4th AUGUST-THE HINDU EDITORIAL

ನಮ್ಮ ಐಎಎಸ್ ಅಕಾಡೆಮಿಯ ಸಂಪಾದಕೀಯ ಒಳನೋಟ

 

ನಾಗರಿಕರ ರಾಷ್ಟ್ರೀಯ ನೋಂದಣಿ-ಎನ್‌ಆರ್‌ಸಿ ವಿಶೇಷಣೆ

 

SOURCE-THE HINDU https://www.thehindu.com/opinion/lead/to-what-end-this-exercise/article24575843.ece

 

ಈ ಆರ್ಟಿಕಲ್ ನಿಂದ  ಪ್ರಮುಖ ವಾಗಿ ತಿಳಿಯಬೇಕಾದ ಅಂಶಗಳು

 

 ಏನಿದು ಎನ್‌ಆರ್‌ಸಿ?

ಎನ್‌ಆರ್‌ಸಿ ಈಗ ಯಾಕೆ?

ಹಳೆಯ ಬೇಡಿಕೆಯೇನು ?

ಸುಪ್ರೀಂ ಕೋರ್ಟ್‌  ಹೇಳಿದ್ದೇನು ?

ಮೊದಲ ಕರಡು ಯಾವಾಗ ತಯಾರಿಸಿದ್ದು ?

ಇದರಿಂದ ಏನು ಲಾಭ?

ಅಂತಿಮಪಟ್ಟಿಯಲ್ಲಿ ಹೆಸರು ಬಾರದಿದ್ದರೆ ದೇಶದಿಂದ ಹೊರ ಹಾಕ್ತಾರಾ?

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರೋಧ ಏಕೆ?

ಮುಂದೇನಾಗಬಹುದು?

ಸಮಸ್ಯೆಗಳೇನು?

ಇತರ ಅಕ್ರಮ ವಲಸಿಗರು

ಮುಂದಿನ ಹಾದಿ

 

 

 ಸನ್ನಿವೇಶ

 

  • ಜುಲೈ 30 ರಂದು ಪ್ರಕಟವಾದ ಅಸ್ಸಾಂನ ಪರಿಷ್ಕೃತ ರಾಷ್ಟ್ರೀಯ ನಾಗರಿಕರ ರಿಜಿಸ್ಟರ್​ (ಎನ್ಆರ್​ಸಿ) ಕರಡು ಪ್ರತಿಯಲ್ಲಿ ಸುಮಾರು 40 ಲಕ್ಷ ನಿವಾಸಿಗಳ ಹೆಸರುಗಳನ್ನು ಕೈಬಿಟ್ಟಿದೆ .

 

ಏನಿದು ಎನ್ಆರ್ಸಿ?

 

  • ‘ನ್ಯಾಷನಲ್‌ ರಿಜಿಸ್ಟರ್‌ ಆಫ್‌ ಸಿಟಿಜನ್ಸ್‌’ನ ಸಂಕ್ಷಿಪ್ತ ರೂಪವೇ ‘ಎನ್‌ಆರ್‌ಸಿ”. ಅಂದರೆ, ‘ನಾಗರಿಕರ ರಾಷ್ಟ್ರೀಯ ನೋಂದಣಿ’. ಭಾರತೀಯ ನಾಗರಿಕರು ಮತ್ತು ಅಕ್ರಮ ವಿದೇಶಿಗರನ್ನು ಗುರುತಿಸುವ ಅಧಿಕೃತ ದಾಖಲೆ ಇದು.
  • 1951ರಲ್ಲಿ ಮೊದಲ ಬಾರಿಗೆ ಎನ್‌ಆರ್‌ಸಿ ತಯಾರಿಸಲಾಯಿತು. ಈ ದಾಖಲೆಗಳನ್ನು ಅಸ್ಸಾಮ್‌ನ ಜಿಲ್ಲಾಧಿಕಾರಿ ಮತ್ತು ವಿಭಾಗೀಯ ಕಚೇರಿಗಳಲ್ಲಿ ನಿರ್ವಹಣೆ ಮಾಡಲಾಗುತ್ತದೆ. ಎನ್‌ಆರ್‌ಸಿಯನ್ನು ಆಗಾಗ ಅಪ್‌ಡೇಟ್‌ ಮಾಡಬೇಕು. ವಿಶೇಷ ಎಂದರೆ, ಭಾರತದಲ್ಲಿ ಅಸ್ಸಾಮ್‌ ಮಾತ್ರ ಈ ಎನ್‌ಆರ್‌ಸಿ ವ್ಯವಸ್ಥೆ ಹೊಂದಿದೆ.

