಒಪ್ಪಂದ ಮಾಡಿಕೊಂಡಿದ್ದು, ಇದನ್ನು ವಿಸ್ತರಿಸುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಲಿದೆ.
  • ಭಾರತ ಈಗಾಗಲೇ ವಾಣಿಜ್ಯ ಸಂಚಾರ ಮಾಹಿತಿಯನ್ನು ವೈಟ್ ಶಿಪ್ಪಿಂಗ್ ಒಪ್ಪಂದ ಮಾಡಿಕೊಂಡಿದ್ದು, 12 ದೇಶಗಳ ಜತೆ ಈ ಮಾಹಿತಿಯನ್ನು ಭಾರತ ಹಂಚಿಕೊಳ್ಳುತ್ತಿದೆ.

 

ಗೋವಾ ಸಾಗರ ಸಮಾವೇಶ ಬಗ್ಗೆ (Goa Maritime Conclave (GMC))

  • ಭಾರತೀಯ ನೌಕಾಪಡೆಯ ಆಶ್ರಯದಲ್ಲಿ ಹತ್ತು ದೇಶಗಳ ನೌಕಾಪಡೆ ಮತ್ತು ಸಾಗರ ಮುಖ್ಯಸ್ಥರು ಮೊಟ್ಟಮೊದಲ ಬಾರಿಗೆ ಸಭೆ ಸೇರುತ್ತಿದ್ದಾರೆ.
  • ಹಿಂದೂ ಮಹಾಸಾಗರ ವ್ಯಾಪ್ತಿಯ ಹತ್ತು ದೇಶಗಳ ಗಣ್ಯರು ಇದರಲ್ಲಿ ಭಾಗವಹಿಸಿದ್ದಾರೆ.
  • ಇದು ಸಾಮಾನ್ಯವಾಗಿ ಅಪಾಯಗಳನ್ನು ಗುರುತಿಸುವುದು ಹಾಗೂ ಇದನ್ನು ಹೇಗೆ ನಿರ್ವಹಿಸಬೇಕು ಎನ್ನುವ ಅಂಶಗಳನ್ನು ಒಳಗೊಳ್ಳುತ್ತದೆ.
  • ಇದು ಎಲ್ಲ ಸಮಾನ ಮನಸ್ಕ ದೇಶಗಳನ್ನು ಒಂದೆಡೆ ಸೇರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಇದು ಸಾಗರ ಕ್ಷೇತ್ರದಲ್ಲಿ ಎದುರಾಗುವ ಸವಾಗುಗಳನ್ನು ಸಂಘಟಿತವಾಗಿ ಎದುರಿಸಲು ಅನುವು ಮಾಡಿಕೊಡುತ್ತದೆ.
  • ಇದರ ಮುಖ್ಯ ಉದ್ದೇಶ ಪ್ರಾದೇಶಿಕ ಸಾಗರ ಸವಾಲುಗಳನ್ನು ಬಗೆಹರಿಸುವುದು. ಇದರಲ್ಲಿನ ನಡಾವಳಿಗಲು ಮುಖ್ಯವಾಗಿ ರೂಪುಗೊಳ್ಳುತ್ತಿರುವ ಸಾಗರ ಅಪಾಯ ಸಾಧ್ಯತೆ ಮತ್ತು ಬಲಪ್ರಯೋಗದ ಅಂಶಗಳನ್ನು ಒಳಗೊಳ್ಳುತ್ತದೆ.
  • ಇದು ಹಿಂದೂಮಹಾಸಾಗರ ವ್ಯಾಪ್ತಿಯಲ್ಲಿ ಸಾಗರ ಜಾಗೃತಿ, ಸಾಗರ ಭದ್ರತೆ ಮತ್ತು ಭದ್ರತಾ ಸವಾಲುಗಳನ್ನು ನಿರ್ವಹಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತದೆ.

 

  1. ಎತಿಕೊಪ್ಪ ಆಟಿಕೆಗೆ ಜಿಐ ಟ್ಯಾಗ್

ಪ್ರಮುಖ ಸುದ್ದಿ

  • ಆಂಧ್ರಪ್ರದೇಶದ ಎತಿಕೊಪ್ಪ ಆಟಿಕೆಗೆ ಭಾರತದ ಭೌಗೋಳಿಕ ಗುರುತಿಸುವಿಕೆ ದಾಖಲಾತಿ ಸಂಸ್ಥೆ (ಜಿಐಆರ್) ಭೌಗೋಳಿಕ ವಿಶೇಷಣ ಗುರುತಿಸುವಿಕೆ ಟ್ಯಾಗ್ ನಿಡಿದೆ.
  • ಈ ಸಾಂಪ್ರದಾಯಿಕ ಆಟಿಕೆಗಳನ್ನು ಆಂಧ್ರಪ್ರದೇಶದ ವಿಶಾಖಪಟ್ಟಣ ಜಿಲ್ಲೆಯ ವರಹಾ ನದಿದಂಡೆಯ ಎತಿಕೊಪ್ಪ ಎಂಬ ಗ್ರಾಮದ ಕುಶಲಕರ್ಮಿಗಳು ಸಿದ್ಧಪಡಿಸುತ್ತಾರೆ.
  • ಈ ಜಿಐ ಟ್ಯಾಗ್‍ನೊಂದಿಗೆ ಎತಿಕೊಪ್ಪ ಆಟಿಕೆಗಳು ಈಗಾಗಲೇ ಜಿಐ ಟ್ಯಾಗ್ ಪಡೆದಿರುವ ಆಂಧ್ರಪ್ರದೇಶದ ಇತರ ಪ್ರತಿಷ್ಠಿತ ವಸ್ತುಗಳ ಗುಂಪಿಗೆ ಸೇರಿದಂತಾಗಿದೆ.
  • ಈಗಾಗಲೇ ಆಂಧ್ರಪ್ರದೇಶದಲ್ಲಿ ಕೊಂಡಪಲ್ಲಿ ಆಟಿಕೆಗಳು, ತಿರುಪತಿ ಲಡ್ಡು, ಬೊಬ್ಬಿಲಿ ವೀಣಾ, ಶ್ರೀಕಾಳಹಸ್ತಿ ಕಲಮ್‍ಕರಿ, ಉಪ್ಪದ ಜಾಮದಾನಿ ಸೀರೆ ಮತ್ತು ನೆರಳು ಬೊಂಬೆಯಾಟಗಳು ಜಿಐ ಟ್ಯಾಗ್ ಪಡೆದಿವೆ.

ಎತಿಕೊಪ್ಪ ಆಟಿಕೆ ಬಗ್ಗೆ

  • ಈ ಸಾಂಪ್ರದಾಯಿಕ ಮರದ ಎತಿಕೊಪ್ಪ ಆಟಿಕೆಗಳನ್ನು ಸಿದ್ಧಪಡಿಸುವ ಸಂಪ್ರದಾಯ 400 ವರ್ಷಗಳಷ್ಟು ಹಳೆಯದು. ಸಾಂಪ್ರದಾಯಿಕವಾಗಿ ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರುಗಳಿಗೆ ಈ ಅಪೂರ್ವ ಕಲೆ ಹಸ್ತಾಂತರವಾಗುತ್ತಾ ಬಂದಿದೆ. ಈ ಆಟಿಕೆಯನ್ನು ತಯಾರಿಸುವ ಕಲೆಯನ್ನು ಟರ್ನ್‍ಡ್ ವುಡ್ ಲ್ಯಾಕರ್ ಕುಶಲಕಲೆ ಎಂದೂ ಗುರುತಿಸಲಾಗುತ್ತದೆ.

 

  • ಈ ಆಟಿಕಗಳು ವಿಶಿಷ್ಟ ಆಕಾರ ಮತ್ತು ವಿಧಗಳದ್ದಾಗಿರುತ್ತವೆ. ಮರದಿಂದ ತಯಾರಿಸಲ್ಪಟ್ಟ ಈ ಆಟಿಕೆಗಳಿಗೆ ನೈಸರ್ಗಿಕ ಬನ್ಣವನ್ನು ಹಾಕಲಾಗುತ್ತದೆ. ಅಂಕುಡಿ ಕರ್ರಾ ಎಂಬ ಮರದಿಂದ ಇವುಗಳನ್ನು ತಯಾರಿಸಲಾಗುತ್ತದೆ. ಅಂಕುಡಿ ಕರ್ರಾ ಎನ್ನುವುದು ಅತ್ಯಂತ ಮೆದು ಸ್ವರೂಪದ ಮರವಾಗಿದೆ. ನೈಸರ್ಗಿಕ ಬಣ್ಣವನ್ನು ಬೀಜ, ತೊಗಟೆ, ರೆಂಬೆ, ಬೇರು ಮತ್ತು ಎಲೆಗಳಿಂದ ತಯಾರಿಸಲಾಗುತ್ತದೆ. ಈ ಬಣ್ಣಗಳು ವಿಶಿಷ್ಟವಾಗಿದ್ದು, ಇವು ಯಾವುದೇ ವಿಷಕಾರಿ ಅಥವಾ ಭಾರಲೋಹದ ಅಂಶಗಳನ್ನು ಒಳಗೊಂಡಿರುವುದಿಲ್ಲ.

 

ಭೌಗೋಳಿಕ ಸೂಚಕ (ಜಿಐ) ಬಗ್ಗೆ

 

  • ಭೌಗೋಳಿಕ ಸೂಚಕ ಎನ್ನುವುದು ನಿರ್ದಿಷ್ಟ ಭೌಗೋಳಿಕ ಪ್ರದೇಶದ ಅಥವಾ ಮೂಲದ ಹೆಸರಿನೊಂದಿಗೆ ಕೂಡಿರುವ ಉತ್ಪನ್ನಕ್ಕೆ ನಿಡಲಾಗುವ ವಿಶಿಷ್ಟ ಗುರುತಾಗಿದೆ. ಇದನ್ನು ಕೃಷಿ, ನೈಸರ್ಗಿಕ ಮತ್ತು ಉತ್ಪಾದಿತ ಸರಕುಗಳಿಗೆ ನೀಡಲಾಗುತ್ತದೆ. ವಿಶೇಷ ಗುಣಮಟ್ಟ ಮತ್ತು ಪ್ರತಿಷ್ಠೆ ಹೊಂದಿರುವ ಉತ್ಪನ್ನಗಳಿಗೆ ಇದನ್ನು ನೀಡಲಾಗುತ್ತದೆ.

 

  • ಈ ಜಿಐ ಟ್ಯಾಗ್ ಹೊಂದಿರುವ ಸರಕು ಮತ್ತು ಉತ್ಪನ್ನಗಳನ್ನು ಅವುಗಳ ಮೂಲದೊಂದಿಗೆ ಗುರುತಿಸಲಾಗುತ್ತದೆ. ಇದು ವಿಶಿಷ್ಟ ಗುಣಮಟ್ಟ ಹಾಗೂ ಗೌರವ ಹೊಂದಿರುತ್ತವೆ ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿ ಇದಕ್ಕೆ ವಿಶೇಷ ಸ್ಥಾನಮಾನ ಇದೆ. ಇದು ಇತರ ಯಾರು ಕೂಡಾ ಈ ಹೆಸರು ಬಳಸದಂತೆ ಈ ಉತ್ಪನ್ನಗಳಿಗೇ ಇದನ್ನು ವಿಶಿಷ್ಟವಾಗಿಸುವ ವ್ಯವಸ್ಥೆಯಾಗಿದೆ. ಜಿಐ ನೋಂದಣಿಯು 10 ವರ್ಷಕ್ಕೆ ಊರ್ಜಿತವಾಗಿದ್ದು, ಆ ಬಳಿಕ ಇದನ್ನು ನವೀಕರಿಸಿಕೊಳ್ಳಬೇಕಾಗುತ್ತದೆ.
  • ಕೈಗಾರಿಕಾ ಆಸ್ತಿ ಸಂರಕ್ಷಣೆ ಕುರಿತ ಪ್ಯಾರೀಸ್ ಒಪ್ಪಂದದ ಅನ್ವಯ ಜಿಐ ಮುಖ್ಯವಾಗಿ ಭೌದ್ಧಿಕ ಆಸ್ತಿ ಹಕ್ಕಿನ ಅಂಶಗಳನ್ನು ಒಳಗೊಳ್ಳುತ್ತದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಜಿಐಯನ್ನು ವಿಶ್ವವ್ಯಾಪಾರ ಸಂಸ್ಥೆಯ ವ್ಯಾಪಾರಿ ಸಂಬಂಧಿತ ಬೌದ್ಧಿಕ ಆಸ್ತಿ ಹಕ್ಕುಗಳ ಆಯಾಮದ ಒಪ್ಪಂದ (ಟ್ರಿಪ್ಸ್) ಅಡಿಯಲ್ಲಿ ತರಲಾಗಿದೆ.
  • ಭಾರತದಲ್ಲಿ ಜಿಐ ಟ್ಯಾಗ್ ಅನ್ನು ಭೌಗೋಳಿಕ ಸೂಚಕ ಸರಕುಗಳ (ನೋಂದಣಿ ಮತ್ತು ಸಂರಕ್ಷಣೆ) ಕಾಯ್ದೆ- 1999ರಡಿ ನೀಡಲಾಗುತ್ತದೆ. ಈ ಟ್ಯಾಗನ್ನು ಕಂಟ್ರೋಲರ್ ಜನರಲ್ ಆಫ್ ಪೇಟೆಂಟ್ಸ್, ಡಿಸೈನ್ಸ್ ಮತ್ತು ಟ್ರೇಡ್ ಮಾಕ್ರ್ಸ್ ನಿರ್ವಹಿಸುತ್ತಾರೆ. ಇವರು ಜಿಯೋಗ್ರಾಫಿಕಲ್ ಇಂಡಿಕೇಶನ್‍ನ ರಿಜಿಸ್ಟ್ರಾರ್ ಆಗಿಯೂ ಕಾರ್ಯ ನಿರ್ವಹಿಸುತ್ತಾರೆ.

