4th OCTOBER- DAILY CURRENT AFFAIRS BRIEF

4th OCTOBER

 

1.ಅಂತರಾಷ್ಟ್ರೀಯ ನ್ಯಾಯಾಲಯ (International Court of Justice)

ವಿದ್ಯಾರ್ಥಿಗಳ ಗಮನಕ್ಕೆ

ಪ್ರಿಲಿಮ್ಸ್ ಮತ್ತು ಮುಖ್ಯ ಪರೀಕ್ಷೆಗಾಗಿ –  ಅಂತರಾಷ್ಟ್ರೀಯ ನ್ಯಾಯಾಲಯದ  ಬಗ್ಗೆ ಹಾಗು  ಅಮೇರಿಕ  ಮತ್ತು ಇರಾನ್ ನಡುವಿನ ನಿರ್ಬಂಧದ  ಬಗ್ಗೆ 

ಪ್ರಮುಖ ಸುದ್ದಿ

  • ಇರಾನ್‌ಗೆ ಕಳುಹಿಸಲಾಗುವ ‘ಮಾನವೀಯ’ ವಸ್ತುಗಳ ಮೇಲಿನ ದಿಗ್ಬಂಧನವನ್ನು ತೆರವುಗೊಳಿಸುವಂತೆ ವಿಶ್ವಸಂಸ್ಥೆಯ ಅತ್ಯುನ್ನತ ನ್ಯಾಯಾಲಯವು ಅಮೆರಿಕಕ್ಕೆ ಆದೇಶ ನೀಡಿದೆ.

ಮುಖ್ಯ ಅಂಶಗಳು

  • ಇರಾನ್ ಪರಮಾಣು ಒಪ್ಪಂದದಿಂದ ಈ ವರ್ಷದ ಮೇ ತಿಂಗಳಲ್ಲಿ ಹೊರಬಂದ ಬಳಿಕ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಮೇಲೆ ಹಲವು ಸುತ್ತುಗಳ ಆರ್ಥಿಕ ದಿಗ್ಬಂಧನಗಳನ್ನು ವಿಧಿಸಿರುವುದನ್ನು ಸ್ಮರಿಸಬಹುದಾಗಿದೆ.
  • ”ಮೇ 8ರಂದು ಇರಾನ್ ವಿರುದ್ಧ ಅಮೆರಿಕ ಘೋಷಿಸಿದ ಆರ್ಥಿಕ ದಿಗ್ಬಂಧನದ ಪಟ್ಟಿಯಿಂದ ಔಷಧಗಳು, ವೈದ್ಯಕೀಯ ಉಪಕರಣಗಳು, ಆಹಾರ ಮತ್ತು ಕೃಷಿ ಉತ್ಪನ್ನಗಳು ಹಾಗೂ ವಿಮಾನ ಬಿಡಿಭಾಗಗಳನ್ನು ಹೊರತುಪಡಿಸಬೇಕು” ಎಂದು ಅಂತರ್‌ರಾಷ್ಟ್ರೀಯ ನ್ಯಾಯಾಲಯ ವಾಶಿಂಗ್ಟನ್‌ಗೆ ಆದೇಶ ನೀಡಿದೆ.
  • ”ಮಾನವೀಯ ಅಗತ್ಯಗಳಿಗೆ ಬೇಕಾದ ವಸ್ತುಗಳ ಮೇಲೆ ದಿಗ್ಬಂಧನ ವಿಧಿಸುವುದರಿಂದ ಇರಾನ್ ಜನರ ಆರೋಗ್ಯ ಮತ್ತು ಬದುಕಿನ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಬಹುದಾಗಿದೆ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
  • ವಿಮಾನ ಬಿಡಿಭಾಗಗಳ ಮೇಲಿನ ನಿಷೇಧವು ಇರಾನ್‌ನಲ್ಲಿನ ನಾಗರಿಕ ವಾಯುಯಾನದ ಸುರಕ್ಷತೆಯನ್ನು ಮತ್ತು ಪ್ರಯಾಣಿಕರ ಪ್ರಾಣಗಳನ್ನು ಅಪಾಯಕ್ಕೆ ಗುರಿಪಡಿಸಬಹುದು ಎಂಬುದಾಗಿಯೂ ನ್ಯಾಯಾಲಯ ತನ್ನ ತೀರ್ಪಿನಲ್ಲಿ ಹೇಳಿದೆ.
  • ಅಮೆರಿಕವು ಇರಾನ್ ವಿರುದ್ಧ ಮೊದಲ ಸುತ್ತಿನ ದಿಗ್ಬಂಧನಗಳನ್ನು ಆಗಸ್ಟ್‌ನಲ್ಲಿ ವಿಧಿಸಿದೆ. ಅದರ ಎರಡನೇ ಸುತ್ತಿನ ದಿಗ್ಬಂಧನಗಳು ನವೆಂಬರ್ 4ರಿಂದ ಜಾರಿಗೆ ಬರಲಿದೆ.