 

ಎನ್ಆರ್ಸಿ ಈಗ ಯಾಕೆ?

 

  • ಅಸ್ಸಾಮ್‌ನಲ್ಲಿ ಅಕ್ರಮ ಬಾಂಗ್ಲಾದೇಶಿಯರ ಹೆಚ್ಚಾಗಿದ್ದಾರೆ. ಅವರನ್ನು ದೇಶದಿಂದ ಹೊರಹಾಕಬೇಕು. ಎನ್‌ಆರ್‌ಸಿ ಅಪ್‌ಡೇಟ್‌ ಮಾಡಬೇಕು ಎಂದು ಅನೇಕ ಅರ್ಜಿಗಳು ಸುಪ್ರೀಂ ಕೋರ್ಟ್‌ನಲ್ಲಿ ದಾಖಲಾಗಿದ್ದವು. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ 2014ರ ಡಿಸೆಂಬರ್‌ 7ರಂದು ತೀರ್ಪು ನೀಡಿ, ಎನ್‌ಆರ್‌ಸಿ ಪ್ರಕಟಕ್ಕೆ ಕಾಲಮಿತಿ ನಿಗದಿಗೊಳಿಸಿತು.
  • ಅಲ್ಲದೇ ಇಡೀ ಪ್ರಕ್ರಿಯೆಯನ್ನು ತಾನೇ ಮಾನಿಟರ್‌ ಮಾಡುವುದಾಗಿ ಹೇಳಿತು. 2018ರ ಜುಲೈ 30 ಅಂತಿಮ ಗಡುವು ನೀಡಿತ್ತು.

 

ಹಳೆಯ ಬೇಡಿಕೆಯೇನು ?

 

  • ಅಸ್ಸಾಮ್‌ನಲ್ಲಿ ಎನ್‌ಆರ್‌ಸಿ ಅಪ್‌ಡೇಟ್‌ ಮಾಡಬೇಕು ಎಂಬುದು ಹಳೆಯ ಬೇಡಿಕೆ. 2005ರಲ್ಲಿ ಈ ಸಂಬಂಧ ಪ್ರಕ್ರಿಯೆ ಚುರುಕುಗೊಂಡಿತು. ಅಂದಿನ ಪ್ರಧಾನಿ ಡಾ. ಮನಮೋಹನ್‌ ಸಿಂಗ್‌ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಎನ್‌ಆರ್‌ಸಿ ಪರಿಷ್ಕರಣೆ ನಿರ್ಧಾರ ಕೈಗೊಳ್ಳಲಾಗಿತ್ತು. ಆಗ ಅಸ್ಸಾಮ್‌ನಲ್ಲೂ ಕಾಂಗ್ರೆಸ್‌ ಸರಕಾರವೇ ಇತ್ತು.

 

ಸುಪ್ರೀಂ ಕೋರ್ಟ್  ಹೇಳಿದ್ದೇನು ?

 

  • ಮತದಾರರ ಪಟ್ಟಿಯಿಂದ ಅಕ್ರಮ ವಲಸಿಗರ ಹೆಸರನ್ನು ತೆಗೆದು ಹಾಕಬೇಕೆಂದು 2009 ಮೇ 5ರಂದು ಅಸ್ಸಾಮ್‌ ಪಬ್ಲಿಕ್‌ ವರ್ಕ್ಸ್‌ ಎಂಬ ಎನ್‌ಜಿಒ ಸುಪ್ರೀಂ ಕೋರ್ಟ್‌ನಲ್ಲಿ ರಿಟ್‌ ಅರ್ಜಿ ದಾಖಲಿಸಿತು. ಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ಆರಂಭಿಕ ಹಂತದಲ್ಲಿ ಅಸ್ಸಾಮ್‌ನ ಎರಡು ಜಿಲ್ಲೆಗಳಲ್ಲಿ ಎನ್‌ಆರ್‌ಸಿ ಅಪ್‌ಡೇಟ್‌ ಪ್ರಕ್ರಿಯೆ ಆರಂಭಿಸಲಾಯಿತು.
  • ಆದರೆ, ಕಾನೂನು ಸುವ್ಯವಸ್ಥೆ ಸಮಸ್ಯೆ ಉಂಟಾದ ಹಿನ್ನೆಲೆಯಲ್ಲಿ 2010ರಲ್ಲಿ…..CLICK HERE TO READ MORE
Share