Daily Current Affairs 1st September

1st  September

 

1.ಅಟಲ್ ಪಿಂಚಣಿ ಯೋಜನೆಗೆ (APY) 62 ಲಕ್ಷ ಜನರು ದಾಖಲಾತಿ

MAINS PAPER-2Welfare schemes for vulnerable sections of the population by the Centre and States and the performance of these schemes; mechanisms, laws, institutions and bodies constituted for the protection and betterment of these vulnerable sections.

 

ಪ್ರಮುಖ ಸುದ್ದಿ

  • ‘ಒನ್ ನೇಷನ್ ಒನ್ ಪಿಂಚಣಿ’ ಎಂಬ ಕ್ಯಾಂಪೇನ್ ಮೂಲಕ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA) ಮೂಲದಿಂದ ಸುಮಾರು07 ಲಕ್ಷ .
  • APYಖಾತೆಗಳನ್ನು ಹೊಂದಿದೆ .ಇದರಿಂದ ಅಟಲ್ ಪಿಂಚಣಿ ಯೋಜನೆ  (APY) ಅಡಿಯಲ್ಲಿ  ಇಂದಿಗೆ ಒಟ್ಟು 62 ಲಕ್ಷ ಅರ್ಜಿಗಳು ದಾಖಲಾಗಿವೆ . APY ಸೇವಾ ಪೂರೈಕೆದಾರರ ಬ್ಯಾಂಕುಗಳ ಸಹಯೋಗದೊಂದಿಗೆ 2017 ರ ಆಗಸ್ಟ್ 2 ರಿಂದ ಆಗಸ್ಟ್ ೧೯ ರವರೆಗೆ PFRDA ನಿಂದ ದೇಶದಾದ್ಯಂತ ಈ ಕಾರ್ಯಾಚರಣೆಯನ್ನು ಆಯೋಜಿಸಲಾಗಿತ್ತು .
  • PFRDA ಉದ್ದೇಶವು ಯಾವುದೇ ಪಿಂಚಣಿ ಯೋಜನೆಯಿಂದ ಸೌಲಭ್ಯಗಳನ್ನು ಪಡೆಯದೆ ಇರುವವರಿಗೆ  APY ಯೋಜನೆಯಡಿಯಲ್ಲಿ ಪಿಂಚಣಿ ಖಾತೆ ತೆರಸಿ  ಪಿಂಚಣಿ ಸೌಲಭ್ಯಗಳನ್ನು  ಪಡೆದುಕೊಳ್ಳುವ  ಅವಕಾಶ ಕಲ್ಪಿಸುವುದು .
  • ಇದರಿಂದ ನಿವೃತ್ತ ಸಮಾಜದಲ್ಲಿ  ಕಡಿಮೆ  ಪಿಂಚಣಿದಾರರನ್ನು ಹೊಂದಿರುವ  ಭಾರತ ರಾಷ್ಟ್ರವನ್ನು  ಅತೀ ಹೆಚ್ಚು ಪಿಂಚಣಿ ನೀಡುತ್ತಿರುವ ರಾಷ್ಟ್ರ ವಾಗಿ ಮಾರ್ಪಡಿಸುವುದರ ಜೊತೆಗೆ ಹಿರಿಯ  ನಾಗರಿಕರು ತಮ್ಮ  ಇಳಿಯ ವಯಸ್ಸಿನಲ್ಲಿ    ಘನತೆಯ ಜೀವನವನ್ನು ನಡೆಸುವಂತೆ ಮಾಡುವುದು ಇದರ ಮುಖ್ಯ ಉದ್ದೇಶವಾಗಿದೆ .

ಅಟಲ್ ಪಿಂಚಣಿ ಯೋಜನೆಯ ಬಗ್ಗೆ

  • ಅಸಂಘಟಿತ ವಲಯದ ಕಾರ್ಮಿಕ ಕಲ್ಯಾಣಕ್ಕಾಗಿ ಮುತ್ತು ಅವರ ವೃದ್ಯಾಪ್ಯ ವೇತನದ ಭದ್ರತೆಗಾಗಿ ಭಾರತ ಸರ್ಕಾರವು ಈ ಯೋಜನೆಯನ್ನು ರೂಪಿಸಿದೆ. ಈ ಯೋಜನೆಯು ಅಸಂಘಟಿತ ವಲಯದ ಕಾರ್ಮಿಕರನ್ನು ಸ್ವಪ್ರೇರಣೆಯಿಂದ ತಮ್ಮ ನಿವೃತ್ತಿಗಾಗಿ ಉಳಿಸಲು ಪ್ರೋತ್ಸಾಹಿಸುತ್ತದೆ.
  • ಈ ಯೋಜನೆಯನ್ನು ಸರ್ಕಾರವು ಜೂನ್ 1, 2015 ರಂದು ಪ್ರಾರಂಭಿಸಿದೆ.  ಸ್ವಾವಲಂಬ ನ ಯೋಜನೆ / ಎನ್ಪಿಎಸ್ ಲೈಟ್ ಯೋಜನೆಬದಲಾಗಿ ಈ ಯೋಜನೆಯನ್ನು ಆರಂಬಿಸಲಾಗಿದೆ.

