25th AUGUST-DAILY CURRENT AFFAIRS BRIEF

25th AUGUST

 

 

1.ನರೇಗಾ ಕನಿಷ್ಠ ವೇತನ ಏರಿಕೆಗೆ ಕೇಂದ್ರ ಸಿದ್ಧತೆ

SOURCE-https://www.businesstoday.in/current/economy-politics/govt-may-raise-minimum-wage-for-mgnrega-workers/story/281560.html

 

ವಿದ್ಯಾರ್ಥಿಗಳ ಗಮನಕ್ಕೆ

ಪ್ರಿಲಿಮ್ಸ್ ಪರೀಕ್ಷೆಗಾಗಿ – ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಬಗ್ಗೆ

ಮುಖ್ಯ ಪರೀಕ್ಷೆಗಾಗಿ -ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ) ಅಡಿ, ಕುಶಲಕರ್ಮಿಗಳಲ್ಲದ  ಕಾರ್ಮಿಕರಿಗೆ ನೀಡುವ ಕನಿಷ್ಠ ವೇತನ ನಿಗದಿ ಮಾನದಂಡವನ್ನು ಬದಲಿಸಲು  ಕೇಂದ್ರ ಸರ್ಕಾರ ರಚಿಸಿದ್ದ ತಜ್ಞರ ಸಮಿತಿ ವರದಿಯನ್ನು ವಿಶ್ಲೇಷಿಸಿ .

 

ಪ್ರಮುಖ ಸುದ್ದಿ

  • ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಮನರೇಗಾ)ಯಲ್ಲಿ ಕಾರ್ವಿುಕರ ವೇತನವನ್ನು ಏರಿಕೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ವಿವಿಧ ರಾಜ್ಯಗಳಲ್ಲಿ ಜಾರಿಯಲ್ಲಿರುವ ಕನಿಷ್ಠ ವೇತನಕ್ಕೆ ಸಮನಾಗಿ ಮನರೇಗಾ ಕಾರ್ವಿುಕರಿಗೆ ವೇತನ ನಿಗದಿ ಪಡಿಸಲು ಸರ್ಕಾರ ಈ ಕ್ರಮ ಕೈಗೊಂಡಿದೆ.

 

ಮುಖ್ಯ ಅಂಶಗಳು

ವೇತನ ಹೆಚ್ಚಳಕ್ಕೆ  ಕಾರಣ ?

 

  • ಮನರೇಗಾ ವೇತನ ಹಾಗೂ ಇತರ ಕಾರ್ವಿುಕರ ವೇತನಗಳನ್ನು ಆಯಾ ರಾಜ್ಯ ಸರ್ಕಾರಗಳು ಕಾಲಕ್ಕೆ ತಕ್ಕಂತೆ ಪರಿಷ್ಕರಣೆ ಮಾಡುತ್ತವೆ. ಕೆಲ ರಾಜ್ಯಗಳು ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕನಿಷ್ಠ ವೇತನವನ್ನು ಹಲವು ಬಾರಿ ಏರಿಕೆ ಮಾಡಿವೆ. ಇನ್ನುಳಿದ ರಾಜ್ಯಗಳ ಕಾರ್ವಿುಕರ ವೇತನ ಏರಿಕೆ ಕಂಡಿಲ್ಲ. ಈ ಅಸಮಾನತೆಯನ್ನು ಸರಿದೂಗಿಸುವ ಉದ್ದೇಶದಿಂದ ಮನರೇಗಾ ಕಾರ್ವಿುಕರ ವೇತನ ಹೆಚ್ಚಳಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ.

 

  • 2009ರಿಂದ ಕೇಂದ್ರ ಸರ್ಕಾರ ಮನರೇಗಾ ವೇತನ ಏರಿಕೆ ಮಾಡಿಲ್ಲ. ಆದರೆ ಕೆಲ ರಾಜ್ಯ ಸರ್ಕಾರಗಳು ನಿರಂತರ ವೇತನ ಏರಿಸುತ್ತ ಬಂದಿವೆ. ಬಿಹಾರ ವೇತನದಲ್ಲಿ ಶೇ. 41 ಏರಿಕೆ ಮಾಡಿದೆ. ಹರಿಯಾಣ ಸರ್ಕಾರ ಕೂಡ ವೇತನ ಏರಿಸಿದೆ.

