9th AUGUST.-DAILY CURRENT AFFAIRS BRIEF

9th AUGUST

 

1.ಒಂದು ರಾಜ್ಯ, ಒಂದು ಮತನೀತಿ ಕೈಬಿಟ್ಟ ಸುಪ್ರೀಂ- ಬಿಸಿಸಿಐ ಕರಡು ಸಂವಿಧಾನಕ್ಕೆ ಒಪ್ಪಿಗೆ

 

SOURCE-THE HINDU

 https://www.thehindubusinessline.com/news/sports/apex-court-approves-draft-constitution-of-bcci-with-modifications/article24640008.ece

 

ವಿದ್ಯಾರ್ಥಿಗಳ ಗಮನಕ್ಕೆ

ಪ್ರಿಲಿಮ್ಸ್ ಪರೀಕ್ಷೆಗಾಗಿ   ಬಿಸಿಸಿಐ ನೂತನ ಸಂವಿಧಾನದ ಕರಡು ಪ್ರತಿ ಬಗ್ಗೆ, ಒಂದು ರಾಜ್ಯ, ಒಂದು ಮತನೀತಿ ಬಗ್ಗೆ

 

ಮುಖ್ಯ ಪರೀಕ್ಷೆಗಾಗಿ -ಬಿಸಿಸಿಐ ಆಡಳಿತ ವ್ಯವಸ್ಥೆ ಯನ್ನು  ಪಾರದರ್ಶಕ ಮತ್ತು ಸ್ವಚ್ಛ ಆಡಳಿತಕ್ಕೆ   ರೂಪುರೇಷೆಗಳನ್ನು ಅಳವಡಿಸಿಕೊಳ್ಳಲು ಕೈಗೊಳ್ಳಬೇಕಾದ ಕ್ರಮಗಳೇನು ?

ಪ್ರಮುಖ ಸುದ್ದಿ

  • ಬಿಸಿಸಿಐ ನೂತನ ಸಂವಿಧಾನದ ಕರಡು ಪ್ರತಿಯನ್ನು ಸುಪ್ರೀಂ ಕೋರ್ಟ್ ಕೆಲ ಬದಲಾವಣೆಗಳೊಂದಿಗೆ ಒಪ್ಪಿಕೊಂಡಿದೆ ಎಂದು ತಿಳಿದುಬಂದಿದೆ.ಮೂಲಗಳ ಪ್ರಕಾರ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ‘ಒಂದು ರಾಜ್ಯ ಒಂದು ಮತ’ ನೀತಿಯನ್ನು ಸುಪ್ರೀಂ ಕೋರ್ಟ್ ಕೈ ಬಿಟ್ಟಿದ್ದು, ಮಹಾರಾಷ್ಟ್ರ, ಗುಜರಾತ್‌ ನ ಎಲ್ಲ ಮೂರು ಕ್ರಿಕೆಟ್‌ ಸಮಿತಿಗಳಿಗೆ ಪೂರ್ಣ ಸದಸ್ಯತ್ವವನ್ನು ಸರ್ವೋಚ್ಛ ನ್ಯಾಯಾಲಯ ಸಮ್ಮತಿ ನೀಡಿದೆ. ಆ ಮೂಲಕ ಒಂದು ರಾಜ್ಯ ಒಂದು ಮತ ಎಂಬ ಮಾನದಂಡವನ್ನು ಸುಪ್ರೀಂ ಕೋರ್ಟ್ ಕೈಬಿಟ್ಟಿದೆ.