ಇದರಿಂದ ಆಗುವ ಪ್ರಯೋಜನಗಳೇನು ???

  • ವಯೋಮಿತಿ ೧೮ ರಿಂದ ೪೦ ವರ್ಷ ಆಗಿರುತ್ತದೆ. ರೂ ೧೦೦೦ ದಿಂದ ರೂ ೫೦೦೦ ದ ವರಿಗೆ ಚಂದಾದಾರರಾಗಬಹುದು .
  • ಸ್ಥಿರ ಪಿಂಚಣಿಯನ್ನು ಖಾತರಿಸುತ್ತದೆ. ವಾರ್ಷಿಕ ಚಂದಾ ಚಂದಾದಾರರ ವಯಸ್ಸಿನ ಮಟ್ಟವನ್ನು ಆಧರಿಸಿ ಬದಲಾಗುತ್ತದೆ.
  • ಚಂದಾದಾರರ ಸಾವಿನ ನಂತರ ಅದೇ ಮೊತ್ತದ ಪಿಂಚಣಿಯನ್ನುಅವನ / ಅವಳ ಸಂಗಾತಿಗೆ ಪಾವತಿ ಮಾಡಲಾಗುವುದು.
  • ಸಂಗಾತಿಯ ಸಾವಿನ ನಂತರ ನಾಮಿನಿಗಳಿಗೆ ಸೇರ ಬೇಕಾದ ಮೊತ್ತವನ್ನು ಮುಂಚೆಯೇ ಸೂಚಿಸುತ್ತದೆ.
  • ಅಟಲ್ ಪಿಂಚಣಿ ಯೋಜನೆ (APY) ಯಡಿ ಹೂಡುವ ಚಂದಾದಾರರು ರಾಷ್ಟ್ರೀಯ ಪೆನ್ಷನ್ ವ್ಯವಸ್ಥೆ (ಎನ್ಪಿಎಸ್) ತೆರಿಗೆ ಪ್ರಯೋಜನ ಗಳಿಗೆ ಅರ್ಹರಾಗುತ್ತಾರೆ. 80CCD(1) ಅಡಿಯಲ್ಲಿ ರೂ 50,000 ಹೆಚ್ಚುವರಿ ತೆರಿಗೆ ಪ್ರಯೋಜನಗಳನ್ನು ಪಡೆಯಬಹುದು.
  • ಅಟಲ್ ಪಿಂಚಣಿ ಯೋಜನೆ (APY) ಯಾವುದೇ ಶಾಸನಬದ್ಧ ಸಾಮಾಜಿಕ ಭದ್ರತಾ ಯೋಜನೆಯ ಸದಸ್ಯರಲ್ಲದ ಎಲ್ಲಾ ಬ್ಯಾಂಕ್ ಖಾತೆದಾರರಿಗೆ ತೆರೆದಿರುತ್ತದೆ.
  • ಅಟಲ್ ಪಿಂಚಣಿ ಯೋಜನೆಗೆ ಸೇರುವ ಕನಿಷ್ಟ ವಯಸ್ಸು 18 ವರ್ಷಗಳು ಮತ್ತು ಗರಿಷ್ಠ ವಯಸ್ಸು 40 ವರ್ಷಗಳು. ಆದ್ದರಿಂದ, APY ಅಡಿಯಲ್ಲಿ ಚಂದಾದಾರ ಕೊಡುಗೆಯನ್ನು ಕನಿಷ್ಠ ಕಾಲ 20 ವರ್ಷಗಳ ಅಥವಾ ಹೆಚ್ಚು ಎಂದು ಪರಿಗಣಿಸಬಹುದು

ಗುರಿಯಾಗಿಸಿರುವ ವಲಯ

  • ಮುಖ್ಯವಾಗಿ ಅಸಂಘಟಿತ ವಲಯದ ಕಾರ್ಮಿಕರ ಗುರಿಯಾಗಿಟ್ಟುಕೊಂಡಿದೆ
  • ನೋಂದಣಿ ಮತ್ತು ಚಂದಾದಾರ ಪಾವತಿ
  • ಎಲ್ಲಾ ವರ್ಗದ ಬ್ಯಾಂಕ್ ಖಾತೆದಾರರು ಸ್ವಯಂ ಡೆಬಿಟ್ ಸೌಲಭ್ಯವನ್ನು ಆಕ್ಟಿವೇಟ್ ಮಾಡಿಕೊಂಡು ಅರ್ಹರಾಗಬಹುದು.
  • ನೋಂದಣಿ ಸಂಸ್ಥೆಗಳು.
  • ಸ್ವಾಲಂಬನ್ ಯೋಜನೆ ಅಡಿಯಲ್ಲಿ ಇರುವ ಎಲ್ಲಾ ಪಾಯಿಂಟುಗಳು (ಸೇವೆ ಒದಗಿಸುವವರು) ಸಮುದಾಯಪರರಿಗೆ ಮತ್ತು ರಾಷ್ಟ್ರೀಯ ಪೆನ್ಷನ್ ವ್ಯವಸ್ಥೆ ಯಲ್ಲಿರುವವರು ದಾಖಲಾಗಬಹುದು.

