27th JULY MLP-MODEL ANSWERS

27th  JULY  MLP

 

NOTE:: ದಯವಿಟ್ಟು  ಗಮನಿಸಿ ಕೆಳಗಿನ ಉತ್ತರಗಳು‘  ‘ಮಾದರಿ ಉತ್ತರಗಳುಎಂಬುದನ್ನು ನೆನಪಿಡಿ. ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ PROPER SOURCE ಎಲ್ಲದೇ ಇರುವುದರಿಂದ  ನಾವು ಮುಖ್ಯ ಪರೀಕ್ಷೆಯಲ್ಲಿ ನೀವು ಯಾವ ರೀತಿರೆಯಬೇಕು ಮತ್ತು ನಿಮ್ಮ ಸಮಯವನ್ನು ಉಳಿಸಲು ಕೊಡುತ್ತಿರುವ  ವಿಸ್ತಾರವಾದ ಸಾರಾಂಶ, ನಾವುಗಳು ಇಲ್ಲಿ ಪದಗಳ ಮಿತಿ ಗಣನೆಗೆ ತೆಗೆದುಕೊಂಡಿಲ್ಲ ಏಕೆಂದರೆ ಒಂದು ಪ್ರಶ್ನೆಗೆ ಎಷ್ಟು ಸಾದ್ಯೋವೊ ಅಷ್ಟು ಇನ್ಫಾರ್ಮಶನ್ ಕೊಟ್ಟಿರುತ್ತೆವೆ. ನಾವು ಒದಗಿಸುತ್ತಿರುವ ವಿಷಯವು ಪ್ರಶ್ನೆಯ ಬೇಡಿಕೆಯನ್ನು ಪೂರೈಸುತ್ತದೆ ಮತ್ತು ಅದೇ ಸಮಯದಲ್ಲಿ ನಿಮಗೆ ಹಿನ್ನೆಲೆ ಮಾಹಿತಿ ರೂಪದಲ್ಲಿ ಹೆಚ್ಚುವರಿ ಅಂಕಗಳನ್ನು ಗಳಿಸಲು ಅನುಕೂಲಕರವಾಗುತ್ತದೆ.

 

GENERAL STUDIES PAPER-1(ಸಾಮಾನ್ಯ ಅಧ್ಯಾಯ)

 

1. Disorganised urbanization in one of the biggest reasons for problems associated with urbanization. Examine the issue and discuss the steps taken by government to address the challenges arising out of urbanization?

 

(ನಗರೀಕರಣಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಅಸ್ತವ್ಯಸ್ತವಾದ ನಗರೀಕರಣವು ಒಂದು  ದೊಡ್ಡ ಕಾರಣ . ಈ ಸಮಸ್ಯೆಯನ್ನು ಪರೀಕ್ಷಿಸಿ  ಮತ್ತು ನಗರೀಕರಣದಿಂದ ಉದ್ಭವಿಸುವ ಸವಾಲುಗಳನ್ನು ಎದುರಿಸಲು ಸರ್ಕಾರ ತೆಗೆದುಕೊಂಡ ಕ್ರಮಗಳನ್ನು ಚರ್ಚಿಸಿ)

  (250 ಪದಗಳು)

 

 

