1st AUGUST MLP-MODEL ANSWERS

1st   AUGUST  MLP

 

 

NOTE:: ದಯವಿಟ್ಟು  ಗಮನಿಸಿ ಕೆಳಗಿನ ಉತ್ತರಗಳು‘  ‘ಮಾದರಿ ಉತ್ತರಗಳುಎಂಬುದನ್ನು ನೆನಪಿಡಿ. ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ PROPER SOURCE ಎಲ್ಲದೇ ಇರುವುದರಿಂದ  ನಾವು ಮುಖ್ಯ ಪರೀಕ್ಷೆಯಲ್ಲಿ ನೀವು ಯಾವ ರೀತಿರೆಯಬೇಕು ಮತ್ತು ನಿಮ್ಮ ಸಮಯವನ್ನು ಉಳಿಸಲು ಕೊಡುತ್ತಿರುವ  ವಿಸ್ತಾರವಾದ ಸಾರಾಂಶ, ನಾವುಗಳು ಇಲ್ಲಿ ಪದಗಳ ಮಿತಿ ಗಣನೆಗೆ ತೆಗೆದುಕೊಂಡಿಲ್ಲ ಏಕೆಂದರೆ ಒಂದು ಪ್ರಶ್ನೆಗೆ ಎಷ್ಟು ಸಾದ್ಯೋವೊ ಅಷ್ಟು ಇನ್ಫಾರ್ಮಶನ್ ಕೊಟ್ಟಿರುತ್ತೆವೆ. ನಾವು ಒದಗಿಸುತ್ತಿರುವ ವಿಷಯವು ಪ್ರಶ್ನೆಯ ಬೇಡಿಕೆಯನ್ನು ಪೂರೈಸುತ್ತದೆ ಮತ್ತು ಅದೇ ಸಮಯದಲ್ಲಿ ನಿಮಗೆ ಹಿನ್ನೆಲೆ ಮಾಹಿತಿ ರೂಪದಲ್ಲಿ ಹೆಚ್ಚುವರಿ ಅಂಕಗಳನ್ನು ಗಳಿಸಲು ಅನುಕೂಲಕರವಾಗುತ್ತದೆ.

 

GENERAL STUDIES PAPER-1(ಸಾಮಾನ್ಯ ಅಧ್ಯಾಯ)

 

1.The narrative of slavery in India has changed to complement the changing needs of industries. Comment.

(ಕೈಗಾರಿಕೆಗಳಲ್ಲಿ  ಬದಲಾಗುತ್ತಿರುವ ಅಗತ್ಯತೆಗಳಿಗೆ ಪೂರಕವಾಗಿ   ಭಾರತದಲ್ಲಿ  ಗುಲಾಮಗಿರಿಯ ನಿರೂಪಣೆಯು ಸಹ  ಬದಲಾಗುತ್ತಿದೆ .ವ್ಯಾಖ್ಯೆಸಿಸಿ.)

   (150 ಪದಗಳು)

 

 

ಇತ್ತೀಚಿಗೆ ಆಸ್ಟ್ರೇಲಿಯಾ ಮೂಲದ ಮಾನವ ಹಕ್ಕು ಸಂಘಟನೆ ವಾಕ್ ಫೀ ಫೌಂಡೇಶನ್   ಸಮೀಕ್ಷೆ ನಡೆಸಿ 2018ರ ಜಾಗತಿಕ ಗುಲಾಮಗಿರಿ ಸೂಚ್ಯಂಕವನ್ನು ಬಿಡುಗಡೆ ಮಾಡಿದೆ.ಅದರ ಪ್ರಕಾರ ಗುಲಾಮಗಿರಿ, ಜೀತದಾಳು ಪದ್ಧತಿ ಇತ್ತೀಚಿನ ದಿನಗಳಲ್ಲಿ ಚಾಲ್ತಿಯಲ್ಲಿಲ್ಲ ಎಂದು ಹೇಳಲಾಗುತ್ತಿದೆಯಾದರೂ ಇಂದಿಗೂ ವಿವಿಧ ರೂಪಗಳಲ್ಲಿ ಗುಲಾಮಗಿರಿ ವ್ಯವಸ್ಥೆ ಜಾರಿಯಲ್ಲಿದೆ ಎಂದು ಕಂಡು ಬರುತ್ತದೆ.