ಅಭ್ಯರ್ಥಿಗಳ ಯೋಚನೆಗೆ ಒಂದು ಯೋಜನೆ

ಅಟಲ್ ಪಿಂಚಣಿ ಯೋಜನೆಯನ್ನು ಎಲ್ಲ ಸಾರ್ವಜನಿಕರಿಗೂ ತಲುಪಿಸುವಹಾಗೆ ಸರಕಾರ ಯಾವ ರೀತಿಯ ಸುಧಾರಣೆಯನ್ನು ತರಬೇಕೆಂದು ನೀವು ಬಯಸುತ್ತೀರ… ???

 

 SOURCE-PIB

 

 

2.ಬಗಾನ್ ನಲ್ಲಿರುವ ಪಗೋಡಗಳ ಸಂರಕ್ಷಣೆಗಾಗಿ ಮಯನ್ಮಾರ್ ಜೊತೆ ಒಪ್ಪಂದಕ್ಕೆ  ಸಂಸತ್ತು ಅನುಮೋದನೆ.

MAINS PAPER-2: INDIA AND ITS NEIGHBOURHOOD- RELATIONS.

 

ಪ್ರಮುಖ ಸುದ್ದಿ

  • ಮಯನ್ಮಾರ್ನ ಬಗಾನ್ ನಲ್ಲಿ ಭೂಕಂಪನ-ಹಾನಿಗೊಳಗಾಗಿರುವ  ಪಗೋಡಗಳ ಸಂರಕ್ಷಣೆಗಾಗಿ ಭಾರತ ಮತ್ತು ಮಯನ್ಮಾರ್ ನಡುವಿನ  ಒಪ್ಪಂದಕ್ಕೆ ಕೇಂದ್ರ ಸಚಿವ ಸಂಪುಟ    ಅಂಗೀಕರಿಸಿದೆ.

ಒಪ್ಪಂದದ  ಪ್ರಾಮುಖ್ಯತೆಯೇನು.. ?

  • ಈ ಯೋಜನೆಯನ್ನು ಕಾರ್ಯಗತಗೊಳಿಸುವಿಕೆಯಿಂದ ಮಯನ್ಮಾರ್ ಜೊತೆಗಿನ ಸಂಸ್ಕೃತಿ ಮತ್ತು ಧರ್ಮದಲ್ಲಿ ಭಾರತದ ನಿರಂತರ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುತ್ತದೆ.
  • ಈ ಒಪ್ಪಂದದಿಂದ ಧಾರ್ಮಿಕ ಮಹತ್ವ ಮತ್ತು ಪ್ರವಾಸೋದ್ಯಮ ಮಹತ್ವದಿಂದಾಗಿ ಮ್ಯಾನ್ಮಾರ್ ಜನರಲ್ಲಿ ಭಾರತಕ್ಕೆ ಅಪಾರ ಅಭಿಮಾನವನ್ನು ಉಂಟುಮಾಡುತ್ತದೆ.
  • ಇದರಿಂದ ಮ್ಯಾನ್ಮಾರ್ ಜೊತೆಗಿನ ಭಾರತದ ಅಭಿವೃದ್ಧಿ ಸಹಭಾಗಿತ್ವಕ್ಕೆ ಕೊಡುಗೆಯನ್ನು ನೀಡುತ್ತದೆ.
  • ಇದು ಮ್ಯಾನ್ಮಾರ್ ಜನರಿಗೆ ಮಾತ್ರವಲ್ಲದೇ ಇತರ ದೇಶಗಳ ಪ್ರವಾಸಿಗರಿಗೆ ಸ್ಮಾರಕಗಳ ಪುನಃಸ್ಥಾಪನೆ ಮತ್ತು ಸಂರಕ್ಷಣೆಯಲ್ಲಿ ಭಾರತದ ಪರಿಣತಿಯನ್ನು ಪ್ರದರ್ಶಿಸುವ೦ತೆ ಅವಕಾಶ ಕಲ್ಪಿಸುತ್ತದೆ.