 

  1. ಡಿಸೆಂಬರ್ 1ರಿಂದ ಹೊಸ ವಾಹನಗಳಿಗೆ ಫಾಸ್ಟ್ಯಾಗ್ ಕಡ್ಡಾಯ

 

ಪ್ರಮುಖ ಸುದ್ದಿ

  • ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಡಿಸೆಂಬರ್ 1 ರಿಂದ ಎಲ್ಲ ಹೊಸ ವಾಹಗಳಿಗೆ ಫ್ಯಾಸ್ಟ್ಯಾಗ್ ಕಡ್ಡಾಯಪಡಿಸಿ ಅಧಿಸೂಚನೆ ಹೊರಡಿಸಿದೆ.

 

  • ಈ ಅಧಿಸೂಚನೆಯ ಜತೆಗೆ ಕೇಂದ್ರ ಮೋಟಾರು ವಾಹನ ನಿಯಮಾವಳಿ- 1989ಕ್ಕೆ ತಿದ್ದುಪಡಿಯನ್ನೂ ತರಲಾಗುತ್ತಿದೆ. ಕೇಂದ್ರೀಯ ಮೋಟಾರು ವಾಹನ ಕಾಯ್ದೆ- 1989ಕ್ಕೆ ಅನುಗುಣವಾಗಿ ಈ ತಿದ್ದುಪಡಿಯನ್ನು ತರಲಾಗುತ್ತಿದೆ.

 

ಪ್ರಮುಖ ಅಂಶಗಳು

  • ಈ ಅಧಿಸೂಚನೆಯ ಅನ್ವಯ ಫಾಸ್ಟ್ಯಾಗ್ ಎಂದರೆ ಆನ್‍ಬೋರ್ಡ್ ಯುನಿಟ್ (ಟ್ರಾನ್ಸ್‍ಪಾಂಡರ್) ಅಥವಾ ಅಂಥ ಇತರ ಸಾಧನವಾಗಿದ್ದು, ಇದನ್ನು ವಾಹನದ ಮುಂದಿನ ಕಿಟಕಿ (ವಿಂಡ್‍ಸ್ಕ್ರೀನ್)ಗೆ ಅಳವಡಿಸಿರಬೇಕಾಗುತ್ತದೆ.
  • ಇದನ್ನು ವಾಹನದ ಎದುರಿನ ವಿಂಡ್‍ಸ್ಕ್ರೀನ್‍ಗೆ ಅಳವಡಿಸಬೇಕು. ವಾಹನ ಉತ್ಪಾದಕರೇ ಇದನ್ನು ಅಳವಡಿಸಬೇಕು ಇಲ್ಲವೇ ಅಧಿಕೃತ ಡೀಲರ್‍ಗಳು ಅಳವಡಿಸಬೇಕು. ಒಂದು ವೇಳೆ ವಾಹನವನ್ನು ವಿಂಡ್‍ಸ್ಕ್ರೀನ್ ಇಲ್ಲದೇ ಚೇಸಿಗಳ ರೂಪದಲ್ಲೇ ಮಾರಾಟ ಮಾಡಿದ್ದರೆ, ಫಾಸ್ಟ್ಯಾಗ್‍ಗಳನ್ನು ವಾಹನದ ಮಾಲೀಕರು ವಾಹನದ ನೋಂದಣಿಗೆ ಮುನ್ನ ಅಳವಡಿಸಿರಬೇಕು.
  • ಈ ಟ್ಯಾಗ್ ಅನ್ನು ಟ್ಯಾಗ್ ಮಾರಾಟಗಾರರಿಂದ ಖರೀದಿಸಿ, ಪ್ರಿಪೈಡ್ ಖಾತೆಗೆ ಸಂಪರ್ಕಿಸಬೇಕಾಗುತ್ತದೆ. ಬಳಿಕ ವಾಹನಗಳ ಮಾಲೀಕರು ಇದನ್ನು ಅಗತ್ಯಕ್ಕೆ ತಕ್ಕಂತೆ ರೀಚಾರ್ಜ್ ಅಥವಾ ಟಾಪಪ್ ಮಾಡಿಸಿಕೊಳ್ಳಬೇಕು.

 

ಫಾಸ್ಟ್ಯಾಗ್ ಬಗ್ಗೆ

  • ಫಾಸ್ಟ್ಯಾಗ್ ಎನ್ನುವುದು ರೇಡಿಯೊ ಫ್ರೀಕ್ವೆನ್ಸಿ ಗುರುತಿಸುವಿಕೆಯನ್ನು (RFID) ಆಧಾರವಾಗಿ ಹೊಂದಿದ ಒಂದು ತಂತ್ರಜ್ಞಾನವಾಗಿದ್ದು, ಎಲ್ಲ ಟೋಲ್ ಶುಲ್ಕ ಪಾವತಿಗಳನ್ನು ಪೂರ್ವಪಾವತಿ ಅಥವಾ ಉಳಿತಾಯ ಖಾತೆ ಸಂಪರ್ಕಿತ ಸಾಧನದ ಮೂಲಕ ನೇರವಾಗಿ ಮಾಡಲಾಗುತ್ತದೆ. ಇದನ್ನು ವಾಹನದ ಮುಂಬದಿಯ ಕಿಟಕಿ ಗಾಜಿಗೆ ಅಳವಡಿಸಲಾಗುತ್ತದೆ ಹಾಗೂ ಪ್ರಯಾಣಿಕರು ಟೋಲ್ ಪ್ಲಾಜಾ ಮೂಲಕ ವಾಹನವನ್ನು ಹರಿಸಿದಾಗ, ನಿಲುಗಡೆ ಇಲ್ಲದೇ ಅಥವಾ ಯಾವುದೇ ನಗದು ವ್ಯವಹಾರ ಇಲ್ಲದೇ ಟೋಲ್ ಶುಲ್ಕ ಪಾವತಿಸಲು ಈ ವ್ಯವಸ್ಥೆ ಅನುಕೂಲವಾಗುತ್ತದೆ.
  • ಈ ಟ್ಯಾಗನ್ನು ಮುಂಬದಿಯ ಕಿಟಕಿಗಾಜಿಗೆ ಅಳವಡಿಸಲಾಗಿದ್ದು, ಡೆಡಿಕೇಟೆಡ್ ಎಲೆಕ್ಟ್ರಾನಿಕ್ ಟೋಲ್ ಕಲೆಕ್ಷನ್ (ಇಟಿಸಿ) ಲೇನ್‍ಗಳ ಮೂಲಕ ಇದು ಸಂಚರಿಸಬೇಕಾಗುತ್ತದೆ. ಟೋಲ್‍ಪ್ಲಾಜಾ ಮೂಲಕ ವಾಹನ ಹಾದುಹೋಗುವಾಗ ಸ್ವಯಂಚಾಲಿತವಾಗಿ ಉಳಿತಾಯ ಖಾತೆ ಅಥವಾ ಪೂರ್ವಪಾವತಿ ವ್ಯವಸ್ಥೆಯಿಂದ ಹಣ ಕಡಿತಗೊಳ್ಳುತ್ತದೆ. ಬಳಕೆದಾರರು ಟೋಲ್ ಬಳಕೆ ಬಗ್ಗೆ ಎಸ್‍ಎಂಎಸ್ ಸಂದೇಶವನ್ನು ಪಡೆಯುತ್ತಾರೆ ಹಾಗೂ ಕಡಿಮೆ ಬ್ಯಾಲೆನ್ಸ್ ಮತ್ತು ಇತರ ಅಭಿವೃದ್ಧಿಗಳ ಬಗ್ಗೆ ಮಾಹಿತಿ ಪಡೆಯುತ್ತಾರೆ.ಈ ಫಾಸ್ಟ್ಯಾಗ್‍ಗಳ ಊರ್ಜಿತಾವಧಿ ಐದು ವರ್ಷಗಳಾಗಿದ್ದು, ಖರೀದಿಸಿದ ಬಳಿಕ, ಮಾಲೀಕರು ಇದನ್ನು ರೀಚಾರ್ಜ್ ಅಥವಾ ಟಾಪ್ ಅಪ್ ಮಾಡಿಸಿದರೆ ಸಾಕಾಗುತ್ತದೆ. ತಮ್ಮ ಅಗತ್ಯಕ್ಕೆ ತಕ್ಕಂತೆ ಇದನ್ನು ಮಾಡಿಸಿಕೊಳ್ಳಬಹುದಾಗಿದೆ. ಇದರ ಪ್ರಮುಖ ಲಾಭವೆಂದರೆ, ಟೋಲ್ ವಹಿವಾಟಿಗಾಗಿ ಯಾವುದೇ ನಗದು ಒಯ್ಯುವ ಅಗತ್ಯವಿಲ್ಲ, ಇದು ಸಮಯ ಉಳಿತಾಯಕ್ಕೂ ಅನುಕೂಲವಾಗಿದ್ದು, ಟೋಲ್‍ಪ್ಲಾಜಾಗಳಲ್ಲಿ ನಿಲುಗಡೆ ಇಲ್ಲದ ಸುಲಲಿತ ಚಲನೆಗೆ ಇದು ಅನುಕೂಲವಾಗಲಿದೆ. ಈ ಮೂಲಕ ಇಂಧನ ಉಳಿತಾಯಕ್ಕೂ ಈ ವಿಧಾನ ಪೂರಕವಾಗಲಿದೆ.
  • ಪ್ರಸ್ತುತ ಫಾಸ್ಟ್ಯಾಗ್‍ಗಳು ದೇಶದ ರಾಷ್ಟ್ರೀಯ ಹೆದ್ದಾರಿಗಳ 370 ಟೋಲ್ ಪ್ಲಾಜಾಗಳಲ್ಲಿ ಬಳಕೆಯಲ್ಲಿವೆ. ಈ ವ್ಯವಸ್ಥೆಯು ಅಂತರ್ ಕಾರ್ಯಾಚರಣೆ ವಿಧಾನವಾಗಿದ್ದು, ಒಂದೇ ಫ್ಯಾಸ್ಟ್ಯಾಗ್ ಅನ್ನು ದೇಶದ ಎಲ್ಲ ನ್ಯಾಷನಲ್ ಎಲೆಕ್ಟ್ರಾನಿಕ್ ಟೋಲ್ ಕಲೆಕ್ಷನ್ (ಎನ್‍ಇಟಿಸಿ) ಯೋಜನೆಯ ಟೋಲ್‍ಪ್ಲಾಜಾಗಳಲ್ಲಿ ಬಳಸಬಹುದಾಗಿದೆ ಎನ್ನುವುದು ಇದರ ವಿಶೇಷ.