ನಗರೀಕರಣ ,ಒಂದು ದೇಶದ ಜನರನ್ನು ಗ್ರಾಮೀಣ, ನಗರೀಯ ಎಂದು ವರ್ಗೀಕರಿಸಬಹುದು. ಒಂದು ದೇಶದಲ್ಲಿ ಗ್ರಾಮೀಣ ಜನಸಂಖ್ಯೆಗೂ ನಗರೀಯ ಜನಸಂಖ್ಯೆಗೂ ಇರುವ ಅನುಪಾತ ಅಲ್ಲಿಯ ಆರ್ಥಿಕ, ಸಾಮಾಜಿಕ ಹಾಗೂ ಜನವಲಸೆಯ ಸ್ವರೂಪಗಳಿಗೆ ಅನುಗುಣವಾಗಿರುತ್ತದೆ. ನಗರ ಪ್ರದೇಶದ ಸಾಪೇಕ್ಷ ಬೆಳವಣಿಗೆಯ ಪ್ರಕ್ರಿಯೆಯೇ ನಗರೀಕರಣ. ನಗರ ಪ್ರದೇಶದಲ್ಲಿ ವಾಸಿಸುವ ಜನಸಂಖ್ಯೆಯಿಂದ ನಗರೀಕರಣದ ಪ್ರಮಾಣವನ್ನು ಅರಿಯಬಹುದು. ನಗರೀಯ ಕೇಂದ್ರಗಳು ಆರ್ಥಿಕ ಪ್ರಗತಿಯ ವೇಗವರ್ಧನೆಯ ಸಾಧನಗಳಾಗಿರುವುದುಂಟು. ಆದ್ದರಿಂದ ಅವುಗಳಿಂದ ಕೆಲವು ಅನುಕೂಲಗಳುಂಟು. ಆದರೆ ಅವುಗಳಿಂದ ಸಾಮಾಜಿಕವಾಗಿ, ಆರ್ಥಿಕವಾಗಿ, ಸಾಂಸ್ಕøತಿಕವಾಗಿ ಕೆಲವು ಸಮಸ್ಯೆಗಳೂ ಉದ್ಭವಿಸುತ್ತವೆ. ಅನುಕೂಲಗಳನ್ನು ಬಳಸಿಕೊಳ್ಳುವ ಮತ್ತು ಸಮಸ್ಯೆಗಳ ಪರಿಹಾರದ ದೃಷ್ಟಿಯಿಂದ ಒಂದು ದೇಶದ ನಗರೀಕರಣದ ಅಧ್ಯಯನ ಅಗತ್ಯವೆನಿಸುತ್ತದೆ.

ಜನಗಣತಿಯಲ್ಲಿ ನಗರೀಕರಣಕ್ಕೆ ಸಂಬಂಧಿಸಿದ ವಿವರಗಳನ್ನೂ ಸಾಮಾನ್ಯವಾಗಿ ಸಂಗ್ರಹಿಸಲಾಗುತ್ತದೆ. ಪ್ರತಿಯೊಂದು ದೇಶದ ಜನಸಂಖ್ಯೆಯನ್ನೂ ಸಾಮಾನ್ಯವಾಗಿ ನಗರೀಯ ಹಾಗೂ ಗ್ರಾಮೀಣ ಎಂದು ವರ್ಗೀಕರಿಸುವುದು ಸಾಮಾನ್ಯವಾದರೂ ಈ ವಿಚಾರದಲ್ಲಿ ಎಲ್ಲ ದೇಶಗಳೂ ಒಂದೇ ಮಾನದಂಡವನ್ನು ಇಟ್ಟುಕೊಂಡಿರುವುದಿಲ್ಲ. ಆಯಾ ದೇಶದ ಪರಿಸ್ಥಿತಿಗೆ ಅನುಗುಣವಾಗಿ ಇದು ವ್ಯತ್ಯಾಸವಾಗುತ್ತದೆ.

ಉದಾಹರಣೆಗೆ ಸ್ವೀಡನ್ನಿನಲ್ಲಿ 200 ಜನರಿರುವ ವಸತಿ ಪ್ರದೇಶವನ್ನು ನಗರೀಯವೆಂದು ಹೇಳಲಾಗುತ್ತದೆ. ಆದರೆ ದಕ್ಷಿಣ ಆಫ್ರಿಕಾದಲ್ಲಿ 500, ಕೆನಡದಲ್ಲಿ 1,000, ಪೂರ್ವ ಜರ್ಮನಿಯಲ್ಲಿ 2,000, ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ 2,500, ಜಾರ್ಡನಿನಲ್ಲಿ 10,000 ಜನರಿರುವ ಪ್ರದೇಶಗಳನ್ನು ನಗರೀಯ ಎಂದು ಪರಿಗಣಿಸಲಾಗುತ್ತದೆ.

ಭಾರತದಲ್ಲಿ ಒಂದು ಪ್ರದೇಶವನ್ನು ನಗರೀಯವೆನ್ನಬೇಕಾದರೆ ಅಲ್ಲಿ ಕನಿಷ್ಠ 5,000 ಜನಸಂಖ್ಯೆ ಇರಬೇಕು; ಅಲ್ಲಿಯ ಪುರುಷ ದುಡಿಮೆಗಾರರಲ್ಲಿ ಕನಿಷ್ಠ ಮುಕ್ಕಾಲು ಪಾಲು ಜನ ಕೃಷೀತರ ಕಾರ್ಯ ನಿರತರಾಗಿರಬೇಕು; ಪ್ರತಿ ಚ.ಕಿಮೀ.ಗೆ ಕನಿಷ್ಠ 400ರಂತೆ (ಚ.ಮೈ.ಗೆ 1,000)ಜನಸಾಂದ್ರತೆ ಇರಬೇಕು. ಪೌರಸಭಾ, ಕಾರ್ಪೊರೇಷನ್ ಅಥವಾ ದಂಡು ಇರುವ, ಇಲ್ಲವೇ ನಗರಪ್ರದೇಶವೆಂದು ಅಧಿಸೂಚಿತವಾಗಿರುವ ಎಲ್ಲ ಸ್ಥಳಗಳೂ ನಗರೀಯ ಪ್ರದೇಶಗಳೆನಿಸಿಕೊಳ್ಳುತ್ತವೆ.

