26th SEPTEMBER- DAILY CURRENT AFFAIRS BRIEF

26th SEPTEMBER

 

 

1.ಆಧಾರ್​ ಸಾಂವಿಧಾನಿಕ ಸಿಂಧುತ್ವ ಎತ್ತಿ ಹಿಡಿದ ಸುಪ್ರೀಂ ಕೋರ್ಟ್​

SOURCE- https://www.thehindubusinessline.com/news/supreme-court-verdict-on-constitutional-validity-of-aadhaar/article25045458.ece

 

ವಿದ್ಯಾರ್ಥಿಗಳ ಗಮನಕ್ಕೆ

ಪ್ರಿಲಿಮ್ಸ್ ಮತ್ತು ಮುಖ್ಯ ಪರೀಕ್ಷೆಗಾಗಿ – ಆಧಾರ್​ ಕಾರ್ಡ್ ನ ಅವಶ್ಯಕತೆ ಮತ್ತು ಅದರ ಸುತ್ತಲಿನ ವಿವಾದ

ಪ್ರಮುಖ ಸುದ್ದಿ

 

  • ಆಧಾರ್​ನ ಸಾಂವಿಧಾನಿಕ ಮಾನ್ಯತೆಯನ್ನು ಎತ್ತಿಹಿಡಿದಿರುವ ಸುಪ್ರೀಂ ಕೋರ್ಟ್​ ಮಹತ್ವದ ತೀರ್ಪು ಪ್ರಕಟಿಸಿದೆ. ಸಮಾಜದ ಕಟ್ಟಡಕಡೆಯ ವರ್ಗದ ಅಭ್ಯುದಯಕ್ಕೆ ಆಧಾರ್​ ನೆರವಾಗುತ್ತಿದೆ. ಅವರಿಗೊಂದು ಗುರುತು ನೀಡಿದೆ ಎಂದು ಅಭಿಪ್ರಾಯಪಟ್ಟಿದೆ.

ಮುಖ್ಯ ಅಂಶಗಳು

 

  • ಸಾಂವಿಧಾನಿಕ ಮಾನ್ಯತೆ ಪಡೆದಿರುವ ಆಧಾರ್​ನ ದತ್ತಾಂಶಗಳು ಅತ್ಯಂತ ಅಮೂಲ್ಯವಾದದ್ದು. ಅದರ ದತ್ತಾಂಶ ರಕ್ಷಣೆಗೆ ಕೇಂದ್ರ ಸರ್ಕಾರ ಆದಷ್ಟು ಬೇಗ ಸೂಕ್ತ ಕಾನೂನು ರೂಪಿಸಬೇಕು,” ಎಂದೂ ಒತ್ತಿ ಹೇಳಿತು.
  • “ಸಮಾಜದ ಕಟ್ಟಕಡೆಯ ಸಮುದಾಯದ ಅಭ್ಯುಧಯಕ್ಕೆ ಆಧಾರ್​ ನೆರವಾಗುತ್ತಿದೆ. ಅಲ್ಲದೆ, ಅವರಿಗೊಂದು ಗುರತು ಕಲ್ಪಿಸಿಕೊಟ್ಟಿದೆ. ಇನ್ಯಾವುದೇ ಗುರುತಿನ (ID) ಪ್ರಕಾರಗಳಿಗಿಂತಲೂ ಆಧಾರ್​ ಭಿನ್ನವಾಗಿದ್ದು, ಅದನ್ನು ನಕಲು ಮಾಡಲು ಸಾಧ್ಯವಿಲ್ಲ. ಯಾವತ್ತೂ ಕೂಡ ಉತ್ತಮವಾಗಿರುವುದಕ್ಕಿಂತಲೂ ವಿಶಿಷ್ಟವಾಗಿರುವುದು ಉಪಯುಕ್ತ. ಆಧಾರ್​ ಒಂದು ವಿಶಿಷ್ಟ ವ್ಯವಸ್ಥೆ,” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

 

  • “ಅರ್ಜಿದಾರರ ವಾದ ಅತ್ಯಂತ ಭಿನ್ನವಾದದ್ದು. ಆಧಾರ್​ ಕಾರ್ಡ್​ ಮತ್ತು ಗುರುತು ವ್ಯವಸ್ಥೆಯ ನಡುವೆ ವ್ಯತ್ಯಾಸಗಳಿವೆ. ಒಂದು ಬಾರಿ ಬಯೋಮೆಟ್ರಿಕ್​ ಮೂಲಕ ಸಂಗ್ರಹಿಸಿದ ಮಾಹಿತಿಯು ದತ್ತಾಂಶವಾಗಿ ಸಂಗ್ರಹವಾಗುತ್ತದೆ,”

 

  • ” ಮಾಹಿತಿಯನ್ನು ಖಾಸಗಿ ಸಂಸ್ಥೆಗಳೊಂದಿಗೆ ಹಂಚಿಕೊಳ್ಳುವ ಸೆಕ್ಷನ್​ 57 ಅನ್ನು ಸುಪ್ರೀಂ ಕೋರ್ಟ್​ ರದ್ದು ಮಾಡಿತು. ಅಲ್ಲದೆ, ಜನರಿಂದ ಸಂಗ್ರಹಿಸುವ ದತ್ತಾಂಶವನ್ನು ಆಧಾರ್​ ಪ್ರಧಿಕಾರ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯೊಂದಿಗೆ ಹಂಚಿಕೊಳ್ಳಬಾರದು,”ಎಂದೂ ಸುಪ್ರೀಂ ಕೋರ್ಟ್​ ಸ್ಪಷ್ಟ ಸೂಚನೆ ನೀಡಿದೆ.