 

 

  1. ಹಿಂದಿ ಸಾಹಿತಿ ಕೃಷ್ಣಾ ಸೋಬತಿಗೆ 53ನೇ ಜ್ಞಾನಪೀಠ ಪ್ರಶಸ್ತಿ

ಪ್ರಮುಖ ಸುದ್ದಿ

  • 2017 ನೇ ಸಾಲಿನ ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿಗೆ ಹಿಂದಿ ಸಾಹಿತಿ ಕೃಷ್ಣಾ ಸೋಬತಿ ಭಾಜನರಾಗಿದ್ದಾರೆ. .
  • ಕೃಷ್ಣ ಸೋಬ್ತಿ ಅವರು 1925 ರಂದು ಗುಜರಾತಿನಲ್ಲಿ ಜನಿಸಿದರು. ಪ್ರಸ್ತುತ ಪಾಕಿಸ್ತಾನದಲ್ಲಿ ವಾಸವಿರುವ ಕೃಷ್ಣಾ ಸೋಬತಿ ಅವರಿಗೆ 92 ವರ್ಷ ವಯಸ್ಸಾಗಿದೆ.
  • ಇಂಡೋ- ಪಾಕಿಸ್ತಾನ ಇಬ್ಭಾಗ, ಪುರುಷ ಮತ್ತು ಮಹಿಳೆಯ ನಡುವಿನ ಸಂಬಂಧ ಹಾಗೂ ಬದಲಾಗುತ್ತಿರುವ ಭಾರತೀಯ ಸಮಾಜದಲ್ಲಿ ಹಾಳಾಗುತ್ತಿರುವ ಮಾನವೀಯ ಮೌಲ್ಯಗಳು ಎಂಬ ವಿಷಯಗಳನ್ನು ಪರಿಗಣಿಸಿ ಕೃಷ್ಣಾ ಸೋಬತಿ ಅವರನ್ನು ಜ್ಞಾನಪೀಠ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

 

ಜ್ಞಾನಪೀಠ ಪ್ರಶಸ್ತಿಗಳ ಬಗ್ಗೆ:

  • ಜ್ಞಾನಪೀಠ ಪ್ರಶಸ್ತಿ ದೇಶದಲ್ಲಿನ ಪ್ರತಿಷ್ಠಿತ ಸಾಹಿತ್ಯಿಕ ಗೌರವಗಳಲ್ಲಿ ನೀಡುವ ಪ್ರಶಸ್ತಿಗಳಲ್ಲಿ ಒಂದಾಗಿದೆ. ಈ  ಪ್ರಶಸ್ತಿಯನ್ನು 1961 ರಲ್ಲಿ  ಸ್ಥಾಪಿಸಲಾಯಿತು.
  • ಅರ್ಹತೆ: ಭಾರತದ ಯಾವುದೇ ಅಧಿಕೃತ ಭಾಷೆಗಳಲ್ಲಿ ಬರೆಯುವ ಯಾವುದೇ ಭಾರತೀಯ ನಾಗರಿಕರು ಈ ಗೌರವಕ್ಕೆ ಅರ್ಹರಾಗಿದ್ದಾರೆ.

 

  1. ದೀನ್ದಯಾಳ್ ಸ್ಪರ್ಶ್ ಯೋಜನೆ

ಪ್ರಮುಖ ಸುದ್ದಿ

  • ಅಂಚೆಚೀಟಿ ಕಲೆಹಾಕುವಂಥ ಹವ್ಯಾಸಗಳನ್ನು ವಿದ್ಯಾರ್ಥಿಗಳಲ್ಲಿ ಉತ್ತೇಜಿಸುವ ದೃಷ್ಟಿಯಿಂದ ಇಂಥ ವಿದ್ಯಾರ್ಥಿಗಳಿಗೆ ಸ್ಕಾಲರ್‍ಶಿಪ್ ನೀಡುವ ವಿಶೇಷ ಯೋಜನೆಯನ್ನು ಕೇಂದ್ರ ಸರ್ಕಾರದ ಸಂಪರ್ಕ ಸಚಿವಾಲಯ ಆರಂಭಿಸಿದೆ.
  • ದೀನ್‍ದಯಾಳ್ ಸ್ಪರ್ಶ್ ಯೋಜನೆ ಎಂಬ ಹೆಸರಿನ ಈ ಯೋಜನೆಯ ಪೂರ್ಣರೂಪ ಸ್ಕಾಲರ್‍ಶಿಪ್ ಫಾರ್ ಪ್ರಮೋಶನ್ ಆಫ್ ಆಪ್ಟಿಟ್ಯೂಡ್ ಅಂಡ್ ರೀಸರ್ಚ್ ಇನ್ ಸ್ಟ್ಯಾಂಪ್ಸ್ ಆಸ್ ಎ ಹಾಬ್ಬಿ ಎಂದಾಗಿದೆ.(SPARSH -Scholarship for Promotion of Aptitude & Research in Stamps as a Hobby)

ಪ್ರಮುಖ ಅಂಶಗಳು

 

  • ಈ ಯೋಜನೆಯಡಿ 6 ರಿಂದ  9ನೇ ತರಗತಿವರೆಗಿನ ಮಕ್ಕಳಿಗೆ ವಿದ್ಯಾಥಿ ವೇತನ ನೀಡಲಾಗುವುದು. ಉತ್ತಮ ಶೈಕ್ಷಣಿಕ ದಾಖಲೆಗಳನ್ನು ಹೊಂದಿದ್ದು, ಅಂಚೆಚೀಟಿ ಸಂಗ್ರಹವನ್ನು ಹವ್ಯಾಸವಾಗಿ ಹೊಂದಿರುವ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಆಯ್ಕೆ ಪ್ರಕ್ರಿಯೆ ಮೂಲಕ ಎಲ್ಲ ಅಂಚೆ ವೃತ್ತಗಳಲ್ಲಿ ಆಯ್ಕೆ ನಡೆಯಲಿದೆ.
  • ಸರ್ಕಾರ ಅಂಚೆ ಚೀಟಿ ಸಂಗ್ರಹವನ್ನು ಹವ್ಯಾಸವಾಗಿ ರೂಪಿಸಿಕೊಂಡಿರುವ ಒಟ್ಟು 920 ಮಕ್ಕಳಿಗೆ ವಾರ್ಷಿಕ ಸ್ಕಾಲರ್‍ಶಿಪ್ ನೀಡಲು ಉದ್ದೇಶಿಸಲಾಗಿದೆ.

ಸ್ಕಾಲರ್‍ಶಿಪ್ ಮತ್ತು ಆಯ್ಕೆ ಹೇಗೆ ?

  • ಪ್ರತಿ ಅಂಚೆ ವೃತ್ತಗಳಲ್ಲಿ ಗರಿಷ್ಠ 40 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಅಂದರೆ ಆರರಿಂದ ಒಂಬತ್ತನೇ ತರಗತಿವರೆಗಿನ ತಲಾ ಹತ್ತು ಮಕ್ಕಳನ್ನು ಒಂದು ವೃತ್ತದಿಂದ ಆಯ್ಕೆ ಮಾಡಲಾಗುತ್ತದೆ. ಈ ಸ್ಕಾಲರ್‍ಶಿಪ್ ಮೊತ್ತ ವಾರ್ಷಿಕ ಆರು ಸಾವಿರ ರೂಪಾಯಿ ಆಗಿದ್ದು, ಮಾಸಿಕ 500 ರೂಪಾಯಿಗಳ ವಿದ್ಯಾರ್ಥಿವೇತನ ದೊರೆಯುತ್ತದೆ.
  • ಈ ಆಯ್ಕೆಯನ್ನು ಪ್ರಾಜೆಕ್ಟ್ ಗಳ ಮೌಲ್ಯಮಾಪನ ಮೂಲಕ ಮಾಡಲಾಗುತ್ತದೆ. ಅಂಚೆಚೀಟಿ ಸಂಗ್ರಹ ಬಗೆಗಿನ ಕಾರ್ಯಯೋಜನೆಯನ್ನು ಮಕ್ಕಳು ಮಾಡಬೇಕಾಗುತ್ತದೆ. ಜತೆಗೆ ಆಯಾ ವೃತ್ತಗಳು ನಡೆಸುವ ಅಂಚೆ ಚೀಟಿ ಕುರಿತ ರಸಪ್ರಶ್ನೆ ಕೂಡಾ ಆಯ್ಕೆಯ ಮಾನದಂಡವಾಗಿರುತ್ತದೆ.

 

  • ಅಂಚೆಚೀಟಿ ಕ್ಲಬ್: ಈ ಸ್ಕಾಲರ್‍ಶಿಪ್ ಪಡೆಯಲು ಮಕ್ಕಳು ಭಾರತದೊಳಗಿನ ಆಂಗೀಕೃತ ಶಾಲೆಗಳ ವಿದ್ಯಾರ್ಥಿಯಾಗಿರಬೇಕು ಹಾಗೂ ಅಯಾ ಶಾಲೆಯಲ್ಲಿ ಅಂಚೆ ಚೀಟಿ ಕ್ಲಬ್ ಇರಬೇಕು. ಅಭ್ಯರ್ಥಿ ಆ ಕ್ಲಬ್‍ನ ಸದಸ್ಯರಾಗಿರಬೇಕು. ಒಂದು ವೇಳೆ ಶಾಲೆಯಲ್ಲಿ ಅಂಚೆ ಚೀಟಿ ಕ್ಲಬ್ ಇಲ್ಲದಿದ್ದರೆ, ವಿದ್ಯಾರ್ಥಿ ತನ್ನ ಸ್ವಂತ ಅಮಚೆ ಚೀಟಿ ಸಂಗ್ರಹ ಖತೆ ಹೊಂದಿದ್ದರೆ, ಅಂಥ ವಿದ್ಯಾರ್ಥಿಗಳು ಕೂಡಾ ವಿದ್ಯಾರ್ಥಿ ವೇತನ ಸ್ಪರ್ಧೆಗೆ ಅರ್ಹರಾಗುತ್ತಾರೆ.

 

  • ಅಂಚೆಚೀಟಿ ಮಾರ್ಗದರ್ಶಕರು: ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತಿ ಶಾಲೆಗಳಲ್ಲಿ ಒಬ್ಬರು ಅಂಚೆ ಚೀಟಿ ಮಾರ್ಗದರ್ಶಕರನ್ನು ನಿಯೋಜಿಸಲಾಗುತ್ತದೆ. ಖ್ಯಾತ ಅಂಚೆಚೀಟಿ ಸಂಗ್ರಾಹಕರಲ್ಲಿ ಒಬ್ಬರು ಈ ಕಾರ್ಯ ನಿರ್ವಹಿಸುತ್ತಾರೆ. ಇಂಥ ಅಂಚೆ ಚೀಟಿ ಮಾರ್ಗದರ್ಶಕರು ಶಾಲಾ ಮಟ್ಟದಲ್ಲಿ ಅಂಚೆ ಚೀಟಿ ಕ್ಲಬ್‍ಗಳನ್ನು ಹುಟ್ಟುಹಾಕುವಲ್ಲಿ ಮಾರ್ಗದರ್ಶನ ನಿಡುತ್ತಾರೆ. ಜತೆಗೆ ಯುವ ಮತ್ತು ಆಕಾಂಕ್ಷಿ ಅಂಚೆ ಚೀಟಿ ಸಂಗ್ರಾಹಕರಿಗೆ ಮಾರ್ಗದರ್ಶನ ನೀಡುತ್ತಾರೆ. ಈ ಹವ್ಯಾಸವನ್ನು ಹೇಗೆ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡುವ ಜತೆಗೆ ಆಕಾಂಕ್ಷಿ ಅಂಚೆಚೀಟಿ ಸಂಗ್ರಾಹಕರಿಗೆ ಅಂಚೆಚೀಟಿ ಸಂಗ್ರಹ ಕಾರ್ಯಯೋಜನೆಯಲ್ಲಿ ಅಗತ್ಯ ಮಾರ್ಗದರ್ಶನ ಹಾಗೂ ಸಲಹೆ ನೀಡುತ್ತಾರೆ.

