7th AUGUST-THE HINDU EDITORIAL

ನಮ್ಮ ಐಎಎಸ್ ಅಕಾಡೆಮಿ ಯ ಸಂಪಾದಕೀಯ ಒಳನೋಟ

 

ವಿಶ್ವವ್ಯಾಪಾರ ಸಂಸ್ಥೆಯಲ್ಲಿನ (ಡಬ್ಲ್ಯೂಟಿಒ) ಸಮಸ್ಯೆ

 

SOURCE-THE HINDU https://www.thehindu.com/opinion/op-ed/the-problem-at-the-wto/article24609374.ece

 

 

 

ಈ ಆರ್ಟಿಕಲ್ ನಿಂದ ಪ್ರಮುಖ ವಾಗಿ ತಿಳಿದುಕೊಳ್ಳಬೇಕಾದದ್ದು

  • ವಿಶ್ವವ್ಯಾಪಾರ ಸಂಸ್ಥೆ ಉಗಮ
  • ಅಂತರರಾಷ್ಟ್ರೀಯ ವ್ಯಾಪಾರ ಎಂದರೇನು ?
  • ಅಂತರರಾಷ್ಟ್ರೀಯ ವ್ಯಾಪಾರದ ಅವಶ್ಯಕತೆ ಏನು ?
  • ಅಂತರಾಷ್ಟ್ರೀಯ ವ್ಯವಹಾರಕ್ಕೆ ಕಾರಣಗಳೇನು ?
  • ಅಂತರಾಷ್ಟ್ರೀಯ ವ್ಯವಹಾರದ ಪ್ರಯೋಜನಗಳೇನು ?

          ರಾಷ್ಟ್ರಕ್ಕೆ ಆಗುವ ಲಾಭಗಳು

          ವ್ಯವಹಾರ ಸಂಸ್ಥೆಗಳಿಗೆ ಆಗುವ ಲಾಭಗಳು

  • ಅಂತರಾಷ್ಟ್ರೀಯ ವ್ಯವಹಾರದಲ್ಲಿನ ಸಮಸ್ಯೆಗಳೇನು ?
  • ಡಬ್ಲ್ಯುಟಿಒ ನಲ್ಲಿರುವ ಸಮಸ್ಯೆಗಳೇನು ?

         ಅಮೆರಿಕದ ನಿಲುವೇನು ?

         ಭಾರತದ    ನಿಲುವೇನು ?

  • ಡಬ್ಲ್ಯುಟಿಒ ನಿಯಮಾವಳಿ ಹೇಗೆ ಮಾರಕ?
  • ಮುಂದಿನ ಹಾದಿ

 

ಸನ್ನಿವೇಶ

 

  • ಜಾಗತೀಕರಣದ ಇತ್ತೀಚಿನ ಹಿಂಜರಿತ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ರಕ್ಷಣಾ ನೀತಿಗಳು, ಯುಎಸ್-ಚೀನಾ ವ್ಯಾಪಾರ ಯುದ್ಧ, ಮತ್ತು ಬ್ರಿಟನ್ನ ‘ಬ್ರೆಕ್ಸಿಟ್’ ಬೆಳವಣಿಗೆಗಳು… ವಿಶ್ವ ವಾಣಿಜ್ಯ ಸಂಸ್ಥೆಗೆ (ಡಬ್ಲ್ಯೂಟಿಒ) ಅಪಾಯದ ಮುನ್ಸೂಚನೆ ಸೂಚಿಸುತ್ತಿದೆ.

 

ವಿಶ್ವವ್ಯಾಪಾರ ಸಂಸ್ಥೆ ಉಗಮ

  • ವಿಶ್ವವ್ಯಾಪಾರ ಸಂಸ್ಥೆ (ಡಬ್ಲ್ಯುಟಿಒ) ಅಂತರರಾಷ್ಟ್ರೀಯ ವ್ಯಾಪಾರವನ್ನು ಮೇಲ್ವಿಚಾರಣೆ ಮಾಡುವ ಹಾಗೂ ಉದಾರೀಕರಣಗೊಳಿಸುವ ಆಶಯ ಹೊಂದಿರುವ ಒಂದು ಅಂತರರಾಷ್ಟ್ರೀಯ ವ್ಯಾಪಾರ ಸಂಸ್ಥೆ.
  • ೧೯೪೮ರಿಂದ ಜಾರಿಯಲ್ಲಿದ್ದ ಸುಂಕಗಳು ಮತ್ತು ವ್ಯಾಪಾರದ ಮೇಲಿನ ಸಾಮಾನ್ಯ ಒಪ್ಪಂದವನ್ನು ಸ್ಥಾನಾಪನ್ನಗೊಳಿಸಿ, ಮರ್ರಾಕೇಶ್ ಒಪ್ಪಂದದನ್ವಯ ಜನವರಿ ೧,೧೯೯೫ರಿಂದ ಸಂಸ್ಥೆಯು ಅಧಿಕೃತವಾಗಿ ಕಾಯಾ೯ರಂಭಿಸಿತು.

