22nd SEPTEMBER- DAILY CURRENT AFFAIRS BRIEF

22nd SEPTEMBER

 

1.ಜಾಗತಿಕ ಬಹು ಆಯಾಮದ ಬಡತನ ಸೂಚ್ಯಂಕ 2018 (Multidimensional Poverty Index 2018)

SOURCEhttps://indianexpress.com/article/india/undp-report-lauds-indias-strides-in-reducing-poverty-in-past-decade/

ವಿದ್ಯಾರ್ಥಿಗಳ ಗಮನಕ್ಕೆ

ಪ್ರಿಲಿಮ್ಸ್ ಮತ್ತು ಮುಖ್ಯ ಪರೀಕ್ಷೆಗಾಗಿ – ಜಾಗತಿಕ ಬಹು ಆಯಾಮದ ಬಡತನ ಸೂಚ್ಯಂಕದ  ಬಗ್ಗೆ   ಮತ್ತು ಭಾರತದ ಪ್ರದರ್ಶನ  

ಪ್ರಮುಖ ಸುದ್ದಿ  

  • ಹತ್ತು ವರ್ಷಗಳಲ್ಲಿ ಬಡತನ ದರವನ್ನು ಶೇ 55 ರಿಂದ ಶೇ 28 ಕ್ಕೆ ಇಳಿದಿದೆ ಎಂದು 2018 ಜಾಗತಿಕ ಬಹು ಆಯಾಮದ ಬಡತನ ಸೂಚ್ಯಂಕ (ಎಂಪಿಐ) ಇದನ್ನು ಬಹಿರಂಗಪಡಿಸಿದೆ.

 

ಮುಖ್ಯ ಅಂಶಗಳು

  • ಈ ವರದಿಯು ಪ್ರಮುಖವಾಗಿ 2005-06 ಮತ್ತು 2015-16ರ ನಡುವೆ ಕಾಲಾವಧಿಯಲ್ಲಿ ಸುಮಾರು 271 ಮಿಲಿಯನ್ ಜನರು ಭಾರತ ದೇಶದಲ್ಲಿ ಬಡತನದಿಂದ ಹೊರಬಂದಿದ್ದಾರೆ ಎಂದು ತಿಳಿಸಿದೆ.
  • ಯುಎನ್ಡಿಪಿ ಮತ್ತು ಆಕ್ಸ್ಫರ್ಡ್ ಪಾವರ್ಟಿ ಮತ್ತು ಹ್ಯೂಮನ್ ಡೆವಲಪ್ಮೆಂಟ್ ಇನಿಶಿಯೇಟಿವ್ (ಒಪಿಐಐ) ಬಿಡುಗಡೆ ಮಾಡಿದ ದಾಖಲೆಗಳ ಪ್ರಕಾರ ತಿಳಿದು ಬಂದಿದೆ.ಇಷ್ಟೆಲ್ಲದರ ನಡುವೆಯು ಇಂದಿಗೂ ಭಾರತ ಅತಿ ಹೆಚ್ಚು ಬಡವರು ಇದ್ದಾರೆ ಎಂದು ಈ ವರದಿ ತಿಳಿಸಿದೆ. ಭಾರತವು ಬಡತನವನ್ನು ಕಡಿತಗೊಳಿಸಿರುವುದು ಹೆಚ್ಚು ಕಡಿಮೆ ಚೀನಾದಷ್ಟೇ ಎಂದು ತಿಳಿಸಿದೆ.

 

ಭಾರತದ ಪ್ರದರ್ಶನ

  • ಭಾರತವು ಬಡತನ ಕಡಿತದ ಪ್ರಮಾಣವು 2005/6 ರಿಂದ 2015/16 ರವರೆಗಿನ ದಶಕದಲ್ಲಿ – 635 ಮಿಲಿಯನ್ ನಿಂದ 364 ಮಿಲಿಯನ್ ಗೆ ಇಳಿಕೆಯಾಗಿದೆ.ಇನ್ನೊಂದು ಆಘಾತಕಾರಿ ಸಂಗತಿಯೆಂದರೆ 2015 ಮತ್ತು 2016ರಲ್ಲಿ 364 ಮಿಲಿಯನ್ ಜನಸಂಖ್ಯೆಯಲ್ಲಿ 156 ಮಿಲಿಯನ್ ಜನರು ಮಕ್ಕಳಾಗಿದ್ದಾರೆ ಎಂದು ವರದಿ ಹೇಳಿದೆ.
  • ಭಾರತದಲ್ಲಿ ಬಹುತೇಕ ಬಡವರು ಜಾರ್ಖಂಡ್ ಅರುಣಾಚಲ ಪ್ರದೇಶ, ಬಿಹಾರ, ಛತ್ತೀಸ್ಗಢ, ಮತ್ತು ನಾಗಾಲ್ಯಾಂಡ್ ಇದ್ದಾರೆ ಎಂದು ತಿಳಿದುಬಂದಿದೆ.ದೆಹಲಿ, ಕೇರಳ ಮತ್ತು ಗೋವಾಗಳು ಕಡಿಮೆ ಬಡತನ ಪ್ರಮಾಣವನ್ನು ಹೊಂದಿವೆ ಎನ್ನಲಾಗಿದೆ.
  • ಭಾರತವು (364 ಮಿಲಿಯನ್ ಜನರು) ನಂತರ, ಬಹು-ಆಯಾಮದ ಬಡತನದಲ್ಲಿ ವಾಸಿಸುವ ಅತಿ ಹೆಚ್ಚು ಜನರು ನೈಜೀರಿಯಾ (97 ಮಿಲಿಯನ್), ಇಥಿಯೋಪಿಯಾ (86 ಮಿಲಿಯನ್), ಪಾಕಿಸ್ತಾನ (85 ಮಿಲಿಯನ್) ಮತ್ತು ಬಾಂಗ್ಲಾದೇಶ (67 ಮಿಲಿಯನ್).ದೇಶಗಳಲ್ಲಿ ಇದ್ದಾರೆ ಎಂದು ವರದಿ ತಿಳಿಸಿದೆ.

 

ಜಾಗತಿಕ ಬಹು ಆಯಾಮದ ಬಡತನ ಸೂಚ್ಯಂಕದ  ಬಗ್ಗೆ

  • MPI ಬಡತನದ ಪ್ರಮಾಣವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಅಧ್ಯಯನ ಮಾಡುವ ಅಳತೆ ಸೂಚ್ಯಂಕವಾಗಿದೆ.
  • ಶಿಕ್ಷಣ, ಆರೋಗ್ಯ ಮತ್ತು ಜೀವನಮಟ್ಟಕ್ಕೆ ಸಂಬಂಧಿಸಿದಂತೆ ಹತ್ತು ಅಂಶಗಳನ್ನು ಇದು ಗಣನೆಗೆ ತೆಗೆದುಕೊಳ್ಳುತ್ತದೆ.
  • ಮಾನವ ಅಭಿವೃದ್ಧಿ ಸೂಚಂಕವನ್ನು ಅಧ್ಯಯನ ಮಾಡುವ ನಿಟ್ಟಿನಲ್ಲಿ ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯ ಯುಎನ್ಡಿಪಿ ಮತ್ತು ಒಪಿಎಎಚ್ಐ 2010 ರಲ್ಲಿ ಜಾಗತಿಕ ಎಂಪಿಐನ್ನು ಮೊದಲು ಅಭಿವೃದ್ಧಿಪಡಿಸಿತು….CLICK HERE TO READ MORE
Share