 

ಅಂಚೆಚೀಟಿ ಸಂಗ್ರಹ

 

  • ಅಂಚೆಚೀಟಿ ಸಂಗ್ರಹವು ಅಂಚೆಚೀಟಿಗಳನ್ನು ಕಲೆ ಹಾಕುವ ಜತೆಗೆ ಇವುಗಲ ಅಧ್ಯಯನವನ್ನೂ ಒಳಗೊಳ್ಳುತ್ತದೆ. ಇದು ಅಂಚೆ ಚೀಟಿಗಳ ಸಂಗ್ರಹ, ಮೌಲ್ಯವರ್ಧನೆ ಮತ್ತು ಅಂಚೆ ಚೀಟಿಗಳು ಮತ್ತು ಇತರ ಉತ್ಪನ್ನಗಳ ಸಂಶೋಧನಾ ಚಟುವಟಿಕೆಗಳನ್ನು ಒಳಗೊಳ್ಳುತ್ತದೆ.
  • ಈ ಹವ್ಯಾಸದಲ್ಲಿ ಮುಖ್ಯವಾಗಿ ಅಂಚೆ ಚೀಟಿ ಸಂಗ್ರಹಿಸುವ ಇಚ್ಛೆ ಹೊಂದಿರುವುದು, ಅಂಚೆ ಚೀಟಿ ಗುರುತಿಸುವುದು, ಪಡೆಯುವುದು, ಸಂಘಟಿಸುವುದು, ವರ್ಗೀಕರಿಸುವುದು, ಪ್ರದರ್ಶನ ಮತ್ತು ಅಂಚೆ ಚೀಟಿ ಸಂಗ್ರಹವನ್ನು ನಿರ್ವಹಿಸುವುದು ಮತ್ತು ದಾಸ್ತಾನು ಮತ್ತಿತರ ಕ್ಷೇತ್ರಗಳು ಸೇರುತ್ತವೆ. ಇದನ್ನು ಹವ್ಯಾಸಗಳ ರಾಜ ಎಂದೂ ಕರೆಯಲಾಗುತ್ತದೆ. ಏಕೆಂದರೆ, ಇಂಥ ಸಂಗ್ರಹದಿಂದ ಸಾಕಷ್ಟು ಶೈಕ್ಷಣಿಕ ಪ್ರಯೋಜನಗಳೂ ಇವೆ.
  • ಇದು ಅಂಚೆ ಚೀಟಿ ಬಿಡುಗಡೆ ಮಾಡಲ್ಪಟ್ಟ ಕಾಲಘಟ್ಟದ ಹಲವು ಸಾಮಾಜಿಕ, ಆರ್ಥಿಕ, ರಾಜಕೀಯ ವಾಸ್ತವತೆಗಳನ್ನು ಬೋಧಿಸುತ್ತದೆ ಅಥವಾ ಯಾವ ತಿರುಳಿನ ಮೇಲೆ ಅಂಚೆ ಚೀಟಿ ಬಿಡುಗಡೆ ಮಾಡಲಾಗಿದೆ ಎಂಬ ಜ್ಞಾನವನ್ನೂ ನೀಡುತ್ತದೆ.

 

  1. ಶ್ರೀರಂಗನಾಥಸ್ವಾಮಿ ದೇವಾಲಯಕ್ಕೆ ಯುನೆಸ್ಕೊ ಪ್ರಶಸ್ತಿ

ಪ್ರಮುಖ ಸುದ್ದಿ

  • ತಮಿಳುನಾಡಿನ ಶ್ರೀರಂಗಂನಲ್ಲಿರುವ ಶ್ರೀರಂಗನಾಥಸ್ವಾಮಿ ದೇವಾಲಯಕ್ಕೆ ಯುನೆಸ್ಕೊ ಏಷ್ಯಾ- ಫೆಸಿಫಿಕ್ ಸಾಂಸ್ಕೃತಿಕ  ಪರಂಪರೆ ಸಂರಕ್ಷಣಾ ಪ್ರಶಸ್ತಿ ಲಭಿಸಿದೆ.
  • ಅವಾಡ್ರ್ಸ್ ಆಫ್ ಮೆರಿಟ್ ವರ್ಗದಲ್ಲಿ ಈ ಪ್ರಶಸ್ತಿ ಸಂದಿದೆ. ವಿಶ್ವಸಂಸ್ಥೆಯ ಈ ಅಂಗಸಂಸ್ಥೆಯಿಂದ ಪ್ರತಿಷ್ಠಿತ ಪ್ರಶಸ್ತಿ ಪಡೆಯುತ್ತಿರುವ ತಮಿಳುನಾಡಿನ ಮೊಟ್ಟಮೊದಲ ದೇವಾಲಯ ಎಂಬ ಹೆಗ್ಗಳಿಕೆಗೆ ಶ್ರೀರಂಗನಾಥಸ್ವಾಮಿ ದೇವಾಲಯ ಪಾತ್ರವಾಗಿದೆ.
  • ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವಲ್ಲಿ ನಡೆಸಿದ ಪ್ರಯತ್ನವನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ದೇವಾಲಯದ ಆವರಣವನ್ನು ಸಾಂಪ್ರದಾಯಿಕ ವಿಧಾನದಲ್ಲಿ ನವೀಕರಿಸಲಾಗಿದ್ದು, ಇದರ ಜತೆಗೆ ಮಳೆನೀರು ಕೊಯ್ಲು ಹಾಗೂ ಐತಿಹಾಸಿಕ ಚರಂಡಿ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಿ, ಪ್ರವಾಹವನ್ನು ತಡೆಯುವ ಎರಡು ಮಾನದಂಡಗಳು ದೇವಾಲಯಕ್ಕೆ ಪ್ರಶಸ್ತಿ ಗಳಿಸಿಕೊಟ್ಟಿವೆ.

 

ಯುನೆಸ್ಕೊ ಏಷ್ಯಾ- ಫೆಸಿಫಿಕ್ ಸಾಂಸ್ಕೃತಿಕ ಪರಂಪರೆ ಸಂರಕ್ಷಣಾ ಪ್ರಶಸ್ತಿ ಬಗ್ಗೆ (Unesco Asia-Pacific awards for cultural heritage conservation programme)

 

  • ಯುನೆಸ್ಕೊ ಏಷ್ಯಾ- ಫೆಸಿಫಿಕ್ ಸಾಂಸ್ಕೃತಿಕ ಪರಂಪರೆ ಸಂರಕ್ಷಣಾ ಪ್ರಶಸ್ತಿಯನ್ನು ಯುನೆಸ್ಕೊ 2000ನೇ ಇಸ್ವಿಯಲ್ಲಿ ಆರಂಭಿಸಿದೆ.
  • ಸಾಂಸ್ಕೃತಿಕ ಪರಂಪರೆ ಸಂರಕ್ಷಣೆ ಯೋಜನೆಯಡಿ ಈ ಪ್ರಶಸ್ತಿಯನ್ನು ಆರಂಭಿಸಲಾಗಿದೆ.
  • ಇದನ್ನು ನಾಲ್ಕು ವರ್ಗಗಳಲ್ಲಿ ನೀಡಲಾಗುತ್ತದೆ. ೧. ಅವಾರ್ಡ್ ಆಫ್ ಎಕ್ಸಲೆನ್ಸ್, ೨. ಅವಾರ್ಡ್ ಆಫ್ ಡಿಸ್ಟಿಂಗ್ಷನ್, ೩. ಅವಾರ್ಡ್ ಆಫ್ ಮೆರಿಟ್ ಹಾಗೂ ೪. ಅವಾರ್ಡ್ ಫಾರ್ ನ್ಯೂ ಡಿಸೈನ್ ಇನ್ ಹೆರಿಟೇಜ್ ಕಾಂಟ್ಯಾಕ್ಟ್ಸ್ ವರ್ಗದಲ್ಲಿ ಪ್ರಶಸ್ತಿ ನೀಡಲಾಗುತ್ತದೆ.

 

  • ಐತಿಹಾಸಿಕ ನಿರ್ಮಾಣಗಳನ್ನು ಅವುಗಳ ಪರಂಪರಾಗತ ಮೌಲ್ಯಗಳಿಗೆ ಧಕ್ಕೆ ತಾರದೇ ಸಂರಕ್ಷಿಸುವ ಪ್ರಯತ್ನವನ್ನು ಗುರುತಿಸಿ ಈ ಪ್ರಶಸ್ತಿ ನಿಡಲಾಗುತ್ತದೆ. 48 ದೇಶಗಳನ್ನು ಒಳಗೊಂಡ ದೇಶಗಳ ವರ್ಗದಲ್ಲಿ ಈ ಪ್ರಶಸ್ತಿ ನೀಡಲಾಗುತ್ತದೆ. ಇದು ಎಲ್ಲ ಹಕ್ಕುದಾರರ ಮತ್ತು ಸಾರ್ವಜನಿಕರ ಸಂರಕ್ಷಣೆ ಪ್ರಯತ್ನವನ್ನು ಪ್ರೋತ್ಸಾಹಿಸುವ ಹಾಗೂ ಉತ್ತೇಜಿಸುವ ಸಲುವಾಗಿ ನೀಡುವ ಪ್ರಶಸ್ತಿಯಾಗಿದೆ. ಸ್ಮಾರಕಗಳು ಹಾಗೂ ಧಾರ್ಮಿಕ ಸಂಘ ಸಂಸ್ಥೆಗಳ ಪರಂಪರೆಯನ್ನು ಏಷ್ಯಾ ಫೆಸಿಫಿಕ್ ಪ್ರದೇಶದಲ್ಲಿ ಸಂರಕ್ಷಿಸುವ ಗುರಿಯನ್ನು ಇದು ಹೊಂದಿದೆ.

 

ಶ್ರೀರಂಗನಾಥಸ್ವಾಮಿ ದೇವಾಲಯ ಬಗ್ಗೆ

  • ಇದು ದಕ್ಷಿಣ ಭಾರತದ ಅತ್ಯಂತ ಪ್ರಮುಖ ವೈಷ್ಣವ ದೇವಾಲಯವಾಗಿದೆ. ಇದರ ಉಲ್ಲೇಖ ತಮಿಳು ಸಾಹಿತ್ಯದಲ್ಲಿ ಸಂಗಮ್ ಯುಗದಲ್ಲೇ ಇದೆ.
  • ಈ ದೇವಾಲಯವು ಪ್ರಾಚೀನ ಭಾರತದ ಇತಿಹಾಸ ಖಜಾನೆ ಎನಿಸಿಕೊಂಡಿದೆ. ಇದನ್ನು ತಮಿಳು ಅಥವಾ ದ್ರಾವಿಡ ಶೈಲಿಯ ದೇವಾಲಯ ವಾಸ್ತುಶಿಲ್ಪಕ್ಕೆ ಅನುಗುಣವಾಗಿ ನಿರ್ಮಿಸಲಾಗಿದೆ.
  • ಪುರಾಣಗಳಲ್ಲಿ ಇದನ್ನು ವಿಷ್ಣುವಿನ ಎಂಟು ಸ್ವಯಂಉದ್ಭವ ದೇಗುಲಗಳಲ್ಲಿ ಒಂದು ಎಂದು ಕರೆಯಲಾಗಿದೆ.
  • ಭಾರತದಲ್ಲಿರುವ 108 ಪ್ರಮುಖ ವಿಷ್ಣು ದೇವಾಲಯಗಳಲ್ಲಿ ಇದು ಒಂದಾಗಿದೆ. ಇದಕ್ಕೆ ತಿರುವರಂಗ ತಿರುಪತಿ, ಭೂಲೋಕ ವೈಕುಂಠಂ, ಪೆರಿಯ ಕೋಯಿಲ್, ಭೋಗಮಂಟಪಂ ಎಂದೂ ಕರೆಯಲಾಗುತ್ತದೆ.
  • ಈ ದೇವಾಲಯವು ಕಾವೇರಿ ಮತ್ತು ಕೊಲೆರೋನ್ ನದಿಗಳಿಂದ ನಿರ್ಮಿತವಾದ ದ್ವೀಪದಲ್ಲಿದೆ. . ಇದು ದೇಶದ ಅತ್ಯಂತ ಬೃಹತ್ ದೇವಾಲಯವಾಗಿದ್ದು, ವಿಶ್ವದಲ್ಲೇ ಅತಿದೊಡ್ಡ ಧಾರ್ಮಿಕ ಸಂಕೀರ್ಣಗಳಲ್ಲೊಂದು. ಈ ದೇವಾಲಯ ಏಳು ಪ್ರಾಕಾರಗಳನ್ನು ಹೊಮದಿದ್ದು, ಇದಕ್ಕೆ ದಪ್ಪ ಹಾಗೂ ದೈತ್ಯ ರಕ್ಷಣಾ ಗೋಡೆಗಳಿವೆ. ಈ ಗೋಡೆಗಳು ದೇವಾಲಯವನ್ನು ಸಂರಕ್ಷಿಸುತ್ತಿವೆ. ಈ ಎಲ್ಲ ಪ್ರಾಕಾರಗಳಲ್ಲಿ ಒಟ್ಟು 21 ದೊಡ್ಡ ಗೋಪುರಗಳು ಇವೆ.

 

  1. ಕಾವೇರಿ ಟ್ರಿಬ್ಯೂನಲ್ ಗೆ ಆರು ತಿಂಗಳ ವಿಸ್ತರಣೆ

ಪ್ರಮುಖ ಸುದ್ದಿ

  • ಕೇಂದ್ರ ಜಲ ಸಂಪನ್ಮೂಲ  ನದಿ ಅಭಿವೃದ್ಧಿ ಮತ್ತು ಗಂಗಾ ಪುನಶ್ಚೇತನ  ಸಚಿವಾಲಯವು  ಕಾವೇರಿ ಜಲ ವಿವಾದ ನ್ಯಾಯಾಲಯವನ್ನು ಮೇ 02, 2018 ವರೆಗೆ ಆರು ತಿಂಗಳವರೆಗೆ ವಿಸ್ತರಿಸಿದೆ.