 

 

 

ಅಂತರರಾಷ್ಟ್ರೀಯ ವ್ಯಾಪಾರ ಎಂದರೇನು ?

 

  • ಸರಕು, ಸೇವೆಗಳನ್ನು ಇತರ ಸರಕು, ಸೇವೆಗಳಿಗೆ ವಿನಿಮಯ ಮಾಡುವುದೂ ಬೆಲೆಗೆ ಇವುಗಳನ್ನು ಮಾರುವುದೂ ಕೊಳ್ಳುವುದೂ ವ್ಯಾಪಾರವೆನ್ನಿಸುವುದು. ಬೇರೆ ಬೇರೆ ರಾಷ್ಟ್ರಗಳ ಜನ, ಸರ್ಕಾರ ಅಥವಾ ಸಂಸ್ಥೆಗಳೊಡನೆ ನಡೆಯುವ ಇಂಥ ವ್ಯವಹಾರಗಳು `ಅಂತರರಾಷ್ಟ್ರೀಯ ವ್ಯಾಪಾರವಾಗುವುದು.
  • ಅಂದಮೇಲೆ ಪ್ರಪಂಚದಲ್ಲಿ ಇರುವ ಪ್ರತ್ಯೇಕ ರಾಷ್ಟ್ರಗಳು ಅವುಗಳೊಳಗೆ ಪರಸ್ಪರವಾಗಿ ನಡೆಸುವ ಮಾರುವ ಹಾಗೂ ಕೊಳ್ಳುವ ವ್ಯವಹಾರಗಳ ಮೊತ್ತವೇ ಪ್ರಪಂಚದ ಅಂತರರಾಷ್ಟ್ರೀಯ ವ್ಯಾಪಾರದ ಒಟ್ಟು ಮೊತ್ತವಾಗುವುದು. ವ್ಯವಹರಿಸುವ ರಾಷ್ಟ್ರ ಸ್ವತಂತ್ರ ರಾಷ್ಟ್ರವೇ ಅಧೀನ ರಾಷ್ಟ್ರವೇ ಅಥವಾ ವಸಾಹತು ರಾಷ್ಟ್ರವೇ ಎಂಬ ಪ್ರಶ್ನೆ ಅಪ್ರಕೃತ. ರಾಜಕೀಯ ಸ್ವಾತಂತ್ರ್ಯಕ್ಕೆ ಮುನ್ನ ಇಂಡಿಯ ಮತ್ತು ಇತರ ಅಧೀನ ರಾಷ್ಟ್ರಗಳು ಇತರ ರಾಷ್ಟ್ರಗಳೊಡನೆ ನಡೆಸುತ್ತಿದ್ದ ವ್ಯಾಪಾರವೆಲ್ಲವೂ ಅಂತರರಾಷ್ಟ್ರೀಯ ವ್ಯಾಪಾರವೆಂದೇ ಪರಗಣಿಸಲ್ಪಟ್ಟಿದ್ದಿತು.
  • ಆದರೆ ರಾಷ್ಟ್ರದ ರಾಜಕೀಯ ಎಲ್ಲೆ ಬದಲಾವಣೆಯಿಂದ ಒಳದೇಶದ ವ್ಯಾಪಾರ ಅಂತರರಾಷ್ಟ್ರೀಯ ವ್ಯಾಪಾರವಾಗಬಹುದು. ಬರ್ಮ ಮತ್ತು ಪಾಕಿಸ್ತಾನಗಳು ಪ್ರತ್ಯೇಕ ರಾಷ್ಟ್ರಗಳಾಗಿ ಹುಟ್ಟುವ ಮುನ್ನ ಈ ಭಾಗಗಳು ಮತ್ತು ಇಂದಿನ ಇಂಡಿಯ ಇವುಗಳೊಳಗೆ ನಡೆಯುತ್ತಿದ್ದ ವ್ಯಾಪಾರ ಒಳದೇಶ ವ್ಯಾಪಾರವಾಗಿದ್ದು ಅವು ಪ್ರತ್ಯೇಕ ರಾಷ್ಟ್ರಗಳಾದ ಮೇಲೆ ಈ ಭೌಗೋಳಿಕ ಭಾಗಗಳ ಪರಸ್ಪರ ವ್ಯಾಪಾರವು ಅಂತರರಾಷ್ಟ್ರೀಯ ವ್ಯಾಪಾರವಾಗಿ ಪರಗಣಿಸಲ್ಪಟ್ಟಿದೆ. ರಾಷ್ಟ್ರಗಳ ಎಲ್ಲೆಗಳು ಬದಲಾಯಿಸಿರುವುದರಿಂದ ವ್ಯಾಪಾರದ ಲಕ್ಷಣ ಹೀಗೆ ಬದಲಾಯಿಸಿರುವುದಕ್ಕೆ ಪ್ರಪಂಚದ ಇತಿಹಾಸದಲ್ಲಿ ಅನೇಕ ನಿದರ್ಶನಗಳಿವೆ.