ಮಯನ್ಮಾರ್ ನ  ಬಾಗನ್ ಬಗ್ಗೆ:

  • ಬರ್ಮಾದ ಕೇಂದ್ರಲ್ಲಿರುವ ಬಗಾನ್ ವಿಶ್ವದ ಅತ್ಯಂತ ಪುರಾತತ್ವವಾದಿ ಸ್ಥಳಗಳಲ್ಲಿ ಒಂದಾಗಿದೆ. ಅಯ್ಯರ್ವಾಡಿ (ಇರಾವಾಡಿ) ನದಿಯು ಉತ್ತರ ಮತ್ತು ಪಶ್ಚಿಮ ದಿಕ್ಕಿನಿಂದ ಇದನ್ನು ಆವರಿಸಿದೆ .
  • ಬಗಾನ್ ಮಯನ್ಮಾರ್‍ನ ಮಂಡಾಲೆ ಪ್ರದೇಶದ ಪುರಾತನ ನಗರ . ಈ ನಗರವು 9 ರಿಂದ 13ನೇ ಶತಮಾನಗಳ ಕಾಲ ಪಗಾನ್ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಬಗಾನ್ ಬರ್ಮೀಸ್ ಪದವಾದ ಪುಗನ್ನ ಈಗಿನ ಉಚ್ಚಾರಣೆ.
  • 11 ಮತ್ತು 13 ನೇ ಶತಮಾನಗಳ ನಡುವೆ ರಾಜ್ಯದ ಅವಧಿಯಲ್ಲಿ, 1೦,೦೦೦ ಬೌದ್ಧ ಮಂದಿರಗಳು, ಪಗೋಡಗಳು ಮತ್ತು ಧಾರ್ಮಿಕ ಕ್ಷೇತ್ರಗಳು ಬಗಾನ್‍ನ ಬಯಲಿನಲ್ಲಿ ನಿರ್ಮಾಣಮಾಡಿದ್ದರು. ಇಂದಿಗೂ 2200 ಮಂದಿರಗಳ ಮತ್ತು ಪಗೋಡಗಳ ಶೇಷಗಳನ್ನು ಕಾಣಬಹುದು. ಬಗಾನ್ ಉತ್ತರ ವಲಯ ದೇಶದ ಪ್ರವಾಸೋದ್ಯಮದ ಒಂದು ಪ್ರಮುಖ ತಾಣವಾಗಿದೆ.
  • ಬರ್ಮ್‍ದ ಚರಿತ್ರೆಯ ಪ್ರಕಾರ, ಬಗಾನ್ ಪ್ರದೇಶವನ್ನು ಕ್ರಿ.ಶ. ಎರಡನೆಯ ಶತಮಾನದಲ್ಲಿ ಸ್ಥಾಪಿಸಲಾಯಿತು ಮತ್ತು ರಾಜ ಪ್ಯಿನ್ಬ್ಯ್ ಕ್ರಿ.ಶ. ೮೪೯ರಲ್ಲಿ ಕೋಟೆಗಳನ್ನು ಕಟ್ಟಿದ್ದರು. ಬಗಾನ್ 1044ರಿಂದ 1287  ತನಕ ಪಾಗನ್ ಸಾಮ್ರಾಜ್ಯದ ರಾಜಕೀಯ, ಆರ್ಥಿಕ ಮತ್ತು ಸಾಂಸ್ಕೃತಿಕ ರಾಜಧಾನಿ ಹಾಗೂ ರಾಜ್ಯದ ಮುಖ್ಯ ಕೇಂದ್ರವಾಗಿತ್ತು.
  • 25೦ ವರ್ಷಗಳ ಅವಧಿಯಲ್ಲಿ, ಬಗಾನ್ ತಂಡದ ಆಡಳಿತಗಾರರು ಮತ್ತು ಶ್ರೀಮಂತ ಜನರು ಸುಮಾರು 1೦೦೦ ಬೌದ್ಧ ಸ್ತೂಪಗಳು, 1೦,೦೦೦ ಸಣ್ಣ ದೇವಾಲಯಗಳು ಮತ್ತು 3೦೦೦ ಮಠಗಳನ್ನು ನಿರ್ಮಿಸಿದ್ದಾರೆ . ಈ ನಗರಕ್ಕೆ ಭಾರತ, ಶ್ರೀಲಂಕಾ ಮತ್ತು ಕೇಮರ್ ಸಾಮ್ರಾಜ್ಯದ ಸನ್ಯಾಸಿಗಳು ಮತ್ತು ವಿದ್ಯಾರ್ಥಿಗಳನ್ನು ಆಕರ್ಷಿಸುತ್ತದೆ.

 

SOURCE-PIB

 

3.ಕಕ್ಷೆ ಸೇರದ ನ್ಯಾವಿಗೇಷನ್ ಉಪಗ್ರಹ: ಇಸ್ರೋಗೆ ಭಾರಿ ಹಿನ್ನಡೆ

MAINS PAPER-3: AWARENESS IN THE FIELDS OF IT, SPACE, COMPUTERS, ROBOTICS, NANO-TECHNOLOGY, BIO-TECHNOLOGY AND ISSUES RELATING TO INTELLECTUAL PROPERTY RIGHTS.