 

ಕಾವೇರಿ ಜಲವಿವಾದದ  ಬಗ್ಗೆ

  • ಕಾವೇರಿ ಕನ್ನಡಿಗರ ಜೀವನದಿ. ತಲಕಾವೇರಿಯಲ್ಲಿ ಹುಟ್ಟಿ ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಪುದುಚೇರಿ ಭೂಭಾಗಗಳಲ್ಲಿ ಹರಿದು ಬಂಗಾಳಕೊಲ್ಲಿ ಸೇರುವ ನದಿ ಕರ್ನಾಟಕದಲ್ಲಿ 380 ಕಿಲೋಮೀಟರ್ ಹರಿಯುತ್ತದೆ. ತಮಿಳುನಾಡಿನಲ್ಲಿ 375 ಕಿ.ಮೀ. ಹರಿಯುತ್ತದೆ. ನದಿನೀರಿಗೆ ಕರ್ನಾಟಕದ ಕೊಡುಗೆ 425 ಟಿಎಂಸಿ ಆದರೆ, ತಮಿಳುನಾಡಿನ ಕೊಡುಗೆ 201 ಟಿಎಂಸಿ. ನದಿನೀರಿನ ಬಳಕೆಯಲ್ಲಿ ವಿವಾದ ಚೋಳ- ಪಾಂಡ್ಯರ ಕಾಲದಿಂದಲೇ ಇತ್ತು

 

  • ಕಾವೇರಿ ನದಿಯ ನೀರು ಹಂಚಿಕೆಯ ವಿಚಾರವು ಭಾರತದ ಎರಡು ರಾಜ್ಯಗಳಾದ ಕರ್ನಾಟಕ ಹಾಗೂ ತಮಿಳುನಾಡಿನ ನಡುವೆ ಭೀಕರ ಸಂಘರ್ಷದ ಮೂಲವಾಗಿದೆ. ಈ ಸಂಘರ್ಷದ ಹುಟ್ಟು 1892 ಹಗೂ 1924ರ ಒಪ್ಪಂದಗಳಲ್ಲಿದೆ. ಅಂದಿನ ಮದ್ರಾಸ್ ಪ್ರಾಂತ್ಯ ಹಾಗೂ ಮೈಸೂರು ರಾಜ ಆಡಳಿತದ ರಾಜ್ಯದ ನಡುವೆ ಆದ ಈ ಒಪ್ಪಂದದವರೆಗೆ ಈ ಸಮಸ್ಯೆಯ ಹಿನ್ನೆಲೆ ವ್ಯಾಪಿಸುತ್ತದೆ.

 

  • ಇದುವರೆಗಿನ ಎಲ್ಲ ಕಾವೇರಿ ತೀರ್ಪುಗಳು ತಮಿಳುನಾಡಿನ ಪರವಾಗಿವೆ. ಅಂದರೆ ಅಂದಿನ ಮದ್ರಾಸ್ ಪ್ರಾಂತ್ಯದ ಪ್ರಾಬಲ್ಯದ ಕಾರಣದಿಂದ ಅದಕ್ಕೆ ಪೂರಕವಾಗಿ ಮಾಡಿಕೊಂಡ ಒಪ್ಪಂದವೇ ಇನ್ನೂ ಜಾರಿಯಲ್ಲಿದ್ದು, ಮರು ಒಪ್ಪಂದವನ್ನು ಪರಸ್ಪರ ಮಾತುಕತೆಗಳ ಮೂಲಕ ಉಭಯ ರಾಜ್ಯಗಳು ಮಾಡಿಕೊಂಡರೆ ಮಾತ್ರ ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಾಧ್ಯ ಎನ್ನುವುದು ಕರ್ನಾಟಕದ ನಿಲುವಾಗಿದೆ.

 

  • ಇನ್ನೊಂದೆಡೆ ತಮಿಳುನಾಡು, ಈಗಾಗಲೇ ಮೂರು ಲಕ್ಷ ಎಕರೆ ಬೇಸಾಯ ಭೂಮಿಯನ್ನು ಅಭಿವೃದ್ಧಿಪಡಿಸಿದ್ದು, ಹಾಲಿ ಇರುವ ನೀರಿನ ಬಳಕೆ ಪ್ರಮಾಣವನ್ನು ಅಂದಾಜಿಸಿ, ಇಡೀ ಪ್ರದೇಶದ ರೈತ ಸಮುದಾಯ ನದಿ ನೀರನ್ನೇ ಅವಲಂಬಿಸಿಕೊಂಡಿದೆ ಎನ್ನುವ ವಾದವನ್ನು ಮುಂದಿಟ್ಟಿದೆ. ಈ ಒಪ್ಪಂದ ವಿಧಾನದಲ್ಲಿ ಯಾವುದೇ ಬದಲಾವಣೆ ಆದರೂ, ರಾಜ್ಯದ ಲಕ್ಷಾಂತರ ರೈತರ ಜೀವನಾಧಾರಕ್ಕೆ ಸಂಚಕಾರ ತರುತ್ತದೆ ಎಂಬ ವಾದ ಆ ರಾಜ್ಯದ್ದು.

 

  • ಈ ಹಿನ್ನೆಲೆಯಲ್ಲಿ ಭಾರತ ಸರ್ಕಾರ 1990ರಲ್ಲಿ ಕಾವೇರಿ ವಿವಾದ ಬಗೆಹರಿಸುವ ಸಲುವಾಗಿ ನ್ಯಾಯಮಂಡಳಿಯನ್ನು ನೇಮಕ ಮಾಡಿತು. ಸುಮಾರು ಹದಿನಾರು ವರ್ಷಗಳ ಕಾಲ ಉಭಯ ರಾಜ್ಯಗಳ ವಾದ- ಪ್ರತಿವಾದಗಳನ್ನು ಆಲಿಸಿದ ಬಳಿಕ ನ್ಯಾಯಮಂಡಳಿಯು, 2007ರ ಫೆಬ್ರವರಿ 5ರಂದು ಅಂತಿಮ ತೀರ್ಪು ನಿಡಿತು.

 

  • ಈ ನ್ಯಾಯಮಂಡಳಿ ತೀರ್ಪಿನ ಅನ್ವಯ ವಾರ್ಷಿಕವಾಗಿ ತಮಿಳುನಾಡಿಗೆ 419 ಶತಕೋಟಿ ಘನ ಅಡಿ ನೀರು ಸಲ್ಲಬೇಕು. 270 ಶತಕೋಟಿ ಘನ ಅಡಿ ನೀರು ಕರ್ನಾಟಕಕ್ಕೆ, 30 ಶತಕೋಟಿ ಘನ ಅಡಿ ನೀರು ಕೇರಳಕ್ಕೆ ಹಾಗೂ 700 ಕೋಟಿ ಘನ ಅಡಿ ನೀರು ಪುದುಚೇರಿಗೆ ಸಲ್ಲಬೇಕು. ಇಷ್ಟಾಗಿಯೂ ಈ ವಿವಾದ ಇತ್ಯರ್ಥವಾಗಲಿಲ್ಲ. ಇದರಿಂದಾಗಿ ಎಲ್ಲ ನಾಲ್ಕೂ ರಾಜ್ಯಗಳು ಪರಾಮರ್ಶೆ ಅರ್ಜಿಯನ್ನು ಸಲ್ಲಿಸಿ, ಕೆಲ ಸ್ಪಷ್ಟನೆಗಳನ್ನು ಬಯಸಿವೆ ಹಾಗೂ ಮರು ಒಪ್ಪಂದದ ಪ್ರಕಾರ, ಆದೇಶವನ್ನು ಬದಲಾವಣೆ ಮಾಡುವಂತೆ ಆಗ್ರಹಿಸಿವೆ.

 

  • ಕರ್ನಾಟಕದ ಸ್ಪಷ್ಟ ನಿಲುವು ಎಂದರೆ, ಕಾವೇರಿ ನದಿ ಹರಿಯುವಿಕೆಯಲ್ಲಿ ಕರ್ನಾಟಕದ ಪಾಲು ತಮಿಳುನಾಡಿಗಿಂತ ಅಧಿಕವಾಗಿದ್ದು, ತನ್ನ ಅರ್ಹತೆಗೆ ಅನುಗುಣವಾಗಿ ನದಿನೀರಿನ ಹಂಚಿಕೆಯಲ್ಲಿ ಪಾಲು ಸಿಕ್ಕಿಲ್ಲ. ಇದರ ಜತೆಗೆ ನ್ಯಾಯಮಂಡಳಿ, ತಮಿಳುನಾಡಿಗೆ ಪ್ರತಿ ವರ್ಷ ನಿಗದಿತ ವೇಳಾಪಟ್ಟಿಗೆ ಅನುಗುಣವಾಗಿ 192 ಟಿಎಂಸಿ ನೀರನ್ನು ಬಿಡುವಂತೆಯೂ ಕರ್ನಾಟಕ್ಕೆ ಸೂಚನೆ ನೀಡಿದೆ. ಆದರೆ ಪ್ರತಿಕೂಲ ಪರಿಸ್ಥಿತಿ ಇರುವ ಸಂದರ್ಭದಲ್ಲಿ ಯಾವ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಬೇಕು ಎನ್ನುವುದನ್ನು ನ್ಯಾಯಮಂಡಳಿ ಸೂಚಿಸಲ್ಲ.

 

ಕಾವೇರಿ ನದಿಯ ಅಣೆಕಟ್ಟುಗಳು

  • ಕರ್ನಾಟಕದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಪ್ರಮುಖವಾಗಿ ನಾಲ್ಕು ಅಣೆಕಟ್ಟುಗಳನ್ನು ನಿರ್ಮಿಸಲಾಗಿದೆ. ಅವುಗಳೆಂದರೆ ಕೃಷ್ಣರಾಜ ಸಾಗರ, ಕಬಿನಿ, ಹಾರಂಗಿ ಹಾಗೂ ಹೇಮಾವತಿ. ಇವುಗಳ ಒಟ್ಟು ನೀರು ದಾಸ್ತಾನು ಪ್ರಮಾಣ 37 ಟಿಎಂಸಿ ಅಡಿ. ತಮಿಳುನಾಡು ಪ್ರಮುಖವಾಗಿ ಮೂರು ದೊಡ್ಡ ಅಣೆಕಟ್ಟುಗಳನ್ನು ಹೊಂದಿದ್ದು, ಇವುಗಳೆಂದರೆ ಮೆಟ್ಟೂರು, ಭವಾನಿಸಾಗರ ಹಾಗೂ ಪೆರಿಯಾರ್. ಇವುಗಳ ಒಟ್ಟು ನೀರು ದಾಸ್ತಾನು ಸಾಮಥ್ರ್ಯ 136.54 ಟಿಎಂಸಿ ಅಡಿ.

 

ಬೇಡಿಕೆ

* ನೀರಾವರಿ ಎಲ್ಲ ನಾಲ್ಕೂ ರಾಜ್ಯಗಳಿಗೆ ಅಗತ್ಯವಿದೆ.

* ಇದು ಕೆಲ ಜಲವಿದ್ಯುತ್ ಯೋಜನೆಗಳಿಗೂ ಬಳಕೆಯಾಗುತ್ತದೆ.

* ಇದು ಬೆಂಗಳೂರು, ಮೈಸೂರು ಹಾಗೂ ಇತರ ಸಣ್ಣ ಪಟ್ಟಣಗಳು ಹಾಗೂ ಗ್ರಾಮಗಳ ಕುಡಿಯುವ ನೀರಿನ ಬೇಡಿಕೆಯನ್ನು ಕೂಡಾ ಪೂರೈಸಬೇಕಾಗುತ್ತದೆ.

* ತಮಿಳುನಾಡು ಹಾಗೂ ಕರ್ನಾಟಕದ ರೈತರು ಪ್ರಮುಖವಾಗಿ ಭತ್ತ ಮತ್ತು ಕಬ್ಬನ್ನು ಈ ನದಿಪಾತ್ರದ ಪ್ರದೇಶಗಳಲ್ಲಿ ಬೆಳೆಯುತ್ತಿದ್ದು, ಇದು ಹೆಚ್ಚಿನ ನೀರಿನ ಸಂಪನ್ಮೂಲ ಅಗತ್ಯವಾದ ಬೆಳೆಗಳಾಗಿವೆ.

 

ಏನು ಮಾಡಬಹುದು?