 

ಗುಲಾಮಗಿರಿ ಎಂಬುದು ಒಂದು ವ್ಯವಸ್ಥೆಯಾಗಿದ್ದು, ಇದರಡಿಯಲ್ಲಿ ಜನರನ್ನು ಸ್ವತ್ತಿನಂತೆ ಕಾಣಲಾಗುತ್ತದೆ. ಅಲ್ಲದೇ ಅವರನ್ನು ದುಡಿಮೆಗಾಗಿ ಬಲವಂತಪಡಿಸಲಾಗುತ್ತದೆ. ಗುಲಾಮರನ್ನು ಬಂಧಿಸಿದಾಗಿನಿಂದ, ಕೊಂಡುಕೊಂಡಾಗಿನಿಂದ ಅಥವಾ ಹುಟ್ಟಿನಿಂದಲೆ ಅವರ ಇಚ್ಛೆಗೆ ವಿರುದ್ಧವಾಗಿ ಇಟ್ಟುಕೊಳ್ಳಬಹುದು. ಅಲ್ಲದೇ ಅವರು ದುಡಿಯಲು ನಿರಾಕರಿಸಿದಲ್ಲಿ ಅಥವಾ ಪ್ರತಿಫಲವನ್ನು ಅಪೇಕ್ಷಿಸಿದಲ್ಲಿ ಅವರ ಬದುಕುವ ಸ್ವತಂತ್ರವನ್ನು ಕಿತ್ತುಕೊಳ್ಳಬಹುದಾಗಿತ್ತು. ಗುಲಾಮಗಿರಿ, ಅನೇಕ ಸಂಸ್ಕೃತಿ ಗಳಲ್ಲಿ ಅಸ್ತಿತ್ವದಲ್ಲಿದಂತಹ ಬರಹ ದಾಖಲೆಗಳನ್ನು ಹಿಂದಿನದ್ದೆಂದು ತಿಳಿಸುತ್ತದೆ. ಅಲ್ಲದೇ ಕೆಲವು ಐತಿಹಾಸಿಕ ಸಂದರ್ಭಗಳಲ್ಲಿ ಮಾಲೀಕರು ಗುಲಾಮರನ್ನು ಹತ್ಯೆಮಾಡುವುದು ಕಾನೂನು ಬದ್ಧವಾಗಿತ್ತು.

 

ಗುಲಾಮಗಿರಿಯು ಅತ್ಯಂತ ಹಳೆಯ ನಾಗರಿಕತೆಯಾದ ಸುಮರ್ ನಲ್ಲಿ ಕಂಡುಬಂದಿದೆ. ಅಷ್ಟೇ ಅಲ್ಲದೇ ಪ್ರಾಚೀನ ಈಜಿಪ್ಟ್, ಪ್ರಾಚೀನ ಚೀನಾ, ಅಕ್ಕೇಡಿಯನ್ ಸಾಮ್ರಾಜ್ಯ, ಅಸ್ಸಿರಿಯಾ, ಪ್ರಾಚೀನ ಭಾರತ, ಪ್ರಾಚೀನ ಗ್ರೀಸ್, ರೋಮನ್ ಸಾಮ್ರಾಜ್ಯ, ಇಸ್ಲಾಂ ಕಲೀಫಗಿರಿ, ಮತ್ತು ಅಮೇರಿಕಾದ ಪೂರ್ವ- ಕೊಲಂಬಿಯನ್ ನಾಗರಿಕತೆಗಳನ್ನು ಒಳಗೊಂಡಂತೆ ಬಹುಪಾಲು ಇತರ ಪ್ರಾಚೀನ ನಾಗರಿಕತೆಗಳಲ್ಲು ಕಂಡುಬಂದಿದೆ.  ಇಂತಹ ವ್ಯವಸ್ಥೆಗಳು, ಸಾಲದ-ಜೀತಗಾರಿಕೆ, ಅಪರಾಧಕ್ಕೆ ಶಿಕ್ಷೆ, ಯುದ್ಧದ ಖೈದಿಗಳ ದಾಸ್ಯ,ಮಗುವಿನ ಪರಿತ್ಯಾಗ ಮತ್ತು ಗುಲಾಮರಿಗೆ ಹುಟ್ಟುವ ಅವರ ಮಕ್ಕಳ ಜನನಗಳ ಮಿಶ್ರಣವಾಗಿದೆ.  ಪ್ರಾಚೀನ ಗ್ರೀಸ್ ನಲ್ಲಿ ಗುಲಾಮಗಿರಿಗೆ ದೊರಗಿರುವ ದಾಖಲೆಗಳು ಮೈಸಿನಿಯನ್ ಗ್ರೀಸ್ ನ ಕಾಲಕ್ಕೆ ಕೊಂಡ್ಯುತ್ತವೆ. ಕ್ಲಾಸಿಕಲ್ ಅಥೇನಿಯನ್ನರು ಅತ್ಯಂತ ಹೆಚ್ಚು ಗುಲಾಮ ಜನಸಂಖ್ಯೆಯನ್ನು ಹೊಂದಿದ್ದರು ಎಂಬುದು ನಿರ್ದಿಷ್ಟವಾಗಿದ್ದು, ಸರಿಸುಮಾರಾಗಿ ಒಂದು ಮನೆಗೆ ಮೂರು ಅಥವಾ ನಾಲ್ಕು ಗುಲಾಮರಂತೆ ಕ್ರಿಸ್ತಪೂರ್ವ  6 ನೇ ಮತ್ತು 5 ನೇ ಶತಮಾನದಲ್ಲಿ ಸುಮಾರು 80,000 ಸಾವಿರದಷ್ಟು ಗುಲಾಮರನ್ನು ಹೊಂದಿದ್ದರು.