 ಪ್ರಮುಖ ಸುದ್ದಿ

  • ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆ (ಇಸ್ರೋ)ಗೆ ತೀವ್ರ ಹಿನ್ನೆಡೆಯಾಗಿದ್ದು ಇಂಡಿಯನ್‌ ರಿಜನಲ್‌ ನ್ಯಾವಿಗೇಷನ್‌ ಸ್ಯಾಟಲೈಟ್‌ ಸಿಸ್ಟಮ್‌ ಐಆರ್‌ಎನ್‌ಎಸ್‌ಎಸ್‌-1ಎಚ್‌ (IRNSS-1H) ಸ್ಯಾಟಲೈಟ್‌ನ ಉಡಾವಣೆ ವಿಫಲವಾಗಿದೆ ಎಂದು ಇಸ್ರೋ ಅಧ್ಯಕ್ಷರು ತಿಳಿಸಿದ್ದಾರೆ .

ಇದರ ಬಗ್ಗೆ

  • ಈಗಾಗಲೇ ಕಕ್ಷೆ ಸೇರಿರುವ ಏಳು ಐಆರ್‌ಎನ್‌ಎಸ್‌ಎಸ್‌ಗಳ ಪೈಕಿ ಐಆರ್‌ಎನ್‌ಎಸ್‌ಎಸ್‌-1ಎ ನಲ್ಲಿರುವ ಮೂರು ಆಟೋಮಿಕ್‌ ಕ್ಲಾಕ್‌ಗಳು ತಾಂತ್ರಿಕ ಕಾರಣಗಳಿಂದ ಕಾರ್ಯ ನಿರ್ವಹಣೆ ನಿಲ್ಲಿಸಿವೆ.
  • ಹೀಗಾಗಿ, ಅದಕ್ಕೆ ಬ್ಯಾಕ್‌ ಅಪ್‌ ಆಗಿ ಕಾರ್ಯ ನಿರ್ವಹಿಸಲು ಐಆರ್‌ಎನ್‌ಎಸ್‌ಎಸ್‌-1ಎಚ್‌ ಅನ್ನು ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್‌ ಧವನ್‌ ಉಡಾವಣೆ ಕೇಂದ್ರದಿಂದ ಉಡಾವಣೆ ಮಾಡಲಾಗಿತ್ತು. ಆದರೆ ಈ ಉಡಾವಣೆ ವಿಫಲವಾಗಿದೆ.
  • ಉಪಗ್ರಹ ಉಡಾವಣೆಯ ಬಳಿಕ ಹೀಟ್‌ ಶೀಲ್ಡ್‌ ಕಳಚಿದ ಹಿನ್ನೆಲೆಯಲ್ಲಿ ಉಪಗ್ರಹವು ನಾಲ್ಕನೇ ಹಂತವನ್ನು ತಲುಪದೇ ಕುಸಿದಿದೆ.
  • ಉಪಗ್ರಹವನ್ನು ಇಸ್ರೋದ ಪಿಎಸ್‌ಎಲ್‌ವಿ ಸಿ-39 (ಎಕ್ಸ್ ಎಲ್ ಮಾದರಿ)ಉಡಾವಣೆ ನೌಕೆ ಹೊತ್ತೊಯ್ದಿತ್ತು.
  • ಸಣ್ಣ ಮತ್ತು ಮಧ್ಯಮ ಗಾತ್ರದ ಆರು ಕೈಗಾರಿಕೆಗಳ ಜತೆಗೆ ಇಸ್ರೊ ಒಪ್ಪಂದ ಮಾಡಿಕೊಂಡು 1,400 ಕೆ.ಜಿ ತೂಕದ ಬಾಹ್ಯಕಾಶ ಉಡಾವಣೆ ನೌಕೆಯನ್ನು ನಿರ್ಮಿಸಿ ಪರೀಕ್ಷೆಗೆ ಒಳಪಡಿಸಿದೆ.
  • ನ್ಯಾವಿಗೇಷನ್‌ (ಧಿಕ್ಸೂಚಿ) ಉದ್ದೇಶಕ್ಕಾಗಿ ಅಮೇರಿಕಾದ ಗ್ಲೋಬಲ್‌ ಪೋಸಿಷನಿಂಗ್‌ ಸಿಸ್ಟಂನಂತೆ (ಜಿಪಿಎಸ್‌) ಅದಕ್ಕೆ ಪರ್ಯಾಯವಾಗಿ ಇಸ್ರೊ ಸಂಸ್ಥೆಯು ಸ್ವಾತಂತ್ರ್ಯವಾಗಿ ಐಆರ್‌ಎನ್‌ಎಸ್‌ಎಸ್‌ ಅನ್ನು ಅಭಿವೃದ್ಧಿಪಡಿಸಿದೆ.
  • ಪ್ರಧಾನಿ ನರೇಂದ್ರ ಮೋದಿಯವರು ನಾವಿಕ್‌ ಎಂದು ಹೆಸರಿಸಿರುವ ದೇಶಿಯ ಜಿಪಿಎಸ್‌ ಅನ್ನು ಸೇನಾ ಪಡೆಗಳು, ನೌಕೆಗಳು, ವಿಕೋಪ ನಿರ್ವಹಣೆ, ವಾಹನಗಳ ಟ್ರ್ಯಾಕಿಂಗ್‌ ಸೇರಿದಂತೆ ಸೇನಾಪಡೆಗಳು ಹಾಗೂ ಜನ ಸಾಮಾನ್ಯರ ಬಳಕೆಗೆ ಒದಗಿಸಲಾಗುತ್ತದೆ. 2013 ರಿಂದ 2016ರ ಏಪ್ರಿಲ್‌ವರೆಗೆ ಒಟ್ಟು ಏಳು ಐಆರ್‌ಎನ್‌ಎಸ್‌ಎಸ್‌ ಸ್ಯಾಟಲೈಟ್‌ಗಳನ್ನು ಇಸ್ರೊ ಕಕ್ಷೆಗೆ ಸೇರಿಸಿದೆ.