  • ಈ ವಿವಾದಕ್ಕೆ ಶಾಶ್ವತ ಪರಿಹಾರ ಒದಗಿಸಬೇಕಾದಲ್ಲಿ ನೀರಿನ ಬೇಡಿಕೆಯನ್ನು ಕಡಿಮೆ ಮಾಡುವುದು ಅನಿವಾರ್ಯವಾಗಿದೆ. ಜತೆಗೆ ಈ ಎರಡೂ ರಾಜ್ಯಗಳ ರೈತರು ಕಡಿಮೆ ಪ್ರಮಾಣದ ನದಿ ನೀರನ್ನು ಅವಲಂಬಿಸುವಂತೆ ಮಾಡುವುದು ಅಗತ್ಯವಾಗಿರುತ್ತದೆ.

 

 ಸವಾಲು ಏನು?

  • ಆದರೆ ಭಾರತ ನಿಜವಾಗಿ ಎದುರಿಸುತ್ತಿರುವ ಸವಾಲು ಎಂದರೆ ದೇಶಕ್ಕೆ ಇನ್ನೂ ವಿಶ್ವಾಸಾರ್ಹ ಹವಾಮಾನ ಮುನ್ಸೂಚನೆ ವ್ಯವಸ್ಥೆ ಇಲ್ಲದಿರುವುದು. ಅಂಥ ವಿಶ್ವಾಸಾರ್ಹ ವ್ಯವಸ್ಥೆ ಇದ್ದರೆ, ಪ್ರತಿ ವರ್ಷದ ಬಿತ್ತನೆ ಹಂಗಾಮಿನ ವೇಳೆಯಲ್ಲೇ ರೈತರು ಆ ವರ್ಷ ಯಾವ ಬೆಳೆಗಳನ್ನು ಬೆಳೆಯಬಹುದು ಎಂಬ ಬಗ್ಗೆ ನಿರ್ಧಾರಗಳನ್ನು ಕೈಗೊಳ್ಳಬಹುದಾಗಿದೆ. ನೀರಾವರಿ ಸೌಲಬ್ಯವನ್ನು ಗಮನದಲ್ಲಿಟ್ಟುಕೊಂಡು, ಅದಕ್ಕೆ ಸೂಕ್ತವಾದ ಬೆಳೆಗಳ ಬಿತ್ತನೆ ಮಾಡಬಹುದಾಗಿದೆ.

 

 

ಕಾವೇರಿ ಜಲವಿವಾದ ಪರಿಹಾರಕ್ಕೆ ಕೋಮತಿ ಮಾದರಿ

 

  • ಕಾವೇರಿ ನದಿ ನೀರು ಹಂಚಿಕೆ ವಿವಾದದ ಪ್ರಕರಣ ಸವೋಚ್ಚ ನ್ಯಾಯಾಲಯದಲ್ಲಿ ಇರುವಂತೆಯೇ, ಕಾವೇರಿ ನದಿ ನೀರು ಹಂಚಿಕೆಗಾಗಿ ಪ್ರಾಧಿಕಾರ ರಚನೆ ಕುರಿತು ತಮಿಳುನಾಡು ಒತ್ತಾಯಿಸುತ್ತಿದೆ. ಆದರೆ, ಇಂತಹ ಪ್ರಾಧಿಕಾರದ ಬದಲಾಗಿ, ಆಧುನಿಕ ತಂತ್ರಜ್ಞಾನವನ್ನು ಬಳಸಿ ನದಿ ನೀರು ಹಂಚಿಕೆ ಮಾಡಲು ಸಾಧ್ಯವಿದೆ ಎಂಬುದನ್ನು ನಾವು ಗಮನಿಸಬೇಕು. ಇಂಥ ವಿಧಾನದಿಂದ ಆಗುವ ಕೆಲವು ಪ್ರಮುಖ ಪ್ರಯೋಜನಗಳನ್ನು ಹೀಗೆ ಪಟ್ಟಿಮಾಡಬಹುದು.

 

# ಕಾವೇರಿ ನದಿಯ ಉಗಮ ಸ್ಥಾನದಿಂದ ಸಮುದ್ರ ಸೇರುವ ತನಕ, ನದಿ ಹಾಗೂ ಜಲಾಶಯಗಳಲ್ಲಿ ಎಷ್ಟು ನೀರು ಲಭ್ಯವಿದೆ, ಯಾವ ರಾಜ್ಯದಲ್ಲಿ ಎಷ್ಟು ನೀರು ಬಳಕೆಯಾಗಿದೆ ಮತ್ತು ಎಲ್ಲಿ ನೀರು ಪೋಲಾಗುತ್ತಿದೆ ಎಂದು ನಿಖರವಾಗಿ ತಿಳಿಯಲು ಸಾಧ್ಯವಾಗುತ್ತದೆ.

 

# ಮಳೆಯ ಕೊರತೆಯಿಂದಾಗುವ ಸಂಕಷ್ಟ ಪರಿಸ್ಥಿತಿಯಲ್ಲಿ, ನದಿಯಲ್ಲಿ ನೀರಿನ ಲಭ್ಯತೆ ತಿಳಿದು ನೀರು ಹಂಚಿಕೆ ನಿರ್ಧರಿಸಲು ಸಹಾಯಕವಾಗುತ್ತದೆ.

 

# ನದಿ ಮತ್ತು ಜಲಾಶಯಗಳಲ್ಲಿ ಇರುವ ನೀರಿನ ನಿಖರವಾದ ಮಾಹಿತಿ ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಕೇಂದ್ರ ಸರ್ಕಾರಕ್ಕೆ ದೊರೆಯುವುದರಿಂದ, ವಾಸ್ತವ ಸ್ಥಿತಿಯನ್ನು ಎಲ್ಲರಿಗೂ ತಿಳಿಸಿದಂತಾಗುತ್ತದೆ.

 

# ಕರ್ನಾಟಕದ ಜಲಾಶಯಗಳಲ್ಲಿ ನೀರು ಸಂಗ್ರಹವಿದ್ದರೂ ತನಗೆ ನೀಡುತ್ತಿಲ್ಲ ಎಂದು ತಮಿಳುನಾಡು ಆರೋಪ ಮಾಡುವುದು, ರಾಜ್ಯದಲ್ಲಿ ನೀರಿನ ಕೊರತೆ ಇದ್ದರೂ ತಮಿಳುನಾಡಿಗೆ ನೀರು ಬಿಡುವ ಪರಿಸ್ಥಿತಿಯನ್ನು ಕರ್ನಾಟಕ ಎದುರಿಸುವುದು ಈ ಮೊದಲಾದ ಸನ್ನಿವೇಶಗಳನ್ನು ಇದರಿಂದ ತಪ್ಪಿಸಬಹುದಾಗಿದೆ.

 

# ಕರ್ನಾಟಕ ಮತ್ತು ತಮಿಳುನಾಡು ರೈತರು ಎಷ್ಟು ಎಕರೆಯಲ್ಲಿ ಬೆಳೆ ಬೆಳೆದಿದ್ದಾರೆ ಮತ್ತು ಯಾವಾಗ ಮತ್ತು ಎಷ್ಟು ನೀರಿನ ಅಗತ್ಯವಿದೆ ಎಂದು ತಿಳಿದು ನೀರು ಹಂಚಿಕೆ ಮಾಡಲು ಸಾಧ್ಯವಾಗುತ್ತದೆ. ಅಗತ್ಯಕ್ಕಿಂತ ಹೆಚ್ಚು ನೀರು ಬಳಸುವುದು ಮತ್ತು ನೀರು ಪೋಲಾಗುವುದನ್ನು ಗುರುತಿಸಿ, ಹಾಗಾಗದಂತೆ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ.

 

ತಂತ್ರಜ್ಞಾನ ಬಳಸಿ ನದಿ ನೀರು ಹಂಚಿಕೆಯನ್ನು ಯಶಸ್ವಿಯಾಗಿ ಮಾಡುತ್ತಿರುವುದಕ್ಕೆ ಒಂದು ಉದಾಹರಣೆ- ಕೋಮತಿ ನದಿ ನೀರು ನಿರ್ವಹಣೆ ಮತ್ತು ಹಂಚಿಕೆ ಪ್ರಾಧಿಕಾರ. ಪ್ರಜಾಪ್ರಭುತ್ವ ವ್ಯವಸ್ಥೆ ಇರುವ ದಕ್ಷಿಣ ಆಫ್ರಿಕಾ ಮತ್ತು ಅರಸೊತ್ತಿಗೆ ಇರುವ ಸ್ವಾಜೀಲ್ಯಾಂಡ್ ದೇಶಗಳು, ತಮ್ಮ ನಡುವೆ ದೀರ್ಘ ಕಾಲದಿಂದ ಇದ್ದ ವಿವಾದವನ್ನು ಪರಿಹರಿಸಿ ಕೊಳ್ಳಲು ಅಧುನಿಕ ತಂತ್ರಜ್ಞಾನವನ್ನು ಯಶಸ್ವಿಯಾಗಿ ಬಳಸುತ್ತಿವೆ.

 

ಹೀಗಿದೆ ಕೋಮತಿ ನದಿ

 

# ಉಗಮ ಸ್ಥಾನ ದಕ್ಷಿಣ ಆಫ್ರಿಕಾ.11,209 ಚದರ ಕಿಲೋಮೀಟರ್ ಜಲಾನಯನ ಪ್ರದೇಶ

# ದಕ್ಷಿಣ ಆಫ್ರಿಕಾ, ಸ್ವಾಜೀಲ್ಯಾಂಡ್​ಗಳಲ್ಲಿ ಹರಿದು ನಂತರ ಮೊಜಾಂಬಿಕ್ ಗಡಿಯಲ್ಲಿರುವ ಕ್ರೋಕೋಡೈಲ್ ನದಿಯನ್ನು ಸೇರುತ್ತದೆ.

# 1962 ರಿಂದ 1998ರ ಅವಧಿಯಲ್ಲಿ ಈ ನದಿಗೆ ದಕ್ಷಿಣ ಆಫ್ರಿಕಾದಲ್ಲಿ 3, ಸ್ವಾಜೀಲ್ಯಾಂಡ್​ನಲ್ಲಿ 2 ಮತ್ತು ಮೊಜಾಂಬಿಕ್​ನಲ್ಲಿ 5 ಅಣೆಕಟ್ಟುಗಳನ್ನು ನಿರ್ವಿುಸಲಾಗಿದೆ.

  • ನದಿಯ ನೀರು ಹಂಚಿಕೆ ಕುರಿತು 1948 ರಲ್ಲಿ ದಕ್ಷಿಣ ಆಫ್ರಿಕಾ ಮತ್ತು ಸ್ವಾಜೀಲ್ಯಾಂಡ್ ನಡುವೆ ಒಪ್ಪಂದವೇರ್ಪಟ್ಟಿತು. ನದಿಗೆ ಅಣೆಕಟ್ಟುಗಳನ್ನು ನಿರ್ವಿುಸಿದ ನಂತರ, ನೀರು ಹಂಚಿಕೆ ಕುರಿತು ಈ ದೇಶಗಳ ನಡುವೆ ವಿವಾದ ಪ್ರಾರಂಭವಾಯಿತು.

ಪರಿಹಾರದ ಹಾದಿ

# 1992ರಲ್ಲಿ ಕೋಮತಿ ನದಿಕೊಳ್ಳದ ಅಭಿವೃದ್ಧಿ ಮತ್ತು ನೀರು ನಿರ್ವಹಣೆ ಕುರಿತು ಹೊಸ ಒಪ್ಪಂದವಾಯಿತು. ಈ ಒಪ್ಪಂದದ ಪ್ರಕಾರ, 250.9 ದಶಲಕ್ಷ ಕ್ಯೂಬಿಕ್ ಮೀಟರ್ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯವನ್ನು ದಕ್ಷಿಣ ಆಫ್ರಿಕಾದಲ್ಲಿ ಮತ್ತು 332 ದಶಲಕ್ಷ ಕ್ಯೂಬಿಕ್ ಮೀಟರ್ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯವನ್ನು ಸ್ವಾಜೀಲ್ಯಾಂಡ್​ನಲ್ಲಿ ನಿರ್ವಿುಸಲಾಯಿತು.

# 1993ರಲ್ಲಿ ಎರಡೂ ದೇಶಗಳ ಸಹಭಾಗಿತ್ವದಲ್ಲಿ ಕೋಮತಿ ನದಿ ಕೊಳ್ಳ ಜಲ ಮಂಡಳಿ ಸ್ಥಾಪನೆಯಾಯಿತು.

 

# 1998ರಲ್ಲಿ ಕೋಮತಿ ನದಿ ಕೊಳ್ಳ ನೀರು ಮಾಪನ ಮತ್ತು ನಿರ್ವಹಣೆಗಾಗಿ ಹಾಗೂ 1992ರ ಒಪ್ಪಂದದಂತೆ ನಿರ್ವಿುಸಿದ ಜಲಾಶಯಗಳ ನಿರ್ವಹಣೆಗಾಗಿ ಅಧುನಿಕ ತಂತ್ರಜ್ಞಾನ ಬಳಕೆ ಪ್ರಾರಂಭವಾಯಿತು.