ಅಂತರರಾಷ್ಟ್ರೀಯ ನ್ಯಾಯಾಲಯದ ಬಗ್ಗೆ

 

  • ಇದು 1945 ರಲ್ಲಿ UN ಚಾರ್ಟರ್ ನಿಂದ ಸ್ಥಾಪಿಸಲ್ಪಟ್ಟಿತು.ಈ ನ್ಯಾಯಾಲಯವು 1946 ರಲ್ಲಿ ಪರ್ಮನಂಟ್ ಕೋರ್ಟ್ ಆಫ್ ಇಂಟರ್ ನ್ಯಾಶನಲ್ ಜಸ್ಟಿಸ್ (ಅಂತಾರಾಷ್ಟ್ರೀಯ ಶಾಶ್ವತ ನ್ಯಾಯಿಕ ನ್ಯಾಯಾಲಯದ ಉತ್ತರಾಧಿಕಾರಿಯಾಗಿ ತನ್ನ ಅಸ್ತಿತ್ವ ಕಂಡುಕೊಂಡಿತು. ದಿ ಸ್ಟಾಚುಟ್ ಆಫ್ ಇಂಟರ್ ನ್ಯಾಶನಲ್ ಕೋರ್ಟ್ ಆಫ್ ಜಸ್ಟಿಸ್ ,(ಅಂತಾರಾಷ್ಟ್ರೀಯ ನ್ಯಾಯಾಲಯದ ವಿಧಿ ನಿಯಮಗಳು)ಇದು ತನ್ನ ಹಿಂದಿನ ನ್ಯಾಯಾಂಗ ಅಂಗ ಸಂಸ್ಠೆಗೆ ಪೂರಕವಾಗಿದ್ದು ಇದು ಪ್ರಮುಖ ಸಂವಿಧಾನ ಮತ್ತು ನ್ಯಾಯಾಲಯದ ನಿಯಂತ್ರಣದ ಕುರಿತ ನಿಯಮಗಳನ್ನು ಹೊಂದಿರುತ್ತದೆ.
  • ಈ ನ್ಯಾಯಾಲಯದ ಕಾರ್ಯಭಾರವು ವಿಶಾಲ ನ್ಯಾಯಾಧಿಕಾರಣದ ವ್ಯಾಪ್ತಿ ಹೊಂದಿದೆ. ಇದುವರೆಗೂ ICJ ತನ್ನ ಇತಿಹಾಸದಲ್ಲಿ ಕಡಿಮೆ ಪ್ರಮಾಣದ ಪ್ರಕರಣಗಳ ಜೊತೆಗೆ ವ್ಯವಹರಿಸಿದೆ.ಆದರೆ 1980 ರ ನಂತರ ಈ ನ್ಯಾಯಾಲಯದ ಸದುಪಯೋಗಪಡಿಸಿಕೊಳ್ಳಲು ಎಲ್ಲಾ ದೇಶಗಳು ತಮ್ಮ ಇಚ್ಛೆ ವ್ಯಕ್ತಪಡಿಸಿ ಸಮಯಾನುಸಾರ ಅನುಕೂಲ ಹೊಂದಲು ಉತ್ಸುಕವಾಗಿವೆ.ಅದರಲ್ಲೂ ಮುಖ್ಯವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶಗಳು…CLICK HERE TO READ MORE
Share