 

  • ಅಂತರರಾಷ್ಟ್ರೀಯ ವ್ಯಾಪಾರ ಈಚೆಗೆ ಹುಟ್ಟಿದುದೇನೂ ಅಲ್ಲ; ಪುರಾತನ ಕಾಲದಲ್ಲಿಯೂ ದೇಶದೇಶಗಳ ವ್ಯಾಪಾರ ಸಂಬಂಧಗಳು ಇದ್ದುದನ್ನು ಇತಿಹಾಸ ತಿಳಿಸುತ್ತದೆ. ಆದರೆ, ಅಂತರರಾಷ್ಟ್ರೀಯ ವ್ಯಾಪಾರದ ತೀವ್ರ ಬೆಳೆವಣಿಗೆ ಕೈಗಾರಿಕಾ ಕ್ರಾಂತಿ ಕಾಲದಿಂದ ಈಚೆಗೆ ಸಂಭವಿಸಿರುವ ಮುಖ್ಯ ಘಟನೆ. ಯಂತ್ರ, ಹಬೆಶಕ್ತಿ, ವಿದ್ಯಚ್ಛಕ್ತಿ ಮತ್ತು ಇತರ ವೈಜ್ಞಾನಿಕ ಕಾರ್ಯವಿಧಾನಗಳ ಪ್ರಯೋಗ ಮೊದಲು ಇಂಗ್ಲೆಂಡ್ ತರುವಾಯ ಕೆಲವು ಐರೋಪ್ಯ ರಾಷ್ಟ್ರಗಳು, ಅಮೆರಿಕ, ಜಪಾನ್, ಸೋವಿಯತ್ ರಷ್ಯ ರಾಷ್ಟ್ರಗಳಲ್ಲಿ ವಿಸ್ತರಿಸಿದಂತೆ ಪ್ರಪಂಚದಲ್ಲಿ ಅಂತರರಾಷ್ಟ್ರೀಯ ವ್ಯಾಪಾರವೂ ಹೆಚ್ಚು ವೈವಿಧ್ಯ ತಾಳಿ ಹೆಚ್ಚು ಪ್ರಮಾಣದಲ್ಲಿ ಬೆಳೆಯುತ್ತ ಬಂದಿತು.
  • ಈ ಬೆಳೆವಣಿಗೆಗೆ ತಕ್ಕಂತೆ ವ್ಯವಸ್ಥಾಕ್ರಮಗಳಲ್ಲಿ ಮತ್ತು ರೀತಿನೀತಿಗಳಲ್ಲಿ ಬದಲಾವಣೆಗಳಾಗುತ್ತ ಬಂದಿವೆ. ಇಂದಿನ ಪ್ರಪಂಚದಲ್ಲಿ ಅನೇಕ ಹಿಂದುಳಿದ ರಾಷ್ಟ್ರಗಳು ಶೀಘ್ರ ಆರ್ಥಿಕಾಭಿವೃದ್ಧಿಗೆ ಹವಣಿಸುತ್ತಿರುವುದರಿಂದಲೂ ಮುಂದುವರಿದಿರುವ ರಾಷ್ಟ್ರಗಳ ರಾಷ್ಟ್ರೀಯ ಉತ್ಪಾದನೆ ಉನ್ನತಮಟ್ಟಗಳನ್ನು ತಲುಪಿರುವುದರಿಂದಲೂ ಅಂತರರಾಷ್ಟ್ರೀಯ ವ್ಯಾಪಾರದ ಪ್ರಾಮುಖ್ಯ ಹೆಚ್ಚಿರುವುದೇ ಅಲ್ಲದೆ ಅದು ಹೊಸ….CLICK HERE TO READ MORE
Share