 

ಕೋಮತಿ ನದಿ ಜಲವಿವಾದ ಪರಿಹರಿಸಲು ಬಳಸಲಾಗಿರುವ ಅಧುನಿಕ ತಂತ್ರಜ್ಞಾನ ಸ್ಥೂಲ ಮಾಹಿತಿ

 

# ವೈಜ್ಞಾನಿಕ ಅಧ್ಯಯನ, ದೂರಸಂವೇದಿ ತಂತ್ರಜ್ಞಾನ ಬಳಸಿ ನಡೆಸಿದ ಸಮೀಕ್ಷೆ ಮತ್ತು ಆಧುನಿಕ ಜಿ.ಐ.ಎಸ್ ತಂತ್ರಜ್ಞಾನ ಬಳಸಿ, ಸಮಗ್ರ ಕೋಮತಿ ನದಿ ಕಣಿವೆ ಜಲ ಯೋಜನೆಯ ನಕ್ಷೆಯನ್ನು ತಯಾರಿಸಲಾಗಿದೆ.

 

  • ಈ ನಕ್ಷೆಯಲ್ಲಿ ಜಲಾನಯನ ಪ್ರದೇಶ, ನದಿ ಪಾತ್ರ, ಅರಣ್ಯ ಪ್ರದೇಶ, ಅಣೆಕಟ್ಟುಗಳು, ಜನವಸತಿ ಪ್ರದೇಶಗಳು, ಹೀಗೆ ಸಮಗ್ರ ಮಾಹಿತಿಯಿದೆ. ಸ್ವಾಜೀಲ್ಯಾಂಡ್ ಮತ್ತು ದಕ್ಷಿಣ ಆಫ್ರಿಕಾ ಅಧಿಕಾರಿಗಳಿಗೆ ಈ ನಕ್ಷೆ ಮತ್ತು ಸಮಗ್ರ ಮಾಹಿತಿ ದೊರೆತಿರುವುದರಿಂದಾಗಿ ಪರಸ್ಪರರ ಜಲಾನಯನ ಪ್ರದೇಶ ಮತ್ತು ಜಲಾಶಯಗಳ ಕುರಿತು ಪಾರದರ್ಶಕತೆ ಇದೆ. (ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಕೇಂದ್ರ ಸರ್ಕಾರಗಳ ಹತ್ತಿರ ಉಗಮ ಸ್ಥಾನದಿಂದ ಸಮುದ್ರ ಸೇರುವ ತನಕ ಕಾವೇರಿ ನದಿ ಕುರಿತು ಸಮಗ್ರ ಮಾಹಿತಿ ನೀಡುವ ಇಂತಹ ನಕ್ಷೆ ಅಗತ್ಯವಿದೆ)
  • ಅಧುನಿಕ ಡೇಟಾ ಲಾಗರ್ ತಂತ್ರಜ್ಞಾನ ಬಳಸಿ, ಕೋಮತಿ ನದಿಯ ನೀರಿನ ಗುಣಮಟ್ಟ ಕುರಿತು ಮಾಹಿತಿಯನ್ನು ನಿರಂತರವಾಗಿ ಸಂಗ್ರಹಿಸಿ, ಉಭಯ ದೇಶಗಳಿಗೆ ನೀಡಲಾಗುತ್ತಿದೆ. ಪರಿಸರ ಮಾಲಿನ್ಯ, ಅಂತರ್ಜಲ ಮಾಲಿನ್ಯ, ಹೀಗೆ ವಿವಿಧ ಕಾರಣಗಳಿಂದಾಗಿ ನದಿ ನೀರಿನ ಗುಣಮಟ್ಟದಲ್ಲಿ ವ್ಯತ್ಯಯವುಂಟಾದರೆ, ಎಚ್ಚರಿಕೆಯ ಸಂದೇಶಗಳನ್ನು ಉಭಯ ದೇಶಗಳಿಗೆ ನೀಡಲಾಗುತ್ತದೆ. ಇದರಿಂದ, ಯಾವ ದೇಶದಲ್ಲಿ, ಯಾವ ಕಾರಣದಿಂದಾಗಿ ನದಿ ಮಾಲಿನ್ಯ ಉಂಟಾಯಿತು, ಯಾವ ಪ್ರದೇಶಗಳ ಜನ, ಜಾನುವಾರುಗಳಿಗೆ ನೀರು ಬಳಸದಂತೆ ನಿರ್ಬಂಧಿಸಬೇಕು, ಮಾಲಿನ್ಯ ನಿವಾರಣೆಗಾಗಿ ಏನು ಕ್ರಮ ಕೈಗೊಳ್ಳಬೇಕು ಎಂದು ಉಭಯ ರಾಷ್ಟ್ರಗಳ ಅಧಿಕಾರಿಗಳು ರ್ಚಚಿಸಿ, ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತಿದೆ. (ಕಾವೇರಿ ನದಿ ಮಾಲಿನ್ಯಕ್ಕೆ ಕರ್ನಾಟಕ ಕಾರಣವೆಂದು ತಮಿಳುನಾಡು ನ್ಯಾಯಾಲಯದಲ್ಲಿ ಆರೋಪ ಮಾಡಿರುವುದನ್ನು ಇಲ್ಲಿ ಸ್ಮರಿಸಬಹುದು)
  • ಕೋಮತಿ ನದಿ ಕುರಿತು ಸ್ವಯಂಚಾಲಿತವಾಗಿ ಮಾಹಿತಿ ಸಂಗ್ರಹಿಸಿ, ನೀಡಲು ಡೇಟಾ ಲಾಗರ್​ಗಳನ್ನು ಬಳಸಲಾಗುತ್ತಿದೆ. ಉದಾಹರಣೆಗೆ ಜಲಾನಯನ ಪ್ರದೇಶದಲ್ಲಿರುವ ತಾಪಮಾನ, ನೀರಿನ ತೇವಾಂಶ, ಮಳೆಯ ಪ್ರಮಾಣ, ಭೂಮಿ ಸವಕಳಿ/ಕುಸಿತ, ಪ್ರವಾಹ ಪರಿಸ್ಥಿತಿ, ಹೀಗೆ ಅನೇಕ ವಿವರಗಳನ್ನು ನಿರಂತರವಾಗಿ ಪಡೆಯಲು ಸಾಧ್ಯವಿದೆ.
  • ಹೀಗೆ ಡೇಟಾ ಲಾಗರ್​ಗಳಿಂದ ದೊರೆಯುವ ಮಾಹಿತಿ, ಜಿ.ಐ.ಎಸ್ ತಂತ್ರಜ್ಞಾನ ಹಾಗೂ ಆಧುನಿಕ ವಿಶ್ಲೇಷಣೆ ಮತ್ತು ಮಾಡಲಿಂಗ್ ತಂತ್ರಾಂಶಗಳನ್ನು ಬಳಸುವುದರಿಂದ ವಾಸ್ತವ ಚಿತ್ರಣ ಎರಡೂ ದೇಶಗಳ ಅಧಿಕಾರಿಗಳಿಗೆ ಸುಲಭವಾಗಿ ದೊರೆಯುತ್ತದೆ.

 

  • ಡಿಜಿಟಲ್ ಪೋ›ಬ್​ಗಳು, ಫೋ› ಮೀಟರ್, ವಿಶೇಷ ಡೇಟಾ ಲಾಗರ್ ಮೊದಲಾದ ತಂತ್ರಜ್ಞಾನಗಳನ್ನು ಬಳಸಿ ಎರಡೂ ದೇಶಗಳಲ್ಲಿರುವ ಜಲಾಶಯಗಳ ಒಳಹರಿವು ಮತ್ತು ಹೊರಹರಿವು, ನೀರಿನ ಸಂಗ್ರಹವನ್ನು ಪ್ರತಿದಿನವೂ ನಿರಂತರವಾಗಿ ಮಾಪನ ಮಾಡಿ, ಮಾಹಿತಿ ನೀಡಲಾಗುತ್ತದೆ.

 

  • ಹೀಗಾಗಿ ವರ್ಷದ ಪ್ರಾರಂಭದಿಂದ ಅಂತ್ಯದವರೆಗೆ ಪ್ರತಿ ತಿಂಗಳು ಎರಡೂ ದೇಶಗಳ ಜಲಾಶಯಗಳಿಗೆ ದೊರೆತ ನೀರು, ಬಳಕೆಯಾದ ಮತ್ತು ವ್ಯರ್ಥವಾದ ನೀರಿನ ಪ್ರಮಾಣ ತಿಳಿಯಬಹುದಾಗಿದೆ. ಮಳೆಯ ಕೊರತೆಯಾದ ವರ್ಷದಲ್ಲಿ ನೀರು ಹಂಚಿಕೆ ಕುರಿತು ಒಪ್ಪಂದಕ್ಕೆ ಬರಲು ಕೂಡಾ ಈ ಮಾಹಿತಿ ಅನುಕೂಲವಾಗಿದೆ. ಎರಡೂ ದೇಶಗಳ ಕೃಷಿ, ಕುಡಿಯುವ ನೀರಿನ ಅಗತ್ಯ, ನದಿಯಲ್ಲಿ ಎಷ್ಟು ನೀರು ಲಭ್ಯವಿದೆ ಮತ್ತು ಹೇಗೆ ವೈಜ್ಞಾನಿಕವಾಗಿ ನೀರಿನ ಹಂಚಿಕೆ ಮಾಡಬಹುದು ಎಂದು ಲೆಕ್ಕ ಮಾಡಿ ಮಾಹಿತಿ ನೀಡಲು ಸಾಂಪ್ರದಾಯಿಕ ಡಿ.ಎಸ್.ಎಸ್ ತಂತ್ರಾಂಶವನ್ನು ಬಳಸಲಾಗುತ್ತದೆ.

 

  • ಈಗ ಜನಪ್ರಿಯವಾಗುತ್ತಿರುವ ಅಧುನಿಕ ಅನೆಲೆಟಿಕ್ಸ್ ತಂತ್ರಾಂಶಗಳನ್ನು, ಹವಾಮಾನ ಮಾಹಿತಿ ಮೊದಲಾದ ಮಾಹಿತಿಗಳನ್ನು ಬಳಸಿ ಕಾವೇರಿ ನದಿಯಲ್ಲಿ ಮತ್ತು ಜಲಾಶಯಗಳಲ್ಲಿ ಎಷ್ಟು ನೀರು ದೊರೆಯಬಹುದು ಮತ್ತು ನೀರಿನ ಕೊರತೆಯಾದರೆ ಎಷ್ಟು ಪ್ರಮಾಣದಲ್ಲಿ ಆಗಬಹುದು ಎಂದು ಮುಂಚಿತವಾಗಿಯೇ ತಿಳಿಯಬಹುದಾಗಿದೆ.

 

  • ಕೋಮತಿ ಜಲಯೋಜನೆಯ ಮಂಡಳಿಯು ಪ್ರತಿವರ್ಷ ಜಲ ಯೋಜನೆಯ ಸಮಗ್ರ ಮಾಹಿತಿ, ನೀರಿನ ಬಳಕೆಯ ಮಾಹಿತಿ ಮತ್ತು ನೀರು ನಿರ್ವಹಣೆಗಾಗಿ ತಗಲಿದ ವೆಚ್ಚ, ಸಿಬ್ಬಂದಿಯ ವಿವರಗಳು ಮತ್ತು ವೆಚ್ಚ, ಹೀಗೆ ಎಲ್ಲಾ ಮಾಹಿತಿಯುಳ್ಳ ವರದಿಯನ್ನು ಪ್ರಕಟಿಸುತ್ತದೆ. ಇದಲ್ಲದೆ, ಜಲಯೋಜನೆಯಲ್ಲಿ ಹೊಸ ತಂತ್ರಜ್ಞಾನ ಬಳಕೆಯ ಸಾಧ್ಯತೆ ಕುರಿತು ತಾಂತ್ರಿಕ ತಜ್ಞರ ಜೊತೆ ಮಂಡಳಿಯು ಸಂಪರ್ಕ ಹೊಂದಿರುತ್ತದೆ. ಕಾವೇರಿ ನದಿ ವಿಷಯದಲ್ಲಿಯೂ ಇಂಥ ಕ್ರಮಗಳನ್ನು ಅನುಸರಿಸಿದರೆ ಪರಿಹಾರದ ದಾರಿ ಕಾಣಬಹುದು.