 

ಮುಖ್ಯ ಅಂಶಗಳು

  • ಅಲ್ಲದೆ, ರೈಲ್ವೇಸ್, ಸರ್ವೀಸ್ ಹಾಗೂ ವಿಶ್ವವಿದ್ಯಾನಿಲಯಗಳ ಕ್ರಿಕೆಟ್ ಸಂಸ್ಥೆಗಳಿಗೂ ಬಿಸಿಸಿಐನಲ್ಲಿ ಸುಪ್ರೀಂಕೋರ್ಟ್ ಪೂರ್ಣ ಸದಸ್ಯತ್ವ ನೀಡಿದೆ.
  • ಈ ಹಿಂದೆ ಲೋಧಾ ಸಮಿತಿಯ ಶಿಫಾರಸಿನಂತೆ ಅವರೆಲ್ಲರ ಸದಸ್ಯತ್ವವನ್ನು ಕೋರ್ಟ್ ರದ್ದುಗೊಳಿಸಿತ್ತು. ಇನ್ನು, ಈ ನೂತನ ಸಂವಿಧಾನವನ್ನು ನಾಲ್ಕು ವಾರಗಳಲ್ಲಿ ನೋಂದಾಯಿಸಿಕೊಳ್ಳಿ ಎಂದು ಬಿಸಿಸಿಐಗೆ ತಿಳಿಸಿದೆ.
  • ಜತೆಗೆ, ರಾಜ್ಯಗಳ ಹಾಗೂ ಇತರೆ ಸದಸ್ಯತ್ವ ಸಂಸ್ಥೆಗಳು ಬದಲಾದ ಸಂವಿಧಾನವನ್ನು 30 ದಿನಗಳಲ್ಲಿ ದಾಖಲಿಸಿಕೊಳ್ಳಿ ಎಂದೂ ಸುಪ್ರೀಂಕೋರ್ಟ್ ಸೂಚಿಸಿದೆ.

 

  • ಬಿಸಿಸಿಐನಲ್ಲಿ ಒಂದೇ ಹುದ್ದೆಯನ್ನು ಸತತ ಎರಡು ಬಾರಿ ಹೊಂದಿದ ಬಳಿಕ ಆ ಸದಸ್ಯನನ್ನು ಉಚ್ಛಾಟಿಸಲಾಗುವುದು ಎಂದು ಸುಪ್ರೀಂಕೋರ್ಟ್ ತಿಳಿಸಿದೆ. ಅಲ್ಲದೆ, ಈ ಸಂವಿಧಾನವನ್ನು ಪಾಲಿಸದಿದ್ದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದೂ ರಾಜ್ಯ ಕ್ರಿಕೆಟ್ ಸಂಘಗಳಿಗೆ ಸುಪ್ರೀಂಕೋರ್ಟ್ ಎಚ್ಚರಿಕೆ ನೀಡಿದೆ.
  • ಹಾಗೆ, ಬಿಸಿಸಿಐ ಸಂವಿಧಾನವನ್ನು 30 ದಿನಗಳೊಳಗೆ ಅಳವಡಿಸಿಕೊಳ್ಳಿ ಎಂದು ರಾಜ್ಯ ಕ್ರಿಕೆಟ್ ಅಸೋಸಿಯೇಷನ್‌ ಗಳಿಗೆ ಸರ್ವೋಚ್ಛ ನ್ಯಾಯಾಲಯ ತಿಳಿಸಿದೆ.

 

ಹಿನ್ನಲೆ

  • ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಹಗರಣದ ತನಿಖೆ ನಡೆಸಿದ್ದ ನಿವೃತ್ತ ನ್ಯಾ. ಮುಕುಲ್ ಮುದ್ಗಲ್ ನೇತೃತ್ವದ ಸಮಿತಿ ಬಿಸಿಸಿಐ ಆಡಳಿತ ವ್ಯವಸ್ಥೆ ಕಲುಷಿತಗೊಂಡಿದ್ದು ಪಾರದರ್ಶಕ ಮತ್ತು ಸ್ವಚ್ಛ ಆಡಳಿತಕ್ಕೆ ಕೆಲವೊಂದು ರೂಪುರೇಷೆಗಳನ್ನು ಅಳವಡಿಸುವುದಲ್ಲದೆ….CLICK HERE TO READ MORE
Share