4th AUGUST.-DAILY CURRENT AFFAIRS BRIEF

4th AUGUST

 

1.ಅಸಾಂಪ್ರದಾಯಿಕ ಹೈಡ್ರೋಕಾರ್ಬನ್ ಗಳ ಅನ್ವೇಷಣೆ ಮತ್ತು ಬಳಕೆ ಕುರಿತಂತೆ ನೀತಿ ಚೌಕಟ್ಟಿಗೆ ಸಂಪುಟದ ಅಂಗೀಕಾರ

ವಿದ್ಯಾರ್ಥಿಗಳ ಗಮನಕ್ಕೆ

ಪ್ರಿಲಿಮ್ಸ್ ಪರೀಕ್ಷೆಗಾಗಿ -ಕಲ್ಲಿದ್ದಲು ಹಾಸಿನ ಕೆಳಗಿನ ಮೀಥೇನ್ (ಸಿ.ಬಿ.ಎಂ) ಬಗ್ಗೆ 

ಮುಖ್ಯ ಪರೀಕ್ಷೆಗಾಗಿ-ಹೊಸ ನೀತಿ ಚೌಕಟ್ಟಿನ ವೈಶಿಷ್ಟ್ಯಗಳೇನು ?

 

ಪ್ರಮುಖ ಸುದ್ದಿ 

 

 

  • ಪ್ರಧಾನ ಮಂತ್ರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಅಸಾಂಪ್ರದಾಯಿಕ ಹೈಡ್ರೋಕಾರ್ಬನ್ ಗಳಾದ ಜೇಡಿ ಶಿಲಾಪದರದ ನ್ಯಾಫ್ತಾ ಎಣ್ಣೆ ಯಾ ಅನಿಲ , ಕಲ್ಲಿದ್ದಲು ಹಾಸಿನ ಕೆಳಗಿನ ಮೀಥೇನ್ (ಸಿ.ಬಿ.ಎನ್.) ಇತ್ಯಾದಿಗಳ ಶೋಧನೆ ಮತ್ತು ಬಳಕೆಗೆ ಅನುಮತಿ ನೀಡುವ ನೀತಿಯನ್ನು ಅಂಗೀಕರಿಸಲಾಯಿತು.
  • ಇದನ್ನು ಉತ್ಪಾದನಾ ಪಾಲುದಾರಿಕೆ ಗುತ್ತಿಗೆ (ಪಿ.ಎಸ್.ಸಿ.ಗಳು) , ಸಿ.ಬಿ.ಎಂ ಗುತ್ತಿಗೆಗಳು ಮತ್ತು ಈಗಿರುವ ಅನುಮತಿ ನೀಡಲಾದ ಪ್ರದೇಶಗಳಲ್ಲಿ ಹಾಲಿ ಗುತ್ತಿಗೆ ಹೊಂದಿರುವವರನ್ನು ಉತ್ತೇಜಿಸಲು ಕ್ಷೇತ್ರಗಳನ್ನು ಗುರುತಿಸುವ ಮೂಲಕ ಅಸಾಂಪ್ರದಾಯಿಕ ಹೈಡೋಕಾರ್ಬನ್ ಗಳ ಸಾಮರ್ಥ್ಯವನ್ನು ಹೊರತರಲು ಬಳಸುವ ಮೂಲಕ ಅನುಷ್ಟಾನಕ್ಕೆ ತರಲಾಗುವುದು.

 

 

ಮುಖ್ಯ ಅಂಶಗಳು

ಲಾಭಗಳು:

  • ಈ ನೀತಿಯು ಹಾಲಿ ಗುತ್ತಿಗೆ ಪ್ರದೇಶಗಳಲ್ಲಿ ಇದುವರೆಗೆ ಶೋಧನೆಯಾಗದೆ ಉಳಿದಿರುವ ಮತ್ತು ಬಳಕೆಯಾಗದಿರುವ ಹೈಡ್ರೋಕಾರ್ಬನ್ ನಿಕ್ಷೇಪಗಳನ್ನು ಹೊರತೆಗೆಯಲು ಅನುಕೂಲ ಒದಗಿಸುತ್ತದೆ.

 

  • ಈ ನೀತಿಯಿಂದಾಗಿ ಅನ್ವೇಷಣೆ ಮತ್ತು ಉತ್ಪಾದನಾ (ಇ. ಮತ್ತು ಪಿ.) ಕಾರ್ಯ ಚಟುವಟಿಕೆಗಳಲ್ಲಿ ಹೊಸ ಹೂಡಿಕೆ ಸಾಧ್ಯವಾಗಲಿದೆ  ಮತ್ತು ಹೊಸ ಹೈಡ್ರೋಕಾರ್ಬನ್ ಗಳ ಶೋಧನೆ ಸಾಧ್ಯವಾಗಿ ಆ ಮೂಲಕ ದೇಶೀಯ ಉತ್ಪಾದನೆಯಲ್ಲಿ ಹೆಚ್ಚಳ ನಿರೀಕ್ಷಿಸಬಹುದಾಗಿದೆ.

 

  • ಹೆಚ್ಚುವರಿ ಹೈಡ್ರೋಕಾರ್ಬನ್ ಸಂಪನ್ಮೂಲಗಳ ಅನ್ವೇಷಣೆ ಮತ್ತು ಹೊರತೆಗೆಯುವಿಕೆ ಹೊಸ ಹೂಡಿಕೆಯನ್ನು ಪ್ರಚೋದಿಸಲಿದೆ, ಆರ್ಥಿಕ ಚಟುವಟಿಕೆಗಳಿಗೆ ಹೊಸ ಶಕ್ತಿ ತುಂಬಲಿದೆ , ಹೆಚ್ಚುವರಿ ಉದ್ಯೋಗಗಳನ್ನು ಸೃಷ್ಟಿಸಲಿದೆ ಮತ್ತು ಆ ಮೂಲಕ ಸಮಾಜದ ವಿವಿಧ ವಲಯಗಳಿಗೆ ಲಾಭ ತರಲಿದೆ.
  • ಇದರಿಂದ ಹೊಸ , ನವೀನ ಮತ್ತು ಆಧುನಿಕ ತಂತ್ರಜ್ಞಾನ ಸೇರ್ಪಡೆಯಾಗುವುದಲ್ಲದೆ ಅಸಾಂಪ್ರದಾಯಿಕ ಹೈಡ್ರೋಕಾರ್ಬನ್ ಗಳ ಹೊರತೆಗೆಯುವಿಕೆ, ಬಳಕೆಯಲ್ಲಿ ನವೀನ ತಂತ್ರಜ್ಞಾನ ಸಹಕಾರಗಳು….CLICK HERE TO READ MORE
Share