 

 

  1. ಹೆಚ್ಚಿನ ವಾಣಿಜ್ಯ ನ್ಯಾಯಾಲಯಗಳನ್ನು ಸ್ಥಾಪಿಸಲು ಕೇಂದ್ರ ಸರಕಾರ ಚಿಂತನೆ

ಯಾಕೆ ?

  • ವ್ಯವಹಾರ ನಿಯತಾಂಕಗಳ ಸುಗಮತೆಯನ್ನು  (ease of doing business parameters. ) ಇನ್ನಷ್ಟು ಸುಧಾರಿಸಲು  ಜಿಲ್ಲೆಗಳಲ್ಲಿ ವಾಣಿಜ್ಯ ನ್ಯಾಯಾಲಯಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರವು ಪ್ರಸ್ತಾಪಿಸಿದೆ.

ಇದರ ಹಿನ್ನೆಲೆಯೇನು ?

  • ವಾಣಿಜ್ಯ ವಿವಾದಗಳಿಗೆ ಕಾನೂನು ಪರಿಹಾರ ಮತ್ತು ವ್ಯಾವಹಾರಿಕ ಒಪ್ಪಂದಗಳನ್ನು ಜಾರಿಗೊಳಿಸುವುದು ವಿಶ್ವ ಬ್ಯಾಂಕ್ ಶ್ರೇಣಿಯ ನಿಯತಾಂಕಗಳಾಗಿವೆ. ಒಪ್ಪಂದಗಳನ್ನು ಜಾರಿಗೆ ತರುವಲ್ಲಿ ಭಾರತವು ಶ್ರೇಯಾಂಕದಲ್ಲಿ 172 ರಿಂದ 164 ಕ್ಕೆ ಕುಸಿದಿದೆ .

 

ವಾಣಿಜ್ಯ ನ್ಯಾಯಾಲಯದ ಬಗ್ಗೆ

 

* ಹೈಕೋರ್ಟ್‍ನಲ್ಲಿ ವಾಣಿಜ್ಯ ನ್ಯಾಯಾಲಯಗಳು, ವಾಣಿಜ್ಯ ವಿಭಾಗ ಮತ್ತು ವಾಣಿಜ್ಯ ಮೇಲ್ಮನವಿ ವಿಭಾಗ ಮಸೂದೆ- 2015ನ್ನು ಲೋಕಸಭೆ ಧ್ವನಿಮತದಿಂದ ಆಂಗೀಕರಿಸಿದೆ.

* ಹೈಕೋರ್ಟ್‍ನಲ್ಲಿ ವಾಣಿಜ್ಯ ನ್ಯಾಯಾಲಯಗಳು, ವಾಣಿಜ್ಯ ವಿಭಾಗ ಮತ್ತು ವಾಣಿಜ್ಯ ಮೇಲ್ಮನವಿ ವಿಭಾಗ ಮಸೂದೆ- 2015ರ ಅನ್ವಯ ಒಂದು ಕೋಟಿ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ವ್ಯಾಜ್ಯಗಳನ್ನು ಹೈಕೋರ್ಟ್‍ನ ವಾಣಿಜ್ಯ ವಿಭಾಗದ ಬದಲಾಗಿ ವಾಣಿಜ್ಯ ಕೋರ್ಟ್‍ಗಳೇ ತನಿಖೆ ನಡೆಸಲಿವೆ.

* ರಾಷ್ಟ್ರಪತಿಯವರು ಈಗಾಗಲೇ ಹೈಕೋರ್ಟ್‍ನಲ್ಲಿ ವಾಣಿಜ್ಯ ನ್ಯಾಯಾಲಯಗಳು, ವಾಣಿಜ್ಯ ವಿಭಾಗ ಮತ್ತು ವಾಣಿಜ್ಯ ಮೇಲ್ಮನವಿ ವಿಭಾಗ ಆರಂಭಿಸುವ ಸಂಬಂದ ಸುಗ್ರೀವಾಜ್ಞೆ ಹೊರಡಿಸಿದ್ದಾರೆ.

* ಹೈಕೋರ್ಟ್‍ನಲ್ಲಿ ವಾಣಿಜ್ಯ ನ್ಯಾಯಾಲಯಗಳು, ವಾಣಿಜ್ಯ ವಿಭಾಗ ಮತ್ತು ವಾಣಿಜ್ಯ ಮೇಲ್ಮನವಿ ವಿಭಾಗಕ್ಕೆ ಸಂಬಂಧಿಸಿದ ಸುಗ್ರಿವಾಜ್ಞೆಯನ್ನು ಕೇಂದ್ರ ಸಚಿವ ಸಂಪುಟ 2015ರ ಅಕ್ಟೋಬರ್ 21ರಂದು ಅನುಮೋದಿಸಿತ್ತು.

ರಾಯ್ಪುರದಲ್ಲಿ ದೇಶದ ಮೊದಲ ವಾಣಿಜ್ಯ ನ್ಯಾಯಾಲಯ ಸ್ಥಾಪನೆ ಮಾಡಲಾಗಿದೆ .

What is a commercial dispute?

 

  • A commercial dispute is defined to include any dispute related to transactions between merchants, bankers, financiers, traders, etc. Such transactions deal with mercantile documents, partnership agreements, intellectual property rights, insurance, etc.

 

 

  1. ಪಾಕ್ ವಿರುದ್ಧ ಭಾರತಕ್ಕೆ ಸಿಕ್ತು ಮತ್ತೊಂದು ರಾಜತಾಂತ್ರಿಕ ಗೆಲವು

ಪ್ರಮುಖ ಸುದ್ದಿ

  • ನಿಷೇಧಿತ ಲಷ್ಕರ್-ಎ-ತೈಬಾ(ಎಲ್‍ಇಟಿ) ಮತ್ತು ಜಮಾತ್-ಉದ್ ದವಾ(ಜೆಯುಡಿ) ಇತ್ಯಾದಿ ಭಯೋತ್ಪಾದಕ ಸಂಘಟನೆಗಳ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಜಾಗತಿಕ ಕಾವಲು ಸಂಸ್ಥೆಯೊಂದು (ಗ್ಲೋಬಲ್ ವಾಚ್‍ಡಾಗ್) ಪಾಕಿಸ್ತಾನಕ್ಕೆ ತಾಕೀತು ಮಾಡಿದೆ. ಇದು ಭಾರತಕ್ಕೆ ಪಾಕ್ ವಿರುದ್ಧ ದೊರೆತ ಮತ್ತೊಂದು ದೊಡ್ಡ ರಾಜತಾಂತ್ರಿಕ ಗೆಲುವಾಗಿದೆ.

ಕಾರಣ

  • ಪಠಾಣ್‍ಕೋಠ್ ಸೇನಾ ಶಿಬಿರದ ದಾಳಿಯ ಸೂತ್ರಧಾರ ಹಾಗೂ ಜೈಷ್-ಎ-ಮಹಮದ್ ಉಗ್ರ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್‍ನನ್ನು ಅಂತಾರಾಷ್ಟ್ರೀಯ ಭಯೋತ್ಪಾದಕ ಪಟ್ಟಿಗೆ ಸೇರಿಸಬೇಕೆಂಬ ಭಾರತದ ಪ್ರಯತ್ನದ ನಡುವೆ ಈ ಬೆಳವಣಿಗೆ ಕಂಡು ಬಂದಿದೆ. ಆತನನ್ನು ಭಯೋತ್ಪಾದಕನ ಪಟ್ಟಿಗೆ ಸೇರಿಸಲು ಚೀನಾ ಮೊನ್ನೆಯಷ್ಟೇ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಅಡ್ಡಗಾಲು ಹಾಕಿ ಪಾಕಿಸ್ತಾನಕ್ಕೆ ಪರೋಕ್ಷ ಬೆಂಬಲ ಸೂಚಿಸಿತ್ತು.

 

  • ಎಲ್‍ಇಟಿ ಮತ್ತು ಜೆಯುಡಿನಂಥ ಉಗ್ರ ಸಂಘಟನೆಗಳ ವಿರುದ್ಧ ಕೈಗೊಳ್ಳಲಾದ ಕ್ರಮಗಳ ಬಗ್ಗೆ ಮುಂದಿನ ವರ್ಷ ಫೆಬ್ರವರಿ ವೇಳೆಗೆ ವರದಿಯನ್ನು ನೀಡುವಂತೆ ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (ಎಫ್‍ಎಟಿಎಫ್) ಪಾಕಿಸ್ತಾನಕ್ಕೆ ತಾಕೀತು ಮಾಡಿದೆ.
  • ಭಯೋತ್ಪಾದಕ ಸಂಘಟನೆಗಳ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಪಾಕಿಸ್ತಾನ ಮೇಲೆ ಮತ್ತಷ್ಟು ಒತ್ತಡ ಹೇರಲು ಬ್ಯೂನಸ್ ಏರಿಸ್‍ನಲ್ಲಿ ನಡೆದ ಎಫ್‍ಎಟಿಎಫ್‍ನ ಸಮಾವೇಶದಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.

 

  • ಪಾಕಿಸ್ತಾನದ ಭಯೋತ್ಪಾದನೆ ಕುಮ್ಮಕು ವಿರುದ್ಧ ಕ್ರಮ ಕೈಗೊಳ್ಳಲು ಸಹಕಾರ ನೀಡುವಂತೆ ಭಾರತವು ಅಂತಾರಾಷ್ಟ್ರೀಯ ಸಹಕಾರ ಪರಾಮರ್ಶೆ ಸಮೂಹ (ಐಸಿಆರ್‍ಜಿ) ಸಭೆಯಲ್ಲಿ ಮನವಿ ಮಾಡಿತ್ತು. ಈ ಕೋರಿಕೆಯನ್ನು ಗಂಭೀರವಾಗಿ ಪರಿಗಣಿಸಿದ ಜಾಗತಿಕ ಕಾವಲು ಸಂಸ್ಥೆಯು ಪಾಕ್‍ಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಇದು ಭಾರತಕ್ಕೆ ಲಭಿಸಿದ ರಾಜತಾಂತ್ರಿಕ ಗೆಲವುವಾಗಿದೆ.

 

 

21.ಅತಿ ಹೆಚ್ಚು ತಾಪಮಾನ ವರ್ಷವಾಗಲಿದೆ 2017

 ಪ್ರಮುಖ ಸುದ್ದಿ

  • ಮೂರು ಅತೀ ಹೆಚ್ಚು ತಾಪಮಾನ ವರ್ಷಗಳಲ್ಲಿ 2017 ದಾಖಲೆಯ  ಸ್ಥಾನ  ಪಡೆಯಲಿದೆ ಎಂದು  ವಿಶ್ವ ಹವಾಮಾನ ಸಂಸ್ಥೆಯಿಂದ ತಾತ್ಕಾಲಿಕ ವರದಿ ಪ್ರಕಟಿಸಿದೆ

Factors responsible for this:

  • Absence of the El Niño phenomenon. (ಎಲ್ ನಿನೊ ವಿದ್ಯಮಾನದ ಅನುಪಸ್ಥಿತಿ.)
  • The long-term trend of warming driven by human activities continues unabated.(ಮಾನವ ಚಟುವಟಿಕೆಯಿಂದ ಉಂಟಾಗುವ ತಾಪಮಾನ ಏರಿಕೆ )
  • Concentrations of CO2 in the atmosphere are the highest on record.(ವಾತಾವರಣದಲ್ಲಿ CO2 ನ ಸಾಂದ್ರತೆಗಳು ಅತ್ಯಧಿಕ ದಾಖಲೆ )

ವಿಶ್ವ ಹವಾಮಾನ ಸಂಸ್ಥೆ ಬಗ್ಗೆ

  • ಕೇಂದ್ರ ಕಾರ್ಯಾಲಯ : ಜಿನೀವಾ, ಸ್ವಿಜರ್ಲ್ಯಾಂಡ್
  • ವಿಶ್ವ ಹವಾಮಾನ ಸಂಸ್ಥೆಯು ವಿಶ್ವಸಂಸ್ಥೆಯ ವಿಶೇಷ ಉದ್ದೇಶದ ಸಂಸ್ಥೆಯಾಗಿ ಸೇರ್ಪಡೆಗೊಂಡಿತು.
  • ಇದು ಹವಾಮಾನ, ಜೈವಭೌಗೋಳಿಕ ವಿಜ್ಞಾನ ಹಾಗೂ ಆಪರೇಷನಲ್ ಹೈಡ್ರಾಲಜಿ ವಿಷಯಗಳ ಬಗ್ಗೆ ಅಧ್ಯಯನಗಳನ್ನು ಕೈಗೊಳ್ಳುವ ಕಾರ್ಯವನ್ನು ಮಾಡುತ್ತಾ ಬಂದಿದೆ.

 

Share