ನ್ಯಾವಿಗೇಷನ್ ಉಪಗ್ರಹ  ಎಂದರೇನು..??

  • ನ್ಯಾವಿಗೇಷನ್ ಉಪಗ್ರಹವು ಉಪಗ್ರಹಗಳ ಜಾಲವನ್ನು ಆಧರಿಸಿ ಇದು ರೇಡಿಯೋ ಸಿಗ್ನಲ್ಗಳನ್ನುಕಳುಹಿಸುತ್ತದೆ ಇದರಿಂದ ಭೌಗೋಳಿಕ ಸ್ಥಳವನ್ನು ಹೆಚ್ಚಿನ ನಿಖರತೆಯೊಂದಿಗೆ ನಿರ್ಧರಿಸಲು ಅನುಕೂಲವಾಗುತ್ತದೆ . ಈ ಉಪಗ್ರಹ ವ್ಯವಸ್ಥೆಯನ್ನು ಏನಾದರೂ ವಸ್ತುವಿನ ಸ್ಥಾನವನ್ನು ಟ್ರ್ಯಾಕ್ ಮಾಡಲು ಬಳಸಬಹುದು .

 

ಭಾರತೀಯ ಪ್ರಾದೇಶಿಕ ನ್ಯಾವಿಗೇಷನ್ ಉಪಗ್ರಹ ವ್ಯವಸ್ಥೆ (IRNSS) ಎರಡು ಬಗೆಯ ಸೇವೆಗಳನ್ನು ಒದಗಿಸುತ್ತದೆ:

೧. ಉತ್ತಮ ಸ್ಥಾನ ನಿರ್ಧಾರಣಾ ವ್ಯವಸ್ಥೆ – ಇದು ಬಳಕೆದಾರರಿಗೆ ಲಭ್ಯವಿದೆ.

೨. ನಿರ್ಬಂಧಿತ ಸೇವೆ – ಭದ್ರತಾ ಹಾಗು ಸೈನಿಕ ವಿಷಯಗಳಿಗೆ, ರಾಷ್ಟ್ರೀಯ ಸಂಸ್ಥೆಗಳಿಗೆ ಮಾತ್ರ ಲಭ್ಯವಾಗಲಿದೆ

  • ಇದಲ್ಲದೆ ಈ ಮಾಹಿತಿಯನ್ನು ಪ್ರಾಕೃತಿಕ ವಿಕೋಪ ನಿರ್ವಹಣಾ ಕಾರ್ಯಗಳಿಗೆ, ನಕ್ಷೆ ತಯಾರಿಕೆಗೆ, ಜಿಪಿಎಸ್ ವ್ಯವಸ್ಥೆಗೆ, ವೈಮಾನಿಕ ಸಂಪರ್ಕ ಹಾಗು ಸಂಚಾರ ನಿರ್ವಹಣಾ ಕಾರ್ಯಗಳಿಗೆ ಬಳಸಿಕೊಳ್ಳಬಹುದಾಗಿದೆ.