 

  • ಗ್ರಾಮೀಣ ಪ್ರದೇಶದಲ್ಲಿನ ಆರ್ಥಿಕತೆ, ಅಭಿವೃದ್ಧಿಯಲ್ಲಿ ಮನರೇಗಾ ಮಹತ್ವದ ಪಾತ್ರ ವಹಿಸುತ್ತದೆ. ಹೀಗಾಗಿ ಈ ಯೋಜನೆಯಡಿ ಕಾರ್ವಿುಕರಿಗೆ ದೇಶಾದ್ಯಂತ ಸಮಾನ ವೇತನ ಸಿಗುವಂತಾಗಬೇಕು ಎಂಬ ಉದ್ದೇಶದಿಂದ ವೇತನ ಏರಿಕೆಗೆ ಕೇಂದ್ರ ಸರ್ಕಾರ ಮುಂದಾಗಿದೆ.

 

ಬದಲಾವಣೆಗೆ ಕಾರಣಗಳು

 

  • ಕೇಂದ್ರ ನಿಗದಿ ಮಾಡಿರುವ ಕನಿಷ್ಠ ವೇತನ, ಎಲ್ಲಾ ರಾಜ್ಯಗಳಲ್ಲಿನ ಕನಿಷ್ಠ ವೇತನಕ್ಕಿಂತ ಭಾರಿ ಕಡಿಮೆ ಇದೆ. ಈ ಅಂತರವನ್ನು ಕಡಿಮೆ ಮಾಡುವುದು

 

  • ಯೋಜನೆ ಅಡಿ ಕೆಲವು ರಾಜ್ಯಗಳು ನೀಡುತ್ತಿರುವ ವೇತನ ತೀರಾ ಕಡಿಮೆ ಇದೆ. ಹೆಚ್ಚು ವೇತನ ನೀಡುತ್ತಿರುವ ರಾಜ್ಯಕ್ಕಿಂತ ಕೆಲವು ರಾಜ್ಯಗಳು ₹ 109ರಷ್ಟು ಕಡಿಮೆ ವೇತನ ನೀಡುತ್ತಿವೆ. ಈ ತಾರತಮ್ಯವನ್ನು ಸರಿಪಡಿಸುವುದು

 

  • ವಿವಿಧ ರಾಜ್ಯಗಳಲ್ಲಿ ಈ ಸಾಲಿನಲ್ಲಿ ವೇತನ ಏರಿಕೆ ಪ್ರಮಾಣದಲ್ಲೂ ಭಾರಿ ಅಂತರವಿದೆ. ವೇತನ ಪರಿಷ್ಕರಣೆಗೆ ಏಕ ನಿಯಮ ಜಾರಿಗೆ ಚಿಂತನೆ.

 

ತಜ್ಞರ ಸಮಿತಿ ಶಿಫಾರಸುಗಳು

 

  • ಕೇಂದ್ರ ಸರ್ಕಾರ ಕನಿಷ್ಠ ವೇತನ ನಿಗದಿ ಮಾಡುವಾಗ, ಎಲ್ಲಾ ರಾಜ್ಯಗಳಲ್ಲಿ ಜಾರಿಯಲ್ಲಿರುವ ಕನಿಷ್ಠ ವೇತನವನ್ನು ಪರಿಗಣಿಸಬೇಕು

 

  • 1983ರ ಬಳಕೆ ಸ್ವರೂಪ ಮತ್ತು ಗ್ರಾಹಕ ಬೆಲೆ ಸೂಚ್ಯಂಕವನ್ನು ಆಧಾರವಾಗಿಟ್ಟುಕೊಂಡು, ನರೇಗಾದಲ್ಲಿ ಕನಿಷ್ಠ ವೇತನವನ್ನು ಕೇಂದ್ರ ನಿಗದಿ ಮಾಡಿದೆ. ಇಂದಿನ ಗ್ರಾಹಕ ಬೆಲೆ ಸೂಚ್ಯಂಕ ಮತ್ತು ಬಳಕೆ ಸ್ವರೂಪವನ್ನು ಆಧರಿಸಿ ಕನಿಷ್ಠ ವೇತನವನ್ನು ನಿಗದಿ ಮಾಡಬೇಕು

