3rd OCTOBER- DAILY CURRENT AFFAIRS BRIEF

3rd OCTOBER

 

 

1.ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ರಂಜನ್ ಗೊಗೊಯ್

SOURCEhttps://economictimes.indiatimes.com/news/politics-and-nation/justice-ranjan-gogoi-takes-over-as-the-46th-chief-justice-of-india/articleshow/66049834.cms

 

ವಿದ್ಯಾರ್ಥಿಗಳ ಗಮನಕ್ಕೆ

ಪ್ರಿಲಿಮ್ಸ್ ಮತ್ತು ಮುಖ್ಯ ಪರೀಕ್ಷೆಗಾಗಿ – ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ನೇಮಕಾತಿ ಹಾಗು ಅವರ ಅಧಿಕಾರದ ಬಗ್ಗೆ

ಪ್ರಮುಖ ಸುದ್ದಿ

  • ಸುಪ್ರೀಂಕೋರ್ಟ್‌ನ 46ನೇ ಮುಖ್ಯನ್ಯಾಯಮೂರ್ತಿಯಾಗಿ ರಂಜನ್‌ ಗೊಗೊಯ್ ಪ್ರಮಾಣವಚನ ಸ್ವೀಕರಿಸಿದರು. ಈ ಮೂಲಕ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿಯಾಗಿ ಪ್ರಮಾಣವಚನ ಸ್ವೀಕರಿಸಿದ ಈಶಾನ್ಯ ಭಾರತದ ಮೊದಲ ವ್ಯಕ್ತಿ ಎನ್ನುವ ಶ್ರೇಯಕ್ಕೂ ಗೊಗೊಯ್ ಪಾತ್ರರಾದರು. ಮುಂದಿನ ವರ್ಷ ನವೆಂಬರ್‌ವರೆಗೆ ಅವರ ಅಧಿಕಾರ ಅವಧಿ ಇದೆ. ರಾಷ್ಟ್ರಪತಿ ರಾಮನಾಥ ಕೋವಿಂದ್ ಪ್ರಮಾಣವಚನ ಬೋಧಿಸಿದರು.

ಮುಖ್ಯ ಅಂಶಗಳು

  • ಶಿಷ್ಟಾಚಾರದಂತೆ ಮುಖ್ಯ ನ್ಯಾಯಮೂರ್ತಿ ಸ್ಥಾನಕ್ಕೆ ರಂಜನ್ ಗೊಗೊಯ್ ಅವರ ಹೆಸರನ್ನು ಈಚೆಗಷ್ಟೇ ನಿವೃತ್ತರಾದ ನ್ಯಾಯಮೂರ್ತಿ ದೀಪಕ್ ಮಿಶ್ರಾ ಶಿಫಾರಸು ಮಾಡಿದ್ದರು. ಪ್ರಸ್ತುತ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ಪೈಕಿ ರಂಜನ್ ಗೊಗೊಯ್ ಸೇವಾ ಹಿರಿತನದಲ್ಲಿ ಮೊದಲಿಗರಾಗಿದ್ದರು. ದೀಪಕ್ ಮಿಶ್ರಾ ಅವರ ಪ್ರಸ್ತಾಪವನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್ ಕಳೆದ ಸೆಪ್ಟೆಂಬರ್‌ನಲ್ಲಿ ಒಪ್ಪಿಕೊಂಡಿದ್ದರು.
  • ಗುವಾಹತಿ ಹೈಕೋರ್ಟ್ ನ್ಯಾಯಾಧೀಶರಾಗಿ ಗೊಗೊಯ್ ಫೆಬ್ರುವರಿ 2001ರಿಂದ ತಮ್ಮ ವೃತ್ತಿ ಆರಂಭಿಸಿದರು. 2010ರಲ್ಲಿ ದಿನಗಳಲ್ಲಿ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್‌ಗೆ ವರ್ಗಾವಣೆ ಮಾಡಲಾಗಿತ್ತು. 2011ರಲ್ಲಿ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಾಗಿ ನೇಮಿಸಲಾಗಿತ್ತು. ಸುಪ್ರೀಂಕೋರ್ಟ್‌ ನ್ಯಾಯಾಧೀಶರಾಗಿ ಏಪ್ರಿಲ್ 23, 2012ರಿಂದ ಗೊಗೊಯ್ ಕೆಲಸ ಮಾಡುತ್ತಿದ್ದಾರೆ.

ಭಾರತದ ಮುಖ್ಯ ನ್ಯಾಯಾಧೀಶರ ನೇಮಕಾತಿ  ಬಗ್ಗೆ

  • ಭಾರತದ ಮುಖ್ಯ ನ್ಯಾಯಾಧೀಶರು ಎನ್ನುವುದು ಭಾರತದ ಸರ್ವೋಚ್ಛ ನ್ಯಾಯಾಲಯದಲ್ಲಿನ ಅತ್ಯಂತ ಶ್ರೇಷ್ಠ ನ್ಯಾಯಾ ಧೀಶರ ಪದವಿಯಾಗಿದೆ. ಇದು ಭಾರತದಲ್ಲಿ ಒಬ್ಬ ನ್ಯಾಯಾಧೀಶರು ಹೊಂದಬಹುದಾದ ನ್ಯಾಯಾಧೀಶರ ಅತ್ಯುನ್ನತ ಸ್ಥಾನವಾಗಿದೆ….CLICK HERE TO READ MORE
Share