ಹಿನ್ನಲೆ

  • ಆಧಾರ್​ ಮಾನ್ಯತೆಯನ್ನು ಪ್ರಶ್ನಿಸಿ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದವು. 2016ರಿಂದ ಈಚೆಗೆ, ಹೈಕೋರ್ಟ್​ನ ನಿವೃತ್ತ ನ್ಯಾಯಮೂರ್ತಿ ಕೆ.ಎಸ್​ ಪುಟ್ಟಸ್ವಾಮಿ ಅವರನ್ನೂ ಒಳಗೊಂಡಂತೆ 31 ಮಂದಿ ಈ ಸಂಬಂಧ ಸುಪ್ರೀಂ ಕೋರ್ಟ್​ನಲ್ಲಿ ಅರ್ಜಿ ಹಾಕಿದ್ದರು. ಆಧಾರ್​ ಎಂಬುದು ಅಸಾಂವಿಧಾನಿಕ.
  • ಇದು ಮೂಲಭೂತ ಹಕ್ಕುಗಳಲ್ಲಿ ಒಂದಾದ ಖಾಸಗಿತನದ ಹಕ್ಕನ್ನು ಉಲ್ಲಂಗಿಸುತ್ತದೆ ಎಂದು ಅರ್ಜಿದಾರರು ವಾದಿಸಿದ್ದರು. ಈ ಅರ್ಜಿಗಳ ಮೇಲೆ ಸುಪ್ರೀಂ ಕೋರ್ಟ್​ ಈ ವರೆಗೆ 38 ದಿನಗಳ ಸುದೀರ್ಘ ವಿಚಾರಣೆ ನಡೆಸಿದೆ. ಕಳೆದ ಮೇ 10ರಂದು ವಿಚಾರಣೆ ಪೂರ್ಣಗೊಳಿಸಿದ ನ್ಯಾಯಾಲಯ ತೀರ್ಪನ್ನು ಕಾಯ್ದಿರಿಸಿತ್ತು.

ಯಾವುದಕ್ಕೆ ಕಡ್ಡಾಯ

 

  • ಪಾನ್​ಗೆ ಆಧಾರ್​ ಅನ್ನು ಲಿಂಕ್​ ಮಾಡಲೇ ಬೇಕು.
  • ಅದಾಯ ತೆರಿಗೆ ರಿಟರ್ನ್ಸ್​ ಸಲ್ಲಿಸುವಾಗಲೂ ಬೇಕು ಆಧಾರ್​.
  • ಸರ್ಕಾರದ ಯಾವುದೇ ಕಲ್ಯಾಣ ಯೋಜನೆಗಳ ಫಲಾನುಭವಿಗಳಾಗಲು ಆಧಾರ್​ ನೀಡಲೇಬೇಕು.

ಯಾವುದಕ್ಕೆ ಕಡ್ಡಾಯವಲ್ಲ

 

  • ಯುಜಿಸಿ, ಎನ್​ಇಇಟಿ, ಸಿಬಿಎಸ್​ಇ ಪರೀಕ್ಷೆ ಆಧಾರ್​ ಕೇಳುವಂತಿಲ್ಲ.
  • ಶಾಲೆಗಳಿಗೆ ಮಕ್ಕಳನ್ನು ದಾಖಲಿಸುವಾಗಲೂ ನೀಡುವಂತಿಲ್ಲ.
  • ಖಾಸಗಿ ಕಂಪನಿಗಳೂ ವಿಶಿಷ್ಟ ಗುರುತಿನ ಚೀಟಿಯನ್ನು ಕೇಳುವಂತಿಲ್ಲ. ಅಲ್ಲದೆ, ಆಧಾರ್​ ಪ್ರಾಧಿಕಾರವೂ ತನ್ನ ಮಾಹಿತಿಯನ್ನು ಖಾಸಗಿಯವರಿಗೆ ನೀಡುವಂತಿಲ್ಲ (ಸೆಕ್ಷನ್​ 57 ರದ್ದು)
  • ಮೊಬೈಲ್​ ಸಿಮ್​ ಪಡೆಯುವಾಗಲೂ ಬೇಕಾಗಿಲ್ಲ.
  • ಬ್ಯಾಂಕ್​ ಖಾತೆ ತೆರಯುವ ಸಂದರ್ಭದಲ್ಲಿಯೂ ಆಧಾರ ಕೊಡಬೇಕಿಲ್ಲ.
  • ಡಿಜಿಟಲ್​ ವಾಲೆಟ್​ಗಳು (ಉದಾ: Paytm, ಅಮೆಜಾನ್​ ಪೇ) ವಿಶಿಷ್ಟ ಗುರತಿನ ಸಂಖ್ಯೆ ನೀಡಬೇಕಿಲ್ಲ….CLICK HERE TO READ MORE
Share