 

ಆಧುನಿಕ ಗುಲಾಮಗಿರಿ

 

  • ಆಧುನಿಕ ಗುಲಾಮಗಿರಿಯಲ್ಲಿ ಬಲವಂತವಾಗಿ ಕೆಲಸ ಮಾಡಿಸುವುದು, ಸಾಲಕ್ಕಾಗಿ ಮನುಷ್ಯರನ್ನು ಒತ್ತೆಯಾಳನ್ನಾಗಿಸಿಕೊಳ್ಳುವುದು, ಒತ್ತಾಯಪೂರ್ವಕ ವಿವಾಹ, ಗುಲಾಮಗಿರಿ ಮತ್ತು ಗುಲಾಮಗಿರಿ ಯಂತಹ ಅಭ್ಯಾಸಗಳು, ಮಾನವ ಕಳ್ಳ ಸಾಗಾಣಿಕೆ ಮುಂತಾದವುಗಳನ್ನು ಸೇರಿಸಲಾಗಿದೆ.
  • ವ್ಯಕ್ತಿಯೊಬ್ಬ ತನಗೆ ಇಚ್ಛೆ ಇಲ್ಲದೆ ಯಾರದೋ ಭಯ, ಹಿಂಸೆ, ದಬ್ಬಾಳಿಕೆ, ವಂಚನೆ ಮುಂತಾದವುಗಳಿಂದಾಗಿ ಕಾರ್ಯನಿರ್ವಹಿಸುವುದನ್ನು ಆಧುನಿಕ ಗುಲಾಮಗಿರಿ ಎನ್ನಲಾಗಿದೆ.

 

ಭಾರತದಲ್ಲಿ   ಗುಲಾಮಗಿರಿ ನಿರೂಪಣೆಯ ವಿವಿಧ  ರೂಪಗಳು

 ಜೀತಪದ್ಧತಿ

 

  • ಅತ್ಯಂತ ಹಳೆಯ ಮತ್ತು ನಿಷೇಧವಾಗಿದ್ದರೂ ಅಸ್ತಿತ್ವದಲ್ಲಿರುವ ಪದ್ಧತಿ

 

  • ಕುಟುಂಬದ ಹಿರಿಯರು ಮಾಡಿದ ಸಾಲವನ್ನು ತೀರಿಸುವ ಸಲುವಾಗಿ ಸಂಬಳವಿಲ್ಲದೇ ದುಡಿಮೆ
  • ಸಾಲ ಮಾಡಿದವರ ಮಕ್ಕಳು ಬಲಿಯಾಗುವುದು ಹೆಚ್ಚು. ಮಕ್ಕಳು ಇಲ್ಲದಿದ್ದರೆ ಪತಿಯ ಪರವಾಗಿ ಪತ್ನಿ ದುಡಿಯಬೇಕಾಗುತ್ತದೆ