 

SOURCE-THE HINDU

 

ONLY FOR PRELIMS

4.ಸಂಘಟಿತ ವ್ಯಾಪಾರದಡಿ  ಕೃಷಿ ಸೇರ್ಪಡೆಗೆ ನೀತಿ ಆಯೋಗ ಪ್ರಸ್ತಾಪ

  • ಅಗತ್ಯ ಸರಕುಗಳ ಕಾಯ್ದೆಯಿಂದ ಕೃಷಿಯನ್ನು ತೆಗೆದುಹಾಕುವ ಕುರಿತು ನೀತಿ ಆಯೋಗ ಪ್ರಸ್ತಾಪಿಸೀದೆ.ಕೃಷಿಯನ್ನು ಅಗತ್ಯ ಸರಕುಗಳ ಕಾಯ್ದೆಯಿಂದ ಹೊರಗಿಟ್ಟು,ಸಂಘಟಿತ ವ್ಯಾಪಾರದ ಅಡಿ ಸೇರ್ಪಡೆಗೊಳಿಸುವ ಕುರಿತು ಆಯೋಗ ಒಲವು ತೋರಿಸಿದೆ.
  • ದಾಸ್ತಾನು ಮಿತಿ,ವ್ಯಾಪಾರದ ನಿಯಮಗಳಲ್ಲಿನ ಬದಲಾವಣೆಗಳಿಂದ ದೇಶದಲ್ಲಿ ಆಹಾರ ವಸ್ತುಗಳ ಸಂಗ್ರಹ ಸೌಲಭ್ಯಕ್ಕಾಗಿ ಹೊಡಿಕೆ ಆಗುತ್ತಿಲ್ಲ.ದಾಸ್ತಾನು ಮಳಿಗೆ,ಶೀತಲ ಸಂಗ್ರಹ ವ್ಯವಸ್ಥೆ ಸೇರದಂತೆ ಆಹಾರ ಸಂಸ್ಕರಣಾ ಕ್ಷೇತ್ರದಲ್ಲಿ ಹೊಡಿಕೆ ಆದರೆ ರೈತರಿಗೆ ಅದರ ಫಲ ದೊರೆಯುತ್ತದೆ.
  • ರೈತರ ಬೆಳೆವಣಿಗೆಗೆ ಉತ್ತಮ ಬೆಲೆ ದೊರೆಯುವ ಖಾತ್ರಿ ಲಭ್ಯವಾಗುತ್ತದೆ.ಅಲ್ಲದೆ ಇದು ಕೃಷಿ ಉತ್ಪನ್ನಗಳ ಸಂಘಟಿತ ವ್ಯಾಪಾರಕ್ಕೂ ಅನುವು ಮಾಡಿಕೊಟ್ಟು. ಹೆಚ್ಚು ಬಂಡವಾಳ ಹರಿದಿ ಬರಲು ಕಾರಣವಾಗುತ್ತದೆ.ಈ ನಿಟ್ಟಿನಲ್ಲಿ ನೀತಿ ಆಯೋಗ ಈ ಬಗ್ಗೆ ಪ್ರಸ್ತಾಪಿಸಿದೆ.

 5.ಬಿಳಿಯ ಮರಳಿನಿಂದ ಕೂಡಿದ ದ್ವೀಪ ಹ್ಯಾವ್ಲಾಕ್

  • ಕೇಂದ್ರಾಡಳಿತ ಪ್ರದೇಶವಾದ ಅಂಡಮಾನ್,ದ್ವೀಪಗಲಿಂದಲೇ ಪ್ರಸಿದ್ದ್ತಿ ಪಡೆದಿದೆ.ದೇಶದಲ್ಲಿಯೇ ಸುಂದರವಾದ ಬಿಳಿ ಮರಳಿನ ಕಡಲ ತೀರದಿಂದ ಕೂಡಿದ ಹ್ಯಾವ್ಲಾಕ್ ದ್ವೀಪವು ಇಲ್ಲಿನ ಪ್ರಮುಖ ಆಕರ್ಷಣೆ.113 ಚದರ ಕಿ.ಮೀ ವಿಸ್ತೀರ್ಣದ ಇದು, ಶ್ರೀಮಂತ ಹವಳದಂಡೆಗಳನ್ನೂ ಹೊಂದಿರುವ .
  • ದ್ವೀಪಗಳಲ್ಲಿ ಒಂದಾಗಿದೆ.ಬ್ರಿಟಿಷ್ ಜನರಲ್ ಸರ್ ಹೆನ್ರಿ ಹ್ಯಾವ್ಲಾಕ್ ಎಂಬಾತ ಈ ದ್ವೀಪಕ್ಕೆ ತನ್ನ ಹೆಸರಿಟ್ಟ. ಪ್ರಸ್ತುತ ಆರು ಸಾವಿರ ಜನರು ಈ ದ್ವೀಪದಲ್ಲಿ ವಾಸವಿದ್ದು,ಆರು ಹಳ್ಳಿಗಳನ್ನು ದ್ವೀಪ ಒಳಗೊಂಡಿದೆ ಎನ್ನಲಾಗಿದ್.ಭಾರತದ ವಿಭಿನ್ನ ದ್ವಿಪಗಳ ಪಟ್ಟಿಯಲ್ಲಿ ಹ್ಯಾವ್ಲಾಕ್ ಗೆ ಪ್ರಮುಖ.
  • ಸ್ತಾನವಿದೆ. ಏಷ್ಯಾದಲ್ಲಿಯೇ ಅತ್ಯುತ್ತಮ ಬೀಚ್ ಎಂದು ಹೆಸರಾದ ರಾಧಾನಗರ್ ಬೀಚ್ ಹ್ಯಾವ್ಲಾಕ್ ದ್ವಿಪದಲ್ಲಿಯೇ ಇದೆ.