 

  • ಗ್ರಾಮೀಣ ಪ್ರದೇಶದ ಪ್ರತಿ ಕುಟುಂಬಕ್ಕೆ ಪ್ರತಿ ವರ್ಷ ದೊರೆಯಲಿರುವ ಕೆಲಸದ ದಿನಗಳು (ಕುಶಲಕರ್ಮಿಗಳಲ್ಲದ ಕೂಲಿ) 100 ಯೋಜನೆಯ ಫಲಾನುಭವಿ ಕುಟುಂಬಗಳು 10 ಕೋಟಿ.

 

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಬಗ್ಗೆ

 

  • 2009 ರಂದು ‘ರಾಷ್ಟ್ಟೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ’ (NREGS) ಯನ್ನು ‘ಮಹಾತ್ಮ ಗಾಂಧಿ ರಾಷ್ಟ್ಟೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MGNREGS) ಎಂದು ಮರುನಾಮಕರಣ ಮಾಡಲಾಯಿತು.

 

ಯೋಜನೆಯ  ಉದ್ದೇಶಗಳೆಂದರೆ:

  • ಸ್ವ ಇಚ್ಛೆಯಿಂದ ಅರ್ಜಿ ಸಲ್ಲಿಸುವ ಕರಕುಶಲ ದೈಹಿಕ ಕೆಲಸ ಬಯಸುವ ಗ್ರಾಮೀಣ ಪ್ರದೇಶದ ಸದಸ್ಯರಿಗೆ ಪ್ರತಿ ಕುಟುಂಬದ ಒಂದು ಆರ್ಥಿಕ ವರ್ಷದಲ್ಲಿ ಕನಿಷ್ಠ 100 ಮಾನವ ದಿನಗಳ ಉದ್ಯೋಗವನ್ನು ನೀಡಿ ಅವರ ಜೀವನಕ್ಕೆ ಭದ್ರತೆ ಒದಗಿಸುವುದು.
  • ಗ್ರಾಮೀಣ ಜನರಿಗೆ ದೀರ್ಘ ಕಾಲದ ಜೀವನ ಸಾಗಿಸಲು ಮಾರ್ಗಗಳನ್ನು ತಿಳಿಯಪಡಿಸುವುದು.

 

ಹಕ್ಕುಗಳು ಮತ್ತು ಅಧಿಕಾರಗಳು:

 