 

ಅಸ್ತವ್ಯಸ್ತವಾದ  ನಗರೀಕರಣದಿಂದ ಆಗುವ  ಪರಿಣಾಮಗಳು

 

  • ನಗರೀಕರಣದಿಂದಾಗಿ, ಪ್ರತಿಯೊಬ್ಬ ವ್ಯಕ್ತಿ, ಕುಟುಂಬ, ಸಮಾಜ ಮತ್ತು ಇಡೀ ದೇಶದಲ್ಲಿ ಬಹಳಷ್ಟು ಬದಲಾವಣೆಗಳು ಸಂಭವಿಸುತ್ತವೆ.ನಗರೀಕರಣವು ಸಮಾಜದ ಮೇಲೆ ಮತ್ತು ವ್ಯಕ್ತಿಯ ಮೇಲೆ ಧನಾತ್ಮಕ ಮತ್ತು ನಕಾರಾತ್ಮಕ ಎರಡೂ ಪ್ರಭಾವವನ್ನು ಬೀರುತ್ತಿದೆ. ನಗರೀಕರಣದಿಂದ ಆಗುವ  ಕೆಲವು ಪ್ರಮುಖ  ಪರಿಣಾಮಗಳನ್ನುಈ  ಕೆಳಕಂಡಂತೆ ಸಂಕ್ಷಿಪ್ತವಾಗಿ ವಿವರಿಸಲಾಗಿದೆ.

 

  • ಕುಟುಂಬದ ಕ್ರಿಯಾತ್ಮಕತೆಯಲ್ಲಿ ಬದಲಾವಣೆ
  • ಹೆಣ್ಣುಮಕ್ಕಳ ಮೇಲೆ ಹೆಚ್ಚಿನ ಹೊರೆ
  • ವಲಸೆ
  • ನಿರುದ್ಯೋಗ
  • ಬಡತನ
  • ಅಪರಾಧಗಳು
  • ಹೆಚ್ಚಿದ ಒತ್ತಡ
  • ಜೈವಿಕ ಲಯದಲ್ಲಿ ಅಡಚಣೆಗಳು
  • ಒತ್ತಡದ ಜೀವನ ಘಟನೆಗಳು
  • ಕಳಪೆ ಸಾಮಾಜಿಕ ಜಾಲ

 

  • ನಗರಗಳ ನಿರ್ಮಾಣ ಅಥವಾ ಅಭಿವೃದ್ಧಿಯಲ್ಲಿ ಸದ್ಯದ ‘ಕಳಪೆ ಯೋಜನೆಗಳ ಮಾದರಿ’ಯನ್ನು ಮುಂದುವರಿಸಿದ ಪಕ್ಷದಲ್ಲಿ 2050ರ ಹೊತ್ತಿಗೆ ದೇಶದ ವೆಚ್ಚದ ಮೇಲೆ 8 ಲಕ್ಷ ಕೋಟಿ ಡಾಲರ್‌(ಸುಮಾರು 120 ಲಕ್ಷ ಕೋಟಿ ರೂ.) ಹೊರೆ ಬೀಳಲಿದೆ ಎಂದು ಅಧ್ಯಯನವೊಂದರಲ್ಲಿ ಹೇಳಲಾಗಿದೆ.

 

ಭಾರತದ ನಗರೀಕರಣಕ್ಕೆ ಸಂಬಂಧಿಸಿದ ನ್ಯೂ ಕ್ಲೈಮೇಟ್‌ ಎಕಾನಮಿ ವರದಿಯಲ್ಲಿ ಕಳಪೆ ನಗರೀಕರಣದ ಮಾದರಿ ಮತ್ತು ಅದರಿಂದಾಗುವ ನಷ್ಟದ…..CLICK HERE TO READ MORE

Share