 

6.ಮೂತ್ರಪಿಂಡದ ಕಾಯಿಲೆ ತಿಳಿಸುವ ಸೆನ್ಸರ್

  • ಮೂತ್ರಪಿಂಡಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ಕೇವಲ 8 ನಿಮಿಷಗಳ ಒಳಗಾಗಿ ಪತ್ತೆಹಚ್ಚುವ ವಿಶಿಷ್ಟ ಜೈವಿಕ ಸೆನ್ಸರ್ ಅನ್ನು ಮುಂಬೈ ಐಐಟಿ ಹಾಗು ಇಂದೋರ್ ಐಐಟಿಯ ಸಂಶೋದಕರು ಜಂಟಿಯಾಗಿ ಅಭಿವೃದ್ಧಿಪಡಿಸಿದ್ದಾರೆ.ಕೇವಲ ಒಂದು ಹನಿ ಮೂತ್ರದಿಂದ ಅದರ
  • ಪಿಎಚ್ (ಜಲಜನಕ ಸಂಭಾವ್ಯತೆ ) ಮಟ್ಟ ಹಾಗು ಬೆರಕೆಅಂಶಗಳನ್ನು ಗುರುತಿಸುವ ಈ ಸೆನ್ಸರ್, ಮೂತ್ರಪಿಂಡಕ್ಕೆ ಸಂಬಂಧಿಸಿದ ಯಾವುದೇ ಕಾಯಿಲೆ ಇದ್ದಲ್ಲಿ ತಿಳಿಸುತ್ತದೆ. (ಮೂತ್ರ ದಲ್ಲಿ ಯೂರಿಯಾ ಅಂಶ ಹೆಚ್ಚಿದ್ದು, ಪಿಎಚ್ ಮಟ್ಟ ಕಡಿಮೆ ಇದ್ದಲ್ಲಿ ಮೂತ್ರಪಿಂಡದಲ್ಲಿ ಏನೋ ಸಮಸ್ಯೆ ಇದೆ ಎಂದರ್ಥ.
  • ಅದರ ಮಟ್ಟ ಆಧಾರಿಸಿ ವೈದ್ಯರು ಕಾಯಿಲೆಯನ್ನು ನಿರ್ದರಿಸುತ್ತಾರೆ.) ಈ ಸಾಧನ ಬಳಸುವ ಮೂಲಕ ಯಾವುದೇ ಸಂಕೀರ್ಣ ಪರೀಕ್ಷೆಗಳಿಗೆ ಒಳಪಡದೆ, ಸುಲಭವಾಗಿ ಮೂತ್ರಪಿಂಡದ ಸ್ಥಿತಿಗತಿಯನ್ನು ತಿಲಿಸಿಸಬಹುದಾಗಿದೆ. ‘ಕೇವಲ ಸೆನ್ಸರ್ ಪಲಿತಂಶಾದ ಆಧಾರದ ಮೇಲೆಯೇ ನಿರ್ದಿಷ್ಟವಾಗಿ ಕಾಯಿಲೆಯನ್ನು ಗುರಿತಿಸಲು ಸಾದ್ಯವಿಲ್ಲ.
  • ಯೂರಿಯಾ ಮಾತ್ರವಲ್ಲದೆ, ಕ್ಯಾಲ್ಶಿಯಂ, ಕ್ಲೋರೈಡ್,ಅಸ್ಕಾರ್ಬಿಕ್ ಆಮ್ಲ, ಸೋಡಿಯಂ,ಪೊಟ್ಯಾಸಿಯಂ ನಂತಹ ಅನೇಕ ಧಾತುಗಳೂ ಮೂತ್ರಪಿಂಡದಲ್ಲಿರುವುದರಿಂದ, ಇವುಗಳೆಲ್ಲವನ್ನೂ
  • ಪರಿಗಣಿಸಬೇಕಾಗುತ್ತದೆ.ಹಾಗಾಗಿ ಈ ಜೈವಿಕ ಸೆನ್ಸರ್ ಕಾಯಿಲೆಯನ್ನು ಗುರುತಿಸಲು ವೈದ್ಯರಿಗೆ ನೆರವಾಗುವ ಉಪಯುಕ್ತ/ಪೂರಕ ಸಾದನವಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.

 

Share