  • ಈ ಯೋಜನೆಯಡಿ ತೊಡಗಿಸಿಕೊಳ್ಳುವ ಕಾರ್ಮಿಕರಿಗೆ ಈ ಕೆಳಕಂಡ ಹಕ್ಕುಗಳು ಮತ್ತು ಅಧಿಕಾರಗಳನ್ನು ನೀಡಲಾಗಿದೆ.
  • ಕುಟುಂಬ ಉದ್ಯೋಗ ಚೀಟಿಯಲ್ಲಿ ಹೆಸರಿರುವ ಕುಟುಂಬದ ಎಲ್ಲಾ ವಯಸ್ಕರು, ಕರಕುಶಲ ದೈಹಿಕ ಕೆಲಸಕ್ಕಾಗಿ ಅರ್ಜಿ ಸಲ್ಲಿಸುವ ಹಕ್ಕು ಹೊಂದಿರುತ್ತಾರೆ.
  • ಉದ್ಯೋಗ ಕೋರಿಕೆ 15 ದಿನಗಳಲ್ಲಿ ಉದ್ಯೋಗ ಒದಗಿಸದಿದ್ದಲ್ಲಿ ಅರ್ಜಿದಾರರು ಆರ್ಥಿಕ ವರ್ಷದ ಮೊದಲ 30 ದಿನಗಳಿಗೆ ಕೂಲಿಯ 25% ರಷ್ಟು ಮಾತ್ರ ಉಳಿದ ಅವಧಿಗೆ ಶೇ30% ರಷ್ಟನ್ನು ನಿರುದ್ಯೋಗ ಭತ್ಯೆಯಾಗಿ ಪಡೆಯಲು ಹಕ್ಕುಳ್ಳವರಾಗಿರುತ್ತಾರೆ.
  • ಸಾಧ್ಯವಾದಷ್ಟರ ಮಟ್ಟಿಗೆ ಕೆಲಸವನ್ನು ಆ ಗ್ರಾಮದ ವ್ಯಾಪ್ತಿಯಲ್ಲಿ ಒದಗಿಸಬೇಕು. ಅವರು ವಾಸವಿರುವ ಗ್ರಾಮದಿಂದ 5ಕಿ.ಮೀ ಗಿಂತ ಹೆಚ್ಚಿನ ದೂರದಲ್ಲಿ ಕೆಲಸವನ್ನು ಒದಗಿಸಿದ್ದೇ ಆದರೆ ಕೂಲಿಯ ಶೇ.10 ರಷ್ಟನ್ನು ಹೆಚ್ಚುವರಿಯಾಗಿ ಮತ್ತು ಜೀವನ ವೆಚ್ಚಕ್ಕಾಗಿ ಪಡೆಯಲು ಹಕ್ಕುಳ್ಳವರಾಗಿರುತ್ತಾರೆ.
  • ಕೆಲಸ ಕೋರುವ ನೋಂದಾಯಿತ ಅರ್ಜಿದಾರರ ಪೈಕಿ ಕನಿಷ್ಠ 1/3 ರಷ್ಟಿರುವಂತೆ ಮಹಿಳೆಯರಿಗೆ ಆದ್ಯತೆ ಮೇರೆಗೆ ಉದ್ಯೋಗ ಒದಗಿಸಬೇಕು.
  • ಪಾವತಿಗೆ ಉಳಿದ 15 ದಿನಗೊಳಗಾಗಿ ಕೂಲಿಯನ್ನು ಪಾವತಿಸದಿದ್ದಲ್ಲಿ, ಉದ್ಯೋಗಿಯು ಕೂಲಿ ಪಾವತಿ ಅಧಿನಿಯಮ 1936(4/1936)ರ ಅನ್ವಯ ಪರಿಹಾರ ಪಡೆಯಲು ಹಕ್ಕುಳ್ಳವರಾಗಿರುತ್ತಾನೆ.
  • ಸಮಾನ ವೇತನ ಅಧಿನಿಯಮ 1976(25/1976)ರನ್ವಯ ಲಿಂಗಾಧಾರಿತ ತಾರತಮ್ಯ ಮಾಡತಕ್ಕದ್ದಲ್ಲ.
  • ಕಾಮಗಾರಿಯ ಸ್ಥಳದ ಸಮೀಪ ಕೂಲಿ ಕಾರ್ಮಿಕರು ಹಾಗೂ ಮಕ್ಕಳಿಗೆ ವಿಶ್ರಾಂತಿ ಪಡೆಯಲು ನೆರಳು ಮತ್ತು ಸ್ವಚ್ಚವಾದ ಕುಡಿಯುವ ನೀರಿನ ವ್ಯವಸ್ಥೆ ಮಾಡುವುದು.