 

  • ಮನೆಗೆಲಸ, ಹೊಲ-ಗದ್ದೆ, ಕಲ್ಲು ಗಣಿಗಾರಿಕೆ, ಮೀನುಗಾರಿಕೆ ಮತ್ತು ಇಟ್ಟಿಗೆ ತಯಾರಿಕಾ ಘಟಕಗಳಲ್ಲಿ ಇಂತಹ ಜೀತದಾಳುಗಳನ್ನು ಕಾಣಬಹುದು

 

ಮನೆಗೆಲಸದಾಳು

 

  • ಇದೊಂದು ಅಸಂಘಟಿತ ವಲಯ
  • ಮಹಿಳೆಯರು ಮತ್ತು ಮಕ್ಕಳು ಕಂಡು ಬರುತ್ತಾರೆ
  • ಕಡಿಮೆ ಸಂಬಳ ಮತ್ತು ಹೆಚ್ಚು ಅವಧಿಯ ದುಡಿಮೆ
  • ಮಕ್ಕಳನ್ನು ಖರೀದಿಸಿ ತಂದು ಮನೆಗೆಲಸಕ್ಕೆ ಇರಿಸಿಕೊಳ್ಳುವುದು ರೂಢಿಯಲ್ಲಿದೆ
  • ಹಲ್ಲೆ, ನಿಂದನೆ, ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರಗಳು ನಡೆಯುವ ಅಪಾಯ ಹೆಚ್ಚು

ಒತ್ತಾಯದ ಬಿಕ್ಷಾಟನೆ

 

  • ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ವ್ಯಾಪಕವಾಗಿದೆ
  • ವೃದ್ಧರು ಮತ್ತು ಮಕ್ಕಳನ್ನು ಬೆದರಿಕೆ ಒಡ್ಡಿ ಬಿಕ್ಷಾಟನೆಗೆ ದೂಡಲಾಗುತ್ತದೆ
  • ಬಿಕ್ಷೆಯಲ್ಲಿ ಸಂಗ್ರಹವಾದ ಹಣವನ್ನು ಯಾವುದೋ ಒಬ್ಬ ವ್ಯಕ್ತಿ/ಗುಂಪುಗಳಿಗೆ ನೀಡಬೇಕು
  • ಸಂತ್ರಸ್ತರಿಗೆ ಊಟವನ್ನು ಒದಗಿಸುವ ಕೆಲಸವನ್ನಷ್ಟೇ ಆ ವ್ಯಕ್ತಿ/ಗುಂಪುಗಳು ಮಾಡುತ್ತವೆ
  • ಮನೆಬಿಟ್ಟು ಬಂದ ಮಕ್ಕಳು, ಮಕ್ಕಳು ಹೊರದಬ್ಬಿದ ವೃದ್ಧರು ಈ ದಂದೆಗೆ ಬಲಿಯಾಗುವುದು ಹೆಚ್ಚು

ವೇಶ್ಯಾವಾಟಿಕೆ

 

  • ಭಾರತದಾಧ್ಯಂತ ಈ ದಂದೆ ವ್ಯಾಪಕವಾಗಿದೆ
  • ಬಾಲಕಿಯರು-ಯುವತಿಯರು- ಮಹಿಳೆಯರನ್ನು ವೇಶ್ಯಾವಾಟಿಕೆ ದಂದೆಯಲ್ಲಿರುವವರಿಗೆ ಮಾರಾಟ ಮಾಡುವುದು ಸಾಮಾನ್ಯವಾಗಿದೆ
  • ಪ್ರೀತಿ-ಮದುವೆಯ ಮೂಲಕ ವಂಚಿಸಿ ಯುವತಿಯರನ್ನು ದಂದೆಗೆ ದೂಡಲಾಗುತ್ತದೆ
  • ದಿನಗಟ್ಟಲೆ ಊಟ ನೀಡದೆ, ಕೂಡಿ ಹಾಕಿ ಗ್ರಾಹಕರ ಜತೆ ಲೈಂಗಿಕತೆಗೆ ಸಹಕರಿಸುವಂತೆ ಮಾಡಲಾಗುತ್ತದೆ…CLICK HERE TO READ MORE
Share