  • ಕೆಲಸದ ಅವಧಿಯಲ್ಲಿ ಉಂಟಾಗಬಹುದಾದ ಸಣ್ಣಪುಟ್ಟ ಗಾಯಗಳಿಗಾಗಿ ಚಿಕಿತ್ಸೆ ನೀಡಲು ಪ್ರಥಮ ಚಿಕಿತ್ಸೆ ಪೆಟ್ಟಿಗೆ ಒದಗಿಸಬೇಕು.
  • ಕಾಮಗಾರಿಯ ಸ್ಥಳಕ್ಕೆ 5 ವರ್ಷಕ್ಕೂ ಕಡಿಮೆ ವಯಸ್ಸಿನ 5 ಕ್ಕಿಂತ ಹೆಚ್ಚಿನ ಮಕ್ಕಳು ಕಾರ್ಮಿಕರೊಂದಿಗೆ ಬಂದಲ್ಲಿ ಅವರನ್ನು ನೋಡಿಕೊಳ್ಳುವುದು ಕಾರ್ಮಿಕರ ಪೈಕಿ ಒಬ್ಬ ಮಹಿಳೆಯನ್ನು ನೇಮಿಸಬೇಕು ಮತ್ತು ದಿನದ ಕನಿಷ್ಠ ಕೂಲಿಯನ್ನು ಆ ಮಹಿಳೆಗೆ ಪಾವತಿಸಬೇಕು.
  • ಕಾಮಗಾರಿಯ ಸ್ಥಳದಲ್ಲಿ ಕಾಮಗಾರಿಗೆ ಸಂಬಂಧಿಸಿದಂತೆ ಕಾರ್ಮಿಕರಿಗೆ ಗಾಯಗಳಾದಲ್ಲಿ ಉಚಿತ ವೈದ್ಯಕೀಯ ಚಿಕಿತ್ಸೆ ನೀಡಬೇಕು.
  • ಕಾಮಗಾರಿ ಸಂಬಂಧ ಯಾವುದೇ ಕಾರ್ಮಿಕರಿಗೆ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಬೇಕಾದ ಅಗತ್ಯ ಕಂಡುಬಂದಲ್ಲಿ ಅವರು ಔಷಧಿ, ವೈದ್ಯಕೀಯ ಚಿಕಿತ್ಸೆ, ವಸತಿ, ಇತ್ಯಾದಿ ಉಚಿತ ವೈದ್ಯಕೀಯ ಸೌಲಭ್ಯಗಳನ್ನು ಪಡೆಯಲು ಹಕ್ಕುಳ್ಳವರಾಗಿರುತ್ತಾರೆ.
  • ಕಾಮಗಾರಿಯ ಕಾರಣದಿಂದಾಗಿ ಕಾರ್ಮಿಕರು ಶಾಶ್ವತವಾಗಿ ಅಂಗವಿಕಲರಾದರೆ ಅಥವಾ ಮೃತಪಟ್ಟರೆ ಸಂದರ್ಭಕ್ಕೆ ತಕ್ಕಂತೆ ಅವರು ಮತ್ತು ಅವರ ವಾರಸುದಾರರು 25,000/- ಅಥವಾ ಕೇಂದ್ರ ಸರ್ಕಾರ ನಿಗದಿಪಡಿಸಬಹುದಾದ ಪರಿಹಾರ ಪಡೆಯಲು ಹಕ್ಕುಳ್ಳವರಾಗಿರುತ್ತಾರೆ.
  • ಕಾಮಗಾರಿಯ ಸ್ಥಳದಲ್ಲಿ ಇರುವ ಮಕ್ಕಳಿಗೆ ಗಾಯಗಳಾದಲ್ಲಿ, ಶಾಶ್ವತ ಅಂಗವಿಕಲತೆಯಾದಲ್ಲಿ ಅಥವಾ ಮೃತಪಟ್ಟಲ್ಲಿ ಅವರೂ ಮೇಲಿನಂತೆ ಚಿಕಿತ್ಸೆ ಮತ್ತು ಪರಿಹಾರ ಪಡೆಯಲು ಹಕ್ಕುಳ್ಳವರಾಗಿರುತ್ತಾರೆ.

 

ಹಿಂದಿನ ಉದ್ಯೋಗ ಖಾತ್ರಿ ಯೋಜನೆಗಳಿಗೆ ಹೋಲಿಸಿದಾಗ ಯೋಜನೆಯಲ್ಲಿ ಕಂಡು ಬರುವ ಭಿನ್ನ ಅಂಶಗಳು:-

  • ಈ ಯೋಜನೆಯು ಕೂಲಿ ಕೆಲಸಕ್ಕೆ ಶಾಸನಬದ್ಧವಾದ ಖಾತ್ರಿಯನ್ನು ನೀಡುತ್ತದೆ.

 

  • ಈ ಯೋಜನೆಯ ಹಕ್ಕುಗಳ ಆಧಾರದ ಮೇಲೆ ಕೂಲಿ ಕೆಲಸವನ್ನು ಒದಗಿಸುತ್ತದೆ ಮತ್ತು ಉದ್ಯೋಗಾವಕಾಶ ಇಚ್ಛೆಯ ಮೇರೆಗೆ ಅವನ್ನು ತನ್ನ ಅನುಕೂಲಕರ ಸಮಯದಲ್ಲಿ ಪಡೆಯುವ ಸೌಲಭ್ಯ ಒದಗಿಸುತ್ತದೆ.
  • ಈ ಕಾಯ್ದೆಯು ಕೆಲಸಗಾರನಿಗೆ 15 ದಿನಗಳ ಒಳಗೆ ಕೆಲಸ ನೀಡಬೇಕೆಂದು ಶಾಸನಬದ್ಧವಾಗಿ ಹೇಳುತ್ತದೆ.
  • ಉದ್ಯೋಗವನ್ನು ನಿರ್ದಿಷ್ಟ ಅಥವಾ ನಿಗದಿತ ಸಮಯದಲ್ಲಿ ನೀಡಬೇಕೆಂದು ಕಾಯ್ದೆ ಬದ್ಧವಾಗಿ ಸೂಚಿಸುತ್ತದೆ ಮತ್ತು ನಿರುದ್ಯೋಗ ಭತ್ಯೆಯನ್ನು ಸೂಚಿಸುತ್ತದೆ.
  • ಈ ಯೋಜನೆಯು ರಾಜ್ಯಗಳಿಗೆ ಉದ್ಯೋಗವನ್ನು ಒದಗಿಸಲು ಪ್ರೇರಕ ಶಕ್ತಿಯನ್ನು ನೀಡುತ್ತದೆ ಮತ್ತು ಈ ಯೋಜನೆಗೆ ಹೆಚ್ಚಿಸಲಾಗುವ ಹಣದಲ್ಲಿ ಶೇ.90%ರಷ್ಟು ಕೇಂದ್ರವೇ ಭರಿಸಲಿದೆ. ಅದರ ಜೊತೆಯಲ್ಲಿ ರಾಜ್ಯವು ಉದ್ಯೋಗ ಒದಗಿಸುವಲ್ಲಿ ವಿಫಲವಾದರೆ ನಿರುದ್ಯೋಗ ಭತ್ಯೆಯನ್ನು ನೀಡುತ್ತದೆ.
  • ಈ ಹಿಂದೆ ಕೈಗೊಂಡ ಯೋಜನೆಗಳು ಕೆಲಸದ ಹಂಚಿಕೆಯ ಮೇಲೆ ನಿಗದಿಯಾಗಿದ್ದವು. ಆದರೆ ಈ ಯೋಜನೆ ಬೇಡಿಕೆ ಮೇಲೆ ಆಧಾರಿತವಾಗಿದೆ ಮತ್ತು ಬೇಡಿಕೆ ಆಧಾರದ ಮೇಲೆ ಸಂಪನ್ಮೂಲಗಳನ್ನು ವರ್ಗಾವಣೆ ಮಾಡಲಾಗಿದೆ. ಈ ಅಂಶವು ರಾಜ್ಯಗಳಿಗೆ ಮೀಸಲಾತ್ಮಕವಾಗಿ ಪ್ರೇರಕ ಅಂಶವಾಗಿ ಬಡಜನರಿಗೆ ಉದ್ಯೋಗವನ್ನು ಕಲ್ಪಿಸಲು ಅವಕಾಶ ಮಾಡಿಕೊಡುತ್ತದೆ.
  • ಈ ಯೋಜನೆಯು ವಿಶಾಲವಾದ ಮತ್ತು ಪಾರದರ್ಶಕವಾದ ರಕ್ಷಣಾಪೂರಕಗಳನ್ನು ಒಳಗೊಂಡಿದೆ….CLICK HERE TO READ MORE

 

 

Share